ಇಸ್ರೇಲ್ ವೈಮಾನಿಕ ದಾಳಿ ತೀವ್ರ : ಭಯೋತ್ಪಾದಕರಿಗೆ ನಿರ್ದೇಶನ ನೀಡುವ ಅಬು ಮುರಾದ್‌ ಹತ್ಯೆ

ಇಸ್ರೇಲ್‌ ಹಾಗೂ ಪ್ಯಾಲೆಸ್ಬೀನ್‌ ನಡುವೆ ಸಂಘರ್ಷ ತೀವ್ರಗೊಳ್ಳುತ್ತಿರುವಂತೆ ರಾತ್ರಿಯಿಡೀ ಇಸ್ರೇಲ್‌
ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ ಸಂಘಟನೆಯ ವಾಯುಪಡೆಯ ಮುಖ್ಯಸ್ಥ ಅಬು ಮುರಾದ್‌
ಹತ್ಯೆಯಾಗಿರುವ ಬಗ್ಗೆ ವರದಿಯಾಗಿದೆ. ಶನಿವಾರ ನಡೆದ ಹತ್ಯಾಕಾಂಡದ ವೇಳೆ ಭಯೋತ್ಪಾದಕರಿಗೆ ನಿರ್ದೇಶನ ನೀಡುವಲ್ಲಿ ಅಬು ಮುರಾದ್‌
ಹೆಚ್ಚು ಹೊಣೆಗಾರನಾಗಿದ್ದ. ಕಳೆದ ರಾತ್ರಿ ಇಸ್ರೇಲ್‌ ವಾಯುಪಡೆಯ ಫೈಟರ್‌ ಜೆಟ್‌ಗಳು ಗಾಜಾ ಪಟ್ಟಿಯಾದ್ಯಂತ
ವ್ಯಾಪಕವಾದ ದಾಳಿಗಳನ್ನು ನಡೆಸಿದ್ದು, ಈ ದಾಳಿಯಲ್ಲಿ ಅಬು ಮುರಾದ್‌ ಹತ್ಯೆಯಾಗಿದ್ದಾನೆಂದು ಇಸ್ರೇಲ್‌ ಟೆಲ್‌ ಅವೀವ್‌ ನಿಂದ
ಹೇಳಿಕೊಂಡಿದೆ.

ಈ ಕುರಿತು ಇಸ್ರೇಲ್‌ ವಾಯುಪಡೆ ಸಾಮಾಜಿಕ ಜಾಲತಾಣದಲ್ಲಿ “ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದೆ. ಹಮಾಸ್‌
ಭಯೋತ್ಪಾದನಾ ತಾಣಗಳು ಮತ್ತು ಗಾಜಾ ಪಟ್ಟಿಯಲ್ಲಿರುವ ನುಖ್ಬಾ ಭಯೋತ್ಪಾದಕ ಕಾರ್ಯಕರ್ತರನ್ನು
ಗುರಿಯಾಗಿಸಿ ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ ಅಬು ಮುರಾದ್‌ ಹತ್ಯೆಯಾಗಿದ್ದಾನೆಂದು ಹೇಳಿದಾರೆ.ವಾಯುಪಡೆಯ ಫೈಟರ್‌ ಜೆಟ್‌ಗಳು ಭಯೋತ್ಪಾದಕ ಸಂಘಟನೆ ಹಮಾಸ್‌ನ ಕಾರ್ಯಾಚರಣೆಯ ಪ್ರಧಾನ
ಕಚೇರಿಯ ಮೇಲೆ ದಾಳಿ ಮಾಡಿದವು. ಅಲ್ಲಿಂದಲೇ ಈ ಸಂಘಟನೆಯು ತನ್ನ ವೈಮಾನಿಕ ಚಟುವಟಿಕೆಗಳನ್ನು
ನಿರ್ವಹಿಸುತ್ತಿತ್ತು. ಈ ದಾಳಿಯ ಸಮಯದಲ್ಲಿ ಗಾಜಾ ನಗರದ ವಾಯು ಪಡೆಯ ಮುಖ್ಯಸ್ಥ ಮುರಾದ್‌ ಅಬು
ಮುರಾದ್‌ ಸಾವನ್ನಪ್ಪಿದ್ದಾನೆ. ಇಷ್ಟೇ ಅಲ್ಲ, “ಸ್ವಲ್ಪ ಸಮಯದ ಹಿಂದೆ ಇಸ್ರೇಲ್‌ ರಕ್ಷಣಾ ಪಡೆಯ ಸೈನಿಕರು ಲೆಬನಾನ್‌ನಿಂದ ಇಸ್ರೇಲಿ
ಭೂಪ್ರದೇಶಕ್ಕೆ ನುಸುಳಲು ಯತ್ನಿಸಿದ ಭಯೋತ್ಪಾದಕ ಕೋಶ ಗುರುತಿಸಿದ್ದಾರೆ. ವಾಯುಪಡೆಯು ಮಾನವರಹಿತ
ವೈಮಾನಿಕ ವಾಹನದ ಮೂಲಕ ಈ ಭಯೋತ್ಪಾದಕ ಕೋಶವನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿ,
ಹಲವಾರು ಭಯೋತ್ಪಾದಕರನ್ನು ಹತ್ಯೆ ಮಾಡಿದೆ ಎಂದು ಮಾಹಿತಿ ನೀಡಿದೆ. ಮತ್ತೊಂದೆಡೆ, ರಾತ್ರಿಯಿಡೀ ನಡೆಸಿದ ಪ್ರತ್ಯೇಕ ದಾಳಿಗಳಲ್ಲಿ ಇಸ್ರೇಲ್‌ ವಾಯುಪಡೆಗಳು ಹಮಾಸ್‌ನ ಕಮಾಂಡೋ ಪಡೆಗಳಿಗೆ ಸೇರಿದ ಡಜನ್‌ಗಟ್ಟಲೆ ಸ್ಥಳಗಳನ್ನು ನಾಶ ಮಾಡಿದೆ. ಈ ಪ್ರದೇಶಗಳು ಅಕ್ಟೋಬರ್‌ 7ರಂದು ಇಸ್ರೇಲ್‌ಗೆ ಒಳನುಸುಳುವಿಕೆಗೆ ಕಾರಣವಾಗಿದ್ದವು ಎಂದು ವರದಿಗಳು ತಿಳಿಸಿವೆ.

