ಇಸ್ರೇಲ್‍ – ಹಮಾಸ್ ಉಗ್ರರಿಂದ  ಹಿಂದಿ ಕಿರುತೆರೆ ನಟಿ ಮಧುರಾ ನಾಯ್ಕ್ ತಂಗಿ ಮತ್ತು ಬಾವನ ಹತ್ಯೆ / Hindi TV actress Madhura Naik’s sister and brother-in-law killed by Hamas terrorists in Israel

ಹಿಂದಿ ಕಿರುತೆರೆ ನಟಿ ಮಧುರಾ ನಾಯ್ಕ್ ಕುಟುಂಬಸ್ಥರನ್ನು ಇಸ್ರೇಲ್‍ನಲ್ಲಿ ಹತ್ಯೆ ಮಾಡಲಾಗಿದೆ. ಈ ಬಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ನಟಿ ಮಧುರಾ ನಾಯ್ಕ್ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಸದೋರ ಸಂಬಂಧಿ ತಂಗಿ ಒಡೆಯಾ ಮತ್ತು ಆಕೆಯ ಪತಿಯನ್ನು ಹಮಾಸ್ ಉಗ್ರರರು( ಬಂಡೋಕೋರರು) ಹತ್ಯೆ ಮಾಡಿದ್ದಾರೆ. ಮಕ್ಕಳ ಎದುರೇ ಅವರನ್ನು ಕೊಲ್ಲಲಾಗಿದೆ ಎಂದುನಟಿ ಮಧುರಾ ನಾಯಕ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಕಣ್ಣೀರಿಟ್ಟಿದ್ದಾರೆ. ಮಧುರಾ ’ನಾನು ಯೆಹುದಿ ಧರ್ಮಕ್ಕೆ ಸೇರಿದವಳು, ಭಾರತದಲ್ಲಿ ಸುಮಾರು ಯೆಹುದಿಯರ ಸಂಖ್ಯೆ 3000 ಸಾವಿರ ಮಾತ್ರವೇ ಇರಬಹ್ದೆಂದು. ಹೇಳಿಕೊಳ್ಳುತ್ತಾಳೆ.

ಒಟ್ಟಿನಲ್ಲಿ ಒಂದು ಕಡೆ ಹಮಾಸ್ ನಿರಂತರ ರಾಕೆಟ್ ದಾಳಿ ನಡೆಸುತ್ತಿದ್ದರೆ ಮತ್ತೊಂದು ಕಡೆ ಇಸ್ರೇಲ್ ಯುದ್ಧ ವಿಮಾನಗಳ ಏರ್ ಸ್ಟೈಕ್ ಮಾಡುತ್ತಿದೆ. ಇಸ್ರೇಲ್‍ನ ಅಶ್ಕೆಲೋನ್ ಮೇಲೆ ಬುಧವಾರ ಹಮಾಸ್ ರಾಕೆಟ್ ದಾಳಿ ಮಾಡಿತ್ತು ಆದರೆ ಇಸ್ರೇಲ್‍ನ ಐರನ್ ಡೋಮ್ ರಕ್ಷಣಾ ಕ್ಷಿಪಣಿ ವ್ಯವಸ್ಥೆಯಿಂದ ರಾಕೆಟ್‍ಗಳನ್ನು ತಡೆದು ಗಾಳಿಯಲ್ಲಿ ಅವುಗಳನ್ನು ನಾಶ ಮಾಡಲಾಗುತ್ತದೆ.

Hindi TV actress Madhura Naik’s sister and brother-in-law killed by Hamas terrorists in Israel

Hindi TV actress Madhura Naik’s family members were killed in Israel. Actress Madhura Naik shared information about this on Instagram. My cousin Odeya and her husband were killed by Hamas militants (rebels). Actress Madhura Naik wrote on social media that she was killed in front of her children and cried. Madhura, I belong to Judaism, there are only about 3000 thousand Jews in India. She says.
On the one hand, Hamas is carrying out continuous rocket attacks, while on the other hand, Israel is carrying out airstrikes by warplanes. Israel’s Ashkelon was attacked by Hamas rockets on Wednesday, but Israel’s Iron Dome missile defense system intercepted the rockets and destroyed them in the air.
Three Canadians have died and three are missing in Israel, Canadian Foreign Minister Melanie Joly said. More than 4,700 Canadian citizens and permanent residents are registered with the government in Israel, Gaza and the West Bank. He said that six of them have no contact.

