ಕ್ಷಯದ ಲಕ್ಷಣ ಕಂಡುಬಂದಲ್ಲಿ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು : ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಾಥ್

ಶ್ರೀನಿವಾಸಪುರ: ಕ್ಷಯದ ಲಕ್ಷಣ ಕಂಡುಬಂದಲ್ಲಿ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಾಥ್ ಹೇಳಿದರು.
ತಾಲ್ಲೂಕಿನ ಮುತ್ತಕಪಲ್ಲಿ ಗ್ರಾಮದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಗುರುವಾರ ಏರ್ಪಡಿಸಿದ್ದ ಪ್ರಧಾನ ಮಂತ್ರಿ ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ಷಯ ರೋಗಿಗಳನ್ನು ಮಾನವೀಯ ದೃಷ್ಟಿಯಿಂದ ನೋಡಬೇಕು. ಗ್ರಾಮೀಣ ಪ್ರದೇಶದ ಕ್ಷಯ ರೋಗಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿ ಸಂಬಂಧಿಸಿದ ಆಸ್ಪತ್ರೆಗೆ ಕಳಿಸಿಕೊಡಬೇಕು ಎಂದು ಹೇಳಿದರು.
ಮುತ್ತಕಪಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮೇಘ ಶ್ಯಾಮ್ ಮಾತನಾಡಿ, ಸಾರ್ವಜನಿಕರು ಕ್ಷಯ ರೋಗದ ಬಗ್ಗೆ ಗಾಬರಿಪಡಬೇಕಾದ ಅಗತ್ಯವಿಲ್ಲ. ಅದೊಂದು ವಾಸಿಯಾಗಬಲ್ಲ ರೋಗವಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ದೊರೆಯುತ್ತದೆ. ರೋಗ ಕಾಣಿಸಿಕೊಂಡ ತಕ್ಷಣ ವಿಳಂಬ ಮಾಡದೆ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ಆರೋಗ್ಯ ಕಾರ್ಯಕರ್ತರು ಗ್ರಾಮೀಣ ಪ್ರದೇಶದ ನಾಗರಿಕರಿಗೆ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸಬೇಕು. ಈ ಕಾರ್ಯದಲ್ಲಿ ವಿದ್ಯಾರ್ಥಿಗಳು ಹಾಗೂ ವಿದ್ಯಾವಂತ ಸಮುದಾಯ ಭಾಗಿಯಾಗಬೇಕು. ಕ್ಷಯ ಮುಕ್ತ ಗ್ರಾಮ ಪಂಚಾಯಿತಿಯನ್ನಾಗಿಸಲು ಸಾಂಘಿಕ ಪ್ರಯತ್ನ ನಡೆಸಬೇಕು ಎಂದು ಹೇಳಿದರು.
ಮುತ್ತಕಪಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಗಿರೀಶ್ ಮಾತನಾಡಿ, ಕಾಯಿಲೆ ಬಗ್ಗೆ ನಿರ್ಲಕ್ಷ್ಯ ವಹಿಸುವುದರಿಂದ ಅದು ಉಲ್ಬಣಗೊಳ್ಳುತ್ತದೆ. ಕಾಯಿಲೆ ಬಂದ ಮೇಲೆ ವಾಸಿಮಾಡಿಕೊಳ್ಳಲು ಹೆಣಗಾಡುವ ಬದಲು, ಕಾಯಿಲೆ ಬರದಂತೆ ಎಚ್ಚರ ವಹಿಸಬೇಕು. ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾದಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆದು ವಾಸಿಮಾಡಿಕೊಳ್ಳಬೇಕು ಎಂದು ಹೇಳಿದರು.
ಹಿರಿಯ ಆರೋಗ್ಯ ನಿರೀಕ್ಷಕ ಧರ್ಮರಾಜ, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

