ಕರಾವಳಿಯಲ್ಲಿ ಭಾರಿ ಮುಂದಿನ 5 ದಿನಗಳ ಕಾಲ ಮಳೆಯಾಗುವ ಸಾಧ್ಯತೆ

ಬೆಂಗಳೂರು: ಮುಂದಿನ 5 ದಿನಗಳ ಕಾಲ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಅ.2ರ ವರೆಗೆ ಕರಾವಳಿಯಾದ್ಯಂತ ಮೋಡ ಕವಿದ ವಾತಾವರಣ ಇದ್ದು ಕೆಲವೊಮ್ಮೆ ಗುಡುಗು ಮಿಂಚು ಕಾಣಿಸಿಕೊಳ್ಳಬಹುದು ಎಂದು ಮುನ್ಸೂಚನೆ ನೀಡಿದೆ.ರಾಜ್ಯದಲ್ಲಿ ಸೆ.29ರಿಂದ ಅ.3ರ ವರೆಗೆ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಸೆ.29 ರಿಂದ ಅ.1ರ ಪರೆಗೆ ಕರಾವಳಿಯ ಮೂರು ಜಿಲ್ಲೆಗಳಿಗೆ ಎಲ್ಲೊ ಅಲರ್ಟ್‌ ಎಚ್ಚರಿಕೆ ನೀಡಲಾಗಿದೆ.

ಸೆ.30 ಹಾಗೂ ಅ.1 ರಂದು ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ರಾಯಚೂರು, ವಿಜಯಪುರ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಕೊಡಗು, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಸೂಚನೆ ನೀಡಲಾಗಿದೆ.

ಅಜ್ಜ ಅಜ್ಜಿ ಕುಟುಂಬದ ಬಲವಾದ ಅಡಿಪಾಯ ಇದ್ದಂತೆ – ಪ್ರೀತಿಯ ಪರಂಪರೆಯ ಸ್ಥಾಪಕರು ಸಂಪ್ರದಾಯಗಳ ಪಾಲಕರು

