ಇಂಟರ್‌ನೆಟ್ ಆಫ್ ಥಿಂಗ್ಸ್‌ನಲ್ಲಿ ಸೈಬರ್ ಭದ್ರತೆಯ ಪ್ರಾಮುಖ್ಯತೆ- ಎಂಐಟಿ ಕುಂದಾಪುರ

ಐಇಇಇ ವಿದ್ಯಾರ್ಥಿ ಶಾಖೆ ಎಂಐಟಿ ಕುಂದಾಪುರ ಇವರಿಂದ ಇಂಟರ್‌ನೆಟ್ ಆಫ್ ಥಿಂಗ್ಸ್‌ನಲ್ಲಿ ಸೈಬರ್ ಭದ್ರತೆಯ ಪ್ರಾಮುಖ್ಯತೆ ಕುರಿತು ತಜ್ಞರ ಭಾಷಣವನ್ನು ಏರ್ಪಡಿಸಲಾಗಿತ್ತು. ಎಂ.ಐ.ಟಿ, ಮಣಿಪಾಲದ ಡಿಸ್ & ಸಿಎ ಡಿಪಾರ್ಟ್ಮೆಂಟ್ ಸಹಾಯಕ ಪ್ರೊಫೆಸರ್ ಡಾ.ವಿದ್ಯಾ ರಾವ್ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸೈಬರ್ ಸೆಕ್ಯುರಿಟಿ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ ಕ್ಷೇತ್ರದಲ್ಲಿ ಪ್ರಸ್ತುತ ಮತ್ತು ಭವಿಷ್ಯದ ಸವಾಲುಗಳನ್ನು ವಿವರಿಸಿದರು. ಪ್ರಾಂಶುಪಾಲ ಡಾ.ಅಬ್ದುಲ್ ಕರೀಂ, ಉಪಪ್ರಾಂಶುಪಾಲ ಪ್ರೊ.ಮೆಲ್ವಿನ್ ಡಿಸೋಜಾ, ಬಿ.ಬಿ ನಿರ್ದೇಶಕ ಡಾ.ರಾಮಕೃಷ್ಣ ಹೆಗಡೆ, ಐಇಇಇ ಸಂಯೋಜಕ ಪ್ರೊ.ವರುಣ್ ಕುಮಾರ್, ಪ್ರೊ.ಬಾಲನಾಗೇಶ್ವರ್, ಸೂಕ್ಷ್ಮ ಅಡಿಗ ಉಪಸ್ಥಿತರಿದ್ದರು. ಕು.ಪಾತಿಮಾ ಕಾರ್ಯಕ್ರಮ ನಿರ್ವಹಿಸಿದರು.

