ಶ್ರಿ ಕ್ಷೇತ್ರ ಧರ್ಮಾಧಿಕಾರಿಗಳ ತೇಜೋವಧೆ ಮಾಡಿದವರ ಮೇಲೆ ಕ್ರಮಕೈಗೊಳ್ಳಲು ಆಗ್ರಹ


ದಿನಾಂಕ 25.08.2023 ರಂದು ಕುಂದಾಪುರ ತಾಲೂಕಿನ ಶಾಸ್ತ್ರಿ ವೃತ್ತದಲ್ಲಿ ನಡೆದ ಸೌಜನ್ಯ ಪ್ರಕರಣದ
ಮರು ತನಿಖೆಗಾಗಿ ನಡೆದ ಜನಾಗ್ರಹ ಸಭೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ವ್ಯಯುಕ್ತಿಕ ತೇಜೋವಧೆ ಮಾಡಿರುವುದು ತೀರಾ ಖಂಡನೀಯವಾಗಿದೆ. ಶ್ರೀ ಮಹೇಶ್ ಶೆಟ್ಟಿ ತಿಮರೋಡಿಯವರು ಬಹಿರಂಗ ಸಭೆಯಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಅಸತ್ಯ ಮತ್ತು ದ್ವೇಷದ ಬೀಜ ಬಿತ್ತಿರುವುದು, ತಾವು ಹೇಳಿದ ಕಟ್ಟುಕತೆಯನ್ನೇ ಹಳ್ಳಿ ಹಳ್ಳಿಗಳಲ್ಲಿ ಅಪಪ್ರಚಾರ ಮಾಡುವಂತೆ ಜನರಿಗೆ ಸಾರ್ವಜನಿಕ ಕರೆ ಕೊಟ್ಟಿರುವುದು ಸಮಾಜದ ಶಾಂತಿ ಮತ್ತು ವ್ಯವಸ್ಥೆಯನ್ನು ಹಾಳುಮಾಡುವ ಕೃತ್ಯವಾಗಿದೆ ಹಾಗೂ ಆಧಾರರಹಿತವಾಗಿ ವ್ಯಯುಕ್ತಿಕ ನಿಂದನೆ, ಧಾರ್ಮಿಕ ನಿಂದನೆ ಕಾನೂನಾತ್ಮಕವಾಗಿ ಅಪರಾಧವಾಗಿದೆ. ಇವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.
ಈ ಸಭೆಯಲ್ಲಿ ಶ್ರೀ ವೀರೇಂದ್ರ ಹೆಗ್ಗಡೆರವರು ಹಾಗೂ ಧರ್ಮಸ್ಥಳದ ಬಗ್ಗೆ ಯಾವುದೇ ಅವಮಾನಕರ ಮತ್ತು ತೇಜೋವಧೆ ಮಾತುಗಳನ್ನಾಡದಂತೆ ನಿಬರ್ಂಧಿಸಬೇಕೆಂದು ಉಡುಪಿ ಜಿಲ್ಲಾ ಸುಪರಿಟೆಂಡೆಂಟ್ ಆಫ್ ಫೋಲಿಸ್ ಇವರಿಗೆ ಕುಂದಾಪುರ ಡಿ ವೈ ಎಸ್ ಪಿ ಬೆಳ್ಳಿಯಪ್ಪ ಮೂಲಕ ಮನವಿ ನೀಡಿದಾಗಲು ಸದ್ರಿ ಸಭೆಯಲ್ಲಿ ಪ್ರಚೋಧನಕಾರಿ ಹಾಗೂ ಅವಹೇಳನಕಾರಿಯಾಗಿ ಮಾತನಾಡಲು ಪೋಲಿಸ್ ಇಲಾಖೆ ಅವಕಾಶ ನೀಡಿರುವುದನ್ನು ತೀವೃವಾಗಿ ಖಂಡಿಸುತ್ತೇವೆ. ಯಾವುದೇ ರೀತಿಯಲ್ಲಿ ಕ್ಷೇತ್ರದ ವಿರುದ್ಧ ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡದಂತೆ ಕರ್ನಾಟಕ ಘನ ನ್ಯಾಯಾಲಯವು ನೀಡಿರುವ ಪ್ರತಿಬಂಧಕಾಜ್ಞೆಯನ್ನು ನೀಡಲಾಗಿದ್ದರೂ ಸಹ ಅದೇ ಪ್ರವೃತ್ತಿಯನ್ನು ಮುಂದುವರೆಸಿರುವ ಇವರು ನ್ಯಾಯಾಲಯದ ನಿಂದನೆ ಮಾಡಿರುತ್ತಾರೆ.
ಆದರೂ ಶ್ರೀಮತಿ ಕುಸುಮಾವತಿ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಪ್ರಚೋದನಕಾರಿ ಮಾತುಗಳನ್ನಾಡಲು ಅವಕಾಶ ಮಾಡಿಕೊಟ್ಟಿರುವುದು ಕಾನೂನು ಬಾಹಿರವಾಗಿದೆ. ಬಹಿರಂಗ ಸಭೆಯಲ್ಲಿ ಮಾತನಾಡಿದವರನ್ನು ಬಂಧಿಸಿ ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ. ಒಂದು ವೇಳೆ ಕಾನೂನು ಕ್ರಮ ಕೈಗೊಳ್ಳದೆ ಇದ್ದಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯವರ ಕಾನೂನು ಬಾಹಿರ ಕೃತ್ಯಕ್ಕೆ ಉಗ್ರ ಪ್ರತಿಭಟನೆ ಮಾಡುವ ಹಕ್ಕು ಶ್ರೀ ಕ್ಷೇತ್ರದ ಅಭಿಮಾನಿಗಳಾದ ನಮಗಿರುತ್ತದೆ.
ಶ್ರಿ ಕ್ಷೇತ್ರ ಧರ್ಮಸ್ಥಳ ಆಶ್ರಯದಲ್ಲಿ ನಡೆಯುವ ಹತ್ತಾರು ಯೋಜನೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಲಕ್ಷಾಂತರ ಮಂದಿಗೆ ಈ ವಿದ್ಯಮಾನ ನೋವನ್ನುಂಟುಮಾಡಿದೆ ಹಾಗೂ ವಿಶ್ವದಾದ್ಯಂತ ಇರುವ ಕೋಟ್ಯಾಂತರ ಭಕ್ತರು ಸೌಜನ್ಯ ಪ್ರಕರಣದ ಹೆಸರಲ್ಲಿ ಹೋರಾಟಗಾರರೆಂಬುವವರು ಮಾಡಿದ ಆಪಾದನೆಗಳನ್ನು ತಪ್ಪು ತಿಳಿಯುವ ಸಂಭವವಿರುತ್ತದೆ.
ಈ ಕಾರಣಕ್ಕಾಗಿ ಸೌಜನ್ಯ ಪ್ರಕರಣದ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳು ಹಾಗೂ ಅವರ ಕುಟುಂಬದ ವಿರುದ್ಧ ನೀಡಿದ ಹೇಳಿಕೆಗಳೆಲ್ಲಾ ದ್ವೇóಷದ ಹೇಳಿಕೆಗಳೆಂದು ಈ ಮೂಲಕ ತಿಳಿಯಪಡಿಸುತ್ತೇವೆ.
ಸನಾತನ ಧರ್ಮದ ಹೆಸರಿನಲ್ಲಿ ತಪ್ಪು ಮಾಹಿತಿ ನೀಡುತ್ತಾ ಯುವಕರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇವರ ಆಶಯಗಳು ಧರ್ಮ ಶ್ರದ್ಧೆಯ ವಿರುದ್ಧವಾಗೇ ಇವೆ. ಈ ಬಗ್ಗೆ ಸಾರ್ವಜನಿಕರು ಎಚ್ಚರದಿಂದ ಇರಬೇಕು ಎಂದು ವಿನಂತಿಸುತ್ತೇವೆ. ಕುಸುಮಾವತಿ ಮತ್ತು ಮಹೇಶ್ ಶೆಟ್ಟಿ ತಿಮರೋಡಿರವರ ಹೇಳಿಕೆಗಳು ಎಲ್ಲವೂ ಪೂರ್ವಾಗ್ರಹ ಪೀಡಿತ, ಕಪೋಲ ಕಲ್ಪಿತ ಮತ್ತು ದ್ವೇಷದ ಹೇಳಿಕೆಗಳಾಗಿವೆ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಶ್ರೀ ಕ್ಷೇತ್ರದ ಅಭಿಮಾನಿಗಳ ಪರವಾಗಿ ಅಪ್ಪಣ್ಣ ಹೆಗ್ಗಡೆ -ಮಾಜಿ ಶಾಸಕರು, ಜಿಲ್ಲಾ ಜನ ಜಾಗೃತಿ ವೇದಿಕೆಯ ಪರವಾಗಿ ರಟ್ಟಾಡಿ ನವೀನ್‍ಚಂದ್ರ ಶೆಟ್ಟಿ, ಪ್ರಗತಿ ಬಂಧು- ಸ್ವ ಸಹಾಯ ಸಂಘಗಳ ಒಕ್ಕೂಟದ ಪರವಾಗಿ ಗೀತಾಂಬ, ಚಂದ್ರಾವತಿ ಮತ್ತು ಪ್ರದೀಪ್ ಮಡಿವಾಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿಗಳು ಹಾಗೂ ಕಾರ್ಯಕರ್ತರು, ಕುಂದಾಪುರ ಇವರು ಪೋಲೀಸ್ ಇಲಾಖೆಗೆ ದೂರು ನೀಡಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕರ್ನಾಟಕ ಗಾಂಧಿ ಹೆಸರಿನಿಂದ ಖ್ಯಾತಿ ಪಡೆದಿರುವ ನಾ.ಸು.ಹರ್ಡೀಕರ್ ಅವರ 48 ನೇ ಪುಣ್ಯಸ್ಮರಣೆ

