ಸಾಧನೆಗೆ ಅಡ್ಡಿಯಾದುದು ಯಾವುದೂ ಇಲ್ಲ ಆದರೆ ಸಾಧಿಸುವ ಛಲವಿರಬೇಕು ಸುರೇಶ್ ಭಂಡಾರಿಯವರ ಜೀವನ ತೆರದ ಪುಸ್ತಕ

ಸಾಧನೆಗೆ ಅಡ್ಡಿಯಾದುದು ಯಾವುದೂ ಇಲ್ಲ ಆದರೆ ಸಾಧಿಸುವ ಛಲವಿರಬೇಕು ಎಂಬ ಮಾತಿಗೆ ಸುರೇಶ್ ಭಂಡಾರಿಯವರ ಜೀವನ ತೆರದ ಪುಸ್ತಕ. ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಮುದುಗಲ್‌ನವರಾದ ಅವರು ಹುಟ್ಟಿನಿಂದ ವಿಶೇಷಚೇತನರಲ್ಲ. ಆದರೆ ಒಂದೂವರೆ ವರ್ಷದ ಕೂಸಾಗಿದ್ದಾಗಲೇ ವಿಪರೀತ ಜ್ವರ ಬಾಧೆ ಹಾಗೂ ಸರಿಯಾದ ಚಿಕಿತ್ಸೆ ಸಿಗದ ಕಾರಣದಿಂದಾಗಿ ಪೋಲಿಯೊ ಪೀಡಿತರಾಗಿ ಕಾಲುಗಳ ಸ್ವಾಧೀನ ಕಳೆದುಕೊಂಡರು. ಆದರೆ ವಿಕಲಚೇತನರ ಕಲ್ಯಾಣಕ್ಕಾಗಿ ದುಡಿಯುವ ಅವರ ಹುರುಪು ಹಾಗೂ ಹಂಬಲ ಮಾತ್ರ ದಣಿವಿಲ್ಲದ್ದು.

ತಾಯಿ ಪಾರ್ವತೆಮ್ಮ ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಕ್ಕೆ ಸೇರಿದವರು. ಇವರ ನಾಲ್ವರು ಮಕ್ಕಳಲ್ಲಿ ಸುರೇಶ್‌ ಹಿರಿಯ ಮಗ. ಒಂದೂವರೆ ವರ್ಷ ಪ್ರಾಯದಲ್ಲಿ ಜ್ವರ ಬಾಧೆಯಿಂದಾಗಿ ಹೆಚ್ಚಿನ ಚಿಕಿತ್ಸೆ ಒದಗಿಸಲು ಅಜ್ಜಿ ಅವರನ್ನು ಮುಂಬೈಗೆ ಕರೆದುಕೊಂಡು ಹೋದರು. ಮುಂಬೈನಲ್ಲಿ ವೈದ್ಯರೊಬ್ಬರು ಲಸಿಕೆ ನೀಡಿ ತಣ್ಣೀರಿನ ಬಕೆಟ್‌ನಲ್ಲಿ ಅದ್ದಿ ತೆಗೆದ ಕೆಲವು ಗಂಟೆಗಳಲ್ಲಿಯೇ ದೇಹದ ಎಲ್ಲ ಅಂಗಾಂಗಳನ್ನು ಸ್ವಾಧೀನ ಮಾಡಿಕೊಂಡು ಪೊಲೀಯೋ ವಕ್ಕರಿಸಿತು‌‌. ಆ ಬಳಿಕ ಮುಂಬೈನ ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಕಾಲುಗಳು ಮಾತ್ರ ಗುಣವಾಗದೆ ಶಾಶ್ವತ ಅಂಗವೈಕಲ್ಯತೆಗೆ ತುತ್ತಾಗಬೇಕಾಯ್ತು. ತದನಂತರ ಸುಮಾರು 8 ವರ್ಷಗಳ ಕಾಲ ಅಜ್ಜಿಯ ಆರೈಕೆಯಲ್ಲಿ ಮುಂಬೈನಲ್ಲಿಯೇ ಬೆಳೆದರು‌. ಅಲ್ಲಿ ಶಾಲೆಗಳು ಬಹಳ ದೂರವಿದ್ದ ಕಾರಣದಿಂದಾಗಿ ವಿದ್ಯಾಭ್ಯಾಸದ ತೊಡಕುಗಳನ್ನು ನಿವಾರಿಸಲು ಅಜ್ಜಿ ಮತ್ತೊಮ್ಮೆ ಅವರನ್ನು ಹುಟ್ಟೂರಿಗೆ‌ ತಂದು ಬಿಟ್ಟರು. ಆಗ ಪಾರ್ವತೆಮ್ಮ‌ನವರು ಅಂಗನವಾಡಿ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸುತ್ತಿದ್ದರು.

ಮನೆಯಿಂದ ಅನತಿ ದೂರದಲ್ಲಿಯೇ ಇದ್ದ ಹನುಮಂತ ದೇವಾಲಯದಲ್ಲಿ ನಡೆಸಲಾಗುತ್ತಿದ್ದ ಸರ್ಕಾರಿ ಗುಡಿ ಶಾಲೆಯಲ್ಲಿ 1 ರಿಂದ 3ನೇ ತರಗತಿವರೆಗಿನ ಶಿಕ್ಷಣವನ್ನು ಗೆಳೆಯರ ಸಹಾಯದಿಂದಲೇ ಪಡೆದರು. ಪ್ರತಿದಿನ ಶಾಲೆಗೆ ಸುರೇಶ್‌ರನ್ನು ಹೊತ್ತೊಯ್ಯುವ ಹಾಗೂ ಮನೆಗೆ ವಾಪಸು ಹೊತ್ತುಕೊಂಡು ಬರುವ ಕಾಯಕವನ್ನು ಗೆಳೆಯರ ಬಳಗ ನಿಭಾಯಿಸಿತು. 4ನೇ ತರಗತಿಯಿಂದ 10ನೇ ತರಗತಿಯವರೆಗಿನ ಶಿಕ್ಷಣಕ್ಕಾಗಿ ಸೈಕಲ್ ತರಿಸಿಕೊಂಡು ಗೆಳೆಯರ ಸಹಾಯದಿಂದಲೇ ಶಾಲೆಗೆ ತಲುಪಿದರು. ಸಾಮಾನ್ಯವಾಗಿ ವಿಕಲಚೇತನರು ಬಳಸುವ ಮೂರು ಚಕ್ರಗಳ ಸೈಕಲ್ ಅವರ ಬಳಿ ಇರಲಿಲ್ಲ. ಹತ್ತನೇ ತರಗತಿ ತಲುಪಿದಾಗ ವಿಕಲಚೇತನರ ಇಲಾಖೆಯ ಬಗ್ಗೆ ಒಂದಿಷ್ಟು ಮಾಹಿತಿ ಸುರೇಶ್‌ರಿಗೆ ಲಭಿಸಿತು‌. ಸರ್ಕಾರದಿಂದ ನೀಡಲಾಗುವ ಮೂರು ಚಕ್ರಗಳ ಸೈಕಲ್ ಪಡೆಯಲು ಬಹಳ ಕಷ್ಟಪಟ್ಟು ವೈದ್ಯಕೀಯ ಪ್ರಮಾಣ ಪತ್ರ ಮಾಡಿಸಿಕೊಂಡು ಇಲಾಖೆಯಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಅವರಿಗೆ ಮೂರು ಚಕ್ರಗಳ ಸೈಕಲ್ ಲಭಿಸಿತು‌. ಇಲಾಖೆಯ ಪರಿಚಯದ ಬೆನ್ನಲ್ಲೇ ವಿಕಲಚೇತನರಿಗೆ ಲಭಿಸುವ ಮಾಸಾಶಸನದ ಬಗ್ಗೆಯೂ ಮಾಹಿತಿ ಲಭಿಸಿತು. ಮಾಸಾಶನಕ್ಕಾಗಿ ಅರ್ಜಿ ಸಲ್ಲಿಸಿ ಸಾಕಷ್ಟು ಬಾರಿ ಅಲೆದಾಡಬೇಕಾಯ್ತು. ಸುಮಾರು ಒಂದು ವರ್ಷದ ಬಳಿಕ ಅವರಿಗೆ ಮಾಸಾಶನ ಪ್ರಾರಂಭವಾಯಿತು. 1995ರಲ್ಲಿ ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸುರೇಶ್‌ರವರು ತಮ್ಮ ಶಿಕ್ಷಣಕ್ಕೆ ಸಹಾಯ ನೀಡಿದ ಸ್ನೇಹಿತರಿಗೆ ಆಭಾರಿಯಾಗಿದ್ದಾರೆ. ಯಾಕೆಂದರೆ, ಮೂರು ದಶಕಗಳ ಹಿಂದೆ ವಿಕಲಚೇತನರಿಗೆ ಪೂರಕವಾದ ಯಾವುದೇ ಸೌಲಭ್ಯಗಳಿಲ್ಲದ, ವಿಕಲಚೇತನರಿಗಾಗಿಯೇ ಒಂದು ಇಲಾಖೆಯೇ ಕಾರ್ಯನಿರ್ವಹಿಸುತ್ತಿದೆ ಎಂಬ ಬಗ್ಗೆ ಅರಿವಿಲ್ಲ ಸಮಯದಲ್ಲಿ ಗೆಳಯರ ಸಹಾಯ, ಸಹಕಾರವಿಲ್ಲದಿರುತ್ತಿದ್ದರೆ ಶೈಕ್ಷಣಿಕ ಜೀವನ ಎತ್ತ ಸಾಗುತ್ತಿತ್ತು ಎಂಬುದನ್ನು ಊಹಿಸಲು ಸಾಧ್ಯವಿರಲಿಲ್ಲ ಎನ್ನುತ್ತಾರೆ ಸುರೇಶ್.

