ಮಾದರಿ ಶಿಕ್ಷಕಿಯಾಗುವ ಕನಸು ಕಾಣುತ್ತಿರುವ ವಿಶೇಷ ಚೇತನೆ ಯಶೋದಾ

ಬರಹ : ಶಬೀನಾ. ವೈ.ಕೆ

“ಈ ಮಗುವನ್ನು ದೊಂಬರಾಟ ಆಡುವವರಿಗೆ ಕೊಟ್ಟು ಬಿಡಿ” ಎಂದು ಒಬ್ಬ ಮಹಿಳೆ ಹೇಳಿ ಬಿಟ್ಟರು. ಇದರಿಂದ ಕುಪಿತರಾದ ವಿಠ್ಠಪ್ಪ “ಅವಳು ನನ್ನ ಮಗಳು. ಬದುಕಿರುವ ತನಕ ನಾನೇ ಸಾಕುತ್ತೇನೆ” ಎಂದು ಬಂದವರ ಬಾಯಿ ಮುಚ್ಚಿಸಿ ಬಿಟ್ಟರು.

ಯಶೋದ ಕುಮಾರಿ ಹುಟ್ಟಿನಿಂದಲೇ ವಿಶೇಷಚೇತನರು. ಅವರ ಎಡಗಾಲು ಸಂಪೂರ್ಣ ರೂಪು ಪಡೆದಿರಲಿಲ್ಲ; ಇದ್ದ ಬಲಗಾಲಿಗೂ ಪೋಲಿಯೋ ಘಾಸಿ ನೀಡಿತ್ತು. ಹುಟ್ಟಿದ ಮಗುವನ್ನು ಜನರು ವೀಕ್ಷಿಸಲೆಂದೇ ಮೂರು ದಿನಗಳ ಕಾಲ ಹೊರಗಡೆ ತೊಟ್ಟಿಲಲ್ಲಿ ಇಟ್ಟಿದ್ದರು. ಆಗ ಮಗುವನ್ನು ನೋಡಲು ಬಂದವರೆಲ್ಲ ಶಾಪ ಹಾಕಿ ಹೋಗುತ್ತಿದ್ದರು. ಇಂತಹ ಕೊಂಕು ಮಾತುಗಳನ್ನು ಕುಟುಂಬ ಅದೇಷ್ಟೋ ಸಹಿಸಿಕೊಂಡಿತ್ತು.

ಆದರೆ, ಯಶೋದರ ತಾಯಿ ಜನರ ಮಾತಿನ ಆಘಾತದಿಂದ ಹೊರ ಬಂದಿರಲಿಲ್ಲ. ಬಹುಶಃ ತನಗೆ ಹುಟ್ಟುವ ಮಕ್ಕಳೆಲ್ಲ ಹೀಗೆ ಹುಟ್ಟುತ್ತವೆಯೋ ಎಂಬ ಹಣೆಪಟ್ಟಿಯೂ ಅವರಿಗೆ ಸಮಾಜ ನೀಡಿದ್ದುರ ಫಲವಾಗಿರಬಹುದು. ಪತಿಯ ಬಳಿ ” ನೀವು ಬೇರೊಂದು ಮದುವೆ ಮಾಡಿಕೊಳ್ಳಿ” ಎಂದು ಹೇಳಿದರು.  ಅದಕ್ಕೆ ವಿಠ್ಠಪ್ಪ‌ರವರು ” ನಾನು ಬೇರೆ ಮದುವೆಯಾಗುವುದಿಲ್ಲ. ಹುಟ್ಟಿದರೆ ಇಂತಹ ಮಕ್ಕಳೇ ಹುಟ್ಟಲಿ… ನಾವು ಸಾಕೋಣ” ಎಂದು ತಾಯಿಯನ್ನು ಸಂತೈಸಿದರು. ನನ್ನ ತಂದೆ- ತಾಯಿ ತಳೆದ ಈ ತೀರ್ಮಾನದಿಂದಾಗಿಯೇ ನಾನಿಂದು ಜೀವಿಸುತ್ತಿದ್ದೇನೆ ಎಂದು ಯಶೋದ ಹಳೆಯ ನೆನಪುಗಳನ್ನು ಮೆಲುಕು ಹಾಕಿ ಸಂತಸ ವ್ಯಕ್ತಪಡಿಸುತ್ತಾರೆ.

ವಿಕಲಚೇತನರು ಅದರಲ್ಲೂ ಮಹಿಳೆ ವಿಕಲಚೇತನಳಾದರೆ ಸಮಾಜ ಕಾಣುವ ದೃಷ್ಟಿಕೋನದ ಬವಣೆಯನ್ನು ಯಶೋದ ಕೂಡ ಅನುಭವಿಸಿದರು. ತನ್ನಷ್ಟಕ್ಕೆ ತಾನು ವಾಹನದಲ್ಲಿ ಹೋಗುತ್ತಿದ್ದರೆ, 

“ಯವ್ವಾ , ಕಾಲು ಇಲ್ಲ ಏನಿಲ್ಲ ಎಲ್ಲಿ ಓಡಾಡ್ತೀಯಾ? ಸುಮ್ನೆ ಮನೇಲಿ ಕುತ್ಕೋಬಾರ್ದಾ” ಎಂದು ಒಬ್ಬ ಅಜ್ಜಿ ಹಾಗೂ ಮಹಿಳೆ ಹೀಯಾಳಿಸಿದ್ದು ಅವರ ನೆನಪಿನಲ್ಲಿ ಇನ್ನೂ ಅಚ್ಚಾಗಿಯೇ ಉಳಿದಿದೆ. ಹಾಗೆಯೇ ತನ್ನ ಸಹೋದರ  ತನ್ನನ್ನು ಹೊತ್ತುಕೊಂಡು ಸಿಂಗಬಾಲದಲ್ಲಿರುವ ದೇವಸ್ಥಾನದ 250 ಮೆಟ್ಟಿಲುಗಳನ್ನು ಹತ್ತಿದ ಸವಿನೆನಪುಗಳೂ ಯಶೋದರ ಮನದಲ್ಲಿ ಮನೆ ಮಾಡಿವೆ. 

ಶೈಕ್ಷಣಿಕ ಜೀವನದಲ್ಲಿ ಯಶೋದ ಅನುಭವಿಸಿದ ನೋವುಗಳೇ ಅಪಾರ. ಅಂಗವಿಕಲರಿಗೆ ಸೂಕ್ತವಾದ ವಿಶೇಷಚೇತನ ಸ್ನೇಹಿ ಶೌಚಾಲಯ, ರ್ಯಾಂಪ್ ರೈಲಿಂಗ್, ಅದರಲ್ಲಿಯೂ ಮುಖ್ಯವಾಗಿ ವ್ಹೀಲ್‌ಚೇರ್ ಸೌಲಭ್ಯ ಇಲ್ಲದಿರುವುದು ಗೆಳತಿಯರ ಜೊತೆ ಓಡಾಡಲೋ ಆಟವಾಡಲೋ ಸಾಧ್ಯವಾಗದೇ ಒಬ್ಬಂಟಿಯಾಗಿ ಕುಳಿತು ನೋಡುವಂತಾಯ್ತು. ಬೆಳ್ಳಿಗ್ಗೆ ಮನೆಯಲ್ಲೇ ಶೌಚಾಲಯಕ್ಕೆ ಹೋಗಿ ಶಾಲೆ ಬಿಡುವವರೆಗೂ ದೈನಂದಿನ ಅಗತ್ಯತೆಗಳನ್ನು ಕಟ್ಟಿಹಾಕಬೇಕಾಯ್ತು. ಹೆತ್ತವರು ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದರು. ಆದರೆ, ಯಶೋದರ ದೈನಂದಿನ ಬೇಡಿಕೆಗಳು ದೈಹಿಕ ಅಗತ್ಯತೆಗಳು ಪಿಯುಸಿಗೆ ಶಿಕ್ಷಣವನ್ನು ಕೊನೆಗೊಳುಸುವಂತೆ ಮಾಡಿದವು. ಮಗಳು ಉತ್ತಮ ಶಿಕ್ಷಣ ಪಡೆಯಲಿ ಎಂಬ ಆಸೆಯಿಂದ ಹೆತ್ತವರು ಶತಪ್ರಯತ್ನ ಮಾಡಿ ಕಾಲೇಜಿಗೆ ಕರೆದುಕೊಂಡು ಹೋದರಾದರೂ, ಎರಡನೇ ಅಂತಸ್ತಿನಲ್ಲಿರುವ ತರಗತಿಗಳಿಗೆ ಮೆಟ್ಟಿಲುಗಳನ್ನು ಹತ್ತಲು ಯಶೋದಾರಿಂದ ಸಾಧ್ಯವಾಗಲಿಲ್ಲ. ಶೌಚಾಲಯವೂ ಇಲ್ಲದಿರುವುದು ಶಿಕ್ಷಣವನ್ನು ಮೊಟಕುಗೊಳಿಸಲು ಬಹು ಮುಖ್ಯ ಕಾರಣವಾಯ್ತು. ಹೀಗಾಗಿಯೇ ಶಾಲಾ-ಕಾಲೇಜುಗಳು, ದೇವಸ್ಥಾನ, ಸಾರ್ವಜನಿಕ ಸ್ಥಳಗಳು, ಬಸ್ ಹಾಗೂ ಇತರ ಸಾರಿಗೆ ವ್ಯವಸ್ಥೆ, ಖಾಸಗಿ ಸಂಘ-ಸಂಸ್ಥೆ, ಮನೋರಂಜನಾ ಸ್ಥಳಗಳು ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ವಿಕಲಚೇತನರಿಗೆ ಬೇಕಾಗುವ ಒಂದಿಷ್ಟು ಶೌಚಾಲಯ, ರ್ಯಾಂಪ್, ರೈಲಿಂಗ್, ವ್ಹೀಲ್‌ಚೇರ್‌ಗಳು ಇದ್ದಲ್ಲಿ ವಿಶೇಷಚೇತನರಿಗೂ ತಾವು ಸಮಾಜದಿಂದ ಬೇರ್ಪಟ್ಟಿಲ್ಲ ಎಂಬ ಭಾವನೆಯನ್ನು ಮೂಡಿಸಲು ಸಕಾರವಾಗಬಹುದು ಎಂದು ಯಶೋದ ಹೇಳುತ್ತಾರೆ. 

