ರಾಘವೇಂದ್ರಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಅಂಗವಾಗಿ ರಾಘವೇಂದ್ರಸ್ವಾಮಿಗಳ ವಿಗ್ರಹಕ್ಕೆ ವಿಶೇಷ ಅಲಂಕಾರ

ಶ್ರೀನಿವಾಸಪುರದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಘವೇಂದ್ರಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಅಂಗವಾಗಿ ಮಠದಲ್ಲಿ ರಾಘವೇಂದ್ರಸ್ವಾಮಿಗಳ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ವೆಂಕೋಬರಾವ್, ಶ್ರೀನಾಥ್, ಗುರುರಾಕರಾವ್, ಚೇತನ್, ಕಾರ್ತಿಕ್, ದ್ವಾರಕೀಶ್, ವಾದಿರಾಜ್ ಇದ್ದರು.

ಶ್ರೀನಿವಾಸಪುರ: ಭಾರತೀಯ ಜೀವ ವಿಮಾ ನಿಗಮ ಆರ್ಥಿಕ ಚಟುವಟಿಕೆ ಮೂಲಕ ಸಮಾಜ ಸೇವೆ ಮಾಡುವ ಸಂಸ್ಥೆಯಾಗಿದೆ

ಶ್ರೀನಿವಾಸಪುರ: ಭಾರತೀಯ ಜೀವ ವಿಮಾ ನಿಗಮ ಆರ್ಥಿಕ ಚಟುವಟಿಕೆ ಮೂಲಕ ಸಮಾಜ ಸೇವೆ ಮಾಡುವ ಸಂಸ್ಥೆಯಾಗಿದೆ. ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆ ನಿಗಮದ ಮುಖ್ಯಗುರಿಯಾಗಿದೆ ಎಂದು ಎಲ್‍ಐಸಿ ಉಪ ಶಾಖಾ ವ್ಯವಸ್ಥಾಪಕ ಎಚ್.ವಿ.ಪ್ರಸಾದ್ ಹೇಳಿದರು.
ಪಟ್ಟಣದ ಎಲ್‍ಐಸಿ ಶಾಖಾ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ 67ನೇ ಎಲ್‍ಐಸಿ ಸಪ್ತಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಕಟ್ಟ ಕಡೆ ವ್ಯಕ್ತಿಗು ಎಲ್‍ಐಸಿ ಸೌಲಭ್ಯ ಒದಗಿಸಬೇಕು. ಪ್ರತಿನಿಧಿಗಳು ಗ್ರಾಮೀಣ ಪ್ರದೇಶದಲ್ಲಿ ಸುತ್ತಾಡಿ, ಜನರ ಆರ್ಥಿಕ ಸ್ಥಿತಿಗೆ ಅನುಗುಣವಾದ ಪಾಲಿಸಿ ಮಾಡಿಸಬೇಕು ಎಂದು ಹೇಳಿದರು.
