ಕಚ್ಚೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ಲಿ.) ಮಹಾಸಭೆ ಶೇ.20% ಡಿವಿಡೆಂಡ್ ಘೋಷಣೆ


ಮಂಗಳೂರು: ಕಚ್ಚೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ಲಿ.) ಇದರ 2022-23 ನೇ ಸಾಲಿನ ವಾರ್ಷಿಕ ಮಹಾಸಭೆಯು ದಿನಾಂಕ: 17-09-2023 ರಂದು ಮಂಗಳೂರಿನ ಸೆಬಾಸ್ಟಿಯನ್ ಕಮ್ಯೂನಿಟಿ ಹಾಲ್, ಬೆಂದೂರ್ ಇಲ್ಲಿ ಜರುಗಿತು. ಕು. ಶೃತಿ, ಕು.ಸ್ವಾತಿ ಹಾಗೂ ಶ್ರೀಮತಿ ಸೌಮ್ಯ ಪ್ರಾರ್ಥಿಸಿದರು. ಸೊಸೈಟಿಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್.ಕೆ ಸದಸ್ಯರನ್ನು ಸ್ವಾಗತಿಸಿದರು. 2022-23 ನೇ ಸಾಲಿನ ವಾರ್ಷಿಕ ವರದಿಯನ್ನು ಹಾಗೂ ಲೆಕ್ಕಪತ್ರ ಹಾಗೂ ಬಜೆಟನ್ನು ಪ್ರಧಾನ ವ್ಯವಸ್ಥಾಪಕರಾದ ಶ್ರೀ ಪದ್ಮನಾಭ.ಎಂ ಮಂಡಿಸಿದರು, ನೋಟಿಸನ್ನು ನಿರ್ದೇಶಕರಾದ ಶ್ರೀ ಅಶೋಕ್.ಜಿ, ಲಾಭ ವಿಂಗಡಣೆಯನ್ನು ಶ್ರೀ ಭಾಸ್ಕರ್.ಕೆ.ಅಡ್ವಕೇಟ್, ಹಿಂದಿನ ಮಹಾಸಭೆಯ ನಿರ್ಣಯವನ್ನು ಶ್ರೀ ದಿವಾಕರ ಶಂಭೂರು 2023-24 ರ ಕಾರ್ಯ ಚಟುವಟಿಕೆಯನ್ನು ಶ್ರೀ ಹರೀಶ್.ಪಿ.ಭಂಡಾರಿ ಸಭೆಗೆ ಮಂಡಿಸಿದ ಮೇರೆಗೆ ದಾಖಲಿಸಲ್ಪಟ್ಟವು. ಸೊಸೈಟಿಯ ಬೈಲಾಕ್ಕೆ ಸಂಬಂಧಪಟ್ಟಂತೆ ತಿದ್ದುಪಡಿಯ ವಿವರವನ್ನು ನಿರ್ದೇಶಕರಾರ ಶ್ರೀ ಕುಮಾರ್ ಭಂಡಾರಿ ಸಭೆಗೆ ಮಂಡಿಸಿದ ಮೇರೆಗೆ ಅಂಗೀಕರಿಸಲಾಯಿತು. ತಿದ್ದುಪಡಿಯ ಪ್ರಕಾರ ಹಾಲಿ ಕಾರ್ಯಕ್ಷೇತ್ರವನ್ನು ವಿಸ್ತರಿಸಿ ದ.ಕ ಹಾಗೂ ಉಡುಪಿ ಜಿಲ್ಲೆಯ ಜೊತೆಗೆ ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ನಗರ ವ್ಯಾಪ್ತಿಗೆ ವಿಸ್ತರಿಸಿ ಅನುಮೋದನೆಗೆ ಸರ್ಕಾರವನ್ನು ಕೋರಲು ತೀರ್ಮಾನಿಸಲಾಯಿತು. ಸೊಸೈಟಿಯು ಪ್ರತಿ ವರ್ಷ ಲಾಭಗಳಿಕೆ, ಸರ್ಕಾರದ ಆಡಿಟ್ ವರ್ಗಿಕರಣದಲ್ಲಿ “ಎ” ವರ್ಗ ಸತತ ಪಡೆದ ಸಾಧನೆ ಮಾಡಿರುವುದರ ಜೊತೆಗೆ ಕಳೆದ 3 ವರ್ಷಗಳಿಂದ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ “ಸಾಧನ ಪ್ರಶಸ್ತಿ” ಪಡೆದಿರುವುದಲ್ಲದೆ ಮಂಗಳೂರು, ಉಡುಪಿ, ಸುರತ್ಕಲ್, ಬಂಟ್ವಾಳ ಇಲ್ಲಿನ ಎಲ್ಲಾ ಶಾಖೆಗಳು ಲಾಭ ಗಳಿಸಿರುವುದರೊಂದಿಗೆ ಎಲ್ಲಾ ಶಾಖೆಗಳು ಕಂಪ್ಯೂಟರೀಕೃತ ಲೆಕ್ಕಪತ್ರ ಅಳವಡಿಸಲಾಗಿರುತ್ತದೆ. ಸೊಸೈಟಿಯ ಅಭಿವೃದ್ಧಿ ಹಾಗೆಯೇ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ “ಸಾಧನ ಪ್ರಶಸ್ತಿ” ಪಡೆದಿರುದನ್ನು ಹಾಗೂ ಸೊಸೈಟಿಯ ಉತ್ತಮ ಅಭಿವೃದ್ಧಿಯ ಬಗ್ಗೆ ಮಹಾಸಭೆಯಲ್ಲಿ ಸದಸ್ಯರು ಪ್ರಶಂಸಿದರು. ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿಯಲ್ಲಿ ಅಧಿಕ ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪೆÇ್ರೀತ್ಸಾಹ ಧನ ನೀಡಿ ಗೌರವಿಸಲಾಯಿತು. ಲಾಭವನ್ನು ವಿಂಗಡಿಸಿ ಶೇ 20% ಡಿವಿಡೆಂಡ್ ಘೋಷಿಸಲಾಯಿತು. ಸಭೆಯಲ್ಲಿ ನಿರ್ದೇಶಕರಾದ ಶ್ರೀ ರಘುವೀರ ಭಂಡಾರಿ, ಶ್ರೀ ಭಾಸ್ಕರ ಭಂಡಾರಿ ಸುರತ್ಕಲ್, ಶ್ರೀ ಸುಂದರ ಭಂಡಾರಿ ರಾಯಿ, ಶ್ರೀ ರಾಜಾ ಬಂಟ್ವಾಳ, ಶ್ರೀ ರವೀಂದ್ರನಾಥ್ ಉಳ್ಳಾಲ, ಶ್ರೀ ಬಿ.ಎಸ್.ಭಂಡಾರಿ ಶ್ರೀ ಶೇಖರ್.ಎಚ್. ಉಪಸ್ಥಿತರಿದ್ದರು, ಶ್ರೀ ಶಶಿಧರ್ ಕಾರ್ಕಳ ನಿರ್ದೇಶಕರು ಕಾರ್ಯಕ್ರಮ ನಿರೂಪಿಸಿದರು, ಉಪಾಧ್ಯಕ್ಷರಾದ ಶ್ರೀ ರಾಮ ಭಂಡಾರಿ.ಎಚ್ ವಂದಿಸಿದರು.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 16 ಪೊಲೀಸ್ ಸಹಾಯಕ ಉಪನಿರೀಕ್ಷಕರಿಗೆ ಪೊಲೀಸ್ ಉಪನಿರೀಕ್ಷಕರಾಗಿ ಮುಂಭಡ್ತಿ

ಮಂಗಳೂರು :16 ಎಎಸ್‌ಐಗಳಿಗೆ ಪಿಎಸ್‌ಐಗಳಾಗಿ ಭಡ್ತಿ: ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಆದೇಶ
ಮಂಗಳೂರು, ಸೆ.19: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 16 ಪೊಲೀಸ್ ಸಹಾಯಕ ಉಪನಿರೀಕ್ಷಕರಿಗೆ ಪೊಲೀಸ್ ಉಪನಿರೀಕ್ಷಕರಾಗಿ ಮುಂಭಡ್ತಿ ನೀಡಿ ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಂಗಳವಾರ ಆದೇಶ ಹೊರಡಿಸಿದ್ದಾರೆ.
