ಕಥೊಲಿಕ್ ಸಭಾ -ಮಂಗಳೂರು ಸಿಟಿ ವಲಯದ ಬೆಳ್ಳಿ ಹಬ್ಬದ ಸಮಾರಂಭ ಕಾರ್ಯಕ್ರಮ/ Catholic Sabha Mangalore Pradesh(R)-City Deanery Silver Jubilee Celebration

ಕಥೊಲಿಕ್ ಸಭಾ ಮಂಗಳೂರು ಪ್ರದೇಶ(ರಿ.) *ಸಿಟಿ ವಲಯ* ದ *ಬೆಳ್ಳಿ ಹಬ್ಬ* ದ ಸಮಾರಂಭ ಆದಿತ್ಯವಾರ ದಿನಾಂಕ 15.10.2023 ರಂದು ಸಂಜೆ 4:30 ಗಂಟೆಗೆ ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ಇವರ ಸಾರಥ್ಯದಲ್ಲಿ *ದಿವ್ಯ ಬಲಿ ಪೂಜೆ* ವಾಮಂಜೂರ್ ಶ್ರಮಿಕ ಸಂತ ಜೋಸೆಫ್ ದೇವಾಲಯದಲ್ಲಿ ನಡೆಯಿತು. 6:00 ಗಂಟೆಗೆ *ಸಭಾ ಕಾರ್ಯಕ್ರಮ* ವು ವಾಮಂಜೂರ್ ಶ್ರಮಿಕ ಸಂತ ಜೋಸೆಫ್ ದೇವಾಲಯದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಕಥೊಲಿಕ್ ಸಭಾ ಸಿಟಿ ವಲಯ ಅಧ್ಯಕ್ಷರಾದ ಶ್ರೀ ವಿಲ್ಫ್ರೆಡ್ ಆಲ್ವಾರಿಸ್, ಮುಖ್ಯ ಅತಿಥಿಗಳಾಗಿ ಸಿಟಿ ವಲಯದ ಮುಖ್ಯ ಧರ್ಮಗುರು ಹಾಗೂ ವಾಮಂಜೂರು ಚರ್ಚ್‌ನ ಧರ್ಮಗುರು ವಂ| ಫಾದರ್ ಜೇಮ್ಸ್ ಡಿಸೋಜ, ಕಥೊಲಿಕ್ ಸಭಾ ಮಂಗಳೂರು ಪ್ರದೇಶದ ಕೇಂದ್ರೀಯ ಸಮಿತಿಯ ಅಧ್ಯಕ್ಷರಾದ ಶ್ರೀ ಆಲ್ವಿನ್ ಡಿಸೋಜಾ, ಸಿಟಿ ವಲಯದ ಆಧ್ಯಾತ್ಮಿಕ ನಿರ್ದೇಶಕರು ಹಾಗೂ ಆಂಜೆಲೋರ್‌ ಚರ್ಚ್‌ನ ಪ್ರಧಾನ ಧರ್ಮಗುರು ವಂ| ಫಾದರ್ ವಿಲಿಯಂ ಮಿನೇಜಸ್, ಕೇಂದ್ರೀಯ ಸಮಿತಿಯ ಹಾಗೂ ಸಿಟಿ ವಲಯದ ಕಾರ್ಯದರ್ಶಿಯಾದ ಶ್ರೀಮತಿ ವಿಲ್ಮಾ ಮೊಂತೇರೊ,  ಅತಿಥಿಗಳಾಗಿ ಸಿಟಿ ವಲಯದ ಸ್ಥಾಪಕ ಅಧ್ಯಕ್ಷರಾದ ಶ್ರೀ ಮಾರ್ಟಿನ್ ಡಿಸೋಜಾ, ವಾಮಂಜೂರ್ ಚರ್ಚ್‌ನ ಉಪಾಧ್ಯಕ್ಷರಾದ ಶ್ರೀ ಚಾರ್ಲ್ಸ್ ಪಾಯ್ಸ್, ಕಥೊಲಿಕ್ ಸಭಾ, ವಾಮಂಜೂರ್ ಘಟಕದ ಅಧ್ಯಕ್ಷರಾದ ಶ್ರೀ ಪ್ಯಾಟ್ರಿಕ್ ಲೋಬೊ, ಬೆಳ್ಳಿ ಹಬ್ಬದ ಸಂಚಾಲಕರಾದ ಶ್ರೀ ಪ್ರಶಾಂತ್ ಸಲ್ಡಾನ್ಹಾ ಭಾಗವಹಿಸಿದ್ದರು.