ಇಸ್ರೇಲ್‌ ಹಾಗೂ ಹಮಾಸ್‌ ಸಂಘರ್ಷದ ಮಧ್ಯೆ ಇಸ್ರೇಲ್‌ ಸೇನೆಯು ಗಾಜಾ ನಗರದಿಂದ ಎಲ್ಲ ನಾಗರಿಕರಿಗೆ
ಸ್ಥಳಾಂತರವಾಗುವಂತೆ ಕರೆ ನೀಡಿತ್ತು. ಇದರ ಬೆನ್ನಲ್ಲೇ ಗಾಜಾ ಪಟ್ಟಿಯಲ್ಲಿರುವ ಜನರು ವಲಸೆ ಹೋಗುತ್ತಿದ್ದಾರೆ
ಎಂದು ಇಸ್ರೇಲ್‌ ರಕ್ಷಣಾ ಪಡೆಗಳ ವಕ್ತಾರ ಲೆಪ್ಟಿನೆಂಟ್‌ ಕರ್ನಲ್‌ ಜೊನಾಥನ್‌ ಕಾನ್ಫಿಕಸ್‌ ಹೇಳಿದ್ದರು. ನಾವು ದಕ್ಷಿಣದ ಕಡೆಗೆ ಪ್ಯಾಲೇಸ್ಟಿನಿಯನ್‌ ನಾಗರಿಕರ ಗಮನಾರ್ಹ ವಲಸೆಯನ್ನು ಗಮನಿಸುತ್ತಿದ್ದೇವೆ. ನಮ್ಮ ಎಚ್ಚರಿಕೆಯನ್ನು ಜನರು ಆಲಿಸಿ ಅರ್ಥಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅಪಾಯಕಾರಿ ಪ್ರದೇಶದಿಂದ ಹೊರಬರುತ್ತಿದ್ದಾರೆ ಎಂದು ಕಾನ್ರಿಕಸ್‌ ತಿಳಿಸಿದ್ದಾರೆ.

ರಾಜ್ ಕುಮಾರ್ ವರ್ಕಾ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ, ಬಲ್ಬೀರ್ ಸಿಧು, ಗುರ್‌ಪ್ರೀತ್ ಕಂಗರ್ ಮತ್ತು ಇತರರು ಅವರನ್ನು ಅನುಸರಿಸಲಿದ್ದಾರೆ


ಚಂಡೀಗಢ (ಪಿಟಿಐ): ಪಂಜಾಬ್ ಬಿಜೆಪಿಯ ಹಿರಿಯ ನಾಯಕರಾದ ರಾಜ್ ಕುಮಾರ್ ವರ್ಕಾ, ಬಲ್ಬೀರ್ ಸಿಂಗ್ ಸಿಧು ಮತ್ತು ಗುರುಪ್ರೀತ್ ಕಂಗಾರ್ ಅವರು ಕಾಂಗ್ರೆಸ್‌ಗೆ ಮರಳಲು ನಿರ್ಧರಿಸಿದ್ದು, ಎಸ್‌ಎಡಿಯಿಂದ ಕೆಲವು ನಾಯಕರು ಸಹ ಅವರನ್ನು ಅನುಸರಿಸುವ ನಿರೀಕ್ಷೆಯಿದೆ.

