ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆ


ಕುಂದಾಪುರ : ‘ಮಗುವಿನ ಕೈಯಲ್ಲಿ ಗಡಿಯಾರ ನೀಡಿದಾಗ ಅದು ಮೊದಲು ತೆರೆದು ಅದರಲ್ಲಿರುವ ಮುಳ್ಳು ಹೇಗೆ ತಿರುಗುತ್ತದೆ ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎಂದು ಆಶ್ಚರ್ಯದಿಂದ ನೋಡುತ್ತದೆ ಈ ಆಶ್ಚರ್ಯದಿಂದ ನೋಡುವುದನ್ನು ಎಲ್ಲಾ ಅವಿಷ್ಕಾರದ ತಾಯಿ ಹಾಗೂ ತಾವೂ ಆ ಕಾರ್ಯವನ್ನು ಮಾಡಿ ಅವಿಷ್ಕಾರ ಮಾಡಿ ಜೀವನದಲ್ಲಿ ಉತ್ತಮ ಸಾಧನೆ ಮಾಡಬೇಕೆಂದು’ ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರುಗಳು ಹಾಗೂ ಹೋಲಿ ರೋಜರಿ ಶಾಲೆಯ ಸಂಚಾಲಕರಾಗಿರುವ ಅತೀ ವಂದನೀಯ ಗುರು ಸ್ಟ್ಯಾನಿ ತಾವ್ರೊ ಹೇಳಿದರು.

ಅವರು ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಇಲ್ಲಿ ಅಂತರ್ ಶಾಲಾ ರಸಪ್ರಶ್ನೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿರುವ ಕ್ಷೇತ್ರ ಸಂಪನ್ಮೂಲ್ ಕಛೇರಿಯ ಸಂಪನ್ಮೂಲ ವ್ಯಕ್ತಿಗಳಾಗಿರುವ ಅಶೋಕ್ ನಾಯ್ಕರವರು ರಸ ಪ್ರಶ್ನೆ ಸ್ಪರ್ಧೆಯಲ್ಲಿ ಜಯಗಳಿಸಿದ ತಂಡಗಳಿಗೆ ಬಹುಮಾನವನ್ನು ವಿತರಿಸಿ ವಿದ್ಯಾರ್ಥಿಗಳಿಗೆ ಅವಕಾಶವನ್ನು ಬಳಸಿಕೊಳ್ಳಬೇಕು ಹಾಗೂ ಈ ರಸಪ್ರಶ್ನೆ ಸ್ಪರ್ಧೆ ಅತ್ಯುತ್ತಮವಾಗಿ ಅಯೋಜನೆಗೊಂಡು ಭಾಗವಹಿಸಿದ ವಿದ್ಯಾರ್ಥಿಗಳಿಗಲ್ಲದೆ ಇತರ ವಿದ್ಯಾರ್ಥಿಗಳಿಗೂ ಕೂಡ ಸ್ಪೂರ್ತಿಯನ್ನು ನೀಡಿತೆಂಬುದಾಗಿ ತಿಳಿಸಿ ಈ ರೀತಿಯ ಸ್ಪರ್ಧೆಗಳು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ನಡೆಸುವಂತಾಗಲಿ ಎಂದು ಹಾರೈಸಿದರು. ಸಹ ಶಿಕ್ಷಕಿ ಮಮತಾ ಸ್ವಾಗತಿಸಿದರು, ಸಹ ಶಿಕ್ಷಕಿ ಅಂಕಿತಾ ಧನ್ಯವಾದ ಸಮರ್ಪಿಸಿದರು, ಸಹ ಶಿಕ್ಷಕಿ ನಿಖಿತಾ ಕಾರ್ಯಕ್ರಮ ನಿರೂಪಿಸಿದರು.

