ಶ್ರೀನಿವಾಸಪುರ ಜಿಲ್ಲಾಧಿಕಾರಿ ಅಕ್ರಮಪಾಷ ಇವರಿಂದ ಪುರಸಭೆ ಕಛೇರಿಯ ಕಡತಗಳ ಪರಿಶೀಲನೆ

ಶ್ರೀನಿವಾಸಪುರ 3 : ಪಟ್ಟನದ ಪುರಸಭೆ ಕಛೇರಿಗೆ ಭಾನುವಾರ ಪುರಸಭೆಯ ಕಡತಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ ಅಕ್ರಮಪಾಷ ಮಾತನಾಡಿದರು.
ಪುರಸಭಾ ವ್ಯಾಪ್ತಿಯ ಇಂದಿರಾ ನಗರ , ಮಾರತಿ ನಗರ, ಡಾ. ಜಾಕೀರ್ ಹುಸೇನ್ ಮೊಹಲ್ಲಾ , ವೆಂಕಟೇಶ್ವರ ಬಡವಾಣೆ ಸೇರಿದಂತೆ ವಿವಿಧ ಬಡವಾಣೆಗಳಿಗೆ ಬೇಟಿ ನೀಡಿ ಸ್ವಚ್ಚತೆ, ಬೀದಿ ದೀಪಗಳ ಸಿಸಿಎಂಎಸ್ ಲೈಟ್ಸ್ ನಿರ್ವಹಣೆ ಹಾಗೂ ಮುಖ್ಯ ಮಂತ್ರಿಗಳ ನಗರೋತ್ಥಾನ ಯೋಜನೆಯಡಿಯಲ್ಲಿ ನಿರ್ವಹಿಸಿರುವ ಸಿಸಿ ರಸ್ತೆ , ಮತ್ತು ಚರಂಡಿ ಕಾಮಗಾರಿ ಸೇರಿದಂತೆ ಡ್ರೈವೇಸ್ಟ್ ಮ್ಯಾನೇಜ್‍ಮೆಂಟ್ ನಿರ್ವಹಣೆ ಘಟಕಗಳನ್ನು ಖುದ್ಧಾಗಿ ಪರಿಶೀಲಿಸಿದರು.
ನಂತರ ಪುರಸಭಾ ಕಛೇರಿಗೆ ಬೇಟಿ ನೀಡಿ ಕೆಎಂಎಫ್ -24 ಡಾಟಾ ಎಂಟ್ರಿ ಮತ್ತು ವಿವಿಧ ಲಾಗಿನ್‍ಗಳಲ್ಲಿ ಸ್ವತಃ ತಾವೇ ಕರವಸೂಲಿಗಾರರ ಜೊತೆ ಆಸ್ತಿ ಕಣಜ ತಂತ್ರಾಂಶದಲ್ಲಿ ದತ್ತಾಂಶ ಪರಿಶೀಲನೆ ಮಾಡಿದ ಅವರು ಕೆಎಂಎಫ್ -24 ವಹಿಯಲ್ಲಿ ನಿರ್ವಹಿಸಿರುವ ವಿವರ ಸೇರಿದಂತೆ ಪುರಸಭಾ ವಾಣಿಜ್ಯ ಮಳಿಗೆಗೆಳ ಬಾಡಿಗೆ ವಸೂಲಾತಿ ಖಾಲಿ ಇರುವ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ, ಆಸ್ತಿ ತೆರಿಗೆ ಹಾಗೂ ಎಲ್ಲಾ ವಿವರಗಳ ಮಾಹಿತಿ ಪಡೆದುಕೊಂಡರು.
ಯೋಜನಾ ನಿರ್ದೇಶಕರ ಕಛೇರಿಯ ಕಾರ್ಯಪಾಲಕ ಆಭಿಯಂತರರಾದ ಶ್ರೀನಿವಾಸ್, ಸಹಾಯಕ ಕಾರ್ಯಪಾಲಕ ಅಭಿಯಂತರ ಚಲಪತಿ, ಪುರಸಭಾ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ , ಕಂದಾಯ ಅಧಿಕಾರಿ ವಿ.ನಾಗರಾಜ್, ಕಿರಿಯ ಅಭಯಂತರ ವಿ.ಶ್ರೀನಿವಾಸಪ್ಪ, ಹಿರಿಯ ಆರೋಗ್ಯ ಅಧಿಕಾರಿ ಕೆ.ಜಿ.ರಮೇಶ್, ನೋಡಲ್ ಅಧಿಕಾರಿ ಚೌಡೇಗೌಡ , ಸಿಬ್ಬಂದಿಗಳಾದ ಸಂತೋಷ್, ಸುರೇಶ್, ಶ್ರೀನಾಥ್ ಇದ್ದರು.

ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ತಾಲೂಕು ವಿಶ್ವಕರ್ಮ ಸಮುದಾಯದ ವತಿಯಿಂದ ವಿಶ್ವಕರ್ಮ ದಿನಾಚರಣೆ

ಶ್ರೀನಿವಾಸಪುರ : ಪಟ್ಟಣದ ಎಂಜಿ ರಸ್ತೆ ಬಾಲಾಜಿ ಕಲ್ಯಾಣ ಮಂಟಪದಲ್ಲಿ ತಾಲೂಕು ವಿಶ್ವಕರ್ಮ ಸಮುದಾಯದವತಿಯಿಂದ ಭಾನುವಾರ ವಿಶ್ವಕರ್ಮ ದಿನಾಚರಣೆ ಆಯೋಜಿಸಲಾಗಿತ್ತು.
ತಾಲೂಕು ವಿಶ್ವಕರ್ಮ ಸಮುದಾಯದ ಅಧ್ಯಕ್ಷ ಕೆ.ಮೋಹನಾಚಾರಿ, ವಕೀಲ ಸದಾಶಿವಾಚಾರಿ, ಮುಖಂಡರಾದ ರವಿಚಂದ್ರಚಾರಿ, ರಾಮಚಂದ್ರಾಚಾರಿ, ರತ್ನಚಾರಿ, ಕೃಷ್ಣಮೂರ್ತಿ, ಉಪ್ಪಕುಂಟೆ ಶಿಲ್ಪಿ ಮಂಜುನಾಥಚಾರಿ , ನಂದೀಶ್, ಸೋಮಶೇಖರ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷ ರಾಧಮ್ಮ, ಸದಸ್ಯೆ ಅನ್ನಪೂರ್ಣಮ್ಮ ಅರ್ಚಕರಾದ ಮಂಜುನಾಥ್, ರಮೇಶ್ ಇದ್ದರು.

ಸಾಲ ಪಡೆದಿರುವ ಫಲಾನುಭವಿಗಳು ನಿಗದಿತ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಬೇಕು – ವಿ.ಅಯ್ಯಪ್ಪ

ಶ್ರೀನಿವಾಸಪುರ: ಸಾಲ ಪಡೆದಿರುವ ಫಲಾನುಭವಿಗಳು ನಿಗದಿತ ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಬೇಕು ಎಂದು ಕಸಬಾ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ವಿ.ಅಯ್ಯಪ್ಪ ಹೇಳಿದರು.
ಪಟ್ಟಣದ ಕಸಬಾ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘದ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದ ಸದಸ್ಯರಿಗೆ ಪಕ್ಷಾತೀತವಾಗಿ ಸಾಲ ವಿತರಣೆ ಮಾಡಲಾಗಿದೆ. ಮರುಪಾವತಿ ಪ್ರಮಾಣ ತೃಪ್ತಿಕರವಾಗಿದ್ದರೂ, ಇನ್ನಷ್ಟು ಪ್ರಾಮಾಣಿಕವಾಗಿ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಬೇಕು. ಸಂಘದ ಕಟ್ಟಡ ಬಾಡಿಗೆಯಿಂದ ಮಾಸಿಕ ರೂ.75 ಸಾವಿರ ಆದಾಯ ಬರುತ್ತದೆ ಎಂದು ಹೇಳಿದರು.
ಸಭೆ ರೂ.17.80 ಲಕ್ಷ ವಾರ್ಷಿಕ ಬಜೆಟ್‍ಗೆ ಅನುಮೋದನೆ ನೀಡಿತು.
ನಿರ್ದೇಶಕರಾದ ಶಾಂತಮ್ಮ, ವೆಂಕಟರೆಡ್ಡಿ, ಎಂ.ಬೈರೆಡ್ಡಿ, ಮುನಿಯಪ್ಪ, ಶಬ್ಬೀರ್ ಅಹ್ಮದ್ ಪಾಷ, ಸೀತಾರಾಮರೆಡ್ಡಿ, ನಾಗರಾಜು, ಗುರಪ್ಪ, ನಂಜುಂಡಪ್ಪ, ಸಿ.ಎನ್.ಶಿವಾರೆಡ್ಡಿ, ಎಂ.ದೇವಿಕಾ, ಸಿ.ಎನ್.ವಿನೋದ್ ಇದ್ದರು.

