ಅರಣ್ಯ ಭೂಮಿ ಒತ್ತುವರಿ ಕಾರ್ಯಚಾರಣೆ ಮುಂದುವರೆಸಿ ಬಲಾಡ್ಯಗೂ, ಬಡವರಿಗೂ ಒಂದೇ ಕಾನೂನು ಎಂದು ಸಾಭೀತುಪಡಿಸಬೇಕು-ರೈತ ಸಂಘ ಒತ್ತಾಯ

ಕೋಲಾರ, ಆ.11: ಅರಣ್ಯ ಭೂಮಿ ಎರಡನೇ ಒತ್ತುವರಿ ಕಾರ್ಯಚಾರಣೆ ಮುಂದುವರೆಸಿ ಬಲಾಡ್ಯ ಶ್ರೀಮಂತರಿಗೂ ಬಡವರಿಗೂ ಕಾನೂನು ಒಂದೇ ಎಂದು ಸಾಭೀತುಪಡಿಸಬೇಕೆಂದು ರೈತ ಸಂಘದಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಏಡುಕೊಂಡಲುರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಆಕ್ರಮ ದರಕಾಸ್ತ್ ಕಮಿಟಿ ಮೂಲಕ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ 30 -40 ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಮಂಜೂರಾತಿ ನೆಪದಲ್ಲಿ 3200 ಎಕರೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮಾತ್ರ ಒತ್ತುವರಿ ಕಾರ್ಯಚಾರಣೆ ಮಾಡುವ ಮುಖಾಂತರ ಉಪ್ಪು ತಿಂದವರು ನೀರು ಕುಡಿಯಲೇಬೇಕೆಂಬ ಗಾದೆಯಂತೆ ಮೊದಲನೇ ಹಂತದಲ್ಲಿ 1550 ಎಕರೆ ಅರಣ್ಯ ಭೂಮಿಯನ್ನು ಬಲಾಡ್ಯ ಭೂಗಳ್ಳರಿಂದ ವಶಪಡಿಸಕೊಂಡ ಅರಣ್ಯ ಅಧಿಕಾರಿಗಳಿಗೆ ರೈತ ಸಂಘದಿಂದ ಅಭಿನಂದನೆ ಸಲ್ಲಿಸಿ ಎರಡೇ ಹಂತದ ಕಾರ್ಯಾಚಾರಣೆ ಪ್ರಾರಂಭ ಮಾಡಬೇಕೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.
ಅರಣ್ಯ ಒತ್ತುವರಿ ತೆರೆವುಗೊಳಿಸುತ್ತಿರುವ ಅಧಿಕಾರಿಗಳ ವಿರುದ್ದ ತನ್ನ ಪ್ರತಾಪವನ್ನು ತೋರಿಸುವ ಜೊತೆಗೆ ಬಲಾಡ್ಯ ಭೂಗಳ್ಳರ ಪರ ನಿಂತು ದೌರ್ಜನ್ಯ ದಬ್ಬಾಳಿಕೆ ಮಾಡುತ್ತಿರುವ ಸಂಸದರ ಒತ್ತಡಕ್ಕೆ ಅರಣ್ಯ ಅಧಿಕಾರಿಗಳು ಮಣಿದಿದ್ದೀರಾ ಎಂದು ಪ್ರಶ್ನೆ ಮಾಡಿದರು.
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ ಅರಣ್ಯ ಅಧಿಕಾರಿಗಳು ಶ್ರೀಮಂತರಿಗೆ ಒಂದೇ ಕಾನೂನು ಪಾಲನೆ ಮಾಡಬೇಕು ಅದನ್ನು ಬಿಟ್ಟು ಸಣ್ಣ ಪುಟ್ಟ ರೈತರ ಭೂ ಒತ್ತುವರಿ ತೆರೆವುಗೊಳಿಸಿ ನೂರಾರು ಎಕರೆ ಒತ್ತುವರಿದಾರರ ಒತ್ತುವರಿ ತೆರೆವುಗೊಳಿಸದೆ ದಿನಗಳು ಕಳೆಯುವುದು ಸಾರ್ವಜನಿಕರು ಅರಣ್ಯ ಇಲಾಖೆಯ ಮೇಲಿಟ್ಟಿರುವ ಕಳೆದು ಕೊಳ್ಳುವಂತಾಗುತ್ತದೆ ಎಂದು ಅಸಮಾದಾನ ವ್ಯಕ್ತಪಡಿಸಿದರು.
