ಶ್ರೀನಿವಾಸಪುರ:ಸರ್ಕಾರಿ ಬಾಲಕಿಯರ ಪ. ಪೂ. ಕಾಲೇಜಿನ ವಿದ್ಯಾಥಿನಿಯರಿಂದ ತ್ಯಾಜ್ಯ ಮುಕ್ತ ಭಾರತ – ಜಾಗೃತಿ ಜಾಥಾ

ಶ್ರೀನಿವಾಸಪುರ: ತ್ಯಾಜ್ಯ ಮುಕ್ತ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಸಹಕರಿಸಬೇಕು. ಸ್ವಚ್ಛ ಪರಿಸರ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಕಾಲೇಜಿನ ಉಪ ಪ್ರಾಂಶುಪಾಲ ಶ್ರೀಧರ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾಥಿನಿಯರಿಂದ ಶನಿವಾರ ಏರ್ಪಡಿಸಿದ್ದ ತ್ಯಾಜ್ಯ ಮುಕ್ತ ಭಾರತ ಕುರಿತು ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದ ಅವರು, ತ್ಯಾಜ್ಯ ಮುಕ್ತ ಭಾರತ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ತ್ಯಾಜ್ಯ ಆರೋಗ್ಯ ಸಮಸ್ಯೆಗೆ ಮೂಲ ಕಾರಣವಾಗಿದೆ. ವಿವಿಧ ಮೂಲಗಳಿಂದ ಹೊರಬೀಳುವ ತ್ಯಾಜ್ಯ ಅಗಾಧ ಪ್ರಮಾಣದ್ದಾಗಿದ್ದು, ನಿರ್ವಹಣೆ ಕಷ್ಟದಾಯಕ. ಆದ್ದರಿಂದ ವಿದ್ಯಾವಂತ ಸಮುದಾಯ ತ್ಯಾಜ್ಯ ನಿರ್ವಹಣೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕು. ಅದರಲ್ಲೂ ಈ ವಿಷಯದಲ್ಲಿ ವಿದ್ಯಾರ್ಥಿನಿಗಳು ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.
ಮುಖ್ಯ ಶಿಕ್ಷಕ ಎಂ.ಬೈರೇಗೌಡ ಮಾತನಾಡಿ, ಬದಲಾದ ಪರಿಸ್ಥಿತಿಯಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಿದೆ. ಸಾರ್ವಜನಿಕರು ತ್ಯಾಜ್ಯ ವಸ್ತುಗಳ ನಿರ್ವಣೆ ಮಾಡುವಲ್ಲಿ ಅಗತ್ಯ ಎಚ್ಚರಿಕೆ ವಹಿಸುತ್ತಿಲ್ಲ. ಹಾಗಾಗಿ ಪರಿಸರ ತ್ಯಾಜ್ಯಮಯವಾಗಿದೆ. ಆದ್ದರಿಂದ ಪಟ್ಟಣದ ನಾಗರಿಕರು ತಮ್ಮ ನೆಗಳಲ್ಲಿ ಬೀಳುವ ತ್ಯಾಜ್ಯವನ್ನು ವಿಂಗಡಿಸಿ ಪೌರಕಾಮರ್ಿಕರಿಗೆ ನೀಡಬೇಕು. ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ವಸ್ತುಗಳನ್ನು ಸುಡಬಾರದು ಎಂದು. ಹಾಗೆ ಮಾಡುವುದರಿಂದ ಪರಿಸರಕ್ಕೆ ಹೆಚ್ಚಿನ ಹಾನಿ ಉಂಟಾಗುತ್ತದೆ ಎಂದು ಹೇಳಿದರು.
ತಾಲ್ಲೂಕು ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ರಮಣಿ, ಶಿಕ್ಷಕಿ ಶಾರದಮ್ಮ ಇದ್ದರು.