ಉದ್ಯಮಿಯನ್ನು ವಂಚಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಚೈತ್ರಾಳಿಂದ ಕೋಟಿ ಕೋಟಿ ಹಣ ಆಸ್ತಿ ಜಪ್ತಿ

ಕುಂದಾಪುರ: ಬಿಜೆಪಿ ಟಿಕೆಟ್‌ ಕೊಡಿಸುವುದಾಗಿ 5 ಕೋಟಿ ರೂ. ಪಡೆದು ಉದ್ಯಮಿಯನ್ನು ವಂಚಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಹಿಂದೂಪರ ಸಂಘಟನೆಯ ಚೈತ್ರಾ ಕುಂದಾಪುರ ಕೋಟಿ ಕೋಟಿ ಆಸ್ತಿಯ ಒಡತಿ ಎಂಬುದು ಪೊಲೀಸ್‌ ತನಿಖೆಯಿಂದ ಬಹಿರಂಗವಾಗಿದೆ.ಚೈತ್ರಾ ಕುಂದಾಪುರ ಮನೆಯಲ್ಲಿ 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಸಂಬಂಧಿಕರ ಹೆಸರಿನಲ್ಲಿ ಕೋಟಿ ರೂಪಾಯಿ ಠೇವಣಿ ಇಟ್ಟಿರುವುದು ಪತ್ತೆಯಾಗಿದೆ.ಚೈತ್ರಾ ಕುಂದಾಪುರ ಮನೆಯಲ್ಲಿ 65 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಸಂಬಂಧಿಕರ ಹೆಸರಿನಲ್ಲಿ ಕೋಟಿ ರೂಪಾಯಿ ಠೇವಣಿ ಇಟ್ಟಿರುವುದು ಪತ್ತೆಯಾಗಿದೆ. ಎಲ್ಲಾ ಸೇರಿಸಿ ಸುಮಾರು 4 ಕೋಟಿ ರೂ. ನಗದು ಪತ್ತೆಯಾಗಿದ್ದು, ಚೈತ್ರಾ ಕುಂದಾಪುರ ಖಜಾನೆ ಕಂಡು ಸಿಸಿಬಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಇನ್ನು ಬಾಗಲಕೋಟೆಯಲ್ಲಿ ಚೈತ್ರಾ ಅವರ ಕಾರು ಪತ್ತೆಯಾಗಿದ್ದು, ಪೊಲೀಸರು ಈ ಕಾರನ್ನು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗೆ ಖರೀದಿಸಿದ್ದ ಕಿಯಾ ಕೇರೆನ್ಸ್‌ ಕಾರು, ಮನೆ,ಸೈಟು ಹಾಗೂ ಎರಡು ಕೋಟಿ ರೂಪಾಯಿ ಎಫ್‌.ಡಿ ಹಣದನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.ಸೊಲ್ಲಾಪುರದ ಬಾರ್‌ ಅ್ಯಂಡ್‌ ರೆಸ್ಟೊರೆಂಟ್‌ ಮುಂದೆ ನಿಲ್ಲಿಸಿದ್ದ ಚೈತ್ರಾ ಅವರ ಕಾರನ್ನು ಅವರ ಸ್ನೇಹಿತ ಎಂದು ಹೇಳಲಾಗುವ ಕಿರಣ್‌ ಎನ್ನುವವರು ಸೆಪ್ಟೆಂಬರ್‌ 9 ರಂದು ಮುಧೋಳಕ್ಕೆ ತಂದಿದ್ದರು. ಕಿರಣ್‌ ಸೊಲ್ಲಾಪುರಕ್ಕೆ ಹೋಗಿ ಕಿಯಾ ಕಾರು ತಂದು ತನ್ನ ಡ್ರೈವಿಂಗ್‌ ಸ್ಕೂಲ್‌ನಲ್ಲಿಟ್ಟುಕೊಂಡಿದ್ದರು. ಚೈತ್ರಾ ಕುಂದಾಪುರ, ಪಿಎ ಶ್ರೀಕಾಂತ್‌, ಕಿರಣ್‌ ಕರೆಯನ್ನು ಸಿಸಿಬಿ ಪೊಲೀಸರು ಟ್ರೇಸ್‌ ಮಾಡಿದ್ದಾರೆ. ಈ ಆಧಾರದ ಮೇಲೆ ಕಿರಣ್‌ ಪಶಕ್ಕೆ ಪಡೆದು ಕಾರು ಜಕ್ತಿ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.

