ಕುಂದಾಪುರ ರೋಜರಿ ಚರ್ಚಿನಲ್ಲಿ ವಾಹನಗಳ ಆಶಿರ್ವಾದಿಕರಣ

ಕುಂದಾಪುರ,ಸೆ.10: ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಸೆಪ್ಟಂಬರ್ 10 ರಂದು ಭಾನುವಾರದ ಪವಿತ್ರ ಬಲಿದಾನದ ಬಳಿಕ ವಾಹನಗಳನ್ನು ಆಶಿರ್ವದಿಸಲಾಯಿತು. ಎಲ್ಲಾ ವಿಧದ ವಾಹನಗಳನ್ನು ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ, ಅತಿಥಿ ಧರ್ಮಗುರು ವಂ|ಡಾ|ಜೋನ್ ಸಿಕ್ವೇರಾ ಆಶಿರ್ವಾದಿಕರಣವನ್ನು ನಡೆಸಿಕೊಟ್ಟರು.

ಕುಂದಾಪುರ್ ರೊಜಾರ್ ಮಾಯೆಚಾ ಇಗರ್ಜೆ ದುಖಿ ಸಾಯ್ಬಿಣಿಚಿ ಸಾಲ್ವಿ


ಕುಂದಾಪುರ್, ಸೆ.10: ಕುಂದಾಪುರ್ ರೊಜಾರ್ ಮಾಯೆಚಾ ಇಗರ್ಜೆ ದುಖಿ ಸಾಯ್ಬಿಣಿಚಿ ಸಾಲ್ವಿ ಅಯ್ತಾರಾ ಸೆ.೧೦ ವೆರ್ ಆರಂಭ್ ಜಾಲಿ. ಪಯ್ಲಾ÷್ಯ ದಿಸಾಚಿ ಸಾಲ್ವಿ ಕಾರ್ಮೆಲಿ ಯಾಜಕ್ ಮಾ|ಬಾ| ಡಾ. ಜೋನ್ ಸಿಕ್ವೇರಾ ಹಾಣಿ ಚಲವ್ನ್ ವೆಲಿ. ಪಯ್ಲಿ ದೂಖ್ ಸಿಮಾಂವ್ಚೆ ಪ್ರವಾದ್ ಪಣ್, ಏ ದುಖೆಸ್ತಿ ಮಾಯೆ ದುಖಾಚಿ ತಲ್ವಾರ್ ತುಜೊ ಆತ್ಮೊ ಪಾಪ್ಸಿತೆಲಿ , ಹ್ಯಾ ದೂಖೆ ವಿಶ್ಯಾಂತ್ ಬಾಪ್ ಜೋನ್ ಸಿಕ್ವೇರಾ ಹಾಣಿ ಸಂದೇಶ್ ಆಟಯ್ಲೊ. ಸಾಲ್ವೆಚೆ ಮುಖೇಲ್ಪಣ್ ವೆಲಂಕಣಿ ವಾಡ್ಯಾಗರಾನಿ ಘೆಂವ್ನ್ ಬಲಿದಾನಾಚಿ ಲಿತುರ್ಜಿ ತಾಣಿ ಚಲವ್ನ್ ವೆಲಿ. ಫಿರ್ಗಜೆಚೊ ವಿಗಾರ್ ಭೋ|ಮಾ| ಸ್ಟ್ಯಾನಿ ತಾವ್ರೊ ಬಾಪಾನ್ ಧನ್ಯವಾದ್ ಪಾಟವ್ನ್ ಹಿ ಸಾಲ್ವಿ 16 ತಾರೀಖ್ ಮ್ಹಣಾಸರ್ ಆಸೊನ್ ಸಾಲ್ವಿ ಸಾಕಾಳಿ 6.25 ವೊರಾರ್ ತೇರ್ಸಾ ಸವೆಂ ಆರಂಭ ಜಾತೆಲಿ. ಹರ‍್ಯೆಕ್ ಸಾಲ್ವಿ ಸಯ್ರೆ ಯಾಜಕ್ ಚಲವ್ನ್ ವ್ರ‍್ತೆಲೆ ಮ್ಹಣುನ್ ಕಳವ್ನ್ ವ್ಹಡಾ ಸಂಖ್ಯಾನ್ ಫಿರ್ಗಜ್‌ಗಾರಾನಿ ಸಾಲ್ವೆಕ್ ಭಾಗ್ ಘೆಜೆ ಮ್ಹಣುನ್ ಕಳಯ್ಲೆಂ.

ಎಂ.ಸಿ.ಸಿ. ಬ್ಯಾಂಕಿನ ಅಶೋಕನಗರ ಶಾಖೆ ಸ್ಥಳಾಂತರ

ಎಂ.ಸಿ.ಸಿ. ಬ್ಯಾಂಕಿನ ಅಶೋಕನಗರ ಶಾಖೆಯನ್ನು ಉರ್ವ ಸ್ಟೋರ್‌ನಲ್ಲಿರುವ ಪಾರಿಜಾತಾ ಕಾಂಪ್ಲೆಕ್ಸ್ನ ನೆಲಮಹಡಿಗೆ ದಿನಾಂಕ ೦೯.೦೯.೨೦೨೩ರಂದು ಸ್ಥಳಾಂತರಿಸಲಾಯಿತು.

ಮಂಗಳೂರು ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ಬಿಜೈ ಚರ್ಚ್ನ ಧರ್ಮಗುರುಗಳಾದ ವಂದನೀಯ ಡಾ| ಜೆ.ಬಿ. ಸಲ್ಡಾನ್ಹಾರವರು ಸ್ಥಳಾಂತರಗೊoಡ ಹೊಸ ಶಾಖೆಯನ್ನು ಉದ್ಘಾಟಿಸಿದರು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅನಿಲ್ ಲೋಬೊರವರು ಆಡಳಿತ ಮಂಡಳಿಯು ಒಂದು ವರ್ಷದ ಹಿಂದೆ ಗ್ರಾಹಕರ ಸಮಾವೇಶದಲ್ಲಿ ಕೊಟ್ಟ ಆಶ್ವಾಸನೆಯನ್ನು ಅಶೋಕನಗರ ಶಾಖೆಯ ಸ್ಥಳಾಂತರದ ಮೂಲಕ ಈಡೇರಿಸಿದೆ ಎಂದರು. ನಮ್ಮ ಬ್ಯಾಂಕ್, ಭಾರತೀಯ ರಿಸರ್ವ್ ಬ್ಯಾಂಕಿನ ನಿರ್ದೇಶನಕ್ಕನುಸಾರವಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಅತ್ಯಂತ ಬಲಾಢ್ಯ ಬ್ಯಾಂಕುಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ ಹಾಗೂ ಬ್ಯಾಂಕಿನ ಠೇವಣಿ ಡಿಐಸಿಜಿಸಿ ಅಡಿಯಲ್ಲಿ ರಕ್ಷಿಸಲ್ಪಟ್ಟಿದೆ ಎಂದರು. ಗ್ರಾಹಕ ಸೇವೆಯೇ ದೇವರ ಸೇವೆ ಎಂಬ ಧ್ಯೇಯದೊಂದಿಗೆ ನಮ್ಮ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಾ ಬ್ಯಾಂಕಿನ ಬೆಳವಣಿಗೆಗೆ ಕಾರಣೀಭೂತರಾಗಲು ಸೂಕ್ತ ತರಬೇತಿಯನ್ನು ನೀಡಲಾಗುತ್ತಿದೆ. ನಮ್ಮ ಬ್ಯಾಂಕಿನಲ್ಲಿ ಸಾರ್ವಜನಿಕ ಕ್ಶೇತ್ರದ ಬ್ಯಾಂಕಿನಲ್ಲಿ ಲಭ್ಯವಿರುವ ಎಲ್ಲಾ ಸೇವೆಗಳು ದೊರಕುತ್ತವೆ ಎಂದರು. ನಮ್ಮ ಸೇವೆಯಲ್ಲಿ ಏನಾದರೂ ಕುಂದುಕೊರತೆಗಳು ಇದ್ದಲ್ಲಿ, ಗ್ರಾಹಕರು ತಮ್ಮ ಸಲಹೆ ಮತ್ತು ಸೂಚನೆಗಳೊಂದಿಗೆ ಆಡಳಿತ ಮಂಡಳಿಯ ಗಮನಕ್ಕೆ ತರಲು ವಿನಂತಿಸಿದರು. ಹಿಂದಿನAತೆಯೇ ಇನ್ನು ಮುಂದೆಯೂ ನಮ್ಮ ಬ್ಯಾಂಕಿಗೆ ತಮ್ಮ ಸಹಕಾರ ಮತ್ತು ಪ್ರೋತ್ಸಾಹ ನೀಡಲು ಗ್ರಾಹಕರಿಗೆ ಕರೆ ನೀಡಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ವಂದನೀಯ ಡಾ| ಜೆ.ಬಿ. ಸಲ್ಡಾನ್ಹಾರವರು, ಬ್ಯಾಂಕಿನ ಆಡಳಿತ ಮಂಡಳಿಯು ಅಶೋಕನಗರ ಶಾಖೆಯನ್ನು ಗ್ರಾಹಕರ ಅನುಕೂಲಕ್ಕಾಗಿ ನೆಲಮಹಡಿಗೆ ಸ್ಥಳಾಂತರಿಸುವ ಉತ್ತಮ ಕಾರ್ಯವನ್ನು ಮಾಡಿದೆ; ಹೊಸ ಸ್ಥಳಾಂತರಗೊAಡ ಶಾಖೆಯಲ್ಲಿ ಲಭ್ಯವಿರುವ ಪಾರ್ಕಿಂಗ್ ಸೌಲಭ್ಯ ಮತ್ತು ಗ್ರಾಹಕರಿಗೆ ಸೂಕ್ತ ಹಾಗೂ ಅನುಕೂಲಕರ ಸ್ಥಳಾವಕಾಶ ಕಲ್ಪಿಸಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಬ್ಯಾಂಕಿನ ಸಿಬ್ಬಂದಿಗಳ ನಗುಮೊಗದ ಗ್ರಾಹಕ ಸೇವೆಯೇ ಬ್ಯಾಂಕಿನ ಅಭಿವೃದ್ಧಿಗೆ ಕಾರಣವಾಗಿದೆ ಎಂದು ಕೊಂಡಾಡಿದರು.