ಈ ನಾಯಕರು, ಪಂಜಾಬ್‌ನ ಕೆಲವು ಇತರರೊಂದಿಗೆ ಶುಕ್ರವಾರ ತಡರಾತ್ರಿ ನವದೆಹಲಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಕಾಂಗ್ರೆಸ್‌ನ ಪಂಜಾಬ್ ಘಟಕದ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ತಡರಾತ್ರಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಮಾಜಿ ಕ್ಯಾಬಿನೆಟ್ ಮಂತ್ರಿಗಳಾದ ಬಲ್ಬೀರ್ ಸಿಧು ಜಿ ಮತ್ತು ಗುರುಪ್ರೀತ್ ಕಂಗರ್ ಜಿ, ಮಾಜಿ ಶಾಸಕ ರಾಜ್ ಕುಮಾರ್ ವರ್ಕಾ ಜಿ, ಮೊಹಿಂದರ್ ರಿನ್ವಾ ಜಿ, ಹನ್ಸ್ ರಾಜ್ ಜೋಶನ್ ಜಿ ಮತ್ತು ಜಿತ್ ಮೊಹಿಂದರ್ ಸಿಧು ಜಿ ಸೇರಿದಂತೆ ಪಂಜಾಬ್‌ನ ವಿವಿಧ ಹಿರಿಯ ನಾಯಕರು ಕಾಂಗ್ರೆಸ್ ಸೇರಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಉಸ್ತುವಾರಿ ಕೆ.ಸಿ.ಗೋಲಾನ್ ಇವರ ಸಮ್ಮುಖದಲ್ಲಿ,” ವಾರಿಂಗ್ ಹೇಳಿದರು.

ಹಿರಿಯ INCP ಪಂಜಾಬ್ ನಾಯಕತ್ವದ ಸಮ್ಮುಖದಲ್ಲಿ ಅವರನ್ನು ಪಂಜಾಬ್‌ನಲ್ಲಿ ಪಕ್ಷಕ್ಕೆ ಔಪಚಾರಿಕವಾಗಿ ಸೇರಿಸಿಕೊಳ್ಳಲಾಗುವುದು” ಎಂದು ಅವರು ಹೇಳಿದರು. ಹಿಂದಿನ ದಿನ, ಅಮೃತಸರದ ಪ್ರಮುಖ ದಲಿತ ನಾಯಕ ವರ್ಕಾ ಅವರು ಬಿಜೆಪಿಯನ್ನು ತೊರೆಯಲು ನಿರ್ಧರಿಸಿದ್ದಾರೆ ಮತ್ತು ಕಾಂಗ್ರೆಸ್‌ಗೆ ಸೇರುವುದಾಗಿ ಹೇಳಿದರು, ಅದನ್ನು “ಘರ್ ವಾಪ್ಸಿ” ಎಂದು ಕರೆದರು.

ಜೂನ್ 2022 ರಲ್ಲಿ ಬಿಜೆಪಿಗೆ ಬದಲಾಯಿಸುವ ಮೊದಲು ವರ್ಕಾ, ಸಿಧು ಮತ್ತು ಕಂಗರ್ ಹಿಂದಿನ ಕಾಂಗ್ರೆಸ್ ಹಂಚುವಿಕೆಯಲ್ಲಿ ಸಚಿವರಾಗಿದ್ದರು. ಶಿರೋಮಣಿ ಅಕಾಲಿದಳ (ಎಸ್‌ಎಡಿ) ನಾಯಕರಾದ ಜೋಶನ್ ಮತ್ತು ರಿನ್ವಾ 2021 ರಲ್ಲಿ ಕಾಂಗ್ರೆಸ್ ತೊರೆದು ಪಕ್ಷಕ್ಕೆ ಸೇರಿದ್ದರು. ಜಿತ್ ಮೊಹಿಂದರ್ ಸಿಧು ಕೂಡ SAD ಜೊತೆ ಸಂಬಂಧ ಹೊಂದಿದ್ದರು. ಕಳೆದ ವರ್ಷದಲ್ಲಿ ಬಿಜೆಪಿಗೆ ಬದಲಾದ ಹಲವಾರು ಕಾಂಗ್ರೆಸ್ ನಾಯಕರಲ್ಲಿ ವರ್ಕಾ ಕೂಡ ಒಬ್ಬರು. ಬಿಜೆಪಿಯ ಪಂಜಾಬ್ ಘಟಕದ ಮುಖ್ಯಸ್ಥ ಸುನೀಲ್ ಜಾಖರ್ ಕೂಡ ಕಾಂಗ್ರೆಸ್‌ನಿಂದ ಪಕ್ಷಾಂತರಗೊಂಡಿದ್ದರು.

ಅಮೃತಸರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವರ್ಕಾ, ನಾನು ಬಿಜೆಪಿ ತೊರೆಯುವ ನಿರ್ಧಾರಕ್ಕೆ ಬಂದಿದ್ದೇನೆ, ಪಕ್ಷಕ್ಕೆ ರಾಜೀನಾಮೆ ನೀಡಿ ಈಗ ದೆಹಲಿಗೆ ಹೋಗುತ್ತಿದ್ದೇನೆ ಮತ್ತು ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿದರು. ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಇದು ಘರ್ ವಾಪ್ಸಿ ಎಂದರು. “ನಾನು ಬಿಜೆಪಿಗೆ ಸೇರುವ ಮೂಲಕ ತಪ್ಪು ಮಾಡಿದ್ದೇನೆ ಆದರೆ ಈಗ ನಾನು ಅದನ್ನು ಸರಿಪಡಿಸಲು ಹೊರಟಿದ್ದೇನೆ” ಎಂದು ವರ್ಕಾ ಹೇಳಿದರು.

ಈ ನಿರ್ಧಾರವನ್ನು ಏಕೆ ತೆಗೆದುಕೊಂಡಿದ್ದೀರಿ ಎಂದು ಕೇಳಿದಾಗ, ಈ ಹೆಜ್ಜೆಯ ಹಿಂದೆ ಕೆಲವು ಕಾರಣಗಳಿವೆ ಎಂದು ವರ್ಕಾ ಹೇಳಿದರು.ದೇಶವು ಕಾಂಗ್ರೆಸ್‌ನ ಕೈಯಲ್ಲಿ ಸುಭದ್ರವಾಗಿರಬಹುದು ಎಂಬುದನ್ನು ಇಡೀ ರಾಷ್ಟ್ರವು ನೋಡುತ್ತಿದೆ ಮತ್ತು ಯಾವುದೇ ಪಕ್ಷವು ಎಲ್ಲಾ ವರ್ಗಗಳನ್ನು, ಎಲ್ಲಾ ಧರ್ಮಗಳನ್ನು ಜೊತೆಯಲ್ಲಿ ಕರೆದೊಯ್ಯಲು ಸಾಧ್ಯವಾದರೆ ಅದು ಕಾಂಗ್ರೆಸ್ ಎಂದು ಅವರು ಹೇಳಿದರು. “ಕಾಂಗ್ರೆಸ್‌ನಂತೆ, ಬಿಜೆಪಿಯು ಸಮಾಜದ ಎಲ್ಲಾ ವರ್ಗಗಳಿಗೆ ಅವಕಾಶ ಕಲ್ಪಿಸಲು ಸಾಧ್ಯವಾಗಿಲ್ಲ” ಎಂದು ಅವರು ಹೇಳಿದರು.

ಕಾಂಗ್ರೆಸ್ ನಾಯಕರ ಇತ್ತೀಚಿನ ಅಮೃತಸರ ಭೇಟಿಯ ಸಂದರ್ಭದಲ್ಲಿ ನೀವು ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದೀರಾ ಎಂದು ಕೇಳಿದಾಗ, ವರ್ಕಾ, “ನಾನು ಈ ಬಗ್ಗೆ ಏನನ್ನೂ ಹೇಳಲು ಬಯಸುವುದಿಲ್ಲ ಆದರೆ ನಾನು (ಕಾಂಗ್ರೆಸ್) ಹೈಕಮಾಂಡ್ ಜೊತೆ ಮಾತನಾಡಿದ್ದೇನೆ ಎಂದು ಹೇಳುತ್ತೇನೆ” ಎಂದು ಹೇಳಿದರು.

ಮಝ್ಹಾ ಪ್ರದೇಶದ ಪ್ರಮುಖ ದಲಿತ ನಾಯಕ ವರ್ಕಾ ಅವರು ಮೂರು ಬಾರಿ ಶಾಸಕರಾಗಿದ್ದಾರೆ ಮತ್ತು ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮತ್ತು ಅಲ್ಪಸಂಖ್ಯಾತರ ಸಚಿವರಾಗಿದ್ದರು. ಅವರು ಎರಡು ಅವಧಿಗೆ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು.

