ಕುಂದಾಪುರ: ಮಣಿಪಾಲದಲ್ಲಿ ಇತ್ತೀಚೆಗೆ ಆಯೋಜಿಸಲಾದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಸ್ಪರ್ಧೆಯ ಬಾಲಕಿಯರ ವಿಭಾಗಲ್ಲಿ ನಡೆದ ಕುಮಿಟೆ ಮತ್ತು ಕಟಾ ಎರಡೂ ಸ್ಪರ್ಧೆಗಳಲ್ಲಿ ಕುಂದಾಪುರದ ಓಕ್ ವುಡ್ ಇಂಡಿಯನ್ ಸ್ಕೂಲ್ ನ
3ನೇ ತರಗತಿ ವಿದ್ಯಾರ್ಥಿನಿಯಾಗಿರುವ ಅಮೈರಾ ಶೋಲಾಪುರ್ ಪ್ರಥಮ ಸ್ಥಾನ ಗಳಿಸಿದ್ದಾಳೆ. ಈಕೆ, ಹೆಮ್ಮಾಡಿ ಸಂತೋಷ್ ನಗರದ ನಿವಾಸಿ ರಝಿಯಾ ಸುಲ್ತಾನ ಮತ್ತು ಯಾಸೀನ್ ಫೈರೋಜ್ ದಂಪತಿಗಳ ಪುತ್ರಿಯಾಗಿದ್ದಾಳೆ. ಕುಂದಾಪುರ ದ ಕರಾಟೆ ಶಿಕ್ಶಕ ರಾದ ಕಿಯೊಶಿ ಕಿರಣ್, ಶಿಹಾನ್ ಸಂದೀಪ್, ಸಿಹಾನ್ ಶೇಕ್ ಹಾಗೂ ನಟರಾಜ್ ಅವರಲ್ಲಿ ತರಬೇತು ಪಡೆದಿರುತ್ತಾಳೆ.
Month: September 2023
ಕುಂದಾಪುರದಲ್ಲಿ ಸಂಭ್ರಮದ ಪ್ರವಾದಿ ಮುಹಮ್ಮದ್ ಅವರ ಜನ್ಮದಿನಾಚಾರಣೆ
ಕುಂದಾಪುರ :ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹು ಸಲ್ಲಮ್ ಅವರ ಜನ್ಮದಿನಾಚಾರಣೆಯ ಅಂಗವಾಗಿ ಕುಂದಾಪುರ ಜಾಮಿಯಾ ಮಸೀದಿ ಹಾಗೂ ಮುಸ್ಲಿಂ ವೆಲ್ ಫೇರ್ ಆಶ್ರಯದಲ್ಲಿ ಸ್ವಲಾತ್ ಪಠಣ ದೊಂದಿಗೆ ನಗರದಲ್ಲಿ ಸಂಭ್ರಮದ ಜುಲುಸ್
( ಮೆರವಣಿಗೆ) ನಡೆಯಿತು. ಅಸಂಖ್ಯಾತ ಮುಸ್ಲಿಂ ಬಾಂಧವರ ಪಾಲ್ಗೊಂಡಿದ್ದ ಈ ಜುಲುಸ್ ಬೆಳಿಗ್ಗೆ ಕುಂದಾಪುರ ಜಾಮಿಯಾ ಮಸೀದಿಯಿಂದ ಆರಂಭಗೊಂಡು ಪ್ರಮುಖ ಬೀದಿಗಳಿಂದ ಶಾಸ್ತ್ರಿ ಸರ್ಕಲ್ ತನಕ ಸಾಗಿ ಕುಂದಾಪುರ ಸಯ್ಯದ್ ವಲಿಯುಲ್ಲಾ ದರ್ಗಾದ ಬಳಿ ಸಮಾಪನ ಗೊಂಡಿತು. ಮೆರವಣಿಗೆಯಲ್ಲಿ ಪ್ರವಾದಿಯವರ ಉದ್ಘೋಷಗಳನ್ನು ಪ್ರಚುರ ಪಡಿಸಲಾಯಿತು.
ಈ ಸಂದರ್ಭದಲ್ಲಿ ಖತೀಬರಾದ ಮೌಲಾನ ತಬ್ರೆಜ್ ಆಲಂ ,ಜಾಮಿಯಾ ಮಸೀದಿ ಅಧ್ಯಕ್ಷರಾದ ವಸೀಮ್ ಭಾಷಾ, ಕಾರ್ಯದರ್ಶಿ ತಬ್ರೇಜ್ ಜೂಕಾಕೊ, ಮುಸ್ಲಿಂ ವೆಲ್ ಫೇರ್ ಅಧ್ಯಕ್ಷರಾದ ನವಾಜ್ ಅಬ್ದುಲ್ ಮಜೀದ್ ಸಹಿತ ಸಮಾಜ ಧುರೀಣರು ಉಪಸ್ಥಿತರಿದ್ದರು.
ದಿನಾಚರಣೆಯ ಅಂಗವಾಗಿ ಸರ್ವಧರ್ಮಿಯರಿಗೂ ಸಿಹಿ ತಿಂಡಿ,ಲಘು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.