Muller Medi EXPO Begins with young Scientists Innovations / ಮುಲ್ಲರ್ ಮೆಡಿ ಎಕ್ಸ್‌ಪೋ ಯುವ ವಿಜ್ಞಾನಿಗಳ ನಾವೀನ್ಯತೆಗಳೊಂದಿಗೆ ಆರಂಭ

Mangluru : The health exhibition courtesy Father Muller Medical College and Father Muller Research Centre in celebration of 25 years of MBBS programme commenced on 13 October at 9 am with an inaugural bringing in young scientists with their innovations.
The chief guest for the inaugural Professor Dr Sathyabodh M Kulkarni, Dean Research and Consultancy NITK Suratkal was overjoyed with the participation of students with over 120 models for display. He was proud of his association with the Father Muller Charitable Institutions in one form or the other from 1993 and that his daughter is an alumnus of the Father Muller Homoeopathic Medical College. The enthusiasm of the Management to bring young minds on a larger pedestal of scientific acumen needs to be appreciated. He strongly urged the students to inculcate scientific interests and work on any basic ideas for self and our countries growth.
Rev. Fr Richard Aloysius Coelho, Director FMCI was prod too at the large turnout of students who desired to do more for the country by being researchers and scientist. Chandrayan or Aditya mission was not possible without a vision and dream. Thus all students should dream and question and strive thus to find the answer. Any profession a person chooses should be their gem, polish it and make it shine.
Students from various schools gathered into the Muller Dine of the Father Muller Convention Centre from all parts of the district with their models. Many visitors too came in to see the exhibits. The EXPO is open from 9am – 3pm on Friday and Saturday to all the public and especially encourages parents and guardians to get their young ones to see the various models.
The EXPO also has paintings on exhibit by doctors. Dr Akther Hussain Former Dean Yenepoya Dental College has put on display many painting that reflect nature and cosmic drama. The EXPO has a nice feel giving it a winter wonderland touch.
Rev. Fr Ajith B Menezes Administrator FMMC/FMCP/FMCOAHS encourage the students, asking then questions on their models. Dr B Sanjeev Rai Chief of Research Father Muller Research Centre welcomed the gathered and students along with the Management Committee members of FMCI.