“ಅಜ್ಜಿಯರು ಕುಟುಂಬದ ಶ್ರೇಷ್ಠ ನಿಧಿ, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಪಾಲಿಸಬೇಕಾದ ಸ್ಮರಣೆಯಲ್ಲಿ ಕಾಲಹರಣ ಮಾಡುವ ಸಂಪ್ರದಾಯಗಳ ಪಾಲಕರು.” ಅಜ್ಜಿಯರು ಕುಟುಂಬದ ಬಲವಾದ ಅಡಿಪಾಯ. ಅವರ ವಿಶೇಷ ಪ್ರೀತಿ ಅವರನ್ನು ಪ್ರತ್ಯೇಕಿಸುತ್ತದೆ.
ನಾವು, ಸೇಂಟ್ ಆಗ್ನೆಸ್ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೆಪ್ಟೆಂಬರ್ 25, 2023 ರಂದು ಸೋಮವಾರದಂದು ‘ಹಿರಿಯರ ದಿನ’ವನ್ನು ಆಚರಿಸಿದ್ದೇವೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅಜ್ಜಿಯರು ಪ್ರೇಕ್ಷಕರಾಗಿ ಇರುವುದಕ್ಕೆ ನಾವೆಲ್ಲರೂ ಆಶೀರ್ವದಿಸಿದ್ದೇವೆ ಮತ್ತು ಸಂತೋಷಪಟ್ಟಿದ್ದೇವೆ.
ಪ್ರಾರ್ಥನಾ ಗೀತೆಯ ಮೂಲಕ ದೇವರ ಆಶೀರ್ವಾದವನ್ನು ಕೋರುವ ಮೂಲಕ ಕಾರ್ಯಕ್ರಮವು ಪ್ರಾರಂಭವಾಯಿತು, ನಂತರ ಅಜ್ಜಿಯರಿಗೆ ಪುಷ್ಪನಮನ ಸಲ್ಲಿಸಲಾಯಿತು. ಮುಖ್ಯ ಅತಿಥಿಗಳಾಗಿ ಸಂತ ಆಗ್ನೆಸ್‌ ಪಿಯು ಕಾಲೇಜಿನ ನಿವೃತ್ತ ಆಡಳಿತ ಸಿಬ್ಬಂದಿ ಶ್ರೀಮತಿ ಸೀತಾ ಕೆ. ಅವರು ಸಭೆಯನ್ನು ಉದ್ದೇಶಿಸಿ ಅಜ್ಜಿಯರಿಗೆ ಕೃತಜ್ಞತೆ ಮತ್ತು ಮೆಚ್ಚುಗೆಯ ಹೃತ್ಪೂರ್ವಕ ಮಾತುಗಳೊಂದಿಗೆ ಮಾತನಾಡಿದರು. ಅಜ್ಜ-ಅಜ್ಜಿಯರಿಂದ ಪಡೆಯುವ ಪ್ರೀತಿ ಮತ್ತು ಕಾಳಜಿಯನ್ನು ಎಂದಿಗೂ ಬದಲಾಯಿಸಲಾಗುವುದಿಲ್ಲ ಆದ್ದರಿಂದ ಯುವ ಪೀಳಿಗೆ ಯಾವಾಗಲೂ ಅದೇ ಪ್ರೀತಿ, ವಾತ್ಸಲ್ಯ ಮತ್ತು ಗೌರವವನ್ನು ತೋರಿಸಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಅಜ್ಜಿಯರೊಂದಿಗೆ ಕಳೆದ ಸ್ವಲ್ಪ ಸಮಯವು ಜಗತ್ತು ನಮಗೆ ನೀಡಬಹುದಾದ ಎಲ್ಲಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ. ಆದ್ದರಿಂದ ನಾವು ಅವರಿಗೆ ಒಳ್ಳೆಯವರಾಗಿರೋಣ ಮತ್ತು ಅವರಿಗೆ ಕೃತಜ್ಞರಾಗಿರೋಣ ಮತ್ತು ಅವರನ್ನು ಯಾವಾಗಲೂ ಸಂತೋಷಪಡಿಸೋಣ!
ವಿದ್ಯಾರ್ಥಿಗಳು ಕೆಲವು ಮನಮೋಹಕ ನೃತ್ಯ ಪ್ರದರ್ಶನ ಮತ್ತು ಆಟಗಳ ಮೂಲಕ ಅಜ್ಜಿಯರನ್ನು ರಂಜಿಸಿದರು. ಅಜ್ಜ-ಅಜ್ಜಿಯರ ನಗುವ ಮುಖ ನೋಡಲು ಯೋಗ್ಯವಾಗಿತ್ತು ಮತ್ತು ಅವರು ತುಂಬಾ ಉತ್ಸಾಹ ಮತ್ತು ಶಕ್ತಿಯಿಂದ ಭಾಗವಹಿಸಿದರು.
ಮೋಕ್ಷ ಮುತ್ತಮ್ಮ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಲಕ್ಷ್ಮಿ ಸ್ವಾಗತಿಸಿ, ಶ್ರೀಮತಿ ರಿಷಿತಾ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀ ನೊರಿನ್ ಡಿಸುಜಾ, ಸ್ಟಾಫ್ ಕೋ ಆರ್ಡಿನೇಟರ್‌ಗಳಾದ ಶ್ರೀಮತಿ ಅವಿತಾ ಮತ್ತು ಶ್ರೀಮತಿ ಹರಿಯೆಟ್, ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕುಂದಾಪುರದ ಓಕ್ ವುಡ್ ಇಂಡಿಯನ್ ಸ್ಕೂಲಿನ ಅಮೈರಾಗೆ ಕರಾಟೆಯಲ್ಲಿ ಪ್ರಥಮ ಸ್ಥಾನ


ಕುಂದಾಪುರ: ಮಣಿಪಾಲದಲ್ಲಿ ಇತ್ತೀಚೆಗೆ ಆಯೋಜಿಸಲಾದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಸ್ಪರ್ಧೆಯ ಬಾಲಕಿಯರ ವಿಭಾಗಲ್ಲಿ ನಡೆದ ಕುಮಿಟೆ ಮತ್ತು ಕಟಾ ಎರಡೂ ಸ್ಪರ್ಧೆಗಳಲ್ಲಿ ಕುಂದಾಪುರದ ಓಕ್ ವುಡ್ ಇಂಡಿಯನ್ ಸ್ಕೂಲ್ ನ
3ನೇ ತರಗತಿ ವಿದ್ಯಾರ್ಥಿನಿಯಾಗಿರುವ ಅಮೈರಾ ಶೋಲಾಪುರ್ ಪ್ರಥಮ ಸ್ಥಾನ ಗಳಿಸಿದ್ದಾಳೆ. ಈಕೆ, ಹೆಮ್ಮಾಡಿ ಸಂತೋಷ್ ನಗರದ ನಿವಾಸಿ ರಝಿಯಾ ಸುಲ್ತಾನ ಮತ್ತು ಯಾಸೀನ್ ಫೈರೋಜ್ ದಂಪತಿಗಳ ಪುತ್ರಿಯಾಗಿದ್ದಾಳೆ. ಕುಂದಾಪುರ ದ ಕರಾಟೆ ಶಿಕ್ಶಕ ರಾದ ಕಿಯೊಶಿ ಕಿರಣ್, ಶಿಹಾನ್ ಸಂದೀಪ್, ಸಿಹಾನ್ ಶೇಕ್ ಹಾಗೂ ನಟರಾಜ್ ಅವರಲ್ಲಿ ತರಬೇತು ಪಡೆದಿರುತ್ತಾಳೆ.