ಕೋಲಾರ:- ಕರ್ನಾಟಕ ಗಾಂಧಿ ಹೆಸರಿನಿಂದ ಖ್ಯಾತಿ ಪಡೆದಿರುವ ನಾ.ಸು.ಹರ್ಡೀಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಶಿಸ್ತು, ಧೈರ್ಯ ಹಾಗೂ ತ್ಯಾಗ ಮನೋಭಾವನೆಯನ್ನು ಹಿಂದೂಸ್ತಾನಿ ಸೇವಾದಳದ ಮೂಲಕ ಪರಿಚಯಿಸಿ ಸ್ವಾತಂತ್ರ್ಯ ಸಂಗ್ರಾಮವನ್ನು ಚುರುಕುಗೊಳಿಸಿದ ಮಹನೀಯರಲ್ಲಿ ಪ್ರಮುಖರೆಂದು ಜಿಲ್ಲಾ ಭಾರತ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು.
ನಗರದ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಶನಿವಾರ ನಾ.ಸು.ಹರ್ಡೀಕರ್ ಅವರ 48 ನೇ ಪುಣ್ಯ ಸ್ಮರಣೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು.
ಬಾಲ್ಯದಲ್ಲಿ ತಂದೆ ತಾಯಿಯನ್ನು ಕಳೆದುಕೊಂಡರೂ, ಸ್ವಾತಂತ್ರ್ಯ ಸಂಗ್ರಾಮದತ್ತ ಆಕರ್ಷಿತರಾದರು, ಬಾಲಗಂಗಾಧರ ತಿಲಕ್‍ರ ಕೇಸರಿ ಪತ್ರಿಕೆಯ ಲೇಖನಗಳನ್ನು ಕನ್ನಡದಲ್ಲಿ ಅನುವಾದಿಸಿ ಕನ್ನಡಿಗರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹೆಚ್ಚಿಸುತ್ತಿದ್ದರು. ವಿದೇಶದಲ್ಲಿ ವ್ಯಾಸಂಗ ಮಾಡಿ, ವೈದ್ಯರಾಗಿ ರೋಗಿಗಳ ಸೇವೆ ಮಾಡುತ್ತಲೇ ಮಹಾತ್ಮಗಾಂೀಜಿಯತ್ತ ಆಕರ್ಷಿತರಾದರು.
ರಾಷ್ಟ್ರಧ್ವಜ ಸಂಹಿತೆ ರೂಪಿಸುವುದರ ಜೊತೆಗೆ, ಸ್ವಾತಂತ್ರ್ಯ ಸಂಗ್ರಾಮಕ್ಕೆ ಶಿಸ್ತು ಮೂಡಿಸುವ ಸಲುವಾಗಿಯೇ ಹಿಂದೂಸ್ತಾನಿ ಸೇವಾದಳವನ್ನು ನೂರು ವರ್ಷಗಳ ಹಿಂದೆ ಆರಂಭಿಸಿದ್ದರು. ಸ್ವಾತಂತ್ರ್ಯ ನಂತರ ಭಾರತ ಸೇವಾದಳ ರಾಜಕೀಯ ರಹಿತ ಸಂಘಟನೆಯಾಗಿ ಸೇವೆ ಮಾಡಲು ಯೋಜಿಸಿದರೆಂದರು. ಇಂತ ಸೇವಾದಳ ಚಟುವಟಿಕೆಗಳು ಕೇವಲ ಕರ್ನಾಟಕಕ್ಕೆ ಸೀಮಿತವಾಗದೆ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ನಾ.ಸು.ಹರ್ಡೀಕರ್ ಸ್ಥಾಪಿತ ಸೇವಾದಳ ಚಟುವಟಿಕೆಗಳು ನಡೆಯುವಂತಾಗಬೇಕೆಂದರು.
ಭಾರತ ಸೇವಾದಳ ಜಿಲ್ಲಾ ಉಪಾಧ್ಯಕ್ಷ ಜಿ.ಶ್ರೀನಿವಾಸ್ ಮಾತನಾಡಿ, ಸೇವಾದಳ ಚಟುವಟಿಕೆಗಳು ಹಾಗೂ ನಾ.ಸು.ಹರ್ಡೀಕರ್ ವ್ಯಕ್ತಿ ಚಿತ್ರಣವು ಪಠ್ಯಪುಸ್ತಕಗಳಲ್ಲಿ ಸೇರಿಸುವಂತಾಗಬೇಕೆಂದರು.
ಶ್ರೀನಿವಾಸಪುರ ಅಧ್ಯಕ್ಷ ಬಂಗವಾದಿ ನಾಗರಾಜ್ ಮಾತನಾಡಿ, ಸೇವಾದಳದ ಸೇವೆಗಾಗಿ ಬದುಕು ಧ್ಯೇಯವನ್ನು ಶಾಲಾ ಮಕ್ಕಳಿಗೆ ಬದುಕಾಗಿಸಬೇಕೆಂದರು.
ಕೋಲಾರ ಅಧ್ಯಕ್ಷ ಶ್ರೀರಾಮ್ ಮಾತನಾಡಿ, ರಾಷ್ಟ್ರಗೀತೆ, ರಾಷ್ಟ್ರಧ್ವಜ ಮಾಹಿತಿ ತರಬೇತಿ, ನಾಯಕತ್ವ ಶಿಬಿರಗಳ ಮೂಲಕ ಸೇವಾದಳ ಚಟುವಟಿಕೆಗಳು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆಯೆಂದರು.
ಬಂಗಾರಪೇಟೆ ಜಿಲ್ಲಾ ಪ್ರತಿನಿಧಿ ಚಿನ್ನಿ ವೆಂಕಟೇಶ್ ಮಾತನಾಡಿ, ಶೀಘ್ರವೇ ಬಂಗಾರಪೇಟೆ ತಾಲೂಕಿನಲಿ ಸೇವಾದಳ ಶಿಕ್ಷಕರ ಮಿಲಾಪ್ ಶಿಬಿರವನ್ನು ಆಯೋಜಿಸುವುದಾಗಿ ಘೋಷಿಸಿದರು.
ಕಾರ್ಯಕ್ರಮದಲ್ಲಿ ಸೇವಾದಳ ಪದಾಧಿಕಾರಿಗಳಾದ ಕೆ.ಜಯದೇವ್, ಚಾನ್‍ಪಾಷಾ, ಫಲ್ಗುಣ, ರಾಜೇಶ್‍ಸಿಂಗ್ ಇತರರು ಭಾಗವಹಿಸಿದ್ದರು.
ಸೇವಾದಳ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ಕಾರ್ಯಕ್ರಮ ನಿರೂಪಿಸಿದರು. ಸರ್ವಧರ್ಮ ಪ್ರಾರ್ಥನೆ, ರಾಷ್ಟ್ರಗೀತೆಗಾಯನ ನೆರವೇರಿತು.
ಉತ್ತಮ ಶಿಕ್ಷಕರ ಆಯ್ಕೆ
ಭಾರತಸೇವಾದಳ ಚಟುವಟಿಕೆಗಳಲ್ಲಿ ಉತ್ತಮವಾಗಿ ತೊಡಗಿಸಿಕೊಂಡಿರುವ ಶಿಕ್ಷಕರಿಗೆ ನೀಡುವ ಸೇವಾದಳ ಉತ್ತಮ ಶಿಕ್ಷಕ ಪ್ರಶಸ್ತಿಗೆ ಈ ಬಾರಿ ಶ್ರೀನಿವಾಸಪುರದ ಶಿಕ್ಷಕ ಅಶೋಕ್‍ರನ್ನು ಆಯ್ಕೆ ಮಾಡಲಾಯಿತು.
ಕೋಲಾರದಲ್ಲಿ ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಶೋಕ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಕೋಲಾರ – ನಗರದ ದೇವರಾಜ ಅರಸು ಶುಶ್ರೂಷಾ ವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ

ಕೋಲಾರ:- ನಗರದ ದೇವರಾಜ ಅರಸು ಶುಶ್ರೂಷ ವಿದ್ಯಾಲಯದ ವಾರ್ಷಿಕಕ್ರೀಡಾ ಕೂಟವನ್ನು ಶನಿವಾರ ಶ್ರೀ ದೇವರಾಜು ಅರಸು ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು.
ದೇವರಾಜಅರಸು ವಿಶ್ವವಿದ್ಯಾಲಯ ಸಲಹೆಗಾರರಾದ ಹನುಮಂತರಾವ್ ಕ್ರೀಡಾಕೂಟವನ್ನು ಉದ್ಘಾಟಿಸಿ, ಪ್ರತಿಯೊಬ್ಬರೂ ಕ್ರೀಡಾ ಸ್ಪೂರ್ತಿಯಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು, ಸೋಲು ಗೆಲುವನ್ನು ಸಮಚಿತ್ತದಿಂದ ಸ್ಪೀಕರಿಸಿ,ದೈಹಿಕವಾಗಿ ಆರೋಗ್ಯವಾಗಿ ಸದೃಢರಾಗಬೇಕೆಂದು ಸಲಹೆ ನೀಡಿದರು.
ಅರಸು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಭಾಕರ್ ಮಾತನಾಡಿ, ಕ್ರೀಡೆಗಳು ನಮ್ಮ ಜೀವನದಲ್ಲಿ ಬಹಳ ಮುಖ್ಯವಾಗಿದ್ದು ಅದು ನಮ್ಮನ್ನು ಮಾನಸಿಕವಾಗಿ ಮತ್ತುದೈಹಿಕವಾಗಿಸದೃಡವಾಗಿರಿಸುತ್ತದೆ.ಕ್ರೀಡೆಯು ಅಕ ರಕ್ತದೊತ್ತಡ ಮತ್ತು ಮಧÀುಮೇಹದಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳನ್ನು ತಪ್ಪಿಸುತ್ತದೆ ಹಾಗು ನಮ್ಮ ವೃತ್ತಿಪರಜೀವನ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ನಮಗೆ ಸಹಾಯ ಮಾಡುತ್ತದೆ.
ಹಾಗೆಯೇವಿಧ್ಯಾರ್ಥಿಗಳು ಸೋಲು ಗೆಲುವುಗಳನ್ನು ಒಂದೇಎಂದು ಜೀವನದಲ್ಲಿ ಪರಿಗಣಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಈ ಕಾರ್ಯಕ್ರಮದಲ್ಲಿಕಾಲೇಜಿನ ಎಲ್ಲಾ ಭೋಧಕ, ಬೋದಕೇತರಸಿಬ್ಬಂದಿ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ವಿಜೇತರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯಅಡ್‍ವೈಸರಾದ ಹನುಮಂತರಾವ್ ಬಹುಮಾನಗಳನ್ನು ವಿತರಿಸಿದರು.