ಪಿಎಸ್‌ಐ ಭಡ್ತಿಯಾಗಿರುವ ಕಂಕನಾಡಿ ನಗರ ಪೊಲೀಸ್ ಠಾಣೆಯ ನವೀನ್ ಮೂಡುಬಿದಿರೆಗೆ, ಕಂಕನಾಡಿ ನಗರ ಠಾಣೆಯ ಜನಾರ್ದನ ನಾಯ್ಕ ಸುರತ್ಕಲ್ ಪೊಲೀಸ್ ಠಾಣೆಗೆ , ಸಿಎಸ್ಪಿಯ ಆನಂದ ಬಿ. ಉತ್ತರ ಸಂಚಾರ ಠಾಣೆಗೆ, ಗ್ರಾಮಾಂತರ ಠಾಣೆಯ ವಿನೋದ್ ಕೊಣಾಜೆ ಠಾಣೆಗೆ, ಪಣಂಬೂರು ಠಾಣೆಯ ಈಶ್ವರ ಸ್ವಾಮಿ ಕದ್ರಿ ಸಂಚಾರ ಠಾಣೆಗೆ, ಕದ್ರಿ ಠಾಣೆಯ ಶಾಂತಪ್ಪ ಜಿ. ಕಂಕನಾಡಿ ನಗರ ಠಾಣೆಗೆ, ಸಂಚಾರ ಪಶ್ಚಿಮ ಠಾಣೆಯ ಕೃಷ್ಣಪ್ಪ ಮೂಡುಬಿದಿರೆ ಠಾಣೆಗೆ, ಉತ್ತರ ಠಾಣೆಯ ಶಿವಪ್ಪ ಗೌಡ ಅದೇ ಠಾಣೆಗೆ ನಿಯೋಜನೆಗೊಂಡಿದ್ದಾರೆ.
ಉರ್ವ ಠಾಣೆಯ ಉಲ್ಲಾಸ್ ಪಾಂಡುರಂಗ ಬರ್ಕೆ ಠಾಣೆಗೆ, ಉತ್ತರ ಠಾಣೆಯ ಓಂ ದಾಸ್ ಸೆನ್ ಠಾಣೆಗೆ, ಐಎಸ್ಡಿಯ ರವಳೇಂದ್ರ ಗ್ರಾಮಾಂತರ ಠಾಣೆಗೆ, ಸಂಚಾರ ಪಶ್ಚಿಮ ಠಾಣೆಯ ಶಶಿಧರ ಶೆಟ್ಟಿ ಸುರತ್ಕಲ್ ಠಾಣೆಗೆ, ಉಳ್ಳಾಲ ಠಾಣೆಯ ಪ್ರಾಣೇಶ್ ಕುಮಾರ್ ಬಿ. ಅದೇ ಠಾಣೆಗೆ, ಸೆನ್ ಠಾಣೆಯ ಮೋಹನ್ ಅದೇ ಠಾಣೆಗೆ, ಸಿಸಿಬಿಯ ಹರೀಶ್ ಪದವಿನಂಗಡಿ ಸಿಎಸ್ಬಿಗೆ, ದಕ್ಷಿಣ ಠಾಣೆಯ ಪುರಂದರ ಬಿ.ಪಿ. ಸಿಸಿಆರ್ಬಿಗೆ ಪಿಎಸ್‌ಐ ಹುದ್ದೆಗೆ ನೇಮಕ ಮಾಡಿ ವರ್ಗಾಯಿಸಲಾಗಿದೆ.
ಈ ಹಿಂದಿನ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಹಾಗೂ ಕುಲದೀಪ್ ಕುಮಾರ್ ಜೈನ್ ಅವರು ಹಲವು ವರ್ಷ ಗಳಿಂದ ಬಾಕಿ ಉಳಿದಿದ್ದ ಎಎಸ್‌ಐಗಳಿಗೆ ಭಡ್ತಿ ನೀಡಲು ಪ್ರಯತ್ನಿಸಿದ್ದರು. ಆದರೆ ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿ ರಲಿಲ್ಲ. ನೂತನ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರು ಅಧಿಕಾರ ಸ್ವೀಕರಿಸಿ 9 ದಿನಗಳಲ್ಲಿ ಮುಂಭಡ್ತಿ ನೀಡಿ ಆದೇಶ ಹೊರಡಿಸಿದ್ದಾರೆ.