ಯೋಗ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ವಿದ್ಯಾರ್ಥಿ ಆಕಾಶ್ ಆಯ್ಕೆ

ಶ್ರೀನಿವಾಸಪುರ : ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಟ್ಟದ ಕ್ರೀಡಾಕೂಟಗಳಲ್ಲಿ ಹೋಬಳಿ ಮಟ್ಟ ಹಾಗೂ ತಾಲ್ಲೂಕು ಮಟ್ಟದ ಯೋಗ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಯಗಳಿಸಿ ಜಿಲ್ಲಾಮಟ್ಟದ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಗ್ರಾಮದ ಜೆ ತಿರುಮಲಪ್ಪ ಎಜುಕೇಶನಲ್ ಟ್ರಸ್ಟ್ ನ ಶ್ರೀ ಸಪ್ತಗಿರಿ ವಿದ್ಯಾಲಯದ ಆಕಾಶ್ ಆರ್ ಎಂಬ ವಿದ್ಯಾರ್ಥಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು  ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಬಚ್ಚಿರೆಡ್ಡಿಗಾರಪಲ್ಲಿ ಗ್ರಾಮದ ಆಕಾಶ್ ಆರ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಶಾಲೆಯ ಕೀರ್ತಿ ಹಾಗೂ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾನೆ ಜಿಲ್ಲಾಮಟ್ಟದಲ್ಲಿ ಜಯಗಳಿಸಿ ಶಾಲೆಗೆ ಆಗಮಿಸಿದ ಕ್ರೀಡಾಪಟು  ಆಕಾಶ್ ಗೆ ಶಾಲಾ ಆಡಳಿತ ಮಂಡಳಿ ಹಾಗೂ  ಶಿಕ್ಷಕ ವೃಂದದಿಂದ ಅಭಿನಂದಿಸಲಾಯಿತು ಇದೇ ಸಂದರ್ಭದಲ್ಲಿ ಶಾಲಾ ಕಾರ್ಯದರ್ಶಿ ವೆಂಕಟೇಶ್ ಮಾತನಾಡಿ ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಯೋಗ ಸ್ಪರ್ಧೆಯಲ್ಲಿ ಜಯಗಳಿಸಿ ಉತ್ತಮ ಸಾಧನೆಮಾಡಿ ನಮ್ಮ ಶಾಲೆ,ತಾಲ್ಲೂಕಿನ ಹಾಗೂ ಪೋಷಕರ ಕೀರ್ತಿಯನ್ನು ಹೆಚ್ಚಿಸಿದ್ದಾನೆ ಜಿಲ್ಲಾ ಮಟ್ಟದಲ್ಲಿ ಆರು ತಾಲ್ಲೂಕುಗಳಿಂದ ಹಲವು ಕ್ರೀಡಾಪಟುಗಳು ಭಾಗವಹಿಸಿರುತ್ತಾರೆ ಜಯಗಳಿಸುವುದು ಸುಲಭ ಪ್ರಶ್ನೆಯಲ್ಲ ಕ್ರೀಡಾಪಟುವಿಗೆ ತರಬೇತಿ ನೀಡಿರುವ ಗಣಿತ ಶಿಕ್ಷಕ ಗುರುಪ್ರಸಾದ್ ರವರಿಗೂ ಅಭಿನಂದನೆಗಳನ್ನು ತಿಳಿಸಿದರು ಇನ್ನೂ ಈ ಸಂದರ್ಭದಲ್ಲಿ ಶಾಲಾ ಅಧ್ಯಕ್ಷರು ಭಾಗ್ಯಲಕ್ಷ್ಮಿ,ಶಾಲಾ ಕಾರ್ಯದರ್ಶಿ ಟಿ ವೆಂಕಟೇಶ್, ಮುಖ್ಯಶಿಕ್ಷಕರ ಲಕ್ಷ್ಮೀರಮಣ ಹಾಗೂ ಶಾಲಾ ಶಿಕ್ಷಕ ವೃಂದದವರು ಭಾಗವಹಿಸಿದ್ದರ.