ಕುಂದಾಪುರದ ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರದಿನಾಚರಣೆ

ಕುಂದಾಪುರ: ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ”ಶಿಕ್ಷಕರ ಬಗ್ಗೆ ವಿದ್ಯಾರ್ಥಿಗಿರುವ ನಿರೀಕ್ಷೆಯನ್ನು ತೃಪ್ತಿಕರವಾಗಿ ಪೂರೈಸಿ ನ್ಯಾಯ ಒದಗಿಸುವುದು ಒಳ್ಳೆಯ ಶಿಕ್ಷಕನ ಜವಾಬ್ದಾರಿ. ಆನ್ ಲೈನ್ ತರಗತಿಗಳು ಶಿಕ್ಷಕರ ಅಸ್ತಿತ್ವವನ್ನು ಹೊಸ ರೀತಿಯಲ್ಲಿ ಪರೀಕ್ಷಿಸುತ್ತಿದೆ. ಹೊಸ ಶಿಕ್ಷಣ ವಿಧಾನಗಳನ್ನು ವಿಶಾಲ ಮನಸ್ಸಿನಿಂದ ಮುಕ್ತವಾಗಿ ಚರ್ಚಿಸಿ, ಅನುಷ್ಠಾನಕ್ಕೆ ತಂದರೆ ಶಿಕ್ಷಕ -ವಿದ್ಯಾರ್ಥಿ ಬಾಂಧವ್ಯ ಅರ್ಥಪೂರ್ಣವಾಗುವುದು. ಪ್ರಬುದ್ಧ ರಾಜಕಾರಣಿಯಾಗಿದ್ದ ಎಸ್. ರಾಧಾಕೃಷ್ಣನ್ ರವರೂ ತಾವೂ ಶಿಕ್ಷಕರಾಗಿದ್ದರಿಂದಲೇ  ರಾಜ್ಯಸಭೆಯ ಕಲಾಪಗಳನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯವಾಗಿದ್ದು ಎಂದಿದ್ದು ಶಿಕ್ಷಕ ವೃತ್ತಿಯ ಹಿರಿಮೆಯ ಪ್ರತೀಕ ” ಎಂದು   ಕುಂದಾಪುರದ ಆರ್.‌ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಶಿಕ್ಷಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಶ್ರೀ ಆರ್. ಬಿ. ನಾಯ್ಕ್, ನಿವೃತ್ತ ಉಪನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಉಡುಪಿ, ಇವರು ಅಭಿಪ್ರಾಯಪಟ್ಟರು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ ಶೆಟ್ಟಿಯವರು ಸಮಾಜದ ದೃಷ್ಟಿಯಲ್ಲಿ ಆದರ್ಶ ಮತ್ತು ಸ್ಪೂರ್ತಿಯ ಮಾದರಿಗಳೆನಿಸಿಕೊಳ್ಳುವ ಶಿಕ್ಷಕರ ಹೊಣೆಗಾರಿಕೆ ಬಹಳ  ಮಹತ್ವದ್ದು ಎಂದು ತಿಳಿಸಿದರು. ಮುಖ್ಯ ಅತಿಥಿಯವರಾದ ಶ್ರೀ ಆರ್. ಬಿ. ನಾಯ್ಕ್ ರವನ್ನು ಅಭಿನಂದಿಸಲಾಯಿತು. ಡಾ. ಎಸ್. ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ.ಬಿ ಯವರು ಅತಿಥಿಗಳನ್ನು ಸ್ವಾಗತಿಸಿದರು‌. ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಮತಿ ನಾಗರತ್ನಾ ಮುಖ್ಯ ಅತಿಥಿಗಳ ಪರಿಚಯ ನೀಡಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ದೀಪ್ತಿ ಕೆ ಇವರು ಉಪನ್ಯಾಸಕರಿಗೆ ಪುಷ್ಪ ನೀಡಿ ಗೌರವಿಸುವ ಕಾರ್ಯಕ್ರಮವನ್ನು ನೆರವೇರಿಸಿದರು. ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಅರುಣಾ ಹೊಳ್ಳ ಪ್ರಾರ್ಥನೆ ಹಾಡಿದರು. ಸಂಸ್ಕ್ರತ ವಿಭಾಗ ಮುಖ್ಯಸ್ಥರಾದ ಶ್ರೀ ರವಿ ಉಪಾಧ್ಯ ರವರು ವಂದನಾರ್ಪಣೆಗೈದರು. ರಸಾಯನ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ‌ ಜಾನೀಸ್ ನತಾಶಾ ಡಿಸೋಜಾ ರವರು ಕಾರ್ಯಕ್ರಮ ನಿರೂಪಿಸಿದರು. 

Day 8: Eighth day’s Novena at Our Lady of Health Minor Basilica, Harihara

Davanagere, Harihara, September 6, 2023: Eighth day’s Novena at Our Lady of Health, Minor Basilica, Harihara, Davanagere District, Diocese of Shimoga, began at 5:30pm with Rosary, Procession and floral homages to Harihara Matha. Then Basilica Rector & Parish Priest Rev. Fr George K. A led the Novena.

At 6:30pm Rev. Fr Duming Dias, Director of Diocesan Pastoral Renewal Centre ‘Sannidhi’, Shivamogga offered Holy Eucharist. He preached his homily on the theme: “Mother Mary is an inspiration to take care of the Sick in the family”.

In his homily explained that how families have shattered due to sickness. Places like Harihara Basilica gives hope to the people those who come over here with sickness. In the Bible we Jesus how Jesus heals the Sick and suffering. Blessed Mother intercedes for all those who seek her help and God hears her prayers. Taking care of the sick and suffering needs lot of patience in one’s life. We have to learn from Blessed Mother’s life serenity, service, humility and generosity. 

Rev. Fr Venil D’Silva, Rev. Fr Richard SJ, Rev. Fr Franklin D’Souza, Rev. Fr Rayappa, Rev. Fr Ronald Furtado OCD, Fr Ronald D’Cunha, Rev. Fr Shanthraj SJ, Rev. Fr Prashanth OFM CAP, Rev. Fr William OFM CAP and Rev. Fr Alvin Stanislaus concelebrated the Holy Eucharist. 