ಚೈತ್ರಾ ಕುಂದಾಪುರ ಅವರಿಗೆ ಸೇರಿದ್ದ 3 ಕೋಟಿ ರೂ. ಮೌಲ್ಯದ ಸ್ವತ್ತನ್ನು ಸಹ ಪೊಲೀಸರು ಜಶ್ತಿ ಮಾಡಿದ್ದಾರೆ. ಚೈತ್ರಾ ಮತ್ತು ಶ್ರೀಕಾಂತ್‌ ಹೆಸರಲ್ಲಿ ಫಿಕ್ಸೆಡ್‌ ಡೆಪಾಸಿಟ್‌ ಇಟ್ಟಿದ್ದ 1.8 ಕೋಟಿ ರೂ. ಹಣವನ್ನು ಜಫ್ತಿ ಮಾಡಿಕೊಳ್ಳಲಾಗಿದೆ. ಸ್ಥಳೀಯ ಸೊಸೈಟಿಯಲ್ಲಿದ್ದ 40 ಲಕ್ಷ ರೂ. ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಂಚನೆಯ ಹಣದಲ್ಲಿ ಖರೀದಿ ಮಾಡಿದ್ದ 65 ಲಕ್ಷ ರೂ. ಮೊತ್ತದ
ಚಿನ್ನಾಭರಣವನ್ನೂ ಪಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೋಡಿ ಕಿನಾರ ಕಡಲ ತೀರದಲ್ಲಿ ಮರಳು ಶಿಲ್ಪ “ವರ್ಣ ವಿನಾಯಕ ” ಮೋದಕ ಪ್ರಿಯ ಸೊಂಡಿಲ ಬಾಲ ಗಣಪ

ಮರಳು ಶಿಲ್ಪ:- ಪ್ರಥಮ ಪೂಜಿತ, ಜ್ಞಾನ ಮತ್ತು ಬುದ್ದಿಯ ಅಧಿಪತಿ, ಗಣಗಳ ಒಡೆಯನಾದ ಗಣೇಶನ ಹಬ್ಬದ ಆಚರಣೆ ದೇಶಾದ್ಯಂತ ತಯಾರಿಯಲ್ಲಿರುವ ಈ ಸುಸಂದರ್ಭದಲ್ಲಿ ಕಲಾಕೃತಿಯ ಮೂಲಕ 15 ವಿದ್ಯಾರ್ಥಿಯರ ಕೈಯಲ್ಲಿ ಮೂಡಲಿರುವ ಗಣೇಶ ಮೂಡಿ ಬಂದನು.

*ಕಲಾಕೃತಿಯ ವಿಶೇಷತೆ*
ಮೋದಕ ಪ್ರಿಯ ಸೊಂಡಿಲ ಬಾಲ ಗಣಪ ಪ್ರಕೃತಿ ಮಡಿಲಲ್ಲಿ -ಬುದ್ದಿಯ ಪ್ರತೀಕವಾಗಿ ಮೂಷಿಕ ವಾಹನವನ್ನು ವಿಶ್ವ ಪರ್ಯಾಟನೆಯ ಸಂಕೇತವಾಗಿ ಶಿವಲಿಂಗದೊಂದಿಗೆ ಬಣ್ಣದ ಮೂಲಕ ಕಂಗೊಳಿಸುವ “ವರ್ಣ ವಿನಾಯಕ ” ಎಂಬ ಶೀರ್ಷಿಕೆಯಡಿಯಲ್ಲಿ ಕಲಾವಿದ ಮತ್ತು ತ್ರಿವರ್ಣ ಕಲಾಕೇಂದ್ರದ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ ರಚಿಸಲಾಯಿತು.

