ಸೈನಿಕರು,ಪೊಲೀಸರಂತೆ ಮಾಧ್ಯಮದವರ ಸೇವೆಯೂ ಅನನ್ಯ: ಸಮಾಜದ ಆರೋಗ್ಯಕ್ಕೆ ಪತ್ರಕರ್ತರ ಪಾತ್ರ ಹಿರಿದು – ಎಂ.ನಾರಾಯಣ

ಕೋಲಾರ,ಅ.03: ಸೈನಿಕರು, ಪೊಲೀಸರ ರೀತಿ ಮಾಧ್ಯಮದವರು ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ ಅನನ್ಯವಾದುದು, ತಮ್ಮ ಆರೋಗ್ಯ ಲೆಕ್ಕಿಸದೆ ಅಪರಾಧ ನಡೆದ ಜಾಗದಲ್ಲಿ ಪೆÇಲೀಸರಿಗಿಂತ ಮೊದಲೇ ಪತ್ರಕರ್ತರು ಹೋಗಿರುತ್ತಾರೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ನಾರಾಯಣ್ ಪ್ರಶಂಶಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಾರಾಯಣ ಹೃದಯಾಲಯದಿಂದ ನಗರದ ಜಾಲಪ್ಪ ಹೊರರೋಗಿಗಳ ವಿಭಾಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಪತ್ರಕರ್ತರು ಸರಿಯಾಗಿ ಊಟ, ನಿದ್ದೆ ಮಾಡಲ್ಲ. ಪೊಲೀಸರಿಗಿಂತ ಮೊದಲೇ ಅಪಘಾತ, ಅಪರಾಧ ನಡೆದ ಜಾಗದಲ್ಲಿದ್ದು, ವರದಿ ಮಾಡುತ್ತಾರೆ, ಅವರ ಆರೋಗ್ಯ ರಕ್ಷಣೆಗೆ ನಾರಾಯಣ ಹೃದಯಾಲಯ ನೆರವಾಗಿರುವುದು ಶ್ಲಾಘನೀಯ ಎಂದರು.
ನಾವೂ ಪೆÇಲೀಸ್ ಇಲಾಖೆಯಲ್ಲಿ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣೆ ಮಾಡಿಸುತ್ತಿರುತ್ತೇವೆ ಎಂದ ಅವರು, ಕೋಲಾರ ಪತ್ರಕರ್ತರ ಸಂಘ ರಾಜ್ಯದಲ್ಲಿ ಕ್ರಿಯಾಶೀಲ ಹಾಗೂ ಜನಪರ ಸಂಘ ಎಂದು ಹೆಸರು ಪಡೆದಿದೆ ಎಂದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಕೋವಿಡ್ ಸಮಯದಲ್ಲಿ ಜಾಲಪ್ಪ ಆಸ್ಪತ್ರೆ ಹಾಗೂ ನಾರಾಯಣ ಹೃದಯಾಲಯಲ್ಲಿ ಸಾವಿರಾರು ಮಂದಿ ಚಿಕಿತ್ಸೆ ಪಡೆದಿದ್ದು, ಅವರ ಸೇವೆ ಸ್ಮರಣೀಯ ಎಂದರು.
ಪತ್ರಕರ್ತರು ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ. ತಪಾಸಣೆಯಿಂದ ಮುನ್ನೆಚ್ಚರಿಕೆ ವಹಿಸಬಹುದು, ದೇಹದೊಳಗಿನ ಕಾಯಿಲೆ ಗುರುತಿಸಿ ಚಿಕಿತ್ಸೆ ಪಡೆದುಕೊಂಡರೆ ಆರೋಗ್ಯ,ಜೀವ ರಕ್ಷಣೆ ಸಾಧ್ಯ ಈ ನಿಟ್ಟಿನಲ್ಲಿ ಜಾಲಪ್ಪ ಆಸ್ಪತ್ರೆ ಮಾಧ್ಯಮದವರ ಆರೋಗ್ಯ ರಕ್ಷಣೆಗೆ ಸದಾ ನೆರವಾಗಿದೆ ಎಂದು ತಿಳಿಸಿದರು.
ನಾರಾಯಣ ಹೃದಯಾಲಯದ ವೈದ್ಯ ಡಾ.ಯಶವಂತ್ ಲಕ್ಷ್ಮಯ್ಯ ಮಾತನಾಡಿ, ಹೃದಯ ಚಟುವಟಿಕೆಗಳಲ್ಲಿ ಹೃದಯ ತೊಡಗಿಸಿಕೊಳ್ಳಬೇಕು. 35 ವರ್ಷಕ್ಕೆ ಹೃದಯಾಘಾತ ಹೆಚ್ಚಿದೆ. ಕೋವಿಡ್ ಬಳಿಕ ಈ ಸಂಖ್ಯೆ ಹೆಚ್ಚಿರುವುದರಿಂದ ಜಾಗೃತಿ ಮೂಡಿಸಬೇಕು, ವರ್ಷಕ್ಕೆ ಒಮ್ಮೆ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು. ಆಗ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.
ಜಾಲಪ್ಪ ಆಸ್ಪತ್ರೆಯ ಶೇಖ್ ನಸೀರ್ ಸಾಬ್ ಮಾತನಾಡಿ, ಜಾಲಪ್ಪ ಆಸ್ಪತ್ರೆಯ ಆರೋಗ್ಯ ಸೇವೆಗೆ ಪತ್ರಕರ್ತರ ಸಂಘ ಸದಾ ಸ್ಪಂದಿಸಿದೆ, ನಮ್ಮ ಸೇವೆಯನ್ನು ಸಮಾಜಕ್ಕೆ ತಲುಪಿಸಿ ಸಮಾಜದ ಆರೋಗ್ಯ ರಕ್ಷಣೆಗೂ ನೀವು ನೆರವಾಗಿದ್ದೀರಿ, ನಿಮ್ಮ ಆರೋಗ್ಯ ರಕ್ಷಣೆ ಕಾರ್ಯದಲ್ಲಿ ನಾವೂ ಸದಾ ಮುಂಚೂಣಿಯಲ್ಲಿ ಇರುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ನಾರಾಯಣ ಹೃದಯಾಲಯದ ವೈದ್ಯರಾದ ಡಾ.ಕಿರಣ್‍ಕುಮಾರ್, ಮಾರ್ಕೇಟಿಂಗ್ ಮ್ಯಾನೇಜರ್ ಶಶಿಧರ್, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ವೆಂಕಟರಾಮರೆಡ್ಡಿ, ನರೇಶ್, ವೆಂಕಟರಾಂ, ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸದಸ್ಯ ವಿ.ಮುನಿರಾಜು, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಸ್ವಾಗತಿಸಿ, ನಿರೂಪಿಸಿದ್ದು, ಶಿಬಿರದಲ್ಲಿ ಪತ್ರಕರ್ತರು, ಅವರ ಕುಟುಂಬದವರು ತಪಾಸಣೆಗೆ ಒಳಗಾಗಿ ಶಿಬಿರದ ಪ್ರಯೋಜನ ಪಡೆದುಕೊಂಡರು.