ಪ್ಲಾಸ್ಟಿಕ್‍ನಿಂದ ತೊಂದರೆ ಉಂಟಾಗದಂತೆ ಎಚ್ಚರ ವಹಿಸಬೇಕು : ತಹಶೀಲ್ದಾರ್ ಶಿರಿನ್ ತಾಜ್

ಶ್ರೀನಿವಾಸಪುರ: ಪ್ಲಾಸ್ಟಿಕ್‍ನಿಂದ ತೊಂದರೆ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಪುರಸಭೆ ಹಾಗೂ ನೇತಾಜಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಪ್ಲಾಸ್ಟಿಕ್ ಮುಕ್ತ ಜಾಗೃತಿ ಅಭಿಯಾನ ಕಾರ್ಯಾಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ಲಾಸ್ಟಿಕ್ ಪಟ್ಟಣದ ಸ್ವಚ್ಛ ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ. ನಾಗರಿಕರು ಎಸೆಯುವ ಪ್ಲಾಸ್ಟಿಕ್ ಕವರ್ ಮತ್ತಿತರ ವಸ್ತುಗಳು ಚರಂಡಿ ಸೇರಿ ನೀರು ಸರಾಗವಾಗಿ ಹರಿಯುವುದನ್ನು ತಡೆಯುತ್ತದೆ. ಕೆಲವು ಸಲ ಪ್ಲಾಸ್ಟಿಕ್ ವಸ್ತುಗಳು ಜಾನುವಾರು ಹೊಟ್ಟೆ ಸೇರಿ ಪ್ರಾಣಾಂತಿಕವಾಗುತ್ತದೆ. ಆದ್ದರಿಂದಲೆ ಪುರಸಭೆ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದೆ. ನಿಯಮ ಬಾಹಿರರವಾಗಿ ಪ್ಲಾಸ್ಟಿಕ್ ವಸ್ತು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಳ್ಳುತ್ತಿದೆ. ದಂಡ ಹಾಕುತ್ತಿದೆ ಎಂದು ಹೇಳಿದರು.
ಪುರಸಭೆ ಸ್ವಚ್ಛತಾ ರಾಯಭಾರಿ ಮಾಯಾ ಬಾಲಚಂದ್ರ ಮಾತನಾಡಿ, ಪ್ಲಾಸ್ಟಿಕ್ ವಸ್ತುಗಳನ್ನು ಸುಡಬಾರದು. ಹಾಗೆ ಮಾಡುವುದರಿಂದ ಪರಿಸರಕ್ಕೆ ದೊಡ್ಡ ಪ್ರಮಾಣದಲ್ಲಿ ಹಾನಿ ಉಂಟಾಗುತ್ತದೆ. ಪರಿಸರ ಮಾಲಿನ್ಯ ತಡೆಯುವ ಸಲುವಾಗಿ ನಾಗರಿಕರು ಪ್ಲಾಸ್ಟಿಕ್ ಕವರ್ ಬಳಸದೆ, ಬಟ್ಟೆ ಬ್ಯಾಗ್ ಬಳಕೆ ಮಾಡಬೇಕು. ಮನೆಗಳಲ್ಲಿ ಹಸಿ ಕಸ ಹಾಗೂ ಒಣ ಕಸ ವಿಂಗಡಿಸಿ ಪೌರಕಾರ್ಮಿಕರಿಗೆ ನೀಡಬೇಕು ಎಂದು ಹೇಳಿದರು.
ನಾಗರಿಕರು ಆದಷ್ಟು ಪ್ಲಾಷ್ಟಿಕ್ ವಸ್ತುಗಳ ಬಳಕೆ ಕಡಿಮೆ ಮಾಡಬೇಕು. ಸಾಧ್ಯವಾದಷ್ಟು ಮರುಬಳಕೆ ಮಾಡಬೇಕು. ನಿರುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯದೆ ಪುನರ್ ಉತ್ಪಾದನೆ ಮಾಡಲು ನೀಡಬೇಕು. ಈ ನಿಯಮ ಪಾಲನೆಯಿಂದ ಹೆಚ್ಚಿನ ಪ್ರಯೋಜನವಾಗುತ್ತದೆ. ಮನೆಗಳಲ್ಲಿ ಬೀಳುವ ಹಸಿ ಕಸದಿಂದ ಸಾವಯವ ಗೊಬ್ಬರ ಯಾರಿಸಬಹುದು. ಈ ಬಗ್ಗೆ ಪಟ್ಟಣದ ನಾಗರಿಕರಿಗೆ ತರಬೇತಿ ನೀಡಲಾಗಿದೆ. ಹಾಗೆ ತಯಾರಿಸಿದ ಗೊಬ್ಬರ ಮಾಳಿಗೆ ಮೇಲೆ ಬೆಳೆಸಲಾಗುವ ತೊಟ ಅಥವಾ ಕೈ ತೋಟಕ್ಕೆ ಬಳಸಬಹುದಾಗಿದೆ ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ವ್ಯವಸ್ಥಾಪಕ ನವೀನ್ ಚಂದ್ರ, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಕಂದಾಯ ಅಧಿಕಾರಿ ವಿ.ನಾಗರಾಜ್, ಕಂದಾಯ ನಿರೀಕ್ಷಕ ಎನ್.ಶಂಕರ್, ನೇತಾಜಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನಾಗೇಂದ್ರರಾವ್, ಕೋಟೇಶ್, ಇಂದ್ರಕೃಷ್ಣಾರೆಡ್ಡಿ, ಸುನಿಲ್, ಸುಜಾತ, ಕೃಷ್ಣಾರೆಡ್ಡಿ ಇದ್ದರು.