ಹೆಚ್ಚಿನ ಪೋಲಿಸ್ ಭದ್ರತೆ ಪಡೆದು ಎರಡನೇ ಅರಣ್ಯ ಒತ್ತುವರಿ ಕಾರ್ಯಚಾರಣೆ ಪ್ರಾರಂಭ ಮಾಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅರಣ್ಯ ಉಪ ಸಂರಕ್ಷಣಾಧಿಕಾರಿಗಳಾದ ಏಡುಕೊಂಡಲು ರವರು ಅರಣ್ಯ ಭೂಮಿ ನನ್ನ ಜನ್ಮ ಕೊಟ್ಟ ತಾಯಿಗೆ ಸಮಾನ ಅರಣ್ಯ ಭೂಮಿ ಉಳಿವಿಗಾಗಿ ನನ್ನ ಪ್ರಾಣವನ್ನು ಬೇಕಾದರೂ ಒತ್ತೆ ಇಡುತ್ತೇನೆಹೊರತು ಒಂದಿಚು ಅರಣ್ಯ ಭೂಮಿ ಭೂಗಳ್ಳರ ಪಾಲಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.
ಮನವಿ ನೀಡುವಾಗ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ, ಹರೀಶ್, ರಾ.ಪ್ರ. ಕಾರ್ಯದರ್ಶಿ ಫಾರೂಖ್ ಪಾಷ, ಜುಬೇರ್‍ಪಾಷ, ಬಂಗಾರಿ ಮಂಜು, ಭಾಸ್ಕರ್, ವಿಜಯ್ ಪಾಲ್, ಮಂಗಸಂದ್ರ ತಿಮ್ಮಣ್ಣ, ಕುವ್ವಣ್ಣ, ವೆಂಕಟೇಶಪ್ಪ, ರಾಮಸಾಗರ ವೇಣು, ಸುರೇಶ್‍ಬಾಬು, ಕದಿರಿನತ್ತ ಅಪ್ಪೋಜಿರಾವ್, ಯಾರಂಘಟ್ಟ ಗಿರೀಶ್, ಹೆಬ್ಬಣಿ ಆನಂದರೆಡ್ಡಿ, ಮಂಗಸಂದ್ರ ನರಸಿಂಹಯ್ಯ, ತೆರ್ನಹಳ್ಳಿ ಆಂಜಿನಪ್ಪ ಸುಪ್ರೀಂಚಲ, ವಿನುತ್‍ಗೌಡ, ಶೈಲಜ, ರಾಧಮ್ಮ, ಚೌಡಮ್ಮ, ಶೋಭ, ಮುಂತಾದವರಿದ್ದರು.

ಮಾನಸಿಕ ಅಸ್ವಸ್ಥ ದಿನಾಚರಣೆ ಮಾನಸಿಕವಾಗಿ ಅಸ್ವಸ್ಥಾದವರ ಬಗ್ಗೆ ಜಾಗೃತಿ, ಸಹಾನುಭೂತಿ ಮತ್ತು ರೂಪಾಂತರವನ್ನು ಉತ್ತೇಜಿಸುವ ಕಾರ್ಯಕ್ರಮವಾಗಿದೆ : ಸಿವಿಲ್ ನ್ಯಾಯಾದೀಶ ಬಿ.ಕೆ.ಮನು

ಶ್ರೀನಿವಾಸಪುರ : ಮಾನಸಿಕ ಅಸ್ವಸ್ಥ ದಿನಾಚರಣೆಯು ಒಂದು ರೀತಿಯಲ್ಲಿ ಮಾನಸಿಕವಾಗಿ ಅಸ್ವಸ್ಥಾದವರ ಬಗ್ಗೆ ಜಾಗೃತಿ ಹಾಗು ಸಹಾನುಭೂತಿ ಮತ್ತು ರೂಪಾಂತರವನ್ನು ಉತ್ತೇಜಿಸುವ ಕಾರ್ಯಕ್ರಮವಾಗಿದೆ ಎಂದು ಶ್ರೀನಿವಾಸಪುರ ಪ್ರಧಾನ ಸಿವಿಲ್ ನ್ಯಾಯಾದೀಶರಾದ ಬಿ.ಕೆ.ಮನು ಹೇಳಿದರು.