25 ವರ್ಷಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಎಲ್ಲಾ ಸಿಟಿ ವಲಯದ ಅಧ್ಯಕ್ಷರು,ಕಾರ್ಯದರ್ಶಿ ಹಾಗೂ ಘಟಕದ ಅಧ್ಯಕ್ಷರನ್ನು ಸನ್ಮಾನಿಸಿ ಗೌರಿಸಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ಎಲ್ಲಾ ಘಟಕಗಳ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮದ ಕೊನೆಯಲ್ಲಿ ಬೆಳ್ಳಿ ಹಬ್ಬದ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು.

Catholic Sabha Mangalore Pradesh(R)-City Deanery Silver Jubilee Celebration

Catholic Sabha, Mangalore Pradesh(R)- City Deanery, celebrated their Silver Jubilee on Sunday, October 15, 2023 at St. Joseph The Worker Church, Vamanjoor, Mangalore. Thanksgiving mass was celebrated at 4:30 pm with the main celebrant Bishop Emeritus of Mangalore Diocese, Aloysius Paul D’Souza, accompanied by Rev. Fr. James D’Souza, Rev. Fr. William Menezes ,Rev. Fr. Clifford Fernandes, Rev. Fr. Dominic Vas, Rev. Fr. Andrew Leo D’Souza, Rev. Fr. Melwyn Pinto, Rev. Fr. Andrew D’Souza Rev. Fr. Joseph Mascarenhas and Rev. Fr. Ivan D’Souza. Stage and cultural programme was held at 6:00 p.m. in Vamanjoor Church Sabha Bhavan.

Mr. Wilfred Alvares, Bondel, the President of Catholic Sabha, City Deanery, presided over the celebration with the Chief Guests Rev. Fr. James D’Souza, the Vicar Forane and Parish Priest of Vamanjoor Church, Mr. Alwyn D’Souza, Panir, President, Central Catholic Sabha, Mangalore, Rev. Fr. William Menezes, Parish Priest of Angelore Church and Spiritual Director of the City Deanery and Mrs. Vilma Monteiro, General Secretary, Central Catholic Sabha, Mangalore. They were accompanied by the Guests of Honor, including the Founder President, Mr. Martin R. D’Souza, Mr. Charles Pais, Vice President of the Parish Council, Vamanjoor Church, Mr Patrick Lobo, President of the local body and Mr. Prashanth Saldanha, convener of the programme.

All the presidents and secretaries and spiritual director who served Catholic Sabha, Mangalore – City Deanery, over the past 25 years were honored during the stage President Mr Wilfred Alvares welcomed the guest, Secretary Mrs Wilma Monteiro presented the 25 year report and convener Mr Prashanth Saldanha thanked the gathering.

Stage programme was followed by cultural programme performed by all the 10 units under the city deanery. The programme was concluded by a fellowship meal. Mr Victor Correa and Mr Sunil Pinto compèred the stage and cultural program. City varado catholic Sabha unit spiritual directors guest priest central council president, office bearers and large number of people were gathered and witnessed the celebration.

