ಪಟ್ಟಣದ ತ್ಯಾಗರಾಜ ಬಡವಾಣೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾರತದ ಸಂವಿಧಾನದ ಪೀಠಿಕೆಯನ್ನು ಸರ್ಕಾರದ ಸುತ್ತೋಲೆಯಂತೆ ಮಂಗಳವಾರ ವಿದ್ಯಾರ್ಥಿಗಳಿಂದ ಓದಿಸುವಂತಹ ಪ್ರಕ್ರಿಯಿಗೆ ಚಾಲನೆಯನ್ನು ಮುಖ್ಯ ಶಿಕ್ಷಕ ಎಂ.ಬೈರೇಗೌಡ ಹಾಗೂ ಶಾಲೆಯ ಶಿಕ್ಷಕರು ನೀಡಿದರು.
Month: September 2023
ಕೆಂಪೇಗೌಡರ ಪ್ರತಿಮೆ ಸ್ಥಾಪಿಸುವುದಾದರೆ, ತಮ್ಮ ಸಮುದಾಯದ ದಾರ್ಶನಿಕರ ಪ್ರತಿಮೆಗಳನ್ನೂ ಸ್ಥಾಪಿಸಬೇಕು : ವಿವಿಧ ಸಮುದಾಯಗಳ ಜನರು ಒತ್ತಾಯ
ಶ್ರೀನಿವಾಸಪುರ: ತಾಲ್ಲೂಕಿನ ರೋಜೇಹಳ್ಳಿ ಕ್ರಾಸ್‍ನಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸುವುದಾದರೆ, ತಮ್ಮ ಸಮುದಾಯದ ದಾರ್ಶನಿಕರ ಪ್ರತಿಮೆಗಳನ್ನೂ ಸ್ಥಾಪಿಸಬೇಕು ಎಂದು ವಿವಿಧ ಸಮುದಾಯಗಳ ಜನರು ಒತ್ತಾಯಿಸಿದ ಘಟನೆ ಮಂಗಳವಾರ ನಡೆಯಿತು.
ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ರೋಜೇನಹಳ್ಳಿ ಕ್ರಾಸ್‍ಗೆ ಭೇಟಿ ನೀಡಿ, ಈಗಾಗಲೆ ರಸ್ತೆ ಮಧ್ಯಭಾಗ ವೃತ್ತದಲ್ಲಿ ಸ್ಥಾಪಿಸಲಾಗಿರುವ ಕೆಂಪೇಗೌಡರ ಪ್ರತಿಮೆ ತೆರವುಗೊಳಿಸಿ, ರಸ್ತೆ ಬಿದಯ ಕುಂಟೆ ಪಕ್ಕದಲ್ಲಿ ಸ್ಥಾಪಿಸುವಂತೆ ಸಲಹೆ ಮಾಡಿದರು. ಆ ಕಾರ್ಯಕ್ಕೆ ರೂ.10 ಲಕ್ಷ ನೀರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೆಲವರು ಡಾ. ಬಿ.ಆರ್.ಅಂಬೇಡ್ಕರ್, ವಾಲ್ಮೀಕಿ, ಕೈವಾರ ನಾರಾಯಣಪ್ಪ, ಪುನೀತ್ ರಾಜ್ ಕುಮಾರ್ ಭಾವಚಿತ್ರ ಹಿಡಿದು ಬಂದು, ತಮ್ಮ ಸಮುದಾಯದ ದಾರ್ಶನಿಕರ ಪ್ರತಿಮೆ ಸ್ಥಾಪಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಅವರ ಬೇಡಿಕೆಗೆ ಸ್ಪಂದಿಸಿದ ಸಂಸದ ಎಸ್.ಮುನಿಸ್ವಾಮಿ ಅವರು, ಕ್ರಾಸ್‍ನಲ್ಲಿ ಸರ್ಕಾರಿ ಜಮೀನು ಇರುವುದರಿಂದ, ಆ ಜಾಗದಲ್ಲಿ ಉದ್ಯಾನ ಅಭಿವೃದ್ಧಿ ಪಡಿಸಿ, ಎಲ್ಲ ದಾರ್ಶನಿಕರ ಪ್ರತಿಮೆಗಳನ್ನೂ ಸ್ಥಾಪಿಸಲಾಗುವುದು. ಇಲ್ಲಿನ ಜನರು ಶಾಂತಿಪ್ರಿಯರಾಗಿದ್ದು, ಯಾವುದೇ ವಿವಾದಕ್ಕೆ ಆಸ್ಪದ ನೀಡುವುದಿಲ್ಲ. ಕೆಂಪೇಗೌಡರ ಪುತ್ಥಳಿಯನ್ನು ರಸ್ತೆ ಮಧ್ಯಭಾಗದಿಂದ ತೆಗೆದು ಪಕ್ಕದಲ್ಲಿ ಸ್ಥಾಪಿಸಲು ಜಿಲ್ಲಾಧಿಕಾರಿ, ಸ್ವಾಮೀಜಿ ಅವರೊಂದಿಗೆ ಚರ್ಚಿಸಿ ನಿರ್ಧರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿದ್ದ ಹಳೆ ಕಟ್ಟಡಗಳನ್ನು ಕೆಡವಲಾಯಿತು. ಕಟ್ಟಡ ಕೆಡವಲಾದ ಸ್ಥಳದಲ್ಲಿ ಅಂಗಡಿ ಮಳಿಗೆ ನಿರ್ಮಿಸಿ ಕೊಡುವಂತೆ ದಳಸನೂರು ಗ್ರಾಮ ಪಂಚಾಯಿತಿ ಪಿಡಿಒಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಮಾಜಿ ಅಧ್ಯಕ್ಷ ಚಿನ್ನಪ್ಪರೆಡ್ಡಿ, ಮುಖಂಡರಾದ ಆರ್.ಎನ್.ಚಂದ್ರಶೇಖರ್, ರಾಮಚಂದ್ರೇಗೌಡ, ಶ್ರೀನಾಥರೆಡ್ಡಿ, ಆನಂದ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಪಿಡಿಒ ಚಿನ್ನಪ್ಪ, ಡಿವೈಎಸ್‍ಪಿ ಕೆ.ಆರ್.ರಘು, ಪೊಲೀಸ್ ಇನ್ಸ್‍ಪೆಕ್ಟರ್ ಆರ್.ದಯಾನಂದ್, ಎಂ.ಜಿ.ಲೋಕೇಶ್ ಇದ್ದರು.
ನಿವೃತ್ತ ಸರ್ಕಾರಿ ನೌಕರರು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು:ಅಧ್ಯಕ್ಷ ನಾರಾಯಣರೆಡ್ಡಿ
ಶ್ರೀನಿವಾಸಪುರ: ನಿವೃತ್ತ ಸರ್ಕಾರಿ ನೌಕರರು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು. ಚಟುವಟಿಕೆಯಿಂದ ಇರಲು ಪ್ರಯತ್ನಿಸಬೇಕು ಎಂದು ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಾರಾಯಣರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ನಿವೃತ್ತ ನೌಕರರ ಮಾಸಿಕ ಸಭೆ, ಶಿಕ್ಷಕರ ದಿನಾಚರಣೆ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದಾರ್ಶನಿಕರ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು.
ಸಂಘದ ವತಿಯಿಂದ ಸಮಾಜ ಸೇವಾ ಕಾರ್ಯಕ್ರಮ ಕೈಗೊಳ್ಳಲಾಗುವುದು. ಪ್ರತಿಭಾವಂತ ವಿದಾರ್ಥಿಗಳಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಮಾಸಿಕ ಸಭೆಯಲ್ಲಿ ನಿವೃತ್ತ ನೌಕರರ ಕುಂದು ಕೊರತೆ ವಿಚಾರಿಸಲಾಗುವುದು. ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಹಿರಿಯ ಸದಸ್ಯರು ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿದ್ದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಶ್ರೀನಿವಾಸರೆಡ್ಡಿ, ಬೈರಾರೆಡ್ಡಿ, ನಾಗರಾಜ್, ಮಾರಪ್ಪರೆಡ್ಡಿ, ಸತ್ಯನಾರಾಯಣರೆಡ್ಡಿ ಇದ್ದರು.
