ಭಂಡಾರ್ಕಾರ್ಸ್ ಕಾಲೇಜಿನ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೋಶ ಇದರ ಸಹಯೋಗದಲ್ಲಿ ಉಪನ್ಯಾಸ ಕಾರ್ಯಕ್ರಮ

ಕುಂದಾಪುರ: ಅಕ್ಟೋಬರ್ 6ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೋಶ ಇದರ ಸಹಯೋಗದಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಣಿಪಾಲದ ಮಾಹೆ ಇದರ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಗಿರಿಜಾ ಅತ್ತೀಗೇರಿ ಡಿಸೈನ್ ಥಿಂಕಿಂಗ್ ಮತ್ತು ಐಡಿಯೇಟ್ ಎಂಬ ವಿಷಯದ ಕುರಿತು ಮಾತನಾಡಿದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಮಣಿಪಾಲದ ಮಾಹೆ ಇದರ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ವಿಭಾಗದ ಸುಚೇತಾ ವಿ.ಕೋಟೇಕಾರ್ ಅವರು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೋಶ ಇದರ ಉಪಯೋಗವನ್ನು ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಮಾತನಾಡಿ ನೀವು ಉದ್ಯೋಗದಾತರಾಗಿ ಬೆಳೆಯಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ, ಐಕ್ಯೂಎಸಿ ಸಂಯೋಜಕರಾದ ಡಾ.ವಿಜಯ ಕುಮಾರ್ ಉಪಸ್ಥಿತರಿದ್ದರು.
ಕಾಲೇಜಿನ ಇನ್ಸ್ಟಿಟ್ಯೂಷನ್ ಇನ್ನೋವೇಶನ್ ಕೋಶ ಇದರ ಸಂಯೋಜಕರಾದ ಡಾ.ಲಲಿತಾದೇವಿ ಸ್ವಾಗತಿಸಿದರು.
ಬಿ.ಬಿ.ಎ ವಿದ್ಯಾರ್ಥಿನಿಯರಾದ ಆಯೇಷಾ ಮುಸ್ಕಾನ್ ಫಿರ್ಜಾದೆ ಕಾರ್ಯಕ್ರಮ ನಿರೂಪಿಸಿದರು.ಸಾಹಿತಿ ಮತ್ತು ಶ್ರಾವ್ಯ ಪರಿಚಯಿಸಿದರು.ಲೇಖನಾ ವಂದಿಸಿದರು.

ಲಿಪಿ ಅಕಾಡೆಮಿಯಿಂದ ಉಡುಪಿಯ ಸಂತೆಕಟ್ಟೆಯಲ್ಲಿ ಉದ್ಯೋಗ ಮೇಳ

ದಿನಾಂಕ 09-10-2023ರ ಸೋಮವಾರ ಬೆಳಿಗ್ಗೆ 11:00 ಗಂಟೆಗೆ ಲಿಪಿ ಅಕಾಡೆಮಿ, ನವಮಿ ಬೇಕರಿ ಬಿಲ್ಡಿಂಗ್, 3ನೇ ಮಹಡಿ, ಸಂತೆಕಟ್ಟೆ, ಉಡುಪಿಯಲ್ಲಿ ಆಯೋಜಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ, ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಹಾಗೂ ಐಟಿಐ ವಿದ್ಯಾರ್ಹತೆಯೊಂದಿಗೆ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ಮಾಹಿತಿಯನ್ನು ಲಿಪಿ ಅಕಾಡೆಮಿ, ನವಮಿ ಬೇಕರಿ ಬಿಲ್ಡಿಂಗ್, 3ನೇ ಮಹಡಿ, ಸಂತೆಕಟ್ಟೆ, ಉಡುಪಿಯಲ್ಲಿ ನಡೆಯಲಿದ್ದು, ಆಕಾಂಕ್ಷಿಗಳು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 8147534324 ಸಂಪರ್ಕಿಸಬಹುದು.

ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಜೂನಿಯರ್ ರೆಡ್ ಕ್ರಾಸ್ ಉದ್ಘಾಟನೆ

ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ದಲ್ಲಿ ಅಕ್ಟೋಬರ್ 6 ರಂದು ಜೂನಿಯರ್ ರೆಡ್ ಕ್ರಾಸ್ ಉದ್ಘಾಟಿಸಲಾಯಿತು. ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಆರಂಭ ವಾಯಿತು. ಇದರ ಅಧ್ಯಕ್ಷತೆಯನ್ನು ಉಪ ಪ್ರಾಂಶುಪಾಲರಾದ ಚಂದ್ರಶೇಖರ ಶೆಟ್ಟಿ ವಹಿಸಿದರು. ರೆಡ್ ಕ್ರಾಸ್ ಸಭಾಪತಿ ಎಸ್ ಜಯಕರ ಶೆಟ್ಟಿ ರೆಡ್ ಕ್ರಾಸ್ ನ ಧ್ಯೇಯ ಹಾಗೂ ಕಾರ್ಯ ಚಟುವಟಿಕೆಗಳ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ನೀಡಿದರು. ಜೂನಿಯರ್ ರೆಡ್ ಕ್ರಾಸ್ ಸಂಯೋಜಕ ರಾದ ದಿನಕರ್ ಅರ್ ಶೆಟ್ಟಿ ಇವರು ಮಕ್ಕಳಿಗೆ ಪ್ರತಿಜ್ಞಾವಿದಿ ಬೋದಿಸಿದರು. ಜೂನಿಯರ್ ರೆಡ್ ಕ್ರಾಸ್ನ ನೂತನ ಅದ್ಯಕ್ಷ ಮನ್ವಿತ್ ಗೆ ಸಭಾಪತಿ ಯವರು ಪಿನ್ ತೊಡಿಸಿದರು. ಅದ್ಯಕ್ಷರ ಭಾಷಣ ಮತ್ತು ವಂದನಾರ್ಪಣೆ ಯೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಂಡಿತು. ರೆಡ್ ಕ್ರಾಸ್ ಕಾರ್ಯದರ್ಶಿ ವೈ. ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು. ಜೂನಿಯರ್ ರೆಡ್ ಕ್ರಾಸ್ ಮಾರ್ಗದರ್ಶಿ ಅಧ್ಯಾಪಕರಾದ ಶ್ರೀಕಾಂತ್ ರಾವ್ ಕಾರ್ಯಕ್ರಮ ನಿರೂಪಿಸಿ ವಂಧಿಸಿದರು.

ಆಲಿಸ್ ಡಿಸೋಜ ಡಿ ಎಂ ಅವರಿಗೆ ಡಾ. ಆಫ್ ಫಿಲಾಸಫಿ ಪದವಿ

ಬೆಳಗಾಂ : ವಿಶ್ವೇಶ್ವರಯ್ಯ ಟೆಕ್ನಾಲಜಿಕಲ್ ಯೂನಿವರ್ಸಿಟಿ ಬೆಳಗಾಂ, ಇಲ್ಲಿನ ಭಗಿನಿ ಆಲಿಸ್ ಡಿಸೋಜ ಡಿ ಎಂ (SR. SADHANA BS)  ಇವರು ಸಂಶೋಧನಾ ವಿದ್ಯಾರ್ಥಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಮಹಾಪ್ರಬಂಧ “Contribution of Konkani Phonemes towards the expression of emotions ” ಪರೀಕ್ಷಕರು ಮೌಲ್ಯಮಾಪನ ಮಾಡಿ ಸಲ್ಲಿಸಿದ ಶಿಫಾರಸು ವರದಿಯನ್ನು ಆಧರಿಸಿದ ವಿಶ್ವವಿದ್ಯಾಲಯದ ವಿದ್ಯಾ ವಿಧಾನ ಮಂಡಳಿ ಮತ್ತು ಕಾರ್ಯಕಾರಿ ಪರಿಷತ್ತಿನ ಅನುಮೋದನೆಗೆ ಒಳಪಟ್ಟು ಮಾನ್ಯ ಕುಲಪತಿಗಳ ಆದೇಶದಂತೆ ಆಲಿಸ್ ಡಿಸೋಜ ಡಿಎಂ,  ಡಾ. ಆಫ್ ಫಿಲಾಸಫಿ ಪದವಿಗೆ  14.09.2023 ಅರ್ಹರಾಗಿದ್ದಾರೆ. ಇವರಿಗೆ  ಸಂತ ಜೋಸೆಫ್ಸ್ ಇಂಜಿನಿಯರಿಂಗ್ ಕಾಲೇಜಿನ ಡಾಕ್ಟರ್ ರಿಯೋ ಡಿಸೋಜಾ, ಮಾರ್ಗದರ್ಶಕರಾಗಿದ್ದರು