ಶ್ರೀನಿವಾಸಪುರ : ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ

ಶ್ರೀನಿವಾಸಪುರ : ಪುರಸಭಾ ಕಚೇರಿಯ  ಸಭಾಂಗಣದಲ್ಲಿಂದು ಪರಿಸರಸ್ನೇಹಿ ಗಣೇಶ ಮೂರ್ತಿ ತಯಾರಿಕೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಪುರಸಭಾ ಮುಖ್ಯಾಧಿಕಾರಿ ವೈ.ಎನ್. ಸತ್ಯನಾರಾಯಣ,ಚಾಲನೆ ನೀಡಿದರು

ಕಚೇರಿ ವ್ಯವಸ್ಥಾಪಕರಾದ ಶ್ರೀ ನವೀನ್ ಚಂದ್ರ,ಹಿರಿಯ ಆರೋಗ್ಯ ನಿರೀಕ್ಷಕರಾದ ಶ್ರೀ ಕೆ ಜಿ. ರಮೇಶ್,ಕಂದಾಯ ನಿರೀಕ್ಷಕ ಎನ್.ಶಂಕರ್ ಸರ್ಕಾರಿ ಬಾಲಕಿಯರ  ಕಾಲೇಜಿನ ಶಿಕ್ಷಕಿ ಶ್ರೀಮತಿ ಮಂಜುಳಾ,ಸ್ವಚ್ಛ ಭಾರತ್ ರಾಯಬಾರಿ ಶ್ರೀಮತಿ ಮಾಯಾ ಬಾಲಚಂದ್ರ,,ನಂದಿನಿ ಅರ್ಜುನ್ ಸೇರಿದಂತೆ ಸರ್ಕಾರಿ ಬಾಲಕಿಯರ ಕಾಲೇಜಿನ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಫಾದರ್ ಮ್ಯಾಥ್ಯು ವಾಸ್ ಮೆಮೊರಿಯಲ್‍ ಇಂಟರ್ ಪ್ಯಾರಿಶ್‍ ಟೂರ್ನಮೆಂಟ್


ಸಮಾಜ ಮತ್ತು ಕಥೊಲಿಕ್ ಸಭೆಗಾಗಿ ನಿಸ್ವಾರ್ಥಸೇವೆ ನೀಡಿದ ಕಮ್ಯೂನಿಟಿ ಎಂಪವರ್‍ಮೆಂಟ್ ಟ್ರಸ್ಟಿನ ಸ್ಥಾಪಕ ಟ್ರಸ್ಟಿ, ಫಾದರ್ ಮ್ಯಾಥ್ಯು ವಾಸ್‍ಇವರ ಸ್ಮರಣಾರ್ಥವಾಗಿ ಕಮ್ಯುನಿಟಿಎಂಪವರ್‍ಮೆಂಟ್‍ಟ್ರಸ್ಟ್ (ರಿ) ಮಂಗಳೂರು, ಕ್ರಿಶ್ಚಿಯನ್ ಸ್ಪೋಟ್ರ್ಸ್ ಅಸೋಶಿಯೇಶನ್ ಮಂಗಳೂರು, ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಮತ್ತುಕಥೊಲಿಕ್ ಸಭಾ,ಉಡುಪಿ ಪ್ರದೇಶ (ರಿ) ಇವರ ಸಹಯೋಗದಲ್ಲಿ ಇಂಟರ್ ಪ್ಯಾರಿಶ್ ಫುಟ್‍ಬಾಲ್ (ಪುರುಷರಿಗೆ) ಮತ್ತು ತ್ರೋಬಾಲ್ (ಮಹಿಳೆಯರಿಗೆ)ಟೂರ್ನಮೆಂಟ್‍ಅಕ್ಟೋಬರ್ 22, 2023ರ ಭಾನುವಾರದಂದು ಸಂತ ಅಲೋಶಿಯಸ್ ಪಿಯುಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪದಕಗಳನ್ನು ಗೆದ್ದ ಕಥೊಲಿಕ್ ಸಮುದಾಯದ ಕ್ರೀಡಾಳುಗಳನ್ನು ಸನ್ಮಾನಿಸಲು ಯೋಜಿಸಲಾಗಿದೆ. 01.10.2022ರಿಂದ30.09.2023ರವರೆಗೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪದಕಗಳನ್ನು ಗೆದ್ದ ಕ್ರೀಡಾಳುಗಳ ಹೆಸರನ್ನು ಅಕ್ಟೋಬರ್ 15, 2023 ರೊಳಗೆ ಕಮ್ಯೂನಿಟಿ ಎಂಪವರ್‍ಮೆಂಟ್‍ ಟ್ರಸ್ಟ್, ಮಿಲಾಗ್ರಿಸ್, ಮಂಗಳೂರು ಇಲ್ಲಿಗೆ ತಲುಪಿಸಬಹುದು ಅಥವಾ ದೂರವಾಣಿ/ವಾಟ್ಸ್‍ಆ್ಯಪ್ ಸಂಖ್ಯೆ : 9448379689, 9844502279 ಮೂಲಕವೂ ತಿಳಿಸಬಹುದಾಗಿದೆ.
ಟೂರ್ನಮೆಂಟಿನ ವಿವರ ಮತ್ತು ನಿಬಂಧನೆಗಳನ್ನು ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ ಚರ್ಚ್‍ಗಳಿಗೆ ಕಳುಹಿಸಲಾಗಿದೆ. ಟೂರ್ನಮೆಂಟನಲ್ಲಿ ಭಾಗವಹಿಸುವ ಪಂಗಡಗಳು 15.10.2023ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕೆಂದು ಕೋರಲಾಗಿದೆ.
ಪ್ರತಿವಿಜೇತ ಪಂಗಡಗಳಿಗೆ ರೂ.25000 (ಪ್ರಥಮ), ರೂ.15000 (ದ್ವಿತೀಯ), ರೂ.7500 (ತೃತೀಯ) ಬಹುಮಾನಗಳಿದ್ದು ಪ್ರಶಸ್ತಿ ಫಲಕವನ್ನು ನೀಡಲಾಗುವುದು. ಎಂದು ತಿಳಿಸಲಾಯಿತು.


ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರು:
ಅನಿಲ್ ಲೋಬೊ – ಸಂಚಾಲಕರು, ಫಾದರ್ ಮ್ಯಾಥ್ಯೂ ವಾಸ್ ಮೆಮೋರಿಯಲ್‍ಇಂಟರ್ ಪ್ಯಾರಿಶ್‍ಟೂರ್ನಮೆಂಟ್
ಸೆಲೆಸ್ಟಿನ್ ಡಿಸೋಜ- ಮ್ಯಾನೆಜಿಂಗ್ ಟ್ರಸ್ಟಿ, ಕಮ್ಯೂನಿಟಿಎಂಪವರ್‍ಮೆಂಟ್‍ಟ್ರಸ್ಟ್, ಮಂಗಳೂರು
ಆಲ್ವಿನ್‍ಡಿಸೋಜ- ಅಧ್ಯಕ್ಷರು, ಕ್ಯಾಥೊಲಿಕ್ ಸಭಾ, ಮಂಗಳೂರು ಪ್ರದೇಶ (ರಿ)
ಸಂತೋμïಕರ್ನೆಲಿಯೊ-ಅಧ್ಯಕ್ಷರು, ಕ್ಯಾಥೊಲಿಕ್ ಸಭಾ, ಉಡುಪಿ ಪ್ರದೇಶ (ರಿ)
ಮೆಲ್ವಿನ್ ಪೆರಿಸ್-ಕೋಶಾಧಿಕಾರಿ, ಕ್ರಿಶ್ಚಿಯನ್ ಸ್ಪೋಟ್ರ್ಸ್ ಅಸೋಸಿಯೇಶನ್, ಮಂಗಳೂರು