ಕೋಲಾರ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ – ಮಲ್ಲಿಕಾರ್ಜುನ್,ಮುನಿರಾಜು ಸೇರಿ 18 ಮಂದಿಗೆ ಸನ್ಮಾನ
ಕೋಲಾರ:- ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ,ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಸರ್ಕಾರಿ,ಅನುದಾನಿತ ಶಾಲೆಗಳ ಒಟ್ಟು 18 ಶಿಕ್ಷಕರನ್ನು ಸನ್ಮಾನಿಸಲಾಯಿತು.
ಪ್ರತಿ ತಾಲ್ಲೂಕಿನಿಂದಲೂ ಕಿರಿಯಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲಾ ವಿಭಾಗಗಳು ಸೇರಿದಂತೆ ತಲಾ ಮೂವರು ಶಿಕ್ಷಕರನ್ನು ಆಯ್ಕೆ ಮಾಡಿದ್ದು, ಜಿಲ್ಲೆಯ ಎಲ್ಲಾ 6 ತಾಲ್ಲೂಕುಗಳ 18 ಶಿಕ್ಷಕರನ್ನು ಗೌರವಿಸಲಾಯಿತು.
ಜಿಲ್ಲಾಮಟ್ಟದ ಉತ್ತಮ ಶಿಕ್ಷಕಪ್ರಶಸ್ತಿಗೆ ಭಾಜನರಾದ ಶಿಕ್ಷಕರೆಂದರೆ ಪ್ರೌಢಶಾಲಾ ವಿಭಾಗದಿಂದ ಕೋಲಾರ ತಾಲ್ಲೂಕಿನ ಕ್ಯಾಲನೂರು ಕೆಪಿಎಸ್ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಓ.ಮಲ್ಲಿಕಾರ್ಜುನ್, ಬಂಗಾರಪೇಟೆ ತಾಲ್ಲೂಕಿನ ಬಲಮಂದೆ ಪ್ರೌಢಶಾಲೆಯ ಎ.ಗಿರಿಯಪ್ಪ, ಕೆಜಿಎಫ್ ತಾಲ್ಲೂಕು ಸೆಂಟ್‍ಜೋಸೆಫ್ ಅನುದಾನಿತ ಶಾಲೆಯ ಎಂ.ಹೆಚ್.ಯೋಗೇಂದ್ರಯ್ಯ, ಮಾಲೂರು ತಾಲ್ಲೂಕು ಕೆಎಲ್‍ಇ ಅನುದಾನಿತ ಶಾಲೆಯ ಜಯಪ್ರಕಾಶ್, ಮುಳಬಾಗಿಲು ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಟಿ.ಎಸ್.ನಾಗೇಶ್, ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮೀಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ಆರ್.ಶ್ರೀನಿವಾಸಲು ಭಾಜನರಾಗಿದ್ದಾರೆ.
ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು
ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಬಂಗಾರಪೇಟೆ ತಾಲ್ಲೂಕು ದೊಡ್ಡಚಿನ್ನಹಳ್ಳಿ ಶಾಲೆ ಶಿಕ್ಷಕಿ ಕೆ.ಸಿ.ಪದ್ಮಾವತಿ, ಕೆಜೆಎಫ್ ತಾಲ್ಲೂಕಿನ ಕ್ಯಾಸಂಬಳ್ಳಿ ಶಾಲೆಯ ಸುನಂದಮ್ಮ, ಕೋಲಾರ ತಾಲ್ಲೂಕಿನ ಐತರಸನಹಳ್ಳಿ ಶಾಲೆಯ ಶಿಕ್ಷಕ ಸಿ.ಮುನಿರಾಜು, ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿ ಶಾಲೆಯ ಮುತ್ತಣ್ಣ, ಮುಳಬಾಗಿಲು ತಾಲ್ಲೂಕು ಜಿ.ಮಾರಾಂಡಹಳ್ಳಿ ಶಾಲೆಯ ಶಿಕ್ಷಕ ನಾಗರಾಜಯ್ಯ, ಶ್ರೀನಿವಾಸಪುರ ತಾಲ್ಲೂಕು ಹರಳಕುಂಟೆ ಶಾಲೆ ಮುಖ್ಯ ಶಿಕ್ಷಕ ಕೆ.ಎಚ್.ಮೋಹನ್‍ಕುಮಾರ್ ಗುಪ್ತ ಭಾಜನರಾಗಿದ್ದಾರೆ.
ಕಿರಿಯ ಪ್ರಾಥಮಿಕ ವಿಭಾಗದ ಶಿಕ್ಷಕರು
ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಬಂಗಾರಪೇಟೆ ತಾಲ್ಲೂಕು ಗುಟ್ಟಹಳ್ಳಿ ಶಾಲೆಯ ರಮೇಶ್, ಕೆಜಿಎಫ್ ತಾಲ್ಲೂಕಿನ ಬ್ಯಾಟರಾಯನಹಳ್ಳಿ ಶಾಲೆ ಶಿಕ್ಷಕಿ ಹೆಚ್.ವಿ.ಶ್ಯಾಮಲ, ಕೋಲಾರ ತಾಲ್ಲೂಕಿನ ಗಿರ್ನಹಳ್ಳಿ ಶಾಲೆಯ ರೂಪ, ಮಾಲೂರು ತಾಲ್ಲೂಕು ಚವರಮಂಗಲ ಶಾಲೆ ಶಿಕ್ಷಕ ತಿಮ್ಮರಾಯಪ್ಪ, ಮುಳಬಾಗಿಲು ತಾಲ್ಲೂಕಿನ ಆರ್.ಗಡ್ಡೂರು ಶಾಲೆಯ ಶಿಕ್ಷಕಿ ಆರ್.ಶಾರದಮ್ಮ, ಶ್ರೀನಿವಾಪುರ ತಾಲ್ಲೂಕು ಬಿಸನಹಳ್ಳಿ ಶಾಲೆ ಶಿಕ್ಷಕಿ ಎನ್.ಸರೋಜಮ್ಮ ಭಾಜನರಾಗಿದ್ದಾರೆ.
ಶಿಕ್ಷಕರ ದಿನಾಚರಣೆ-18 ಶಿಕ್ಷಕರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ – 2026ರೊಳಗೆ 5 ಕೋ.ವೆಚ್ಚದ ಗುರುಭವನ ನಿರ್ಮಿಸಿ ಹಸ್ತಾಂತರ-ಕೊತ್ತೂರು ಮಂಜುನಾಥ್
ಕೋಲಾರ:- ನಗರದಲ್ಲಿ ಐದು ಕೋಟಿ ರೂ ಅಂದಾಜು ವೆಚ್ಚದಿಂದ ನಿರ್ಮಿಸಲು ಉದ್ದೇಶಿಸಿರುವ ಗುರುಭವನವನ್ನು 2026ರೊಳಗೆ ತಾವೇ ನೇತೃತ್ವವಹಿಸಿ ನಿರ್ಮಾಣ ಮಾಡಿ ಶಿಕ್ಷಕರಿಗೆ ಹಸ್ತಾಂತರ ಮಾಡುವುದಾಗಿ ಶಾಸಕ ಕೊತ್ತೂರು ಡಾ.ಜಿ.ಮಂಜುನಾಥ್ ಘೋಷಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ,ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸಿದ ಹಾಗೂ ನಿವೃತ್ತರಾದ ಶಿಕ್ಷಕರ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಶಿಕ್ಷಕ ಸಂಘಟನೆಗಳಲ್ಲಿನ ಗೊಂದಲ ಮತ್ತಿತರ ಕಾರಣಗಳಿಂದ ಈವರೆಗೂ 7 ಬಾರಿ ಶಂಕುಸ್ಥಾಪನೆಗೊಂಡಿರುವ ಗುರುಭವನದ ಕಾಮಗಾರಿ ಮಾತ್ರ ಆರಂಭಗೊಳ್ಳದಿರುವುದು ವಿಪರ್ಯಾಸ ಎಂದ ಅವರು, ಒಂದೇ ವರ್ಷದಲ್ಲಿ ಇಡೀ ಕಟ್ಟಡದ ಕಾಮಗಾರಿ ಪೂರ್ಣ ಅಸಾಧ್ಯವಾದರೂ ಅತಿ ಶೀಘ್ರ ಶಿಲಾನ್ಯಾಸ ನೆರವೇರರಿಸಿ 2026ರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಅದೇ ಕಟ್ಟಡದಲ್ಲಿ ನಡೆಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.