ಆಧುನಿಕ ಯುಗದ ಪವಾಡ ಪುರುಷ ಸಂತ ಪಾದ್ರೆ ಪಿಯೊರ ಹಬ್ಬ ಅವರ ಪುಣ್ಯಕ್ಷೇತ್ರದಲ್ಲಿ ವಿಜೃಂಭಣೆಯಿಂದ ಆಚರಣೆ
ಮಂಗಳೂರು : ಆಧುನಿಕ ಯುಗದ ಪವಾಡ ಪುರುಷರಾದ ಸಂತ ಪಾದ್ರೆ ಪಿಯೊರವರ ಹಬ್ಬವನ್ನು ಸಂತ ಅನ್ನಾ ಫ್ರಾಯರಿಯ ಸಂತ ಪಾದ್ರೆ ಪಿಯೊರವರ ಪುಣ್ಯಕ್ಷೇತ್ರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಹಬ್ಬದ ಬಲಿಪೂಜೆಯನ್ನು ಅ। ವಂ। ಡಾ| ಫ್ರಾನ್ಸಿಸ್ ಸೆರಾವೊ, ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು,30 ಧರ್ಮಗುರುಗಳು ಮತ್ತು ಅಪಾರಭಕ್ತಾದಿಗಳ ಸಮ್ಮುಖದಲ್ಲಿ ಅರ್ಪಿಸಿದರು. ಸಂತ ಪಾದ್ರೆ ಪಿಯೊರವರ ಸರಳತೆ. ವಿಧೇಯತೆ ಮತ್ತು ವಿನಯತೆಯನ್ನು ನಮ್ಮ ಜೀವನದಲ್ಲಿ ಒಗ್ಗೂಡಿಸಲು ಕರೆ ಇತ್ತರು. ಸಂತರ ವಿಜ್ಞಾಪನೆಯಿಂದ ದೊರಕಿದ ಎಲ್ಲಾ ಉಪಕಾರಗಳನ್ನು ಸ್ಮರಿಸುತ್ತಾ ಪಾದ್ರೆ ಪಿಯೊರವರ ಸ್ವರೂಪ ಮತ್ತು ಪರಮಪ್ರಸಾದದ ಮೆರವಣಿಗೆಯನ್ನು ಸಂತ ಅನ್ನಾ ಫ್ರಾಯರಿಯ ಸುತ್ತಲೂ ನಡೆಸಲಾಯಿತು.
ಪಾದ್ರೆ ಪಿಯೊರವರ ಹಬ್ಬಕ್ಕೆ ತಯಾರಿಯಾಗಿ 9 ದಿನಗಳ ನವೇನ, ಬಲಿಪೂಜೆ ಮತ್ತು ಒಂದು ದಿನದ ರೋಗಸೌಖ್ಯ ಧ್ಯಾನಕೂಟವನ್ನು ಸಹೋದರ ಪ್ರಕಾಶ್, ಬ್ಯಾಂಡ್ರಾ, ವಂ| ಧರ್ಮಗುರು ರಿಚ್ಚಡ್ ಕ್ಪಾಡ್ರಸ್, ವಂ| ಧರ್ಮಗುರು ರೂಕ್ಕಿ ಡಿಕುನ್ಹಾ ಮತ್ತು ತಂಡದವರು ನಡೆಸಿಕೊಟ್ಟರು. ಹಲವಾರು ಭಕ್ತರು ಆಧ್ಯಾತ್ಮಿಕವಾಗಿ ಗುಣಮುಖರಾಗಿ ಸಂತಸಪಟ್ಟರು.
ರೋಗಿಷ್ಠರಿಗಾಗಿ ಮತ್ತು ವಯೋವ್ಯದ್ಧರಿಗಾಗಿ ಸಪ್ಟೆಂಬರ್ 22ರಂದು ಆರಾಧನೆ ಮತ್ತು ಪಲಿಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಹಲವರು ಆದ್ಯಾತ್ಮಿಕವಾಗಿ ಬಂಧನ ಮುಕ್ತಗೊಂಡು ದೇವರಿಗೆ ಕೃತಜ್ಞತೆ ಸಲ್ಲಿಸಿದರು. ಸಂತ ಹಾದ್ರೆ ಪಿಯೊರವರ ಮೂಲಕ ಬೇಡಿದ ಹಲವಾರು ಪ್ರಾರ್ಥನೆಗಳು ಫಲಿಸಿದ ಕಾರಣ ಬಹಳಷ್ಟು ಜನರು ಸಂತ ಪಿಯೊರವರ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ತಮ್ಮ ಪ್ರಾರ್ಥನೆಗಳನ್ನು ಅರ್ಪಿಸುತ್ತಾರೆ. ಕಾಪುಚಿನ್ ಸಭೆಯ ಈ ಗುಣಪಡಿಸುವ ಸಂತರು ಪವಾಡಗಳಿಗೆ ಪ್ರಸಿದ್ದರು. 10 ದಿನಗಳ ಹಬ್ಬದ ಸಂಭ್ರಮವು ಅದ್ದೂರಿಯಾಗಿ ನಡೆಯಲು ಲಭಿಸಿದ ದೇವರ ಸಹಾಯಕ್ಕಾಗಿ ಕೃತಜ್ಞತೆ ಸಲ್ಲಿಸಲಾಯಿತು.