ಸಮಾಜ ಸೇವೆಗೆ ಮತ್ತೊಂದು ಹೆಸರು ಆಸ್ಕರ್ ಫೆರ್ನಾOಡಿಸ್ : ಎಂ.ಎ. ಗಪೂರ್

ಉಡುಪಿ : ಕೇಂದ್ರ ರಾಜ್ಯದಲ್ಲಿ ನಿಸ್ವಾರ್ಥ ರಾಜಕಾರಣ ಮಾಡಿರುವ ಕೇಂದ್ರದ ಮಾಜಿ ಸಚಿವ ದಿವಂಗತ ಆಸ್ಕರ್ ಫೆರ್ನಾOಡಿಸ್ ಉಡುಪಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾರಣಕರ್ತರು. ಯಾವುದೇ ಪ್ರಚಾರ ಬಯಸದ ಆಸ್ಕರ್ ಫೆರ್ನಾOಡಿಸ್ ನಿಜವಾಗಿಯೂ ಸಮಾಜಸೇವೆಗೆ ಮತ್ತೊಂದು ಹೆಸರು ಎಂದು ಕೆಪಿಸಿಸಿ ಕಾರ್ಯದರ್ಶಿ ಎಂಎ ಗಪೂರ್ ತಿಳಿಸಿದರು.

ಅವರು ದಿವಂಗತ ಆಸ್ಕರ್ ಫೆರ್ನಾOಡಿಸ್ ಅಭಿಮಾನಿ ಬಳಗ ಮತ್ತು ಮಾನವ ಬಂಧುತ್ವ ವೇದಿಕೆ ಉಡುಪಿ ಜಿಲ್ಲಾ ಸಂಚಲನ ಸಮಿತಿ ನೇತೃತ್ವದಲ್ಲಿ ದಿವಂಗತ ಆಸ್ಕರ್ ಫೆರ್ನಾOಡಿಸ್ ರವರ ದ್ವಿತೀಯ ಪುಣ್ಯತಿಥಿಯ ಸ್ಮರಣಾರ್ಥ ಉದ್ಯಾವರ ಸಂಪಿಗೆ ನಗರದ ‘ಸ್ನೇಹಲಯ’ದಲ್ಲಿ ದಿನಸಿ ವಸ್ತುಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿ ಮಾತನಾಡಿದರು.

ಉಡುಪಿ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷರಾದ ಕೃಷ್ಣಮೂರ್ತಿ ಆಚಾರ್ಯ, ಅಸ್ಕರ್ ಫೆರ್ನಾOಡಿಸ್ ರವರು ಕೇಂದ್ರ ಸಚಿವರಾಗಿದ್ದಾಗ ಮಧ್ಯರಾತ್ರಿಯವರೆಗೂ ತನ್ನ ಕಚೇರಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡುತ್ತಿದ್ದರು. ಅವರ ಕೆಲಸ ಕಾರ್ಯಗಳೇ ನನ್ನ ಸಾಮಾಜಿಕ ಕೆಲಸಗಳಿಗೆ ಪ್ರೇರಣೆ ಎಂದರು.

ಈ ಸಂದರ್ಭದಲ್ಲಿ ದಿನಸಿ ವಸ್ತುಗಳ ಪ್ರಾಯೋಜಕರೂ, ಮಾನವ ಬಂಧುತ್ವ ವೇದಿಕೆ ಇದರ ರಾಜ್ಯ ಸಮಿತಿ ಸದಸ್ಯರಾಗಿರುವ ರೊನಾಲ್ಡ್ ಮನೋಹರ್ ಕರ್ಕಡ, ಕಡೆಕಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ನವೀನ್ ಶೆಟ್ಟಿ, ಮಂಜೀತ್ ನಾಗರಾಜ್, ಮಹಮ್ಮದ್ ಶೀಶ್, ಜೂಲಿಯನ್ ದಾಂತಿ, ಚಾಲ್ಸ್ ಅಂಬ್ಲರ್, ರಿಯಾಜ್ ಪಳ್ಳಿ, ಸುಹೇಲ್ ಅಬ್ಬಾಸ್, ಪ್ರೇಮ್ ಮಿನೆಜಸ್, ಸಿಸ್ಟರ್ ಲೀನಾ ಮತ್ತಿತರರು ಉಪಸ್ಥಿತರಿದ್ದರು. ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.