ಕ್ಷೇತ್ರದ ಅಭಿವೃದ್ದಿಯೇ ನನ್ನ ಮೂಲ ಮಂತ್ರ, ನನಗೆ ಮತ ಹಾಕಿದ ಜನತೆಯ ಅಭಿವೃದ್ದಿಯೇ ನನ್ನ ಗುರಿ:ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ 1 : ಕ್ಷೇತ್ರದ ಅಭಿವೃದ್ದಿಯೇ ನನ್ನ ಮೂಲ ಮಂತ್ರ, ನನಗೆ ಮತ ಹಾಕಿದ ಜನತೆಯ ಅಭಿವೃದ್ದಿಯೇ ನನ್ನ ಗುರಿ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಪುರಸಭೆ ಕಛೇರಿಯಲ್ಲಿ ಮಂಗಳವಾರ ಪಟ್ಟಣ ಹಾಗು ತಾಲೂಕಿಗೆ ಸಂಬಂದಿಸಿದಂತೆ ಕುಂದುಕೊರತೆ ಸಭೆಯಲ್ಲಿ ಅರ್ಜಿಗಳನ್ನು ಸ್ವೀಕರಿಸಿ ಮಾತನಾಡಿದರು.
ಜನತೆ ನನ್ನ ಮೇಲಿನ ಪ್ರೀತಿ ವಿಶ್ವಾಸಕ್ಕೆ ಮತ ಹಾಕಿ ನನ್ನನ್ನು ಗೆಲ್ಲಿಸಿಕೊಟ್ಟಿದ್ದಾರೆ ಅದಕ್ಕಾಗಿ ಇಂದು ನಾನು ಅವರ ಋಣ ತೀರಿಸುವ ಉದ್ದೇಶದಿಂದ ಕ್ಷೇತ್ರದಾದ್ಯಂತ ಬಡವರಿಗೆ ಮನೆಗಳ ನಿರ್ಮಾಣ, ಶುದ್ದ ಕುಡಿಯುವ ನೀರಿನ ಸೌಲಭ್ಯ, ಸುಸಜ್ಜಿತ ರಸ್ತೆಗಳು ಸೇರಿದಂತೆ ಸಾರ್ವಜನಿಕರ ಬೇಕಾದ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡಲು ಶ್ರಮಿಸುತ್ತಿದ್ದೇನೆ ಎಂದರು.
ಕುಂದು ಕೊರತೆ ಸಭೆಯಲ್ಲಿ ಸುಮಾರು 100 ಅರ್ಜಿಗಳಷ್ಟು ಶಾಸಕರು ಪರಿಶೀಲಿಸಿ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳಿಗೆ ಅರ್ಜಿದಾರರ ಸಮಸ್ಯೆಗಳನ್ನು ಪರಿಹಾರ ಮಾಡಿಕೊಡುವಂತೆ ಸೂಚಿಸಿದರು. ಇತ್ತೀಚಿಗೆ ಅರಣ್ಯ ಇಲಾಖೆಯು ಒತ್ತುವರಿ ಮಾಡಿರುವ ಭೂಮಿಗೆ ಸಂಬಂದಿಸಿದಂತೆ ಹಾಗೂ ಕಂದಾಯ ಇಲಾಖೆಗೆ ಹೆಚ್ಚು ಅರ್ಜಿಗಳು ಬಂದಿದ್ದವು. ಹಾಗೂ ಪಟ್ಟಣದಲ್ಲಿನ ಉರ್ದು ಸರ್ಕಾರಿ ಶಾಲೆಗಳಿಗೆ ಬೇಟಿ ನೀಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಪರಿಶೀಲನೆ ಹಾಗೂ ಶಾಲೆಗಳ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದರು.
ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ವೇಣುಗೋಪಾಲರೆಡ್ಡಿ, ಎಪಿಎಂಸಿ ಮಾಜಿ ಸದಸ್ಯ ನಕ್ಕಲಗಡ್ಡ ನಾರಾಯಣಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹಾಗೂ ಪುರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಇದ್ದರು.