ಶಿರ್ವ ಸಂತ ಮೇರಿ ಪ.ಪೂ.ಕಾಲೇಜ್ “ಆತ್ಮಹತ್ಯೆ ತಡ’ ಗಟ್ಟುವ ದಿನಾಚರಣೆ
ಶಿರ್ವ; ದಿನಾಂಕ 27.09.2023ರಂದು ಶಿರ್ವ ಸಂತ ಮೇರಿ ಪ.ಪೂ.ಕಾಲೇಜು, ಸಮುದಾಯ ಆರೋಗ್ಯ ಕೇಂದ್ರ ಹಾಗೂ
ಎನ್. ಎಸ್.ಎಸ್, ಘಟಕ ಇದರ ಜಂಟಿ ಆಶ್ರಯದಲ್ಲಿ “ವಿಶ್ವ ಆತ್ಮಹತ್ಯೆ ತಡೆ” ಗಟ್ಟುವ ದಿನಾಚರಣೆಯನ್ನು ಪಿಯಸಿ
ವಿದ್ಯಾರ್ಥಿಗಳಿಗೆ “ಸಾವುದ್ ಸಭಾ ಭವನ” – ಶಿರ್ವದಲ್ಲಿ ಆಯೋಜಿಸಲಾಗಿತ್ತು.
ಉಡುಪಿ ಜಿಲ್ಲಾ ಆಸ್ಪತ್ರೆಯಿಂದ ಡಾ. ರಿತಿಕಾ ಸಾಲಿಯನ್‌ರವರು ಕಾರ್ಯಕ್ರಮದ ಉದ್ಭಾಟನೆ ಮಾಡಿ ವಿದ್ಯಾರ್ಥಿಗಳಲ್ಲಿ ಮಾನಸಿಕ
ಖಿನ್ನತೆ, ಮಾನಸಿಕ ಒತ್ತಡ ಇದರಿಂದಾಗುವ ಸಮಸ್ಯೆಗಳು ಆತ್ಮಹತ್ಯೆಯನ್ನು ತಡೆಗಟ್ಟುವ ಬಗ್ಗೆ ಸರಳವಾಗಿ ನುಡಿದು
ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ- ಪರಿಹಾರೋಪಾಯವನ್ನು ನೀಡಿದರು.
ಹೆಣ್ಣು ಮಕ್ಕಳಿಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಯ ಕೌನ್ಸಿಲರ್ ಶ್ರೀಮತಿ ವಸಂತಿಯವರು * ಹದಿ ಹರೆಯದವರಿಗೆ
ಶಿಕ್ಷಣ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಹೆಣ್ಣು ಮಕ್ಕಳು ಅವರ ಸ್ವಚ್ಛತೆಯ ಬಗ್ಗೆ. ಶಿಸ್ತು ಬದ್ಧವಾದ ನೈಸರ್ಗಿಕ ಆಹಾರ,
ಉಡುಗೆ-ತೊಡುಗೆಯಲ್ಲಿ ನೈರ್ಮಲ್ಯತೆಯ ಅತೀ ಅಗತ್ಯ’ ಎಂದು ತಿಳಿಸಿದರು.
ವಿದ್ಯಾರ್ಥಿನಿಯರಿಂದ ಕಾರ್ಯಕ್ರಮದ ಮೌಲ್ಯಮಾಪನ ಮಾಡಿದರು. ಜಿಲ್ಲಾ ವೈದ್ಯಕೀಯ ತಂಡದ ಕುಮಾರಿ ಕ್ಯಾಥರಿನ್ ಜೆನಿಫರ್‌ರವರು ಹಾಜರಿದ್ದರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಮರಿಯ ಜೆಸಿಂತ ಘುರ್ಟಾಡೊರವರು ಸ್ವಾಗತಿಸಿದರು.
ಉಪನ್ಯಾಸಕಿ ಗ್ಲೆನಿಷ ರೇಶ್ಮ ಮೆಂಡೋನ್ಷ ಕಾರ್ಯಕ್ರಮ ನಿರ್ವಹಿಸಿ, ಜುಲಿಯನ ಡಿಸೋಜ ಧನ್ಯವಾದ
ನೀಡಿದರು.
ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಮುದಾಯ ಸಹಾಯ ಹಸ್ತ ನೀಡಬೇಕು-ಚಲಪತಿ
ಶ್ರೀನಿವಾಸಪುರ: ಶ್ರೀನಿವಾಸಪುರ ತಾಲ್ಲೂಕಿನ ಕಲ್ಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಸಮವಸ್ತ್ರ ವಿತರಣೆ ಹಾಗೂ ಅಭಿನಂದನಾ ಸಮಾರಂಭವನ್ನು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಲಪತಿ ಉದ್ಘಾಟಿಸಿದರು.
ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಸಮುದಾಯ ಸಹಾಯ ಹಸ್ತ ನೀಡಬೇಕು. ವಿದ್ಯಾರ್ಥಿಗಳು ಸರ್ಕಾರದ ಯೋಜನೆಗಳ ಜತೆಗೆ ದಾನಿಗಳ ನೆರವು ಪಡೆದು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಲಪತಿ ಹೇಳಿದರು.