ಪಡುಕೋಣೆ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ

ಪಡುಕೋಣೆ: 2023-24 ದಿನಾಂಕ 13-9-2023 ರಂದು ಸಂತ ಅಂತೋನಿ ಹಿರಿಯ ಪ್ರಾಥಮಿಕ ಶಾಲೆ ಪಡುಕೋಣೆಯಲ್ಲಿ ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೈಂದೂರು ವಲಯದ ಆಶ್ರಯದಲ್ಲಿ ಪಡುಕೋಣೆ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಸಂಚಾಲಕರಾದ ವಂದನೀಯ ಫ್ರಾನ್ಸಿಸ್‌ ಕರ್ನೇಲಿಯೊ ಅಧ್ಯಕ್ಷತೆ ವಹಿಸಿದ್ದರು. ನಾಡಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಪಾರ್ವತಿ ಉದ್ಭ್ಬಾಟನೆ ನೆರವೇರಿಸಿದರು. ವಾರ್ಡ್‌ ಮೆಂಬರ್‌ ಸುಧಾಕರ ಶೆಟ್ಟಿ ಮತ್ತು ಜ್ಯೋತಿ, ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ್‌ ಪೂಜಾರಿ ಮತ್ತು ಗಿರಿಜಾ, ಅಚ್ಯುತ್‌ ಬಿಲ್ಲವ, ಆಡಳಿತ ಮಂಡಳಿಯವರಾದ ಪ್ರಭು ಕೆನೆಡಿ ಪಿರೇರಾ, ಅಲೆಕ್ಸ್‌ ಆಂಟನಿ ಡಿಸೋಜಾ , ವಿನ್ಸೆಂಟ್‌ ಡಿಸೋಜಾ , ಫಿಲಿಪ್‌ ಡಿಸಿಲ್ವ, ಜೋಸೆಫ್‌ ಡಿಸಿಲ್ವ, ಸ್ಟೀವನ್‌ ಡಿಸೋಜಾ, ನಿವ್ರತ್ತ ಶಿಕ್ಷಕ ಸ್ಟಾನಿ ಲುವಿಸ್‌, ಸಿಸ್ಟರ್‌ ಮೋರ್ಸಿ, ಕಿರಣ್‌ ಲೋಬೊ , ಹೆಮ್ಮಾಡಿ ವ್ರತ್ತ ಸಂಯೋಜಕ ಯೋಗೀಶ್‌, ೦೫೧ ರಾಮನಾಥ ಮೇಸ್ತ ಹಾಗೂ ಮುಖ್ಯ ಶಿಕ್ಷಕಿ ಶಾಂತಿ ಪಾಯ್ಬ್‌ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಸಾಂಪ್ರದಾಯಿಕ ಶೈಲಿಯಲ್ಲಿ ಸ್ವಾಗತ, ಹಳೆಯ ಕಾಲದ ವಸ್ತು ಪ್ರದರ್ಶನ, ಸೆಲ್ಟಿ ಬೂತ್‌ ನಲ್ಲಿ ಚಂದ್ರಯಾನದ ರಾಕೆಟ್‌ ಮಾದರಿ ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 16 ಶಾಲೆಗಳ ಮಕ್ಕಳು ಮತ್ತು ಇತರರೂ ಸೇರಿ 400 ಕ್ಕೂ ಮಿಕ್ಕಿದ ಜನರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರ ನಾಡಾ ಸಿಬ್ಬಂದಿ ಸಹಕರಿಸಿದರು . ಶಿಕ್ಷಕಿ ಸರಿಟಾ ಪಾಯ್ಸ್‌ ಮತ್ತು ಶರ್ಮಿಳಾ ನಿರೂಪಣೆ ಮಾಡಿದರು. ಮುಖ್ಯ ಶಿಕ್ಷಕಿ ಶಾಂತಿ ಪಾಯ್ಸ್‌ ಸ್ವಾಗತ ಭಾಷಣ ಮಾಡಿದರು.CRP ರಾಮನಾಥ ಮೇಸ್ತ ಧನ್ಯವಾದ ಅರ್ಪಿಸಿದರು.