ಅಖಿಲ ಭಾರತ ರಜತ ಕೊಂಕಣಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಗೆ ‘ವಿಶನ್ ಕೊಂಕಣಿ’ ಮೈಕಲ್ ಡಿ’ಸೊಜಾ ಸಾರಥ್ಯ / Michael D Souza of VISION KONKANI to lead Reception Committee All India Konkani Sammelan

ಕೊಂಕಣಿ ಭಾಷೆ, ಸಾಹಿತ್ಯ, ಸಂಗೀತ ಮತ್ತು ಕಲೆಯ ಶ್ರೇಯೋಭಿವೃದ್ದಿಗಾಗಿ ’ವಿಶನ್ ಕೊಂಕಣಿ’ ಕಾರ್ಯಕ್ರಮದ ಮೂಲಕ ಅವಿರತ ಶ್ರಮಿಸುತ್ತಿರುವ ಅನಿವಾಸಿ ಉದ್ಯಮಿ ಮತ್ತು ಸಮಾಜ ಕಲ್ಯಾಣ ಕಾರ್ಯಕರ್ತ ಶ್ರೀ ಮೈಕಲ್ ಡಿಸೊಜಾ ಅವರು ನವೆಂಬರ್ 4 ಮತ್ತು 5 ರಂದು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದ ಆವರಣದಲ್ಲಿ ಬಸ್ತಿ ವಾಮನ ಶೆಣೈ ವೇದಿಕೆಯಲ್ಲಿ ನಡೆಯುವ 25 ನೇ ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ನೇತೃತ್ವ ವಹಿಸಿದ್ದಾರೆ.

ಪ್ರಸ್ತುತ ಅಬುದಾಬಿಯಲ್ಲಿ ನೆಲೆಸಿರುವ ಶ್ರೀ ಮೈಕಲ್ ಡಿಸೊಜಾ, ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ ಬಸ್ತಿ ವಾಮನ ಶೆಣೈ ಇವರ ಅಭಿಮಾನಿ ಹಾಗೂ ನಿಕಟವರ್ತಿ ಆಗಿದ್ದವರು. ದೇಶ – ವಿದೇಶಗಳಲ್ಲಿ ಕೊಂಕಣಿ ಭಾಷೆ, ಸಾಹಿತ್ಯ, ಸಂಗೀತ ಮತ್ತು ಕಲೆಯ ಕಾರ್ಯಕ್ರಮಗಳಿಗೆ ನಿರಂತರ ಪೋಶಕರಾಗಿದ್ದ ಶ್ರೀ ಮೈಕಲ್ ಡಿಸೊಜಾ, ಕೊಂಕಣಿ ಲೇಖಕರಿಗೆ ಪುಸ್ತಕ ಪ್ರಕಟಿಸಲು 40 ಲಕ್ಷ ರುಪಾಯಿ ಅನುದಾನ, ಕೊಂಕಣಿ ಗೀತ ಸಾಹಿತ್ಯ, ಸಂಗೀತ ಸಂಯೋಜನೆ ಮತ್ತು ಪ್ರಸ್ತುತಿಗಾಗಿ ಸುಮಾರು 10 ಲಕ್ಷ ಹಾಗೂ ಕೊಂಕಣಿ ಸಿನೆಮಾಕ್ಕಾಗಿ 25 ಲಕ್ಷ ಅನುದಾನವನ್ನು ’ವಿಶನ್ ಕೊಂಕಣಿ’ ಕಾರ್ಯಕ್ರಮದ ಮೂಲಕ ಈಗಾಗಲೇ ಮುಡಿಪಾಗಿಟ್ಟಿದಾರೆ. ಕೊಂಕಣಿ ಭಾಷಿಕ ವಿದ್ಯಾರ್ಥಿಗಳಿಗಾಗಿ 25 ಕೋಟಿ ರುಪಾಯಿ ಮೌಲ್ಯದ ’ಎಡುಕೇರ್’ ವಿದ್ಯಾರ್ಥಿನಿಧಿಯನ್ನು ಸ್ಥಾಪಿಸಿದ್ದು ಸಿ.ಒ.ಡಿ.ಪಿ. ಸಂಸ್ಥೆಯ ಮೂಲಕ ಈ ವರೆಗೆ ಸುಮಾರು 3,500 ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನ ಕಾರ್ಯಕ್ರಮದ ಪ್ರಯೋಜನ ಪಡೆದಿರುತ್ತಾರೆ.