ಕಾವ್ಯದ ಓದು ಯುವಜನತೆಯ ಭವಿಷ್ಯದ ಬೆಳಕು-ಡಾ.ಸಿ.ಎ.ರಮೇಶ್

ಕೋಲಾರ:- ಕಾವ್ಯದ ಓದು ಯುವಜನತೆಯ ಭವಿಷ್ಯವನ್ನು ರೂಪಿಸುವ ಬೆಳಕು ಎಂದು ಕೋಲಾರದಮಹಿಳಾ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸಿ.ಎ.ರಮೇಶ್ ಅಭಿಪ್ರಾಯಪಟ್ಟರು.
ಅವರು ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಕನ್ನಡ ಭಾಷೆ ಮತ್ತು ಅನುವಾದ ಅಧ್ಯಯನ ವಿಭಾಗವು ಆಯೋಜಿಸಿದ್ದ ಹೊಸಗನ್ನಡ ಕಾವ್ಯದಲ್ಲಿ ಹಲವು ಕನ್ನಡಂಗಳ್ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಹೊಸಗನ್ನಡ ಕಾವ್ಯವು ವೈವಿಧ್ಯದಿಂದ ಕೂಡಿದ್ದು ನವೋದಯ, ನವ್ಯ, ಸಮನ್ವಯ, ದÀಲಿತ ಹೀಗೆ ವಿವಿಧ ಪರಂಪರೆಗಳಲ್ಲಿನ ಹಲವು ಕನ್ನಡಂಗಳ್ ಕಾವ್ಯದ ಸೊಬಗಿಗೆ ಕಾರಣವಾಗಿವೆ. ಇಂದಿನ ಯುವಜನರು ಕಾವ್ಯಾಭ್ಯಾಸದಿಂದ ಸೂಕ್ಷ್ಮತೆಯನ್ನು ಗಳಿಸಿಕೊಳ್ಳಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಕನ್ನಡದ ಹಲವು ಬಗೆಗಳು ಕುವೆಂಪು, ಬೇಂದ್ರೆ, ಅಡಿಗ, ಜಿ.ಎಸ್.ಶಿವರುದ್ರಪ್ಪ, ನಿಸಾರ್ ಅಹಮದ್, ಸು.ರಂ.ಎಕ್ಕುಂಡಿ, ಸಿದ್ಧಲಿಂಗಯ್ಯ, ಕೆ.ವಿ.ತಿರುಮಲೇಶ್‍ರಾದಿಯಾಗಿ ಅನೇಕ ಕಾವ್ಯಗಳಲ್ಲಿ ಅಭಿವ್ಯಕ್ತಗೊಂಡಿದೆ. ಸ್ಥಳೀಯ ಅನನ್ಯತೆಯುಳ್ಳ ಪದಗಳು ಕಾವ್ಯ ಪರಂಪರೆಗೆ ಗಟ್ಟಿತನ ತಂದುಕೊಟ್ಟಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ತುಳುಗಳನ್ನೊಳಗೊಂಡ ದ್ರಾವಿಡ ಭಾಷಾ ಕಾವ್ಯರಂಪರೆಯು ಇಂತಹಾ ವೈವಿಧ್ಯದಿಂದಾಗಿಯೇ ಅನನ್ಯವೆನಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಎ.ಕೆ.ವೇಣುಗೋಪಾಲ ರೆಡ್ಡಿಯವರು ಕನ್ನಡ ವಿಭಾಗದ ಈ ಸರಣಿ ಉಪನ್ಯಾಸಗಳು ಶ್ಲಾಘನೀಯವಾಗಿದ್ದು ಮುಂದಿನ ದಿನಗಳಲ್ಲಿ ಇಂತಹಾ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ತಮ್ಮ ಸಂದೇಶದಲ್ಲಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾಷಾ ನಿಕಾಯದ ಡೀನ್ ಆದ ಡಾ.ಬಿ.ಎಸ್.ಶಿವಕುಮಾರ್ ಅವರು ಈ ವಿಶೇಷ ಉಪನ್ಯಾಸವು ದ್ರಾವಿಡ ಕವಿತ್ವದ ತೌಲನಿಕ ಅಧ್ಯಯನಕ್ಕೆ ಸಹಕಾರಿ, ಕಾವ್ಯಬಂಧದ ಒಳಹರಿವನ್ನು ನಾವಿಲ್ಲಿ ಕಾಣಬಹುದು ಎಂದು ನುಡಿದರು.
ಕಾರ್ಯಕ್ರಮದ ಆಯೋಜಕರಾದ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಎಸ್.ದುರ್ಗಾಪ್ರವೀಣ್ ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ವಿಭಾಗವು ಕ್ರಿಯಾಶೀಲ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು ಇಂದು ಈ ಮಹತ್ವದ ಸರಣಿಯಲ್ಲಿವಿವಿದೆಡೆಗಳ ವಿದ್ಯಾರ್ಥಿಗಳು ಆನ್ ಲೈನ್ ಮೂಲಕವೂ ಪಾಲ್ಗೊಳ್ಳಬಹುದಾಗಿದೆ, ವಿದ್ವಾಂಸರೊಂದಿಗೆ ಸಂವಾದ ಮಾಡಬಹುದಾಗಿದೆ, ಮುಂದಿನ ದಿನಗಳಲ್ಲಿ ಈ ಉಪನ್ಯಾಸಗಳು ಯೂಟ್ಯೂಬ್ ಮೂಲಕವೂ ಲಭ್ಯವಾಗಲಿವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥೆ ಪ್ರೊ.ಜಯಲಲಿತ ಅವರು, ಎಂ.ಎ., ಪಿಎಚ್.ಡಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು.ಸ್ವಾತಿ ಜಿ. ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.ಮಾದೇಶಿ ವಿ.ಬಿ. ಅತಿಥಿಗಳನ್ನು ಪರಿಚಯಿಸಿ, ವ್ಯಾಸರಾವ್ ಜಿ.ಎಸ್.ನಿರೂಪಿಸಿ, ಮೇಘ ಟಿ.ಎನ್ ವಂದಿಸಿದರು.