ಎಲ್‍ಐಸಿ ವ್ಯವಹಾರ ಪಾರದರ್ಶಕವಾಗಿದ್ದು, ನಂಬಲು ಅರ್ಹವಾಗಿದೆ. ಆದ್ಧರಿಂಲೇ ಜನರು ಹಲವು ದಶಗಳಿಂದ ಈ ಸಂಸ್ಥೆಯ ಮೇಲೆ ವಿಶ್ವಾಸವಿಟ್ಟು ಹಣ ತೊಡಗಿಸುತ್ತಿದ್ದಾರೆ. ಆದ್ದರಿಂದ ಎಲ್‍ಐಸಿಯಲ್ಲಿನ ವಿವಿಧ ಯೋಜನೆಗಳನ್ನು ಪರಿಚಯಿಸುವ ಹೊಣೆ ಪ್ರತಿನಿಧಿಗಳ ಮೇಲಿದೆ. ತಾವು ಬೆಳೆಯುವುದರೊಂದಿಗೆ ಸಂಸ್ಥೆ ಬೆಳೆಯಲು ಶ್ರಮಿಸಬೇಕು. ಸಮಾಜ ಮುಖಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ಎಲ್‍ಐಸಿ ಅಭಿವೃದ್ಧಿ ಅಧಿಕಾರಿ ಬಾಲಚಂದ್ರ ಮಾತನಾಡಿ, ದೇಶದ ಆರ್ಥಿಕಾಭಿವೃದ್ಧಿಯಲ್ಲಿ ಎಲ್‍ಐಸಿ ಪಾತ್ರ ಹಿರಿದು. ಸಾರ್ವಜನಿಕರ ಆರ್ಥಿಕಾಭಿವೃದ್ಧಿಯೊಂದಿಗೆ ದೇಶದ ಆರ್ಥಿಕ ಪ್ರಗತಿ ಸಾಧಿಸುವ ಉದ್ದೇಶ ಹೊಂದಲಾಗಿದೆ. ಎಲ್‍ಐಸಿ ಪ್ರತಿನಿಧಿಗಳು ಅದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದು.
ಎಲ್‍ಐಸಿ ಅಭಿವೃದ್ಧಿ ಅಧಿಕಾರಿ ರವೀಂದ್ರಯ್ಯ ವಿ.ಕುಲಕರ್ಣಿ ಮಾತನಾಡಿ, ಎಲ್‍ಐಸಿ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಕಾರ್ಯನಿರ್ವಹಿಸುತ್ತಿದೆ. ತನ್ನ ಕಾರ್ಯ ವೈಖರಿಯಿಂದಾಗಿ ವಿಶ್ವ ಮಾನ್ಯತೆ ಪಡೆದಿದೆ. ರೂ.45 ಲಕ್ಷ ಕೋಟಿ ಶಾಶ್ವತ ನಿಧಿ ಮೀಸಲಿರಿಸಿದೆ ಎಂದು ಹೇಳಿದರು.
ಉಪ ವ್ಯವಸ್ಥಾಪಕ ಡಿ.ರವಿಶಂಕರ್, ಶ್ರೀನಿವಾಸ್, ಲಿಖಿತ್ ಕುಮಾರ್ ಹಾಗೂ ಪ್ರತಿನಿಧಿಗಳು ಇದ್ದರು.