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿಎ. ನಂದಗೋಪಾಲ ಶೆಣೈ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಗೋಕುಲದಾಸ ಪ್ರಭು ಸಮ್ಮೇಳನದ ಸ್ವಾಗತ ಸಮಿತಿಯ ಉಪಾಧ್ಯಕ್ಷರಾಗಿದ್ದು, ಕೊಂಕಣಿ ಕವಿ ಟೈಟಸ್ ನೊರೊನ್ಹಾ ಕಾರ್ಯದರ್ಶಿ ಮತ್ತು ಪತ್ರಕರ್ತ ಎಚ್. ಎಮ್. ಪೆರ್ನಾಲ್ ಸ್ವಾಗತ ಸಮಿತಿಯ ಕಾರ್ಯಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇತ್ತೀಚೆಗೆ ನಲಂದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯಕಾರಿ ಸಮಿತಿ ಸದಸ್ಯ, ಕವಿ ಮೆಲ್ವಿನ್ ರೊಡ್ರಿಗಸ್, ಅಖಿಲ ಭಾರತ ಕೊಂಕಣಿ ಪರಿಷದ್ ಇದರ ಕಾರ್ಯಧ್ಯಕ್ಷ ಚೇತನ್ ಆಚಾರ್ಯ ಮತ್ತು ಕೊಂಕಣಿ ಶಿಕ್ಷಣ ತಜ್ಞ ಡಾ| ಕಸ್ತೂರಿ ಮೋಹನ್ ಪೈ ಇವರ ಮಾರ್ಗದರ್ಶನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಉಪಸಮಿತಿಗಳನ್ನು ರಚಿಸಲಾಗಿದ್ದು, ಆರ್ಥಿಕ ಸಮಿತಿಗೆ ಸ್ಟೀಫನ್ ಪಿಂಟೊ, ಬೆಂದೂರ್ ಮತ್ತು ಓಸ್ವಲ್ಡ್ ರೊಡ್ರಿಗಸ್, ಬಿಜೈ, ಊಟೋಪಚಾರ ಸಮಿತಿಗೆ ವಿಶ್ವ ಕೊಂಕಣಿ ಕೇಂದ್ರ, ವಸತಿ ಸಮಿತಿಗೆ ವಿನ್ಸೆಂಟ್ ಪಿಂಟೊ, ಫ್ಲೊಯ್ಡ್ ಕಿರಣ್ ಮತ್ತು ಜೆರಿ ಕೊನ್ಸೆಸೊ, ನೋಂದಣಿ ಮತ್ತು ಸ್ವಯಂ ಸೇವಕ ಸಮಿತಿಗೆ ಶ್ರೀಮತಿ ಸುಚಿತ್ರಾ ಶೆಣೈ ಮತ್ತು ಶ್ರೀಮತಿ ಫೆಲ್ಸಿ ಲೋಬೊ, ಕಾರ್ಯಕ್ರಮ ಸಮಿತಿಗೆ ಡಾ| ಹನುಮಂತ್ ಚೋಪ್ಡೆಕರ್ ಮತ್ತು ಡಾ| ಜಯಂತಿ ನಾಯ್ಕ್, ವೇದಿಕೆ ನಿರ್ವಹಣಾ ಸಮಿತಿಗೆ ಅನ್ವೇಷಾ ಸಿಂಘಬಾಳ್, ಮಾಧ್ಯಮ ಸಮಿತಿಗೆ ಸ್ಟ್ಯಾನಿ ಬೇಳಾ ಮತ್ತು ಪ್ರವೀಣ್ ತಾವ್ರೊ , ಮುದ್ರಣ – ಸ್ಮರಣ ಸಂಚಿಕೆ ಸಮಿತಿಗೆ ಟೈಟಸ್ ನೊರೊನ್ಹಾ – ಪ್ರಮುಖರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Michael D Souza of VISION KONKANI to lead Reception Committee All India Konkani Sammelan

Staunch Konkani Supporter and Promoter of ‘Vision Konkani’ Programme for the all-round development of Konkani language, literature and culture Sri Michael D Souza will be leading the Reception committee of 25th All India Konkani Sahitya Sammelan as the President. CA Nandagopal Shenoy , President of World Konkani Centre and Sahitya Akademi awardee Gokuldas Prabhu will be the Vice presidents. Konkani poet and thinker Titus Noronha will be the general secretary and journalist H. M. Pernal will be the working president of the reception committee.