ವಿಕಲಚೇತನರ ಕಲ್ಯಾಣಕ್ಕಾಗಿ ಮುಂದಡಿ ಇರಿಸಿದ ಯಶೋದ 15 ರಿಂದ 20 ವಿಕಲಚೇತನ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ನೀಡಿ ಉದ್ಯೋಗ ಕಲ್ಪಿಸಿದ್ದಾರೆ. ಹಿರಿಯ ನಾಗರಿಕರಿಗೆ ಮಾಸಾಶನ ಮಾಡಿಸುವುದು, ಆಕ್ಸೆಸಿಬಿಲಿಟಿ ಸೌಲಭ್ಯಗಳ ಮಾಹಿತಿ ಪಡೆದ ಬಳಿಕ ಎಂಆರ್‌ಡಬ್ಲ್ಯೂ ವಿಆರ್‌ಡಬ್ಲ್ಯೂ ಸಿಬ್ಬಂದಿಗಳೊಂದಿಗೆ  ಸೇರಿ ಮತಗಟ್ಟಗಳಲ್ಲಿ ವಿಶೇಷಚೇತನರಿಗೆ ಬೇಕಾಗುವ ಸೌಲಭ್ಯಗಳನ್ನು ಕಲ್ಪಿಸಲು ಚರ್ಚಿಸಿದರು. 

 ಶಿಕ್ಷಣ ಮೊಟಕುಗೊಳಿಸಿ ವರ್ಷಗಳು ಕಳೆದಿದ್ದರೂ ಓದಿಗೆ ವಯಸ್ಸಿನ ಮಿತಿ ಇಲ್ಲ, ಅಂಗವಿಕಲತೆಯೂ ಅಡ್ಡಿಯಲ್ಲ ಎಂಬುದನ್ನು  ಯಶೋದ ಮತ್ತೊಮ್ಮೆ ನಿರೂಪಿಸಲು ಮುಂದಡಿ ಇರಿಸಿದ್ದಾರೆ‌. ಪ್ರಸ್ತುತ ಸ್ಪೆಷಲ್ ಡಿ.ಎಡ್ ಕೋರ್ಸ್‌ ಮಾಡುತ್ತಿರುವ ಅವರು ಅಂಗವಿಕಲ ಮಕ್ಕಳಿಗೆ ಒಬ್ಬ ಉತ್ತಮ ಮಾದರಿ ಶಿಕ್ಷಕಿಯಾಗುವ ಕನಸ್ಸನ್ನು ಕಾಣುತ್ತಿದ್ದಾರೆ‌.‌ ಹಲವು ವರ್ಷಗಳ ಬಳಿಕ ಬಾಗಲಕೋಟೆಯಿಂದ ಬಲು ದೂರದಲ್ಲಿರುವ ದಾವಣೆಗೆರೆಗೆ ಮಗಳು ಕಲಿಯಲು ಹೋಗುತ್ತೇನೆ ಎಂದಾಗ ತಂದೆ ಸಮ್ಮತಿ ನೀಡಿದರು‌. ಆದರೆ, ತಾಯಿಗಾದರೋ ಮಗಳಿಗೆ ಬೇಕಾದ ಸೌಲಭ್ಯಗಳು ಅಲ್ಲಿ ಸಿಗುತ್ತವೋ, ಇಲ್ಲವೋ ಎಂಬುದರ ಬಗ್ಗೆ ಆತಂಕ ಮನೆ ಮಾಡಿತ್ತು. ಸ್ನೇಹಿತರ ಜೊತೆ ರೂಮ್ ಮಾಡಿಕೊಂಡು ವಿದ್ಯಾಭ್ಯಾಸ ಮಾಡುತ್ತಿರುವ ಯಶೋದರಿಗೆ ತಾವು ಕಲಿಯುತ್ತಿರುವ ಸಂಸ್ಥೆಯಲ್ಲಿ ಇರುವ ಆಕ್ಸೆಸಿಬಿಲಿಟಿ ಸೌಲಭ್ಯಗಳು, ವಿಕಲಚೇತನ ಸ್ನೇಹಿ ಶೌಚಾಲಯಗಳು ವ್ಹೀಲ್ ಚೇರ್ ಹಾಗೂ ಇತರ ಸೌಲಭ್ಯಗಳಿರುವುದು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಯಶೋದ, ಪ್ರಸ್ತುತ ಕರ್ನಾಟಕ ಆಕ್ಸೆಸಿಬಿಲಿಟಿ ಟಾಸ್ಕ್ ಫೋರ್ಸ್‌ನ ಉಪಾಧ್ಯಕ್ಷೆಯಾಗಿದ್ದಾರೆ. ಅವರ ಶೈಕ್ಷಣಿಕ ಜೀವನದ ಕನಸು ಸಾಕಾರವಾಗಲಿ ಎಂಬ ಹಾರೈಕೆ ನಮ್ಮೆಲ್ಲರದ್ದಾಗಲಿ.