ತಾಲೂಕಿನ ಪಿಲ್ಲಕುಂಟೆ ಗ್ರಾಮದ ದಿವ್ಯಜ್ಯೋತಿ ವೃದ್ಧಾಶ್ರಮದಲ್ಲಿ ಕಾನೂನು ಸೇವಾ ಸಮಿತಿ ವತಿಯಿಂದ ಮಂಗಳವಾರ ಮಾನಸಿಕ ಅಸ್ವಸ್ಥ ದಿನ ಮತ್ತು ಹಿರಿಯ ನಾಗರೀಕರ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾನಸಿಕ ಆರೋಗ್ಯ ಪರಿಸ್ಥಿತಿಗಳ ಪ್ರಭುತ್ವ ಮತ್ತು ಪ್ರಭಾವದ ಬಗ್ಗೆ ಅರಿವು ಮೂಡಿಸುವ ಸಾಮೂಹಿಕ ಪ್ರಯತ್ನಗಳು ಇದಾಗಿವೆ. ಇಂತಹ ಕಾರ್ಯಕ್ರಮಗಳಿಂದ ಮಾನಸಿಕ ಆರೋಗ್ಯಕ್ಕೆ ಸಂಬಂದಿಸಿದ ಕಳಂಕವನ್ನು ಕಡಿಮೆ ಮಾಡಲು ಮತ್ತು ಅಗತ್ಯವಿದ್ದಾಗ ಸಹಾಯ ಮತ್ತು ಬೆಂಬಲವನ್ನು ಪಡೆಯಲು ಸಹಕಾರಿಯಾಗುತ್ತದೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಾನಸಿಕ ಅಸ್ವಸ್ಥರನ್ನು ಸರಿಪಡಿಸುವ ವೇದಿಕೆಯಾಗಿದ್ದು, ಈ ಕಾರ್ಯಕ್ರಮದಲ್ಲಿ ಮಾನಸಿಕ ಅಸ್ವಸ್ಥರು ಪಾಲ್ಗುಳ್ಳುವದರಿಂದ ತಮ್ಮ ಸಮಸ್ಯೆಗಳು ಇದ್ದರೆ ಅವುಗಳನ್ನು ಆಪ್ತಸಮಾಲೋಚನೆಗಳನ್ನು ನಡೆಸಿ ಬಗಹರಿಸಕೊಳ್ಳಬಹುದಾಗಿದೆ ಎಂದರು.
ಇನ್ನು ಹಿರಿಯ ನಾಗರೀಕರಿಗೆ ಸಮಾಜ ಗೌರವ ಕೊಡಬೇಕು. ಅವರಿಗೆ ಸಿಗಬೇಕಾದ ಅವಕಾಶಗಳು ಒದಗಿಸುವ ನೆಲೆಯಲ್ಲಿ ಸ್ಪಂದಿಸಬೇಕು. ಅವರಿಗೆ ಸಾಂತ್ವನದ ಮಾತುಗಳು ನಾಡಿ ಅವರೊಂದಿಗೆ ನಾವಿದ್ದೇವೆ ಎಂಬ ಆತ್ಮವಿಶ್ವಾಸವನ್ನು ಮೂಡಿಸಬೇಕು ಎಂದರು.
ಹಿರಿಯರು ಆರೋಗ್ಯ ನೆಮ್ಮದಿ ಜೀವನವನ್ನು ದ್ಯಾನ, ಯೋಗ ಮಾಡುವುದ ಮೂಲಕ ನಿಮ್ಮ ಆರೋಗ್ಯವನ್ನು ಸರಿಪಡಿಸಿಕೊಳ್ಳುತ್ತಾ ನೆಮ್ಮದಿ ಜೀವನವನ್ನು ನಡೆಸಬೇಕು ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಶರೀನ್‍ತಾಜ್ ಮಾತನಾಡಿ ಹಿರಿಯರು ತಮ್ಮ ಹಳೆಯ ಕಹಿ ಘಟನೆಗಳನ್ನು ಮರೆತು, ನೆಮ್ಮದಿ ಜೀವನವನ್ನು ನಡೆಸುವಂತೆ ಸಲಹೆ ನೀಡಿ , ತಾಲೂಕು ಆಡಳಿತವು ನಿಮ್ಮೊಂದಿಗೆ ಇದ್ದು , ಸರ್ಕಾರದ ಸೌಲಭ್ಯಗಳನ್ನು ಪಡೆದು ನೆಮ್ಮದಿ ಜೀವನವನ್ನು ನಡೆಸುವಂತೆ ಸಲಹೆ ನೀಡಿದರು.
ವಕೀಲರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ಜಯರಾಮೇಗೌಡ, ವಕೀಲರಾದ ಜಯಲಕ್ಷ್ಮೀ, ಎನ್.ಎಸ್.ಶ್ರೀನಿವಾಸಗೌಡ, ಆರೋಗ್ಯ ಇಲಾಖೆ ಕ್ಷೇತ್ರ ಅಧಿಕಾರಿ ಆಂಜಲಮ್ಮ ಮಾತನಾಡಿದರು.
ಟಿಎಚ್‍ಒ ಮಹಮ್ಮದ್ ಶರೀಫ್, ದಿವ್ಯ ಜ್ಯೋತಿ ವೃದ್ದಾಶ್ರಮ ಕಾರ್ಯದರ್ಶಿ ನರಸಿಂಹಪ್ಪ, ದಿವ್ಯ ಜ್ಯೋತಿ ವೃದ್ಧಾಶ್ರಮ ನಿರ್ದೇಶಕ ಟಿ.ಎಂ.ರಾಮಕೃಷ್ಣೇಗೌಡ ಇದ್ದರು.

ನವೆಂಬರ್ 6ರಿಂದ14ರ ವರೆಗೆ ಕುಂದಾಪುರದಲ್ಲಿ ಶಾಲಾ ಮತ್ತು ಕಾಲೇಜು ಮಟ್ಟದ 1೦ ಓವರ್‌ಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ : ಗೌತಮ್ ಶೆಟ್ಟಿ


ಕುಂದಾಪುರ: ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಉಡುಪಿ ಜಿಲ್ಲೆಯ ವತಿಯಿಂದ ಶಾಲಾ ಮತ್ತು ಕಾಲೇಜ್ ಮಟ್ಟದ ಟೆನ್ನಿಸ್‌ಬಾಲ್ ಕ್ರಿಕೆಟ್ ಟೂರ್ನಮೆಂಟ್ ನವೆಂಬರ್ 6ರಿಂದ ನವೆಂಬರ 14, 2023ರ ವರೆಗೆ ಕುಂದಾಪುರದಲ್ಲಿ ಆಯೋಜಿಸಲಾಗಿದೆಂದು ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷಿನಿನ ಅಧ್ಯಕ್ಷರಾದ ಗೌತಮ್ ಶೆಟ್ಟಿ ಅವರು ತಿಳಿಸಿದ್ದಾರೆ.
ಈ ಪಂದ್ಯಾಟವು ಶಾಲಾ ಮತ್ತು ಕಾಲೇಜು ಮಟ್ಟ ಇದ್ದು, ಈದು ಎರಡು ಹಂತಗಳಲ್ಲಿ ನಡೆಯಲಿದೆ.
1ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಶಾಲಾ ಮಟ್ಟದಲ್ಲಿ, ಪಿಯುಸಿಯಿಂದ ಡಿಗ್ರಿವರೆಗಿನ ವಿದ್ಯಾರ್ಥಿಗಳು ಕಾಲೇಜು ಮಟ್ಟದಲ್ಲಿ ಸ್ಪರ್ಧಿಸಬಹುದಾಗಿದೆ. ಇದು 1೦ ಓವರ್‌ಗಳ ಟೂರ್ನ್ಮೆಂಟ್ ಆಗಿರುತ್ತದೆ.ಈ ಪಂದ್ಯಾಟಗಳಿಗೆ ಪ್ರವೇಶ ಶುಲ್ಕ ಇರುವುದಿಲ್ಲ.
ಈ ಪಂದ್ಯಾಟದ ಹೆಚ್ಚಿನ ವಿವರ ಮತ್ತು ಮಾಹಿತಿಗಾಗಿ 9901850385 (ಚೇತನ್), 9964244946 (ಪ್ರವೀಣ್), 8660457633-ಪ್ರಶಾಂತ 8310010819 (ಅಜೀಜ್) ಇವರನ್ನು ಸಂಪರ್ಕಿಸಬಹುದಾಗಿದೆ
.

ಯುವ ಸಮುದಾಯ ದುಶ್ಚಟಗಳಿಂದ ದೂರವಿದ್ದು, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು – ಎ.ವೆಂಕಟರೆಡ್ಡಿ

ಶ್ರೀನಿವಾಸಪುರ: ಯುವ ಸಮುದಾಯ ದುಶ್ಚಟಗಳಿಂದ ದೂರವಿದ್ದು, ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಬೈರವೇಶ್ವರ ವಿದ್ಯಾ ನಿಕೇತನದ ನಿರ್ದೇಶಕ ಎ.ವೆಂಕಟರೆಡ್ಡಿ ಹೇಳಿದರು.
