CREDAI Women’s Wing (CWW) to be inaugurated in Mangaluru

CREDAI – Confederation of Real Estate Developers’ Association of India, is a well-established national organization of big and small property developers. The Mangalore Chapter consists of more than 75 active members who have developed hundreds of trusted and superior quality properties in and around Mangaluru.

The construction industry used to be considered a male-dominated business, but in keeping with the changing times, CREDAI seeks to imbibe an all-inclusive workplace, of which women play a key role. Women form an important and integral part of society and business culture. Women in the workplace are the need of the hour. They bring their own views, capabilities, and strengths, which enhance and help the business to grow and flourish. With an increasing number of women involved in the real estate business, CREDAI believes it is time to install its own women’s wing in Mangaluru.

CREDAI National, the apex body, envisioned a Women’s Wing at all levels, including the national level, with a determined plan to transform women into knowledgeable and successful entrepreneurs. CREDAI Women’s Wing (CWW) aims at making the real estate industry gender-neutral. CWW provides a strong networking forum and also creates an incubation program to encourage more active women participation in this industry.

The first Women’s Wing Chapter was inaugurated in 2016 in Pune, and today there are more than 75 Women’s Wing chapters across the country, ready to manage the business.

The CREDAI Mangalore City Chapter was formed in the year 2018 and in a very short period of time has gained popularity and commands huge respect in the city. The current President, Mr.Vinod Pinto, and his team have been instrumental in forming the Women’s Wing in Mangalore. The inauguration and installation of the CREDAI Women’s Wing will be held in a meaningful ceremony on Wednesday, September 27, 2023 at 7:00 pm at the Iccan Pearl Hotel in Mangaluru.

Mrs.Kritheen Amin, Director, Northern Sky Properties, will be installed as the CWW Coordinator, while Mrs.Rajni Lobo Patrao, representing Paradise Properties, will be installed as Secretary for the term 2023-25.

The Honourable D.C. will grace the occasion as Chief Guest, and Mr.PradeepRaikar, President, CREDAI Karnataka, and Mrs. Sarah Jacob, National Secretary for CWW, will be present as guests of honor.

15 ಕೋಟಿ ಮೌಲ್ಯದ ಸರ್ಕಾರಿ ಜಮೀನಿಗೆ ಅಕ್ರಮ ದಾಖಲೆ ಸೃಷ್ಟಿಸಿದ ಆರ್ ಐ ಶ್ರೀಪತಿಗೆ ಆಯಾಕಟ್ಟಿನ ಜಾಗಕ್ಕೆ ವರ್ಗಾವಣೆ-ಜನತಾದರ್ಶನದಲ್ಲಿ ದೂರು