ಆ ಕಾಲದಲ್ಲಿ ಊರಿನಲ್ಲಿ ಶಿಕ್ಷಣ ಮುಂದುವರಿಸಲು ಕಾಲೇಜುಗಳಿಲ್ಲದ ಕಾರಣದಿಂದಾಗಿ ಉನ್ನತ ಶಿಕ್ಷಣದ ಕನಸನ್ನು ಅವರು ಕೈಬಿಡಬೇಕಾಯಿತು‌. ದೂರ ಪ್ರಯಾಣ, ವಿಶೇಷಚೇತನರಿಗೆ ಬೇಕಾಗುವ ಸೌಲಭ್ಯಗಳ ಕೊರತೆಯ ಸಂಕಷ್ಟಕ್ಕೆ ಬೇಸತ್ತು ಸುರೇಶ್ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದರು‌. 1996ರಲ್ಲಿ ಚಿಕ್ಕ ಡಬ್ಬಾ ಅಂಗಡಿಯೊಂದನ್ನು ಬಾಡಿಗೆಗೆ ಪಡೆದು ಪಾನ್ ಶಾಪ್ ಅಂಗಡಿಯನ್ನು ಪ್ರಾರಂಭಿಸಿದರು. ಬಾಲ್ಯದಿಂದಲೇ ಟಿ.ವಿ, ರೆಡಿಯೋ, ಟೇಪ್‌ ರೆಕಾರ್ಡ್ ರಿಪೇರಿ ಮಾಡುವ ಆಸಕ್ತಿ ಇದ್ದುದ್ದರಿಂದ ಚಿಕ್ಕಪ್ಪನವರ ಸಲಹೆಯ ಮೇರೆಗೆ ಪಕ್ಕದಲ್ಲಿಯೇ ಇದ್ದ ಪರಿಚಯಸ್ಥರ ಬಳಿ ಗಡಿಯಾರ ರಿಪೇರಿ ಮಾಡುವುದನ್ನು ಕಲಿತರು. 1998ರಲ್ಲಿ ತಮ್ಮದೇ ಸ್ವಂತ ಒಂದು ಗಡಿಯಾರ ರಿಪೇರಿ ಅಂಗಡಿಯನ್ನು ಆರಂಭಿಸುವ ಮೂಲಕ ಸ್ವಉದ್ಯೋಗದ ವೃತ್ತಿ ಜೀವನಕ್ಕೆ ಕಾಲಿಟ್ಟರು.

ಶಿಕ್ಷಣ ಪಡೆಯುವಾಗ ಅನುಭವಿಸಿದ ತೊಂದರೆಗಳು, ವೈದ್ಯಕೀಯ ಪ್ರಮಾಣ ಪತ್ರ, ತ್ರಿಚಕ್ರ ಸೈಕಲ್ ಹಾಗೂ ಮಾಸಾಶನ ಪಡೆಯಲು ಪಟ್ಟಂತಹ ಕಷ್ಟಗಳು ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಲು ಸುರೇಶ್‌ರವರಿಗೆ ಬಲು ದೊಡ್ಡ ಪ್ರೇರಣೆಯಾಯಿತು. ತ್ರಿಚಕ್ರ ಸೈಕಲ್ ಪಡೆಯಲು ಇಲಾಖೆಗೆ ಹೋದ ಸಂದರ್ಭದಲ್ಲಿ ಅಲ್ಲಿ ರಾಶಿಗಟ್ಟಲೇ ಸುರಿಯಲಾಗಿದ್ದ ತ್ರಿಚಕ್ರ ಸೈಕಲ್‌ಗಳು ಗೋದಾಮಿನಲ್ಲಿ ದುರಸ್ತಿ ಸ್ಥಿತಿಯಲ್ಲಿ ಬಿದ್ದಿದ್ದರು ಕೂಡಾ ಅದರ ಮಾಹಿತಿ ಯಾರಿಗೂ ಇರಲಿಲ್ಲ ಎಂಬುದು ಅವರನ್ನು ಬಲವಾಗಿ ಕಾಡಿತು.

“ರಾಯಚೂರಿನಲ್ಲಿ ಸುರೇಶ್ ಕುಷ್ಟಗಿಯವರು ಆರಂಭಿಸಿದ್ದ ವಿಕಲಚೇತನರ ಒಕ್ಕೂಟವು ನನಗೆ ಪ್ರೇರಣೆಯಾಯಿತು. ಅವರಿಂದ ನಾನು ಹಲವಾರು ಮಾಹಿತಿಗಳನ್ನು ತಿಳಿದುಕೊಂಡೆ. ಅವರ ಮಾರ್ಗದರ್ಶನದಲ್ಲಿ ಹಲವಾರು ಹೋರಾಟಗಳಲ್ಲಿ ಪಾಲ್ಗೊಂಡು 2001ರಿಂದ ನಾನು ಸಕ್ರಿಯವಾಗಿ ವಿಕಲಚೇತನರ ಸಂಘಟನೆಗಳಲ್ಲಿ ಸೇವೆ ಪ್ರಾರಂಭ ಮಾಡಿದೆ” ಎಂದು ಸುರೇಶ್ ಹೇಳುತ್ತಾರೆ.

ಹಲವು ಸಂಘ ಸಂಸ್ಥೆಗಳಲ್ಲಿ ಸ್ವಯಂ ಸೇವಕನಾಗಿ ಕೆಲಸ ಮಾಡಿ 2008ರಲ್ಲಿ ಸಮಾನ ಮನಸ್ಕರ ಹಾಗೂ ವಿಕಲಚೇತನ ಸ್ನೇಹಿತರ ಜೊತೆ ಸೇರಿ “ಚೇತನ ಅಂಗವಿಕಲರ ಅಭಿವೃದ್ಧಿ ಸಂಸ್ಥೆ” ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅದರಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಸೇವೆ ಸಲ್ಲಿಸುತ್ತಿದ್ದಾರೆ. 2018ರಲ್ಲಿ ಕರ್ನಾಟಕ ರಾಜ್ಯ ಅಂಗವಿಕಲರ ಆರ್ ಪಿ ಡಿ ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಸದಸ್ಯನಾಗಿ ಸೇರಿದ ಅವರು ಪ್ರಸ್ತುತ ಸಮಿತಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ.

ಕಳೆದ 5 ತಿಂಗಳುಗಳ ಹಿಂದೆ ದಿ ಅಸೋಸಿಯೇಷನ್ ಆಫ್ ಪಿಫಲ್ ವಿತ್ ಡಿಸೆಬಿಲಿಟಿ (ಎಪಿಡಿ) ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಕ್ಸೆಸಿಬಿಲಿಟಿ ಬಗ್ಗೆ ತರಬೇತಿ ಪಡೆದಿದ್ದು, ಪ್ರಸ್ತುತ ನೂತನವಾಗಿ ರಚನೆಯಾದ ಕರ್ನಾಟಕ ಆಕ್ಸೆಸಿಬಿಲಿಟಿ ಟಾಸ್ಕ್ ಫೋರ್ಸ್‌ ಸಮಿತಿಯ ರಾಜ್ಯ ಕಾರ್ಯದರ್ಶಿಯಾಗಿ ಆಕ್ಸೆಸಿಬಿಲಿಟಿ ರಂಗದಲ್ಲಿಯೂ ಕೆಲಸ ಮಾಡುತ್ತಿದ್ದಾರೆ.