ವಂದನೀಯ ಜೋಸೆಫ್ ಮಾರ್ಟಿಸ್‌ರವರು ಬ್ಯಾಂಕಿನ ಗ್ರಾಹಕ ಕೇಂದ್ರಿತ ಕಾರ್ಯಗಳಿಗಾಗಿ ಆಡಳಿತ ಮಂಡಳಿಯನ್ನು ಶ್ಲಾಘಿಸಿದರು. ಎಂ.ಸಿ.ಸಿ ಬ್ಯಾಂಕಿನಲ್ಲಿ ವ್ಯವಹಾರ ಮಾಡುವುದು ಸಂತೋಷಕರ ಅನುಭವವಾಗಿದೆ ಎಂದು ಹೇಳಿದರು.

ಅಶೋಕನಗರ ಚರ್ಚಿನ ಸಹಾಯಕ ಧರ್ಮಗುರುಗಳಾದ ವಂದನೀಯ ದಿಲೀಪ್ ವೇಗಸ್ ಇವರು ಸ್ಥಳಾಂತರ ಶಾಖೆಯ ಆಶೀರ್ವಚನ ಕಾರ್ಯ ನಡೆಸಿಕೊಟ್ಟರು. ಉರ್ವ ಚರ್ಚಿನ ಧರ್ಮಗುರುಗಳಾದ ವಂದನೀಯ ಬೆಂಜಮಿನ್ ಪಿಂಟೊರವರು ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ದೇರೆಬೈಲ್ ಚರ್ಚಿನ ಧರ್ಮಗುರುಗಳಾದ ವಂದನೀಯ ಜೋಸೆಫ್ ಮಾರ್ಟಿಸ್‌ರವರು ಹೊಸ ಎಟಿಎಮ್ ಉದ್ಘಾಟಿಸಿದರು. ಗೌರವಾನ್ವಿತ ಅತಿಥಿಯಾಗಿದ್ದ ಶ್ರೀ ಫ್ರಾನ್ಸಿಸ್ ಅಲ್ಫೆçಡ್ ಕೊನ್ಸೆಸ್ಸೊ, ಮಾಲಕರು ಕೊನ್ಸೆಸ್ಸೊ ಎಂಟರ್‌ಪ್ರೆöÊಸಸ್ಸ್, ಮಂಗಳೂರು ಇವರು ಇ. ಸ್ಟಾಂಪಿAಗ್ ವ್ಯವಸ್ಥೆಗೆ ಚಾಲನೆ ನೀಡಿದರು.