ಭಾಗವಹಿಸಿದ ವಿದ್ಯಾರ್ಥಿಗಳು
ಅದ್ವಿತ್ ಕುಮಾರ್, ಸಮೃದ್ಧಿ, ಕಾರ್ತಿಕ್ ಕೊತ್ವಲ್, ಯಶಸ್ ಕೆ. ಹೆಚ್., ಕೃತಿ ಕೆ.ದೇವಾಡಿಗ, ಸಮರ್ಥ್, ತನ್ಮಯ್ ಪಡ್ತೀ, ನಿಯತಿ ಎನ್. ಪೈ, ನಿಧಿ ವಿಜಯ್, ರಿತೇಶ್ ಪ್ರಭು, ನಿಶ್ಚಿತ ವಿ. ಹೆಚ್, ಸಾತ್ವಿಕ್ ಶೆಣೈ, ಪ್ರಣೀತ್ ಪಿ. ಶೆಟ್ಟಿ, ಯಶ್ಮಿತಾ ಜಿ.ರವರು 4 ಅಡಿ ಎತ್ತರ ಮತ್ತು 9 ಅಡಿ ಅಗಲಗಳುಳ್ಳ ಬಣ್ಣದ ಕಲಾಕೃತಿಯನ್ನು ರಚಿಸಿದರು.
ಶಿಕ್ಷಕಿ ಶ್ರೀಮತಿ ಚೇತನಾ ಜಿ. ಸಂತೋಷ್ ಹಾಲಾಡಿ ಸಹಕರಿಸಿದರು.

ಭಾರತ ಏಷ್ಯಾ ಕಪ್ 2023 ರ ಛಾಂಪಿಯನ್ – ಶ್ರೀಲಂಕಾ ವಿರುದ್ಧ 10 ವಿಕೆಟ್‌ ಅಂತರದ ಭರ್ಜರಿ ಗೆಲುವು ಶ್ರೀಲಂಕಾ ಅಲ್ಪ ಮೊತ್ತಕ್ಕೆ ಔಟ್

ಕೊಲಂಬೊ: ಏಷ್ಯಾ ರಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ 10 ವಿಕೆಟ್‌ ಅಂತರದ ಭರ್ಜರಿ ಗೆಲುವು ದಾಖಲಿಸುವ ಮೂಲಕ ಭಾರತ ಏಷ್ಯಾ ಕಪ್‌ ಮುಡಿಗೇರಿಸಿಕೊಂಡಿದೆ. ದಾಖಲೆಯ 8ನೇ ಬಾರಿ ಭಾರತ ತಂಡ ಏಷ್ಯಾ ಕಪ್ ಛಾಂಪಿಯನ್ ಆಗಿ ಹೊರಹೊಮ್ಮಿದೆ. ಕೊಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಟಾಸ್‌ ಗೆದ್ದ
ಲಂಕಾ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿತ್ತು. ಆದರೆ ಮೊಹಮ್ಮದ್‌ ಸಿರಾಜ್‌ ಮಾರಕ ದಾಳಿಗೆ ತತ್ತರಿಸಿದ ಲಂಕಾ ಕೇವಲ 15.2 ಓವರ್‌ಗಳಲ್ಲಿ 50 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ದಾಖಲೆಯ ಕಡಿಮೆ ಕೊತ್ತಕ್ಕೆ ಕುಸಿಯಿತು.

ಜೀವನಶ್ರೇಷ್ಠ ಬೌಲಿಂಗ್‌ ಸಾಧನೆ ಮಾಡಿದ ಸಿರಾಜ್‌ ಏಳು ಓವರ್‌ಗಳಲ್ಲಿ 21 ರನ್‌ ತೆತ್ತು ಆರು ವಿಕೆಟ್‌ ಉಡಾಯಿಸಿದರು. ಒಂದೇ ಓವರ್‌ನಲ್ಲಿ ಮೇಡನ್‌ ಸಹಿತ ನಾಲ್ಕುವಿಕೆಟ್‌ ಶಬಳಿಸಿದ್ದು ವಿಶೇಷವಾಗಿತ್ತು.

ಹಾರ್ದಿಕ್‌ ಪಾಂಡ್ಯ ಮೂರು ಹಾಗೂ ಜಸ್‌ಪ್ರೀತ್‌ ಬೂಮ್ರಾ ಒಂದು ವಿಕೆಟ್‌ ಉಡಾಯಿಸಿದರು, ಬಳಿಕ ಈ ಗುರಿ ಬೆನ್ನಟ್ಟಿದ ಭಾರತ 6.1 ಓಪರ್‌ಗಳಲ್ಲಿ ಗೆಲುವಿನ ದಡ ಸೇರಿತು. ಭಾರತ ನೋ ಲಾಸ್ ಜಯ ಗಳಿಸಿತು. ಶುಭಮನ್‌ ಗಿಲ್‌ 27 ಹಾಗೂ ಇಶಾನ್‌ ಕಿಶನ್‌ 23 ರನ್‌ ಗಳಿಸಿದರು.