ನಕಲಿ ಬಿತ್ತನೆ ಬೀಜ ಕೀಟನಾಶಕ ನಿಯಂತ್ರಣಕ್ಕೆ ವಿಶೇಷ ತಂಡ ರಚನೆಗೆ ಬೆಳೆಗಾರರಿಗೆ ಬೆಂಬಲ ಬೆಲೆಗೆ – ಕೃಷಿ ಸಚಿವ ಚೆಲುವರಾಯಸ್ವಾಮಿಗೆ ಮನವಿ

ಕೋಲಾರ; ಸೆ.30: ನಕಲಿ ಬಿತ್ತನೆ ಬೀಜ ಕೀಟನಾಶಕ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡುವ ಜೊತೆಗೆ ಬೆಲೆ ಕುಸಿತದಿಂದ ಕಂಗಾಲಾಗಿರುವ ಹೂ, ಟೊಮೆಟೊ ಬೆಳೆಗಾರರ ರಕ್ಷಣೆಗೆ ಪ್ರತಿ ಕೆಜಿಗೆ 10 ರೂಪಾಯಿ ಬೆಂಬಲ ಬೆಲೆ ಘೋಷಣೆ ಮಾಡಬೇಕು ಜೊತೆಗೆ ನರ್ಸರಿ ಕಾಯ್ದೆಯನ್ನು ಜಾರಿಗೆ ಮಾಡಬೇಕೆಂದು ಆಗ್ರಹಿಸಿ ರೈತಸಂಘದಿಂದ ನಷ್ಟ ಟೊಮೆಟೊ ಸಮೇತ ಕೃಷಿ ಸಚಿವ ಚೆಲುವರಾಯಸ್ವಾಮಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾದ್ಯಂತ ರೈತರ ನಿದ್ದೆಗೆಡಿಸುತ್ತಿರುವ ನಕಲಿ ಬಿತ್ತನೆ ಬೀಜ ಕೀಟನಾಶಕ ನಿಯಂತ್ರಣ ಮಾಡುವಲ್ಲಿ ತೋಟಗಾರಿಕೆ, ಕೃಷಿ ಅಧಿಕಾರಿಗಳು ವಿಫಲವಾಗಿ ನಕಲಿ ಕಂಪನಿಗಳ ಜೊತೆ ಶಾಮೀಲಾಗಿದ್ದಾರೆಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಕೃಷಿ ಸಚಿವರಿಗೆ ದೂರು ನೀಡಿದರು.
ರಾಜ್ಯಾದ್ಯಂತ ರೈತರ ನಿದ್ದೆಗೆಡಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳ ಹೆಸರಿನಲ್ಲಿ ನಕಲಿ ಬಿತ್ತನೆ ಬೀಜ ಕೀಟನಾಶಕ ನಿಯಂತ್ರಣ ಮಾಡಲು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡುವ ಜೊತೆಗೆ ರೈತರನ್ನು ವಂಚನೆ ಮಾಡುವ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳಲು ಪ್ರಭಲ ಕಾನೂನು ಜಾರಿ ಮಾಡುವ ಮುಖಾಂತರ ರೈತರ ಶ್ರಮದ ಬೆವರ ಹನಿ ಕಸಿಯುವ ಕಂಪನಿಗಳ ವಿರುದ್ಧ ಸರ್ಕಾರ ಚಾಟಿ ಬೀಸುವ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲಾದ್ಯಂತ ಸತತವಾಗಿ 5 ವರ್ಷಗಳಿಂದ ರೈತರ ಬೆವರ ಹನಿಯನ್ನು ಕಸಿಯುತ್ತಿರುವ ನಕಲಿ ಬಿತ್ತನೆ ಬೀಜ, ಕೀಟನಾಶಕಗಳ ಹಾವಳಿ ಹೆಚ್ಚಾಗಿದ್ದರೂ ಸಂಬಂಧಪಟ್ಟ ಕೃಷಿ ತೋಟಗಾರಿಕೆ ಅಧಿಕಾರಿಗಳು ಇದ್ದೂ ಇಲ್ಲದಂತಾಗಿದ್ದಾರೆ. ರೈತ ದೂರು ಕೊಟ್ಟರೆ ಮಾತ್ರ ನೆಪ ಮಾತ್ರಕ್ಕೆ ವಿಜ್ಞಾನಿಗಳನ್ನು ತರಿಸಿ ರೈತರ ಮೇಲೆ ಆರೋಪ ಮಾಡಿ ನಕಲಿ ಕಂಪನಿಗಳಿಗೆ ಗುಣಮಟ್ಟದ ಪ್ರಮಾಣ ಪತ್ರ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಜಿಲ್ಲೆಯ ರೈತರ ಪಾಲಿಗೆ ಕೆಸಿವ್ಯಾಲಿ ವರದಾನವೋ ಶಾಪವೋ ಗೊತ್ತಿಲ್ಲ. ಆದರೆ, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆಯುತ್ತಿರುವ ಟೊಮೇಟೊ ಕ್ಯಾಪ್ಸಿಕಂ ಬೆಳೆಗಳಿಗೆ ಬಾಧಿಸುತ್ತಿರುವ ಬಿಂಗಿರೋಗ, ರೋಸ್, ನುಸಿ, ಅಂಗಮಾರಿ ರೋಗಗಳಿಗೆ ಲಕ್ಷಾಂತರ ಔಷಧಿ ಖರೀದಿ ಮಾಡಿ ಸಿಂಪಡಣೆ ಮಾಡಿದರು ಕನಿಷ್ಠ ತೋಟದ ಮೇಲಿರುವ ಸೊಳ್ಳೆ ಸಹ ಸಾಯುತ್ತಿಲ್ಲ. ಅಷ್ಟರ ಮಟ್ಟಿಗೆ ಔಷಧಿಗಳ ಗುಣಮಟ್ಟ ಕಳಪೆಯಾಗಿದ್ದರೂ ಗುಣಮಟ್ಟ ಪರಿಶೀಲನೆ ಮಾಡಬೇಕಾದ ಅಧಿಕಾರಿಗಳು ನಕಲಿ ಕಂಪನಿಗಳ ಜೊತೆ ಶಾಮೀಲಾಗಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾದ್ಯಂತ 3,800 ಹೊರರಾಜ್ಯದ ಔಷಧಿ ಕಂಪನಿಗಳು 1800 ಮಾರಾಟಗಾರರು 480 ಪ್ರಜ್ಞಾವಂತ ಯುವಕರು ವಿವಿಧ ರೋಗಗಳ ನಿಯಂತ್ರಣ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದರೂ ಯಾವುದೇ ಔಷಧಿಯಿಂದ ರೋಗ ನಿಯಂತ್ರಣ ಬರುತ್ತಿಲ್ಲ. ಸಂಬಂಧಪಟ್ಟ ತೋಟಗಾರಿಕೆ, ಕೃಷಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ನುಣುಚಿಕೊಳ್ಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಇನ್ನು ಜಿಲ್ಲಾದ್ಯಂತ ನಾಯಿಕೊಡೆಗಳಂತೆ ತಲೆ ಎತ್ತಿರುವ ನೂರಾರು ನರ್ಸರಿಗಳು ರೈತರಿಗೆ ಬಿಲ್ ನೀಡದೆ ವಂಚನೆ ಮಾಡುತ್ತಿದ್ದಾರೆ. ತೋಟಗಾರಿಕೆ ಅಧಿಕಾರಿಗಳನ್ನು ಕೇಳಿದರೆ ನಮ್ಮ ಇಲಾಖೆಯಿಂದ ಪರವಾನಗಿ ಪಡೆದಿಲ್ಲವೆಂದು ಹಿಂಬದಿಯಿಂದ ಎಲ್ಲಾ ತರಹದ ಸರ್ಕಾರದ ಅನುದಾನಗಳನ್ನು ನರ್ಸರಿ ಮಾಲೀಕರಿಗೆ ನೀಡುತ್ತಿದ್ದಾರೆಂದು ಕಿಡಿಕಾರಿದರು.
ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ, 2 ತಿಂಗಳ ಹಿಂದೆ ಇಡೀ ದೇಶದಲ್ಲಿಯೇ ಬಾರೀ ಸದ್ದು ಮಾಡಿದ್ದ ಟೊಮೇಟೊ ಬೆಲೆ ಹಾಗೂ ಹೂ ಬೆಳೆಗಳು ಪಾತಾಳಕ್ಕೆ ಕುಸಿದಿದ್ದು, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿರುವ ರೈತ ಬೆಲೆಯಿಲ್ಲದೆ ರಸ್ತೆಗಳಲ್ಲಿ ಸುರಿಯಬೇಕಾದ ಪರಿಸ್ಥಿತಿ ಇರುವುದರಿಂದ ಸರ್ಕಾರ ಜಿಲ್ಲಾಡಳಿತದಿಂದ ಬೆಳೆ ನಷ್ಟದ ವರದಿ ತರಿಸಿಕೊಂಡು ಕನಿಷ್ಠ ಪ್ರತಿ ಕೆಜಿ ಟೊಮೇಟೊ ಹಾಗೂ ಹೂವಿಗೆ 10ರೂ ಬೆಂಬಲ ಬೆಲೆ ಘೋಷಣೆ ಮಾಡಿ ಸಂಕಷ್ಟದಲ್ಲಿರುವ ರೈತರ ರಕ್ಷಣೆಗೆ ನಿಲ್ಲಬೇಕು ಎಂದು ಒತ್ತಾಯಿಸಿದರು.
ನರ್ಸರಿಗಳು ತೋಟಗಾರಿಕೆ ಹಿಡಿತದಲ್ಲೂ ಇಲ್ಲದೆ ಕೃಷಿ ಇಲಾಖೆಯ ಹಿಡಿತದಲ್ಲೂ ಇಲ್ಲದೆ ಇರುವುದರಿಂದ ಯಾರ ಹಿಡಿತಕ್ಕೂ ಸಿಗದೆ ರೈತರು ನಷ್ಟವಾದಾಗ ಯಾರನ್ನೂ ಕೇಳಬೇಕೆಂಬ ಪ್ರಶ್ನೇ ಮೂಡಿದೆ. ಕೂಡಲೇ ರಾಜ್ಯದಲ್ಲಿ ನರ್ಸರಿ ಕಾಯ್ದೆಯನ್ನು ಜಾರಿಗೆ ಮಾಡಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ತೀವ್ರವಾದ ಬರಗಾಲ ಆವರಿಸಿರುವ ಕಾರಣ ಕೋಲಾರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಿ ಬರ ನಿರ್ವಹಣೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ ನೀರು, ಮೇವು ಸಮಸ್ಯೆಯಾಗದಂತೆ ಜಾಗೃತಿವಹಿಸಿ ಜಾನುವಾರುಗಳ ರಕ್ಷಣೆಗೆ ಪ್ರತಿ ಪಂಚಾಯಿತಿಗೊಂದು ಗೋಶಾಲೆ ತೆರೆಯಬೇಕು.
ಮಾನ್ಯರು ಈ ಮೇಲ್ಕಂಡ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ರೈತರ ಸಮಸ್ಯೆಗಳಿಗೆ ತೋಟಗಾರಿಕೆ ಕೃಷಿ ಅಧಿಕಾರಿಗಳು ಸ್ಪಂದಿಸಿ ನಕಲಿ ಬಿತ್ತನೆ ಬೀಜ ಕೀಟನಾಶಕಗಳ ಹಾವಳಿಯಿಂದ ತತ್ತರಿಸಿರುವ ರೈತರ ರಕ್ಷಣೆಗೆ ನಿಲ್ಲಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕೃಷಿ ಸಚಿವರಾದ ಚೆಲುವರಾಯಸ್ವಾಮಿಯವರು, ನಕಲಿ ಬಿತ್ತನೆ ಬೀಜ, ಕೀಟನಾಶಕಗಳ ಬಗ್ಗೆ ಸರ್ಕಾರದ ಮಟ್ಟದಲ್ಲಿ ಕಾನೂನು ರಚನೆಗೆ ಚರ್ಚೆಯಾಗುತ್ತಿದೆ. ನರ್ಸರಿ ಕಾಯ್ದೆಯನ್ನು ಜಾರಿಗೆ ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ.ಜೊತೆಗೆ ಬರ ನಿರ್ವಹಣೆಯಲ್ಲಿ ಯಾವುದೇ ತಾರತಮ್ಯವಿಲ್ಲದೆ ಸಮಸ್ಯೆ ನಿಭಾಯಿಸಲು ಜಿಲ್ಲಾಧಿಕಾರಿಗೆ ಆದೇಶ ಮಾಡುವ ಜೊತೆಗೆ ಹೂವು ಮತ್ತು ಟೊಮೆಟೊ ಬೆಳೆಗೆ ಬೆಂಬಲ ಬೆಲೆ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುವ ಭರವಸೆ ನೀಡಿದರು.
ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಫಾರೂಖ್ ಪಾಷ, ಬಂಗಾರಿ ಮಂಜು, ರಾಜೇಶ್, ವಿಜಯ್ ಪಾಲ್, ಭಾಸ್ಕರ್, ಸುನೀಲ್ ಕುಮಾರ್, ಮಂಗಸಂದ್ರ ನಾಗೇಶ್, ಪೆಮ್ಮದೊಡ್ಡಿ ಯಲ್ಲಣ್ಣ, ಹರೀಶ್, ತೆರ್ನಹಳ್ಳಿ ಆಂಜಿನಪ್ಪ, ವೆಂಕಟೇಶಪ್ಪ, ನರಸಿಂಹಯ್ಯ ಸುಪ್ರೀಂ ಚಲ, ಮೂರಾಂಡಹಳ್ಳಿ ಶಿವಾರೆಡ್ಡಿ, ಕದರಿನತ್ತ ಅಪ್ಪೋಜಿರಾವ್, ಕಿರಣ್, ನಾಗೇಶ್, ರಾಮಸಾಗರ ವೇಣು, ಸುರೇಶ್ ಬಾಬು, ಮುಂತಾದವರಿದ್ದರು.

ರಿಯಲ್ ಎಸ್ಟೇಟ್‌ನಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ : ಕ್ರೆಡಾಯ್ ಮಂಗಳೂರು ಮಹಿಳಾ ವಿಭಾಗ ಆರಂಭ – ಅದ್ದೂರಿಯ ಉದ್ಘಾಟನೆ


ಮಂಗಳೂರು, ಸೆಪ್ಟೆಂಬರ್ 27, 2023 – ಮಂಗಳೂರಿನ ಓಶಿಯನ್ ಪರ್ಲ್, ಪೆಸಿಫಿಕ್ 4, ರಿಯಲ್ ಎಸ್ಟೇಟ್ ಉದ್ಯಮವು ಕ್ಷೇತ್ರಕ್ಕೆ ಹೊಸ ಆಯಾಮಗಳನ್ನು ತರಲು ಭರವಸೆ ನೀಡುವ ಐತಿಹಾಸಿಕ ಘಟನೆಗೆ ಸಾಕ್ಷಿಯಾಯಿತು. ಕಾನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ (ಕ್ರೆಡಾಯ್) ಮಂಗಳೂರು ಚಾಪ್ಟರ್ ಆಯೋಜಿಸಿದ್ದ ಕ್ರೆಡೈ ಮಹಿಳಾ ವಿಭಾಗದ (ಸಿಡಬ್ಲ್ಯೂಡಬ್ಲ್ಯು) ಉದ್ಘಾಟನೆ ಮತ್ತು ಸ್ಥಾಪನೆಯು ಅದ್ದೂರಿಯಾಗಿ ನಡೆಯಿತು, ಪ್ರಮುಖ ವ್ಯಕ್ತಿಗಳು ಮತ್ತು ಉತ್ಸಾಹಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವು 7:00 ಗಂಟೆಗೆ ಪ್ರಾರಂಭವಾಯಿತು. ಮತ್ತು ಗೌರವಾನ್ವಿತ ಮುಖ್ಯ ಅತಿಥಿಗಳಾದ ಶ್ರೀ ಮುಲ್ಲೈಮುಹಿಲನ್ M.P., I.A.S, ದ.ಕ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಗೌರವ ಅತಿಥಿಗಳಾದ CREDAI ಕರ್ನಾಟಕದ ಅಧ್ಯಕ್ಷರಾದ ಶ್ರೀ ಪ್ರದೀಪ್ ರಾಯ್ಕರ್ ಮತ್ತು CWW ರಾಷ್ಟ್ರೀಯ ಕಾರ್ಯದರ್ಶಿ ಶ್ರೀಮತಿ ಸಾರಾ ಜೇಕಬ್ ಸೇರಿದಂತೆ ಪ್ರಮುಖ ಗಣ್ಯರು ಉಪಸ್ಥಿತರಿದ್ದರು. CWW ಮಂಗಳೂರು ಚಾಪ್ಟರ್‌ನ ಸಂಯೋಜಕರಾದ ಶ್ರೀಮತಿ ಕ್ರಿಥೀನ್ ಅಮೀನ್, CWW ಮಂಗಳೂರು ಚಾಪ್ಟರ್‌ನ ಕಾರ್ಯದರ್ಶಿ ಶ್ರೀಮತಿ ರಜನಿ ಪತ್ರರಾವ್ ಅವರಿಂದ.