Snehalaya celebrated 14 years of fruitful service / 14 ವರ್ಷಗಳ ಫಲದಾಯಕ ಸೇವೆಯನ್ನು ಸಂಭ್ರಮಿಸಿದ ಸ್ನೇಹಾಲಯ

Manjeswaram: In an observance suffused with profound meaning, Snehalaya Charitable Trust commemorated its 14th anniversary, an occasion that signifies over a decade of dedicated service imbued with compassion and its consequential effects. The institution, founded upon the principles of empathy and altruism, has emerged as a beacon of hope, catering to the underprivileged and effecting significant transformations in myriad lives over the course of its existence.

The ceremonial events commenced amid a gathering of eminence at the recently erected Grotto of St. Devasahayam Pillai. This sacred sanctuary was graced by the benedictions and formal consecration offered by the venerable Rev. Fr. Basil Vas, who holds the esteemed role of Parish Priest at the Sacred Hearts Church in Vorkady. Additionally, the occasion garnered the presence of significant personalities, notably among them being Rev. Fr. Archibald Gonsalves OCD, distinguished luminary serving as the Assistant Provincial of the Karnataka & Goa Province. Among those lending further significance to the event were the revered Founder Br Joseph Crasta and the other esteemed trustees of Snehalaya.

Subsequent to the blessing, a Solemn Thanksgiving Mass proceeded, presided over by Rev Fr Archibald OCD and co-officiated by Rev Fr. Edwin Pinto, the Parish Priest of Manjeshwar Church, Fr Basi Vas, the Parish Priest of Vorkady Church, and Fr Cyril D’ Souza, the Chaplain of Snehalaya.

Following the culmination of the Mass, Br Joseph Crasta, the Founder of Snehalaya, delivered a touching expression of gratitude. This he conveyed through the presentation of tokens of appreciation in the form of mementos and bouquets to the officiating clergy. Furthermore, he extended his heartfelt appreciation to the distinguished assembly, the esteemed benefactors, and the cherished well-wishers. Notably, he also acknowledged the outstanding efforts of Mr. Marko Stanly Fernandes, who had earned the distinction of being recognized as the Best Staff of the Year.

In a climactic culmination of the event, a lavish meal was extended to all attendees, thereby marking the pinnacle of the festivities. The recipients, partaking in this sumptuous feast, conveyed their heartfelt gratitude to Br Joseph Crasta, thereby underscoring the intensity of the occasion.

14 ವರ್ಷಗಳ ಫಲದಾಯಕ ಸೇವೆಯನ್ನು ಸಂಭ್ರಮಿಸಿದ ಸ್ನೇಹಾಲಯ

2009 ರಲ್ಲಿ ಸಂತ ಮದರ್ ತೆರೇಸಾರವರ ಜನ್ಮದಿನದಂದು ನಿರಾಶ್ರಿತ ಮಾನಸಿಕ ಅಸ್ವಸ್ಥರ ಸೇವೆಗಾಗಿ ಪ್ರಾರಂಭಗೊಂಡ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ತನ್ನ 14 ನೇ ವಾರ್ಷಿಕೋತ್ಸವವನ್ನು ಆಚರಿಸಿತು. ಸಮಾಜಕ್ಕೆ ಸಂಸ್ಥೆಯ ಅತ್ಯುತ್ತಮ ಕೊಡುಗೆಗಳನ್ನು ಪ್ರದರ್ಶಿಸುವ ಕಾರ್ಯಕ್ರಮಗಳ ಜೊತೆಗೆ ಅನುಕಂಪ, ದಯೆ ಮತ್ತು ಸಹಾನುಭೂತಿಯ ತತ್ವಗಳ ಮೇಲೆ ಸ್ಥಾಪಿತವಾದ ಸ್ನೇಹಾಲಯ ಚಾರಿಟಬಲ್ ಟ್ರಸ್ಟ್ ಬಡವರು ಮತ್ತು ನಿರ್ಗತಿಕರಿಗೆ ಭರವಸೆಯ ದಾರಿದೀಪವಾಗಿ ಹೊರಹೊಮ್ಮಿದೆ, ಕಳೆದ 14 ವರ್ಷಗಳಲ್ಲಿ ಅಸಂಖ್ಯಾತ ನೊಂದವರ ಜೀವನವನ್ನು ಬೆಳಗಿಸಿದೆ.
ಈ ಸಂಧರ್ಬದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಸಂತ ದೇವಸಹಾಯ ಪಿಳ್ಳೈ ಅವರ ಗ್ರೊಟ್ಟೊವನ್ನು ವರ್ಕಾಡಿ ದೇವಾಲಯದ ಪ್ರಧಾನ ಗುರುಗಳಾದ ವಂದನೀಯ ಫಾ. ಬಾಸಿಲ್ ವಾಸ್ ರವರು ತಮ್ಮ ಪುಣ್ಯ ಕರಗಳಿಂದ ಆಶೀರ್ವದಿಸಿ ಉದ್ಗಾಟಿಸಿದರು. ಈ ಸಂಧರ್ಬದಲ್ಲಿ ಸಮುದಾಯದ ಪ್ರಮುಖ ಮುಖಂಡರು, ಧರ್ಮಗುರುಗಳು, ಸಹೋದರ-ಸಹೋದರಿಯರು, ದಾನಿಗಳು ಹಾಗೂ ಸ್ನೇಹಾಲಯದ ಸಂಸ್ಥಾಪಕರು ಮತ್ತು ಟ್ರಸ್ಟಿಗಳು ಉಪಸ್ಥಿತರಿದ್ದರು.
ಅನಂತರ, ಕಳೆದ 14 ವರ್ಷಗಳಿಂದ ದೇವರು ಸುರಿಸಿದ ಕ್ರಪೆ ಮತ್ತು ಅನುಗ್ರಹಗಳಿಗಾಗಿ ಧನ್ಯವಾದಗಳನು ಅರ್ಪಿಸುತ್ತಾ ದಿವ್ಯ ಬಲಿ ಪೂಜೆಯನ್ನು ಅರ್ಪಿಸಲಾಯಿತು. ಬಲಿಪೂಜೆಯ ಮುಖ್ಯ ಅರ್ಚಕರಾಗಿ ವಂದನೀಯ ಗುರುಗಳಾದ ಫಾ ಆರ್ಚಿಬಾಲ್ಡ್ ಗೊನ್ಸಾಲ್ವಿಸ್ ಒಸಿಡಿ ಹಾಗೂ ಫಾ ಬಾಸಿಲ್ ವಾಸ್, ಫಾ ಎಡ್ವಿನ್ ಪಿಂಟೊ ಮತ್ತು ಫಾ ಸಿರಿಲ್ ಡಿ ಸೋಜಾ ರವರು ಸಹ ಅರ್ಚಕರಾಗಿ ಬಲಿಪೂಜೆಯಲ್ಲಿ ಭಾಗವಹಿಸಿದರು
ಪವಿತ್ರ ಬಲಿ ಪೂಜೆಯ ನಂತರ, ಸ್ನೇಹಾಲಯದ ಸಂಸ್ಥಾಪಕರಾದ ಬ್ರ ಜೋಸೆಫ್ ಕ್ರಾಸ್ತಾ ಅವರು ಕೃತಜ್ಞತೆಯ ಸ್ಪರ್ಶವನ್ನು ವ್ಯಕ್ತಪಡಿಸಿದರು. ಈ ಸಂಸ್ಥೆಯ 14 ವರ್ಷಗಳ ಪಯಣವನ್ನು ಸುಗಮ ರೀತಿಯಲ್ಲಿ ಸಂಚಾಲನೆ ಮಾಡಿದ ಕಾರಣಕರ್ತ ದೇವರನ್ನು ಹಾಗೂ ಎಲ್ಲಾ ಹಿತೈಷಿ ಮಿತ್ರರಿಗೆ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಅನಂತರ ಗೌರವಾನ್ವಿತ ಗುರುಗಳಿಗೆ ಸ್ಮರಣಿಕೆಗಳು ಮತ್ತು ಹೂಗುಚ್ಛಗಳನ್ನು ನೀಡಲಾಯಿತು. ಈ ಕಾರ್ಯಕ್ರಮದ ಮುಖ್ಯ ಶೋಭೆಯಾಗಿ ಅವರು ಈ ವರ್ಷದ ಅತ್ಯುತ್ತಮ ಸಿಬ್ಬಂದಿ ಎಂದು ಗುರುತಿಸಲ್ಪಟ್ಟಿರುವ ಶ್ರೀ. ಮಾರ್ಕೊ ಸ್ಟಾನ್ಲಿ ಫೆರ್ನಾಂಡಿಸ್ ಅವರ ಅತ್ಯುತ್ತಮ ಪ್ರಯತ್ನಗಳನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು. ಕೊನೆಗೆ ಈ ಕಾರ್ಯಕ್ರಮವು ಒಂದು ಸಹಭೋಜನದೊಂದಿಗೆ ಮುಕ್ತಾಯವಾಯಿತು.