Father Muller Homoeopathic Medical College hosting

RGUHS Mysore Zone Throwball(M&W)and Tennikoit (W) Tournament 2023-24

RGUHS Mysore Zone Throwball (M&W) and Tennikoit (W) Tournament 2023-24was hosted by Father Muller Homoeopathic Medical College,Deralakatteon3rd & 4th October 2023.  Ms Deekshitha, National level Throwball player,Inauguratedthe tournament on3rd October 2023 at Father Muller Stadium of the college.Rev. Fr Richard A. Coelho, Director Father Muller Charitable Institutions presided over the programme. .

The inaugural programme began with a prayer song. Mr AlenJinson, Sports secretorywelcomed the gathering and introduced the chief guest.

Chief GuestMs Deekshitha in herinaugural address wished the players and said that “Throwball is a gameplay of agility and strategy, where every point is earned with determination and skill. Make sure to put out the unique Strength of each player in order for a good team play. Keeping your focus on the game at hand is the key to success”.

Rev. Fr Richard A. Coelhoin his presidential address ” It is commendable that the students from various streams of Medical Sciences are here serving their drive to be active in Sportsmanship. It is a step in the right direction as it only serves a higher purpose of upkeeping the health of an individual” and wished the teams give the best performance.

Dr DeerajFernandes, Sports incharge of the college, thanked everyone on behalf of the Institution.

The formal Inaugural function was concluded with the Institution Anthem and dignitaries were escorted to the stadium, to play the inaugural game.

Rev. FrAshwin LCrasta, Assistant Administrator Father Muller Homoeopathic Medical College & Hospital,  Dr E S J PrabhuKiran, Principal, FMHMC, Dr Vilma M D’Souza, Vice Principal, FMHMC, Dr Suresh N, Sports Coordinator, Mysore Zone, Mr ChennakeshavaM.G., Physical Education Instructor, FMHMC, Physical Education Directors of other colleges, Faculty members, Students’ Council members and students were present for the inaugural programme.

27 teams (Throwball Women), 13 teams (Throwball Men) and 10 teams (Tennikoit women)from various colleges of Mysore zone affiliated under RGUHSare participating in the tournament.

ಶ್ರೀನಿವಾಸಪುರ ಪುರಸಭೆ ಏರ್ಪಡಿಸಿದ್ದ ಪರಿಸರ ಚಿತ್ರ ರಚನಾ ಸ್ಪರ್ಧೆ

ಶ್ರೀನಿವಾಸಪುರ ಪುರಸಭೆ ವತಿಯಿಂದ ಏರ್ಪಡಿಸಿದ್ದ ಪರಿಸರ ಚಿತ್ರ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ಅಭ್ಯರ್ಥಿಗೆ ಪ್ರಮಾಣ ಪತ್ರ ನೀಡಲಾಯಿತು.