ಮುಲ್ಲರ್ ಮೆಡಿ ಎಕ್ಸ್‌ಪೋ ಯುವ ವಿಜ್ಞಾನಿಗಳ ನಾವೀನ್ಯತೆಗಳೊಂದಿಗೆ ಆರಂಭ

ಮಂಗಳೂರು: ಸೌಜನ್ಯಯುತ ಆರೋಗ್ಯ ಪ್ರದರ್ಶನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮತ್ತು ಫಾದರ್ ಮುಲ್ಲರ್ ಸಂಶೋಧನಾ ಕೇಂದ್ರವು 25 ವರ್ಷಗಳ MBBS ಕಾರ್ಯಕ್ರಮದ ಸಂಭ್ರಮಾಚರಣೆಯಲ್ಲಿ ಅಕ್ಟೋಬರ್ 13 ರಂದು ಬೆಳಿಗ್ಗೆ 9 ಗಂಟೆಗೆ ಯುವ ವಿಜ್ಞಾನಿಗಳನ್ನು ತಮ್ಮ ಆವಿಷ್ಕಾರಗಳೊಂದಿಗೆ ತರುವುದರೊಂದಿಗೆ ಪ್ರಾರಂಭವಾಯಿತು.
ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾದ ಡಾ ಸತ್ಯಬೋಧ ಎಂ ಕುಲಕರ್ಣಿ, ಡೀನ್ ರಿಸರ್ಚ್ ಮತ್ತು ಕನ್ಸಲ್ಟೆನ್ಸಿ ಎನ್‌ಐಟಿಕೆ ಸುರತ್ಕಲ್ 120 ಕ್ಕೂ ಹೆಚ್ಚು ಮಾದರಿಗಳೊಂದಿಗೆ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಹರ್ಷ ವ್ಯಕ್ತಪಡಿಸಿದರು. ಅವರು 1993 ರಿಂದ ಒಂದಲ್ಲ ಒಂದು ರೂಪದಲ್ಲಿ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳೊಂದಿಗೆ ತಮ್ಮ ಒಡನಾಟದ ಬಗ್ಗೆ ಹೆಮ್ಮೆಪಟ್ಟರು ಮತ್ತು ಅವರ ಮಗಳು ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಹಳೆಯ ವಿದ್ಯಾರ್ಥಿನಿಯಾಗಿದ್ದಾರೆ. ವೈಜ್ಞಾನಿಕ ಕುಶಾಗ್ರಮತಿಯ ದೊಡ್ಡ ಪೀಠದ ಮೇಲೆ ಯುವ ಮನಸ್ಸುಗಳನ್ನು ತರಲು ಆಡಳಿತ ಮಂಡಳಿಯ ಉತ್ಸಾಹವನ್ನು ಪ್ರಶಂಸಿಸಬೇಕಾಗಿದೆ. ವೈಜ್ಞಾನಿಕ ಆಸಕ್ತಿಗಳನ್ನು ಬೆಳೆಸಲು ಮತ್ತು ಸ್ವಯಂ ಮತ್ತು ನಮ್ಮ ದೇಶಗಳ ಬೆಳವಣಿಗೆಗೆ ಯಾವುದೇ ಮೂಲಭೂತ ವಿಚಾರಗಳ ಮೇಲೆ ಕೆಲಸ ಮಾಡಲು ಅವರು ಬಲವಾಗಿ ವಿದ್ಯಾರ್ಥಿಗಳನ್ನು ಒತ್ತಾಯಿಸಿದರು.
FMCI ನಿರ್ದೇಶಕರಾದ Rev. Fr ರಿಚರ್ಡ್ ಅಲೋಶಿಯಸ್ ಕೊಯೆಲ್ಹೋ, ಸಂಶೋಧಕರು ಮತ್ತು ವಿಜ್ಞಾನಿಗಳ ಮೂಲಕ ದೇಶಕ್ಕಾಗಿ ಹೆಚ್ಚಿನದನ್ನು ಮಾಡಲು ಬಯಸುವ ವಿದ್ಯಾರ್ಥಿಗಳ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಿಕೆಗೆ ಸಹ ಪ್ರೋತ್ಸಾಹಿಸಿದರು. ದೃಷ್ಟಿ ಮತ್ತು ಕನಸು ಇಲ್ಲದೆ ಚಂದ್ರಯಾನ ಅಥವಾ ಆದಿತ್ಯ ಮಿಷನ್ ಸಾಧ್ಯವಿಲ್ಲ. ಹೀಗಾಗಿ ಎಲ್ಲಾ ವಿದ್ಯಾರ್ಥಿಗಳು ಕನಸು ಮತ್ತು ಪ್ರಶ್ನೆ ಮತ್ತು ಉತ್ತರ ಹುಡುಕಲು ಹೀಗೆ ಶ್ರಮಿಸಬೇಕು. ಒಬ್ಬ ವ್ಯಕ್ತಿಯು ಆರಿಸಿಕೊಳ್ಳುವ ಯಾವುದೇ ವೃತ್ತಿಯು ಅವರ ರತ್ನವಾಗಿರಬೇಕು, ಅದನ್ನು ಹೊಳಪು ಮತ್ತು ಹೊಳಪು ಕೊಡಬೇಕು.
ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್‌ನ ಮುಲ್ಲರ್ ಡೈನ್‌ಗೆ ಜಿಲ್ಲೆಯ ವಿವಿಧೆಡೆಯಿಂದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಮಾದರಿಗಳೊಂದಿಗೆ ಜಮಾಯಿಸಿದರು. ವಸ್ತುಪ್ರದರ್ಶನವನ್ನು ವೀಕ್ಷಿಸಲು ಸಾಕಷ್ಟು ಪ್ರವಾಸಿಗರು ಆಗಮಿಸಿದ್ದರು. EXPO ಶುಕ್ರವಾರ ಮತ್ತು ಶನಿವಾರದಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ ಎಲ್ಲಾ ಸಾರ್ವಜನಿಕರಿಗೆ ತೆರೆದಿರುತ್ತದೆ ಮತ್ತು ವಿಶೇಷವಾಗಿ ಪೋಷಕರು ಮತ್ತು ಪೋಷಕರನ್ನು ತಮ್ಮ ಯುವಕರನ್ನು ವಿವಿಧ ಮಾದರಿಗಳನ್ನು ನೋಡಲು ಪ್ರೋತ್ಸಾಹಿಸುತ್ತದೆ.
ಎಕ್ಸ್‌ಪೋವು ವೈದ್ಯರ ಪ್ರದರ್ಶನದ ಮೇಲೆ ವರ್ಣಚಿತ್ರಗಳನ್ನು ಸಹ ಹೊಂದಿದೆ. ಡಾ ಅಕ್ತರ್ ಹುಸೇನ್ ಮಾಜಿ ಡೀನ್ ಯೆನೆಪೋಯ ದಂತ ಮಹಾವಿದ್ಯಾಲಯವು ಪ್ರಕೃತಿ ಮತ್ತು ಕಾಸ್ಮಿಕ್ ನಾಟಕವನ್ನು ಪ್ರತಿಬಿಂಬಿಸುವ ಅನೇಕ ಚಿತ್ರಕಲೆಗಳನ್ನು ಪ್ರದರ್ಶಿಸಿದೆ. ಎಕ್ಸ್‌ಪೋ ಚಳಿಗಾಲದ ವಂಡರ್‌ಲ್ಯಾಂಡ್ ಸ್ಪರ್ಶವನ್ನು ನೀಡುವ ಉತ್ತಮ ಅನುಭವವನ್ನು ಹೊಂದಿದೆ.
Rev. Fr Ajith B Menezes ನಿರ್ವಾಹಕರು FMMC/FMCP/FMCOAHS ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ನಂತರ ಅವರ ಮಾದರಿಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾರೆ. ಫಾದರ್ ಮುಲ್ಲರ್ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ ಬಿ ಸಂಜೀವ್ ರೈ ಸ್ವಾಗತಿಸಿದರು ಮತ್ತು ವಿದ್ಯಾರ್ಥಿಗಳು ಮತ್ತು ಎಫ್‌ಎಂಸಿಐ ಆಡಳಿತ ಸಮಿತಿ ಸದಸ್ಯರು.