‘Rohan City’ Bejai Launch of new scheme for chosen purchasers /‘ರೋಹನ್ ಸಿಟಿ ಬಿಜೈ’ಆಯ್ದ ಖರೀದಿದಾರರಿಗೆ ವಿಶೇಷ ಸ್ಕೀಮಿನ ಅನಾವರಣ

The construction of the grand ‘Rohan City’ Bejai, undertaken by Rohan Corporation, is progressing well. On September 5th, on the occasion of Teachers’ Day celebration, a special scheme has been introduced for individuals dedicated to societal service.

This scheme offers a special benefit to teachers, police personnel, defence, and journalists, providing a 10% discount on the prices of flats. This scheme will commence on September 01 and will be available for a limited period.

‘Rohan City’, rising on an area of about 3.5 acres on Bejai Main Road, is the largest and most privileged project of Rohan Corporation so far. It is a vibrant development featuring a 6 lakh square feet residential area, consists of 546 apartments. The residential options cater to different needs with Duplex, 4 BHK, 6 BHK, 1405 to 1900 square feet 3 BHK, 1075 to 1135 square feet 2 BHK, and 700 to 815 square feet 1 BHK of living space. Alongside the residential area, there is a 2 lakh square feet commercial outlet comprising 284 individual units. To ensure convenient parking, the development features a mechanized parking system that accommodates both two-wheelers and four-wheelers, providing efficient and secure parking facilities. With its well-designed residential and commercial spaces, coupled with a modern parking system, ‘Rohan City’ offers a seamless and convenient living environment for residents and a thriving business hub for commercial ventures.

Bejai is an area known for its safety and all conveniences in Mangalore city itself. It is a home to several temples, the famous St Francis Xavier Church, Kadri Park and Karnataka Polytechnic. Bejai, despite being located in the heart of the city, is renowned for its clean environment and serene atmosphere. It is often referred to as a place characterized by art, culture, and various sports activities. Bejai is particularly noteworthy for the harmonious coexistence of people from different religious backgrounds, who live in close brotherhood. St Aloysius College, Lourdes Central School, SDM Law College, KSRTC Bus Stand are within walking distance. Several hospitals are close by incase of emergency. The airport is 10 km away and is well connected by road. ‘Rohan City’ is equipped with all modern amenities. Surveillance, security system, uninterrupted water & electricity, ample parking, gardens and walking paths are arranged. Has commercial outlets to complement profitable business growth.

Features of ‘Rohan City’ :•35000 sqft Hyper Market in 2 levels•2 escalator for commercial space•Residential, commercial, hotels, club, swimming pool,  and ample parking, all under one roof• Luxury facilities in the heart of Mangalore at affordable prices• Project approved by major national banks•Quick loan facility from leading banks• 100% power backup with Diesel Generators• Automatic power change over system•Advanced security system•Electric car charging points• Designed Landscape Spaces•Solid waste management System•Solar PV Panels•Lighting Automation feature (First time in Mangaluru)

Features of World Class Club :•Fully air conditioned reception & spacious lounges •Family restaurant • Coffee shop • Indoor games•Basketball court•Badminton court•Video games zone •Fully equipped gym• Spa, unisex saloon  •Ayurvedic wellness centre •3D theatre •Multi-purpose hall•Swimming pool•Jogging track • Senior citizen park•Kids play area •Library •Students activity room& many more.

RohanMonteiro step into the real estate industry at a young age and today has grown to become the Managing Director of ‘Rohan Corporation’. His dedication and hard work in the profession has enabled him to build a vast real estate Company. RohanMonteiro as a producer has earned the admiration of consumers for his meticulousness, neatness and thoroughness in all his work. RohanMonteiro led his construction company at a high level, building renowned mega residential and commercial complexes in Mangalore city, staying in the limelight and having satisfied clients. Presently Rohan Estate in Pakshikere and Kulasekera, Rohan Enclave and Avenue in Suratkalhave been completed and Rohan Square in Kapitaneo near Pumpwell is in final stages of construction.