ಫಲವತ್ತಾದ ಮಣ್ಣು ಭೂ ಸವಕಳಿ ಮೂಲಕ ಹಾಳಾಗದಂತೆ ಎಚ್ಚರವಹಿಸಬೇಕು : ಎಸ್.ಶಿವಕುಮಾರಿ

ಶ್ರೀನಿವಾಸಪುರ: ಫಲವತ್ತಾದ ಮಣ್ಣು ಭೂ ಸವಕಳಿ ಮೂಲಕ ಹಾಳಾಗದಂತೆ ಎಚ್ಚರವಹಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಶಿವಕುಮಾರಿ ಹೇಳಿದರು.
ಪಟ್ಟಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ನೆಹರು ಯುವ ಕೇಂದ್ರ, ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ ಮತ್ತು ಸ್ಥಳೀಯ ಪುರಸಭೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ನನ್ನ ಮಣ್ಣು ನನ್ನ ದೇಶ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಣ್ಣು ಅತ್ಯಂತ ಅಮೂಲ್ಯವಾದ ಸಂಪನ್ಮೂಲ. ಅರಣ್ಯ ನಾಶ, ಅವೈಜ್ಞಾನಿಕ ಉಳುಮೆ ಕಾರಣಗಳಿಂದ ಮಣ್ಣಿನ ಸವಕಳಿ ಹೆಚ್ಚಿದ. ಮಣ್ಣೀನ ಫಲವತ್ತಾದ ಮೇಲ್ಪದರ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಭೂಮಿ ಬರಡಾಗುತ್ತಿದೆ. ಈ ಪರಿಸ್ಥಿತಿ ಮುಂದುವರಿದರೆ ಬೆಳೆಗಳ ಬೆಳವಣಿಗೆ ಕುಂಠಿತಗೊಂಡು ಫಸಲಿನ ಇಳುವರಿ ಕುಸಿಯುತ್ತದೆ ಎಂದು ಹೇಳಿದರು.
ಸರ್ಕಾರ ಮಣ್ಣಿನ ಫಲವತ್ತತೆ ಕಾಪಾಡಲು ಪೂರಕವಾದ ಯೋಜನೆ ಜಾರಿಗೆ ತಂದಿದೆ. ಜಮೀನುಗಳಲ್ಲಿ ಬದುಗಳ ನಿರ್ಮಾಣದ ಮೂಲಕ ಹಾಗೂ ಗಿಡಮರ ಬೆಳೆಸುವುದರ ಮೂಲಕ ಭೂ ಸವಕಳಿ ತಡೆಯಲು ಪ್ರಯತ್ನಿಸಲಾಗುತ್ತಿದೆ. ರೈತರು ಈ ಯೋಜನೆ ಜಾರಿಗೆ ಸಹಕರಿಸಬೇಕು. ತಮ್ಮ ಜಮೀನಲ್ಲಿ ಮಣ್ಣು ಸಂಸರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣದ ಎಂಜಿ ರಸ್ತೆಯಲ್ಲಿ ಜಾಥಾ ನಡೆಸಿ ಮಣ್ಣಿನ ರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು. ಪುರಸಭೆ ಆವರಣದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ತಹಶೀಲ್ದಾರ್ ಶಿರಿನ್ ತಾಜ್, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಸಿಡಿಪಿಒ ಕಚೇರಿ ಅಧಿಕಾರಿ ನವೀನ್ ಕುಮಾರ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಎನ್.ರಾಮಪ್ಪ, ಕೆ.ಎಂ.ಶ್ರೀನಾಥ್, ಚೇತನ್, ಅಂತರ ರಾಷ್ಟ್ರೀಯ ಕ್ರೀಡಾಪಟು ನಿಶಾಂತ್ ಕುಮಾರ್ ಇದ್ದರು.