ಕೋಲಾರ:- ಜಿಲ್ಲೆಯ ಮಾಲೂರು ತಾಲ್ಲೂಕಿನ ದೊಂಬ್ರಹಳ್ಳಿ ಗ್ರಾಮದ ಸ.ನಂ.173ರ 6 ಎಕರೆ 19 ಗುಂಟೆ ಸುಮಾರು 15 ಕೋಟಿ ಮೌಲ್ಯದ ಜಮೀನಿಗೆ ಅಕ್ರಮ ದಾಖಲೆ ಸೃಷ್ಟಿಸಿ ಅಮಾನತ್ತಾಗಿದ್ದ ಕಂದಾಯ ನಿರೀಕ್ಷಕ ಎಂ.ಕೆ.ಶ್ರೀಪತಿ ಹಾಗೂ ಪ್ರಥಮ ದರ್ಜೆ ಗುಮಾಸ್ತ ಪ್ರಸಾದ್‍ಕುಮಾರ್ ಅವರನ್ನು ಮಾಲೂರು ಶಾಸಕ ನಂಜೇಗೌಡರು ಕಂದಾಯ ಸಚಿವ ಕೃಷ್ಣ ಬೈರೇಗೌಡರ ಮೇಲೆ ಪ್ರಭಾವ ಬೀರಿ ಆಯಾಕಟ್ಟಿನ ಜಾಗಕ್ಕೆ ವರ್ಗಾವಣೆ ಮಾಡಿಸಿರುವುದನ್ನು ರದ್ದುಪಡಿಸಲು ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಸಚಿವ ಭೈರತಿ ಸುರೇಶ್‍ಅವರಿಗೆ ಮನವಿ ಮಾಡಿದರು.
ನಗರದ ರಂಗಮಂದಿರದಲ್ಲಿ ನಡೆದ ಜನತಾದರ್ಶನದಲ್ಲಿ ಈ ಕುರಿತು ಮನವಿ ಮಾಡಿದ ಅವರು, ಸರ್ಕಾರಕ್ಕೆ ಸೇರಿದ 15 ಕೋಟಿ ಮೌಲ್ಯದ ಜಮೀನನನ್ನು ಖಾಸಗಿ ವ್ಯಕ್ತಿಗೆ ಖಾತೆ ಮಾಡಿರುವ ಈ ಅಧಿಕಾರಿಗಳ ವಿರುದ್ದ ಹಿಂದೆ ದೂರು ನೀಡಿ ಅಮಾನತ್ತಾಗಲು ಕಾರಣರಾಗಿದ್ದ ಶಾಸಕ ನಂಜೇಗೌಡರೇ ಮತ್ತೆ ಕಂದಾಯ ಸಚಿವರಿಗೆ ಶಿಫಾರಸ್ಸು ಮಾಡಿ ಆಯಾಕಟ್ಟಿನ ಜಾಗಕ್ಕೆ ವರ್ಗಾವಣೆ ಮಾಡಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ಸದರಿ ಸರ್ಕಾರಿ ಜಮೀನನ್ನು ಕಾನೂನುಬಾಹಿರವಾಗಿ ಪಿಳ್ಳಪ್ಪ ಬಿನ್ ಮುನಿಸ್ವಾಮಪ್ಪ ಎಂಬುವವರಿಗೆ ಖಾತೆ ಮಾಡಿಕೊಟ್ಟಿದ್ದು, ಅದರ ವಿರುದ್ದ ಕಳೆದ ಜುಲೈ 2020ರಲ್ಲಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಮಾಲೂರು ಶಾಸಕ ಕೆ.ವೈ.