ಶ್ರೀನಿವಾಸಪುರ ಪುರಸಭಾ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿ ಅಕ್ರಂಪಾಷರವರು ಹಲವಾರು ಕಾಮಗಾರಿಗಳ ಖುದ್ದು ಪರಿಶೀಲನೆ ನಡೆಸಿದರು

ಶ್ರೀನಿವಾಸಪುರ : ಪುರಸಭಾ ವ್ಯಾಪ್ತಿಯ ಇಂದಿರಾ ನಗರ, ಮಾರುತಿ ನಗರ, ಡಾ. ಜಾಕೀರ್ ಹುಸೇನ್ ಮೊಹಲ್ಲಾ, ವೆಂಕಟೇಶ್ವರ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀ ಅಕ್ರಂಪಾಷ ರವರು ಇಂದು ಭೇಟಿ ನೀಡಿ ಸ್ವಚ್ಛತೆ, ಬೀದಿ ದೀಪಗಳ CCMS Lights ನಿರ್ವಹಣೆ ಹಾಗೂ ಸನ್ಮಾನ್ಯ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿಯಲ್ಲಿ ನಿರ್ವಹಿಸಿರುವ ಸಿ.ಸಿ. ರಸ್ತೆ ಮತ್ತು ಚರಂಡಿ ಕಾಮಗಾರಿ ಸೇರಿದಂತೆ Dry Weste Management  ನಿರ್ವಹಣೆ ಘಟಕಗಳನ್ನು ಖುದ್ದಾಗಿ ಪರಿಶೀಲಿಸಿದರು. ನಂತರ ಪುರಸಭಾ ಕಚೇರಿಗೆ ಭೇಟಿ ನೀಡಿದ ಮಾನ್ಯ ಜಿಲ್ಲಾಧಿಕಾರಿಗಳು ಕೆ.ಎಂ.ಎಫ್-24 ಡಾಟಾ ಎಂಟ್ರಿ ಮತ್ತು ವಿವಿಧ ಲಾಗಿನ್ ಗಳಲ್ಲಿ ಸ್ವತಃ ತಾವೇ ಕರವಸೂಲಿಗರರ ಜೊತೆ ಆಸ್ತಿ ಕಣಜ ತಂತ್ರಾಂಶದಲ್ಲಿ ದತ್ತಾಂಶ ಪರಿಶೀಲನೆ ಮಾಡಿದ ಅವರು ಕೆಎಂಎಫ್-24 ವಹಿಯಲ್ಲಿ ನಿರ್ವಹಿಸಿರುವ ವಿವರ ಸೇರಿದಂತೆ ಪುರಸಭಾ ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಾತಿ, ಖಾಲಿ ಇರುವ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆ, ಆಸ್ತಿ ತೆರಿಗೆ, ನೀರಿನ ತೆರಿಗೆ ಹಾಗೂ ಎಲ್ಲಾ ಸೆಸ್ಗಳ ವಿವರಗಳ ಮಾಹಿತಿ ಪಡೆದುಕೊಂಡರು. ಮಾನ್ಯ ಯೋಜನಾ ನಿದೇಶಕರ ಕಛೇರಿಯ ಕಾರ್ಯಪಾಲಕ ಅಭಿಯಂತರರಾದ ಶ್ರೀ ಶ್ರೀನಿವಾಸ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ಚಲಪತಿ, ಪುರಸಭಾ ಮುಖ್ಯಾಧಿಕಾರಿ ಶ್ರೀ ವೈ. ಎನ್. ಸತ್ಯನಾರಾಯಣ, ಕಂದಾಯಧಿಕಾರಿ ಶ್ರೀ ವಿ. ನಾಗರಾಜು, ಕಿರಿಯ ಅಭಿಯಂತರಾದ ಶ್ರೀ ವಿ. ಶ್ರೀನಿವಾಸಪ್ಪ, ಹಿ.ಆ.ನಿ ಶ್ರೀ ಕೆ. ಜಿ. ರಮೇಶ್ ನೋಡಲ್ ಅಧಿಕಾರಿ ಶ್ರೀ ಚೌಡೇಗೌಡ ಹಾಗೂ ಪುರಸಭಾ ಸಿಬ್ಬಂಧಿ ಈ ಸಂದರ್ಭದಲ್ಲಿ ಹಾಜರಿದ್ದರು.