ಸಂಸದ ಮುನಿಸ್ವಾಮಿ, ವಿಧಾನಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ತಲಾ 50 ಲಕ್ಷ ನೀಡಿದ್ದಾರೆ, ಉಳಿದಂತೆ ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು, ಅನಿಲ್ ಕುಮಾರ್ ಇಬ್ಬರೂ ತಲಾ 25 ಲಕ್ಷ ನೀಡಬೇಕು ಎಂದ ಅವರು, ಶಿಕ್ಷಕರ ಕಲ್ಯಾಣ ನಿಧಿಯ 1 ಕೋಟಿ ರೂ ಸೇರಿದಂತೆ ಎಲ್ಲಾ ಹಣ ಬಳಸಿಕೊಂಡು ಕಟ್ಟಡ ಕಾಮಗಾರಿ ಶೀಘ್ರ ಆರಂಭಿಸುವುದಾಗಿ ತಿಳಿಸಿದರು.
ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾಗಿದ್ದು, ತಂದೆ,ತಾಯಿ, ಶಿಕ್ಷಕ ಮಾತ್ರ ಪ್ರತಿಯೊಬ್ಬರ ಮನಸ್ಸಿನಲ್ಲೂ ಚಿರಸ್ಥಾಯಿ ಉಳಿಯಲು ಸಾಧ್ಯ ಎಂದು ತಿಳಿಸಿ, ಶಿಕ್ಷಕರು ಸಂಘಟನೆ ರಚನೆಗೆ ಚುನಾವಣೆಗೆ ಹೋಗದೇ ಅವಿರೋಧ ಆಯ್ಕೆಗೆ ಅವಕಾಶ ಮಾಡಿಕೊಡಿ, ವಿರಸ,ಗೊಂದಲ ಬೇಡ ಎಲ್ಲರೂ ಒಗ್ಗಟ್ಟಾಗಿ ಸಾಗಿ ಎಂದರು.
ಗುರುಭವನ ವಿಳಂಬ ವಿಷಾದರ-ಅನಿಲ್
ವಿಧಾನಪರಿಷತ್ ಸದಸ್ಯ ಎಂ.ಎಲ್ ಅನಿಲ್‍ಕುಮಾರ್, ಪ್ರಾಥಮಿಕ ಶಿಕ್ಷಣ ಜೀವನದ ಅಡಿಪಾಯವಾಗಿದ್ದು, ಸಮಾಜ ಕಟ್ಟುವ ಶಿಲ್ಪಿಗಳಾದ ಗುರುವಿಗೆ ಅತ್ಯಂತ ಗೌರವವಿದೆ, ನಿಮಗಾಗಿ ಗುರುಭವನ ನಿರ್ಮಾಣ ಇನ್ನು ಆಗದಿರುವುದು ವಿಷಾದದ ಸಂಗತಿ ನಾವು ಹಣ ಕೊಡಲು ಸಿದ್ದವಿದ್ದರೂ ವಿಳಂಬ ಮಾಡುತ್ತಿದ್ದೀರಿ, ಶಾಸಕರು,ಸಂಂಸದರ ಅನುದಾನದ ಜತೆ ನಿಮ್ಮ ಒಂದು ದಿನದ ವೇತನ ನೀಡಿ ಎಂದು ಸಲಹೆ ನೀಡಿದರು.
2ಕೋಟಿ ವೆಚ್ಚದಲ್ಲಿ ಸುಸಜ್ಜಿತ ಶಾಲೆ
ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಮಾತನಾಡಿ, ಶಿಕ್ಷಣ,ಆರೋಗ್ಯ ಕ್ಷೇತ್ರಗಳು ಎರಡು ಕಣ್ಣುಗಳಿದ್ದಂತೆ ಶಿಕ್ಷಣ,ಆಹಾರ,ಆರೋಗ್ಯ ಇವಿದ್ದರೆ ಮಾತ್ರ ಯಾವುದೇ ದೇಶ ಸಾಧನೆ ಮಾಡಲು ಸಾಧ್ಯವಿದೆ, ಕೋಲಾರದ ನೂತನ ಸರ್ಕಾರಿ ಪ್ರೌಢಶಾಲೆ ನೂತನ ಕಟ್ಟಡಕ್ಕೆ 1.20 ಕೋಟಿ ರೂ ಮಂಜೂರು ಮಾಡಿಸಿದ್ದೇನೆ, ಅದೇ ರೀತಿ ಬಾಲಕರ ಕಾಲೇಜು ನಮ್ಮ ಕೋಲಾರದ ಅತ್ಯಂತ ಘನತೆಯ ಕಟ್ಟಡವಾಗಿದೆ, ಅದರ ಅಭಿವೃದ್ದಿಗೂ ಶಾಸಕರು ಕೈಜೋಡಿಸಬೇಕು ಎಂದ ಅವರು, ಒಳ್ಳೆಯ ದಾಖಲಾತಿ ಇರುವ ಶಾಲೆ ಗುರುತಿಸಿಕೊಟ್ಟಲ್ಲಿ ತಾವೇ ಸ್ವತಃ ತಮ್ಮ ಹಣದಿಂದ 2 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಶಾಲಾ ಕಟ್ಟಡ ನಿರ್ಮಿಸಿಕೊಡುವುದಾಗಿ ತಿಳಿಸಿದರು.
ಶಿಕ್ಷಣದಲ್ಲಿ ಸಂಸ್ಕಾರ ಅತಿ ಮುಖ್ಯ-ಎಡಿಸಿ
ಅಪರ ಜಿಲ್ಲಾಧಿಕಾರಿ ಶಂಕರ್ ವಣಿಕ್ಯಾಳ್ ಮಾತನಾಡಿ, ಸರ್ಕಾರಿ ಶಾಲೆಗಳಿಗೆ ಕಾಸ್ಮೆಟಿಕ್ ಟಜ್ ಬೇಡ, ಅಲ್ಲಿ ಗುಣಾತ್ಮಕ ಶಿಕ್ಷಣ ಸಿಗುವಂತೆ ಮಾಡಿದರೆ ಸಾಕು, ಅಂಕ ಆಧಾರಿತ ಶಿಕ್ಷಣಕ್ಕಿಂತ ಮಕ್ಕಳಿಗೆ ಇಂದು ಮೌಲ್ಯಯುತ ಶಿಕ್ಷಣದ ಅಗತ್ಯವಿದೆ, ಮಕ್ಕಳಿಗೆ ಭಾರತೀಯ ಸಂಸ್ಕøತಿ ತಿಳಿಸಿಕೊಡಿ ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.
ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಜ್ಞಾನ ಹಂಚಲು ಶಿಕ್ಷಕರು ನಿಂತ ನೀರಾಗದೇ ಹರಿಯುವ ನೀರಾಗಬೇಕು, ನಿರಂತರ ಅಧ್ಯಯನಶೀಲತೆ ಬೆಳೆಸಿಕೊಳ್ಳಬೇಕು, ಶಿಕ್ಷಣ ನೀಡುವ ಪ್ರತಿಯೊಬ್ಬರೂ ಗುರುಗಳೇ, ಸರ್ಕಾರಿ ಶಾಲೆಗಳ ಮಕ್ಕಳು ಉನ್ನತ ಸ್ಥಾನಕ್ಕೆ ಹೋಗಿದ್ದಾರೆ, ಕೀಳಿರಿಮೆ ಅಗತ್ಯವಿಲ್ಲ, ಶಿಕ್ಷಕರು ಗುಂಪುಗಾರಿಕೆ ದೂರ ಮಾಡಿಕೊಳ್ಳಿ ಶಿಕ್ಷಣ ರಂಗವನ್ನು ಬೆಳೆಸಿ ಎಂದು ಕಿವಿಮಾತು ಹೇಳಿ, ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲೆ ಈ ಬಾರಿ ಮೊದಲ ಮೂರು ಸ್ಥಾನದಲ್ಲಿರಲು ಶ್ರಮಿಸಿ ಎಂದರು.
ಡಿಡಿಪಿಐ ಕೃಷ್ಣಮೂರ್ತಿ ಸ್ವಾಗತಿಸಿ, ಜಿಲ್ಲೆಯ 18 ಮಂದಿಗೆ ಜಿಲ್ಲಾಮಟ್ಟದ ಪ್ರಶಸ್ತಿ ನೀಡಿದ್ದು, ಎಸ್ಸೆಸ್ಸೆಲ್ಸಿ ಉತ್ತಮ ಫಲಿತಾಂಶಕ್ಕಾಗಿ ಇಲಾಖೆ ಸಕಲ ಸಿದ್ದತೆ ನಡೆಸಿದೆ, ಮುಖ್ಯಶಿಕ್ಷಕರ ಸಭೆ ನಡೆಸಲಾಗಿದೆ ಮಕ್ಕಳ ಕಲಿಕೆಗೆ ಅಗತ್ಯವಾದ ಸಂಪನ್ಮೂಲಗಳ ಸಿದ್ದತೆ ನಡೆದಿದೆ ಎಂದರು.
ಇದೇ ಸಂದರ್ಭದಲ್ಲಿ ಸರ್ಕಾರಿ,ಅನುದಾನಿತ,ಅನುದಾನರಹಿತ ಶಾಲೆಗಳಲ್ಲಿ ಪ್ರಸ್ತುತ ವರ್ಷ ನಿವೃತ್ತರಾದ 40ಕ್ಕೂ ಹೆಚ್ಚು ಶಿಕ್ಷಕರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸಿದ ಎಲ್ಲಾ ಆರು ತಾಲ್ಲೂಕುಗಳ ಒಟ್ಟು 18 ಮಂದಿ ಶಿಕ್ಷಕರನ್ನು ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು. ಶಾಸಕ ಕೊತ್ತೂರು ಮಂಜುನಾಥ್ ಕಾಯಕ್ರಮದ ನಂತರ ಎಲ್ಲಾ ಶಿಕ್ಷಕರಿಗೂ ಊಟದ ವ್ಯವಸ್ಥೆ ಮಾಡಿಸಿದ್ದರು.
ಕಾರ್ಯಕ್ರಮದಲ್ಲಿ ಡಯಟ್ ಪ್ರಾಂಶುಪಾಲ ಜಯಣ್ಣ, ಬಿಇಒ ಕನ್ನಯ್ಯ, ಶಿಕ್ಷಣಾಧಿಕಾರಿ ಅಶೋಕ್,ವಿಷಯ ಪರಿವೀಕ್ಷಕರಾದ ಶಂಕರೇಗೌಡ, ಗಾಯತ್ರಿ,ಶಶಿವಧನ, ಕೃಷ್ಣಪ್ಪ, ಇಸಿಒ ಕೆ.ಶ್ರೀನಿವಾಸ್,ಖಾಸಗಿ ಶಾಲೆಗಳ ಸಂಘದ ಸದಾನಂದ್,ಎಸ್.ಮುನಿಯಪ್ಪ, ಜಗದೀಶ್, ವಿವಿಧ ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳಾದ ಜಿ.ಎಂ.ಚಂದ್ರಪ್ಪ, ಜಿ.ಶ್ರೀನಿವಾಸ್, ಶಿವಕುಮಾರ್,ಅಪ್ಪೇಗೌಡ,ನಾಗರಾಜ್,ಅಶ್ವಥ್ಥನಾರಾಯಣ, ವಿ.ಮುರಳಿಮೋಹನ್, ಆರ್.ನಾಗರಾಜ್,ಮುನಿಯಪ್ಪ, ಆಂಜನೇಯ,ನಾರಾಯಣರೆಡ್ಡಿ,ಶ್ರೀರಾಮ್ ಮತ್ತಿತರರಿದ್ದರು.
ವಿಶ್ವದಾದ್ಯಂತ ಸೆ. 5ರಂದು “ಬೆನ್ನುಹುರಿ ಅಪಘಾತ ದಿನ”ವನ್ನು ಆಚರಿಸಲಾಗುತ್ತದೆ “ಬೆನ್ನುಹುರಿ”ಯ ಬಗ್ಗೆ ವಿಶೇಷ ಲೇಖನ
ವಿಶ್ವದಾದ್ಯಂತ ಸೆ. 5ರಂದು “ಬೆನ್ನುಹುರಿ ಅಪಘಾತ ದಿನ”ವನ್ನು ಆಚರಿಸಲಾಗುತ್ತದೆ. ಕರ್ನಾಟಕದಲ್ಲಿ ಪ್ರಸ್ತುತ ಬೆನ್ನುಹುರಿ ಅಪಘಾತಕ್ಕೊಳಗಾದವರ ಸಂಖ್ಯೆ ಸುಮಾರು 25ಸಾವಿರ ದಾಟಿದೆ. ಬೆನ್ನುಹುರಿ ಅಪಘಾತ ಕ್ಯಾನ್ಸರ್, ವೈರಸ್ ಜ್ವರ ಬಾಧೆ, ಎತ್ತರದ ಸ್ಥಳಗಳಿಂದ ಬಿದ್ದ ಪರಿಣಾಮದಿಂದಾಗಿ ಹಾಗೂ ಅಪಘಾತಗಳಿಂದಾಗಿಯೂ ಬೆನ್ನುಹುರಿ ಅಪಘಾತ ಸಂಭವಿಸಬಹುದು. ಈ ಸಂದರ್ಭದಲ್ಲಿ ಪೂರ್ಣಪ್ರಮಾಣದ ಬೆನ್ನು ಹುರಿ ಅಪಘಾತಕ್ಕೊಳಗಾದ ಕರ್ನಾಟಕ ಆಕ್ಸೆಸಿಬಿಲಿಟಿ ಟಾಸ್ಕ್ ಫೋರ್ಸ್‌ನ ಅಧ್ಯಕ್ಷರಾದ ಮುನಿರಾಜುರವರೊಂದಿಗೆ ಈ ಸಂದರ್ಶನವನ್ನು ನಡೆಸಲಾಗಿದೆ.
ಮುನಿರಾಜುರವರ ಪರಿಚಯ:
ಮುನಿರಾಜುರವರು 33 ವರ್ಷಗಳ ಕಾಲ ಸಾಮಾನ್ಯ ಜನರಂತೆ ಬದುಕಿ ಬಾಳಿದವರು. ಹುಟ್ಟು, ಬಾಲ್ಯ, ಶೈಕ್ಷಣಿಕ ಜೀವನ, ಕಾಲೇಜು, ಔದ್ಯೋಗಿಕ ಹಾಗೂ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಬಳಿಕ ಒಂದು ಪುಟ್ಟ ಹೆಣ್ಣು ಮಗುವಿನ ತಂದೆಯಾದರು. 1998ರಲ್ಲಿ ಐದಾರು ಜನರೊಂದಿಗೆ ಹುಣಸೆ ಮರವನ್ನೇರಿ ಹುಣಸೆ ಉದುರಿಸುವ ವೇಳೆ 6-7 ಅಡಿ ಅಂತರದಲ್ಲಿ ಆಯ ತಪ್ಪಿ ಬಿದ್ದ ಬಳಿಕ ಅವರ ಜೀವನದ ಹಾದಿ ಬದಲಾಯ್ತು. ಪ್ರಾಥಮಿಕ ಚಿಕಿತ್ಸಾ ಕೇಂದ್ರದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗಲು ಶಿಫಾರಸು ಮಾಡಿದ ಬಳಿಕ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಅವರು ಬೆನ್ನುಹುರಿ ಶಸ್ತಚಿಕಿತ್ಸೆಯನ್ನು ಪಡೆದುಕೊಂಡರು. ಸರ್ಜರಿಯ 15 ದಿನಗಳ ಬಳಿಕ ಭೇಟಿಯಾಗಲು ತಿಳಿಸಿದಾಗ ಬಹುಶಃ ಒಂದೆರಡು ತಿಂಗಳುಗಳಲ್ಲಿ ಗುಣಮುಖರಾಗಬಹುದೆಂದು ಮುನಿರಾಜು ಭಾವಿಸಿದ್ದರು. ಆದರೆ, ಬೆನ್ನುಹುರಿ ಗಾಯದ ಪ್ರಮಾಣದ ಕುರಿತು ತಿಳಿದ ಬಳಿಕ ತನ್ನ ದೈಹಿಕ ಸ್ಥಿತಿಯ ಬಗ್ಗೆ ಅವರಿಗೆ ಅರಿವಿಗೆ ಬಂತು. ಜೀವನ ಪೂರ್ತಿ ಇನ್ನು ತನ್ನ ದೇಹದ ಅರ್ಧಭಾಗ ತನ್ನ ನಿರ್ವಹಣಾ ಶಕ್ತಿಯನ್ನು ಕಳೆದುಕೊಂಡಿದೆ ಎಂಬುದು ಅವರಿಗೆ ತಿಳಿಯಿತು.
ಪ್ರಶ್ನೆ: ಬೆನ್ನುಹುರಿ ಅಪಘಾತದ ಬಳಿಕ ತಮ್ಮ ಜೀವನದಲ್ಲಾದ ಬದಲಾವಣೆಗಳೇನು?
ಮುನಿರಾಜು: ಪದವಿಧರನಾದ ನಾನು ಕೃಷಿಯಲ್ಲಿಯೇ ಜೀವನವನ್ನು ಕಟ್ಟಿಕೊಂಡಿದ್ದೆ. ಎಲ್ಲರಂತೆ ಲವಲವಿಕೆಯ ಜೀವನ, ಓಡಾಟ, ಶ್ರಮಗಳೆಲ್ಲ 1998ರಲ್ಲಿ ಹುಣಸೆಮರದಿಂದ ಬಿದ್ದು ಬೆನ್ನುಹುರಿ ಅಪಘಾತಕ್ಕೊಳಗಾದ ಬಳಿಕ ಬದಲಾಯ್ತು. T12ನಲ್ಲಿ ನನಗೆ ಏಟು ಬಿದ್ದುದರಿಂದ ದೇಹದ ಅರ್ಧಭಾಗ ಇನ್ನು ಚಲನಹೀನವಾಗಿದೆ ಎಂಬುದು ನನಗೆ ತಿಳಿಯಿತು. ಸತತ 8-10 ತಿಂಗಳುಗಳ ರಿಹಾಬ್ ಚಿಕಿತ್ಸೆಯನ್ನು ಪಡೆದುಕೊಂಡ ಬಳಿಕ ನನಗೆ ಆದ ಅಪಘಾತದ ಪ್ರಮಾಣ ಹಾಗೂ ಮುಂದಿನ ದಿನಗಳ ನಿರ್ವಹಣೆಯ ಬಗ್ಗೆ ಒಂದು ರೂಪುರೇಷ ಲಭಿಸಿತು. ಆದರೆ, ನನ್ನ ಪಾಡಿಗೆ ನನ್ನ ದೈನಂದಿನ ಕೆಲಸಗಳನ್ನು ಮಾಡುವುದು, ತಿನ್ನುವುದು ಮಲಗುವುದು ಬಿಟ್ಟರೆ ಎರಡು ವರ್ಷಗಳ ಕಾಲ ನಾನು ಮನೆಯಿಂದ ಹೊರಗಡೆಯ ಪ್ರಪಂಚವನ್ನು ಕಾಣಲು ಬಯಸಲೇ ಇಲ್ಲ. ಜೀವನ ಇಷ್ಟೇ ಇನ್ನು ಮುಗಿಯಿತು ಎಂಬ ಒಂದು ರೀತಿ ಖಿನ್ನತೆಯ ಜೀವನದಲ್ಲಿ ನಾನು ಲೀನನಾಗಿದ್ದೆ.
ಪ್ರಶ್ನೆ: ಬೆನ್ನುಹುರಿ ಅಪಘಾತವಾದವರು ಯಾವೆಲ್ಲ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ?
ಮುನಿರಾಜು: “ಇನ್ನು ನಾನು ನಡೆಯಲಾರೆ, ಮೊದಲಿನ ಹಾಗೆ ಬಾಳಲ್ಲ ಎಂಬ ವಾಸ್ತವಿಕತೆಯೊಂದಾದರೆ, ನನ್ನ ಜೀವನ ಇಷ್ಟೇ, ನನಗೆ ಜೀವನಾನೇ ಸಾಕು” ಎಂಬ ಭಾವನೆ ನನ್ನನ್ನು ಮಾನಸಿಕ ಖಿನ್ನತೆಗೆ ತಳ್ಳಿತ್ತು. ಈ ಖಿನ್ನತೆ ಬೆನ್ನುಹುರಿ ಅಪಘಾತಕ್ಕೊಳಗಾದವರನ್ನು ಕಾಡುವ ಮುಖ್ಯ ಸಮಸ್ಯೆ. ಇನ್ನು ದೇಹದ ಅರ್ಧ ಭಾಗಕ್ಕೆ ಸ್ಪರ್ಶಜ್ಞಾನವೇ ಇಲ್ಲದಿರುವುದು, ಕೆಲವರಿಗೆ ಕುತ್ತಿಗೆಯ ಕೆಳಭಾಗದಿಂದಲೇ ಸ್ಪರ್ಶಜ್ಞಾನವಿರುವುದಿಲ್ಲ, ಮಲಮೂತ್ರ ವಿಸರ್ಜನೆಯ ಕುರಿತು ಅರಿವಿಗೆ ಬಾರದಿರುವುದು. ಕರುಳಿನ ಚಲನೆ ಬಗ್ಗೆ ಗೊತ್ತಾಗದೇ ಇರುವುದೂ ಇದೆ. ಆದರೆ, ರಿಹಾಬ್‌ನ ಬಳಿಕ ಈಗಲೂ ನನ್ನ ಮಲಮೂತ್ರ ವಿಸರ್ಜನೆಯ ನಿರ್ವಹಣೆಯನ್ನು ನಾನೇ ನಿರ್ವಹಿಸುತ್ತಿರುವುದು ನನಗೊಂದಿಷ್ಟು ನೆಮ್ಮದಿಯನ್ನು ನೀಡಿದೆ. ಇನ್ನು ಕೆಲವರು ಹಾಸಿಗೆಯಲ್ಲಿ ಮಲಗಿಯೇ ಇರಬೇಕಾದ ಕಾರಣದಿಂದಾಗಿ ಬೆಡ್ ಸೋರ್‌ಗಳಾಗುವುದು, ಗಾಯಗಳಾಗುವುದು, ಮೂತ್ರ ಸೋಂಕು, ಕಿಡ್ನಿ ಹಾಗೂ ಗ್ಲಾಡರ್‌ಗಳಲ್ಲಿ ಕಲ್ಲಾಗುವುದು, ಮೂಲವ್ಯಾಧಿ, ಬೇದಿ, ರಕ್ತಸ್ರಾವ, ಚರ್ಮ ರೋಗದ ಸಮಸ್ಯೆಗಳು, ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುವುದು ಸೇರಿದಂತೆ ದ್ವಿತೀಯಾಂತರ ಸಮಸ್ಯೆಗಳಿಂದ ಬೆನ್ನುಹುರಿ ಅಪಘಾತಕ್ಕೊಳಗಾದವರು ನರಳುತ್ತಿದ್ದಾರೆ.