ಕುಂದಾಪುರ ಸಂತ ಮೇರಿ ಪಿ ಯು ಕಾಲೇಜಿನಲ್ಲಿ ಪಾಲಕರ ಸಭೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಕುಂದಾಪುರದ ಸಂತ ಮೇರಿಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಪ್ರಥಮ ಪಿ ಯು ವಿದ್ಯಾರ್ಥಿಗಳ ರಕ್ಷಕ ಶಿಕ್ಷಕ ಸಭೆ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಸಂತ ಮೇರಿಸ್ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕರಾಗಿರುವ ಅತಿ .ವಂ.ಫಾದರ್ ಸ್ಟ್ಯಾನಿ ತಾವ್ರೋರವರು ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಪಿ ಯು ಹಂತದಲ್ಲಿ ಚೆನ್ನಾಗಿ ಅಭ್ಯಾಸ ಮಾಡುವದರೊಂದಿಗೆ ಉಲ್ಲಾಸದಿಂದಿರಬೇಕು. ಅಪ್ಪ ಅಮ್ಮ ಗುರು ಹಿರಿಯರನ್ನು ಗೌರವಿಸಬೇಕು.ಎನ್ನುತ್ತಾ ಸಂಸ್ಥೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳಾದ ವಿನಾರ್ಡ್ ಡಿಕೊಸ್ತಾ ಹಾಗೂ ನವೀನ್ ಕುಮಾರ ಪ್ರಸ್ತುತ CA ಪದವಿ ಪೂರ್ಣಗೊಳಿಸಿ ಉತ್ತಮ ಕಂಪೆನಿಯಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದ ಅವರನ್ನು ಶಿಕ್ಷಣ ಸನ್ಮಾನಿಸಿ ಅವರ ಪ್ರಯತ್ನಕ್ಕೆ ಶ್ಯಾಘನೆ,ಹಾಗೂ ಅವರ ಪಾಲಕರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಜೇತನಾದ ಇನ್ನೋರ್ವ ಚೆಸ್ ಆಟಗಾರ ನಿಶಾಂತ್ ಡಿಸೋಜ ಈತನಿಗೆ ಪುಷ್ಪ, ಪ್ರಶಸ್ತಿ ನೀಡಿ ಗೌರವಿಸಿಲಾಯಿತು.
ಕಾರ್ಯ ಕ್ರಮದ ಕೇಂದ್ರ ಬಿಂದುಗಳಾಗಿ, CA ಪರೀಕ್ಷೆಯನ್ನು ಉತ್ತಮ ಫಲಿತಾಂಶದೊಂದಿಗೆ ಮುಗಿಸಿ ಕಾಲೇಜಿನ ಇತಿಹಾಸದಲ್ಲಿ CA ಪರೀಕ್ಷೆ ಮುಗಿಸಿದವರಲ್ಲಿ ಮೊದಲಿಗರಾಗಿ ಸಂಸ್ಥೆಗೆ ಕೀರ್ತಿ ತಂದ ವಿನಾರ್ಡ್ ಡಿಕೊಸ್ತಾ ಹಾಗೂ ನವೀನ್ ಕುಮಾರ ಸನ್ಮಾನ ಸ್ವೀಕರಿಸಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ತಮ್ಮ ಶಿಕ್ಷಣದಲ್ಲಿ,ಪ್ರಯತ್ನ,ಅಪ್ಪ ಅಮ್ಮಂದಿರ ಪ್ರೋತ್ಸಾಹ,,ಗುರು ಹಿರಿಯರಲ್ಲಿ ಗೌರವ ಇವೆಲ್ಲ ಮುಖ್ಯ ಎನ್ನುತ್ತಾ ತಮ್ಮ ಸಾಧನೆಗೆ ಸಂಸ್ಥೆ, ಸಂಸ್ಥೆಯ ಉಪನ್ಯಾಸಕ ವೃಂದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. ಪ್ರತಿಯೊಬ್ಬರೂ ಪ್ರಯತ್ನಿಸಿದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂದು ಕಾಲೇಜಿನಲ್ಲಿಯ ವಿದ್ಯಾರ್ಥಿಗಳಿಗೆ ಉತ್ತೇಜಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರೇಶ್ಮಾ ಫೆರ್ನಾಂಡಿಸ್ ರವರು ಎಲ್ಲಾ ಪಾಲಕರಿಗೆ, ಸಾಧಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ, ಪಾಲಕರಿಗೆ ಕಾಲೇಜಿನ ಕೆಲವು ಸಲಹೆ ಸೂಚನೆಗಳನ್ನು ತಿಳಿಸಿದರು.ಉಪ ಪ್ರಾಂಶುಪಾಲರಾದ ಶ್ರೀಮತಿ ಮಂಜುಳಾ ನಾಯರ್ ರವರು ಪ್ರಸ್ತುತ ಶೈಕ್ಷಣಿಕ ವರ್ಷದ ವರದಿಯನ್ನು ವಾಚಿಸಿದರು.
ವಿದ್ಯಾರ್ಥಿಗಳ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಿ, ಕಾರ್ಯಕ್ರಮದ ಸಂಯೋಜಕರಾದ ಉಪನ್ಯಾಸಕಿ ಬಿನು ಜಯಚಂದ್ರನ್ ರವರು ಸ್ವಾಗತಿಸಿ, ಭೌತಶಾಸ್ತ್ರ ಉಪನ್ಯಾಸಕರಾದ ಶ್ರೀಮತಿ ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.
ಸಾಧಕ ವಿದ್ಯಾರ್ಥಿಗಳ ಪರಿಚಯವನ್ನು ಕನ್ನಡ ಉಪನ್ಯಾಸಕ ನಾಗರಾಜ ಶೆಟ್ಟಿ ನೀಡಿ, ಜೀವಶಾಸ್ತ್ರ ಉಪನ್ಯಾಸಕರಾದ ಪ್ರಫುಲ್ಲ ರವರು ಧನ್ಯವಾದ ಸಮರ್ಪಿಸಿದರು.