ತಾಲ್ಲೂಕಿನ ಕಲ್ಲೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವುದರ ಮೂಲಕ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಶಾಲೆಗೆ ಎರಡು ಬಾರಿ ಪರಿಸರ ಶಾಲೆ ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಸರ್ಕಾರಿ ಶಾಲಾ ಶಿಕ್ಷಕ ಎಸ್.ಆರ್.ಧರ್ಮೇಶ್ ಮಕ್ಕಳಿಗೆ ಇಷ್ಟದ ಬಟ್ಟೆ ಕೊಡಿಸಿದ್ದಾರೆ. ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಹಾಗೂ ಸಮಾಜ ಸೇವೆಗೆ ತಮ್ಮ ಸಂಬಳದಲ್ಲಿ ಪ್ರತಿ ತಿಂಗಳೂ ರೂ.10 ಸಾವಿರ ಮೀಸಲಿಟ್ಟಿದ್ದಾರೆ. ಅಂಥ ನಿಸ್ವಾರ್ಥ ದಾನಿಗಳ ಸಂಖ್ಯೆ ಹೆಚ್ಚಬೇಕು ಎಂದು ಹೇಳಿದರು.
ರಂಗಕರ್ಮಿ ಪಿ.ನಾಗರಾಜ ಮಾತನಾಡಿ, ಶಾಲೆಯ ಅಭಿವೃದ್ಧಿಯಲ್ಲಿ ಸ್ಥಳೀಯ ಹಾಲು ಉತ್ಪಾದಕರ ಸಹಕಾರ ಸಂಘ ಪ್ರಮುಖ ಪಾತ್ರ ವಹಿಸಿದೆ. ಮಕ್ಕಳ ಕಲಿಕೆಗೆ ಪೂರಕವಾದ ಎಲ್ಲ ಸೌಲಭ್ಯ ಒದಗಿಸುತ್ತಿದೆ. ಗ್ರಾಮಸ್ಥರೂ ಸಹ ಶಾಲೆ ವಿಷಯದಲ್ಲಿ ಸಕಾರಾತ್ಮಕ ಧೋರಣೆ ಹೊಂದಿದ್ದಾರೆ. ಆದ್ದರಿಂದಲೆ ಶಾಲೆ ಪ್ರಗತಿ ಪಥದಲ್ಲಿ ಸಾಗಿದೆ ಎಂದು ಹೇಳಿದರು.
ಶೀಗೇನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಮಾತನಾಡಿ, ನಾನು ಮಕ್ಕಳಲ್ಲಿ ದೇವರನ್ನು ಕಾಣುತ್ತೇನೆ. ಮಕ್ಕಳ ಸೇವೆಯನ್ನು ದೇವರ ಸೇವೆಯೆಂದು ತಿಳಿದು ಮಾಡುತ್ತಿದ್ದೇನೆ. ಮಕ್ಕಳೇ ಸಮಾಜದ ನಿಜವಾದ ಆಸ್ತಿ. ಅವರು ಶೈಕ್ಷಣಿಕವಾಗಿ ಮುಂದೆ ಬಂದಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತದೆ. ಕೊಡುವುದರಲ್ಲಿ ಇರುವ ತೃಪ್ತಿಯೇ ಬೇರೆ. ಅದನ್ನು ಕೊಟ್ಟು ಅನುಭವಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ಹಾಗೂ ಬಣ್ಣದ ಬಟ್ಟೆ ವಿತರಿಸಲಾಯಿತು. ಶಾಲೆಗೆ ಕೊಡುಗೆ ನೀಡಿದ ದಾನಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕ ಶಿವಣ್ಣಾಚಾರ್, ಸಿಆರ್‍ಪಿ ರೂಪ, ಎಸ್.ಆರ್.ಧರ್ಮೇಶ್, ಮುನೇಗೌಡ, ನಂಜಪ್ಪ, ನಾಗೇಶ್, ಗೋಪಾಲಪ್ಪ, ಅಶ್ವತ್ಥಪ್ಪ, ಹರೀಶ್, ಶ್ರೀನಿವಾಸ್, ನಾರಾಯಣಸ್ವಾಮಿ, ಶ್ರೀನಿವಾಸ್, ಕೆ.ಸಿ.ಕೃಷ್ಣ, ಕೆ.ಸಿ.ಶ್ರೀನಿವಾಸ್, ಸಂತೋಷ್, ಶಿವು, ಸುಶೀಲಮ್ಮ, ವಿ.ಮಂಗಳ ಇದ್ದರು.
ಪೌರಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಪೂರಕವಾದ ಎಲ್ಲ ಕ್ರಮ ಕೈಗೊಳ್ಳಲಾಗುವುದು : ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ
ಶ್ರೀನಿವಾಸಪುರ: ಪೌರಕಾರ್ಮಿಕರು ನಿಜವಾದ ಕ್ಷೇಮ ಪಾಲಕರು. ಪೌರಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಪೂರಕವಾದ ಎಲ್ಲ ಕ್ರಮ ಕೈಗೊಳ್ಳಲಾಗುವುದು. ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪೌರಕಾರ್ಮಿಕರು ತಮ್ಮ ನಿಸ್ವಾರ್ಥ ಸೇವೆ ಮೂಲಕ ನಾಗರಿಕರ ಪ್ರೀತಿ ಹಾಗೂ ಗೌರಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
ಪಟ್ಟಣದ ನಾಗರಿಕರಿಗೆ ನೀರು ಹಂಚಿಕೆ ಹಾಗೂ ಸ್ವಚ್ಛ ಪರಿಸರ ನಿರ್ಮಾಣ ಮಾಡುವುದರದ ಮೂಲಕ ನಾಗರಿಕರ ಆರೋಗ್ಯ ರಕ್ಷಣೆ ಮಾಡುವ ಪೌರಕಾರ್ಮಿಕರ ಬಗ್ಗೆ ಲಘುವಾಗಿ ಮಾತನಾಡಬಾರದು. ಅವರು ನಿರ್ವಹಿಸುವ ಕೆಲಸ ಯಾವುದೇ ದೊಡ್ಡ ಕಾರ್ಯಕ್ಕಿಂತ ಕಡಿಮೆಯದಲ್ಲ. ಅವರು ವೈಯಕ್ತಿಕ ಆರೋಗ್ಯ ಮತ್ತು ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ರೂ.25 ಕೋಟಿ ವೆಚ್ಚದಲ್ಲಿ ಪಟ್ಟಣದ ಸರ್ವತೋಮುಖ ಅಭಿವೃದ್ಧಿ ಕೈಗೊಳ್ಳಲಾಗುವುದು. ಪಟ್ಟಣದ ಹೊರವಲಯದಲ್ಲಿನ ಅಮಾನಿ ಕೆರೆ ಅಭಿವೃದ್ಧಿ ಪಡಿಸಿ, ಬೋಟಿಂಗ್ ಸೌಲಭ್ಯ ಕಲ್ಪಿಸಲಾಗುವುದು. ಅದಕ್ಕೆ ಪೂರಕವಾಗಿ ಬೇರೆ ಕೆರೆಗಳಿಂದ ಅಮಾನಿ ಕೆರೆಗೆ ಮಳೆ ನೀರು ಹರಿಸುವ ಕಾಮಗಾರಿ ಕೈಗೊಳ್ಳಲಾಗುವುದು. ಪಟ್ಟಣದಲ್ಲಿ ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರು ಪೂರೈಕೆ ಮಾಡಲು ಹಾಗೂ ಚರಂಡಿ ಸ್ವಚ್ಛತೆಗೆ ಪುರಸಭೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಮಾತನಾಡಿ ವೈ.ಎನ್.ಸತ್ಯನಾರಾಯಣ ಮಾತನಾಡಿ, ಪೌರಕಾರ್ಮಿಕರು ಕಾರ್ಯನಿರ್ವಹಿಸುವಾಗ ತಪ್ಪದೆ ಸುರಕ್ಷತಾ ಕ್ರಮ ಅನುಸರಿಸಬೇಕು. ಪುರಸಭೆ ವತಿಯಿಂದ ನೀಡಲಾಗಿರುವ ಸುರಕ್ಷತಾ ಸಾಧನ ಧರಿಸಿ ಕಾರ್ಯನಿರ್ವಹಿಸಬೇಕು. ನಿಯಮಾನುಸಾರ ಪುರಸಭೆ ವತಿಯಿಂದ ಲಭ್ಯವಿರುವ ಎಲ್ಲ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು.
ಪಟ್ಟಣದಲ್ಲಿ ಪ್ಲಾಸ್ಟಿಕ್ ಕವರ್ ಬಳಕೆ ನಿಷೇಧಿಸಲಾಗಿದೆ. ಪುರಸಭೆ ಸಿಬ್ಬಂದಿ ಕೈಗೊಂಡ ಕಾರ್ಯಾಚರಣೆಯಿಂದಾಗಿ ಶೇ.60 ರಷ್ಟು ಪ್ಲಾಸ್ಟಿಕ್ ಬಳಕೆ ನಿಲ್ಲಿಸಲಾಗಿದೆ. ಪ್ಲಾಸ್ಟಿಕ್ ನಿಯಂತ್ರಣಕ್ಕೆ ಸಾರ್ವಜನಿಕರು ಸಹಕರಿಸಬೇಕು. ಬಟ್ಟೆ ಬ್ಯಾಗ್ ಬಳಸಬೇಕು. ಅನಾರೋಗ್ಯಕರ ಪರಿಸರ ನಿರ್ಮಾಣ ಮಾಡುವುದನ್ನು ನಿಲ್ಲಿಸಬೇಕು. ತ್ಯಾಜ್ಯ ವಸ್ತು ನಿರ್ವಹಣೆಗೆ ಸಹಕರಿಸಬೇಕು ಎಂದು ಹೇಳಿದರು.