ಪಟ್ಟಣದ ಕರ್ನಾಟಕ ಸರ್ಕಾರಿ ಉನ್ನತೀಕೃತ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾ ಜಾಗೃತಿ ವೇದಿಕೆ, ಬಳ್ತಂಗಡಿ ಅಖಿಲ ಜನಜಾಗೃತಿ ವೇದಿಕೆ, ಡಿಜಿ ಯೋಜನೆ ಹಾಗೂ ಸ್ಥಳೀಯ ಉನ್ನತೀಕೃತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಈಚೆಗೆ ಏರ್ಪಡಿಸಿದ್ದ ದುಶ್ಚಟಗಳ ವಿರುದ್ಧ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ದುಶ್ಚಟಗಳು ಮನುಷ್ಯನ ಆತ್ಮಬಲ ಕುಗ್ಗಿಸುತ್ತವೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಕೆಡಲು ಕಾರಣವಾಗುತ್ತವೆ. ಅಕ್ರಮ ಚಟುವಟಿಕೆ, ಅನೈತಿಕ ನಡವಳಿಕೆ ಮತ್ತು ಅಪರಾಧಕ್ಕೆ ಪ್ರೇರಣೆ ನೀಡುತ್ತವೆ. ಮನುಷ್ಯ ನೈತಿಕವಾಗಿ ಬೆಳೆಯಬೇಕು. ಯಾವುದೇ ಕಾರಣಕ್ಕೂ ದುಶ್ಚಟಗಳ ದಾಸರಾಗಬಾರದು ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಂ.ಬೈರೇಗೌಡ ಮಾತನಾಡಿ ಆತ್ಮಗೌರವ ಹಾಗೂ ದೃಢ ಸಂಕಲ್ಪ ಇದ್ದಲ್ಲಿ ಯಾವುದೇ ದುಶ್ಚಟ ಹತ್ತಿರ ಸುಳಿಯುವುದಿಲ್ಲ. ಒಳ್ಳೆ ವ್ಯಕ್ತಿಗಳೊಂದಿಗೆ ಸ್ನೇಹ ಮಾಡಬೇಕು. ಉತ್ತಮ ವಿಚಾರಗಳ ಬಗ್ಗೆ ಚರ್ಚಿಸಬೇಕು. ಕೆಟ್ಟ ಯೋಚನೆಗಳು ಮನಸ್ಸಿಗೆ ಬರದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಮಹಾತ್ಮ ಗಾಂಧೀಜಿ ಅವರು ಹೇಳುವಂತೆ ಕುಡಿತ ಮತ್ತಿರ ದುಶ್ಚಟಗಳು ಮನುಷ್ಯನ ಆತ್ಮ ಕೊಲ್ಲುತ್ತವೆ. ದುಶ್ಚಟ ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತದೆ. ಸಮಾಜದಲ್ಲಿ ವ್ಯಕ್ತಿಗೌರವ ಸಿಗದಂತೆ ಮಾಡುತ್ತದೆ. ಅಪರಾಧ ಕೃತ್ಯದಲ್ಲಿ ಭಾಗಿಯಾದಲ್ಲಿ, ಜೈಲಿನಲ್ಲಿ ಕೊಳೆಯಬೇಕಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ವಿ.ವಾಸುದೇವ, ಗಿರಿಜಾ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ನಾಗವೇಣಿ ರೆಡ್ಡಿ, ಎಂಜಿನಿಯರ್ ಮಮತಾ ಕಾಂತರಾಜ್, ಡಿಜಿವೈ ಯೋಜನಾಧಿಕಾರಿ ಪ್ರಕಾಶ್ ಕುಮಾರ್, ಮೇಲ್ವಿಚಾರಕ ನರೇಶ್ ಇದ್ದರು.