ಸಂಜೆಯ ಪ್ರಕ್ರಿಯೆಯು ಸ್ಪೂರ್ತಿದಾಯಕ ಪರಿಚಯದ ವೀಡಿಯೊದೊಂದಿಗೆ ಪ್ರಾರಂಭವಾಯಿತು, ಈವೆಂಟ್‌ನ ಮಹತ್ವಕ್ಕಾಗಿ ಧ್ವನಿಯನ್ನು ಹೊಂದಿಸುತ್ತದೆ. ಇದರ ನಂತರ ಕ್ರೆಡೈ ಮಂಗಳೂರಿನ ಖಜಾಂಚಿ ಶ್ರೀ ಸುದೀಶ್ ಕರುಣಾಕರನ್ ರವರು ಸ್ವಾಗತಾರ್ಹ ಭಾಷಣ ಮಾಡಿದರು, ಅವರು ಕೋಣೆಯನ್ನು ಆವರಿಸಿದ ಉತ್ಸಾಹ ಮತ್ತು ನಿರೀಕ್ಷೆಯನ್ನು ತಿಳಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕ್ರೆಡೈ ಮಂಗಳೂರು ಅಧ್ಯಕ್ಷರಾದ ಶ್ರೀ ವಿನೋದ್ ಪಿಂಟೋ ಅವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಹಿಳೆಯರ ಸಹಭಾಗಿತ್ವದ ಮಹತ್ವವನ್ನು ಒತ್ತಿ ಹೇಳಿದರು. ಉದ್ಯಮದಲ್ಲಿ ಲಿಂಗ ವೈವಿಧ್ಯತೆ ಮತ್ತು ಸಮಾನತೆಯ ಅಗತ್ಯವನ್ನು ಅವರು ಹೈಲೈಟ್ ಮಾಡಿದರು ಮತ್ತು CWW ಉಪಕ್ರಮವು ಹೇಗೆ ಆಟ ಬದಲಾಯಿಸುತ್ತದೆ.
ಗೌರವಾನ್ವಿತ ಗಣ್ಯರಿಂದ ಸಾಂಕೇತಿಕವಾಗಿ ದೀಪ ಬೆಳಗಿಸಿದ ನಂತರ ಕ್ರೆಡೈ ಮಹಿಳಾ ವಿಭಾಗದ ಔಪಚಾರಿಕ ಉದ್ಘಾಟನೆ ಮತ್ತು ಸ್ಥಾಪನೆ ನಡೆಯಿತು. ಶ್ರೀಮತಿ ಸಾರಾ ಜೇಕಬ್ ಅವರನ್ನು CWW ಮಂಗಳೂರು ಚಾಪ್ಟರ್‌ನ ಕಾರ್ಯದರ್ಶಿಯಾಗಿ ಪರಿಚಯಿಸಲಾಯಿತು ಮತ್ತು ಶ್ರೀಮತಿ ಕ್ರಿಥೀನ್ ಅಮೀನ್ CWW ಮಂಗಳೂರು ಚಾಪ್ಟರ್‌ನ ಸಂಯೋಜಕಿಯ ಪಾತ್ರವನ್ನು ವಹಿಸಿಕೊಂಡರು. ಈ ಸಮಾರಂಭದಲ್ಲಿ ಶ್ರೀಮತಿ ಸಾರಾ ಜಾಕೋಬ್ ನೇತೃತ್ವದ ಪ್ರಮಾಣ ವಚನ ಸ್ವೀಕಾರ ಸಮಾರಂಭವು CWW ನ ಸಮರ್ಪಣೆ ಮತ್ತು ಧ್ಯೇಯವನ್ನು ಒತ್ತಿಹೇಳಿತು.