ಪುರಸಭೆ ವ್ಯವಸ್ಥಾಪಕ ನವೀನ್ ಚಂದ್ರ ಮಾತನಾಡಿ, ಪೌರಕಾರ್ಮಿಕರು ವೈದ್ಯರಿಗೆ ಸಮಾನವಾಗಿ ನಾಗರಿಕರ ಆರೋಗ್ಯ ರಕ್ಷಣೆ ಮಾಡುತ್ತಿದ್ದಾರೆ. ಪಟ್ಟಣದ 35 ಸಾವಿರ ನಾಗರಿಕರ ಆರೋಗ್ಯದ ಹೊಣೆ ಹೊತ್ತಿದ್ದಾರೆ. ಅವರ ಸೇವೆ ಪರಿಗಣಿಸಿ ಅಭಿನಂದಿಸವ ಉದ್ದೇಶದಿಂದ ಪೌರಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೌರಕಾರ್ಮಿಕರನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು. ಪೌರಕಾರ್ಮಿಕರ ಕ್ರೀಡಾ ಕೂಟದಲ್ಲಿ ವಿಜೇತರಾಗಿದ್ದ ಕ್ರೀಡಾಪಟುಗಳಿಗೆ ಪ್ರಮಾಣ ಪತ್ರ ಹಾಗೂ ಪಾರಿತೋಷಕ ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ. ಪುರಸಭೆ ಮಾಜಿ ಉಪಾಧ್ಯಕ್ಷೆ ಆಯಿಷಾ ನಯಾಜ್, ಪುರಸಭೆ ಪರಿಸರ ಅಭಿಯಂತರ ಕೆ.ಎಸ್.ಲಕ್ಷ್ಮೀಶ, ಹಿರಿಯ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಕಂದಾಯ ಅಧಿಕಾರಿ ವಿ.ನಾಗರಾಜ್, ನಿರೀಕ್ಷಕ ಎಂ.ಶಂಕರ್, ಎಂಜಿನಿಯರ್ ಶ್ರೀನಿವಾಸ್, ವೇದಾಂತ್ ಶಾಸ್ತ್ರಿ, ಸೀತಾರಾಮರೆಡ್ಡಿ, ಸುರೇಶ್, ಸಂತೋಷ್, ಶಿವಪ್ರಸಾದ್, ಗೌತಮ್, ಶ್ರೀನಾಥ್, ವಿ.ಶ್ರೀನಿವಾಸ್, ಚೆಂದು. ಶಾರದ, ರೂಪ, ಭಾಗ್ಯಮ್ಮ, ಶಾಂತಮ್ಮ, ನೇತ್ರಾ, ಬಾಲಕೃಷ್ಣ ಇದ್ದರು.
ಎಂಐಟಿ ಕುಂದಾಪುರ – ಪ್ರಥಮ ವರ್ಷದ ಇಂಡಕ್ಷನ್ ಕಾರ್ಯಕ್ರಮ-ಫಿಟ್‌ನೆಸ್ ಅನ್‌ಪ್ಲಗ್ಡ್ ಕುರಿತು ಸಂವಾದ
ಕುಂದಾಪುರ: ಎಂಐಟಿ ಕುಂದಾಪುರದ ಪ್ರಥಮ ವರ್ಷದ ಇಂಡಕ್ಷನ್ ಕಾರ್ಯಕ್ರಮ 2023-24 ರ ಅಂಗವಾಗಿ, ಮಾಹೆ ಮಣಿಪಾಲದ ದೈಹಿಕ ಶಿಕ್ಷಣದ ಉಪನಿರ್ದೇಶಕ ಡಾ.ದೀಪಕ್ ರಾಮ್ ಬೈರಿ ಅವರಿಂದ ಫಿಟ್‌ನೆಸ್ ಅನ್‌ಪ್ಲಗ್ಡ್ ವಿಷಯದ ಕುರಿತು ಸಂವಾದವನ್ನು ಏರ್ಪಡಿಸಲಾಗಿತ್ತು. ದೈಹಿಕ ಸಾಮರ್ಥ್ಯದ ಮಹತ್ವ ಮತ್ತು ನಿರಂತರ ದೈಹಿಕ ವ್ಯಾಯಾಮದ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ವಿವಿಧ ವಿಧಾನಗಳನ್ನು ಅವರು ವಿದ್ಯಾರ್ಥಿಗಳಿಗೆ ವಿವರಿಸಿದರು. ನಿಯಮಿತ ವಾಕಿಂಗ್ ಅಭ್ಯಾಸದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕೆಲವು ಶಾಲೆಗಳಲ್ಲಿ ಪಿಟಿ ಅವಧಿಯನ್ನು ಬೇರೆ ಉದ್ದೇಶಗಳಿಗೆ ಬಳಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಹರ್ಷಿತಾ ಸ್ವಾಗತಿಸಿ, ಡಾ.ರಾಮಕೃಷ್ಣ ಹೆಗಡೆ ವಂದಿಸಿದರು. ಪ್ರೊ.ಸೂಕ್ಷ್ಮ ಅಡಿಗ ಕಾರ್ಯಕ್ರಮ ಸಂಯೋಜಿಸಿದರು. MIT ಕುಂದಾಪುರದ BSH ವಿಭಾಗವು ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆ: ಗುರು ವಂದನೆ ಕಾರ್ಯಕ್ರಮ
ಕುಂದಾಪುರ: ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿಯಾಗಿದ್ದು ಶಿಕ್ಷಕರು ನೀಡುವ ಶಿಕ್ಷಣ ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ಸಂಸ್ಕಾರಯುತ ಮೌಲ್ಯಗಳನ್ನು ಕಲಿಸಿ, ಬದುಕನ್ನು ನಿರೂಪಿಸುವ ಪವಿತ್ರ ವೃತ್ತಿಯಾಗಿದೆ’ ಎಂದು ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಸಂಚಾಲಕ ಅತೀ ವಂ.ಫಾ.ಸ್ಟ್ಯಾನಿ ತಾವ್ರೋ ಹೇಳಿದರು.