ಟೇಬಲ್ ಟೆನಿಸ್ ಪಂದ್ಯಾಟದಲ್ಲಿ ಜಿಲ್ಲಾ‌ಮಟ್ಟದಲ್ಲಿ ಪ್ರಥಮ‌ ಸ್ಥಾನ‌ ಮತ್ತು ಮೂವರು ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆ

ಉಡುಪಿಯ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ದಿ. 28-8-23 ರಂದು ನಡೆದ ಉಡುಪಿ ಜಿಲ್ಲಾ ಮಟ್ಟದ ಟೇಬಲ್ ಟೆನಿಸ್ ಪಂದ್ಯಾಟದಲ್ಲಿ  ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಬಾಲಕಿಯರ ಟೇಬಲ್ ಟೆನಿಸ್ ತಂಡ ಪ್ರಥಮ‌ ಸ್ಥಾನವನ್ನು ಪಡೆದಿರುತ್ತದೆ. ತಂಡದಲ್ಲಿ ಪ್ರಥಮ ಪಿ.ಯು.ಸಿ ಯ ದೀಪ್ತಿ‌ ಕೆ, ಸಿಂಚನಾ‌ ಶೆಟ್ಟಿ, ಕ್ಷಮಾ ಗೌತಮ್, ಅಂಕಿತಾ, ಭಾರ್ಗವಿ ಇವರು ಭಾಗವಹಿಸಿರುತ್ತಾರೆ. ಅವರಲ್ಲಿ ಮೂವರು ವಿದ್ಯಾರ್ಥಿನಿಯರಾದ ಅಂಕಿತಾ, ಕ್ಷಮಾ ಗೌತಮ್ ಹಾಗೂ ದೀಪ್ತಿ ಇವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳ ಈ ಕ್ರೀಡಾ ಸಾಧನೆಗಾಗಿ, ಕಾಲೇಜಿನ ಸಂಚಾಲಕರಾದ ಶ್ರೀ ಬಿ. ಎಮ್. ಸುಕುಮಾರ್ ಶೆಟ್ಟಿಯವರು, ಆಡಳಿತ ಮಂಡಳಿಯ ಸದಸ್ಯರು,‌ ಪ್ರಾಂಶುಪಾಲರು ಹಾಗೂ ಬೋಧಕ- ಬೋಧಕೇತರ ಸಿಬ್ಬಂಧಿಗಳು ಅಭಿನಂದನೆ ಸಲ್ಲಿಸಿರುತ್ತಾರೆ. 

Celebration of Teacher’s day in Catholic Board of Education

On the occasion of Teacher’s day, the Catholic Board of Education had organized a programme of honoring retired teachers and all the institutions with gifted students and those that had obtained the highest results, on 02.09.2023.

Most Rev Dr Peter Paul Saldanha, the Bishop of Mangalore presided over the function. Along with him, the Director of the Bajjodi Pastoral Centre Rev Fr Santosh Rodrigues, the Secretary of the Catholic Board of Education, Rev Fr Anthony Shera, the Designate Secretary, Rev Fr Leo Lasrado graced the dais.

The students of St Lawrence English Medium School, Bondel set the programme in motion with their melodious singing of the Prayer song.

The Secretary of the Catholic Board of Education welcomed everyone. The designate Secretary Rev Fr Leo Lasrado offered the eulogy for the teachers, the non-teaching staff and the students who had passed away in the year 2022-23. The educational institutions that had obtained 100 percent results and the talented students of the year were honoured.

60 teaching and non-teaching staff who had served Catholic institutions for several years and had retired were lauded for their selfless service and honoured with a shawl,  memento and fruits.

In his address, the President of the programme praised the retired teaches for their dedicated service, expressed his gratitude to them and wished them well for their retired life.

At the end of the programme, Sr Anthony Mary, Headmistress of St Bridgit Higher Primary School, Sullya gave the vote of thanks.

Mrs Patricia Lobo, Headmistress of St Peter Higher Primary School, Kottara and Mrs Florine Pereira, Headmistress of St Aloysius Higher Primary School, Urwa read out the names of the retirees.

Among the retirees, Mr Aloysius D’Souza, retired Head Master of Rosario High School, Mangalore and Dr Priscilla D’Souza, retired Head mistress of St Aloysius English Medium School, Urwa expressed their feelings.

The programme was compered by Mrs Preethi D’Souza, teacher of Cassia High School.

Lunch was served to all at the end of the programme.