ಚಿನ್ಮಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ರಚನ ಅವರಿಗೆ, ಮಹಾತ್ಮ ಗಾಂಧಿಜಿಯವರ ಕುರಿತು ಜಿಲ್ಲಾಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಕೋಲಾರ : ತಾಲೂಕಿನ ಚೊಕ್ಕಹಳ್ಳಿಯ ಚಿನ್ಮಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಿ.ಎಂ.ರಚನ ಅವರಿಗೆ, ಮಹಾತ್ಮ ಗಾಂಧಿಜಿಯವರ ಕುರಿತು ಜಿಲ್ಲಾಮಟ್ಟದಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ದೊರಕಿದೆ.

ಮಹಾತ್ಮ ಗಾಂಧಿಜಿಯವರ ೧೫೪ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಜಿಲ್ಲಾಮಟ್ಟದಲ್ಲಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಮತ್ತು ಪದವಿ/ ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳಿಗಾಗಿ “ಭಾಪೂಜಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಈ ಸ್ಪರ್ಧೆಯ ಅಂಗವಾಗಿ ತಾಲೂಕಿನ ಚೊಕ್ಕಹಳ್ಳಿಯ ಚಿನ್ಮಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಹಾಗೂ ಚೌಡದೇನಹಳ್ಳಿಯ ವಾಸಿ ಸಿ.ಎಂ.ರಚನ ಬರೆದಿದ್ದ ಪ್ರಬಂಧಕ್ಕೆ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಪ್ರಥಮ ಬಹುಮಾನಕ್ಕೆ ಆಯ್ಕೆಯಾಗಿತ್ತು.

ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಭಾರತ್ ಸೇವಾದಳ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ, ಅ. ೨ ರಂದು ಏರ್ಪಡಿಸಿದ್ದ ಮಹಾತ್ಮ ಗಾಂಧೀಜಿ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿಪತ್ರದೊಂದಿಗೆ ನಗದು ಬಹುಮಾನ ನೀಡಲಾಯಿತು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಜಿಲ್ಲಾಧಿಕಾರಿ ಅಕ್ರಂಪಾಷ, ನಿವೃತ್ತ ಐ.ಎ.ಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಭಾರತ್ ಸೇವಾದಳದ ಜಿಲ್ಲಾ 

ಅಧ್ಯಕ್ಷ ಕೆ.ಎಸ್. ಗಣೇಶ್, ಸಮಾಜ ಸೇವಕ ಸಿ.ಎಂ.ಆರ್.ಶ್ರೀನಾಥ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಹಣಾಧಿಕಾರಿ ಪದ್ಮ ಬಸವಂತಪ್ಪ, ಹೆಚ್ಚುವರಿ ರಕ್ಷಣಾಧಿಕಾರಿ ಬಿ.ವಿ.ಭಾಸ್ಕರ್, ಅರಣ್ಯ ಅಧಿಕಾರಿ ಏಡುಕೊಂಡಲು, ತಹಸೀಲ್ದಾರ್ ಹರ್ಷವರ್ಧನ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ವಿ.ಚೇತನ್‌ಕುಮಾರ್, ಸಹಾಯಕರಾದ ಕೌಸಲ್ಯ ಮತ್ತಿತರರು ಇದ್ದರು. 