ಅವರು ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಸಂಭ್ರಮ ಪ್ರಯುಕ್ತ ನಡೆದ
ಪೋಷಕ ಶಾಲೆಗಳಲ್ಲಿ ಸೇವೆ ಸಲ್ಲಿಸುವ ಶಿಕ್ಷಕರನ್ನು ಗುರುತಿಸುವ ಗುರು ವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಆಶಯದ ಮಾತುಗಳನ್ನಾಡಿದರು.ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಅಚ್ಲಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಶಾಲಾ ಮುಖ್ಯ ಶಿಕ್ಷಕಿ ಅಸುಂತಾ ಲೋಬೋ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ “ಆದರ್ಶ ಶಿಕ್ಷಕ ಪ್ರಶಸ್ತಿ” ಪುರಸ್ಕ್ರತ ಕುಂದಾಪುರ ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಡೊರತಿ ಸುವಾರಿಸ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಶಿಕ್ಷಕಿ ಸುಶೀಲಾ ಖಾರ್ವಿ ಸ್ವಾಗತಿಸಿದರು.ಶಿಕ್ಷಕಿ ಸ್ಮಿತಾ ಡಿ.ಸೋಜಾ ವಂದಿಸಿದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.
ಇರಾಕ್‌ನಲ್ಲಿ ಮದುವೆ ಹಾಲ್‌ನಲ್ಲಿ ಭಯಾನಕ ಬೆಂಕಿ ದುರಂತ – ಕನಿಷ್ಠ ಸುಮಾರು 114 ಸಾವು, 150 ಮಂದಿ ಗಾಯಗೊಂಡಿದ್ದಾರೆ
ಇರಾಕ್ ದೇಶದ ನಿನೆವೆ ಪ್ರಾಂತ್ಯದಲ್ಲಿ ಅದರ ಹಮ್ದನಿಯಾ ಪ್ರದೇಶದಲ್ಲಿ ಭಯಾನಕ ಬೆಂಕಿ ದುರಂತ ಸಂಭವಿಸಿದ್ದು. ಕನಿಷ್ಠ 100 ಜನರು ದಾರುಣವಾಗಿ ಸತ್ತು ಸುಮಾರು 150 ಮಂದಿ ಗಾಯಗೊಂಡಿದ್ದಾರೆ. ಈ ದುರಂತ ರಾಜಧಾನಿ ಬಾಗ್ದಾದ್ ನಗರದ ವಾಯುವ್ಯಕ್ಕೆ ಸುಮಾರು 335 ಕಿಲೋಮೀಟರ್‌ಗಳಷ್ಟು ಉತ್ತರದ ಇರಾಕಿನ ಇನ್ನೊಂದು ನಗರ ಮೊಸುಲ್ ಹೊರ ಪ್ರದೇಶದಲ್ಲಿ ನಡೆದಿದೆ ಎಂದು ಮಾಧ್ಯಮಗಳು ತಿಳಿಸುತ್ತವೆ.