ಶ್ರೀ ಕೋಟಿಲಿಂಗೇಶ್ವರ ಕಲಾ ಬಳಗದಿಂದ ಮಕ್ಕಳ ಯಕ್ಷಗಾನದ ಪೂರ್ವ ತಯಾರಿ ಸಭೆ

ಶ್ರೀ ಕೋಟಿಲಿಂಗೇಶ್ವರ ಕಲಾ ಬಳಗ ಕೋಟೇಶ್ವರ ವತಿಯಿಂದ ಕೊಡಿ ಹಬ್ಬದ ಪ್ರಯುಕ್ತ ನಡೆಯುವ ಮಕ್ಕಳ ಯಕ್ಷಗಾನದ ಪೂರ್ವ ತಯಾರಿ ಸಭೆಯು ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಕಲಾ ಬಳಗದ ಅಧ್ಯಕ್ಷ ಶ್ರೀಧರ್ ಉಡುಪ ಮಾತನಾಡಿ, ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಮುಂದುವರಿಸುವ ಬಗ್ಗೆ ಕಲಾ ಬಳಗದ ಪಾತ್ರದ ಬಗ್ಗೆ ವಿವರಿಸಿದರು.
ಸ್ಥಾಪಕಾಧ್ಯಕ್ಷ ಡಾ| ರಾಜೇಶ್ ಕುಮಾರ್ ಶೆಟ್ಟಿ ಹಾಗೂ ಕುಂದಾಪುರದ ವಕೀಲ ಹಂದಕುಂದ ಅಶೋಕ ಶೆಟ್ಟಿ ಮಾತನಾಡಿದರು.
ಗುತ್ತಿಗೆದಾರ ಪ್ರಭಾಕರ್ ಶೆಟ್ಟಿ ಯಕ್ಷ ಗುರು ಕಡ್ಲೆ ಗಣಪತಿ ಹೆಗ್ಡೆ ಉಪಸ್ಥಿತರಿದ್ದರು.
ಉಪಾಧ್ಯಕ್ಷ ನಾರಾಯಣ ಭಂಡಾರಿ ಬೀಜಾಡಿ ಸ್ವಾಗತಿಸಿ, ಕಾರ್ಯದರ್ಶಿ ಚಂದ್ರ ಮರಕಾಲ ವಂದಿಸಿದರು.