ವಿದ್ಯಾರ್ಥಿಗಳು ಸೌರವ್ಯೂಹದ ವಿಶೇಷ ಅಧ್ಯಯನ ಮಾಡಿ ಹೊಸ ಬೆಳಕು ಚೆಲ್ಲಬೇಕು:ಇಸ್ರೋ ವಿಜ್ಞಾನಿ ಡಾ. ರಾಮಚಂದ್ರ

ಶ್ರೀನಿವಾಸಪುರ: ವಿದ್ಯಾರ್ಥಿಗಳು ಸೌರವ್ಯೂಹದ ವಿಶೇಷ ಅಧ್ಯಯನ ಮಾಡಿ ಹೊಸ ಬೆಳಕು ಚೆಲ್ಲಬೇಕು ಎಂದು ಇಸ್ರೋ ವಿಜ್ಞಾನಿ ಡಾ. ರಾಮಚಂದ್ರ ಹೇಳಿದರು.
ಪಟ್ಟಣದ ಭೈರವೇಶ್ವರ ವಿದ್ಯಾ ನಿಕೇತನದ ಆವರಣದಲ್ಲಿ ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸಾಂಸ್ಕøತಿಕ ಹಾಗೂ ನೈತಿಕ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಾಹ್ಯಾಕಾಶ ಯುವ ವಿಜ್ಞಾನಿಗಳ ಆದ್ಯತಾ ಕ್ಷೇತ್ರವಾಗಿದೆ ಎಂದು ಹೇಳಿದರು.
ಭಾರತ ಕೈಗೊಂಡ ಚಂದ್ರಯಾನ-3 ವಿಶ್ವ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದೆ. ಚಂದ್ರಯಾನದ ಯಶಸ್ಸು ಇಸ್ರೋ ವಿಜ್ಞಾನಿಗಳ ಸಾಂಘಿಕ ಪ್ರಯತ್ನದ ಫಲ. ಯಶಸ್ಸಿನ ಗೌರವ ದೇಶದ ಎಲ್ಲ ನಾಗರಿಕರಿಗೆ ಸಲ್ಲುತ್ತದೆ. ಸೋಲು ಗೆಲುವಿನ ಮೆಟ್ಟಿಲು ಎಂಬುದಕ್ಕೆ ಚಂದ್ರಯಾನ-3 ಉತ್ತಮ ನಿದರ್ಶನವಾಗಿದೆ. ಯಾವುದೇ ರೀತಿಯ ಸೋಲಿಗೆ ಎದೆಗುಂದದೆ ಮುಂದುವರಿದಲ್ಲಿ ಗೆಲುವು ನಮ್ಮದಾಗುತ್ತದೆ ಎಂಬುದನ್ನು ಮರೆಯಬಾರದು ಎಂದು ಅಭಿಪ್ರಾಯಪಟ್ಟರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‍ನ ಮುಖ್ಯ ಆಡಳಿತಾಧಿಕಾರಿ ಡಾ. ಎನ್.ಶಿವರಾಮರೆಡ್ಡಿ ಮಾತನಾಡಿ, ಶಿಕ್ಷಕ ಸಮುದಾಯ ಯೋಜಿತ ಶಿಕ್ಷಣ ಕಾರ್ಯಕ್ರಮ ರೂಪಿಸಿ ಮಕ್ಕಳನ್ನು ತೊಡಗಿಸಬೇಕು. ಮಕ್ಕಳಲ್ಲಿ ರಚನಾತ್ಮಕ ಕನಸುಗಳನ್ನು ಬಿತ್ತಬೇಕು. ಕನಸು ನನಸಾಗಲು ಅಗತ್ಯವಾದ ವಾತಾವರಣ ನಿರ್ಮಿಸಬೇಕು ಎಂದು ಹೇಳಿದರು.
ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಎ.ವೆಂಕಟರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ನೈತಿಕವಾಗಿ ಬೆಳೆಯಬೇಕು. ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳಬೇಕು. ಭಾರತೀಯ ಸಾಂಸ್ಕøತಿಕ ಪರಂಪರೆ ಮಸಕಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಒಕ್ಕಲಿಕರ ಸಂಘದ ನಿರ್ದೇಶಕ ಡಾ. ಡಿ.ಕೆ.ರಮೇಶ್, ಬಿಜಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಂ.ಶ್ರೀರಾಮರೆಡ್ಡಿ, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಮಾಜಿ ಅಧ್ಯಕ್ಷ ಚಿನ್ನಪ್ಪರೆಡ್ಡಿ, ಪ್ರಗತಿಪರ ರೈತ ಚಂದ್ರಶೇಖರ್, ಪ್ರಾಂಶುಪಾಲ ಗಂಗಾಧರ ಗೌಡ, ಮುಖ್ಯ ಶಿಕ್ಷಕ ವೆಂಕಟರಮಣರೆಡ್ಡಿ ಇದ್ದರು.