ಇರಾಕಿನಲ್ಲಿ ಸಾಕಷ್ಟು ಕ್ರಿಶ್ಚಿಯನರು ಇದ್ದು, ಉತ್ತರ ಇರಾಕ್‌ನಲ್ಲಿ ಕ್ರಿಶ್ಚಿಯನ್ ವಿವಾಹವನ್ನು ಆಯೋಜಿಸುದ ಸಭಾಂಗಣದಲ್ಲಿ ದುರಂತ ಸಂಭವಿಸಿದ್ದು, ಈ ದುರಂತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಇರಾಕ್‌ನ ನಿನೆವೆ ಪ್ರಾಂತ್ಯದಲ್ಲಿ ಅದರ ಹಮ್ದಾನಿಯ ಪ್ರದೇಶದಲ್ಲಿ ಬೆಂಕಿ ಸಂಭವಿಸಿದೆ ಎಂದು ಅವರು ಹೇಳಿದರು. ಅದು ಪ್ರಧಾನವಾಗಿ ಕ್ರಿಶ್ಚಿಯನ್ ಪ್ರದೇಶವಾಗಿದ್ದು, ಟೆಲಿವಿಷನ್ ದೃಶ್ಯಾವಳಿಗಳು ಬೆಂಕಿ ಹೊತ್ತಿಕೊಂಡಾಗ ಮದುವೆಯ ಸಭಾಂಗಣದ ಮೇಲೆ ಜ್ವಾಲೆಗಳು ಹರಡುವುದನ್ನು ತೋರಿಸಿದೆ. ಬೆಂಕಿಯ ನಂತರ, ಬೆಂಕಿಯ ಮೂಲಕ ಜನರು ನಡೆದುಕೊಂಡು ಹೋಗುವಾಗ ಸುಟ್ಟ ಲೋಹ ಮತ್ತು ಅವಶೇಷಗಳು ಮಾತ್ರ ಗೋಚರಿಸಿದವು,
ಬದುಕುಳಿದವರು ಸ್ಥಳೀಯ ಆಸ್ಪತ್ರೆಗಳಿಗೆ ದಾವಿಸಿದರು, ಆಮ್ಲಜನಕ ನೀಡಿ ಚಿಕಿತ್ಸೆ ನೀಡಲಾಯಿತು, ಅವರ ಕುಟುಂಬಗಳು ಹಜಾರಗಳ ಮೂಲಕ ಮತ್ತು ಹೊರಗೆ ಕಾರ್ಮಿಕರು ಹೆಚ್ಚು ಆಮ್ಲಜನಕ ಸಿಲಿಂಡರ್‌ಗಳನ್ನು ಸಂಘಟಿಸಿದ್ದರಿಂದ.ನಿನೆವೆಹ್ ಪ್ರಾಂತ್ಯದ ಆರೋಗ್ಯ ಇಲಾಖೆಯು ಸಾವಿನ ಸಂಖ್ಯೆಯನ್ನು 114 ಕ್ಕೆ ಏರಿಸಿದೆ. ಆರೋಗ್ಯ ಸಚಿವಾಲಯದ ವಕ್ತಾರ ಸೈಫ್ ಅಲ್-ಬದರ್ ಈ ಹಿಂದೆ ಸರ್ಕಾರಿ ಇರಾಕಿ ನ್ಯೂಸ್ ಏಜೆನ್ಸಿಯ ಮೂಲಕ ಗಾಯಗೊಂಡವರ ಸಂಖ್ಯೆಯನ್ನು 150 ಎಂದು ಹೇಳಿದ್ದಾರೆ.
ಈ ದುರದೃಷ್ಟಕರ ಅಪಘಾತದಿಂದ ಸಂತ್ರಸ್ತರಾದವರಿಗೆ ಪರಿಹಾರ ನೀಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅಲ್-ಬದ್ರ್ ಹೇಳಿದರು. ಪ್ರಧಾನಿ ಮೊಹಮ್ಮದ್ ಶಿಯಾ ಅಲ್-ಸುಡಾನಿ ಅವರು ಬೆಂಕಿಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಮತ್ತು ಪರಿಹಾರವನ್ನು ಒದಗಿಸಲು ದೇಶದ ಆಂತರಿಕ ಮತ್ತು ಆರೋಗ್ಯ ಅಧಿಕಾರಿಗಳನ್ನು ಕೇಳಿದ್ದಾರೆ ಎಂದು ಅವರ ಕಚೇರಿ ಆನ್‌ಲೈನ್ ಹೇಳಿಕೆಯಲ್ಲಿ ತಿಳಿಸಿದೆ.
ಗಾಯಗೊಂಡವರಲ್ಲಿ ಕೆಲವರನ್ನು ಪ್ರಾದೇಶಿಕ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ ಎಂದು ನಿನೆವೆ ಪ್ರಾಂತೀಯ ಗವರ್ನರ್ ನಜೀಮ್ ಅಲ್-ಜುಬೌರಿ ಹೇಳಿದ್ದಾರೆ. ಬೆಂಕಿ ಅವಘಡದಿಂದ ಇನ್ನೂ ಯಾವುದೇ ಅಂತಿಮ ಸಾವು ನೋವು ಸಂಭವಿಸಿಲ್ಲ ಎಂದು ಅವರು ಎಚ್ಚರಿಸಿದ್ದಾರೆ, ಇದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಸೂಚಿಸುತ್ತದೆ.
ಈ ದುರಂತಕ್ಕೆ ಪಟಾಕಿ ಸಿಡಿಸಿದ್ದೆ ಕಾರಣವೆಂದು ಮಾಧ್ಯಮಗಳು ಹೇಳುತ್ತಿವೆ. ಗಲ್ಫ್ ನಲ್ಲಿ ಕಟ್ಟಡ ಮತ್ತು ಸಭಾಂಗಣಗಳ ನಿರ್ಮಾಣದ ಸಮಯದಲ್ಲಿ ಸುರಕ್ಷೆತೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ, ಬೆಂಕಿ ಅವಘಡನೆಡದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತುರ್ತು ದ್ವಾರಗಳನ್ನು ನಿಮಿಸಲಾಗುತ್ತದೆ. ಆದರೆ ಇಲ್ಲಿ ಇದಕ್ಕಾಗಿ ಹೆಚ್ಚು ಆದ್ಯತೆ ನೀಡುಉದಿಲ್ಲ ಎಂದು ಹೇಳಲಾಗುತ್ತೆ.