ಶ್ರೀನಿವಾಸಪುರ : ಶತಾಯುಷಿ (103) ಮುನಿಯಮ್ಮನವರಿಗೆ ಸನ್ಮಾನ

ಶ್ರೀನಿವಾಸಪುರ ತಾಲ್ಲೂಕಿನ ಕುಪ್ಪಳ್ಳಿ ಗ್ರಾಮದ ಶತಾಯುಷಿ ಮಹಿಳೆ ಮುನಿಯಮ್ಮ(103) ಅವರನ್ನು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮತಿ ವತಿಯಿಂದ ತಹಶೀಲ್ದಾರ್ ಶಿರಿನ್ ತಾಜ್ ಸನ್ಮಾನಿಸಿದರು.

ಶ್ರೀನಿವಾಸಪುರದಲ್ಲಿ ಆಟೋ ಚಾಲಕರ ಸಂಘದ ವತಿಯಿಂದ ಗಾಂಧಿ ಜಯಂತಿ

ಶ್ರೀನಿವಾಸಪುರದಲ್ಲಿ ಆಟೋ ಚಾಲಕರ ಸಂಘದ ವತಿಯಿಂದ ಗಾಂಧಿ ಜಯಂತಿ ಆಚರಿಸಲಾಯಿತು. ಸಂಘದ ಅಧ್ಯಕ್ಷ ಜಗನ್, ರಾಘವೇಂದ್ರ, ರಿಜ್ವಾನ್, ಜಹೀರ್, ಜಾವಿದ್, ಸುರೇಶ್, ಮಾರಪ್ಪ ವೆಂಕಟೇಶ್, ಅಶೋಕ್, ನಾಗರಾಜ್ ಇದ್ದರು.

ಶ್ರೀನಿವಾಸಪುರದ ಪುರಸಭಾ ಕಚೇರಿಯಲ್ಲಿ ಸೋಮವಾರ ಗಾಂಧಿ ಜಯಂತಿ

ಶ್ರೀನಿವಾಸಪುರದ ಪುರಸಭಾ ಕಚೇರಿಯಲ್ಲಿ ಸೋಮವಾರ ಗಾಂಧಿ ಜಯಂತಿ ಆಚರಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ವ್ಯವಸ್ಥಾಪಕ ನವೀನ್ ಚಂದ್ರ, ಕೆ.ಜಿ.ರಮೇಶ್, ವಿ.ನಾಗರಾಜ್, ಎಂ.ಶಂಕರ್, ಕೆ.ಎಸ್.ಲಕ್ಷ್ಮೀಶ, ಸಂತೋಷ್, ಸುರೇಶ್, ಶಿವಪ್ರಸಾದ್, ಶ್ರೀನಾಥ್, ಬಿ.ವೆಂಕಟರೆಡ್ಡಿ, ನಾಗರಾಜ್, ಆಯಿಷಾ ನಯಾಜ್, ವಿ.ನಾಗರಾಜ್ ಇದ್ದರು.