ಕರ್ನಾಟಕ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಉಪಾಧ್ಯಕ್ಷರಾಗಿ ಗೌತಮ್ ಶೆಟ್ಟಿ ಕುಂದಾಪುರ, ಆಯ್ಕೆ

ಉಡುಪಿ ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಟೊರ್ಪೆಡೋಸ್ ಇವರು ಕರ್ನಾಟಕ ಟೇಬಲ್ ಟೆನ್ನಿಸ್ ಸಂಸ್ಥೆಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಗೌತಮ್ ಶೆಟ್ಟಿ ಅವರು ಭಾನುವಾರ ಧಾರವಾಡದಲ್ಲಿ ಕರ್ನಾಟಕ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಆಯ್ಕೆ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು ಮುಂದಿನ ನಾಲ್ಕು ವರ್ಷಗಳ ಕಾಲ ಅವರು ಅಧಿಕಾರದಲ್ಲಿ ಇರಲಿದ್ದಾರೆ.

ಆಯ್ಕೆಯ ಬಳಿಕ ಸ್ಪೋರ್ಟ್ಸ್ ಕನ್ನಡದೊಂದಿಗೆ ಮಾತನಾಡಿದ ಗೌತಮ್ ಶೆಟ್ಟಿ “ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಇದು ಪ್ರಯೋಜನಕಾರಿ,ಏಕಾಗ್ರತೆ ಹೆಚ್ಚಿಸುವ ಆಟಗಳಲ್ಲಿ ಟೇಬಲ್ ಟೆನಿಸ್ ಕೂಡ ಒಂದಾಗಿದ್ದು, ಯುವಕರನ್ನು ಪ್ರೋತ್ಸಾಹಿಸುವ ಮೂಲಕ ಕ್ರೀಡೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸುವುದಾಗಿ ಹೇಳಿದರು.

ನೂತನವಾಗಿ ಆಯ್ಕೆಗೊಂಡ KTTA ತಂಡಕ್ಕೆ ಸ್ಪೋರ್ಟ್ಸ್ ಕನ್ನಡ ಮತ್ತು ಸ್ಟಾರ್ ವರ್ಟೆಕ್ಸ್-ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ವತಿಯಿಂದ ಶುಭಾಶಯಗಳು.

ಕುಂದಾಪುರ ಕಾಂಗ್ರೆಸ್ ಕಛೇರಿಯಲ್ಲಿ ಆಸ್ಕರ್ ಫರ್ನಾಂಡಿಸ್ ಪುಣ್ಯಸ್ಮರಣೆ

ಕಾಂಗ್ರೆಸ್ ಪಕ್ಷದ ಹಿರಿಯ ನೇತಾರ ಕೇಂದ್ರ ಸರಕಾರದ ಮಾಜಿ ಸಚಿವ ದಿI ಆಸ್ಕರ್ ಫೆರ್ನಾಂಡಿಸ್ ರವರ 2 ನೇ ಪುಣ್ಯತಿಥಿ ಕುಂದಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಆಚರಿಸಲಾಯಿತು .

ವಿಧಾನ ಪರಿಷತ್ ಮಾಜಿ ಸಭಾಪತಿ ಶ್ರೀ ಕೆ. ಪ್ರತಾಪ ಚಂದ್ರ ಶೆಟ್ಟಿಯವರು ಈ ಸಂದರ್ಭದಲ್ಲಿ ಆಸ್ಕರ್ ಫೆರ್ನಾಂಡಿಸರವರ ಬಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸರಳ ವ್ಯಕ್ತಿತ್ವದ ಮೂಲಕ ಪಕ್ಷ , ಜಿಲ್ಲೆ, ರಾಜ್ಯ , ಮತ್ತು ರಾಷ್ಟ್ರಕ್ಕೆ ಅವರು ಪ್ರಚಾರವಿಲ್ಲದೇ ಅನೇಕ ಕೆಲಸ ಮಾಡಿದ್ದರು ಮತ್ತು ಸಾಮಾನ್ಯ ಕಾರ್ಯಕರ್ತರೊಂದಿಗೆ ಉತ್ತಮ ಬಾಂದವ್ಯವಿಟ್ಟುಕೊಂಡ ರಾಜಕಾರಣಿಯೆಂದು ಸ್ಮರಿಸಿಕೊಂಡರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಪಕ್ಷದ ಮುಖಂಡರಾದ ಮಲ್ಯಾಡಿ ಶಿವರಾಮ ಶೆಟ್ಟಿ , ಎಂ. ದಿನೇಶ ಹೆಗ್ಡೆ ಆಸ್ಕರ್ ರವರನ್ನು ಸ್ಮರಿಸಿಕೊಂಡರು.