ಭಂಡಾರ್ಕಾರ್ಸ್ ಕಾಲೇಜು: ಯಕ್ಷಗಾನ ಮತ್ತು ಸಾಹಿತ್ಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಜೀವನದ ಯಶೋರಹಸ್ಯ’ಕುರಿತು ಉಪನ್ಯಾಸ


ಕುಂದಾಪುರ :- ಅಕ್ಟೋಬರ್ 11ರಂದು ಇಲ್ಲಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸಂಸ್ಕೃತಸಂಘ, ಲಲಿತ ಕಲಾಸಂಘ, ಭಾರತೀಯ ರೆಡ್ ಕ್ರಾಸ್ ಘಟಕ, ,ಕನ್ನಡ ಸಾಹಿತ್ಯ ವೇದಿಕೆ ಹಾಗೂ ಐಕ್ಯೂಎಸಿ ಇವರಸಹಯೋಗದಲ್ಲಿ’ ಯಕ್ಷಗಾನ ಮತ್ತು ಸಾಹಿತ್ಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಜೀವನದ ಯಶೋರಹಸ್ಯ ‘ ಎನ್ನುವ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.
ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ವಿ.ಎನ್. ಪುರಾಣಿಕ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿಅವರು ” ಸಮಯ ಎನ್ನುವುದು ಎಲ್ಲರಿಗೂ ಸಮಾನವಾಗಿ ಹಂಚಲ್ಪಟ್ಟಿದೆ, ಆದ್ದರಿಂದ ಪ್ರತಿಯೊಬ್ಬರಿಗೂ ಸಮಯಪ್ರಜ್ಞೆ ಇರಬೇಕು, ಸಮಯ ತುಂಬಾ ಅಮೂಲ್ಯವಾದದ್ದು ” ಎಂದರು. ಹಾಗೆಯೇ ವಿದ್ಯಾರ್ಥಿಗಳಿಗೆ ಸತತ ಪ್ರಯತ್ನ, ಶ್ರದ್ದೆ, ತಾಳ್ಮೆ ಇರಬೇಕೆಂದು ಹೇಳಿದರು. ಹೀಗೆ ಜೀವನಕ್ಕೆ ಬೇಕಾದ ಅಮೂಲ್ಯ ಮಾಹಿತಿ ಮತ್ತು ಸಲಹೆಗಳನ್ನು ನೀಡುವುದರ ಜೊತೆಗೆ ಯಕ್ಷಗಾನ ಮತ್ತು ಸಾಹಿತ್ಯದ ಪ್ರಾಮುಖ್ಯತೆಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಡಾ. ಶುಭಕರಾಚಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನ ಅಧಿಕಾರಿಗಳು ಹಾಗೂ ರೆಡ್ ಕ್ರಾಸ್ ಸಂಯೋಜಕರಾದ ಪ್ರೊ. ಸತ್ಯನಾರಾಯಣ್ ಹತ್ವಾರ್, ಐಕ್ಯೂಎಸಿ ಸಂಯೋಜಕರಾದ ಡಾ. ವಿಜಯ್ ಕುಮಾರ್ ಕೆ.ಎಂ, ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಯಶವಂತಿ ಕೆ, ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಮೈತ್ರಿಯವರು ಮತ್ತು ಲಲಿತ ಕಲಾ ಸಂಘದ ಸಂಯೋಜಕರಾದ ಪ್ರೊ. ಶಶಾಂಕ್ ಪಟೇಲ್ ರವರು ಉಪಸ್ಥಿತರಿದ್ದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕದಿಂದ ಬಿ.ಬಿ.ಹೆಗ್ಡೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಉದ್ಘಾಟನೆ