‘Rohan City’ has emerged as a highly favourable investment destination, boasting numerous advantages for investors. With its abundant commercial units, the city provides an exceptional platform for entrepreneurs, startups, and established businesses alike. The availability of diverse commercial spaces allow entrepreneurs to find the perfect setting to launch their ventures, while also catering to the expansion needs of existing businesses. Moreover, investors can seize the opportunity to acquire commercial properties and capitalize on the city’s thriving business environment. By investing in ‘Rohan City’, individuals can secure commercial properties and benefit from a stable rental market, ensuring a steady stream of income. Additionally, the city’s positive economic trajectory and growth prospects further enhance its appeal for long-term investors. With a robust market, ample opportunities, and a conducive business ecosystem, ‘Rohan City’ stands as an attractive choice for those looking to make sound investments and reap the rewards of a vibrant and prosperous urban center. For more details, contact Rohan City, Bijay Main Road Office, or call 9845490100 / 9045607725 / 9045607724 / 9036392627. For more information, please

‘ರೋಹನ್ ಸಿಟಿ ಬಿಜೈ’ ಆಯ್ದ ಖರೀದಿದಾರರಿಗೆ ವಿಶೇಷ ಸ್ಕೀಮಿನ ಅನಾವರಣ


ರೋಹನ್‍ ಕಾರ್ಪೊರೇಶನ್ ಸಂಸ್ಥೆಯ ಬಹು ನಿರೀಕ್ಷಿತ, ಅತಿದೊಡ್ಡ ಮತ್ತುಅತ್ಯಂತ ವಿಶೇಷಯೋಜನೆಯಾದ ‘ರೋಹನ್ ಸಿಟಿ’ ಬಿಜೈ ಬೃಹತ್‍ಕಟ್ಟಡದ ನಿರ್ಮಾಣಕಾರ್ಯವು ಭರದಿಂದ ಸಾಗುತ್ತಿದೆ. ಈ ಸಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯ ಸುಸಂದರ್ಭದಲ್ಲಿ ಸಮಾಜದಆಯ್ದ ಸೇವಾ ನಿರತ ವ್ಯಕ್ತಿಗಳಿಗಾಗಿ ವಿಶೇಷಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
ಶಿಕ್ಷಕರು, ಪೆÇಲೀಸರು, ಯೋಧರು ಮತ್ತು ಪತ್ರಕರ್ತರಿಗೆ ಫ್ಲ್ಯಾಟುಗಳ ಬೆಲೆಗಳ ಮೇಲೆ ಶೇಕಡಾ 10%ರ ವಿಶೇಷ ರಿಯಾಯಿತಿಯನ್ನು ನೀಡಲಾಗುವುದು.ಈ ಯೋಜನೆಯು ಸಪ್ಟೆಂಬರ್ 01ರಂದು ಆರಂಭಗೊಂಡು, ಸೀಮಿತ ಅವಧಿಯವರೆಗೆ ಮಾತ್ರಇರುವುದು.
‘ರೋಹನ್ ಸಿಟಿ’ ಇದುವರೆಗಿನರೋಹನ್‍ಕಾಪೆರ್Çರೇಷನ್‍ಇದರಅತಿದೊಡ್ಡ ಮತ್ತುಅತ್ಯಂತ ವಿಶೇಷಯೋಜನೆಯಾಗಿದೆ. ಈ ಯೋಜನೆಯು 6 ಲಕ್ಷಚದರ ಅಡಿ ವಸತಿ ಪ್ರದೇಶವನ್ನು ಒಳಗೊಂಡಿರುವ ಸಮುಚ್ಚಯವಾಗಿದ್ದು, ಒಟ್ಟು 546 ಅಪಾರ್ಟ್‍ಮೆಂಟ್‍ಗಳನ್ನು ಒಳಗೊಂಡಿದೆ. ವಸತಿ ಆಯ್ಕೆಗಳು ಡ್ಯುಪ್ಲೆಕ್ಸ್, 6 ಬಿಎಚ್‍ಕೆ, 4 ಬಿಎಚ್‍ಕೆ, 1405 ರಿಂದ 1900 ಚದರ ಅಡಿ 3 ಬಿಎಚ್‍ಕೆ, 1075 ರಿಂದ 1135 ಚದರ ಅಡಿ 2 ಬಿಎಚ್‍ಕೆ ಮತ್ತು 