ಬ್ಯಾಂಕಿನ ಉಪಾಧ್ಯಕ್ಷ ಶ್ರೀ ಜೆರಾಲ್ಡ್ ಜೂಡ್ ಡಿಸಿಲ್ವಾ, ನಿರ್ದೇಶಕರಾದ ಅನಿಲ್ ಪತ್ರಾವೊ, ಹೆರಾಲ್ಡ್ ಜೋನ್ ಮೊಂತೇರೊ, ಡೇವಿಡ್ ಡಿ ಸೋಜ, ರೋಶನ್ ಡಿ.ಸೋಜ, ಡಾ| ಜೆರಾಲ್ಡ್ ಪಿಂಟೊ, ಐರಿನ್ ರೆಬೆಲ್ಲೊ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ ಮತ್ತು ಮಹಾಪ್ರಬಂಧಕ ಸುನಿಲ್ ಮಿನೇಜಸ್ ಹಾಜರಿದ್ದರು.

ಕನ್ಸಲ್ಟಿಂಗ್ ಇಂಜಿನಿಯರ್ ಶ್ರೀ ಕಾರ್ತಿಕ್ ಕಿರಣ್ ಮತ್ತು ಕಟ್ಟಡದ ಮಾಲಕ ಶ್ರೀ ಕ್ರಷ್ಣ ಕೌಶಲ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಅಶೋಕನಗರ ಶಾಖೆಯ ನಿರ್ದೇಶಕ ಶ್ರೀ ಸುಶಾಂತ್ ಸಲ್ಡಾನ್ಹಾ ಸ್ವಾಗತಿಸಿ ಪ್ರಬಂಧಕ ಲ್ಯಾನ್ಸಿ ಲೋಬೊರವರು ವಂದಿಸಿದರು. ವಿಯೊಲಾ ಪಿಂಟೊ, ಬಜ್ಪೆ ನಿರೂಪಿಸಿದರು.

ಉಪನ್ಯಾಸಕಿ ಡಾ.ಸರೋಜ ಎಂ. ಇವರಿಗೆ ಯುಥ್ ಎಫರ್ಟ್ಸ್ ಫಾರ್ ಸೊಸೈಟಿಯ ಅತ್ಯುತ್ತಮ ಜೀವಶಾಸ್ತ್ರ ಉಪನ್ಯಾಸಕ ಪ್ರಶಸ್ತಿ ಮತ್ತು ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಗೌರವ

ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಡಾ.ಸರೋಜ ಎಂ. ಇವರಿಗೆ ಯುಥ್ ಎಫರ್ಟ್ಸ್ ಫಾರ್ ಸೊಸೈಟಿ ಇವರು ಕೊಡಮಾಡುವ ಅತ್ಯುತ್ತಮ ಜೀವಶಾಸ್ತ್ರ ಉಪನ್ಯಾಸಕ ಪ್ರಶಸ್ತಿ ಮತ್ತು ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್ ಗೌರವ ದೊರೆತಿದೆ. ಇವರಿಗೆ ಭಂಡಾರ್ಕಾರ್ಸ್ ಕಾಲೇಜಿನ ಆಡಳಿತ ಮಂಡಳಿ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದನಂದಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಂದಾಪುರ – ಆರ್. ಎನ್. ಶೆಟ್ಟಿ‌ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕಬ್ಬಡ್ಡಿ ಪಂದ್ಯಾಟ