25th All India Konkani Sahitya Sammelan will be held at Basti Vaman Shenoy Stage in the premises of World Konkani Centre on Nov 4 & 5. About 650 delegates from various parts of India expected to attend the Sammelan, which Mangalore is hosting for the first time in the 84 years history of All India Konkani Parishad, founded in 1939 by Late Madhav Manjunath Shanbaug of Kumta.

Abu Dhabi based NRI entrepreneur and philanthropist Michael D’Souza originally hails from Puttur and is a constant supporter for Konkani activities and programmes in India and abroad. With his signature programme ‘Vision Konkani’ he has empowered Konkani writers and Artists with Konkani Book Publication Grant to the tune of Rs.40 Lakhs, Konkani Music Grant to the tune of Rs.10 Lakh and Konkani Feature Film Grant to the tune of Rs. 25 Lakh. Publication of Konkani books, Production of Music Singles, and Feature film are under process under his visionary programme VISION KONKANI. He has established EDU CARE scholarship programme for konkani speaking students for higher education under the supervision of CODP, Dioceses of Mangalore. So far 3,500 students benefited from this scholarship programme.

Various sub Committees were formed in the recently held preliminary meeting under the guidance of Sahitya Akademi Executive Council Member and convenor of Konkani Advisory Board at Sahitya Akademi, Poet Melvyn Rodrigues, Chetan Acharya, Executive President of All India Konkani Parishad and Konkani educationist Dr Kasturi Mohan Pai at Nalanda English Medium School, V T Road. Mangalore.

Stephen Pinto, Bendur and Oswald Rodrigues, Bejai will be heading the Finance Committee, World Konkani Centre will be looking after Food and Venue, Smt Suchitra S Shenoy and Smt Felcy Lobo will be leading the Front Office and Volunteer Committee, Accommodation and transport will he managed by Vincent Pinto Anjelore, Floyd Kiran Moras, Nirkan and Gerald Concesso. Dr Hanumanth Chopdekar and Dr Jayanti Naik are in charge of the Programme Committee and Smt Anwesha Singbhal will be heading the stage committee. The Media promotion Committee will be handled by Stany Bela and Praveen Tauro. Titus Noronha will be in charge of the Printing and Souvenir committee.

ಕಾಲೇಜು ವಿದ್ಯಾರ್ಥಿನಿಯ ಕಿಡ್ನಾಪ್‌ ಮಾಡಿ ಕೊಪ್ಪಳದಲ್ಲಿ ಸಾಮೂಹಿಕವಾಗಿ ಅತ್ಯಾಚಾರ

ಕೊಪ್ಪಳ: ಬಳ್ಳಾರಿಯ ಕಾಲೇಜು ವಿದ್ಯಾರ್ಥಿನಿಯನ್ನು ಆಟೋದಲ್ಲಿ ಕಿಡ್ನಾಪ್‌ ಮಾಡಿ ಕೊಪ್ಪಳಕ್ಕೆ ಕರೆತಂದು ಬಿಯರ್‌ ಕುಡಿಸಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ಘಟನೆ ವರದಿಯಾಗಿದೆ.