ನಂಜೇಗೌಡರೇ ದೂರು ನೀಡಿದ್ದು, ಅದರಂತೆ ಮಾಲೂರು ತಾಹಸೀಲ್ದಾರ್ ಹಾಗೂ ಕೋಲಾರ ವಿಭಾಗಾಧಿಕಾರಿಗಳು ನೀಡಿದ ವರದಿ ಆಧರಿಸಿ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಸದರಿ ಶ್ರೀಪತಿ ಮತ್ತು ಪ್ರಸಾದ್ ಕುಮಾರ್ ವಿರುದ್ದ ಕಳೆದ ಆಗಸ್ಟ್ 2020 ರಲ್ಲಿ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲು ಸೂಚಿಸಿ ಇವರನ್ನು ಸೇವೆಯಿಂದ ಅಮಾನತ್ ಮಾಡಲಾಗಿತ್ತು.
ಆದರೆ ಸದರಿ ಪ್ರಕರಣದ ಇಲಾಖಾ ವಿಚಾರಣೆ ಬಾಕಿ ಇರುವಾಗಲೇ ಸದರಿ ಶ್ರೀಪತಿ ಮತ್ತು ಪ್ರಸಾದ್‍ಕುಮಾರ್ ಅವರನ್ನು ಅದೇ ಶಾಸಕ ಕೆ.ವೈ.ನಂಜೇಗೌಡರೇ ವಾಸ್ತವಾಂಶ ಮರೆಮಾಚಿ ಕಂದಾಯ ಸಚಿವ ಕೃಷ್ಣಬೈರೇಗೌಡರಿಗೆ ಶಿಫಾರಸ್ಸು ಪತ್ರ ನೀಡಿ ಆಯಾಕಟ್ಟಿನ ಜಾಗವಾದ ಲಕ್ಕೂರಿನ ಕಂದಾಯ ನಿರೀಕ್ಷಕರ ಹುದ್ದೆಗೆ ವರ್ಗಾವಣೆ ಮಾಡಿಸಿದ್ದಾರೆ ಮತ್ತು ಪ್ರಸಾದ್‍ಕುಮರ್‍ರನ್ನು ಮತ್ತೆ ತಹಸೀಲ್ದಾರ್ ಕಚೇರಿಗೆ ವರ್ಗಾವಣೆ ಮಾಡಿಸಿರುವುದು ಅನೇಕ ಅನುಮಾನಗಳಿಗೆ ಎಡೆಮಾಟಿಕೊಟ್ಟಿದೆ.
ಸರ್ಕಾರಿ ಜಮೀನನನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟು ಭ್ರಷ್ಟಾಚಾರ ಎಸಗಿರುವ ಶ್ರೀಪತಿ ಹಾಗೂ ಪ್ರಸಾದ್‍ಕುಮಾರ್ ಅವರ ವರ್ಗಾವಣೆ ರದ್ದುಗೊಳಿಸಿ, ಸದರಿ ವರ್ಗಾವಣೆಗೆ ಪ್ರಮುಖ ಪಾತ್ರ ವಹಿಸಿರುವ ಮಾಲೂರು ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಮುನೇಗೌಡ ಮತ್ತಿತರರ ವಿರುದ್ದ ಕ್ರಮ ಕೈಗೊಳ್ಳಬೇಕು ಮತ್ತು ದೊಂಬ್ರಹಳ್ಳಿ ಸ.ನ.173 ಸರ್ಕಾರಿ ಜಮೀನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಸಚಿವರು ಜಿಪಂ ಸಿಇಒ ಅವರಿಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಸೂಚಿಸಿದರು.

ಭೂಗಳ್ಳರನ್ನು ಪಕ್ಕ ಕೂರಿಸಿಕೊಂಡು ಸಚಿವರು ನಡೆಸಿದ್ದು ಕಾಂಗ್ರೆಸ್ ದರ್ಶನ ಶಾಸಕ ಎಸ್‍ಎನ್ ಭೂಒತ್ತುವರಿ ಮೊದಲು ತನಿಖೆ ನಡೆಸಲಿ-ಸಂಸದ ಮುನಿಸ್ವಾಮಿ ಟೀಕೆ

ಕೋಲಾರ:- ಭೂಗಳ್ಳರನ್ನು ವೇದಿಕೆಯಲ್ಲಿ ಕೂರಿಸಿಕೊಂಡು ಜಿಲ್ಲಾ ಉಸ್ತುವಾರಿ ಸಚಿವರು ನಡೆಸಿದ್ದು ಜನತಾದರ್ಶನವಲ್ಲ ಅದು ಕಾಂಗ್ರೆಸ್ ದರ್ಶನ, ಕೇವಲ ಒಂದೂವರೆ ಗಂಟೆಯಲ್ಲಿ ಮುಗಿಸಿದ ಈ ಕಾರ್ಯಕ್ರಮದಲ್ಲಿ ಜನರ ಒಂದೇ ಒಂದು ಸಮಸ್ಯೆಗೂ ಪರಿಹಾರ ಸಿಗಲಿಲ್ಲ ಎಂದು ಸಂಸದ ಎಸ್.ಮುನಿಸ್ವಾಮಿ ಟೀಕಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಸೋಮವಾರ ನಡೆದ ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಜನತಾದರ್ಶನ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮತ್ತು ತಮ್ಮ ನಡುವೆ ನಡೆದ ಮಾತಿನ ಚಕಮಕಿಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು.
ಎಲ್ಲೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೆಸರು ಪ್ರಸ್ತಾಪಿಸಲಿಲ್ಲ ಆದರೆ ಇದ್ದಕ್ಕಿದ್ದಂತೆ ಶಾಸಕರು ಅವಾಚ್ಯಪದಗಳೊಂದಿಗೆ ವಾಗ್ವಾದಕ್ಕೆ ನಿಂತಿದ್ದು ಕಂಡಾಗ `ಕುಂಬಳ ಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಂಡು ನೋಡಿಕೊಂಡರಂತೆ’ ಎಂಬಂತಾಗಿದೆ ಎಂದು ವ್ಯಂಗ್ಯವಾಡಿದರು.
ತಾವು ಶ್ರೀನಿವಾಸಪುರದಲ್ಲಿ ಅರಣ್ಯ ಭೂಮಿ ಒತ್ತುವರಿ ನೆಪದಲ್ಲಿ ಅನ್ನದಾತರ ಮಾವು,ತೆಂಗು ಮತ್ತಿತರ ಬೆಳೆಗಳನ್ನು ನಾಶಪಡಿಸಿದ ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ದ ಮನವಿ ಸಲ್ಲಿಸಲು ಬಂದಿದ್ದಾಗಿ ತಿಳಿಸಿದರು.
ಜನಪ್ರತಿನಿಧಿಗಳಿಗೊಂದು ನೀತಿ ಬಡ ರೈತರಿಗೊಂದು ನೀತಿಯೇ ಎಂದು ಪ್ರಶ್ನಿಸಿ, ನೂರಾರು ಎಕರೆ ಭೂಗಳ್ಳರನ್ನು ವೇದಿಕೆಯಲ್ಲಿ ಕೂರಿಸಿಕೊಂಡು ಯಾವ ಪುರುಷಾರ್ಥಕ್ಕಾಗಿ ಜನತಾ ದರ್ಶನ ಮಾಡುತ್ತೀರಿ ಎಂದು ಪ್ರಶ್ನಿಸಿದ್ದೇನೆ ಎಂದರು.