ದಿಂಬಾಲ ಗ್ರಾಮದ ಹೆಲ್ತ್ ಅಂಡ್ ವೆಲ್ನೆಸ್ ಸೆಂಟರ್‍ನ ಅಂಗನವಾಡಿ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಕ್ಷಯ ಮುಕ್ತ ಭಾರತ ಕಾರ್ಯಕ್ರಮ

ಶ್ರೀನಿವಾಸಪುರ: ತಾಲೂಕಿನ ರೋಣೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವತಿಯಿಂದ ಶನಿವಾರ ದಿಂಬಾಲ ಗ್ರಾಮದ ಹೆಲ್ತ್ ಅಂಡ್ ವೆಲ್ನೆಸ್ ಸೆಂಟರ್‍ನ ಅಂಗನವಾಡಿ ಕೇಂದ್ರದಲ್ಲಿ ಪ್ರಧಾನ ಮಂತ್ರಿ ಕ್ಷಯ ಮುಕ್ತ ಭಾರತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು .
ರೋಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಉಮಾಭಾರತಿ, ಬಿಎಇಒ ಆಂಜಲಮ್ಮ, ಎಚ್‍ಐಒ ವಿಜಯಲಕ್ಷ್ಮಿ, ಸಿಎಚ್‍ಒ ಮೀನಾಕ್ಷಿ, ಪಿಎಚ್‍ಸಿಒ ಜಿ.ಸಿ.ಶ್ಯಾಮಲ, ಗ್ರಾ.ಪಂ ಸದಸ್ಯ ವೆಂಕಟರಮಣಾರೆಡ್ಡಿ ಇದ್ದರು.