After the Mass Rev. Fr Franklin D’Souza led the healing prayers and benediction and priests prayed over the pilgrims.

Rector of the Minor Basilica Rev. Fr George K A thanked Rev. Fr Duming Dias.

ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ “ಶಿಕ್ಷಕರ ದಿನಾಚರಣೆ” ಕುರಿತು ವಿಶೇಷ ಸಂಚಿಕೆ

ಕುಂದಾಪುರ: ಸೆಪ್ಟೆಂಬರ್ 5ರಂದು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರಯುಕ್ತ ವಿಭಾಗದ ಪ್ರಾಯೋಗಿಕ ಬಿತ್ತಿಪತ್ರಿಕೆ ಸಾಧನಾ “ಶಿಕ್ಷಕರ ದಿನಾಚರಣೆ” ಕುರಿತು ವಿಶೇಷ ಸಂಚಿಕೆಯನ್ನು ಪ್ರಕಟಗೊಳಿಸಿದರು.
ಶಿಕ್ಷಕರ ದಿನಾಚರಣೆ ಕುರಿತ ಲೇಖನ ಬರಹಗಳು ವಿದ್ಯಾರ್ಥಿಗಳು ಪ್ರಕಟಿಸಿದರು.

Manglooru : St Agnes PU College Teachers Day

Manglooru: Teachers Day is celebrated every year with great gaiety and ardor. This day marks the birth anniversary of Dr.Sarvepalli Radhakrishna, the first Vice –President of India. On this day, students pay homage to their teachers who have selflessly strived to make their students excel not only in academics, but also helped mould them into good human beings. The day recognizes the pivotal role that teachers play and the profound impact they have on students.

The day began with a solemn prayer song by students invoking the blessings of the Almighty on their beloved teachers. The rest of the day wore a festive hue as the students regaled the teachers with games and innovative cultural Programmes. The teachers were highly appreciative of the ingenuity and flair with which the students took the event to a new level altogether.

The Parents Teachers Association too went to immense trouble to showcase their love, respect and regard for the teachers by putting up a dazzling entertainment programme coupled with games and exciting prizes. They were very laudatory of the role teacher’s play in a student’s life. Mr Joel Fernandes, Department of Physics expressed the sentiments of the staff and management when he thanked the PTA members. The event concluded with a fellowship meal in honour of teachers.

ತ್ಯಾಗರಾಜ ಬಡವಾಣೆಯ ಶಾಲೆಯಲ್ಲಿ ಸಂವಿಧಾನದ ಪೀಠಿಕೆಯನ್ನು ವಿದ್ಯಾರ್ಥಿಗಳಿಂದ ಓದಿಸುವಂತಹ ಪ್ರಕ್ರಿಯಿಗೆ ಚಾಲನೆ

ಪಟ್ಟಣದ ತ್ಯಾಗರಾಜ ಬಡವಾಣೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಭಾರತದ ಸಂವಿಧಾನದ ಪೀಠಿಕೆಯನ್ನು ಸರ್ಕಾರದ ಸುತ್ತೋಲೆಯಂತೆ ಮಂಗಳವಾರ ವಿದ್ಯಾರ್ಥಿಗಳಿಂದ ಓದಿಸುವಂತಹ ಪ್ರಕ್ರಿಯಿಗೆ ಚಾಲನೆಯನ್ನು ಮುಖ್ಯ ಶಿಕ್ಷಕ ಎಂ.ಬೈರೇಗೌಡ ಹಾಗೂ ಶಾಲೆಯ ಶಿಕ್ಷಕರು ನೀಡಿದರು.

ಕೆಂಪೇಗೌಡರ ಪ್ರತಿಮೆ ಸ್ಥಾಪಿಸುವುದಾದರೆ, ತಮ್ಮ ಸಮುದಾಯದ ದಾರ್ಶನಿಕರ ಪ್ರತಿಮೆಗಳನ್ನೂ ಸ್ಥಾಪಿಸಬೇಕು : ವಿವಿಧ ಸಮುದಾಯಗಳ ಜನರು ಒತ್ತಾಯ