ನಾವು ಯಾರೂ ಭೂಕಬಳಿಕೆ ಮಾಡಿಲ್ಲ, ಅಧಿಕಾರಿ,ಜನರಿಗೆ ಬೆದರಿಕೆ ಹಾಕಿಲ್ಲ, 60 ವರ್ಷಗಳಿಂದ ಸಾಗುವಳಿ ಚೀಟಿ, ಪಹಣಿ, ಮ್ಯೂಟೇಷನ್ ಪಡೆದಿದ್ದ ಶ್ರೀನಿವಾಸಪುರ ರೈತರ ಒತ್ತುವರಿ ತೆರವು ಮಾಡಿ ಅನ್ನದಾತರ ಮೇಲೆ ದಬ್ಬಾಳಿಕೆ ಮಾಡಿರುವ ಸರ್ಕಾರ ಮತ್ತು ಅಧಿಕಾರಿಗಳಿಗೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಒತ್ತುವರಿ ಮಾಡಿಕೊಂಡಿರುವ ಗುಂಡುತೋಪು, ಸರ್ಕಾರಿ ಜಮೀನು, ಕೆರೆ ಕಬಳಿಕೆ ಕಾಣಿಸಲಿಲ್ಲವೇ ಎಂದು ಪ್ರಶ್ನಿಸಿದರು.
ಶಾಸಕ ನಾರಾಯಣಸ್ವಾಮಿ ಕಬಳಿಸಿದ್ದ 50 ಎಕರೆ ಜಮೀನು ಸರ್ವೇ ನಡೆಸಿ ಪೆನ್ಸಿಂಗ್ ಹಾಕಿಸಿದ್ದ ಡಿಕೆ ರವಿ ಅವರು ಇಂದು ಇಲ್ಲ, ಎಸ್.ಎನ್.ಸಿಟಿಯನ್ನು 2-3 ಕೆರೆಗಳನ್ನು ಕಬಳಿಸಿ ನಿರ್ಮಿಸಲಾಗಿದೆ, ಎಸ್.ಎನ್.ಸಿಟಿ ಎದುರಿನ ಗುಂಡುತೋಪು ಕಬಳಸಿದ್ದು ಮೊದಲು ಇದನ್ನು ತೆರವು ಮಾಡಲಿ ಎಂದು ಸವಾಲು ಹಾಕಿದರು.
ನೂರಾರು ಎಕರೆ ಜಮೀನು ಹೊಂದಿರುವ ಶಾಸಕರು ತಮ್ಮ ತಾಯಿಯ ಹೆಸರಲ್ಲಿ 4 ಎಕರೆ ಸರ್ಕಾರಿ ಕಲ್ಲು ಬಂಡೆ ತಾವೇ ಮಂಜೂರು ಮಾಡಿದ್ದಾರೆ ಎಂದರು.
ಯಾವುದೇ ಜನಪ್ರತಿನಿಧಿಗಳು ಮಾಡಿರುವ ಭೂಕಬಳಿಕೆ ಮೊದಲು ತೆರವುಗೊಳಿಸಿ, ನಂತರ ರೈತರ ಒತ್ತುವರಿ ತೆರವು ಮಾಡಿ ಎಂದು ಸಚಿವರಿಗೆ ಮನವಿ ಮಾಡಿದ್ದೆ, ಗಾಲ್ಫ್‍ಗಾಗಿ 50 ಎಕರೆ ಜಮೀನು ಒತ್ತುವರಿ ಮಾಡಿದ್ದನ್ನು ಡಿಕೆ.ರವಿ ಡಿಸಿಯಾಗಿದ್ದಾಗ ಪೆನ್ಸಿಂಗ್ ಹಾಕಿಸಿದ್ದಾರೆ, ಬೇಲಿಯೇ ಎದ್ದು ಹೊಲ ಮೇದಂತಾದರೆ ಜನರಿಗೆ ಎಲ್ಲಿ ನ್ಯಾಯ ಸಿಗುತ್ತದೆ ಎಂದು ಕಿಡಿಕಾರಿದರು.
ಬಿಜೆಪಿ ಸರ್ಕಾರ ಶೇ.40 ಪರ್ಸೆಂಟ್ ಕಮಿಷನ್ ಎಂದು ಆರೋಪಿಸಿ ತನಿಖೆ ನಡೆಸುತ್ತಿದ್ದಾರೆ ಆದರೆ ಈ ಸರ್ಕಾರ ಶೇ.50 ಪರ್ಸೆಂಟ್ ಸರ್ಕಾರ ಇದರ ತನಿಖೆಯೂ ಮಾಡಲಿ ಎಂದು ಆಗ್ರಹಿಸಿದ ಅವರು, ಶಾಸಕರ ಒತ್ತುವರಿ ತೆರವು ಹಾಗೂ ಶ್ರೀನಿವಾಸಪುರ ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶಾಂತರೀತಿಯಿಂದ ವಿಧಾನಸೌಧ ಚಲೋ ನಡೆಸುವುದಾಗಿ ಘೋಷಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಪ್ರವೀಣ್‍ಗೌಡ, ದಿಶಾಸಮಿತಿ ಸದಸ್ಯ ಅಪ್ಪಿನಾರಾಯಣಸ್ವಾಮಿ ಯುವಮೋರ್ಚಾದ ಬಾಲಾಜಿ, ಮುಖಂಡರಾದ ವೆಂಕಟೇಶ್ ಮತ್ತಿತರ ಮುಖಂಡರು

ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ಸಂಸದ ವಿ.ಮುನಿಸ್ವಾಮಿಯರಿಂದ ಅರಿವು


ಪಟ್ಟಣದ ಪುರಸಭೆ ಕಛೇರಿಯಲ್ಲಿ ಭಾನುವಾರ ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದ ಪಿಎಂ ಸ್ವಾನಿಧಿ ಯೋಜನೆಯಲ್ಲಿ ಅರ್ಹ ಫಲನಾಭುವಿಗಳಿಗೆ ಮಂಜೂರಾತಿ ಪತ್ರಗಳನ್ನು ವಿತರಣೆ ಮಾಡಿ ಮಾತನಾಡಿದರು.
ಬೀದಿ ಬದಿ ವ್ಯಾಪಾರಿಗಳಾದ ಹೂವಿನ ವ್ಯಾಪಾರಿಗಳು, ತರಕಾರಿ ವ್ಯಾಪಾರಿಗಳು, ಹಣ್ಣು ವ್ಯಾಪಾರಿಗಳು ಸಾಲಕ್ಕಾಗಿ ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು, ಯಾವ ರೀತಿಯಾಗಿ ಮರುಪಾವತಿ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡುತ್ತಾ, ಮೊದಲಿಗೆ 10 ಸಾವಿರ ಸಾಲವನ್ನು ಮರುಪಾವತಿ ಮಾಡಿದ ನಂತರ 20 ಸಾವಿರ ಪಡೆಯಬಹುದು, ಅದೇ ರೀತಿಯಾಗಿ ಹಂತ ಹಂತವಾಗಿ ಒಂದು ಲಕ್ಷದಿಂದ 10ಲಕ್ಷದ ವರೆಗೂ ಯಾವುದೇ ಅಡಮಾನ ವಿಲ್ಲದೆ ಪಿಎಂ ಸ್ವಾನಿಧಿ ಯೋಜನೆಯಲ್ಲಿ ಸಾಲ ನೀಡಲಾಗುತ್ತದೆ . ಜಿಲ್ಲೆಯಲ್ಲಿ ಪಿಎಂ ಸ್ವಾನಿಧಿ 5 ಸಾವಿರ ಫಲಾನುಭವಿಗಳು ಕೇಂದ್ರ ಸರ್ಕಾರ ಪಿಎಂ ಸ್ವಾನಿಧಿ ಯೋಜನೆಯನ್ನು ಇದುವೆರೆಗೂ ಸದ್ಭಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು .
ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರಮೋದಿಯವರು ಒಂದು ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ಕಾರಣ ಎಲ್ಲಾ ಕಷ್ಟವನ್ನು ಅರಿತು ಬಡವರ ಆರೋಗ್ಯದ ಹಿತದೃಷ್ಟಿಯಿಂದ ಆಯುಷ್‍ಮಾನ್ ಭಾರತ್ , ರೈತರಿಗೆ ಕಿಸಾನ್ ಸನ್ಮಾನ್ ಯೋಜನೆ , ಬೀದಿ ಬದಿ ವ್ಯಾಪಾರಿಗಳಿಗೆ ಆತ್ಮ ನಿರ್ಭರ್ ನಿಧಿ ಈ ರೀತಿಯಾಗಿ ಹಲವು ಯೋಜನೆಗಳನ್ನು ತಂದಿದ್ದು ಈ ಯೋಜನೆಗಳನ್ನು ಸದುಪಯೋಗ ಪಡೆಸಿಕೊಂಡಿರುವ ಫಲಾನುಭವಿ ಜೊತೆ ಉಳಿದ ಫಲಾನುಭವಿಗಳು ಸದುಪಯೋಗ ಪಡೆಸಿಕೊಳ್ಳುವಂತೆ ಮನವಿ ಮಾಡಿದರು.
ನಂತರ ಅರಣ್ಯ ಇಲಾಖೆಯಿಂದ ದೌರ್ಜನ್ಯಕ್ಕೆ ಒಳ ಪಟ್ಟ ನೂರಾರು ಸಂತ್ರಸ್ಥ ರೈತರೊಂದಿಗೆ ಚರ್ಚೆ ಮಾಡುತ್ತಾ, 70 ರಿಂದ 80 ವರ್ಷಗಳಿಂದ ಅನುಭವದಲ್ಲಿ ರೈತರ ಭೂಮಿಯನ್ನು ಅರಣ್ಯ ಇಲಾಖೆಯು ಹಾಗು ರೈತರು ಬೆಳೆದಿರುವ ಮರಗಳನ್ನು ಫಸಲನ್ನು ನಾಶಪಡಿಸಿರುವ ಹಿನ್ನೆಲೆಯಲ್ಲಿ ಅನ್ಯಾಯಕ್ಕೆ ಒಳಗಾಗಿರುವ ರೈತರು ಪರವಾಗಿ ನಾವಿದ್ದು, ಮುಂದಿನ ದಿನಗಳಲ್ಲಿ ವಿಧಾನಸೌದ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡು ಶ್ರೀನಿವಾಸಪುರದಿಂದ ಬೆಂಗಳೂರಿನ ವಿಧಾನಸೌದದವರೆಗೂ ಪಾದ ಯಾತ್ರೆಯನ್ನ ಹಮ್ಮಿಕೊಳ್ಳಲಾಗುವುದು. ಈ ಹೋರಾಟಕ್ಕೆ ಅನ್ಯಾಯಕ್ಕೆ ಒಳಗಾದ ರೈತರು ಪಕ್ಷಾತೀತವಾಗಿ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ಕೈಜೋಡಿಸಬೇಕು ಎಂದು ಮನವಿ ಮಾಡುತ್ತಾ , ಹೋರಾಟ ಅಂಗವಾಗಿ ಪೂರ್ವಭಾವಿ ಸಭೆಯ ದಿನಾಂಕವನ್ನು ಅತಿ ಶೀಘ್ರವಾಗಿ ನಿಗದಿಪಡಿಸಲಾಗುವುದು ಎಂದು ಮಾಹಿತಿ ನೀಡಿದರು.