ಬೆಥನಿ ಎಜ್ಯುಕೇಶನಲ್ ಸೊಸೈಟಿಯ ಅಮೃತ ಮಹೋತ್ಸವದ ಸಮಾರೋಪ ಸಮಾರಂಭ

ಮಂಗಳೂರು: ದಿನಾಂಕ 02.09.2023ರಂದು ಸಂತರೇಮಂಡ್ ವಿದ್ಯಾಸಂಸ್ಥೆ ವಾಮಂಜೂರುಇಲ್ಲಿ ಬೆಥನಿ ಎಜ್ಯುಕೇಶನಲ್ ಸೊಸೈಟಿಯ75ನೇ ಅಮೃತ ಮಹೋತ್ಸವವು ಬಹಳ ವಿಜೃಂಭಣೆಯಿಂದ ನಡೆಯಿತು. ಬೆಥನಿ ಎಜ್ಯುಕೇಶನಲ್ ಸೊಸೈಟಿಯಕಾರ್ಪೊರೇಟ್ ಮ್ಯಾನೇಜರ್ ವಂದನೀಯ ಭಗಿನಿ ಸಿಸಿಲಿಯ ಮೆಂಡೋನ್ಸಾಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಿದರು. ಧರ್ಮಗುರುಗಳಾದ ರೇವರೆಂಡ್ ಫಾದರ್ ಮ್ಯಾಕ್ಸಿಮ್‍ಎಲ್ ನೊರೊನ್ಹಾ, ವಿಕಾರ್‍ಜನರಲ್ ಮಂಗಳೂರು ಧರ್ಮಪ್ರಾಂತ್ಯ, ಬೆಥನಿ ಎಜ್ಯುಕೇಶನಲ್ ಸೊಸೈಟಿಯ76ನೇ ವರ್ಷದ ಸಂಭ್ರಮಕ್ಕೆಚಾಲನೆಯನ್ನು ನೀಡಿ ದೀಪ ಬೆಳಗಿಸಿ, ಆಶೀರ್ವಚನ ನೀಡಿದರು. ಮುಖ್ಯಅತಿಥಿಯಾಗಿ ಶ್ರೀಯುತ ಜೇಮ್ಸ್‍ ಕುಟಿನ್ಹೊ, ಕ್ಷೇತ್ರ ಶಿಕ್ಷಣಾಧಿಕಾರಿ, ಮಂಗಳೂರು ಉತ್ತರ ವಲಯ, ಶ್ರೀಮತಿ ಮರಿಯಮ್ಮತೋಮಸ್, ಮಾಜಿಕಾರ್ಪೊರೇಟರ್ ಹಾಗೂ ವಕೀಲರು ಮತ್ತುಡಾ| ಸತೀಶ್‍ಕುಮಾರ್-ಮಣಿಪಾಲ ವಾಣಿಜ್ಯ ವಿಭಾಗದ ಹಿರಿಯಆಧ್ಯಾಪಕರು ಹಾಗೂ ಭಗಿನಿ ಶುಭ, ಮಂಗಳೂರು ಪ್ರಾಂತ್ಯದ ಶಿಕ್ಷಣ ಸಂಯೋಜಕಿ ಹಾಗೂ ಸೈಂಟ್‍ರೇಮಂಡ್ ಸಂಸ್ಥೆಗಳ ಸಂಚಾಲಕಿ ಮತ್ತು ಸ್ಥಳೀಯ ಕಾನ್ವೆಂಟಿನಸುಪೀರಿಯರ್ ವಂದನೀಯ ಭಗಿನಿ ವಿತಾಲಿಸ್ ಉಪಸ್ಥಿತರಿದ್ದರು. ಡಾ| ಸತೀಶ್‍ಕುಮಾರ್ ಹಾಗೂ ಶ್ರೀಮತಿ ಮರಿಯಮ್ಮತೋಮಸ್‍ಇವರು ಬೆಥನಿ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾಗಿದ್ದು ತಮ್ಮ ಪ್ರಗತಿಗೆಕಾರಣಕರ್ತರಾದ ಬೆಥನಿ ಶಿಕ್ಷಣ ಸಂಸ್ಥೆಯನ್ನು ಶ್ಲಾಘಿಸಿದರು. ವಂದನೀಯ ಭಗಿನಿ ಶುಭಎಲ್ಲರನ್ನೂ ಸ್ವಾಗತಿಸಿದರು. ಶ್ರೀಮತಿ ಶರ್ಮಿಳ ಹಾಗೂ ಶ್ರೀಮತಿ ರೇಶ್ಮ ವಂದಿಸಿದರು. ಭಗಿನಿ ಜೆಸ್ಸಿ ಪ್ರೀಮ ಮತ್ತು ಶ್ರೀಮತಿ ಡೆಲ್ಸಿ ಡಿ’ಸೋಜಕಾರ್ಯಕ್ರಮ ನಿರೂಪಿಸಿದರು.