ತಮ್ಮ ಉದ್ಯೋಗದ ಜೊತೆಗೆ ಸುಮಾರು 20 ವರ್ಷಗಳಿಂದ ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಸೇವೆ ಸಲ್ಲಿಸುತ್ತಾ, ಇದುವರೆಗೆ 1060 ವಿಕಲಚೇತನರಿಗೆ ವಿಶೇಷ ಗುರುತಿನ ಚೀಟಿಗಳನ್ನು( UDID card) ಒದಗಿಸಿ ಕೊಟ್ಟಿದ್ದಾರೆ. ಶಾಸಕರ ಅನುದಾನ ಸೇರಿದಂತೆ ಪುರಸಭೆ, ಗ್ರಾಮ ಪಂಚಾಯಿತಿ ಹಾಗೂ ತಾಲೂಕ ಪಂಚಾಯತ್ ಅನುದಾನಗಳಲ್ಲಿ ವಿಕಲಚೇತನರಿಗೆ ಮೀಸಲಿರುವ ಶೇ.5ರ ಅನುದಾನವನ್ನು ಬಳಕೆ ಮಾಡಿಸಿ ಸುಮಾರು 100 ಜನರಿಗೆ ತ್ರಿಚಕ್ರ ವಾಹನ ಸೇರಿದಂತೆ 460 ವಿಶೇಷಚೇತನರಿಗೆ ವಿವಿಧ ಬಗೆಯ ಸಾಧನ ಸಲಕರಣೆಗಳು, 20 ಜನರಿಗೆ ಗ್ಯಾಸ್ ಸಿಲಿಂಡರ್, 150 ಜನರಿಗೆ ಸ್ವಯಂ ಉದ್ಯೋಗಕ್ಕಾಗಿ ಟೈಲರಿಂಗ್ ಮಷಿನ್ ಗಳನ್ನು ಒದಗಿಸಿದ್ದಾರೆ. ವಿಕಲಚೇತನರ ಸಬಲೀಕರಣ ಇಲಾಖೆಯಿಂದ 60 ಜನರಿಗೆ ವಿದ್ಯಾರ್ಥಿ ವೇತನ, 6 ಜನರಿಗೆ ವಿವಾಹ ಪ್ರೋತ್ಸಾಹ ಧನ, 10 ಜನರಿಗೆ ಆಧಾರ ಯೋಜನೆಗಳನ್ನು ಒದಗಿಸಿಕೊಟ್ಟಿದ್ದಾರೆ. ಸಾರಿಗೆ ಇಲಾಖೆಯಿಂದ 400 ಜನರಿಗೆ ರಿಯಾಯಿತಿ ದರದ ಬಸ್ ಪಾಸ್ ಹಾಗೂ 50 ಜನರಿಗೆ ರೈಲ್ವೆ ರಿಯಾಯಿತಿ ಪಾಸ್ ಗಳನ್ನು ಒದಗಿಸುವುದು, ಕಂದಾಯ ಇಲಾಖೆಯಿಂದ 380 ಜನರಿಗೆ ಪೋಷಣಾ ಭತ್ಯೆ, ಅಲ್ಲದೆ ಕೋವಿಡ್ ಲಾಕಡೌನ್ ಸಮಯದಲ್ಲಿ 348 ಜನ ವಿಕಲಚೇತನರ ಕುಟುಂಬಗಳಿಗೆ ಆಹಾರ ಕಿಟ್ ಹಾಗೂ 25 ಜನ ಬೆನ್ನುಹುರಿ ಅಪಘಾತವುಳ್ಳ ವ್ಯಕ್ತಿಗಳಿಗೆ ಮೆಡಿಕಲ್ ಕಿಟ್, 25 ಬುದ್ಧಿ ಮಾಂದ್ಯ ಮಕ್ಕಳಿಗೆ ಕಲಿಕಾ ಸಾಮಗ್ರಿಗಳು, 60 ಜನ ತೀವ್ರತರವಾದ ವಿಕಲಚೇತನರಿಗೆ ಆರೋಗ್ಯ ತಪಾಸಣೆ ಹಾಗೂ 490 ಜನ ವಿಕಲಚೇತನರಿಗೆ ಕೋವಿಡ್ ಲಸಿಕೆಯನ್ನು ಹಾಕಿಸಲಾಗಿದೆ. 150 ಜನ ವಿಕಲಚೇತನರ ಮನೆಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಪಟ್ಟಿ ಮಾಡಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಕಳೆದ 2023 ರ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ 42 ಮತಗಟ್ಟೆ ಕೇಂದ್ರಗಳ ವಿಲ್ ಚೇರ್, ರ್ಯಾಂಪ್ ಸೇರಿದಂತೆ ವಿಕಲಚೇತನರಿಗೆ ಅವಶ್ಯಕವಿರುವ ಆಕ್ಸೆಸಿಬಿಲಿಟಿಯನ್ನು ಒದಗಿಸಿ ಕೊಡಲಾಗಿದೆ. 1000 ಕ್ಕೂ ಹೆಚ್ಚು ಜನರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸುರೇಶ್‌ ಮಾಡಿದ್ದಾರೆ‌.

ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ದುಡಿದ ಸುರೇಶ್ ಭಂಡಾರಿಯವರ ಸೇವೆಯನ್ನು ಗುರುತಿಸಿ 2020ರಲ್ಲಿ ರಾಯಚೂರು ಜಿಲ್ಲೆಯ ಜನಕಲ್ಯಾಣ ಟ್ರಸ್ಟ್ ಹಾಗೂ ನಮ್ಮೂರ ಶಾಸಕರು ರಾಷ್ಟ್ರೀಯ ದಿನಪತ್ರಿಕೆ ವತಿಯಿಂದ “ಜನಸೇವಾ ರತ್ನ ರಾಜ್ಯ ಪ್ರಶಸ್ತಿ” ಹಾಗೂ 2021ರಲ್ಲಿ ವೈದ್ಯಕೀಯ ರಾಷ್ಟ್ರೀಯ ದಿನಪತ್ರಿಕೆ ಲಿಂಗಸೂರು ವತಿಯಿಂದ “ವೀರ ಕನ್ನಡಿಗ ರಾಜ್ಯ ಪ್ರಶಸ್ತಿ” ಹಾಗೂ 2022 ರಲ್ಲಿ ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ರಾಯಚೂರು ಜಿಲ್ಲೆಯಿಂದ “ಸಮಾಜ ಸೇವಾ ರತ್ನ” ಜಿಲ್ಲಾ ಪ್ರಶಸ್ತಿಯನ್ನು ನೀಡಿ ಗೌರವಿಸಿವೆ‌.

2005ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಸುರೇಶ್‌ರಿಗೆ ಇಬ್ಬರು ಮಕ್ಕಳಿದ್ದಾರೆ. ಮಗ 9ನೇ ತರಗತಿಯಲ್ಲಿ ಕಲಿಯುತ್ತಿದ್ದರೆ ಮಗಳು 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 2013ರಲ್ಲಿ ತಾಯಿ ಪಾರ್ವತೆಮ್ಮ ಕೆಲಸದಿಂದ ನಿವೃತ್ತರಾದ ಬಳಿಕ ಇಡೀ ಕುಟುಂಬದ ಜವಾಬ್ದಾರಿಯನ್ನು ಸುರೇಶ್‌ರವರು ಹೊತ್ತುಕೊಂಡು ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿದ್ದಾರೆ. “ನಾನು ಮಾಡುವ ಪ್ರತಿಯೊಂದು ಕೆಲಸಕ್ಕೂ ಪತ್ನಿ ಸೇರಿದಂತೆ ಇಡೀ ಕುಟುಂಬದ ಸದಸ್ಯರು ಪ್ರೋತ್ಸಾಹವನ್ನು ನೀಡಿದ್ದಾರೆ. ನನಗೆ ಯಾವತ್ತೂ ನಾನು ವಿಕಲಚೇತನ ಎಂಬುವ ಭಾವನೆ ಬರದಂತೆ ನನ್ನ ಕುಟುಂಬ ನನ್ನನ್ನು ನೋಡಿಕೊಂಡಿದೆ. ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಸೇವೆ ಮಾಡುವುದೇ ನನ್ನ ಗುರಿ ಮತ್ತು ಸಮಾಜದ ಕಟ್ಟ ಕಡೆಯ ವಿಕಲಚೇತನ ವ್ಯಕ್ತಿಗೂ ಅವನ ಹಕ್ಕು ಸಿಗಬೇಕು” ಎಂದು ಸುರೇಶ್ ಆಶಿಸುತ್ತಾರೆ.