ಪಕ್ಷದ ಮುಖಂಡರಾದ ಅಶೋಕ ಪೂಜಾರಿ ಬೀಜಾಡಿ , ದೇವಕಿ ಸಣ್ಣಯ್ಯ , ಗಂಗಾಧರ ಶೆಟ್ಟಿ , ಚಂದ್ರ ಕಾಂಚನ್ ಕಾಸನಕಟ್ಟೆ , ಪ್ರಭಾವತಿ ಶೆಟ್ಟಿ , ನಾರಾಯಣ ಆಚಾರ್ , ಶಶಿರಾಜ ಪೂಜಾರಿ , ರಮೇಶ ಶೆಟ್ಟಿ ವಕ್ವಾಡಿ , ಚಂದ್ರ ಅಮಿನ್ , ಅಶೋಕ , ಚಂದ್ರಶೇಖರ ಶೆಟ್ಟಿ , ಅಭಿಜಿತ್ ಪೂಜಾರಿ , ದರ್ಮಪ್ರಕಾಶ , ವಿವೇಕಾನಂದ , ಕೇಶವ ಭಟ್ , ಸುನೀಲ್ ಪೂಜಾರಿ , ಸುರೇಶ ಶೆಟ್ಡಿ , ಕಿಶೋರ್ ಮಂದಾರ್ತಿ , ವಿಜಯ ಪೂಜಾರಿ ಉಳ್ತೂರು , ಸದಾನಂದ ಖಾರ್ವಿ , ಸಂತೋಷ್ , ಸುರೇಶ್ ಶೆಟ್ಟಿ , ರಾದಾಕ್ರಷ್ಣ ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಉಪಾದ್ಯಕ್ಷ ಚಂದ್ರಶೇಖರ ಖಾರ್ವಿ ಸ್ವಾಗತಿಸಿ , ಕಾರ್ಯದರ್ಶಿ ಆಶಾ ಕರ್ವೆಲ್ಲೋ ವಂದಿಸಿದರು . ಅಶೋಕ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

ಶ್ರೀನಿವಾಸಪುರ ನಂಬಿಹಳ್ಳಿ : ವಿಚ್ಛೇದಿತ ಪತ್ನಿ ಹಾಗೂ ಮಾವನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ

ಶ್ರೀನಿವಾಸಪುರ: ತಾಲ್ಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಪತ್ನಿ ಹಾಗೂ ಮಾವನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಗಳವಾರ ನಡೆದಿದೆ.
ರಾಧಾ ಹಾಗೂ ಅವರ ತಂದೆ ಮುನಿಯಪ್ಪ ಕೊಲೆಯಾದವರು. ಶ್ರೀನಿವಾಸಪುರದ ಮಾಂಸದ ವ್ಯಾಪಾರಿ ನಾಗೇಶ್ ಕೊಲೆ ಆರೋಪಿ.
ನಾಗೇಶ ತನ್ನ ಮೊದಲ ಪತ್ನಿ ರಾಧಾಗೆ ವಿಚ್ಛೇದನ ನೀಡಿದ್ದ, ನ್ಯಾಯಾಲಯದ ಆದೇಶದಂತೆ ಜೀವನಾಂಶ ನೀಡುತ್ತಿದ್ದ. ಎರಡನೇ ಪತ್ನಿಯೊಂದಿಗೆ ಶ್ರೀನಿವಾಸಪುರದಲ್ಲಿ ವಾಸವಾಗಿದ್ದ. ಮಂಗಳವಾರ ನಂಬಿಹಳ್ಳಿಗೆ ಬಂದ ನಾಗೇಶ, ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವಿಚ್ಛೇದಿತ ಪತ್ನಿ ರಾಧಾ ಮತ್ತು ಮಾವನ ತಲೆಗೆ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ್ದಾನೆ. ರಾಧಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮುನಿಯಪ್ಪ ಶ್ರೀನಿವಾಸಪುರದ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಕೃತ್ಯ ತಡೆಯಲು ಬಂದ ರಾಧಾ ಅವರ ಸಹೋದರಿ ಹಾಗೂ ಮಾವ ಸಹ ಗಾಯಗೊಂಡಿದ್ದಾರೆ.
ಗ್ರಾಮಸ್ಥರು ಆರೋಪಿಯನ್ನು ಹಿಡಿಯಲು ದೊಣ್ಣೆಗಳೊಂದಿಗೆ ಧಾವಿಸಿದಾಗ, ಮನೆಯೊಂದರಲ್ಲಿ ಸೇರಿಕೊಂಡ ಕೊಲೆ ಆರೋಪಿ, ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್ ಮತ್ತು ಬೆಂಕಿ ಪೆಟ್ಟಿಗೆ ಕೈಯಲ್ಲಿ ಹಿಡಿದು, ಯಾರಾದರೂ ಮುಂದೆ ಬಂದರೆ ಸಿಲಿಂಡರ್ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
ಆರೋಪಿ ಕಾಲಿಗೆ ಗುಂಡು: ಸ್ಥಳಕ್ಕೆ ಸಿಬ್ಬಂದಿಯೊಂದಿಗೆ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅವರು, ಮನೆಯಲ್ಲಿ ಅವಿತು ಕುಳಿತಿದ್ದ ಆರೋಪಿಗೆ ಶರಣಾಗಲು ಸೂಚಿಸಿದರು. ಆದರೆ ಆರೋಪಿ ನಾಗೇಶ ಪೊಲೀಸರ ಮೇಲೆ ಮಾರಕಾಯುಧದಿಂದ ದಾಳಿ ಮಾಡಲು ಯತ್ನಿಸಿದಾಗ, ಎಂ.ನಾರಾಯಣ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿದರು. ಕೆಳಗೆ ಬಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದರು ಎಂಬುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ.
ಡಿವೈಎಸ್‍ಪಿ ನಂದಕುಮಾರ್, ಪೊಲೀಸ್ ಇನ್ಸ್‍ಪೆಕ್ಟರ್‍ಗಳಾದ ಆರ್.ದಯಾನಂದ, ಲೋಕೇಶ್, ವೆಂಕಟೇಶ್, ಪೊಲೀಸ್ ಸಬ್ ಇನ್ಸ್‍ಪೆಕ್ಟರ್‍ಗಳಾದ ಈಶ್ವರ್, ರಾಮ ಮತ್ತು ಸಿಬ್ಬಂದಿ ಇದ್ದರು.

ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ 26ನೇ ವಾರ್ಷಿಕ ಮಹಾಸಭೆ- ಶೇ.20 ಡಿವಿಡೆಂಡ್ ಘೋಷಣೆ


ಉಡುಪಿ: 26ನೇ ವಾರ್ಷಿಕ ಮಹಾಸಭೆ- ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ನಿಂದ ಶೇ.20 ಡಿವಿಡೆಂಡ್ ಘೋಷಣೆ
ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿಯ 26ನೇ ವಾರ್ಷಿಕ ಮಹಾಸಭೆಯು ದಿನಾಂಕ 10/09-2023ನೇ ಆದಿತ್ಯವಾರದಂದು ಉಡುಪಿ ಶೋಕಮಾತಾ ಇಗರ್ಜಿಯ “ಆವೆ ಮರಿಯಾ” ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಅಲೋಶಿಯಸ್ ಡಿ’ಅಲ್ಮೇಡಾ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಅಧ್ಯಕ್ಷರು ಎಲ್ಲರನ್ನೂ ಸಭೆಗೆ ಪ್ರೀತಿ ಪೂರ್ವಕವಾಗಿ ಸ್ವಾಗತಿಸಿದರು. ಕಾರ್ಯದರ್ಶಿ ಸಂದೀಪ್
ಫೆರ್ನಾಂಡೀಸ್ ರವರು ವಾರ್ಷಿಕ ವರದಿಯನ್ನು ಮಂಡಿಸಿದರು.
ಶೇ.20 ಡಿವಿಡೆಂಡ್ ಘೋಷಣೆ : ಸಂಘವು 2022-23 ನೇ ವರದಿ ಸಾಲಿನಲ್ಲಿ ಕಳೆದ ಸಾಲಿಗೆ ಹೋಲಿಸಿದಾಗ ದ್ವಿ-ಗುಣ ರೂ. 83.81 ಲಕ್ಷ ಲಾಭಾಂಶವನ್ನು ಗಳಿಸಿದ್ದು, ಅಧ್ಯಕ್ಷರು ಪಾಲುದಾರರಿಗೆ ಶೇ 20 ಡಿವಿಡೆಂಡ್‍ನ್ನು ಘೋಷಿಸಿದರು.
“ಸಾಧನಾ ಪ್ರಶಸ್ತಿ” ಹಸ್ತಾಂತರ : ಶೋಕಮಾತಾ ಇಗರ್ಜಿಯ ಸಹಾಯಕ ಧರ್ಮಗುರುಗಳಾದ ವಂದನೀಯ ರೋಯ್ ಲೋಬೋ ರವರು ಸಂಘವು 2022-23ನೇ ಸಾಲಿನಲ್ಲಿ ತೋರ್ಪಡಿಸಿದ ಸಾಧನೆಗೆ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್,ಮಂಗಳೂರು ಇವರಿಂದ ಪಡೆದ “ಸಾಧನಾ ಪ್ರಶಸ್ತಿ”ಯನ್ನು ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಆಡಳಿತ ಮಂಡಳಿ ಸದಸ್ಯರಿಗೆ ಹಸ್ತಾಂತರಿಸುತ್ತಾ ಸಂಘದ ಅಭಿವೃಧ್ದಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.
ಸಂಘದ ವತಿಯಿಂದ ಸನ್ಮಾನ : ಸಂಘದ ನಿರ್ದೇಶಕರಲ್ಲಿ ಒಬ್ಬರಾದ ಡಾ// ನೇರಿ ಕರ್ನೇಲಿಯೋ ರವರು ಲಯನ್ಸ್ ಕ್ಲಬ್ ಇದರ ಜಿಲ್ಲಾ ಗವರ್ನರ್ 317 ಸಿ ಹುದ್ದೆಯನ್ನು ಅಲಂಕರಿಸಿದ ಕಾರಣ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ವಿದ್ಯಾರ್ಥಿ ವೇತನ ಹಾಗೂ ಸಹಾಯಧನ ವಿತರಣೆ : ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ಸಂಘದ “ಅ” ವರ್ಗದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಹಾಗೂ ಮಾನಸ ನಿರ್ಮಿತಿ ಮತ್ತು ಪುನರ್ವಸತಿ ಕೇಂದ್ರ,ಪಾಂಬೂರು ಇವರಿಗೆ ಸಹಾಯಧನವನ್ನು ವಿತರಿಸಲಾಯಿತು.
ಮುಂದಿನ ಯೋಜನೆಗಳು : ಉಪಾಧ್ಯಕ್ಷರಾದ ಶ್ರೀ ಲೂವಿಸ್ ಲೋಬೋರವರು ಸಂಘದ ಮುಂದಿನ ಯೋಜನೆಗಳಾದ ಸಂಘದ ಕಾರ್ಯವ್ಯಾಪ್ತಿಯನ್ನು ಜಿಲ್ಲಾ ಮಟ್ಟಕ್ಕೆ ಏರಿಸುವುದು ಮತ್ತು ಹೊಸ ಶಾಖೆಗಳನ್ನು ಸ್ವಂತ ಕಟ್ಟಡಗಳಲ್ಲಿ ತೆರೆಯುವ ಬಗ್ಗೆ ಸಭೆಗೆ ಮಾಹಿತಿಯನ್ನು ನೀಡಿದರು. ಸಂಘದ ಏಳಿಗೆ ಹಾಗೂ ಶ್ರೇಯಾಭಿವೃದ್ಧಿ ಕುರಿತು ಸದಸ್ಯದ ಮನವಿ,ಅನಿಸಿಕೆಗಳನ್ನು ಸ್ವೀಕರಿಸಲಾಯಿತು. ನಂತರ ಉಪಾಧ್ಯಕ್ಷರು ಎಲ್ಲರಿಗೂ ಧನ್ಯವಾದಗಳನ್ನು ಸಮರ್ಪಿಸಿದರು.
ನಿರ್ದೇಶಕರಾದ ಇಗ್ನೇಷಿಯಸ್ ಮೋನಿಸ್, ಪರ್ಸಿ ಜೆ ಡಿಸೋಜ, ಜೇಮ್ಸ್ ಡಿ’ಸೋಜ, ಆರ್ಚಿಬಾಲ್ಡ್ ಎಸ್ ಡಿ’ಸೋಜ, ಫ್ರೆಕ್ಲೀನ್ ಮಿನೇಜಸ್, ಜೆಸಿಂತಾ ಡಿ’ಸೋಜ, ಗಿಲ್ಬರ್ಟ್ ಫೆರ್ನಾಂಡೀಸ್ ಮತ್ತು ಲೋಯ್ಸೆಟ್ ಜೆ ಕರ್ನೇಲಿಯೊ, ಶಾಖಾ ವ್ಯವಸ್ಥಾಪಕರಾದ ನೈನಾ ಮಿನೇಜಸ್, ಸುನಿಲ್ ಡಿ’ಸೋಜ, ಜೆನೆಟ್ ಡಿ’ಸೋಜ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು. ಶಿರ್ವ ಶಾಖಾ ವ್ಯವಸ್ಥಾಪಕಿ ಶೀತಲ್ ಮರಿಯಾ ಡಿ’ಸೋಜರವರು ಕಾರ್ಯಕ್ರಮವನ್ನು ನಿರೂಪಿಸಿದರು.