ಸಣಾಪುರ ಬಳಿಯ ಹೋಟೆಲೆನಲ್ಲಿ ಅತ್ಯಾಚಾರ ಎಸಗಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಇನ್ನುಳಿದ ಮೂವರ ಪತ್ತೆಗೆ ಜಾಲಾ ಬಿಸಲಾಗಿದೆ. ಬಿ.ಕಾಂ ವ್ಯಾಸಾಂಗ ಮಾಡುತ್ತಿದ್ದ ಯುವತಿ ಕಾಲೇಜಿನಲ್ಲಿ ಪರೀಕ್ಷೆ ಬರೆಯುತ್ತಿದ್ದಳು. ಈ ವೇಳೆ ಅಣ್ಣ ಬಂದಿರುವುದಾಗಿ ಹೇಳಿದಾಗ ವಿದ್ಯಾರ್ಥಿನಿ ಕಾಲೇಜಿನಿಂದ ಹೊರಗಡೆ ಹೋಗಿದ್ದಾಳೆ. ಅವಾಗ ಆರೋಪಿಗಳು ವಿದ್ಯಾರ್ಥಿನಿಯನ್ನು ಆಟೋದಲ್ಲಿ ಕಿಡ್ನಾಪ್‌ ಮಾಡಿ ಕೊಪ್ಪಳ ಜಿಲ್ಲೆಯ ಸಣಾಪುರ ಬಳಿಯ ಅಂತರಾಳ ಕೆಫೆ ಹೋಟೆಲಿಗೆ ಕರೆದೊಯ್ದಿದ್ದಾರೆ. ಬಳಿಕ ಬಿಯರ್‌ ಕುಡಿಸಿ ಮತ್ತು ಬರಿಸಿ, ನಾಲ್ವರು ಆರೋಪಿಗಳು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಘಟನೆ ಸಂಬಂಧ ಸಂತ್ರಸ್ತ ಯುವತಿಯು ಬಳ್ಳಾರಿ ನಗರದ
ಕೌಲ್‌ ಬಜಾರ್ನ ನವೀನ್‌, ಸಾಕೀಬ್‌, ತನು ಸೇರಿದಂತೆ ನಾಲ್ವರ ವಿರುದ್ಧ ಬಳ್ಳಾರಿ ಮಹಿಳಾ ಠಾಣೆಗೆ ದೂರು ನೀಡಿದ್ದು, ಪೊಲೀಸರು ಅತ್ಯಾಚಾರ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆ ಮಾಡುತಿದ್ದಾರೆ.

ದೆವ್ವ ಬಿಡಿಸುವುದಾಗಿ ನಂಬಿಸಿ ದುಷ್ಕರ್ಮಿ 18 ರ ಯುವತಿಯ ಮೇಲೆ ಅತ್ಯಾಚಾರ

ಉತ್ತರಪ್ರದೇಶ: ದೆವ್ವ ಬಿಡಿಸುವುದಾಗಿ ಹೇಳಿ ದುಷ್ಕರ್ಮಿಯೊಬ್ಬ ಯುಪತಿ(18) ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಭದೋಹಿಯಲ್ಲಿ ನಡೆದಿದೆ. ಮಿರ್ಜಾಪುರದಿಂದ ಸೀತಾಮರ್ಹಿಗೆ ಬಂದಿದ್ದ ಕುಟುಂಬವೊಂದಕ್ಕೆ ಮೋತಿಲಾಲ್‌ (52) ಎಂಬಾತ ತನ್ನನ್ನು ತಾಂತ್ರಿಕ ಎಂದು ಷರಿಚಯಿಸಿಕೊಂಡಿದ್ದಾನೆ. ನಿಮ್ಮ ಮಗಳಿಗೆ ದೆವ್ವ ಹಿಡಿದಿದೆ. ಭೂತೋಚ್ಚಾಟನೆಯ ಮೂಲಕ ಆಕೆಯ ದೇಹದಿಂದ ಪ್ರೇತವನ್ನು ಓಡಿಸಬಹುದೆಂದು ಯುವತಿಯ ಪೋಷಕರನ್ನು ನಂಬಿಸಿದ್ದಾನೆ. ಅವರಿಂದ 4,000 ರೂ. ಪಡೆದು ಮೋತಿಲಾಲ್‌ ಆಕೆಯನ್ನು ಬೈಕಿನಲ್ಲಿ ದರ್ವಸಿ ಗ್ರಾಮದ ದೇವಸ್ಥಾನದ ಹಿಂದಿನ ಕೋಣೆಗೆ ಕರೆದೊಯ್ದು ಅಲ್ಲಿ ಅವಳ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಮೂರು ಗಂಟೆಗಳ ಸಂತರ ಮೋತಿಲಾಲ್‌ ಯುವತಿಯನ್ನು ಬಿಟ್ಟು, ಮರುದಿನ ಮತ್ತೆ ತನ್ನನ್ನು ಭೇಟಿ ಮಾಡಲು ಹೇಳಿದ್ದಾನೆ. ಘಟನೆಯ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಆದರೆ ಸಂತ್ರಸ್ತೆ ತನ್ನ ಕುಟುಂಬಕ್ಕೆ ವಿಷಯ ತಿಳಿಸಿದ್ದು, ಆಕೆಯ ತಂದೆ ಆರೋಪಿಯ ವಿರುದ್ಧ ದೂರು ನೀಡಿದ್ದಾರೆ. ಆರೋಪಿ ಮೋತಿಲಾಲ್‌ನನ್ನು ಬಂಧಿಸಲಾಗಿದೆ
.