ಕುಂದಾಪುರ: “ಕ್ರೀಡಾ ಪಂದ್ಯಾಟ ಯುವ ವಿದ್ಯಾರ್ಥಿಗಳಲ್ಲಿ ಮನೋ-ದೈಹಿಕ ಬಲವನ್ನು ಹೆಚ್ಚಿಸುತ್ತದೆ. ಕಬ್ಬಡ್ಡಿಯಂಥ ಕ್ರೀಡೆ ವಿದ್ಯಾರ್ಥಿಗಳ ಸಾಹಸ ಬುದ್ಧಿಯನ್ನು ಹೆಚ್ಚಿಸಿ ಬದುಕಿನ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ನೀಡುತ್ತದೆ ” ಎಂದು  ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀ ಬಿ.ಎಮ್.ಸುಕುಮಾರ್ ಶೆಟ್ಟಿ ಯವರು ಕುಂದಾಪುರದ ಆರ್.ಎನ್. ಶೆಟ್ಟಿ ಪಿ.ಯು ಕಾಲೇಜು, ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ, ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಕುಂದಾಪುರ ತಾಲೂಕು ಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕಬ್ಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಕುಸುಮಾಕರ ಶೆಟ್ಟಿ, ಯುವಜನಸೇವಾ ಕ್ರೀಡಾಧಿಕಾರಿ, ಕುಂದಾಪುರ, ಇವರು  ಕ್ರೀಡೆಯು ದೈನಂದಿನ ಚಟುವಟಿಕೆಗಳ ಭಾಗವಾಗಿರದಿದ್ದರೆ ಜೀವನ‌ ನೀರಸವಾಗುತ್ತದೆ ಎಂದು ತಿಳಿಸಿದರು.
ಶ್ರೀ ಜೀವನ್‌ ಕುಮಾರ್ ಶೆಟ್ಟಿ,‌ ಜಿಲ್ಲಾಧ್ಯಕ್ಷರು,‌ ಪದವಿ ಪೂರ್ವ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರ  ಸಂಘ, ಉಡುಪಿ, ಇವರು ಶುಭಾಶಂಸನೆಗೈದರು.
ಶ್ರೀ ನಾಗರಾಜ ಶೆಟ್ಟಿ, ಹಿರಿಯ ದೈಹಿಕ ಶಿಕ್ಷಣ ನಿರ್ದೇಶಕರು ಗಂಗೊಳ್ಳಿ ಹಾಗೂ ಕಾಲೇಜಿನ  ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ರಾಮ್‌ ಶೆಟ್ಟಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ ಕುಮಾರ್ ಶೆಟ್ಟಿಯವರು ಅತಿಥಿಗಳನ್ನು ಸ್ವಾಗತಿಸಿದರು. ಆಂಗ್ಲಭಾಷಾ ಉಪನ್ಯಾಸಕಿಯಾದ ಶ್ರೀಮತಿ ಸುಮತಿ ಶೆಣೈಯವರು  ಧನ್ಯವಾದ ಸಲ್ಲಿಸಿದರು. ಹಿಂದಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಜಯಶೀಲಾ ಪೈಯವರು ಕಾರ್ಯಕ್ರಮ‌  ನಿರೂಪಿಸಿದರು.

ಶೀನಿವಾಸಪುರ;ಸಮಾಜದ ಎಲ್ಲ ವರ್ಗದ ಜನ ಪರಿಸರ ಮಾಲಿನ್ಯ ತಡೆಯಲು ಸಹಕರಿಸಬೇಕು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ

ಶೀನಿವಾಸಪುರ: ಸಮಾಜದ ಎಲ್ಲ ವರ್ಗದ ಜನ ಪರಿಸರ ಮಾಲಿನ್ಯ ತಡೆಯಲು ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸ್ವಚ್ಛ ಭಾರತ್ ಮಿಷನ್ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲಾ ಸರ್ಕಾರಿ ಕಚೇರಿಗಳು, ನಿಗಮ ಮಂಡಳಿಗಳು, ಶಾಲಾ ಕಾಲೇಜುಗಳು ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ಸ್ವಚ್ಛ ಭಾರತ್ ಮಿಷನ್ ಅಭಿಯಾನ ಕಾರ್ಯಕ್ರಮ ಜಾರಿಗೊಳಿಸಬೇಕು ಎಂದು ಹೇಳಿದರು.
ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್ ಮಾತನಾಡಿ, ನಾಗರಿಕರು ವಸ್ತುಗಳ ಬಳಕೆ ಕಡಿಮೆ ಮಾಡಬೇಕು. ಸಾಧ್ಯವಾದಷ್ಟು ಪುನರ್ ಬಳಕೆ ಮಾಡಬೇಕು. ಪುನರ್ ಉತ್ಪಾದನೆ ಮಾಡಬೇಕು. ಯಾವುದನ್ನೂ ವ್ಯರ್ಥ ಎಂದು ಬಗೆದು ಹೊರಗೆ ಎಸೆಯಬಾರದು ಎಂದು ಹೇಳಿದರು.
ಪುರಸಭೆ ಮೂರು ಬಗೆಯ ವಸ್ತುಗಳನ್ನು ಸ್ವೀಕರಿಸುತ್ತದೆ. ನಾಗರಿಕರು ವಸ್ತುಗಳನ್ನು ವಿಂಗಡಿಸಿ ನೀಡಿದಲ್ಲಿ ಸುಲಭವಾಗಿ ವಿಭಾಗವಾರು ಶೇಖರಣೆ ಮಾಡಲು ಸಾಧ್ಯವಾಗುತ್ತದೆ. ಈ ಬಗ್ಗೆ ಈಗಾಗಲೇ ನಾಗರಿಕರ ಸಭೆ ಕರೆದು ಅರಿವು ಮೂಡಿಸಲಾಗಿದೆ ಎಂದು ಹೇಳಿದರು.
ಪುರಸಭೆ ಕಚೇರಿ ವ್ಯವಸ್ಥಾಪಕ ನವೀನ್ ಚಂದ್ರ, ಸದಸ್ಯ ಬಿ.ವೆಂಕಟರೆಡ್ಡಿ, ಸ್ವಚ್ಛ ಭಾರತ್ ಮಿಷನ್ ರಾಯಭಾರಿ ಮಾಯಾ ಬಾಲಚಂದ್ರ, ಎಸ್‍ಬಿಐ ಶಾಖಾ ವ್ಯವವಸ್ಥಾಪಿಕಿ ಉಮಾ, ಕಂದಾಯ ನಿರೀಕ್ಷಕ ಎನ್.ಶಂಕರ್, ಮುಖ್ಯಾ ಶಿಕ್ಷಕ ಎಂ.ಬೈರೇಗೌಡ, ಸಂತೋಷ್, ಸುರೇಶ್, ನರಸಿಂಹಮೂರ್ತಿ, ನವೀನ್, ಬೈರೆಡ್ಡಿ ಇದ್ದರು.

ಶ್ರೀನಿವಾಸಪುರ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಸರ್ವ ಸದಸ್ಯರ ಸಭೆಯನ್ನು ಸೆ.15 ರಂದು ಬೆಳಿಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ

ಶ್ರೀನಿವಾಸಪುರ: ಇಲ್ಲಿನ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಸರ್ವ ಸದಸ್ಯರ ಸಭೆಯನ್ನು ಸೆ.15 ರಂದು ಬೆಳಿಗ್ಗೆ 11 ಗಂಟೆಗೆ ಏರ್ಪಡಿಸಲಾಗಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ಕೃಷ್ಣನ್ ತಿಳಿಸಿದ್ದಾರೆ.
ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಕಾಸ್ಕಾರ್ಡ್ ಬ್ಯಾಂಕ್‍ನ ರಾಜ್ಯ ನಿರ್ದೇಶಕ ಯಲವಾರ ಸೊಣ್ಣೇಗೌಡ ಭಾಗವಹಿಸಲಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.