ವ್ಯಸನ ಮುಕ್ತ ಸಮಾಜ – ನಶೆ ಮುಕ್ತ ಮಂಗಳೂರಿಗಾಗಿ “ವ್ಯಸನ ಜಾಗೃತಿ ನಡಿಗೆ”

ಮಂಗಳೂರು ಕಥೊಲಿಕ ಧರ್ಮಪ್ರಾಂತ್ಯದ ಬಿಷಪ್ ಅತೀ ವಂದನೀಯ ಪೀಟರ್ ಪೌಲ್ ಸಲ್ಡಾನ್ಹಾ ಇವರ ಕನಸಿನ ವ್ಯಸನ ಮುಕ್ತ ಸಮಾಜ “ANTI DRUG MONTH (September 1-30)” ” ಹಾಗೂ ಮಂಗಳೂರು ಕಮಿಷನರ್ ಇವರ “ನಶೆ ಮುಕ್ತ ಮಂಗಳೂರು” ಧ್ಯೇಯದೊಂದಿಗೆ ಪಾದುವಾ ನಂತೂರು ಮಹಾವಿದ್ಯಾಲಯದಿಂದ ಬೆಂದುರ್ ಚರ್ಚ್/ಸಂತ ಆಗ್ನೇಸ್ ಕಾಲೇಜ್‍ನವರೆಗೆ “ವ್ಯಸನ ಜಾಗೃತಿ ನಡಿಗೆ” ಕಾಲ್ನಾಡಿಗೆ ಸಂಘಟಿಸುವ ಮುಖ್ಯಸ್ಥರು ಮತ್ತು ಸಂಸ್ಥೆಗಳು
ಬೆಂದುರ್ ಚರ್ಚ್, ವಂದನೀಯ ವಿನ್ಸೆಂಟ್ ಮೊಂತೇರೊ, ಸಿಒಡಿಪಿ/ಬಾಂಧವ್ಯ, ವಂದನೀಯ ವಿನ್ಸೆಂಟ್ ಡಿ ಸೋಜ, ಪಾದುವಾ ಮಹಾವಿದ್ಯಾಲಯ ಯುವರೆಡ್ ಕ್ರೋಸ್, ವಂದನೀಯ ಅರುಣ್ ವಿಲ್ಸನ್ ಲೋಬೊ ವೈಟ್‍ಡಾವ್ಸ್, ಶ್ರೀಮತಿ ಕೊರಿನ್ ರಸ್ಕೀನಾ ಸಹಜೀವನ ಒಕ್ಕೂಟ, ಶ್ರೀ ಕಾಸ್ಮೀರ್ ಡಿ ಸೋಜ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ (ರಿ), ಶ್ರೀ ಓಲ್ವಿನ್ ಡಿ ಸೋಜ ಸಂತ ಆಗ್ನೇಸ್ ಕೊಲೆಜ್ ಮಂಗಳೂರು, ಸಿ| ವೆನಿಸ್ಸಾ ಇವರುಗಳ ನೇತೃತ್ವದಲ್ಲಿ ಮಂಗಳೂರು ನಗರದ ಪ್ರಜೆಗಳಿಗೆ ಯುವಕ ಯುವತಿಯರಿಗೆ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವ ಕನಸಿನೊಂದಿಗೆ, “ವ್ಯಸನ ಜಾಗೃತಿ ನಡಿಗೆ” ಇದೇ ಸೆಪ್ಟೆಂಬರ್ ತಿಂಗಳ 25 ತಾರೀಕು ಸೋಮವಾರ ಅಪರಾಹ್ನ 3.00 ಘಂಟೆಯಿಂದ 4.30 ಘಂಟೆ ಸಂತ ಸೆಬೆಸ್ಟಿಯನ್/ಸಂತ ಆಗ್ನೇಸ್ ಕೊಲೆಜ್ ಆವಾರದಲ್ಲಿ ಸಂಪನ್ನಗೊಳ್ಳುವುದು.