ಯಲ್ದೂರಿನ ನ್ಯಾಷನಲ್ ಹೈಸ್ಕೂಲ್ ಪ್ರತಿಭಾ ಪುರಸ್ಕಾರ – ಸನ್ಮಾನ- ಗತವೈಭವವ ಮರಳಿ ಪಡೆಯಲು ಪ್ರಯತ್ನ

ಶ್ರೀನಿವಾಸಪುರ : ತಾಲೂಕಿನ ಯಲ್ದೂರು ಹೋಬಳಿ ಹಾಗೂ ಸುತ್ತಮುತ್ತಲಿನ ತಾಲ್ಲೂಕುಗಳ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅರ್ಧ ಶತಮಾನಕ್ಕಿಂತ ಹೆಚ್ಚು ವರ್ಷಗಳಿಂದ ಉತ್ತಮ ಗುಣಮಟ್ಟದ ಪ್ರೌಢ ಶಿಕ್ಷಣವನ್ನು ಒದಗಿಸುತ್ತಿರುವ ಯಲ್ದೂರಿನ ನ್ಯಾಷನಲ್ ಹೈಸ್ಕೂಲ್ ತನ್ನ ಗತವೈಭವವನ್ನು ಪಡೆಯಲು ಶಾಲೆಯ ಹಳೆಯ ವಿದ್ಯಾರ್ಥಿಗಳ ಸಲಹೆ ಸೂಚನೆಗಳನ್ನು ಪಡೆದುಕೊಳ್ಳುವ ಉದ್ದೇಶದಿಂದ ದಿನಾಂಕ /27/08/2023 ಭಾನುವಾರ ಹಮ್ಮಿಕೊಂಡಿರುವ ಪ್ರತಿಭಾ ಪುರಸ್ಕಾರ ಹಾಗೂ ನೂತನ ಆಡಳಿತ ಮಂಡಳಿಯ ಸನ್ಮಾನ ಸಮಾರಂಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಶಾಲಾ ನಿರ್ವಹಣಾ ಸಮಿತಿಯ ಅಧ್ಯಕ್ಷರು ಹಾಗೂ ವಿಟಿಯು ವಿಶ್ರಾಂತ ಕುಲಪತಿ ಮತ್ತು ಪ್ರಾಧ್ಯಾಪಕರು ಆದ ಡಾ. ಹೆಚ. ಎನ್. ಜಗನ್ನಾಥರೆಡ್ಡಿ ತಿಳಿಸಿದರು. 

 ಅವರು ಪ್ರತಿಭಾ ಪುರಸ್ಕಾರದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಾ,  ಅಂದಿನ ಕಾರ್ಯಕ್ರಮದಲ್ಲಿ ದಿ. ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ಕರ್ನಾಟಕದ ನೂತನ ಅಧ್ಯಕರಾದ ಡಾ. ಹೆಚ್. ಎನ್. ಸುಬ್ರಹ್ಮಣ್ಯಂ, ಗೌರವ ಕಾರ್ಯದರ್ಶಿಗಳಾದ ವಿ. ವೆಂಕಟಶಿವಾರೆಡ್ಢಿ, ಬಿ. ಎಸ್. ಅರುಣ್ ಕುಮಾರ್, ಮುಖ್ಯ  ಅತಿಥಿಗಳಾಗಿ ಶಾಸಕರಾದ ಜಿ. ಕೆ. ವೆಂಕಟಶಿವಾರೆಡ್ಡಿಯವರು ಭಾಗವಹಿಸುತ್ತಿದ್ದು ಹಳೆಯ ವಿದ್ಯಾರ್ಥಿಗಳು ಭಾಗವಹಿಸಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸಬೇಕೆಂದು ಕೋರಿದರು.

 ಈ ಸಂದರ್ಭದಲ್ಲಿ ಶಾಲಾ ಸಮಿತಿಯ ಸದಸ್ಯರಾದ ಕೆ. ಟಿ. ಜಯಣ್ಣ, ರಮೇಶ್ ಬಾಬು, ಎನ್. ಹರಿಕುಮಾರ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಜಿ. ಎನ್. ಕೋದಂಡರಾಮಯ್ಯ, ಸದಸ್ಯ ಕೆ. ಎಲ್. ರಾಜೇಂದ್ರ, ಮಾಜಿ ಸದಸ್ಯ ಯಲ್ದೂರು ಮಣಿ, ಶಾಲಾ ಮುಖ್ಯ ಶಿಕ್ಷಕ ಹೆಚ್.ಸಿ. ಗುರುಲಿಂಗಾರಾಧ್ಯ ನಿವೃತ್ತ ಮುಖ್ಯ ಶಿಕ್ಷಕರಾದ ಕೆ. ಪ್ರಕಾಶಯ್ಯ, ಕೆ. ಪಿ. ಕೃಷ್ಣಪ್ಪ ಇನ್ನೂ ಮುಂತಾದವರು ಹಾಜರಿದ್ದರು.

ಮೂಡ್ಲಕಟ್ಟೆ: ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ / ಕಾಮರ್ಸ್ ಕಾಲೇಜಿನಲ್ಲಿ “ದೀಕ್ಷಾರಂಭ” ಕಾರ್ಯಕ್ರಮದಲ್ಲಿ “ಸೈಬರ್ ಭದ್ರತೆ” ಕಾರ್ಯಾಗಾರ

ಕುಂದಾಪುರ: ಅಗಸ್ಟ್ 24: ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಕಾಲೇಜು ಮೂಡ್ಲಕಟ್ಟೆ, ಕುಂದಾಪುರದಲ್ಲಿ ಪ್ರಥಮ
ಪದವಿ ವರ್ಷದ ವಿದ್ಯಾರ್ಥಿಗಳ “ದೀಕ್ಷಾರಂಭ” ಕಾರ್ಯಕ್ರಮದ ಅಂಗವಾಗಿ “ಪೃಥ್ವಿ ವಿಷನ್” ಸಂಸ್ಥಾಪಕರು, ಹಾಗೂ ಸೈಬರ್
ಭದ್ರತಾ ಸಲಹೆಗಾರರಾದ ಶ್ರೀಯುತ ಪೃಥ್ವೀಶ್ ಕೆ. ಯವರ ನೇತೃತ್ವದಲ್ಲಿ “ಸೈಬರ್ ಭದ್ರತೆ”ಯ ಕುರಿತು ಕಾರ್ಯಗಾರವು
ನೆರವೇರಿತು.
ವಿದ್ಯಾರ್ಥಿಗಳಿಗೆ ಸೈಬರ್ ಭದ್ರತೆಯಲ್ಲಿನ ಜ್ಞಾನವನ್ನು ಸಶಕ್ತಗೊಳಿಸುವತ್ತ ಗಮನಹರಿಸುವ ಮತ್ತು ಅಪರಾಧ, ಡೇಟಾ ಮತ್ತು
ಹಣಕಾಸಿನ ವಂಚನೆಗಳ ವಿರುದ್ಧ ವೈಯಕ್ತಿಕವಾಗಿ ಹೇಗೆ ಕಾರ್ಯನಿರ್ವಹಿಸಬೇಕೆಂಬುದರ ಕುರಿತು ಕಾರ್ಯಗಾರದಲ್ಲಿ ವಿವರವಾಗಿ
ತಿಳಿಸಿದರು.

ಕುಂದಾಪುರ ಶ್ರೀ ವರಮಹಾಲಕ್ಷ್ಮೀ ವೃತಾಚರಣೆ

ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತಾಚರಣೆ, ಧಾರ್ಮಿಕ ಕಾರ್ಯಕ್ರಮಗಳು ನೂರಾರು ಮಹಿಳೆಯರ ಭಾಗವಹಿಸುವಿಕೆಯಲ್ಲಿ ಸಂಭ್ರಮದಿಂದ ನಡೆಯಿತು.

ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕøತಿ ಉಳಿವಿಗೆ ಸರ್ಕಾರ ಹಾಗೂ ಸಾರ್ವಜನಿಕರು ವಿಶೇಷ ಗಮನ ನೀಡಬೇಕು: ಎ.ಎ.ವೆಂಕಟೇಶ್

ಶ್ರೀನಿವಾಸಪುರ:ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕøತಿ ಉಳಿವಿಗೆ ಸರ್ಕಾರ ಹಾಗೂ ಸಾರ್ವಜನಿಕರು ವಿಶೇಷ ಗಮನ ನೀಡಬೇಕು ಎಂದು ಅವಗಾನಹಳ್ಳಿ ಕರಿಬೆಟ್ಟ ತಾತಯ್ಯ ಕನ್ನಡ ಕಲಾವಿದರ ಟ್ರಸ್ಟ್ ಅಧ್ಯಕ್ಷ ಎ.ಎ.ವೆಂಕಟೇಶ್ ಹೇಳಿದರು.
ತಾಲ್ಲೂಕಿನ ಅವಗಾನಹಳ್ಳಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಸ್ಥಳೀಯ ಕರಿಬೆಟ್ಟ ತಾತಯ್ಯ ಕನ್ನಡ ಕಲಾವಿದರ ಟ್ರಸ್ಟ್ ವತಿಯಿಂದ ಈಚೆಗೆ ಏರ್ಪಡಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಟಿವಿ, ಸಿನಿಮಾ ಹಾಗೂ ಮೊಬೈಲ್ ಪ್ರಭಾವದಿಂದ ಗ್ರಾಮೀಣ ಕಲೆಗಳು ಅವನತಿಯ ಹಾದಿ ಹಿಡಿದಿವೆ. ಗ್ರಾಮೀಣ ಪ್ರದೇಶದ ವಿದ್ಯಾವಂತ ಯುವ ಸಮುದಾಯ ಜಾನಪದ ಸಂಸ್ಕøತಿಗೆ ಬೆನ್ನುತೋರಿಸಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಹೇಳಿದರು.
ಕೋಡಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೆಡ್ಡಮ್ಮ ಶ್ರೀನಿವಾಸ್ ಮಾತನಾಡಿ, ಕನ್ನಡ ಸಂಸ್ಕøತಿ ಇಲಾಖೆ ಗ್ರಾಮೀಣ ಸೊಗಡು ರಕ್ಷಣೆಗೆ ಪೂರಕವಾದ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿರುವುದು ಸಂತೋಷದ ಸಂಗತಿಯಾಗಿದೆ. ತಾಲ್ಲೂಕಿನಲ್ಲಿ ಅವಗಾನಹಳ್ಳಿ ಒಂದು ಸಾಂಸ್ಕøತಿಕ ಕೇಂದ್ರವಾಗಿದ್ದು, ಹೆಚ್ಚಿನ ಸಂಖ್ಯೆಯ ಜಾನಪದ ಕಲಾವಿದರಿದ್ದಾರೆ. ಗ್ರಾಮಸ್ಥರು ಕಲಾ ಪೋಷಕರಾಗಿ ಗಮನ ಸೆಳೆದಿದ್ದಾರೆ ಎಂದು ಹೇಳಿದರು.
ಜಾನಪದ ಕಲಾವಿದರಾದ ಜಿ.ಮುನಿರೆಡ್ಡಿ, ಗುರು ಹಾಗೂ ರಾಮಲಕ್ಷ್ಮಮ್ಮ ತಂಡದ ವತಿಯಿಂದ ಜಾನಪದ ಗೀತೆಗಳ ಗಾಯನ, ತತ್ವಪದಗಳ ಗಾಯನ ಹಾಗೂ ಬುರ್ರಕಥಾ ಪ್ರದರ್ಶನ ಏರ್ಪಡಿಸಲಾಗಿತ್ತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮುನಿಯಮ್ಮ, ವೆಂಕಟರವಣ, ಲಕ್ಷ್ಮಮ್ಮ, ಮುನಿವೆಂಕಟಮ್ಮ, ಶ್ರೀನಿವಾಸಪ್ಪ ಇದ್ದರು.

Annual feast of Our Lady of Assumption Church Hiriyur, Chitradurga District, Diocese of Shimoga /ಅವರ್ ಲೇಡಿ ಆಫ್ ಅಸಂಪ್ಷನ್ ಚರ್ಚ್ ಹಿರಿಯೂರು, ಚಿತ್ರದುರ್ಗ ಜಿಲ್ಲೆ, ಶಿವಮೊಗ್ಗ ಧರ್ಮಪ್ರಾಂತ್ಯದ ವಾರ್ಷಿಕ ಹಬ್ಬ

Chitradurga, Hiriyur, August 18, 2023: Our Lady of Assumption Church, Hiriyur belonging to Chitradurga district in the Diocese of Shimoga, celebrated its annual feast on Friday, 18th August 2023.

Feast preparations began with three days renewal retreat from August 11th to 13th, 2023 preached by Rev. Fr Roman Pinto, Parish Priest of St. Francis Xavier’s Church, Kable.

Triduum began on August 15th. Program began at 6pm. Parish Priest Fr Franklin D’Souza blessed the Chariot. Then

there was Rosary with Procession with the Marian flag and Novena. At 6:30pm Rev. Fr Richard Pais, Director of Karnataka Regional Social Service (KROSS), Bengaluru blessed the flag of Our Lady and hoisted the flag. 

At 7pm Holy Eucharist celebrated by Rev. Fr Maxim Dias (Diocese of Bellary) – Karnataka Regional Director for Proclamation& Evangelization as well as SCC. Rev. Fr Richard Pais (Diocese ofShimoga) – Director of the KROSS preached the homily on the theme: “Ruth, role model for the family”. He said that family should be “rooted in Christ” (Colotians 2:6). He gave examples of biblical families, how they obeyed God. He spoke on the example of Ruth and Navomi. He gave practical suggestions on how we need to strengthen family values in today’s context. 

August 16th, second day’s Novena began at 6:30pm with Rosary procession. Then Parish Priest Rev. Fr Franklin D’Souza led the Novena. 

At 7pm Rev. Fr Lancy Barthalomeo D’Souza, Parish Priest of Our Lady of Immaculate Conception Church, Newtown, Bhadravati celebrated the Holy Eucharist and preached on the theme: “Esther is the inspiration to face the difficulties & turbulent situation in life”. 

He called the faithful not to give up in the difficult situations. We should have faith & confidence like Queen Easter. He explained with the help of God, how she saved her people from the hands of wicked Haaman. How God saved Mordakai and his clan. He also said that we have a queen that is; Our Lady of Assumption she courageously faced all the troubles with the faith. 

He also said that for us power comes from the Word of God. Through the power of the Word of God we can win over any situation through faith & Prayer.

End of the Mass Parish Priest Fr Franklin D’Souza felicitated Rev. Fr Lancy Barthalomeo D’Souza as he is in the year of his Priestly Ordination Silver Jubilee. 

Parish Council members honoured him with Shawl, garland, Mysore Peta and a gift. 

August 17th, third day’s Novena a began at 6:30pm with St. Mary’s Road Rosary procession, Mary Road Chariot was taken to thank Our Lady of Assumption by the Assumption ICYM youth as it was tradition of the Parish. Then Parish Priest Rev. Fr Franklin D’Souza led the Novena. 

At 8pm Rev. Fr Stephen Maxi Albuquerque, Parish Priest of Our Lady of Lourdes Church, Tirthahalli, celebrated the Holy Eucharist and preached on the theme: “Susana, is the inspiration to lead a life of holiness”.

He spoke on the importance of holiness and challenges that we face when we lead a life of holiness. He gave the example of St. Agnes as our role model. He,also connected the message with Blessed Virgin Mary. 

End of the Mass Parish Priest Fr Franklin D’Souza felicitated Rev. Fr Stephen Maxi Albuquerque as he is in the year of his Priestly Ordination Silver Jubilee. 

Fr Franklin D’Souza and Fr Nelson D’Souza together with the Parish Council members honoured him with Shawl, garland, Mysore Peta and a gift. 

On August 18th at 9:30am Parishioners received the Most Rev. Dr. Francis Serrao Sj Bishop of Diocese of Shimoga at Hospital Circle and welcomed him with a small procession together with the band.

At 10am Bishop Francis Serrao Sj concelebrated the festal Holy Eucharist with 13 priests. Among them Rev. Fr K. A. George Dean of Little Flower Deanery, Rev. Fr Richard Anil D’Souza Dean of Holy Family Deanery were present. A large number of faithful and religious witnessed the thanksgiving Holy Eucharist. In his homily Bishop spoke on “All generations will call me blessed” Luke 1:48. He invited the faithful to take her as their role model. Rev. Fr Nelson D’Souza and Rev. Fr Stephen Maxi Albuquerque led the choir.

At the end Parish Priest Fr Franklin D’Souza thanked everyone. Honoured the donors with candles and for every SCC unit blessed candles were distributed.

Evening at 6pm there was a chariot procession as the culmination of the Church feast. Parish Priest Rev. Fr FranklinD’Souza blessed the Chariot. Procession began at 7pm. Hundreds of faithful and other people witnessed the mega event of procession. It took almost two and half hours.

After the procession Parish Priest Rev. Fr Franklin D’Souza led the thanksgiving adoration and benediction. 