ಭಂಡಾರ್ಕಾರ್ಸ್ ಕಾಲೇಜು: ರೇಡಿಯೋ ಕುಂದಾಪ್ರ 89.6 ಎಫ್.ಎಂ ಸಮುದಾಯ ಬಾನುಲಿ ಕೇಂದ್ರದ ರೂಪುರೇಷೆಗಳ ಮಾಹಿತಿ ಕಾರ್ಯಕ್ರಮ

ಕುಂದಾಪುರ: ಅಕ್ಟೋಬರ್ 12ರಂದು ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆರಂಭವಾಗುತ್ತಿರುವ “ರೇಡಿಯೋ ಕುಂದಾಪ್ರ 89.6 ಎಫ್.ಎಂ ಸಮುದಾಯ ಬಾನುಲಿ ಕೇಂದ್ರದ ರೂಪುರೇಷೆಗಳ ಮಾಹಿತಿ ಕಾರ್ಯಕ್ರಮ” ನಡೆಯಿತು.
ಕಾರ್ಯಕ್ರಮವನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ.ಶಾಂತಾರಾಮ ಪ್ರಭು ಅವರು ಉದ್ಘಾಟಿಸಿ ಮಾತನಾಡಿ, ಸಮುದಾಯದ ಒಳಿತು ಮತ್ತು ಉನ್ನತಿಯ ಉದ್ದೇಶದ ನೆಲೆಯಲ್ಲಿ “ರೇಡಿಯೋ ಕುಂದಾಪ್ರ 89.6 ಎಫ್.ಎಂ ಸಮುದಾಯ ಬಾನುಲಿ ಆರಂಭಿಸುತ್ತಿದ್ದೇವೆ. ಇದರಿಂದ ಕುಂದಾಪುರದ ಜನತೆಗೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮನ್ನು ತಾವು ಬೆಳೆಸಿಕೊಳ್ಳಲು ಅವಕಾಶವಿದೆ. ಜೊತೆಗೆ ಕುಂದಾಪುರ ಭಾಷೆ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸಬಹುದು ಎಂದು ಹೇಳಿದರು.
ವಿಶ್ವಸ್ಥ ಮಂಡಳಿಯ ಸದಸ್ಯರು ಹಾಗೂ ರೇಡಿಯೋ ಕುಂದಾಪ್ರ 89.6 ಎಫ್.ಎಂ ಸಮುದಾಯ ಬಾನುಲಿ ಕೇಂದ್ರದ ಮಾರ್ಗದರ್ಶಕರಾದ ಯು.ಎಸ್.ಶೆಣೈ ಮಾತನಾಡಿ, ಈ ಸಮುದಾಯ ಬಾನುಲಿ ಕೇಂದ್ರದ ಮೂಲಕ ಸಮಾಜಮುಖಿಯಾಗೋಣ. ಎಲ್ಲರೂ ಒಟ್ಟಾಗಿ ರೇಡಿಯೋ ಕುಂದಾಪ್ರ 89.6 ಎಫ್.ಎಂ ಮೂಲಕ ಜಗತ್ತಿನಾದ್ಯಂತ ಕುಂದಾಪುರದ ಕಂಪನ್ನು ಪಸರಿಸೋಣ ಎಂದು ಹೇಳಿದರು.ಮತ್ತು ವಿವಿಧ ಕಾರ್ಯಕ್ರಮಗಳನ್ನು ನೀಡಬಹುದು ಎಂಬುದರ ರೂಪುರೇಷೆಗಳ ಕುರಿತು ಮಾಹಿತಿ ನೀಡಿದರು.
ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ರಾಜೇಂದ್ರ ತೋಳಾರ್ ಮಾತನಾಡಿ ಈ ಸಮುದಾಯ ಬಾನುಲಿ ಕೇಂದ್ರದ ಮೂಲಕ ನಾವು ಎಲ್ಲಾ ಸಮುದಾಯವನ್ನು ತಲುಪಬಹುದು ಎಂದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಸತ್ಯನಾರಾಯಣ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಕಾಲೇಜಿನ ಪ್ರಾಧ್ಯಾಪಕರುಗಳು ಮತ್ತು ವಿದ್ಯಾರ್ಥಿಗಳು “ರೇಡಿಯೋ ಕುಂದಾಪ್ರ 89.6 ಎಫ್.ಎಂ ಸಮುದಾಯ ಬಾನುಲಿ ಕೇಂದ್ರದ ಕಾರ್ಯಕ್ರಮ ನಿರ್ಮಾಣದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಸುಮಲತಾ ಸುರೇಶ್ ಕಾರ್ಯಕ್ರಮ ನಿರ್ವಹಿಸಿ ಸ್ವಾಗತಿಸಿದರು. ರೇಡಿಯೋ ಕುಂದಾಪ್ರ 89.6 ಎಫ್.ಎಂ ಇದರ ಕಾರ್ಯಕ್ರಮಗಳ ನಿರ್ವಾಹಕರಾದ ಜ್ಯೋತಿ ಸಾಲಿಗ್ರಾಮ ವಂದಿಸಿದರು.