ಸಿಡಬ್ಲ್ಯುಡಬ್ಲ್ಯು ಮಂಗಳೂರು ಚಾಪ್ಟರ್‌ನ ಸಂಯೋಜಕರಾದ ಶ್ರೀಮತಿ ಕ್ರಿಥೀನ್ ಅಮೀನ್ ಅವರ ಭಾವಪೂರ್ಣ ಭಾಷಣವು ಸಂಜೆಯ ಮುಖ್ಯಾಂಶಗಳಲ್ಲಿ ಒಂದಾಗಿದೆ. ಅವರು ಮಹಿಳಾ ನಾಯಕತ್ವದ ಬಗ್ಗೆ ನಿರರ್ಗಳವಾಗಿ ಮಾತನಾಡಿದರು ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರವನ್ನು ಹೆಚ್ಚಿಸುವ ಬಗ್ಗೆ ಅಮೂಲ್ಯವಾದ ಸಲಹೆಗಳನ್ನು ಪ್ರಸ್ತುತಪಡಿಸಿದರು ಮತ್ತು ಮಹಿಳೆಯರು ಅಸಾಧಾರಣ ಬಹುಕಾರ್ಯಕ ಪರಾಕ್ರಮವನ್ನು ಪ್ರದರ್ಶಿಸುತ್ತಾರೆ, ಸಾಮರಸ್ಯದ ಮನೆಗಳನ್ನು ನಿರ್ವಹಿಸುವಾಗ ಕಚೇರಿ ಜವಾಬ್ದಾರಿಗಳನ್ನು ಪರಿಣಿತರಾಗಿ ನಿರ್ವಹಿಸುತ್ತಾರೆ. ಕೆಲಸ ಮತ್ತು ಕುಟುಂಬ ಜೀವನದ ಈ ಗಮನಾರ್ಹ ಸಮತೋಲನವು ಅವರ ಹೊಂದಾಣಿಕೆ ಮತ್ತು ಅಮೂಲ್ಯ ಕೊಡುಗೆಗಳಿಗೆ ಸಾಕ್ಷಿಯಾಗಿದೆ.
ಕ್ರೆಡಾಯ್ ಕರ್ನಾಟಕದ ಅಧ್ಯಕ್ಷರಾದ ಶ್ರೀ ಪ್ರದೀಪ್ ರಾಯ್ಕರ್ ಅವರು CWW ಆರಂಭಿಸಿದ CSR ಚಟುವಟಿಕೆಗಳು ಮತ್ತು ಕಲಿಕೆ ಮತ್ತು ತರಬೇತಿ ಕಾರ್ಯಕ್ರಮಗಳ ಒಳನೋಟಗಳನ್ನು ಹಂಚಿಕೊಂಡರು, ಕೌಶಲ್ಯ ಅಭಿವೃದ್ಧಿ ಮತ್ತು ಸಮುದಾಯ ಕಲ್ಯಾಣಕ್ಕೆ ಅವರ ಬದ್ಧತೆಯನ್ನು ವಿವರಿಸಿದರು.

ಶ್ರೀಮತಿ ಸಾರಾ ಜಾಕೋಬ್, CWW ರಾಷ್ಟ್ರೀಯ ಕಾರ್ಯದರ್ಶಿ, ಸಿಎಸ್ಆರ್ ಚಟುವಟಿಕೆಗಳು, ಆರ್ಥಿಕತೆ ಮತ್ತು ಸುಸ್ಥಿರತೆಯ ಆನ್‌ಲೈನ್ ತರಗತಿಗಳು ಮತ್ತು ಕಾರ್ಮಿಕ ಅಭಿವೃದ್ಧಿಗೆ ಮಹಿಳೆಯರ ಅಮೂಲ್ಯ ಕೊಡುಗೆ ಕುರಿತು ಚರ್ಚಿಸಿದರು. ಸಿಡಬ್ಲ್ಯೂಡಬ್ಲ್ಯು ಗುಜರಾತ್‌ಗೆ ಆಯೋಜಿಸಿದ್ದ ಸಮೃದ್ಧ ಪ್ರವಾಸವನ್ನೂ ಅವರು ವಿವರಿಸಿದರು.