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕು ಘಟಕ ಬಿ.ಬಿ.ಹೆಗ್ಡೆ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಉದ್ಘಾಟನೆ ಯನ್ನು ರೆಡ್ ಕ್ರಾಸ್ ಸಭಾಪತಿ ಎಸ್.ಜಯಕರ ಶೆಟ್ಟಿ ಯವರು ನಡೆಸಿ ಕೊಟ್ಟರು. ಮತ್ತು ರೆಡ್ ಕ್ರಾಸ್ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾಲೇಜು ಪ್ರಾಂಶುಪಾಲರಾದ ಕೆ. ಉಮೇಶ್ ಶೆಟ್ಟಿ ಯವರು ಅಧ್ಯಕ್ಷತೆಯನ್ನು ವಹಿಸಿದರು. ಕಾಲೇಜಿನ ಯುವ ರೆಡ್ ಕ್ರಾಸ್ ಸಂಯೋಜಕರಾದ ಯೋಗೀಶ್ ಅತಿಥಿ ಗಳನ್ನು ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಯುವ ರೆಡ್ ಕ್ರಾಸ್ ಸಂಯೋಜಕ ರಾದ ಸತ್ಯನಾರಾಯಣ ಪುರಾಣಿಕ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ದರು. ಕಾರ್ಯಕ್ರಮ ದಲ್ಲಿ ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ ಮತ್ತು ಸದಸ್ಯರಾದ ಗಣೇಶ್ ಆಚಾರ್ಯ ಉಪಸ್ಥಿತರಿದ್ದರು. ಇನ್ನೋರ್ವ ಸಂಯೋಜಕರಾದ ಮಾಲತಿ ವಾದಿಸಿದರು ಹಾಗೂ ವಿದ್ಯಾರ್ಥಿನಿ ಶಿಲ್ಪಾ ನಿರೂಪಿಸಿದರು.

ರೆಡ್ ಕ್ರಾಸ್ ಸದಸ್ಯರಾದ ಶ್ರೀಮತಿ ಪ್ರತಿಮಾ ಮತ್ತು ಡಾ. ದಿನಕರ ಶೆಟ್ಟಿ ( USA) ಕೊಡ ಮಾಡಿದ ರೂಪಾಯಿ ಒಂದು ಲಕ್ಷ ವಿದ್ಯಾರ್ಥಿ ವೇತನ ಹದಿನೇಳು ಬಡ ವಿದ್ಯಾರ್ಥಿಗಳಿಗೆ ನೀಡಲಾಯಿತು.

ಭಂಡಾರ್ಕಾರ್ಸ್ ಪದವಿ ಕಾಲೇಜ್ – ಡಾ. ರಾಮಚಂದ್ರ ಶೆಟ್ಟಿಗಾರ್ ಅವರಿಗೆ ಶ್ರದ್ಧಾಂಜಲಿ

ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಡಾ. ರಾಮಚಂದ್ರ ಶೆಟ್ಟಿಗಾರ್ ಅವರು ಅಕ್ಟೋಬರ್ 10ರಂದು ನಿಧನರಾದರು.  ಅಕ್ಟೋಬರ್ 11ರಂದು  ಶ್ರದ್ಧಾಂಜಲಿ ಸಭೆ ಕರೆದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ, ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ ಗೊಂಡ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ ಮತ್ತಿತರ ಉಪನ್ಯಾಸಕರು ಪುಷ್ಪನಮನ ಸಲ್ಲಿಸಿ ನಿಧನರಾದ ಅವರಿಗೆ ಚಿರಶಾಂತಿ ಕೋರಿದರು. ಡಾ.ರಾಮಚಂದ್ರ ಶೆಟ್ಟಿಗಾರ್ ಅವರು ಕುರಿತುಇತಿಹಾಸವಿಭಾಗಮುಖ್ಯಸ್ಥಪ್ರೊಗೋಪಾಲ್ಕೆ ಮಾತನಾಡಿದರು.