ಕೃಷ್ಣಮೂರ್ತಿ ಡಿಬಿ ಯವರು ಶ್ರೀ ಗುರುಕುಲ ತಿಲಕ ಪುರಸ್ಕಾರಕ್ಕೆ ಆಯ್ಕೆ

ಅಂತರರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ (ಅಕ್ಟೋಬರ್ 5) ಪ್ರಯುಕ್ತ “ಬೆಳಗಾವಿಯ ಕಸ್ತೂರಿ ಸಿರಿಗನ್ನಡ ವೇದಿಕೆ (ರಿ) ಇವರು ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ನೀಡುವ
ಶ್ರೀ ಗುರುಕುಲ ತಿಲಕ ಪುರಸ್ಕಾರ ಕ್ಕೆ ಆರ್ ಎನ್ ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜು ಕುಂದಾಪುರ ಇದರ ಕನ್ನಡ ವಿಭಾಗದ ಮುಖ್ಯಸ್ಥರಾದ ಕೃಷ್ಣಮೂರ್ತಿ ಡಿಬಿ ಯವರನ್ನು ಆಯ್ಕೆ ಮಾಡಿದೆ
.  ಪ್ರಶಸ್ತಿಗೆ ಆಯ್ಕೆಯಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಕಾಲೇಜಿನ ಸಂಚಾಲಕರಾದ ಶ್ರೀ ಬಿ.ಎಮ್. ಸುಕುಮಾರ್ ಶೆಟ್ಟಿಯವರು,  ಆಡಳಿತ ಮಂಡಳಿಯ ಸದಸ್ಯರು, ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ ಶೆಟ್ಟಿಯವರು ಹಾಗೂ ಬೋಧಕ- ಬೋಧಕೇತರ ಸಿಬ್ಬಂಧಿಗಳು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ. 

ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇರುವ ವ್ಯವಸ್ಥೆಯನ್ನು  ಸ್ಥಳೀಯ ಸಹಕಾರದಿಂದ ಅಧಿಕಾರಿಗಳು ಮಾಡಬೇಕಾಗಿದೆ : ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ  : ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇರುವ ವ್ಯವಸ್ಥೆಯನ್ನು  ಸ್ಥಳೀಯ ಸಹಕಾರದಿಂದ ಅಧಿಕಾರಿಗಳು ಮಾಡಬೇಕಾಗಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು. 

ಪಟ್ಟಣದ ಪುರಸಭೆಯಲ್ಲಿ ಗುರುವಾರ ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಿ ಮಾತನಾಡಿದರು. 

ಕುಂದುಕೊರತೆ ಸಭೆಯಲ್ಲಿ ಸಾರ್ವಜಿನಕರೊಂದಿಗೆ ಮಾತನಾಡುತ್ತಾ ಯಾವುದೇ ಕಛೇರಿಯಲ್ಲಿ ತಮ್ಮ ಕೆಲಸ ಕಾರ್ಯಗಳು ನಡೆಯದೆ ಇದ್ದರೆ ಅಥವಾ ನಿಮ್ಮ ಕೆಲಸಗಳನ್ನು ಸಂಬಧಿಸಿದ ಅಧಿಕಾರಿ ಮಾಡಿಕೊಡದೆ ಇದ್ದ ಪಕ್ಷದಲ್ಲಿ ನನಗೆ ಮಾಹಿತಿ ನೀಡಿದರೆ ಆ ಅಧಿಕಾರಿಯೊಂದಿಗೆ ನಿಮ್ಮ ಸಮಸ್ಯೆಯ ಬಗ್ಗೆ ಚರ್ಚೆ ಮಾಡಿ ಪರಿಹಾರ ನೀಡಲಾಗುವುದು ಎಂದು ಭರವಸೆ ಇತ್ತರು. 