ಕುಂದಾಪುರದಲ್ಲಿ ಸಂಭ್ರಮದ ಪ್ರವಾದಿ ಮುಹಮ್ಮದ್ ಅವರ ಜನ್ಮದಿನಾಚಾರಣೆ

ಕುಂದಾಪುರ :ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹು ಸಲ್ಲಮ್ ಅವರ ಜನ್ಮದಿನಾಚಾರಣೆಯ ಅಂಗವಾಗಿ ಕುಂದಾಪುರ ಜಾಮಿಯಾ ಮಸೀದಿ ಹಾಗೂ ಮುಸ್ಲಿಂ ವೆಲ್ ಫೇರ್ ಆಶ್ರಯದಲ್ಲಿ ಸ್ವಲಾತ್ ಪಠಣ ದೊಂದಿಗೆ ನಗರದಲ್ಲಿ ಸಂಭ್ರಮದ ಜುಲುಸ್
( ಮೆರವಣಿಗೆ) ನಡೆಯಿತು. ಅಸಂಖ್ಯಾತ ಮುಸ್ಲಿಂ ಬಾಂಧವರ ಪಾಲ್ಗೊಂಡಿದ್ದ ಈ ಜುಲುಸ್ ಬೆಳಿಗ್ಗೆ ಕುಂದಾಪುರ ಜಾಮಿಯಾ ಮಸೀದಿಯಿಂದ ಆರಂಭಗೊಂಡು ಪ್ರಮುಖ ಬೀದಿಗಳಿಂದ ಶಾಸ್ತ್ರಿ ಸರ್ಕಲ್ ತನಕ ಸಾಗಿ ಕುಂದಾಪುರ ಸಯ್ಯದ್ ವಲಿಯುಲ್ಲಾ ದರ್ಗಾದ ಬಳಿ ಸಮಾಪನ ಗೊಂಡಿತು. ಮೆರವಣಿಗೆಯಲ್ಲಿ ಪ್ರವಾದಿಯವರ ಉದ್ಘೋಷಗಳನ್ನು ಪ್ರಚುರ ಪಡಿಸಲಾಯಿತು.
ಈ ಸಂದರ್ಭದಲ್ಲಿ ಖತೀಬರಾದ ಮೌಲಾನ ತಬ್ರೆಜ್ ಆಲಂ ,ಜಾಮಿಯಾ ಮಸೀದಿ ಅಧ್ಯಕ್ಷರಾದ ವಸೀಮ್ ಭಾಷಾ, ಕಾರ್ಯದರ್ಶಿ ತಬ್ರೇಜ್ ಜೂಕಾಕೊ, ಮುಸ್ಲಿಂ ವೆಲ್ ಫೇರ್ ಅಧ್ಯಕ್ಷರಾದ ನವಾಜ್ ಅಬ್ದುಲ್ ಮಜೀದ್ ಸಹಿತ ಸಮಾಜ ಧುರೀಣರು ಉಪಸ್ಥಿತರಿದ್ದರು.
ದಿನಾಚರಣೆಯ ಅಂಗವಾಗಿ ಸರ್ವಧರ್ಮಿಯರಿಗೂ ಸಿಹಿ ತಿಂಡಿ,ಲಘು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು
.