ಕಂದಾವರದಲ್ಲಿ ರೇಬೀಸ್ ಲಸಿಕಾ ಶಿಬಿರ – 158 ಕ್ಕೂ ಮಿಕ್ಕಿ ಶ್ವಾನಗಳಿಗೆ ರೇಬೀಸ್ ನಿರೋಧಕ ಲಸಿಕೆ

ಉಡುಪಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕುಂದಾಪುರ , ಗ್ರಾಮಪಂಚಾಯತ್ ಕಂದಾವರ ಮತ್ತು ಪಶು ಆಸ್ಪತ್ರೆ ಕುಂದಾಪುರ  ಇವರ ಜಂಟಿ ಸಹಭಾಗಿತ್ವದಲ್ಲಿ ಕಂದಾವರ  ಗ್ರಾಮಪಂಚಾಯತ್ ನಲ್ಲಿ  ರೇಬೀಸ್ ನಿರೋಧಕ ಲಸಿಕಾ ಶಿಬಿರವನ್ನು ಆಯೋಜಿಸಲಾಗಿತ್ತು.

   ಈ ಶಿಬಿರದ ಆಧ್ಯಕ್ಷತೆಯನ್ನು ವಹಿಸಿದ ಕಂದಾವರ ಗ್ರಾಮಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಅನುಪಮಾ ಯು ಶೆಟ್ಟಿ ಇವರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕುಂದಾಪುರ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರಾದ  ಡಾ. ಬಾಬಣ್ಣ ಪೂಜಾರಿಯವರು ಮಾತನಾಡುತ್ತ, ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಸಂತಾನಹರಣ ಕಾರ್ಯಕ್ರಮಗಳಿಂದ ನಾಯಿಗಳ ಸಂತತಿ ಕ್ಷೀಣಿಸುತ್ತಿದ್ದರೂ, ಆಗಾಗ ರೇಬೀಸ್ ಪ್ರಕರಣಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದು, ರೇಬೀಸ್ ಮುಕ್ತ ಸಮಾಜ ನಿರ್ಮಾಣವಾಗಬೇಕಾದರೆ, ನಾಯಿಗಳಿಗೆ ರೇಬೀಸ್ ನಿರೋಧಕ ಲಸಿಕೆಯನ್ನು ನೀಡುವುದು ಅತೀ ಅವಶ್ಯಕವಾಗಿದೆ ಎಂದರು.
    ಈ ಲಸಿಕಾ ಶಿಬಿರದಲ್ಲಿ ಕಂದಾವರ ಪಂಚಾಯತ್ ನ ವಿವಿಧ ಸ್ಥಳಗಳಲ್ಲಿ ಕರೆತರಲಾದ ಸುಮಾರು 158 ಕ್ಕೂ ಮಿಕ್ಕಿ ಶ್ವಾನಗಳಿಗೆ ಉಚಿತವಾಗಿ ರೇಬೀಸ್ ನಿರೋಧಕ ಲಸಿಕೆಯನ್ನು ನೀಡಲಾಯ್ತು. ಕಂದಾವರ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಶ್ರೀ ಚಂದ್ರಶೇಖರ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾರ್ಯದರ್ಶಿ ಶ್ರೀ ಸಂಜೀವರವರು ಧನ್ಯವಾದ ಸಲ್ಲಿಸಿದರು.
ಪಶು ಆಸ್ಪತ್ರೆ ಕುಂದಾಪುರ ಸಿಬ್ಬಂದಿಯವರು, ಕಂದಾವರ ಪಶುಸಖಿ ಸುನೀತಾ, ಬಳ್ಕೂರು ಪಶುಸಖಿ ಸುನೀತಾ, ಪಂಚಾಯತ್ ಸಿಬ್ಬಂದಿಯವರಾದ ಮಹಾಬಲ, ಶ್ರೀಮತಿ ಪುಷ್ಬ ಮುಂತಾದವರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ಪಂಚಾಯತ್ ಸದಸ್ಯರಾದ ಶ್ರೀ ಶೀನ ಪೂಜಾರಿ, ಶ್ರೀಮತಿ ಶೋಭಾ, ಶ್ರೀ ಅಭಿಜಿತ್ ಕೊಠಾರಿ,  ಶ್ರೀಮತಿ ಜ್ಯೋತಿ ಉಪಸ್ಥಿತರಿದ್ದರು.