ಕುಂದಾಪುರ ಹೋಲಿ ರೊಜರಿ ಮಾತೆಯ 453 ನೇ ವಾರ್ಷಿಕ ಹಬ್ಬ “ಯಾವ ಕುಟುಂಬ ಒಟ್ಟಿಗೆ ಕೂಡಿ ಪ್ರಾರ್ಥಿಸುವುದೊ ಆ ಕುಟುಂಬ ಸದಾ ಬಾಳುವುದು’ ಫಾ|ಪಿಯುಸ್


ಕುಂದಾಪುರ,ಅ.7: ಉಡುಪಿ ಧರ್ಮ ಪ್ರಾಂತ್ಯದ, ಹಾಗೂ ಕಾರವಾರದ ತನಕದ ಅತ್ಯಂತ ಹಿರಿಯ ಚರ್ಚ್, ಎಂದು ಐತಿಹಾಸಿಕ ಚರಿತ್ರೆಯುಳ್ಳ ಕುಂದಾಪುರದ ಹೋಲಿ ರೊಜರಿ ಮಾತಾ ಚರ್ಚ್, ಒಕ್ಟೋಬರ್ 7 ರಂದು 453 ನೇ ವಾರ್ಷಿಕ ಹಬ್ಬವನ್ನು ಸಂಭ್ರಮ ಭಕ್ತಿಪೂರ್ವಕವಾಗಿ ಆಚರಿಸಿತು.
ತಾರೀಕಿನ ಲೆಕ್ಕದ ಪ್ರಕಾರ ನಡೆದ ರೊಜರಿ ಅಮ್ಮನವರ ಹಬ್ಬದ ಸಡಗರ ಮತ್ತು ಭಕ್ತಿಮಯದ ಹಬ್ಬದ ಬಲಿದಾನವನ್ನು ಹೊಸನಗರ ಚರ್ಚಿನ ಧರ್ಮಗುರು ಶಿವಮೊಗ್ಗ ಧರ್ಮಪ್ರಾಂತ್ಯದ ಯುವಜನ ನಿರ್ದೇಶಕರಾದ ವಂ|ಪಿಯುಸ್ ಡಿಸೋಜಾ ಅರ್ಪಿಸಿ ”ಅಮ್ಮ ಅಂದರೆ ನಮೆಗೆಲ್ಲರಿಗೂ ಅತ್ಯಂತ ಪ್ರೀತಿಯ ಕಾಳಜಿಯುಳ್ಳವರು, ನೋವಿನಲ್ಲಿ, ದುಖದಲ್ಲಿ, ಸಂತೋಷದಲ್ಲಿಯೂ ನಮಗೆ ಅಮ್ಮ ಬೇಕು, ಅಮ್ಮನ ಬಗ್ಗೆ ಹಲವಾರು ಪುಸ್ತಕಗಳು, ಕವಿತೆಗಳು, ಪದ್ಯಗಳು ಸಾಕಷ್ಟು ಬರೆದಿದ್ದಾರೆ, ಬರೆಯುತ್ತಾ ಇದ್ದಾರೆ, ಇದು ನಮ್ಮ ನಮ್ಮ ಸಂಸಾರಿಕ ಅಮ್ಮ, ಆದರೆ ನಮ್ಗೆಲ್ಲರಿಗೂ ಒರ್ವ ಅಮ್ಮ ಇದ್ದಾರೆ, ಅವರು ಮೇರಿಮಾತೆ, ಆ ಮಾತೆ ನಮಗೆ ಎಲ್ಲಾ ಕಾಲದಲ್ಲಿ ಪ್ರೀತಿ ದಯೆ ತೋರಿಸುತ್ತಾರೆ, ಆ ಅಮ್ಮ ಸದಾಕಾಲ ನಮಗೋಸ್ಕರ ತನ್ನ ಪುತ್ರ ಯೇಸುವಿನಲ್ಲಿ ಬೇಡುತಿರುತ್ತಾಳೆ, ಯೇಸುವನ್ನು ಶಿಲುಭೆಗೇರಿಸಿದ ಮೇಲೆ ಅವರ ಶಿಶ್ಯಂದರಿಗೆ ಧೈರ್ಯ ತುಂಬಿದವಳು ಮೇರಿ ಮಾತೆ, ಅವರ ಮತ್ತೊಂದು ಹೆಸರು ರೋಜರಿ ಮಾತೆ, ಈ ರೋಜರಿ ಮಾತೆಯ ನಮಗೆ ಜಪಮಾಲೆಯ ಮೂಲಕ ಜಪವನ್ನು ಹೇಳಿಕೊಟ್ಟಿದ್ದು, ನಿತ್ಯವೂ ಅವರ ಜಪವನ್ನು ಜಪಿಸಿ, ಮೇರಿ ಮಾತೆ ಇಹಲೋಕದಲ್ಲಿರುವಾಗ ನೆರೆಹೊರೆಯವರ ಸಹಾಯಕ್ಕಾಗಿ, ಯೇಸುವಿನ ಹತ್ತಿರ ಪವಾಡವನ್ನು ಮಾಡಿದ್ದಳು, ಯೇಉ ಮೇರಿಮಾತೆಯ ಯಾವಕೋರಿಕೆಯನ್ನು ನಿರಾಕರಿಸುವುದಿಲ್ಲ, ಅದಕ್ಕಾಗಿ ಮೇರಿ ಮಾತೆಯಲ್ಲಿ ಪ್ರಾರ್ಥಿಸಿ ಅವಳು ಯೇಸುವಿನ ಮೂಲಕ ನಿಮ್ಮ ಪ್ರಾರ್ಥನೆಯನ್ನು ನೇರವೇರಿಸುತ್ತಾಳೆ’ ಯಾವ ಕುಟುಂಬ ಒಟ್ಟಿಗೆ ಕೂಡಿ ಪ್ರಾರ್ಥಿಸುವುದೊ ಆ ಕುಟುಂಬ ಸದಾ ಬಾಳುವುದು’ ಎಂದು ಸಂದೇಶ ನೀಡಿದರು.
ಹಬ್ಬದ ತಯಾರಿಗಾಗಿ ಮೂರು ದಿವಸಗಳ ಧ್ಯಾನಕೂಟವನ್ನು ಎರ್ಪಡಿಸಿದ್ದು, ಆ ದ್ಯಾನಕೂಟವನ್ನು ಫಾ|ಪಿಯುಸ್ ಡಿಸೋಜಾ ಭಕ್ತಿಪೂರ್ವಕ ಅರ್ಥಭರಿತ ದ್ಯಾನಕೂಟವನ್ನು ನಡೆಸಿಕೊಟ್ಟರು.
ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಫಾ|ಸ್ಟ್ಯಾನಿ ತಾವ್ರೊ ಹಬ್ಬದ ಬಲಿದಾನದಲ್ಲಿ ಭಾಗಿಯಾಗಿ ಸ್ವಾಗತಿಸಿ ಹಬ್ಬದ ಶುಭಾಷಯಗಳನ್ನು ನೀಡಿ ‘ನೀವೆಲ್ಲ ದೊಡ್ಡ ಸಂಖ್ಯೆಯಲ್ಲಿ ಹಬ್ಬದ ಬಲಿಪೂಜೆಯಲ್ಲಿ ಭಾಗಿಯಾಗಿದ್ದಿರಿ, ನಮ್ಮ ಪಾಲಕಿ ರೋಜರಿ ಮಾತೆ ನಮ್ಮನ್ನು 453 ವರ್ಷಗಳಿಂದ ಆಶಿರ್ವದಿಸುತ್ತಲೆ ಬಂದಿದ್ದಾಳೆ, ರೋಜರಿ ಮಾತೆ ಎಲ್ಲರನ್ನು ಹರಸಲಿ ಎಂದು ಧನ್ಯವಾದಗಳನ್ನು ಅರ್ಪಿಸಿದರು. ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ ಬಲಿ ಪೂಜೆಯಲ್ಲಿ ಪಾಲ್ಗೊಂಡರು. ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು, ಧರ್ಮ ಭಗಿನಿಯರು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.