ಮಂಗಳೂರು ಧರ್ಮಪ್ರಾಂತ್ಯದ ಅಂತರ್ ಸಂಸ್ಥೆಗಳ ವತಿಯಿಂದ ವ್ಯಸನ ವಿರುದ್ಧ ಕಾಲ್ನಾಡಿಗೆ 600 ಯುವಕ – ಯುವತಿಯರ ಕಾಲ್ನಾಡಿಗೆ

ಮಂಗಳೂರು ಧರ್ಮಪ್ರಾಂತ್ಯದ ಅಂತರ್ ಸಂಸ್ಥೆಗಳ ವತಿಯಿಂದ ವ್ಯಸನ ವಿರುದ್ಧ ಕಾಲ್ನಾಡಿಗೆ 600 ಯುವ ಯುವತಿಯರ ಕಾಲ್ನಾಡಿಗೆ
ವ್ಯಸನ ಮುಕ್ತ ಕಡೆಗೆ ನಮ್ಮ ಕಾಲ್ನಾಡಿಗೆ ಎಂಬ ಗುರಿಯೊಂದಿಗೆ ಸಿ.ಓ.ಡಿ.ಪಿ/ ಬಾಂಧವ್ಯ, ಪಾದುವ ಕಾಲೇಜ್ ಆಫ್ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್(ರಿ), ವೈಟ್ ಡೌಸ್ ಮಗಳೂರು ಜಂಟಿ ಸಂಯೋಜಕತ್ವದಲ್ಲಿ, ರೋಶನಿ ನಿಲಯ, ಸಂತ ಆಗ್ನೇಸ್ ಮಹಾ ವಿದ್ಯಾಲಯ, ಸಹಜೀವನ ಜಿಲ್ಲಾ ಒಕ್ಕೂಟದ ಸಹಕಾರದಿಂದ ಪಾದುವ ಸಿ.ಓ.ಡಿ.ಪಿಯಿಂದ ಬೆಂದೂರ್ ಚರ್ಚ್ ವರೆಗೆ ಕಾಲ್ನಾಡಿಗೆ ವ್ಯಸನ ವಿರೋದಿ ಜಾಗೃತಿ ಜಾಥಾ ನಡೆಯಿತು. ಈ ನಡಿಗೆಯು ವ್ಯಸನ ಮುಕ್ತ ನವ ಸಮಾಜ ನಿರ್ಮಾಣ ಸಪ್ತಂಬರ್ ಜಾಗೃತಿ ಮಾಸ ಎಂಬ ಮಂಗಳೂರು ಧರ್ಮಾ ಪ್ರಾಂತ್ಯದ ಬಿಷಪರ ಚಿಂತನೆಯೊಂದಿಗೆ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ಕಮಿಷನ್ ರವರ ’ವ್ಯಸನ ಮುಕ್ತ ಮಂಗಳೂರು ನಗರದೆಡೆಗೆ ಎಂಬ ಕಾರ್ಯಕ್ರ” ನಡೆಯಿತು.
ಬೆಂದೂರ್ ಚರ್ಚ್ ಧರ್ಮಗುರು ವಿನ್ಸೆಂಟ್ ಮೊಂತೇರೋ ರವರು ಕಾಲ್ನಡಿಗೆ ಸಂಪನ್ನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಯುವಕರಿಗೆ ಸ್ಫೂರ್ತಿ ತುಂಬಿದರು. ಕರ್ನಾಟಕ ಲೋಕಾಯುಕ್ತ ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿ ಸಿ.ಎ. ಸೈಮನ್ ರವರು ಮಾದಕ ವಸ್ತುಗಳು ಹಾಗೂ ಅಮಲು ಪದಾರ್ಥಗಳ ನಿಯಂತ್ರಣ ಕಾಯ್ದೆಯ ಬಗ್ಗೆ ವಿವರ ನೀಡಿದರು. ಕಣಚೂರು ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ವಿಕ್ಟರ್ ರೋಹನ್ ಮೊನಿಸ್ ರವರು ಡ್ರಗ್ಸ್ ಪರಿಣಾಮದ ಬಗ್ಗೆ ವಿವರಿಸಿದರು. ಕಾರ್ಯಕ್ರಮಕ್ಕೆ ಸಿ.ಓ.ಡಿ.ಪಿ ನಿರ್ದೇಶಕರಾದ ವಿನ್ಸೆಂಟ್ ಡಿಸೋಜಾ ರವರು ಸ್ವಾಗತಿಸಿದರು. ಪಾದುವ ಕಾಲೇಜು ಪ್ರಾಂಶುಪಾಲ ವಂದನೀಯ ಅರುಣ್ ಲೋಬೊ ರವರು ವಂದನಾರ್ಪಣೆ ಮಾಡಿದರು. ಮಾನ್ಯ ರೋಹನ್ ಸಾಂತುಮಾಯೇರ್ ಕಾಲೇಜ್ ಉಪನ್ಯಾಸಕರು ಕಾರ್ಯಕ್ರಮ ನಿರೂಪಿಸಿದರು
.