ಕಾರು ಮತ್ತು ಟ್ರಕ್‌ ನಡುವೆ ಮುಖಾಮುಖಿ ಡಿಕ್ಕಿ ಮಕ್ಕಳು ಸೇರಿ ಎಂಟು ಮಂದಿ ಸಾವು

ಚೆನ್ನೈ: ಕಾರು ಮತ್ತು ಟ್ರಕ್‌ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮಕ್ಕಳು ಸೇರಿದಂತೆ ಓಟ್ಟು ಎಂಟು ಮಂದಿ ಸಾವನ್ನಪ್ಪಿದ ಘಟನೆ ತಮಿಳುನಾಡಿನ ತಿರುವಣ್ಣಾಮಲೈ-ಬೆಂಗಳೂರು ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ.

ಕಾರಿನಲ್ಲಿದ್ದವರು ತಮಿಳುನಾಡಿನ ದೇವಸ್ಥಾನವೊಂದಕ್ಕೆ ಭೇಟಿ ನೀಡಿ ಬೆಂಗಳೂರಿಗೆ ಮರಳುತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಆರು ಜನ ಮೃತಪಟ್ಟಿದ್ದರೆ, ಇನ್ನಿಬ್ಬರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ ಅಪಘಾತದ ತೀವ್ರತೆಗೆ ಎರಡೂ ವಾಹನಗಳು ತೀವ್ರ ಹಾನಿಗೊಳಗಾಗಿವೆ. ಇದರಿಂದಾಗಿ ವಾಹನಗಳು.
ಮಿತಿಮೀರಿದ ವೇಗದಲ್ಲಿ ಅಪಘಾತಕ್ಕೊಳಗಾಗಿವೆ ಎನ್ನಲಾಗುತ್ತದೆ. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಂಐಟಿಕೆಯಿಂದ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್‌ ಅವಕಾಶ