ಸಂತ ಮದರ್ ತೆರೇಸಾ ಸ್ಮಾರಕ ದಿನದ ಅಂಗವಾಗಿ ಜಿಲ್ಲಾ ಮಟ್ಟದ ವಿಚಾರ ಸಂಕಿರಣದ ಅಂಗವಾಗಿ

ಮಂಗಳೂರು: ಮದರ್ ತೆರೆಸಾ ಅವರ 26ನೇ ವರ್ಷಾಚರಣೆ ಅಂಗವಾಗಿ ಮಾನವೀಯತೆಯ ಪ್ರತಿರೂಪವಾದ ಸಂತ ಮದರ್ ತೆರೇಸಾ ಅವರ 26ನೇ ವಾರ್ಷಿಕೋತ್ಸವದ ಅಂಗವಾಗಿ ‘ಎಲ್ಲೆಡೆ ಶಾಂತಿ ಪಸರಿಸಲಿ’ ಎಂಬ ಘೋಷ ವಾಕ್ಯದೊಂದಿಗೆ ದ.ಕ.ಜಿಲ್ಲಾ ಮಟ್ಟದ ವಿಚಾರ ಸಂಕಿರಣವನ್ನು ಸೆ.21ರಂದು ಬೆಳಗ್ಗೆ 10 ಗಂಟೆಗೆ ನಗರದ ಕುದ್ಮುಲರಂಗರಾವ್ ಪುರಸಭಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ‘ವೈವಿಧ್ಯಮಯ ಭಾರತದಲ್ಲಿ ಪ್ರೀತಿಯ ಕೋಶಗಳು’ ಥೀಮ್.
ವಿಚಾರ ಸಂಕಿರಣವನ್ನು ಹಿರಿಯ ಪತ್ರಕರ್ತ ಹಾಗೂ ಮುಖ್ಯಮಂತ್ರಿಗಳ ಮಾಜಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟೂರು ಉದ್ಘಾಟಿಸಲಿದ್ದು, ಖ್ಯಾತ ಸಾಹಿತಿ, ಸಾಹಿತಿ ಡಾ.ಕೆ.ಶೆರಿಫಾರ್ ವಿಷಯ ಮಂಡಿಸಲಿದ್ದು, ಮಂಗಳೂರು ಮಾಜಿ ಮೇಯರ್ ಕೆ.ಅಶ್ರಫ್ ನೆರವೇರಿಸಲಿದ್ದಾರೆ. ನಗರಸಭೆ, ಪ್ರತಿಕ್ರಿಯೆ ನೀಡಲಿದೆ. ಸಭೆಯ ಅಧ್ಯಕ್ಷತೆಯನ್ನು ವೇದಿಕೆಯ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ ವಹಿಸಲಿದ್ದಾರೆ. ಉದ್ಘಾಟನಾ ಸಮಾರಂಭಕ್ಕೂ ಮುನ್ನ 9.30ಕ್ಕೆ ಏಕತಾರ್ ಗಾಯಕಿ ನಾದ ಮಣಿನಾಲ್ಕೂರುಬಾಳಗ ಹಾಗೂ ಜನಪ್ರೀತಿಬಾಳಗದವರಿಂದ ಪ್ರೇಮ ನೀರಾವರಿ ಎಂಬ ಸೌಹಾರ್ದ ಗಾಯನ ಕಾರ್ಯಕ್ರಮ ನಡೆಯಲಿದೆ.
ಪ್ರೀತಿ ಮತ್ತು ಸೇವೆಯ ಮೂಲಕ ವಿಶ್ವದಾದ್ಯಂತ ಲಕ್ಷಾಂತರ ಹೃದಯಗಳನ್ನು ಗೆದ್ದ ವಿಶ್ವದ ಮಹಾತಾಯಿ ಸಂತ ಮದರ್ ತೆರೇಸಾ ಅವರ ಚಿಂತನೆ ಮತ್ತು ಆದರ್ಶಗಳನ್ನು ಸಾಗಿಸುವ ಸಲುವಾಗಿ 2017 ರಲ್ಲಿ ಜನಿಸಿದ ಸಂತ ಮದರ್ ತೆರೇಸಾ ವೇದಿಕೆ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಮೂಲಕ ಎಲ್ಲಾ ಧರ್ಮದ ಜನರ ವಿಶ್ವಾಸ ಗಳಿಸಿದೆ. ಸೆಮಿನಾರ್‌ಗಳು, ಸಂವಾದಗಳು, ಸೌಹಾರ್ದ ಪ್ರೇಮ ಹಬ್ಬಗಳು. ಇದು ಮಾನವೀಯ ಹೃದಯಗಳೊಂದಿಗೆ ಜಾತ್ಯತೀತ ಮತ್ತು ಸೌಹಾರ್ದ ಕೂಟವಾಗಿ ಹೊರಹೊಮ್ಮಿದೆ. ನಗರದ ಖ್ಯಾತ ಚಿಂತಕರು, ಪ್ರಾಧ್ಯಾಪಕರು, ಸಾಹಿತಿಗಳು, ಪತ್ರಕರ್ತರು, ಪ್ರಗತಿಪರ ಚಿಂತಕರು, ಉದ್ಯಮಿಗಳು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ದಲಿತ, ಆದಿವಾಸಿ, ಮಧ್ಯಮ ವರ್ಗದ ಕಾರ್ಮಿಕ ಸಂಘಟನೆಗಳ ಮುಖಂಡರು ಸೇರಿದಂತೆ ಎಲ್ಲ ಧರ್ಮಗಳ 130 ಗಣ್ಯರು ಈ ವೇದಿಕೆಯಲ್ಲಿ ನಿಸ್ವಾರ್ಥವಾಗಿ ಪಾಲ್ಗೊಂಡು ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ಇಂತಹ ಚಟುವಟಿಕೆಗಳನ್ನು ಇನ್ನಷ್ಟು ಶ್ರದ್ಧೆಯಿಂದ ನಡೆಸುವ ಮೂಲಕ ಮಂಗಳೂರಿನ ಸೌಹಾರ್ದ ಪರಂಪರೆಯನ್ನು ಉಳಿಸಿ ಬೆಳೆಸುವುದು ಸಂತ ಮದರ್ ತೆರೇಸಾ ವೇದಿಕೆಯ ಮುಖ್ಯ ಉದ್ದೇಶವಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದವರು: ರಾಯ್ ಕ್ಯಾಸ್ಟಲಿನೋ, ಅಧ್ಯಕ್ಷರು, ಸುನಿಲ್ ಕುಮಾರ್ ಬಜಾಲ್ ಪ್ರಧಾನ ಕಾರ್ಯದರ್ಶಿ ಸಂತ ಮದರ್ ತೆರೇಸಾ ವೇದಿಕೆ, ಮಂಗಳೂರು, ಮಂಜುಳಾ ನಾಯ್ಕ್ (ಜಂಟಿ ಕಾರ್ಯದರ್ಶಿ, ಸಂತ ಮದರ್ ತೆರೇಸಾ.