ಪೆರಂಪಳ್ಳಿಯ ಶರೀನಾ ಮತಾಯಸ್ ರವರಿಗೆ ‘ಕರ್ನಾಟಕ ನೆಕ್ಸ್ಟ್ ಟಾಪ್ ಮಾಡೆಲ್’ ಟೈಟಲ್ ಪ್ರಶಸ್ತಿ

ಉಡುಪಿ : ಪ್ರತಿಷ್ಠಿತ ಎಂಬಿ ಗ್ರೂಪ್ ಇವರು ಬೆಂಗಳೂರಿನ ಹೋಟೆಲ್ ಫೊಕ್ಸ್ ಗ್ಲೋವ್ ಇಂಟರ್ನ್ಯಾಷನಲ್ ವೈಟ್ ಫೀಲ್ಡ್ ಇಲ್ಲಿ ಸೆ.24 ರಂದು ಆಯೋಜಿಸಿದ್ದ ‘ಮಿಸ್ಟರ್ & ಮಿಸ್ ಟೀನ್ ಕರ್ನಾಟಕ’ ಇದರ ಸೀಸನ್ 4 ರ ಸೌಂದರ್ಯ ಸ್ಪರ್ಧೆಯಲ್ಲಿ ಉಡುಪಿಯ ಪೆರಂಪಳ್ಳಿಯ ಶರೀನಾ ಮತಾಯಸ್ ರವರಿಗೆ ‘ಕರ್ನಾಟಕ ನೆಕ್ಸ್ಟ್ ಟಾಪ್ ಮಾಡೆಲ್’ ಟೈಟಲ್ ಪ್ರಶಸ್ತಿ ದೊರಕಿದೆ.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 14 ಸ್ಪರ್ಧಿಗಳಲ್ಲಿ, ಪೆರಂಪಳ್ಳಿಯ ಶರೀನಾರವರಿಗೆ ಪ್ರತಿಷ್ಠಿತ ಟೈಟಲ್ ಪ್ರಶಸ್ತಿ ದೊರಕಿದ್ದು, ಫ್ಯಾಶನ್ ಮಾಡೆಲಿಂಗ್ ನ ಪ್ರಥಮ ಹೆಜ್ಜೆಯಲ್ಲಿಯೇ ಯಶಸ್ವಿಯ ಮೈಲುಗಲ್ಲು ಇಟ್ಟಿದ್ದಾರೆ.

ಪೆರಂಪಳ್ಳಿಯ ಸುನಿಲ್ ಮತ್ತು ಅನಿತಾ ಮತಾಯಸ್ ದಂಪತಿಗಳ ಮಗಳಾಗಿರುವ ಶರೀನಾ ಮತಾಯಸ್ ಪ್ರತಿಭಾವಂತೆಯಾಗಿದ್ದು, ಪ್ರಸ್ತುತ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಪೆರಂಪಳ್ಳಿಯ ಫಾತಿಮಾ ಮಾತೆ ದೇವಾಲಯದ ಐಸಿವೈಎಂ ಯುವ ಸಂಘಟನೆಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.