ಪ್ರಶ್ನೆ: ಬೆನ್ನುಹುರಿ ಅಪಘಾತಕ್ಕೆ ಒಳಗಾದವರಿಗೆ ಯಾವ ರೀತಿಯ ಪ್ರಾಥಮಿಕ ಸೌಕರ್ಯ ಸೌಲಭ್ಯಗಳು ಬೇಕಿದೆ?
ಮುನಿರಾಜು: ಬೆನ್ನುಹುರಿ ಅಪಘಾತದಿಂದ ವಿಕಲಚೇತನರಾದವರಿಗೆ ಮೊದಲು ಕುಟುಂಬದ ಸಾಂತ್ವನಕ್ಕಿಂತಲೂ ಸಹಕಾರದ ಅಗತ್ಯತೆ ಇದೆ. ಜೀವನಕ್ಕೆ ಉತ್ಸಾಹ, ಉತ್ತೇಜನ ತುಂಬುವ ಗೆಳೆಯರ ಬಳಗ, ಸಂಬಂಧಿಕರು ಇವರ ನೋವಿನ ಪಾಲುದಾರರಾಗಬೇಕು. ನನ್ನ ಪತ್ನಿಗೆ ನಾನು ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ. ಎರಡನೆಯದಾಗಿ ಖಿನ್ನತೆಯಿಂದ ಹೊರಬರಬೇಕಾದರೆ ಮೊದಲು ಮನೆಯಿಂದ ಹೊರ ಬರಲು ಪ್ರೇರಣೆ ನೀಡುವವರು ಬೇಕು. ನನಗೆ ನನ್ನ ಸ್ನೇಹಿತನೊಬ್ಬ ಮಡಚಿ ಇಡಬಹುದಾದ ವ್ಹೀಲ್ ಚೇರ್ ಕೊಡಿಸಿದರು. ತದನಂತರ ದಿ ಅಸೋಸಿಯೇಷನ್ ಆಫ್ ದಿ ಪೀಪಲ್ ವಿತ್ ಡಿಸೆಬಿಲಿಟಿಯ ಸಿಬ್ಬಂದಿ ಲಿಂಗಪ್ಪರವರು ಮನೆಗೆ ಭೇಟಿ ನೀಡಿ ಮೋಡಿವೇಶನಲ್ ವ್ಹೀಲ್‌ಚೇರ್ ಪಡೆಯಲು ಸೂಚಿಸಿದರಲ್ಲದೇ, ಜೀವನದಲ್ಲಿ ಸ್ವಾವಲಂಬಿಯಾಗಿ ಬಾಳಬೇಕೆಂದು ಉತ್ತೇಜಿಸಿದರು. ಅವರ ಉತ್ತೇಜನದ ಫಲವಾಗಿ ನಾನು ಮೋಟಿವೇಷನಲ್ ವ್ಹೀಲ್‌ಚೇರ್ ಖರೀದಿಸಿದೆ. ಇದಾದ ಬಳಿಕ ಕೆಲವೊಂದು ಕಾರ್ಯಾಗಾರಗಳಲ್ಲಿ ಭಾಗವಹಿಸಿದೆ. ಆಕ್ಸೆಸಿಬಿಲಿಟಿಯ ಕೊರತೆಯಿಂದಾಗಿ ವ್ಹೀಲ್‌ಚೇರ್ ಪಡೆದರೂ ಕೆಲವೊಮ್ಮೆ ಅದು ಉಪಯೋಗ ಶೂನ್ಯವಾಗಬಹುದು. ಮನೆಯಲ್ಲಿ ಶೌಚಾಲಯದ ಮರು ವಿನ್ಯಾಸ, ವ್ಹೀಲ್‌ಚೇರ್‌ನಲ್ಲಿ ಮನೆಯಿಂದ ಒಳಹೊರಗೆ ಹೋಗಲು ಬೇಕಾದಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ.
ಪ್ರಶ್ನೆ: ಆಕ್ಸೆಸಿಬಿಲಿಟಿಯಿಂದ ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಪ್ರಯೋಜನಗಳಿವೆ ಎಂದಾದರೆ, ಹಳ್ಳಿಗಳಲ್ಲಿರುವವರಿಗೆ ಯಾವ ರೀತಿಯ ಆಕ್ಸೆಸಿಬಿಲಿಟಿಯ ಅಗತ್ಯತೆ ಇದೆ?
ಮುನಿರಾಜು: ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಮುಖ್ಯವಾಗಿ ಅವರ ದೈಹಿಕ ಸಂರಚನೆಗೆ ತಕ್ಕುದಾದ ವ್ಹೀಲ್‌ಚೇರ್ ಬೇಕು. ಶೌಚಾಲಯಗಳ ವಿನ್ಯಾಸವಾಗಬೇಕು, ಸೂಕ್ತವಾದ ಸಾಧನಾ ಸಲಕರಣೆಗಳು, ಸಾಮಾಜಿಕ ಪುನರ್ವಸತಿ ಹಾಗೂ ತರಬೇತಿ, ಸ್ಥಳೀಯ ಸರ್ಕಾರಗಳಿಂದ 5% ಅನುದಾನದಲ್ಲಿ ಅವರಿಗೆ ಬೇಕಾಗುವ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಬೇಕು. ಒಂದು ವೇಳೆ ಹೆಣ್ಣುಮಕ್ಕಳು ಬೆನ್ನು ಹುರಿ ಅಪಘಾತಕ್ಕೊಳಗಾಗಿದ್ದರೆ ಅವರು ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಳ್ಳಲು ಹಾಗೂ ಅಡುಗೆ ಮಾಡಿಕೊಳ್ಳಲು ತಕ್ಕುದಾದ ವಿನ್ಯಾಸವನ್ನು ಅಡುಗೆ ಮನೆಯಲ್ಲಿ ಮಾಡಿಕೊಳ್ಳಲು ನೆರವು ಲಭಿಸಬೇಕು. ಮುಖ್ಯವಾಗಿ ಬೆನ್ನುಹುರಿ ಅಪಘಾತಕ್ಕೊಳಗಾದವರು ಮನೆಯಿಂದ ಹೊರಬರಲು ಸೂಕ್ತವಾದ ರಸ್ತೆಗಳು ನಿರ್ಮಾಣವಾಗಬೇಕು. ಗಂಟೆಗಟ್ಟಲೇ ಮಲಮೂತ್ರ ವಿಸರ್ಜನೆಯ ನಿರ್ವಹಣೆಗೆ ಕಳೆಯಬೇಕಾಗಿದ್ದು, ಇದಕ್ಕೆ ತಕ್ಕುದಾದ ಶೌಚಾಲಯದ ವ್ಯವಸ್ಥೆಗಳು ಲಭಿಸಬೇಕು.