ಶ್ರೀನಿವಾಸಪುರ: ತಾಲ್ಲೂಕಿನ ರೋಜೇಹಳ್ಳಿ ಕ್ರಾಸ್‍ನಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪಿಸುವುದಾದರೆ, ತಮ್ಮ ಸಮುದಾಯದ ದಾರ್ಶನಿಕರ ಪ್ರತಿಮೆಗಳನ್ನೂ ಸ್ಥಾಪಿಸಬೇಕು ಎಂದು ವಿವಿಧ ಸಮುದಾಯಗಳ ಜನರು ಒತ್ತಾಯಿಸಿದ ಘಟನೆ ಮಂಗಳವಾರ ನಡೆಯಿತು.
ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ರೋಜೇನಹಳ್ಳಿ ಕ್ರಾಸ್‍ಗೆ ಭೇಟಿ ನೀಡಿ, ಈಗಾಗಲೆ ರಸ್ತೆ ಮಧ್ಯಭಾಗ ವೃತ್ತದಲ್ಲಿ ಸ್ಥಾಪಿಸಲಾಗಿರುವ ಕೆಂಪೇಗೌಡರ ಪ್ರತಿಮೆ ತೆರವುಗೊಳಿಸಿ, ರಸ್ತೆ ಬಿದಯ ಕುಂಟೆ ಪಕ್ಕದಲ್ಲಿ ಸ್ಥಾಪಿಸುವಂತೆ ಸಲಹೆ ಮಾಡಿದರು. ಆ ಕಾರ್ಯಕ್ಕೆ ರೂ.10 ಲಕ್ಷ ನೀರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕೆಲವರು ಡಾ. ಬಿ.ಆರ್.ಅಂಬೇಡ್ಕರ್, ವಾಲ್ಮೀಕಿ, ಕೈವಾರ ನಾರಾಯಣಪ್ಪ, ಪುನೀತ್ ರಾಜ್ ಕುಮಾರ್ ಭಾವಚಿತ್ರ ಹಿಡಿದು ಬಂದು, ತಮ್ಮ ಸಮುದಾಯದ ದಾರ್ಶನಿಕರ ಪ್ರತಿಮೆ ಸ್ಥಾಪಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಅವರ ಬೇಡಿಕೆಗೆ ಸ್ಪಂದಿಸಿದ ಸಂಸದ ಎಸ್.ಮುನಿಸ್ವಾಮಿ ಅವರು, ಕ್ರಾಸ್‍ನಲ್ಲಿ ಸರ್ಕಾರಿ ಜಮೀನು ಇರುವುದರಿಂದ, ಆ ಜಾಗದಲ್ಲಿ ಉದ್ಯಾನ ಅಭಿವೃದ್ಧಿ ಪಡಿಸಿ, ಎಲ್ಲ ದಾರ್ಶನಿಕರ ಪ್ರತಿಮೆಗಳನ್ನೂ ಸ್ಥಾಪಿಸಲಾಗುವುದು. ಇಲ್ಲಿನ ಜನರು ಶಾಂತಿಪ್ರಿಯರಾಗಿದ್ದು, ಯಾವುದೇ ವಿವಾದಕ್ಕೆ ಆಸ್ಪದ ನೀಡುವುದಿಲ್ಲ. ಕೆಂಪೇಗೌಡರ ಪುತ್ಥಳಿಯನ್ನು ರಸ್ತೆ ಮಧ್ಯಭಾಗದಿಂದ ತೆಗೆದು ಪಕ್ಕದಲ್ಲಿ ಸ್ಥಾಪಿಸಲು ಜಿಲ್ಲಾಧಿಕಾರಿ, ಸ್ವಾಮೀಜಿ ಅವರೊಂದಿಗೆ ಚರ್ಚಿಸಿ ನಿರ್ಧರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಸ್ತೆ ಪಕ್ಕದಲ್ಲಿದ್ದ ಹಳೆ ಕಟ್ಟಡಗಳನ್ನು ಕೆಡವಲಾಯಿತು. ಕಟ್ಟಡ ಕೆಡವಲಾದ ಸ್ಥಳದಲ್ಲಿ ಅಂಗಡಿ ಮಳಿಗೆ ನಿರ್ಮಿಸಿ ಕೊಡುವಂತೆ ದಳಸನೂರು ಗ್ರಾಮ ಪಂಚಾಯಿತಿ ಪಿಡಿಒಗೆ ತಿಳಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಮಾಜಿ ಅಧ್ಯಕ್ಷ ಚಿನ್ನಪ್ಪರೆಡ್ಡಿ, ಮುಖಂಡರಾದ ಆರ್.ಎನ್.ಚಂದ್ರಶೇಖರ್, ರಾಮಚಂದ್ರೇಗೌಡ, ಶ್ರೀನಾಥರೆಡ್ಡಿ, ಆನಂದ್, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಪಿಡಿಒ ಚಿನ್ನಪ್ಪ, ಡಿವೈಎಸ್‍ಪಿ ಕೆ.ಆರ್.ರಘು, ಪೊಲೀಸ್ ಇನ್ಸ್‍ಪೆಕ್ಟರ್ ಆರ್.ದಯಾನಂದ್, ಎಂ.ಜಿ.ಲೋಕೇಶ್ ಇದ್ದರು.