ಆಧುನಿಕ ಯುಗದ ಪವಾಡ ಪುರುಷ ಸಂತ ಪಾದ್ರೆ ಪಿಯೊರ ಹಬ್ಬ ಅವರ ಪುಣ್ಯಕ್ಷೇತ್ರದಲ್ಲಿ ವಿಜೃಂಭಣೆಯಿಂದ ಆಚರಣೆ

ಮಂಗಳೂರು : ಆಧುನಿಕ ಯುಗದ ಪವಾಡ ಪುರುಷರಾದ ಸಂತ ಪಾದ್ರೆ ಪಿಯೊರವರ ಹಬ್ಬವನ್ನು ಸಂತ ಅನ್ನಾ ಫ್ರಾಯರಿಯ ಸಂತ ಪಾದ್ರೆ ಪಿಯೊರವರ ಪುಣ್ಯಕ್ಷೇತ್ರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಹಬ್ಬದ ಬಲಿಪೂಜೆಯನ್ನು ಅ। ವಂ। ಡಾ| ಫ್ರಾನ್ಸಿಸ್‌ ಸೆರಾವೊ, ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು,30 ಧರ್ಮಗುರುಗಳು ಮತ್ತು ಅಪಾರಭಕ್ತಾದಿಗಳ ಸಮ್ಮುಖದಲ್ಲಿ ಅರ್ಪಿಸಿದರು. ಸಂತ ಪಾದ್ರೆ ಪಿಯೊರವರ ಸರಳತೆ. ವಿಧೇಯತೆ ಮತ್ತು ವಿನಯತೆಯನ್ನು ನಮ್ಮ ಜೀವನದಲ್ಲಿ ಒಗ್ಗೂಡಿಸಲು  ಕರೆ ಇತ್ತರು. ಸಂತರ ವಿಜ್ಞಾಪನೆಯಿಂದ ದೊರಕಿದ ಎಲ್ಲಾ ಉಪಕಾರಗಳನ್ನು ಸ್ಮರಿಸುತ್ತಾ ಪಾದ್ರೆ ಪಿಯೊರವರ ಸ್ವರೂಪ ಮತ್ತು ಪರಮಪ್ರಸಾದದ ಮೆರವಣಿಗೆಯನ್ನು ಸಂತ ಅನ್ನಾ ಫ್ರಾಯರಿಯ ಸುತ್ತಲೂ ನಡೆಸಲಾಯಿತು.

ಪಾದ್ರೆ ಪಿಯೊರವರ ಹಬ್ಬಕ್ಕೆ ತಯಾರಿಯಾಗಿ 9 ದಿನಗಳ ನವೇನ, ಬಲಿಪೂಜೆ ಮತ್ತು ಒಂದು ದಿನದ ರೋಗಸೌಖ್ಯ ಧ್ಯಾನಕೂಟವನ್ನು ಸಹೋದರ ಪ್ರಕಾಶ್‌, ಬ್ಯಾಂಡ್ರಾ, ವಂ| ಧರ್ಮಗುರು ರಿಚ್ಚಡ್‌ ಕ್ಪಾಡ್ರಸ್‌, ವಂ| ಧರ್ಮಗುರು ರೂಕ್ಕಿ ಡಿಕುನ್ಹಾ ಮತ್ತು ತಂಡದವರು ನಡೆಸಿಕೊಟ್ಟರು. ಹಲವಾರು ಭಕ್ತರು ಆಧ್ಯಾತ್ಮಿಕವಾಗಿ ಗುಣಮುಖರಾಗಿ ಸಂತಸಪಟ್ಟರು.

    ರೋಗಿಷ್ಠರಿಗಾಗಿ ಮತ್ತು ವಯೋವ್ಯದ್ಧರಿಗಾಗಿ ಸಪ್ಟೆಂಬರ್‌ 22ರಂದು ಆರಾಧನೆ ಮತ್ತು ಪಲಿಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ಹಲವರು ಆದ್ಯಾತ್ಮಿಕವಾಗಿ ಬಂಧನ ಮುಕ್ತಗೊಂಡು ದೇವರಿಗೆ ಕೃತಜ್ಞತೆ ಸಲ್ಲಿಸಿದರು. ಸಂತ ಹಾದ್ರೆ ಪಿಯೊರವರ ಮೂಲಕ ಬೇಡಿದ ಹಲವಾರು ಪ್ರಾರ್ಥನೆಗಳು ಫಲಿಸಿದ ಕಾರಣ ಬಹಳಷ್ಟು ಜನರು ಸಂತ ಪಿಯೊರವರ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ತಮ್ಮ ಪ್ರಾರ್ಥನೆಗಳನ್ನು ಅರ್ಪಿಸುತ್ತಾರೆ. ಕಾಪುಚಿನ್‌ ಸಭೆಯ ಈ ಗುಣಪಡಿಸುವ ಸಂತರು ಪವಾಡಗಳಿಗೆ ಪ್ರಸಿದ್ದರು. 10 ದಿನಗಳ ಹಬ್ಬದ ಸಂಭ್ರಮವು ಅದ್ದೂರಿಯಾಗಿ ನಡೆಯಲು ಲಭಿಸಿದ ದೇವರ ಸಹಾಯಕ್ಕಾಗಿ ಕೃತಜ್ಞತೆ ಸಲ್ಲಿಸಲಾಯಿತು.