USA ಯ MKCA ಸಂಘಕ್ಕೆ 2024-2026 ವರ್ಷಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾಗಿ ಪ್ರಗತಿ ಪಿಂಟೊ/New officers for the 2024-2026 year for MKCA USA – Pragati Pinto as elected president

USA ಯ MKCA ಸಂಘಕ್ಕೆ 2024-2026 ವರ್ಷಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ (ಮಂಗಳೂರಿ ಕೊಂಕಣ್ ಕ್ರೀಸ್ತಾಂವ್ ಸಂಘ್, ಅಮೇರಿಕಾ)

(L to R) ಸವಿಯೋ ಪೈಸ್, ಲಿಯೊನಾರ್ಡ್ ಲೋಬೋ ಶೆಣೈ, ಪ್ರಗತಿ ಪಿಂಟೋ, ಜೇಮ್ಸ್ ಸಲ್ಡಾನ್ಹಾ, ನುಲಾ ಡಿ’ಅಬ್ರೆಯೋ ಮತ್ತು ಅತಿಥಿ ಧರ್ಮಗುರು ಫಾ. ಹೆನ್ರಿ ಸಿಕ್ವೇರಾ, ಟಕೋಡ್.

ಅಧ್ಯಕ್ಷೆ ಪ್ರಗತಿ ಪಿಂಟೋ
ಲಿಯೊನಾರ್ಡ್ ಲೋಬೋ ಶೆಣೈ, ಉಪಾಧ್ಯಕ್ಷ
ಸವಿಯೋ ಪೈಸ್, ಕಾರ್ಯದರ್ಶಿ
ಲೂನಾ ಡಿ’ಅಬ್ರೆಯೊ, ಜಂಟಿ ಕಾರ್ಯದರ್ಶಿ
ಜೇಮ್ಸ್ ಸಲ್ಡಾನ್ಹಾ, ಖಜಾಂಚಿ
ಇವರ ಸೇವಾ ಅವಧಿಯು 2 ವರ್ಷಗಳವರೆಗೆ ಇರುತ್ತದೆ
.

The following officers were elected for MKCA, USA for the Year 2024-2026: (Mangalore Konkan Christian association)

(L to R) Savio Pais, Leonard Lobo Shenoy, Pragati Pinto, James Saldanha, Nula D’Abreo and Guest Chaplain Fr. Henry Sequeira, Taccode

Pragati Pinto, President

Leonard Lobo Shenoy, Vice President

Savio Pais, Secretary

Luna D’Abreo, Joint Secretary

James Saldanha, Treasurer

Their term of service will be for 2 years.