ಪ್ರಶ್ನೆ: ಬೆನ್ನುಹುರಿ ಅಪಘಾತಕ್ಕೊಳಗಾದವರ ಬೇಡಿಕೆಗಳೇನು? ಸರ್ಕಾರದಿಂದ ನೀವು ಏನನ್ನು ನಿರೀಕ್ಷಿಸುತ್ತೀರಾ?
ಮುನಿರಾಜು:
1. ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಸರ್ಕಾರ ಪ್ರತಿ ತಿಂಗಳು ಕನಿಷ್ಠ 5000.ರೂ ಪಿಂಚಣಿ ನೀಡಬೇಕು ಎಂಬುದು ನಮ್ಮ ಮುಖ್ಯ ಬೇಡಿಕೆಯಾಗಿದೆ. ಇದು ಪ್ರತಿ ತಿಂಗಳ ಚಿಕಿತ್ಸಾ ನಿರ್ವಹಣೆಗೆ ಸಹಾಯಕವಾಗಲಿದೆ.
2. ಬೆನ್ನು ಹುರಿ ಅಪಘಾತಕ್ಕೊಳಗಾದವರಿಗೆ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು ಸೇರಿದಂತೆ ಸಮುದಾಯ ಕೇಂದ್ರಗಳಲ್ಲಿಯೂ ಉಚಿತವಾಗಿ ಮೆಡಿಕಲ್ ಕಿಟ್‌ಗಳು ಲಭಿಸುವಂತಾಗಬೇಕು.
3. ಶಾಸಕರ ಅನುದಾನಗಳು ಹಾಗೂ ವಿಕಲಚೇತನರಿಗಾಗಿ ಮೀಸಲಿರಿಸಿದ ಅನುದಾನಗಳಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಆಕ್ಸೆಸಿಬಿಲಿಟಿ ಸೌಲಭ್ಯಗಳನ್ನು ಕಲ್ಪಿಸಬೇಕು.
4. ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಸ್ವಯಂ ಉದ್ಯೋಗ ಸ್ಥಾಪಿಸಲು ವಾಣಿಜ್ಯ ಬ್ಯಾಂಕುಗಳಿಂದ ಸಬ್ಸಿಡಿ ರಹಿತ ಸಾಲ ಸೌಲಭ್ಯಗಳು ಲಭಿಸಬೇಕು.
5. ಪ್ರತಿ ಜಿಲ್ಲೆಗಳಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರ ಪುನರ್ವಸತಿಗಾಗಿ ಜಿಲ್ಲಾಮಟ್ಟದ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಬೇಕು.
6. 2016ರ ಕಾಯ್ದೆ ಅನ್ವಯ ಗುರುತಿಸಲಾದ 21 ಅಂಗವಿಕಲತೆಗಳ ಪಟ್ಟಿಯಲ್ಲಿ 22ನೇ ಅಂಗವಿಕಲತೆಯಾಗಿ ಬೆನ್ನುಹುರಿ ಅಪಘಾತವನ್ನು ಸೇರ್ಪಡೆಗೊಳಿಸಬೇಕು.
7. ಬೆನ್ನು ಹುರಿ ಅಪಘಾತಕ್ಕೊಳಗಾದವರಿಗೆ ಹೆಲ್ತ್ ಇನ್ಶುರೆನ್ಸ್ ನೀಡಬೇಕು. ದ್ವಿತೀಯಾಂತರ ಆರೋಗ್ಯ ಸಮಸ್ಯೆಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾದಾಗ, ಕುಟುಂಬದ ಆರ್ಥಿಕ ಪರಿಸ್ಥಿತಿ ಹಾಗೂ ಹಣಕಾಸು ಸಮಸ್ಯೆಗಳು, ಪಾಲಕರ ಕೊರತೆಯು ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ಖಿನ್ನತೆ ಹಾಗೂ ಆತ್ಮಹತ್ಯೆಗೆ ಪ್ರೇರಣೆಯಾಗುತ್ತಿದೆ ಇದನ್ನು ಮಟ್ಟ ಹಾಕಲು ವಿಮೆ ಯೋಜನೆಯು ಸಹಾಯಕವಾಗಬಲ್ಲದು.
ಪ್ರಶ್ನೆ: ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ನೀವು ನೀಡಲು ಬಯಸುವ ಸಂದೇಶ ಹಾಗೂ ಸಲಹೆ?
ಮುನಿರಾಜು: “ನಂದಿಷ್ಟೇ ಜೀವನ… ಇಲ್ಲಿಗೆ ಮುಗಿತು ಎಂದು ಮನೆಯಲ್ಲಿ ಕೂರುವ ಬದಲು ಮೊದಲು ಈ ಗುಂಗಿನಿಂದ ಹೊರಬರಬೇಕಿದೆ. ಬದುಕಿದಷ್ಟು ದಿನ ಸಮಾಜದಲ್ಲಿ ಬೆರೆತು ಸ್ವಾವಲಂಬಿಗಳಾಗಿ ಬಾಳಬೇಕಿದೆ” ಇದು ನಾನು ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ನೀಡಲು ಬಯಸುವ ಸಂದೇಶ. ಜನರು ನೋಡುವ ನೋಟ, ಆಡುವ ಮಾತುಗಳು ಬದಲಾಗಬೇಕಿದ್ದರೆ ನಾವು ಮೊದಲು ಸ್ವಾವಲಂಬಿಗಳಾಗಬೇಕು. ನಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಶಕ್ತರಾಗಬೇಕು. ಇಂದು ವ್ಹೀಲ್‌ಚೇರ್‌ನ ಸಹಾಯದಿಂದಲೇ ಹೊರಬಂದ ನಾನು ಇಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಮ್ಮದೇ ಆದ ನವಜೀವನ ಸೇವಾ ಸಹಕಾರ ಸಂಘ(ರಿ)ವನ್ನು ಕಟ್ಟಿಕೊಂಡು ಎಪಿಡಿ ಸೇರಿದಂತೆ ಹತ್ತು ಹಲವು ಸಂಘಟನೆಗಳ ಜೊತೆ ಕೈಜೋಡಿಸಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗೆ ತಿಂಗಳ ವೈದ್ಯಕೀಯ ಕಿಟ್‌ಗಳ ವಿತರಣೆ, ಔಷಧಿ ವಿತರಣೆಯನ್ನು ಮಾಡುತ್ತಿದ್ದೇವೆ. ಇದಲ್ಲದೇ ಕೊರೋನ ಅವಧಿಯಲ್ಲಿ ರೇಶನ್ ಕಿಟ್ ವಿತರಣೆ, ಪ್ರಸ್ತುತ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ಬುಕ್ಸ್ ವಿತರಣೆ, ಸ್ವಯಂ ಉದ್ಯೋಗ ಹಾಗೂ ಪುನರ್ವಸತಿಗೆ ಲಭ್ಯವಿರುವ ಸರ್ಕಾರಿ ಸೇವೆಗಳನ್ನು ಅರ್ಹರಿಗೆ ಒದಗಿಸಿಕೊಡುವುದು, ಚುನಾವಣಾ ಸಂದರ್ಭದಲ್ಲಿ ಮತದಾನ ಕೇಂದ್ರಗಳಲ್ಲಿ ವಿಕಲಚೇತನರಿಗೆ ಬೇಕಾಗುವ ಸೌಲಭ್ಯಗಳ ಪರಿಶೀಲನೆ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಹಾಗಾಗಿಯೇ ಹತ್ತು ಹಲವು ಪ್ರಶಸ್ತಿಗಳು ಇಂದು ನನ್ನ ಪಾಲಿಗೆ ಒಲಿದು ಬಂದಿವೆ. “ನಮ್ಮ ಸಮಸ್ಯೆ ಸಮಸ್ಯೆನೇ ಅಲ್ಲ ಎಂದು ಭಾವಿಸಿ ನಾವು ಯಾವಾಗ ಹೊರ ಬರುತ್ತೇವೆಯೋ ಆಗಲೇ ನಮ್ಮಿಂದ ಜೀವನದಲ್ಲಿ ಒಂದಿಷ್ಟು ಸಾಧಿಸಲು ಉತ್ಸಾಹ ಮೂಡುತ್ತದೆ”. ಸ್ವಾವಲಂಬಿಗಳಾಗಿ ಬದುಕುವ ಮೂಲಕ ಪ್ರತಿಯೊಬ್ಬರಿಗೂ ಬೆನ್ನುಹುರಿ ಅಪಘಾತದ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯತೆ ಇದೆ. ಯಾಕೆಂದರೆ ಬೆನ್ನುಹುರಿ ಅಪಘಾತ ಜೀವನದ ಯಾವುದೇ ಘಟ್ಟದಲ್ಲಿ ಸಂಭವಿಸಬಹುದು ಈ ಬಗ್ಗೆ ಸಾಮಾಜಿಕ ಜಾಗೃತಿ ಅತ್ಯಗತ್ಯ.