ಶಿರ್ವ ಸಂತ ಮೇರಿ ಪ.ಪೂ.ಕಾಲೇಜ್ “ಆತ್ಮಹತ್ಯೆ ತಡ’ ಗಟ್ಟುವ ದಿನಾಚರಣೆ

ಶಿರ್ವ; ದಿನಾಂಕ 27.09.2023ರಂದು ಶಿರ್ವ ಸಂತ ಮೇರಿ ಪ.ಪೂ.ಕಾಲೇಜು, ಸಮುದಾಯ ಆರೋಗ್ಯ ಕೇಂದ್ರ ಹಾಗೂ
ಎನ್‌. ಎಸ್‌.ಎಸ್‌, ಘಟಕ ಇದರ ಜಂಟಿ ಆಶ್ರಯದಲ್ಲಿ “ವಿಶ್ವ ಆತ್ಮಹತ್ಯೆ ತಡೆ” ಗಟ್ಟುವ ದಿನಾಚರಣೆಯನ್ನು ಪಿಯಸಿ
ವಿದ್ಯಾರ್ಥಿಗಳಿಗೆ “ಸಾವುದ್‌ ಸಭಾ ಭವನ” – ಶಿರ್ವದಲ್ಲಿ ಆಯೋಜಿಸಲಾಗಿತ್ತು.

ಉಡುಪಿ ಜಿಲ್ಲಾ ಆಸ್ಪತ್ರೆಯಿಂದ ಡಾ. ರಿತಿಕಾ ಸಾಲಿಯನ್‌ರವರು ಕಾರ್ಯಕ್ರಮದ ಉದ್ಭಾಟನೆ ಮಾಡಿ ವಿದ್ಯಾರ್ಥಿಗಳಲ್ಲಿ ಮಾನಸಿಕ
ಖಿನ್ನತೆ, ಮಾನಸಿಕ ಒತ್ತಡ ಇದರಿಂದಾಗುವ ಸಮಸ್ಯೆಗಳು ಆತ್ಮಹತ್ಯೆಯನ್ನು ತಡೆಗಟ್ಟುವ ಬಗ್ಗೆ ಸರಳವಾಗಿ ನುಡಿದು
ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ- ಪರಿಹಾರೋಪಾಯವನ್ನು ನೀಡಿದರು.

ಹೆಣ್ಣು ಮಕ್ಕಳಿಗಾಗಿ ಉಡುಪಿ ಜಿಲ್ಲಾ ಆಸ್ಪತ್ರೆಯ ಕೌನ್ಸಿಲರ್‌ ಶ್ರೀಮತಿ ವಸಂತಿಯವರು * ಹದಿ ಹರೆಯದವರಿಗೆ
ಶಿಕ್ಷಣ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಹೆಣ್ಣು ಮಕ್ಕಳು ಅವರ ಸ್ವಚ್ಛತೆಯ ಬಗ್ಗೆ. ಶಿಸ್ತು ಬದ್ಧವಾದ ನೈಸರ್ಗಿಕ ಆಹಾರ,
ಉಡುಗೆ-ತೊಡುಗೆಯಲ್ಲಿ ನೈರ್ಮಲ್ಯತೆಯ ಅತೀ ಅಗತ್ಯ’ ಎಂದು ತಿಳಿಸಿದರು.

ವಿದ್ಯಾರ್ಥಿನಿಯರಿಂದ ಕಾರ್ಯಕ್ರಮದ ಮೌಲ್ಯಮಾಪನ ಮಾಡಿದರು. ಜಿಲ್ಲಾ ವೈದ್ಯಕೀಯ ತಂಡದ ಕುಮಾರಿ ಕ್ಯಾಥರಿನ್‌ ಜೆನಿಫರ್‌ರವರು ಹಾಜರಿದ್ದರು.

ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಮರಿಯ ಜೆಸಿಂತ ಘುರ್ಟಾಡೊರವರು ಸ್ವಾಗತಿಸಿದರು.
ಉಪನ್ಯಾಸಕಿ ಗ್ಲೆನಿಷ ರೇಶ್ಮ ಮೆಂಡೋನ್ಷ ಕಾರ್ಯಕ್ರಮ ನಿರ್ವಹಿಸಿ, ಜುಲಿಯನ ಡಿಸೋಜ ಧನ್ಯವಾದ
ನೀಡಿದರು.