ಅವರ್ ಲೇಡಿ ಆಫ್ ಅಸಂಪ್ಷನ್ ಚರ್ಚ್ ಹಿರಿಯೂರು, ಚಿತ್ರದುರ್ಗ ಜಿಲ್ಲೆ, ಶಿವಮೊಗ್ಗ ಧರ್ಮಪ್ರಾಂತ್ಯದ ವಾರ್ಷಿಕ ಹಬ್ಬ

ಚಿತ್ರದುರ್ಗ, ಹಿರಿಯೂರು, ಆಗಸ್ಟ್ 18, 2023: ಶಿವಮೊಗ್ಗ ಧರ್ಮಪ್ರಾಂತ್ಯದ ಚಿತ್ರದುರ್ಗ ಜಿಲ್ಲೆಗೆ ಸೇರಿದ ಹಿರಿಯೂರಿನ ಅವರ್ ಲೇಡಿ ಆಫ್ ಅಸಂಪ್ಷನ್ ಚರ್ಚ್ ತನ್ನ ವಾರ್ಷಿಕ ಹಬ್ಬವನ್ನು ಶುಕ್ರವಾರ, 18 ಆಗಸ್ಟ್ 2023 ರಂದು ಆಚರಿಸಿತು.

2023 ರ ಆಗಸ್ಟ್ 11 ರಿಂದ 13 ರವರೆಗೆ ಮೂರು ದಿನಗಳ ನವೀಕರಣದ ಹಿಮ್ಮೆಟ್ಟುವಿಕೆಯೊಂದಿಗೆ ಹಬ್ಬದ ಸಿದ್ಧತೆಗಳು ಪ್ರಾರಂಭವಾದವು, ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್, ಕೇಬಲ್ನ ಪ್ಯಾರಿಷ್ ಪಾಧರ್ ರೆವ.

ಟ್ರಿಡೂಮ್ ಆಗಸ್ಟ್ 15 ರಂದು ಪ್ರಾರಂಭವಾಯಿತು. ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಯಿತು. ಧರ್ಮಗುರು ಫ್ರಾಂಕ್ಲಿನ್ ಡಿಸೋಜ ರಥೋತ್ಸವಕ್ಕೆ ಆಶೀರ್ವಚನ ನೀಡಿದರು. ನಂತರ

ಮರಿಯನ್ ಧ್ವಜ ಮತ್ತು ನೊವೆನಾದೊಂದಿಗೆ ಮೆರವಣಿಗೆಯೊಂದಿಗೆ ರೋಸರಿ ಇತ್ತು. ಸಂಜೆ 6:30ಕ್ಕೆ ಬೆಂಗಳೂರಿನ ಕರ್ನಾಟಕ ಪ್ರಾದೇಶಿಕ ಸಮಾಜ ಸೇವಾ (KROSS) ನಿರ್ದೇಶಕ ರೆ.ಫಾ.ರಿಚರ್ಡ್ ಪೈಸ್ ಅವರು ಮಾತೆಯ ಧ್ವಜಾರೋಹಣ ನೆರವೇರಿಸಿ ಧ್ವಜಾರೋಹಣ ನೆರವೇರಿಸಿದರು.

ಸಂಜೆ 7 ಗಂಟೆಗೆ ಪವಿತ್ರ ಯೂಕರಿಸ್ಟ್ ಅನ್ನು ಆಚರಿಸಲಾಗುತ್ತದೆ. ಫಾದರ್ ಮ್ಯಾಕ್ಸಿಮ್ ಡಯಾಸ್ (ಬಳ್ಳಾರಿ ಡಯಾಸಿಸ್) – ಕರ್ನಾಟಕ ಪ್ರಾದೇಶಿಕ ನಿರ್ದೇಶಕರು ಘೋಷಣೆ ಮತ್ತು ಸುವಾರ್ತಾಬೋಧನೆ ಹಾಗೂ SCC. Rev. Fr Richard Pais (Docese of Shimoga) – KROSS ನ ನಿರ್ದೇಶಕರು “ರೂತ್, ಕುಟುಂಬಕ್ಕೆ ಮಾದರಿ” ಎಂಬ ವಿಷಯದ ಮೇಲೆ ಧರ್ಮೋಪದೇಶವನ್ನು ಬೋಧಿಸಿದರು. ಕುಟುಂಬವು “ಕ್ರಿಸ್ತನಲ್ಲಿ ಬೇರೂರಿದೆ” ಎಂದು ಅವರು ಹೇಳಿದರು (ಕೊಲೊಟಿಯನ್ಸ್ 2:6). ಅವರು ಬೈಬಲ್ನ ಕುಟುಂಬಗಳ ಉದಾಹರಣೆಗಳನ್ನು ನೀಡಿದರು, ಅವರು ದೇವರಿಗೆ ಹೇಗೆ ವಿಧೇಯರಾಗಿದ್ದಾರೆ. ರೂತ್ ಮತ್ತು ನವೋಮಿಯ ಉದಾಹರಣೆಯ ಕುರಿತು ಅವರು ಮಾತನಾಡಿದರು. ಇಂದಿನ ಸಂದರ್ಭದಲ್ಲಿ ನಾವು ಕೌಟುಂಬಿಕ ಮೌಲ್ಯಗಳನ್ನು ಹೇಗೆ ಬಲಪಡಿಸಬೇಕು ಎಂಬುದರ ಕುರಿತು ಪ್ರಾಯೋಗಿಕ ಸಲಹೆಗಳನ್ನು ನೀಡಿದರು.

ಆಗಸ್ಟ್ 16, ಎರಡನೇ ದಿನದ ನೊವೆನಾ ಸಂಜೆ 6:30 ಕ್ಕೆ ಜಪಮಾಲೆ ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು. ನಂತರ ಪ್ಯಾರಿಷ್ ಪ್ರೀಸ್ಟ್ ರೆ.ಫಾ.ಫ್ರಾಂಕ್ಲಿನ್ ಡಿ’ಸೋಜಾ ಅವರು ನೊವೆನಾಗೆ ಚಾಲನೆ ನೀಡಿದರು.

ಸಂಜೆ 7 ಗಂಟೆಗೆ ಭದ್ರಾವತಿಯ ನ್ಯೂಟೌನ್‌ನ ಅವರ್ ಲೇಡಿ ಆಫ್ ಇಮ್ಯಾಕ್ಯುಲೇಟ್ ಕಾನ್ಸೆಪ್ಶನ್ ಚರ್ಚ್‌ನ ಪ್ಯಾರಿಷ್ ಪ್ರೀಸ್ಟ್ ರೆ.ಫಾ. ಲ್ಯಾನ್ಸಿ ಬಾರ್ತಲೋಮಿಯೋ ಡಿಸೋಜ ಅವರು ಪವಿತ್ರ ಯೂಕರಿಸ್ಟ್ ಅನ್ನು ಆಚರಿಸಿದರು ಮತ್ತು “ಜೀವನದಲ್ಲಿನ ಕಷ್ಟಗಳು ಮತ್ತು ಪ್ರಕ್ಷುಬ್ಧ ಪರಿಸ್ಥಿತಿಯನ್ನು ಎದುರಿಸಲು ಎಸ್ತರ್ ಸ್ಫೂರ್ತಿ” ಎಂಬ ವಿಷಯದ ಕುರಿತು ಬೋಧಿಸಿದರು.

ಕಷ್ಟದ ಪರಿಸ್ಥಿತಿಯಲ್ಲಿ ನಿಷ್ಠಾವಂತರು ಎದೆಗುಂದಬೇಡಿ ಎಂದು ಕರೆ ನೀಡಿದರು. ರಾಣಿ ಈಸ್ಟರ್‌ನಂತೆ ನಾವು ನಂಬಿಕೆ ಮತ್ತು ವಿಶ್ವಾಸವನ್ನು ಹೊಂದಿರಬೇಕು. ದುಷ್ಟ ಹಾಮಾನನ ಕೈಯಿಂದ ಅವಳು ತನ್ನ ಜನರನ್ನು ಹೇಗೆ ರಕ್ಷಿಸಿದಳು ಎಂಬುದನ್ನು ಅವನು ದೇವರ ಸಹಾಯದಿಂದ ವಿವರಿಸಿದನು. ದೇವರು ಮೊರ್ಡಕೈ ಮತ್ತು ಅವನ ಕುಲವನ್ನು ಹೇಗೆ ರಕ್ಷಿಸಿದನು. ನಮಗೆ ಒಬ್ಬ ರಾಣಿ ಇದ್ದಾಳೆ ಎಂದೂ ಹೇಳಿದನು; ಅವರ್ ಲೇಡಿ ಆಫ್ ಅಸಂಪ್ಷನ್ ಅವರು ನಂಬಿಕೆಯೊಂದಿಗೆ ಎಲ್ಲಾ ತೊಂದರೆಗಳನ್ನು ಧೈರ್ಯದಿಂದ ಎದುರಿಸಿದರು.