ಕ್ಷೇತ್ರಾದ್ಯಾಂತ ಎಲ್ಲಾ ಹಳ್ಳಿಗಳಲ್ಲಿಯೂ ರಸ್ತೆ, ಕುಡಿಯುವ ನೀರು, ಬೀದಿ ದೀಪಗಳು , ಬಗ್ಗೆ ಹಾಗೂ ಪಟ್ಟಣದಲ್ಲಿ ಸ್ವಚ್ಚತೆ ಹಾಗೂ ಇತರೆ ಮೂಲ ಭೂತ ಸೌಲಭ್ಯಗಳ ಸ್ಥಿತಿ ಗತಿಗಳ ಬಗ್ಗೆ ಅಧಿಕಾರಿಗಳಿಂದ ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದು ಕೊರೆತೆಗಳ ಬಗ್ಗೆ ಸಂಬAದ ಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದರು. 

ಇನ್ನು ಕುಂದು ಕೊರತೆ ಸಭೆಗೆ ಕೆಲ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ತಂದ ಅರ್ಜಿಗಳನ್ನು ಪರಿಶೀಲಿಸಿ ಸಂಬAದಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಚರ್ಚೆ ಮಾಡಿ ಅರ್ಜಿದಾರನ ಸಮಸ್ಯೆಯನ್ನು ಅತಿ ಶೀಘ್ರವಾಗಿ ಪರಿಹಾರ ನೀಡುವಂತೆ ಸೂಚಿಸಿದರು. 

ಜಿ.ಪಂ. ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸ್ ಹಾಗೂ ಅಧಿಕಾರಿಗಳು ಇತರ ಮುಖಂಡರು ಇದ್ದರು.

ಕಥೊಲಿಕ್ ಸಭಾ ಮಂಗಳೂರು ಪ್ರದೇಶ(ರಿ.) ಸಿಟಿ ವಲಯದ ಬೆಳ್ಳಿ ಹಬ್ಬದ ಸಮಾರಂಭ ವಾಮಂಜೂರಿನಲ್ಲಿ 15.10.2023 ರಂದು ನಡೆಯಲಿದೆ / Catholic Sabha Mangalore Region(R.) City Zone Silver Festival Ceremony to be held at Wamanjur on 15.10.2023

ಕಥೊಲಿಕ್ ಸಭಾ ಮಂಗಳೂರು ಪ್ರದೇಶ(ರಿ.) ಸಿಟಿ ವಲಯದ ಬೆಳ್ಳಿ ಹಬ್ಬದ ಸಮಾರಂಭ ಆದಿತ್ಯವಾರ ದಿನಾಂಕ 15.10.2023 ರಂದು  ಸಂಜೆ 4:30 ಗಂಟೆಗೆ ಮಂಗಳೂರಿನ ನಿವೃತ್ತ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ ಇವರ ಸಾರಥ್ಯದಲ್ಲಿ ದಿವ್ಯ ಬಲಿ ಪೂಜೆ ವಾಮಂಜೂರ್ ಶ್ರಮಿಕ ಸಂತ ಜೋಸೆಫ್ ದೇವಾಲಯದಲ್ಲಿ ನಡೆಯಲಿದೆ. 6:00 ಗಂಟೆಗೆ ಸಭಾ ಕಾರ್ಯಕ್ರಮವು ವಾಮಂಜೂರ್ ಶ್ರಮಿಕ ಸಂತ ಜೋಸೆಫ್ ದೇವಾಲಯದ ಸಭಾಭವನದಲ್ಲಿ ನಡೆಯಲಿದೆ .