ನಿವೃತ್ತ ಸರ್ಕಾರಿ ನೌಕರರು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು:ಅಧ್ಯಕ್ಷ ನಾರಾಯಣರೆಡ್ಡಿ

ಶ್ರೀನಿವಾಸಪುರ: ನಿವೃತ್ತ ಸರ್ಕಾರಿ ನೌಕರರು ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕು. ಚಟುವಟಿಕೆಯಿಂದ ಇರಲು ಪ್ರಯತ್ನಿಸಬೇಕು ಎಂದು ತಾಲ್ಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಾರಾಯಣರೆಡ್ಡಿ ಹೇಳಿದರು.
ಪಟ್ಟಣದ ತಾಲ್ಲೂಕು ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ನಿವೃತ್ತ ನೌಕರರ ಮಾಸಿಕ ಸಭೆ, ಶಿಕ್ಷಕರ ದಿನಾಚರಣೆ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದಾರ್ಶನಿಕರ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದರು.
ಸಂಘದ ವತಿಯಿಂದ ಸಮಾಜ ಸೇವಾ ಕಾರ್ಯಕ್ರಮ ಕೈಗೊಳ್ಳಲಾಗುವುದು. ಪ್ರತಿಭಾವಂತ ವಿದಾರ್ಥಿಗಳಿಗೆ ಗೌರವ ಸಮರ್ಪಣೆ ಮಾಡಲಾಗುವುದು. ಮಾಸಿಕ ಸಭೆಯಲ್ಲಿ ನಿವೃತ್ತ ನೌಕರರ ಕುಂದು ಕೊರತೆ ವಿಚಾರಿಸಲಾಗುವುದು. ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಹಿರಿಯ ಸದಸ್ಯರು ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿದ್ದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಂಘದ ಉಪಾಧ್ಯಕ್ಷ ಶ್ರೀನಿವಾಸರೆಡ್ಡಿ, ಬೈರಾರೆಡ್ಡಿ, ನಾಗರಾಜ್, ಮಾರಪ್ಪರೆಡ್ಡಿ, ಸತ್ಯನಾರಾಯಣರೆಡ್ಡಿ ಇದ್ದರು.

ಕೋಲಾರ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ – ಮಲ್ಲಿಕಾರ್ಜುನ್,ಮುನಿರಾಜು ಸೇರಿ 18 ಮಂದಿಗೆ ಸನ್ಮಾನ

ಕೋಲಾರ:- ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ,ಜಿಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಜಿಲ್ಲೆಯ ಸರ್ಕಾರಿ,ಅನುದಾನಿತ ಶಾಲೆಗಳ ಒಟ್ಟು 18 ಶಿಕ್ಷಕರನ್ನು ಸನ್ಮಾನಿಸಲಾಯಿತು.
ಪ್ರತಿ ತಾಲ್ಲೂಕಿನಿಂದಲೂ ಕಿರಿಯಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲಾ ವಿಭಾಗಗಳು ಸೇರಿದಂತೆ ತಲಾ ಮೂವರು ಶಿಕ್ಷಕರನ್ನು ಆಯ್ಕೆ ಮಾಡಿದ್ದು, ಜಿಲ್ಲೆಯ ಎಲ್ಲಾ 6 ತಾಲ್ಲೂಕುಗಳ 18 ಶಿಕ್ಷಕರನ್ನು ಗೌರವಿಸಲಾಯಿತು.
ಜಿಲ್ಲಾಮಟ್ಟದ ಉತ್ತಮ ಶಿಕ್ಷಕಪ್ರಶಸ್ತಿಗೆ ಭಾಜನರಾದ ಶಿಕ್ಷಕರೆಂದರೆ ಪ್ರೌಢಶಾಲಾ ವಿಭಾಗದಿಂದ ಕೋಲಾರ ತಾಲ್ಲೂಕಿನ ಕ್ಯಾಲನೂರು ಕೆಪಿಎಸ್ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಓ.ಮಲ್ಲಿಕಾರ್ಜುನ್, ಬಂಗಾರಪೇಟೆ ತಾಲ್ಲೂಕಿನ ಬಲಮಂದೆ ಪ್ರೌಢಶಾಲೆಯ ಎ.ಗಿರಿಯಪ್ಪ, ಕೆಜಿಎಫ್ ತಾಲ್ಲೂಕು ಸೆಂಟ್‍ಜೋಸೆಫ್ ಅನುದಾನಿತ ಶಾಲೆಯ ಎಂ.ಹೆಚ್.ಯೋಗೇಂದ್ರಯ್ಯ, ಮಾಲೂರು ತಾಲ್ಲೂಕು ಕೆಎಲ್‍ಇ ಅನುದಾನಿತ ಶಾಲೆಯ ಜಯಪ್ರಕಾಶ್, ಮುಳಬಾಗಿಲು ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನ ಟಿ.ಎಸ್.ನಾಗೇಶ್, ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮೀಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಕೆ.ಆರ್.ಶ್ರೀನಿವಾಸಲು ಭಾಜನರಾಗಿದ್ದಾರೆ.

ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು


ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಬಂಗಾರಪೇಟೆ ತಾಲ್ಲೂಕು ದೊಡ್ಡಚಿನ್ನಹಳ್ಳಿ ಶಾಲೆ ಶಿಕ್ಷಕಿ ಕೆ.ಸಿ.ಪದ್ಮಾವತಿ, ಕೆಜೆಎಫ್ ತಾಲ್ಲೂಕಿನ ಕ್ಯಾಸಂಬಳ್ಳಿ ಶಾಲೆಯ ಸುನಂದಮ್ಮ, ಕೋಲಾರ ತಾಲ್ಲೂಕಿನ ಐತರಸನಹಳ್ಳಿ ಶಾಲೆಯ ಶಿಕ್ಷಕ ಸಿ.ಮುನಿರಾಜು, ಮಾಲೂರು ತಾಲ್ಲೂಕಿನ ಚಿಕ್ಕತಿರುಪತಿ ಶಾಲೆಯ ಮುತ್ತಣ್ಣ, ಮುಳಬಾಗಿಲು ತಾಲ್ಲೂಕು ಜಿ.ಮಾರಾಂಡಹಳ್ಳಿ ಶಾಲೆಯ ಶಿಕ್ಷಕ ನಾಗರಾಜಯ್ಯ, ಶ್ರೀನಿವಾಸಪುರ ತಾಲ್ಲೂಕು ಹರಳಕುಂಟೆ ಶಾಲೆ ಮುಖ್ಯ ಶಿಕ್ಷಕ ಕೆ.ಎಚ್.ಮೋಹನ್‍ಕುಮಾರ್ ಗುಪ್ತ ಭಾಜನರಾಗಿದ್ದಾರೆ.

ಕಿರಿಯ ಪ್ರಾಥಮಿಕ ವಿಭಾಗದ ಶಿಕ್ಷಕರು


ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ ಬಂಗಾರಪೇಟೆ ತಾಲ್ಲೂಕು ಗುಟ್ಟಹಳ್ಳಿ ಶಾಲೆಯ ರಮೇಶ್, ಕೆಜಿಎಫ್ ತಾಲ್ಲೂಕಿನ ಬ್ಯಾಟರಾಯನಹಳ್ಳಿ ಶಾಲೆ ಶಿಕ್ಷಕಿ ಹೆಚ್.ವಿ.ಶ್ಯಾಮಲ, ಕೋಲಾರ ತಾಲ್ಲೂಕಿನ ಗಿರ್ನಹಳ್ಳಿ ಶಾಲೆಯ ರೂಪ, ಮಾಲೂರು ತಾಲ್ಲೂಕು ಚವರಮಂಗಲ ಶಾಲೆ ಶಿಕ್ಷಕ ತಿಮ್ಮರಾಯಪ್ಪ, ಮುಳಬಾಗಿಲು ತಾಲ್ಲೂಕಿನ ಆರ್.ಗಡ್ಡೂರು ಶಾಲೆಯ ಶಿಕ್ಷಕಿ ಆರ್.ಶಾರದಮ್ಮ, ಶ್ರೀನಿವಾಪುರ ತಾಲ್ಲೂಕು ಬಿಸನಹಳ್ಳಿ ಶಾಲೆ ಶಿಕ್ಷಕಿ ಎನ್.ಸರೋಜಮ್ಮ ಭಾಜನರಾಗಿದ್ದಾರೆ.