ವರದಿ : ನಯನ ಸಹಶಿಕ್ಷಕಿ

ಪ್ರಾಕ್ಟಿಕಲ್ ಅಕೌಂಟಿಂಗ್ ಅಂಡ್ ಟ್ಯಾಕ್ಸೇಶನ್ ಕುರಿತು ಕಾರ್ಯಗಾರ

ದೀಕ್ಷಾರಂಭ 2023 ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ನಡೆಯುತ್ತಿರುವ ಕಾರ್ಯಕ್ರಮದ ನಾಲ್ಕನೇ ದಿನವಾದ 26 ಆಗಸ್ಟ್ 2023 ರಂದು ಪ್ರಾಕ್ಟಿಕಲ್ ಅಕೌಂಟಿಂಗ್ ಅಂಡ್ ಟ್ಯಾಕ್ಸೇಶನ್ ಕುರಿತು ಕಾರ್ಯಗಾರ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಫಿನ್ ಕ್ಯೂರಿಯಸ್ ಸಂಸ್ಥೆ ಬೆಂಗಳೂರು ಇದರ ಸಂಸ್ಥಾಪಕರಾದ ಸಿಎ ಗಣೇಶ್ ಶೆಟ್ಟಿ ಆಗಮಿಸಿ ವಿಷಯದ ಕುರಿತು ಮಾತನಾಡಿದರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರಾಕ್ಟಿಕಲ್ ಅಕೌಂಟಿಂಗ್ ಅಂಡ್ ಟ್ಯಾಕ್ಸೇಶನ್ ವಿಷಯಕ್ಕೆ ಸಂಬಂಧಿಸಿದಂತೆ ಇರುವ ವಿಪ್ರಲ ಅವಕಾಶವನ್ನು ತೆರೆದಿಟ್ಟರು. ಪ್ರಾಕ್ಟಿಕಲ್ ಅಕೌಂಟಿಂಗ್ ಅಂಡ್ ಟಾಕ್ಸಿಶನ್ ಕೋರ್ಸ್ ವಾಣಿಜ್ಯ ಮತ್ತು ನಿರ್ವಹಣೆ ವಿಭಾಗದ ವಿದ್ಯಾರ್ಥಿಗಳಿಗೆ ಸೀಮಿತವಾಗಿರದೆ ಕಂಪ್ಯೂಟರ್ ಸೈನ್ಸ್ ಪದವೀಧರರು ತೆಗೆದುಕೊಳ್ಳಬಹುದು ಎನ್ನುವುದರ ಬಗ್ಗೆ ಸ್ಪಷ್ಟ ವಿವರಣೆ ನೀಡಿದರು ಇದಕ್ಕೆ ಸಂಬಂಧಿಸಿದಂತೆ ಟೆಕ್ನೋ ಫಂಕ್ಷನ್ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ವಾಣಿಜ್ಯ ಜೊತೆ ಜೊತೆಯಲ್ಲಿ ಹೇಗೆ ಕಾರ್ಯಚರಿಸುತ್ತದೆ ಎನ್ನುವುದರ ಕುರಿತು ವಿಸ್ತಾರವಾಗಿ ವಿವರಿಸಿದರು. ಐ ಎಂ ಜೆ ವಿದ್ಯಾಸಂಸ್ಥೆ ಮತ್ತು ಫಿನ್ ಕ್ಯೂರಿಯಸ್ ಸಂಸ್ಥೆಯ ನಡುವೆ ಶೈಕ್ಷಣಿಕ ಒಡಂಬಡಿಕೆ ಇದ್ದು ಕುಂದಾಪುರದಲ್ಲಿ ಪ್ರಾಕ್ಟಿಕಲ್ ಅಕೌಂಟಿಂಗ್ ಅಂಡ್ ಟ್ಯಾಕ್ಸೇಶನ್ ಕೋರ್ಸ್ ನೀಡುತ್ತಿರುವ ಏಕೈಕ ಪದವಿ ಕಾಲೇಜು ಆಗಿದೆ. ಈ ಕೋರ್ಸ್ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೂ ಲಭ್ಯವಿದ್ದು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಪ್ರತಿ ವಿದ್ಯಾರ್ಥಿಗಳು ಉದ್ಯೋಗ ಖಾತರಿ ನೆರವನ್ನು ಸಂಸ್ಥೆ ನೀಡುತಿದೆ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ ಪಟೇಲ್, ಉಪ ಪ್ರಾಂಶುಪಾಲರಾದ ಪ್ರೊ. ಜಯಶೀಲ್ ಕುಮಾರ್ ಹಾಗೂ ಉಪನ್ಯಾಸಕರು ಉಪಸಿತರಿದ್ದರು ಪಾವನ ಎಂ ರವರು ಗಣ್ಯರನ್ನು ಉಪಚರಿಸಿದರು.

ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್ ಮತ್ತು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮತಿ ವತಿಯಿಂದ ನಾಡಪ್ರಭು ಕೆಂಪೇಗೌಡರ 514ನೇ ಜಯಂತ್ಯುತ್ಸವ ಏರ್ಪಾಡು

ಶ್ರೀನಿವಾಸಪುರ: ಪಟ್ಟಣದಲ್ಲಿ ತಾಲ್ಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಟ್ರಸ್ಟ್ ಮತ್ತು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮತಿ ವತಿಯಿಂದ ಸೆ.2 ರಂದು ಬೆಳಿಗ್ಗೆ 10 ಗಂಟೆಗೆ ನಾಡಪ್ರಭು ಕೆಂಪೇಗೌಡರ 514ನೇ ಜಯಂತ್ಯುತ್ಸವ ಏರ್ಪಡಿಸಲಗಿದೆ ಎಂದು ಟ್ರಸ್ಟ್ ಅಧ್ಯಕ್ಷ ವೇಣುಗೋಪಾಲರೆಡ್ಡಿ ತಿಳಿಸಿದರು.
ಪಟ್ಟಣದ ಭೈರವೇಶ್ವರ ವಿದ್ಯಾ ನಿಕೇತನದ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಕೆಂಪೇಗೌಡರ ಜಯಂತ್ಯುತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಬೆಳಿಗ್ಗೆ 10 ಗಂಟೆಯಿಂದ ಮುಳಬಾಗಿಲು ವೃತ್ತದಿಂದ ಮೆರವಣಿಗೆ ಹಾಗೂ ಮಧ್ಯಾಹ್ನ 12 ಗಂಟೆಗೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಲಿದ್ದಾರೆ. ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಉಪಸ್ಥಿತಿಯಲ್ಲಿ, ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಎಂ.ಎಲ್.ಅನಿಲ್ ಕುಮಾರ್, ಮಾಜಿ ಸದಸ್ಯ ತೂಪಲ್ಲಿ ಆರ್.ಚೌಡರೆಡ್ಡಿ, ರಾಜ್ಯ ಮಾವು ಮಹಾ ಮಂಡಳಿ ಮಾಜಿ ಅಧ್ಯಕ್ಷ ಎಲ್.ಗೋಪಾಲಕೃಷ್ಣ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಡಾ. ಡಿ.ಕೆ.ರಮೇಶ್, ಯಲವಹಳ್ಳಿ ರಮೇಶ್, ಟಿ.ಕೋನಪ್ಪರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದರು.
ಟ್ರಸ್ಟ್‍ನ ಮಾಜಿ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ಮಾತನಾಡಿ, ಒಕ್ಕಲಿಗ ಸಮುದಾಯದ ಸಾಧಕರಾದ ಎಂ.ಶ್ರೀರಾಮರೆಡ್ಡಿ, ಬಿ.ಎನ್.ರಮೇಶ್, ಡಿ.ದೇವರಾಜ್, ಎಂ.ಎನ್.ಅನುಚೇತ್, ಬಿ.ಎಲ್.ನಾಗೇಶ್, ಸುಭಾಷ್, ವಸಂತ ಕುಮಾರ್, ಎ.ಎನ್.ಕೃಷ್ಣಾರೆಡ್ಡಿ, ಕೆ.ಎಸ್.ನಾಗರಾಜ್ ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ಭೈರವೇಶ್ವರ ವಿದ್ಯಾ ನಿಕೇತನದ ನಿರ್ದೇಶಕ ಎ.ವೆಂಕಟರೆಡ್ಡಿ ಮಾತನಾಡಿ, ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿಯಿಂದ ಆಗಮಿಸುವ ಕೆಂಪೇಗೌಡರ ಭಾವ ಚಿತ್ರ ಹೊತ್ತ ಪಲ್ಲಕಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಈ ಸಂದರ್ಭದಲ್ಲಿ ಕಲಾವಿದರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯ ವಿವಿಧ ಕಲಾ ಕ್ಷೇತ್ರಗಳಲ್ಲಿನ ಕಲಾವಿದರು ಮೆರವಣಿಗೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ. ಜಯಂತ್ಯುತ್ಸವ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿದ್ದು, ಸಮಾಜದ ಎಲ್ಲ ಸಮುದಾಯದ ಜನರೂ ಭಾಗವಹಿಸುವಂತೆ ಕೋರಲಾಗಿದೆ ಎಂದು ಹೇಳಿದರು.