ನಮಗೆ ಶಕ್ತಿಯು ದೇವರ ವಾಕ್ಯದಿಂದ ಬರುತ್ತದೆ ಎಂದೂ ಅವರು ಹೇಳಿದರು. ದೇವರ ವಾಕ್ಯದ ಶಕ್ತಿಯ ಮೂಲಕ ನಾವು ನಂಬಿಕೆ ಮತ್ತು ಪ್ರಾರ್ಥನೆಯ ಮೂಲಕ ಯಾವುದೇ ಪರಿಸ್ಥಿತಿಯನ್ನು ಗೆಲ್ಲಬಹುದು.

ಮಾಸ್ ಪ್ಯಾರಿಷ್‌ನ ಕೊನೆಯಲ್ಲಿ ಧರ್ಮಗುರು ಫ್ರಾಂಕ್ಲಿನ್ ಡಿಸೋಜ ಅವರು ರೆ.ಫಾ.ಲ್ಯಾನ್ಸಿ ಬಾರ್ತಲೋಮಿಯೊ ಡಿಸೋಜಾ ಅವರು ತಮ್ಮ ಪೌರೋಹಿತ್ಯದ ರಜತ ಮಹೋತ್ಸವದ ವರ್ಷದಲ್ಲಿರುವುದರಿಂದ ಅವರನ್ನು ಸನ್ಮಾನಿಸಿದರು.

ಪಾಲಿಕೆ ಸದಸ್ಯರು ಶಾಲು ಹೊದಿಸಿ, ಹಾರ, ಮೈಸೂರು ಪೇಟ ನೀಡಿ ಸನ್ಮಾನಿಸಿದರು.

ಆಗಸ್ಟ್ 17 ರಂದು, ಮೂರನೇ ದಿನದ ನೊವೆನಾವು ಸಂಜೆ 6:30 ಕ್ಕೆ ಸೇಂಟ್ ಮೇರಿಸ್ ರೋಡ್ ರೋಸರಿ ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು, ಮೇರಿ ರೋಡ್ ರಥವನ್ನು ಪ್ಯಾರಿಷ್‌ನ ಸಂಪ್ರದಾಯದಂತೆ ಅಸಂಪ್ಷನ್ ಐಸಿವೈಎಂ ಯುವಕರು ಅವರ್ ಲೇಡಿ ಆಫ್ ಅಸಂಪ್ಷನ್‌ಗೆ ಧನ್ಯವಾದ ಅರ್ಪಿಸಲು ಕರೆದೊಯ್ಯಲಾಯಿತು. ನಂತರ ಪ್ಯಾರಿಷ್ ಪ್ರೀಸ್ಟ್ ರೆ.ಫಾ.ಫ್ರಾಂಕ್ಲಿನ್ ಡಿ’ಸೋಜಾ ಅವರು ನೊವೆನಾಗೆ ಚಾಲನೆ ನೀಡಿದರು.

ರಾತ್ರಿ 8 ಗಂಟೆಗೆ ತೀರ್ಥಹಳ್ಳಿಯ ಅವರ್ ಲೇಡಿ ಆಫ್ ಲೂರ್ಡ್ಸ್ ಚರ್ಚ್‌ನ ಪ್ಯಾರಿಷ್ ಅರ್ಚಕ ರೆ.ಫಾ. ಸ್ಟೀಫನ್ ಮ್ಯಾಕ್ಸಿ ಅಲ್ಬುಕರ್ಕ್ ಅವರು ಪವಿತ್ರ ಯೂಕರಿಸ್ಟ್ ಅನ್ನು ಆಚರಿಸಿದರು ಮತ್ತು “ಸುಸಾನಾ, ಪವಿತ್ರತೆಯ ಜೀವನವನ್ನು ನಡೆಸಲು ಸ್ಫೂರ್ತಿ” ಎಂಬ ವಿಷಯದ ಕುರಿತು ಬೋಧಿಸಿದರು.

ಪವಿತ್ರತೆಯ ಮಹತ್ವ ಮತ್ತು ನಾವು ಪಾವಿತ್ರ್ಯದ ಜೀವನವನ್ನು ನಡೆಸಿದಾಗ ನಾವು ಎದುರಿಸುವ ಸವಾಲುಗಳ ಕುರಿತು ಅವರು ಮಾತನಾಡಿದರು. ಅವರು ನಮಗೆ ಮಾದರಿ ಎಂದು ಸೇಂಟ್ ಆಗ್ನೆಸ್ ಉದಾಹರಣೆ ನೀಡಿದರು. ಅವರು, ಪೂಜ್ಯ ವರ್ಜಿನ್ ಮೇರಿಯೊಂದಿಗೆ ಸಂದೇಶವನ್ನು ಸಂಪರ್ಕಿಸಿದರು.

ಮಾಸ್ ಪ್ಯಾರಿಷ್‌ನ ಅಂತ್ಯದಲ್ಲಿ ಧರ್ಮಗುರು ಫ್ರಾಂಕ್ಲಿನ್ ಡಿಸೋಜ ಅವರು ರೆವ. ಫಾ. ಸ್ಟೀಫನ್ ಮ್ಯಾಕ್ಸಿ ಅಲ್ಬುಕರ್ಕ್ ಅವರ ಪುರೋಹಿತರ ದೀಕ್ಷೆಯ ರಜತ ಮಹೋತ್ಸವದ ವರ್ಷದಲ್ಲಿ ಅವರನ್ನು ಸನ್ಮಾನಿಸಿದರು.

ಫ್ರಾಂಕ್ಲಿನ್ ಡಿಸೋಜಾ ಮತ್ತು ಫಾದರ್ ನೆಲ್ಸನ್ ಡಿಸೋಜ ಅವರು ಪ್ಯಾರಿಷ್ ಕೌನ್ಸಿಲ್ ಸದಸ್ಯರು ಶಾಲು ಹೊದಿಸಿ, ಹಾರ, ಮೈಸೂರು ಪೇಟ ಮತ್ತು ಉಡುಗೊರೆ ನೀಡಿ ಗೌರವಿಸಿದರು.

ಆಗಸ್ಟ್ 18 ರಂದು ಬೆಳಿಗ್ಗೆ 9:30 ಕ್ಕೆ ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ ಅವರನ್ನು ಆಸ್ಪತ್ರೆಯ ವೃತ್ತದಲ್ಲಿ ಧರ್ಮಸ್ಥಳದವರು ಸ್ವಾಗತಿಸಿದರು ಮತ್ತು ವಾದ್ಯವೃಂದದೊಂದಿಗೆ ಸಣ್ಣ ಮೆರವಣಿಗೆಯೊಂದಿಗೆ ಅವರನ್ನು ಸ್ವಾಗತಿಸಿದರು.

ಬೆಳಿಗ್ಗೆ 10 ಗಂಟೆಗೆ ಬಿಷಪ್ ಫ್ರಾನ್ಸಿಸ್ ಸೆರಾವೊ ಎಸ್ಜೆ ಅವರು 13 ಪಾದ್ರಿಗಳೊಂದಿಗೆ ಹಬ್ಬದ ಪವಿತ್ರ ಯೂಕರಿಸ್ಟ್ ಅನ್ನು ಆಚರಿಸಿದರು. ಈ ವೇಳೆ ಲಿಟ್ಲ್ ಫ್ಲವರ್ ಡೀನರಿಯ ರೆ.ಫಾ.ಕೆ.ಎ.ಜಾರ್ಜ್ ಡೀನ್, ಹೋಲಿ ಫ್ಯಾಮಿಲಿ ಡೀನ್ ರೆ.ಫಾ.ರಿಚರ್ಡ್ ಅನಿಲ್ ಡಿಸೋಜ ಉಪಸ್ಥಿತರಿದ್ದರು. ಅಪಾರ ಸಂಖ್ಯೆಯ ನಿಷ್ಠಾವಂತರು ಮತ್ತು ಧಾರ್ಮಿಕರು ಕೃತಜ್ಞತಾ ಸಮರ್ಪಣೆಗೆ ಸಾಕ್ಷಿಯಾದರು. ಬಿಷಪ್ ತನ್ನ ಧರ್ಮೋಪದೇಶದಲ್ಲಿ “ಎಲ್ಲಾ ತಲೆಮಾರುಗಳು ನನ್ನನ್ನು ಧನ್ಯ ಎಂದು ಕರೆಯುತ್ತಾರೆ” ಲ್ಯೂಕ್ 1:48. ಅವಳನ್ನು ತಮ್ಮ ರೋಲ್ ಮಾಡೆಲ್ ಆಗಿ ತೆಗೆದುಕೊಳ್ಳುವಂತೆ ಅವರು ನಿಷ್ಠಾವಂತರನ್ನು ಆಹ್ವಾನಿಸಿದರು. ರೆ.ಫಾ.ನೆಲ್ಸನ್ ಡಿಸೋಜಾ ಮತ್ತು ಫಾದರ್ ಸ್ಟೀಫನ್ ಮ್ಯಾಕ್ಸಿ ಅಲ್ಬುಕರ್ಕ್ ಅವರು ಗಾಯನವನ್ನು ಮುನ್ನಡೆಸಿದರು.