ಆರಕ್ಷಕ ಉನ್ನತಾಧಿಕಾರಿಗಳು, ವೈದ್ಯರಿಂದ ಬೆಂದುರ್ ಚರ್ಚ್ ಆವಾರದಲ್ಲಿ ಮಾದಕ ಜೌಷಧಿಗಳ ಮತ್ತು ಮನೋಪರಿಣಾಮಕ ವಸ್ತುಗಳ ಅಧಿನಿಯಮ, 1985 ಕಾಯ್ದೆಯ ವಿವರಣೆ ಹಾಗೂ ಮಾದಕ ವಸ್ತುಗಳನ್ನು ಉಪಯೋಗಿಸುವವರಲ್ಲಿ ಉಂಟಾಗುವ ವೈದ್ಯಕೀಯ ದುಷ್ಪಾರಿಣಾಮಗಳ ಬಗ್ಗೆ ಜಾಗೃತಿ ಮಾಹಿತಿ ನೀಡಲಾಗುವುದು.
ಈ ಕಾಲ್ನಡಿಗೆಯಲ್ಲಿ ಮೇಲೆ ತಿಳಿಸಿದ ಸಂಸ್ಥೆಗಳ ಮುಖ್ಯಸ್ಥರು, ಸುಮಾರು 400 ಸಿಬ್ಬಂದಿಯವರು/ವಿದ್ಯಾರ್ಥಿಗಳು ಪಾಲ್ಗೊಳ್ಳುವರು ಮತ್ತು ಯುವಕ ಯುವತಿಯಿಂದ, ಸಮಾಜ ಸೇವಕರಿಂದ ವ್ಯಸನ ಮುಕ್ತ ಉದ್ಘೋಷಗಳು, ಘೋಷಣೆಗಳಿಂದ ಜಾಗೃತಿಯನ್ನು ಮೂಡಿಸಲಾಗುವುದು.

ಎಂಐಟಿ ಕುಂದಾಪುರದ ಪ್ರಥಮ ವರ್ಷದ ಇಂಡಕ್ಷನ್ ಕಾರ್ಯಕ್ರಮ 2023-24

ಎಂಐಟಿ ಕುಂದಾಪುರದ ಪ್ರಥಮ ವರ್ಷದ ಇಂಡಕ್ಷನ್ ಕಾರ್ಯಕ್ರಮ 2023-24ರ ಅಂಗವಾಗಿ ಕರ್ನಾಟಕ ನ್ಯಾಯಾಂಗ ಮತ್ತು ಪೊಲೀಸ್ ಅಕಾಡೆಮಿಯ ಸೈಬರ್ ಕಾನೂನು ಮತ್ತು ಭದ್ರತಾ ತಜ್ಞ ಡಾ.ಅನಂತ್ ಪ್ರಭು ಜಿ ಅವರಿಂದ *360 ಡಿಗ್ರಿ ಇಂಜಿನಿಯರ್* ವಿಷಯದ ಕುರಿತು ಸಂವಾದ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅನಂತ ಪ್ರಭು ಅವರು ಸಂಭಾವ್ಯ ಇಂಜಿನಿಯರ್‌ಗಳಾಗಲು ವಿದ್ಯಾರ್ಥಿಗಳು ನೆನಪಿನಲ್ಲಿಟ್ಟುಕೊಳ್ಳಬೇಕಾದ 20 ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿದರು. ಮೌಲ್ಯವರ್ಧನೆ ಪಡೆಯಲು ಮತ್ತು ಎಂಜಿನಿಯರಿಂಗ್‌ನಲ್ಲಿ ಉತ್ತಮ ಒಟ್ಟು ಸಿಜಿಪಿಎ ಸಾಧಿಸಲು ಅವರು ವಿದ್ಯಾರ್ಥಿಗಳಿಗೆ ಸಲಹೆಗಳನ್ನು ನೀಡಿದರು. ಬಿಎಸ್‌ಎಚ್ ವಿಭಾಗದ ಪ್ರೊ.ಚೈತ್ರಾ ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯಕ್ರಮವನ್ನು ಎಂಐಟಿ ಕುಂದಾಪುರದ. ಬಿಎಸ್‌ಎಚ್ ವಿಭಾಗವು ಆಯೋಜಿಸಿತ್ತು.