ಶ್ರೀನಿವಾಸಪುರ ತಾಲ್ಲೂಕಿನ ಸ್ಥಿರಾಸ್ತಿಗಳ ಮಾರ್ಗಸೂಚಿ ಬೆಲೆ ಪರಿಷ್ಕರಣೆ 

ಶ್ರೀನಿವಾಸಪುರ : ಶ್ರೀನಿವಾಸಪುರ ತಾಲ್ಲೂಕಿನ ಸ್ಥಿರಾಸ್ತಿಗಳ ಮಾರುಕಟ್ಟೆ ದರಗಳನ್ನು 2023-24ನೇ ಸಾಲಿನ ತಾಲೂಕು ಮಾರುಕಟ್ಟೆ ಮೌಲ್ಯಮಾಪನ ಉಪ ಸಮಿತಿ ಸಭೆಯಲ್ಲಿ ಪರಿಷ್ಕರಿಸಲಾಗಿದೆ. ಪರಿಷ್ಕರಿಸಿದ ಸ್ಥಿರಾಸ್ತಿಗಳ ಮಾರುಕಟ್ಟೆ ಮಾರ್ಗಸೂಚಿ ದರಗಳ ಕರಡು ಪ್ರತಿಯನ್ನು ಸಾರ್ವಜನಿಕ ಸಲಹೆ ಸೂಚನೆ ಮತ್ತು ಆಕ್ಷೇಪಣೆಗಳಿಗಾಗಿ ಶ್ರೀನಿವಾಸಪುರ ಉಪ ನೊಂದಣಿ ಕಚೇರಿಯಲ್ಲಿ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು ಸಲಹೆ ಸೂಚನೆ ಆಕ್ಷೇಪಣೆ ಇದ್ದರೆ ಸೆಪ್ಟೆಂಬರ್ 14ರ ಒಳಗೆ ಶ್ರೀನಿವಾಸಪುರ ಉಪ ನೊಂದಣಾ ಅಧಿಕಾರಿ ಮತ್ತು ಸದಸ್ಯ ಕಾರ್ಯದರ್ಶಿ, ಆಸ್ತಿ ಮೌಲ್ಯ ಮಾಪನ ಸಮಿತಿಗೆ ಲಿಖಿತ ರೂಪದಲ್ಲಿ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಬಹುದು ಎಂದು ಶ್ರೀನಿವಾಸಪುರ ಉಪ ನೊಂದಣಾ ಧಿಕಾರಿಗಳು  ಪ್ರಕಟಣೆಯಲ್ಲಿ ತಿಳಿಸಿದ್ದಾರೆ