ಬೀಜಾಡಿ: ಹಳೆ ವಿದ್ಯಾರ್ಥಿಗಳ ಸಮ್ಮಿಲನ ‘ರೂವಾರಿ’ ಸಮಾರೋಪ


ಬೀಜಾಡಿ: ಶಾಲೆಯ ಅಮೃತ ಮಹೋತ್ಸವದ ಪೂರ್ವಭಾವಿಯಾಗಿ ಹಳೆ ವಿದ್ಯಾರ್ಥಿ ಸಂಘ ಹಳೆ ವಿದ್ಯಾರ್ಥಿಗಳನ್ನು ಒಟ್ಟು ಸೇರಿಸುವ ನಿಟ್ಟಿನಲ್ಲಿ ‘ರೂವಾರಿ’ ಭಾವ ನೆನಪುಗಳ ಸಂಗಮ ಕಾರ್ಯಕ್ರಮ ಸಂಘಟಿಸಿರುವುದು ಒಳ್ಳೆಯ ಬೆಳವಣೆಗೆ. ಇದು ಮುಂದಿನ ದಿನದಲ್ಲಿ ಶಾಲೆಯ ಅಭಿವೃದ್ದಿಗೆ ಸಹಾಯವಾಗಲಿದೆ ಎಂದು ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಶಿಕ್ಷಕ ಕೃಷ್ಣಮೂರ್ತಿ ಪಿ.ಕೆ ಹೇಳಿದರು.
ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೀಜಾಡಿ ಮೂಡು ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಶಾಲಾ ಅಮೃತ ಮಹೋತ್ಸವದ ಪೂರ್ವಭಾವಿಯಾಗಿ ನಡೆದ ಹಳೆ ವಿದ್ಯಾರ್ಥಿಗಳ ಸಮ್ಮಿಲನ ‘ರೂವಾರಿ-2023’ ಭಾವ-ನೆನಪುಗಳ ಸಂಗಮದ ಸಮಾರೋಪ ಸಮಾರಂಭದಲ್ಲಿ ಸಮಾರೋಪದ ಮಾತುಗಳನ್ನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅನೂಪ್‍ಕುಮಾರ್ ಬಿ.ಆರ್ ವಹಿಸಿದ್ದರು.
ಉದ್ಯಮಿ,ದಾನಿ ವಿಶ್ವನಾಥ ಹೆಗ್ಡೆ, ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ವಾದಿರಾಜ್ ಹೆಬ್ಬಾರ್, ಚಂದ್ರ ಬಿ.ಎನ್., ಬೀಜಾಡಿ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯಿನಿ ಪ್ರವೀಣಾ ಶೆಟ್ಟಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಬೀಜಾಡಿ ಮೂಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿಯ ಅಧ್ಯಕ್ಷ ಪ್ರಕಾಶ್, ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಅಮೀನ್, ಕೋಶಾಧಿಕಾರಿ ನವೀನ್ ಕುಮಾರ್, ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷ ಮಹೇಶ್ ಮೊಗವೀರ, ನಂದಿನಿ ಫ್ರೆಂಡ್ಸ್‍ನ ಅಧ್ಯಕ್ಷ ಪ್ರಶಾಂತ್ ಗೋಳಿಬೆಟ್ಟು, ಬೆಳ್ಳಂಕಿ ಫ್ರೆಂಡ್ಸ್‍ನ ಅಧ್ಯಕ್ಷ ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿಗಳಾದ ಗೀತಾ ಸ್ವಾಗತಿಸಿದರು. ವೀಣಾ ವಂದಿಸಿದರು. ಹಳೆ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಗಣೇಶ್ ಕಾಂಚನ್ ಸಹಕರಿಸಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ ಆಚರಣೆ

” ಗಾಂಧೀಜಿಯವರು ಭಾರತವನ್ನು ಸ್ವತಂತ್ರಗೊಳಿಸುವಲ್ಲಿ ಮಾತ್ರವಲ್ಲದೇ, ದೇಶ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕುವುದರಲ್ಲಿಯೂ ಮುಂಚೂಣಿಯ ಪಾತ್ರವಹಿಸಿದ್ದರು. ಭಾರತದ ಸಂವಿಧಾನದಲ್ಲಿಯೂ ಅಳವಡಿಸಲಾದ ರಾಮರಾಜ್ಯದ ಪರಿಕಲ್ಪನೆ ಮತ್ತು ಸರಳತೆ, ಸ್ವಚ್ಚತೆಯೆಂಬ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಜನಜೀವನದಲ್ಲಿ ತಲುಪಿಸಿದವರೂ ಗಾಂಧೀಜಿಯವರು. ಹಾಗೆಯೇ ಗಾಂಧೀಜಿಯವರ ಶ್ರೇಷ್ಠ ತತ್ವ ಮತ್ತು ಮೌಲ್ಯಗಳನ್ನು ಅತ್ಯಂತ ಸಾರ್ಥಕ ರೀತಿಯಲ್ಲಿ ಬದುಕಿ ಯಶಸ್ವಿಯಾದವರು ಮಾಜಿ ಪ್ರಧಾನಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ” ಎಂದು ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿಯ ಆಚರಣೆಯ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ್ ಶೆಟ್ಟಿಯವರು ಕರೆ ನೀಡಿದರು. ಗಾಂಧಿ‌ ಮತ್ತು ಶಾಸ್ತ್ರಿ ಜಯಂತಿಯ ಅಂಗವಾಗಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಮತ್ತು ಮಾಜಿ ಪ್ರಧಾನಿ‌ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.  ಕಾಲೇಜಿನ‌ ಎಲ್ಲ ಬೋದಕ- ಬೋಧಕೇತರ ಸಿಬ್ಬಂಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಕಾರ್ಯಕ್ರಮ ನಿರ್ವಹಿಸಿದರು.