ನಿರ್ಮಲ ಮಹಿಳಾ ಸೇವಾ ಕೇಂದ್ರದಿಂದ ಮಕ್ಕಳ ವ್ಯಕ್ತಿತ್ವ ವಿಕಸನ ಶಿಬಿರ

ಭದ್ರಾವತಿಯ ನಿರ್ಮಲ ಮಹಿಳಾ ಸೇವಾ ಕೇಂದ್ರದಿಂದ ಎಂ ಸಿ ಹಳ್ಳಿಯ ಭದ್ರಗಿರಿ ದೇವಸ್ಥಾನದ ಸಮುದಾಯ ಭವನದಲ್ಲಿ, ಭದ್ರಾವತಿ ಸರ್ಕಾರಿ ಶಾಲೆಯ ವಿಶೇಷ ಭೋದನಾ ವಿದ್ಯಾರ್ಥಿಗಳಿಗೆ ಮತ್ತು ಚಿಲ್ಡ್ರನ್ ಕ್ಲಬ್ ನ ಮಕ್ಕಳಿಗೆ ಮಕ್ಕಳ ವ್ಯಕ್ತಿತ್ವ ವಿಕಸನ ಕುರಿತು ವಿಶೇಷ ಶಿಬಿರವನ್ನು ಆಯೋಜಿಸಲಾಗಿತ್ತು, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭದ್ರಗಿರಿ ಕ್ಷೇತ್ರದ ಶ್ರೀ ಶ್ರೀ ಮುರುಗೇಶ್ ಸ್ವಾಮಿಗಳು ಮಾತನಾಡಿ ಮಕ್ಕಳ ಸಮಾಜದ ಅವಿಭಾಜ್ಯ ಅಂಗ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಮಕ್ಕಳ ವ್ಯಕ್ತಿತ್ವ ವಿಕಸನ ಶಿಕ್ಷಣದ ಜೊತೆಗೆ ಇತರೆ ಆಟೋಟಗಳು, ದೈಹಿಕ ಮತ್ತು ಮನಸ್ಸಿಕ ಸ್ಥಿರತೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ತಿಳಿಸಿದರು, ಭದ್ರಗಿರಿ ಟ್ರಸ್ಟ್ ನ ಮುಖಂಡರಾದ ಶ್ರೀ ಸುಂದರ್ ಮಾತನಾಡಿ ಭದ್ರಗಿರಿಯ ಪುಣ್ಯಕ್ಷೇತ್ರದಲ್ಲಿ ನಿರ್ಮಲ ಮಹಿಳಾ ಸೇವಾ ಕೇಂದ್ರ ನಡೆಸುತ್ತಿರುವ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಕ್ಷೇತ್ರದಿಂದ ಸಂಪೂರ್ಣ ಸಹಕಾರ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಕೂಡಾ ಇಂತಹ ಕಾರ್ಯಕ್ರಮಗಳಿಗೆ ನಮ್ಮ ಸಹಕಾರ ಇರುತ್ತದೆ ಎಂದರು , ಫಾ. ಸಂತೋಷ್ ವಿನ್ಸೆಂಟ್ ಡಿ ‘ ಅಲ್ಮೆಡಾ ರವರು ಮಕ್ಕಳಿಗೆ ವ್ಯಕ್ತಿತ್ವ ವಿಕಸನಕ್ಕೆ ಸಂಬಂದಿಸಿದ ಕಥೆಗಳನ್ನು ಮಕ್ಕಳಿಗೆ ಭೋದಿಸಿದರು, ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದ ಭದ್ರಗಿರಿ ಟ್ರಸ್ಟ್ ನ ಅಧ್ಯಕ್ಷರಾದ ಚಂದ್ರಗೋಶನ್ ನಿರ್ಮಲ ಮಹಿಳಾ ಸೇವಾಕೇಂದ್ರದ ನಿರ್ದೇಶಕರಾದ ಸಿ. ತೆರೇಸಾ ಮಸ್ಕರೇನ್ಹಸ್ ಸಿಬ್ಬಂದಿಗಳಾದ ಸಹಾಯ ಮೇರಿ, ಜಯಂತಿ, ಸತ್ಯವತಿ, ತೆರೇಸಾ ಕೌಸಲ್ಯ, ಅಂಗನವಾಡಿ ಕಾರ್ಯಕತೆಯರ ಮಾರ್ಗದರ್ಶಕರಾದ ಶ್ರೀಮತಿ ಜ್ಯೋತಿ ಎಸ್ ಕುಂಬಾರ, ಪೌಷ್ಟಿಕ ಆಹಾರ ಸಲಹೆಗಾರರದ ಶ್ರೀ ಗುರುನಾಥ್ ಆಚಾರ್ ಮತ್ತು ಮಕ್ಕಳು ಭಾಗವಹಿಸಿದ್ದರು.