ಶಂಕರ ಸೇವಾ ಸಮಿತಿಯಿಂದ ಕೃಷ್ಣ ಜನ್ಮಾಷ್ಟಮಿಗೆ ಮಕ್ಕಳ ಕೃಷ್ಣ ವೇಷ ಸ್ಪರ್ಧೆ: ಕೃಷ್ಣ ಲೀಲೆ ಎಲ್ಲರಿಗೂ ಪ್ರಿಯ-ಡಿ.ಸತ್ಯಮೂರ್ತಿ

ಶ್ರೀನಿವಾಸಪುರ: ಮಕ್ಕಳು ಪುಟ್ಟ ಕೃಷ್ಣನನ್ನು ತಮ್ಮ ಗೆಳೆಯನೆಂದು ಬಗೆದು ಖುಷಿ ಪಡುತ್ತಾರೆ ಎಂದು ತಾಲ್ಲೂಕು ಸನ್ಮಾರ್ಗ ಬಳಗದ ಅಧ್ಯಕ್ಷ ಡಿ.ಸತ್ಯಮೂರ್ತಿ ಹೇಳಿದರು.
ಪಟ್ಟಣದ ಭಾರತಿ ತೀರ್ಥರ ಸಭಾ ಭವನದಲ್ಲಿ ಶಂಕರ ಸೇವಾ ಸಮಿತಿ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೋಮವಾರ ಏರ್ಪಡಿಸಿದ್ದ ಮಕ್ಕಳ ಕೃಷ್ಣ ವೇಷ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೃಷ್ಣನದು ಮಹಾ ಭಾರತದ ಮಹಾಪಾತ್ರಗಳಲ್ಲಿ ಅತ್ಯಂತ ಮಹತ್ವದ ಪಾತ್ರ ಎಂದು ಹೇಳಿದರು.
ಮಹಾ ಕಾವ್ಯಗಳು ಭಾರತೀಯ ಸಂಸ್ಕೃತಿಯ ಪ್ರತೀಕ. ಸನ್ಮಾರ್ಗ ತೋರಿಸುವ ಸಾಧನ. ಆದ್ದರಿಂದ ಪ್ರತಿಯೊಬ್ಬರೂ ರಾಮಾಯಣ, ಮಹಾಭಾರತ ಓದಬೇಕು. ಹಿರಿಯರು ಮಕ್ಕಳಿಗೆ ಮಹಾ ಕಾವ್ಯದ ಕತೆಗಳನ್ನು ಒದಲು ತಿಳಿಸಬೇಕು. ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡಬೇಕು ಎಂದು ಹೇಳಿದರು.
ತಾಲ್ಲೂಕು ಸನ್ಮಾರ್ಗ ಬಳಗದ ನಿರ್ದೇಶಕಿ ಮಂಗಳಾ ಸತ್ಯಮೂರ್ತಿ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಕೃಷ್ಣ, ರಾಧೆ ವೇಷ ಹಾಕಿ ತಂದಿದ್ದಾರೆ. ಸ್ಪರ್ಧೆ ಎಂಬುದನ್ನು ಮರೆಯಬೇಕು. ಮಕ್ಕಳಲ್ಲಿ ಮುದು ಕೃಷ್ಣನನ್ನು, ಪುಟ್ಟ ರಾಧೆಯನ್ನು ಕಂಡು ಸಂತೋಷಪಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೃಷ್ಣನನ್ನು ಕುರಿತ ಗೀತೆಗಳ ಗಾಯನ ಏರ್ಪಡಿಸಲಾಗಿತ್ತು.
ಎಂ.ಆರ್.ಸುಜಾತ, ಎಂ.ಆರ್.ಆನಂದಬಾಬು, ದೀಪಾ ಆರ್.ಕುಲಕರ್ಣಿ, ಅರುಣ, ಅಮರನಾಥ್, ವೆಂಕಟರವಣಪ್ಪ ಇದ್ದರು.

ಉತ್ತಮ ಸಾಧನೆಗೆ ಎಲ್‌ಐಸಿ ಪ್ರತಿನಿಧಿ ಎಸ್.ಲಕ್ಷಮಣ ಅವರಿಗೆ ಗೌರವ

ಎಲ್‌ಐಸಿ ಪಾಲಿಸಿ ಮಾಡಿಸುವಲ್ಲಿ ಉತ್ತಮ ಸಾಧನೆ ಮಾಡಿರುವ ಶ್ರೀನಿವಾಸಪುರದ ಪ್ರತಿನಿಧಿ ಎಸ್.ಲಕ್ಷಮಣ ಅವರಿಗೆ ಸೋಮವಾರ, ಜಿಲ್ಲಾ ಎಲ್‌ಐಸಿ ಶಾಖಾ ವ್ಯವಸ್ಥಾಪಕ ಎನ್.ಆರ್.ಸಿದ್ದೇಶ್ ಪಾರಿತೋಷಕ ನೀಡಿ ಗೌರವಿಸಿದರು. ಶ್ರೀಕಾಂತ್ ಇದ್ದರು.

ರೈತ ಸಂಘದ ಪದಾಧಿಕಾರಿಗಳಿಂದ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಮನವಿ

ಶ್ರೀನಿವಾಸಪುರ ; ಶ್ರೀನಿವಾಸಪುರದ ಪೊಲೀಸ್ ಠಾಣೆಯಲ್ಲಿ ಭಾನುವಾರ ಕರ್ನಾಟಕ ಪ್ರಾಂತ್ಯ ರೈತ ಸಂಘದ ಪದಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅವರನ್ನು ಭೇಟಿಯಾಗಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಮನವಿ ಮಾಡಿದರು.