ಶಿಕ್ಷಕರ ದಿನಾಚರಣೆ : ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕದ ವತಿಯಿಂದ ಶಿಕ್ಷಕರಿಗೆ ಸಮ್ಮಾನ ಗೌರವ
ಕುಂದಾಪುರ : ವಿದ್ಯಾರ್ಥಿಗಳಿಗೆ ವಿದ್ಯಾ ದಾನ ಮಾಡಿದ ಗುರುಗಳಿಗೆ ಗುರುತಿಸುವ ಒಂದು ಕಾರ್ಯಕ್ರಮ. ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಮೊಗವೀರ ಯುವ ಸಂಘಟನೆ ಕುಂದಾಪುರ ಘಟಕದ ವತಿಯಿಂದ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕನ್ಸಲ್ ರಸ್ತೆ ಸಂಗಮ್ ಕುಂದಾಪುರ ಇಲ್ಲಿನ ಮುಖ್ಯೋಪಾಧ್ಯಾಯರು ಆಗಿರುವ ಶ್ರೀಮತಿ ಪ್ರೇಮ ಟೀಚರ್. ಸಹ ಅಧ್ಯಾಪಕರಾದ.ಶ್ರೀಮತಿ ಉಷಾ ಟೀಚರ್. ಹಾಗೂ ಮಹೇಶ್ ಇವರನ್ನು ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು,ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಚಂದ್ರಹಾಸ್ ಕೋಣಿ . ಜಿಲ್ಲಾ ಸಂಘಟನೆಯ ಮಾಜಿ ಅಧ್ಯಕ್ಷರಾದ ಸದಾನಂದ ಬಳ್ಕುರ್. ಕಾರ್ಯದರ್ಶಿ ಸಂತೋಷ ಮದ್ದುಗುಡ್ಡೆ.ಕೋಶಾಧಿಕಾರಿ ಮಾಧವ್ ಕುಂದಾಪುರ ಜೊತೆ ಕಾರ್ಯದರ್ಶಿ ಕಿರಣ್ ಹಾಳ್ನಾಡ್.ಜಿಲ್ಲಾ ಸಂಘಟನೆ ಸದಸ್ಯರಾದ. ಅಶೋಕ್ ಸುವರ್ಣ. ಸಾಂಸ್ಕೃತಿಕ ಕಾರ್ಯದರ್ಶಿ. ಶರಾವತಿ. ಜಯಲಕ್ಷ್ಮಿ. ಸುನಿತಾ. ವಿಠ್ಠಲ್ ಕಾಂಚನ. ಸರಸ್ವತಿ ಗೋಪಾಲ್. ಉಪಸ್ಥಿತರಿದ್ದರು, ಸನ್ಮಾನ ಸ್ವೀಕರಿಸಿದ ಶಿಕ್ಷಕರು ಸದಸ್ಯರಿಗೆ ಹಾಗೂ ಸಂಘಟನೆಗೆ ಶುಭ ಹಾರೈಸಿದರು
St. Agnes High School hosts District Level Wrestling Tournament
The District Level Wrestling Tournament was held at St. Agnes High School on 4th September 2023. The tournament stood as a shining testimony to the indomitable spirit of sportsmanship and athleticism. This grand spectacle was meticulously prepared by the devoted staff of the school.
The inauguration of this illustrious match began with a breathtaking Guard of Honor that left spectators in awe.
Following the Guard of Honor, a moment of profound spirituality graced the proceedings as the school choir added a soul-stirring prayer song.
The surroundings took on a vibrant and culturally wealthy hue with a charming welcome dance performance by the troupe of gifted classical dancers. Teacher Prathima K.B welcomed the gathering with an affable welcome speech
Symbolizing the victory of understanding over ignorance, light over darkness, and the embodiment of enlightenment, the ceremonial lighting fixtures of the lamp held a profound significance. Esteemed chief guest Honourable Mayor Jayanada Anchan , the Joint Secretary of St.Agnes Institutions Sr.Dr. Maria Roopa A.C, guest honour Mr.Naveen Dsouza ,local corporator, Mrs. Bimba Manoj Kumar,BEO South Mr. Ishwar H.R, and the Headmistress of the school Sr. Gloria A.C along with the senior officials of fraternity performed this traditional ritual.
In his opening address the Mayor praised the tireless efforts of the Headmistress and the faculty in presenting the first ever the district level wrestling tournament. He also encouraged the wrestles to give their best performance. The Joint Secretary supported the tireless efforts of the students. Mrs. Bimba Manoj Kumar made a motivational speech which lifted the sportsmanship of wrestling prowess.
Amidst the lively surroundings, the national level sportsmen Mrs. Kavitha Ashok , Mr. Deepak Anchan, Supreeth .J.B were felicitated. These awesome athletes had brought sizeable pleasure to our district and had also raised our banner high at the countrywide level. It turned into a poignant reminder that goals can be realized with unwavering commitment. Almost 45 schools of the district took part in the m tournament. Alva’s School Moodibidire won the overall championship, under 14 boys and under 17 boys category. Navachethana School Neerumarga won over all championship under 17 girls category. Ladyhill Victoria School won the under 14 girls trophy. Six students of St.Agnes High School are selected for the State Level Wrestling match.
Mrs. Bhavya Ravindra physical education teacher Expressed heartfelt gratitude to the multitude of individuals, groups, and selfless volunteers whose unwavering help and determination had made this tournament a remarkable achievement.
Day 6: Sixth day’s Novena at Our Lady of Health Minor Basilica, Harihara
Davanagere, Harihara, September 4, 2023: Sixth day’s Novena at Our Lady of Health, Minor Basilica, Harihara, Davanagere District, Diocese of Shimoga, began at 5:30pm with Rosary, Procession and floral homages to Harihara Matha. Then Basilica Rector & Parish Priest Rev. Fr George K. A led the Novena.
At 6:30pm Rev. Fr Shanthraj SJ, Bengaluru offered Holy Eucharist. He preached his homily on the theme: “Mother Mary is an inspiration to win over the difficulties in the family”.
In his homily explained the difficulties are part and parcel of life. But we need to face them with the Grace of God courageously. Blessed Virgin Mary is the perfect example for us how she faced the difficulties which she faced in her life. She never complained about them. But gracefully accepted them as the gift of God and obeyed the will of God. Even in our lives she always remains as an example to face and over come difficulties in our lives too.
Rev. Fr Venil D’Silva, Rev. Fr Richard SJ, Rev. Fr Wilson Lopis and Rev. Fr Alvin Stanislaus concelebrated the Holy Eucharist.
After the Mass Rev. Fr Santhraj SJ led the benediction and priests prayed over the pilgrims.
Rector of the Minor Basilica Rev. Fr George K A thanked Rev. Fr Shanthraj SJ.