ವೃತ್ತಿಜೀವನವನ್ನು ರೂಪಿಸುವಲ್ಲಿ ಮತ್ತು ಅವರಿಗೆ ನೈಜ-ಪ್ರಪಂಚದ ಅನುಭವವನ್ನು ಒದಗಿಸುವಲ್ಲಿ ಇಂಟರ್ನ್‌ಶಿಪ್‌ ಪ್ರಮುಖ ಪಾತ್ರವನ್ನು ವಹಿಸುತ್ತದೆ ಅದಕ್ಕಾಗಿಯೇ ಎಂಐಟಿಕೆ ವಿದ್ಯಾರ್ಥಿಗಳಿಗೆ ಹಲವು ಪ್ರಸಿದ್ಧ ಕಂಪನಿಗಳೊಂದಿಗೆ ಇಂಟರ್ನ್ ಮಾಡಲು ಅವಕಾಶಗಳನ್ನು ಒದಗಿಸಲಾಗಿದೆ. ಈ ಇಂಟರ್ನ್‌ಶಿಪ್‌ಗಳು ಕೇವಲ ಜ್ಞಾನವನ್ನು ಗಳಿಸುವುದಲ್ಲ; ಅವು ವಿದ್ಯಾರ್ಥಿಗಳನ್ನು ಭವಿಷ್ಯದ ಯಶಸ್ಸಿನತ್ತ ಕೊಂಡೊಯ್ಯುವ ಪರಿವರ್ತಕ ವಿಷೇಶ ಅನುಭವಗಳಾಗಿವೆ. ನಮ್ಮ ವಿದ್ಯಾರ್ಥಿಗಳು ಅರ್ನ್ಸ್ಟ್ ಮತ್ತು ಯಂಗ್ ಎಂ.ಸಿ.ಫ್, ಮಣಿಪಾಲ್ ಟೆಕ್ನಾಲಜೀಸ್, ಜನತಾ ಫಿಶ್ ಮೀಲ್, ಮ್ಯಾಕ್ಸ್ ಲೈಫ್‌ಸ್ಟೈಲ್ ಮತ್ತು ಹರ್ಷ ಮುಂತಾದ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ತರಬೇತಿ ಪಡೆಯುವ ಸವಲತ್ತುಗಳನ್ನು ಹೊಂದಿದ್ದಾರೆ. ಈ ಕಂಪನಿಗಳು ವೃತ್ತಿಪರ ಸೇವೆಗಳು, ತಂತ್ರಜ್ಞಾನಾಧಾರಿತ ಪರಿಹಾರಗಳು, ಸ್ಥಳೀಯ ವ್ಯವಹಾರಗಳು, ಚಿಲ್ಲರೆ ವ್ಯಾಪಾರ ಮತ್ತು ಪ್ರವರ್ತಕ ಉದ್ಯಮಗಳು ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಪ್ರತಿನಿಧಿಸುತ್ತವೆ.

ಈ ಇಂಟರ್ನ್‌ಶಿಪ್‌ಗಳು ಕೇವಲ ರೆಸ್ಯೂಮ್‌ನಲ್ಲಿ ಸೇರಿಸಲು ಮಾತ್ರವಲ್ಲ ಅಲ್ಲ, ಅವು ಬೆಳವಣಿಗೆ ಮತ್ತು ಉತ್ಕೃಷ್ಟತೆಯ ಜ್ಯೋತಕಗಳಾಗಿವೆ. ಈ ವೃತ್ತಿಪರ ಕಂಪನಿಗಳು ನಮ್ಮ ವಿದ್ಯಾರ್ಥಿಗಳನ್ನು ಅತ್ಯಾಧುನಿಕ ಉದ್ಯಮದ ವ್ಯವಹಾರ, ನಾವೀನ್ಯತೆ ಮತ್ತು ಸವಾಲುಗಳಿಗೆ ಸ್ಪಂದಿಸುವ ಅವಕಾಶಗಳನ್ನು ಒದಗಿಸುತ್ತಾರೆ,. ಅವರು ನಮ್ಮ ವಿದ್ಯಾರ್ಥಿಗಳಿಗೆ ತಮ್ಮ ತರಗತಿಯ ಜ್ಞಾನವನ್ನು ನೈಜ-ಪ್ರಪಂಚದ ಸನ್ನಿವೇಶಗಳಲ್ಲಿ ಅನ್ವಯಿಸಲು ಅವಕಾಶಗಳನ್ನು ಒದಗಿಸುತ್ತಾರೆ. ಅವರ ಕೌಶಲ್ಯಗಳನ್ನು ಗೌರವಿಸಿ. ಭವಿಷ್ಯದ ನಾಯಕರಾಗಲು ಮತ್ತು ಅವರ ಕೈಗಾರಿಕೆಗಳಿಗೆ ಕೊಡುಗೆದಾರರಾಗಲು ಅವರನ್ನು ಸಿದ್ಧಪಡಿಸುತ್ತಾರೆ.