ಮುಖ್ಯ ಅತಿಥಿಗಳಾದ ಮಂಗಳೂರು ಜಿಲ್ಲಾಧಿಕಾರಿಗಳಾದ ಶ್ರೀ ಮುಲ್ಲೈಮುಹಿಲನ್ ಅವರು ಮನೆಯನ್ನು ಮನೆ ಮಾಡುವಲ್ಲಿ ಮಹಿಳೆಯರು ವಹಿಸುವ ಅಮೂಲ್ಯ ಪಾತ್ರವನ್ನು ಶ್ಲಾಘಿಸಿದರು. ಅವರು ಮಹಿಳೆಯರ ಸ್ವತಂತ್ರ ಬುದ್ಧಿವಂತಿಕೆಗೆ ಒತ್ತು ನೀಡಿದರು ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಭವಿಷ್ಯದ ಪ್ರಯತ್ನಗಳಿಗೆ ಅಚಲವಾದ ಬೆಂಬಲವನ್ನು ವಾಗ್ದಾನ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಮುಲ್ಲೈಮುಹಿಲನ್ M.P., I.A.S, I.A.S, ಜಿಲ್ಲಾಧಿಕಾರಿ ಅವರು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಚೆಕ್‌ಗಳನ್ನು ನೀಡಿದ್ದು, ಶಿಕ್ಷಣ ಮತ್ತು ಸಬಲೀಕರಣದ ಬದ್ಧತೆಯನ್ನು ಪುನರುಚ್ಚರಿಸಿದರು.
ರಿಯಲ್ ಎಸ್ಟೇಟ್ ಉದ್ಯಮಕ್ಕೆ ನೀಡಿದ ಮಹತ್ವದ ಕೊಡುಗೆಯನ್ನು ಸ್ಮರಿಸಿ ಎಲ್ಲ ಗಣ್ಯರಿಗೆ ಸ್ಮರಣಿಕೆಗಳನ್ನು ನೀಡಿ ಹೃದಯಸ್ಪರ್ಶಿ ಸನ್ನೆಯೊಂದಿಗೆ ಸಂಜೆ ಮುಕ್ತಾಯವಾಯಿತು. CWW ನ ಕಾರ್ಯದರ್ಶಿ ಶ್ರೀಮತಿ ರಜನಿ ಪತ್ರರಾವ್ ಅವರು ಧನ್ಯವಾದಗಳನ್ನು ಅರ್ಪಿಸಿದರು, ಈವೆಂಟ್ ಅನ್ನು ಅದ್ಭುತವಾದ ಯಶಸ್ಸಿಗಾಗಿ ಎಲ್ಲಾ ಭಾಗವಹಿಸಿದವರಿಗೆ ಮತ್ತು ಪಾಲುದಾರರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ಕ್ರೆಡೈ ಮಹಿಳಾ ವಿಭಾಗದ ಉದ್ಘಾಟನೆ ಮತ್ತು ಸ್ಥಾಪನೆಯು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಲಿಂಗ ಸಮಾನತೆ ಮತ್ತು ಸಬಲೀಕರಣವನ್ನು ಸಾಧಿಸುವ ನಿಟ್ಟಿನಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ. ಈವೆಂಟ್ ಮುಕ್ತಾಯಗೊಂಡಂತೆ, ರಿಯಲ್ ಎಸ್ಟೇಟ್ ಕ್ಷೇತ್ರವು ಹೆಚ್ಚು ಅಂತರ್ಗತ ಮತ್ತು ಕ್ರಿಯಾತ್ಮಕ ಭವಿಷ್ಯವನ್ನು ಎದುರು ನೋಡುತ್ತಿರುವ ಕಾರಣ, ರಿಯಲ್ ಎಸ್ಟೇಟ್ ಕ್ಷೇತ್ರವು ಹೆಚ್ಚು ಅಂತರ್ಗತ ಮತ್ತು ಕ್ರಿಯಾತ್ಮಕ ಭವಿಷ್ಯವನ್ನು ಎದುರು ನೋಡುತ್ತಿದೆ.