ಕಾರ್ಯಕ್ರಮದ ಅಧ್ಯಕ್ಷರಾಗಿ ಕಥೊಲಿಕ್ ಸಭಾ ಸಿಟಿ ವಲಯ ಅಧ್ಯಕ್ಷರಾದ ಶ್ರೀ ವಿಲ್ಫ್ರೆಡ್ ಆಲ್ವಾರಿಸ್, ಮುಖ್ಯ ಅತಿಥಿಗಳಾಗಿ ಸಿಟಿ ವಲಯದ ಮುಖ್ಯ ಧರ್ಮಗುರು ಹಾಗೂ ವಾಮಂಜೂರು ಚರ್ಚ್‌ನ ಧರ್ಮಗುರು ವಂ| ಫಾದರ್ ಜೇಮ್ಸ್ ಡಿಸೋಜ, ಕಥೊಲಿಕ್ ಸಭಾ ಮಂಗಳೂರು ಪ್ರದೇಶದ ಕೇಂದ್ರೀಯ ಸಮಿತಿಯ ಅಧ್ಯಕ್ಷರಾದ ಶ್ರೀ ಆಲ್ವಿನ್ ಡಿಸೋಜಾ, ಸಿಟಿ ವಲಯದ ಆಧ್ಯಾತ್ಮಿಕ ನಿರ್ದೇಶಕರು ಹಾಗೂ ಆಂಜೆಲೋರ್‌ ಚರ್ಚ್‌ನ ಪ್ರಧಾನ ಧರ್ಮಗುರು ವಂ| ಫಾದರ್ ವಿಲಿಯಂ ಮಿನೇಜಸ್, ಕೇಂದ್ರೀಯ ಸಮಿತಿಯ ಹಾಗೂ ಸಿಟಿ ವಲಯದ ಕಾರ್ಯದರ್ಶಿಯಾದ ಶ್ರೀಮತಿ ವಿಲ್ಮಾ ಮೊಂತೇರೊ, 

ಅತಿಥಿಗಳಾಗಿ ಸಿಟಿ ವಲಯದ ಸ್ಥಾಪಕ ಅಧ್ಯಕ್ಷರಾದ ಶ್ರೀ ಮಾರ್ಟಿನ್ ಡಿಸೋಜಾ, ವಾಮಂಜೂರ್ ಚರ್ಚ್‌ನ ಉಪಾಧ್ಯಕ್ಷರಾದ ಶ್ರೀ ಚಾರ್ಲ್ಸ್ ಪಾಯ್ಸ್, ಕಥೊಲಿಕ್ ಸಭಾ, ವಾಮಂಜೂರ್ ಘಟಕದ ಅಧ್ಯಕ್ಷರಾದ ಶ್ರೀ ಪ್ಯಾಟ್ರಿಕ್ ಲೋಬೊ, ಬೆಳ್ಳಿ ಹಬ್ಬದ ಸಂಚಾಲಕರಾದ ಶ್ರೀ ಪ್ರಶಾಂತ್ ಸಲ್ಡಾನ್ಹಾ ಭಾಗವಹಿಸುವರು. ವೇದಿಕೆ ಕಾರ್ಯದ ನಂತರ ಎಲ್ಲಾ ಘಟಕಗಳ ಸಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 

ಕಾರ್ಯಕ್ರಮದ ಕೊನೆಯಲ್ಲಿ ಬೆಳ್ಳಿ ಹಬ್ಬದ ಊಟದ ವ್ಯವಸ್ಥೆ ಇದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ.

Catholic Sabha Mangalore Region(R.) City Zone Silver Festival Ceremony to be held at Wamanjur on 5.10.2023

Catholic Sabha Mangalore Pradesh (R) City Deanery celebrates its silver jubilee on October 15, 2023, at St. Joseph the Worker Church, Vamanjoor At 4.30 pm, there will be a solemn thanksgiving mass with the main celebrant Bishop Emeritus of Mangalore Diocese Aloysius Paul ‘D’Souza, accompanied by other priests, followed by a cultural programme at 6.00 pm at Vamanjoor Church Sabha Bhavan.

Mr. Wilfred Alvares Bondel, the president of the city deanery, will preside over the celebration with chief guests Rev. Fr. James Dsouza the vicar Forane and Parish priest of Vamanjoor. Mr. Alwyn D’Souza, Panir president of the Central Catholic Sabha Mangalore Pradesh Mrs. Vilma Monteiro, general secretary of the same Rev. Fr. Williams Menezes, parish priest of Angelore Church and spiritual director of the city deanery, is accompanied by guests of honour, including the founder president, Mr. Martin R D’Souza. Mr. Charles Pais vice president of the parish council Vamanjoor church. Mr Patrick Lobo, president of the local body. 

All 10 units coming under the city deanery, Angelore, Bajal,Bajjodi, Bondel, Derebail, Fermai, Kelarai, Neermarga, Shakthinagar, and Vamanjoor—will be performing at the cultural event and the programme will conclude with a fellowship meal.  

Mr. Prashant M Saldanha, convener of the programme, and the organisers are expecting good support from all units and well-wishers in making this Silver Jubilee celebration a memorable one.