ಕೊನೆಯಲ್ಲಿ ಧರ್ಮಗುರು ಫ್ರಾಂಕ್ಲಿನ್ ಡಿಸೋಜ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ದಾನಿಗಳಿಗೆ ಮೇಣದಬತ್ತಿಗಳನ್ನು ನೀಡಿ ಗೌರವಿಸಲಾಯಿತು ಮತ್ತು ಪ್ರತಿ ಎಸ್‌ಸಿಸಿ ಘಟಕಕ್ಕೆ ಆಶೀರ್ವಾದದ ಮೇಣದಬತ್ತಿಗಳನ್ನು ವಿತರಿಸಲಾಯಿತು.

ಸಂಜೆ 6 ಗಂಟೆಗೆ ಚರ್ಚ್ ಹಬ್ಬದ ಪ್ರಯುಕ್ತ ರಥೋತ್ಸವ ಜರುಗಿತು. ಧರ್ಮಗುರು ವಂದನೀಯ ಫ್ರಾಂಕ್ಲಿನ್ ಡಿಸೋಜ ರಥೋತ್ಸವಕ್ಕೆ ಆಶೀರ್ವಚನ ನೀಡಿದರು. ಸಂಜೆ 7 ಗಂಟೆಗೆ ಮೆರವಣಿಗೆ ಆರಂಭವಾಯಿತು. ನೂರಾರು ಭಕ್ತಾದಿಗಳು ಮತ್ತು ಇತರ ಜನರು ಮೆರವಣಿಗೆಯ ಬೃಹತ್ ಕಾರ್ಯಕ್ರಮವನ್ನು ವೀಕ್ಷಿಸಿದರು. ಇದು ಸುಮಾರು ಎರಡೂವರೆ ಗಂಟೆಗಳನ್ನು ತೆಗೆದುಕೊಂಡಿತು.

ಮೆರವಣಿಗೆಯ ನಂತರ ಪ್ಯಾರಿಷ್ ಪ್ರೀಸ್ಟ್ ರೆ.ಫಾ.ಫ್ರಾಂಕ್ಲಿನ್ ಡಿಸೋಜ ಅವರು ಕೃತಜ್ಞತಾ ಆರಾಧನೆ ಮತ್ತು ಆಶೀರ್ವಾದವನ್ನು ನಡೆಸಿದರು.

The inauguration of orientation programme for  the first year students “Deeksharamba”

Kundapur,August 23: The inauguration of orientation programme for the first year students

“Deeksharamba” was held at IMJ Institute of Science & Commerce, Moodlakatte, Kundapur.

“Parents always wish for their child’s overall development and each child should be adequately educated to realize his/her special strengths.

Also, to learn, students should first have diligence and interest.

Only then, they can reach their goal.” said the chief guest,Mr. CA Muralidhara Kini, Practicing Chartered Accountant, Manipal.

Speaking on the occasion, the guest of honour , Professor Ramakrishna B G, Principal of Government P U College, Kundapur said “With the mission of preserving our rich heritage, IMJ institute of Science& Commerce is an institution that has a very conducive environment for pursuing education.” He also said that only marks do not define our life, there is a need for qualitative education.

Dr. Pratibha M Patel ,Principal of IMJISC ,presided over the programme and opined, “Education is needed to make one’s life more meaningful. Life becomes a success only when you try and find answers to the queries that arise in your minds about life’s layout . A student should keep the mission of learning alive in him/her while prioritising their lives with values.”

She also emphasised The call of the hour is that youth of today should develop an eye to differentiate between right and wrong.”

Vice Principal Prof.Jaysheel Kumar,Head of BCA Department Swarna Rani were present on the occasion.

The Programme was conducted by Prof. Sumana, Head of Kannada Department. Prof.Pavana of English department introduced the dignitaries.

ಶ್ರೀನಿವಾಸಪುರ ಪಟ್ಟಣದ ಎಂಜಿ ರಸ್ತೆಯಲ್ಲಿ ಬೈಕ್‍ಗೆ ಲಾರಿ ಡಿಕ್ಕಿ – ಬೈಕ್ ಸವಾರ ಸ್ಥಳದಲ್ಲಿಯೇ ಸಾವು

This image has an empty alt attribute; its file name is Screenshot-1064-1024x624.jpg

ಶ್ರೀನಿವಾಸಪುರ: ಪಟ್ಟಣದ ಎಂಜಿ ರಸ್ತೆಯಲ್ಲಿ ಬೈಕ್‍ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.
ಪಟ್ಟಣದ ರಕ್ಷಿತ್ (30) ಮೃತ ವ್ಯಕ್ತಿ.
ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಪೊಲೀಸರು ಲಾರಿ ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

ಶ್ರೀನಿವಾಸಪುರ: ಪಟ್ಟಣದ ಹೊರವಲಯದ ಅರಣ್ಯದಲ್ಲಿ ಗುರುವಾರವೂ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಲಾಗಿದೆ

ಶ್ರೀನಿವಾಸಪುರ: ಪಟ್ಟಣದ ಹೊರವಲಯದ ಅರಣ್ಯದಲ್ಲಿ ಗುರುವಾರವೂ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಅರಣ್ಯ ಒತ್ತುವರಿ ಮಾಡಿಕೊಂಡು ಬೆಳೆಯಲಾಗಿದ್ದ ಮರಗಳನ್ನು ಜೆಸಿಬಿ ಬಳಸಿ ತೆರವುಗೊಳಿಸಲಾಯಿತು.
ತೆರವುಗೊಳಿಸಲಾದ ಪ್ರದೇಶದ ಸುತ್ತ ಕಂದಕ ನಿರ್ಮಾಣ ಹಾಗೂ ಮಾವಿನ ಮರ ತೆರವುಗೊಳಿಸಿದ ಪ್ರದೇಶದಲ್ಲಿ ನೇರಳೆ, ಆಲ, ಬಿದಿರು, ಶ್ರೀಗಂಧ, ಬೇವು ಮತ್ತಿತರ ಜಾತಿಯ ಗಿಡ ನೆಡುವ ಕಾರ್ಯ ಭರದಿಂದ ಸಾಗಿತ್ತು. ಅರಣ್ಯ ಇಲಾಖೆ ನೇಮಿಸಿಕೊಂಡಿರುವ ದೊಡ್ಡ ಸಂಖ್ಯೆಯ ಕೂಲಿ ಕಾರ್ಮಿಕರು ಗಿಡ ನೆಟ್ಟು ನೀರು ಹಾಕುವ ಕಾರ್ಯದಲ್ಲಿ ನಿರತರಾಗಿದ್ದರು.
‘ಇಂದು 120 ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಲಾಗಿದೆ. ನೆನ್ನೆ 150 ಎಕರೆ ಒತ್ತುವರಿ ತೆರವುಗೊಳಿಸಲಾಗಿತ್ತು. ಈವರೆಗೆ ಒಟ್ಟು 20 ಒತ್ತುವರಿದಾರರಿಗೆ ಸೇರಿದ 270 ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಲಾಗಿದೆ. ಮುಂದಿನ 15 ದಿನಗಳ ಕಾಲ ಒತ್ತುವರಿ ತೆರವುಗೊಳಿಸಲಾಗಿರುವ ಪ್ರದೇಶದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಗುವುದು. ಸುತ್ತಲೂ ಕಂದಕ ನಿರ್ಮಿಸಲಾಗುವುದು. ಅನಂತರ ತೆರವು ಕಾರ್ಯಾಚರಣೆ ಮುಂದುವರಿಸಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಕೆ.ಮಹೇಶ್ ತಿಳಿಸಿದರು.
ಪಟ್ಟಣದಿಂದ ವಾಹನಗಳಲ್ಲಿ ಬಂದು ರಸ್ತೆ ಬದಿಯಲ್ಲಿ ಗುಂಪು ಗುಂಪಾಗಿ ನಿಂತು ಮಾತನಾಡುತ್ತಿದ್ದ ಜನರನ್ನು ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಹೊರಗೆ ಕಳಿಸಿದರು. ಕಾರ್ಯಾಚರಣೆಗೆ ಯಾವುದೇ ತೊಡಕು ಉಂಟಾಗದಂತೆ ಎಚ್ಚರ ವಹಿಸಲಾಗಿತ್ತು.