700 ರಿಂದ 815 ಚದರ ಅಡಿ 1 ಬಿಎಚ್‍ಕೆ ಫ್ಲ್ಯಾಟುಗಳೊಂದಿಗೆ ವಿವಿಧ ಅಗತ್ಯಗಳನ್ನು ಪೂರೈಸುತ್ತವೆ. ವಸತಿ ಪ್ರದೇಶದಜೊತೆಗೆ, 284 ಪ್ರತ್ಯೇಕ ಘಟಕಗಳನ್ನು ಒಳಗೊಂಡಿರುವ 2 ಲಕ್ಷಚದರ ಅಡಿ ವಾಣಿಜ್ಯ ಮಳಿಗೆಗಳಿವೆ. ಯಾಂತ್ರೀಕೃತ ಪಾಕಿರ್ಂಗ್ ವ್ಯವಸ್ಥೆಯನ್ನು ಹೊಂದಿದ್ದು, ದ್ವಿಚಕ್ರ ಮತ್ತುಚತುಶ್ಚಕ್ರ ವಾಹನಗಳಿಗೆ ಅವಕಾಶಕಲ್ಪಿಸುತ್ತದೆ. ಉನ್ನತವಾಗಿ ವಿನ್ಯಾಸಗೊಳಿಸಿದ ವಸತಿ ಮತ್ತು ವಾಣಿಜ್ಯ ಸ್ಥಳಗಳೊಂದಿಗೆ, ಆಧುನಿಕ ಪಾಕಿರ್ಂಗ್ ವ್ಯವಸ್ಥೆಯೊಂದಿಗೆ, ರೋಹನ್ ಸಿಟಿ ನಿವಾಸಿಗಳಿಗೆ ಉತ್ಕøಷ್ಟಜೀವನ ನಡೆಸಲು ಅನುಕೂಲ ವಾತಾವರಣವನ್ನು ನೀಡುತ್ತದೆ ಮತ್ತು ವಾಣಿಜ್ಯ ಉದ್ಯಮಗಳಿಗೆ ವ್ಯಾಪಾರಕೇಂದ್ರವಾಗಿದೆ.
ಮಂಗಳೂರು ನಗರದಲ್ಲಿಯೇ ಸುರಕ್ಷೆಗೆ ಹಾಗೂ ಎಲ್ಲಾ ಅನುಕೂಲಗಳಿಗೆ ಹೆಸರಾದ ಪ್ರದೇಶ ಬಿಜೈ. ಹಲವಾರು ದೇವಸ್ಥಾನಗಳಿಗೆ, ಪ್ರಖ್ಯಾತ ಸಂತ ಫ್ರಾನ್ಸಿಸ್‍ಝೇವಿಯರ್‍ಚರ್ಚ್, ಕದ್ರಿ ಪಾರ್ಕ್, ಕರ್ನಾಟಕ ಪಾಲಿಟೆಕ್ನಿಕ್‍ಗೆಇದು ನೆಲೆವೀಡು. ನಗರದ ಹೃದಯ ಭಾಗದಲ್ಲಿದ್ದರೂ ಸ್ವಚ್ಛ ಪರಿಸರ, ಶಾಂತ ವಾತಾವರಣಕ್ಕೆಇನ್ನೊಂದು ಹೆಸರು ಬಿಜೈ.ವಿವಿಧ ಧರ್ಮಗಳ ಜನರುಇಲ್ಲಿಅನ್ಯೋನ್ಯವಾಗಿ ಭ್ರಾತೃತ್ವದಿಂದ ಬದುಕುತ್ತಿರುವ ಬಿಜೈ, ಕಲೆ, ಸಂಸ್ಕøತಿ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ.ಸೈಂಟ್ ಅಲೋಶಿಯಸ್ ಕಾಲೇಜು, ಲೂಡ್ರ್ಸ್ ಸೆಂಟ್ರಲ್ ಸ್ಕೂಲ್, ಎಸ್.ಡಿ.ಎಮ್ ಲಾ ಕಾಲೇಜು, ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣಕಾಲ್ನಡಿಗೆಯದೂರದಲ್ಲಿವೆ. ತುರ್ತುಅಗತ್ಯದ ಕಾಲಕ್ಕೆ ಹಲವಾರು ಆಸ್ಪತ್ರೆಗಳು ಹತ್ತಿರದಲ್ಲಿವೆ. ವಿಮಾನ ನಿಲ್ದಾಣ 10 ಕಿಮೀ ದೂರದಲ್ಲಿದ್ದುಉತ್ತಮರಸ್ತೆ ಸಂಪರ್ಕ ಹೊಂದಿದೆ.ಈ ಯೋಜನೆಗೆಎಲ್ಲಾಆಧುನಿಕ ಸವಲತ್ತುಗಳನ್ನು ಸಜ್ಜುಗೊಳಿಸಲಾಗಿದೆ.ಕಣ್ಗಾವಲು ಮತ್ತುರಕ್ಷಣಾ ವ್ಯವಸ್ಥೆ, ನಿರಂತರಕುಡಿಯುವ ನೀರು ಮತ್ತು ವಿದ್ಯುತ್, ವಿಶಾಲ ಪಾಕಿರ್ಂಗ್, ಗಾರ್ಡನ್‍ಗಳು ಹಾಗೂ ವಾಕಿಂಗ್‍ಟ್ರ್ಯಾಕ್‍ಗಳನ್ನು ವ್ಯವಸ್ಥೆ ಮಾಡಲಾಗಿದೆ.ಲಾಭದಾಯಕ ವ್ಯಾಪಾರದ ಬೆಳವಣಿಗೆಗೆ ಪೂರಕವಾದ ವಾಣಿಜ್ಯ ಮಳಿಗೆಗಳನ್ನು ಹೊಂದಿದೆ.
ರೋಹನ್ ಸಿಟಿ ಸಮುಚ್ಚಯದ ವೈಶಿಷ್ಟ್ಯಗಳು :•2 ಹಂತಗಳಲ್ಲಿ 35000 ಚದರ ಅಡಿ ಹೈಪರ್‍ಮಾರುಕಟ್ಟೆ•ವಾಣಿಜ್ಯಮಳಿಗೆಗಳಿಗೆ 2 ಎಸ್ಕಲೇಟರ್‍ವ್ಯವಸ್ಥೆ•ವಸತಿ, ವಾಣಿಜ್ಯ, ಸೂಪರ್‍ಮಾರ್ಕೆಟ್, ಹೊಟೇಲ್, ಅತ್ಯಾಧುನಿಕಕ್ಲಬ್‍ಹಾಗೂಇನ್ನಿತರಸೌಲಭ್ಯಗಳುಒಂದೇಸೂರಿನಡಿ•ಮಂಗಳೂರಿನಹೃದಯಭಾಗದಲ್ಲಿಅತೀಸಮಂಜಸಬೆಲೆಗಳಲ್ಲಿಲಕ್ಸುರಿಸೌಲಭ್ಯಗಳು•ಪ್ರಮುಖನ್ಯಾಶನಲ್‍ಬ್ಯಾಂಕ್‍ಗಳಿಂದಪ್ರಾಜೆಕ್ಟ್‍ಅಂಗೀಕೃತ•ತ್ವರಿತಸಾಲಸೌಲಭ್ಯಸೇವೆ•ಡೀಸೆಲ್ ಜನರೇಟರ್‍ಗಳೊಂದಿಗೆ 100% ಪವರ್‍ಬ್ಯಾಕಪ್•ಸ್ವಯಂಚಾಲಿತಪವರ್‍ಚೇಂಜ್‍ಓವರ್‍ವ್ಯವಸ್ಥೆ•ಅತ್ಯಾಧುನಿಕಭದ್ರತಾವ್ಯವಸ್ಥೆ•ಎಲೆಕ್ಟ್ರಿಕ್‍ಕಾರ್‍ಚಾರ್ಜಿಂಗ್‍ವ್ಯವಸ್ಥೆ•ಹಸಿರುವನ, ಉದ್ಯಾನವನ•ಘನತ್ಯಾಜ್ಯಸಂಸ್ಕರಣಾಘಟಕ•ಸೌರಶಕ್ತಿಸಂಗ್ರಹಘಟಕ•ಲೈಟಿಂಗ್‍ಆಟೊಮೇಷನ್ (ಮಂಗಳೂರಿನಲ್ಲಿಮೊದಲಬಾರಿಗೆ)
ಅಂತರಾಷ್ಟ್ರೀಯದರ್ಜೆಯ ಸಿಟಿ ಕ್ಲಬ್‍ನ ವಿಶೇಷತೆಗಳು :• ಸಂಪೂರ್ಣಹವಾನಿಯಂತ್ರಿತ, ವಿಶಾಲ ಎಂಟ್ರೆನ್ಸ್ ಲಾಬಿ •ಫ್ಯಾಮಿಲಿರೆಸ್ಟೋರೆಂಟ್• ಕಾಫಿಶಾಪ್• ಒಳಾಂಗಣ ಕ್ರೀಡೆ• ಬಾಸ್ಕೆಟ್‍ಬಾಲ್‍ಕೋರ್ಟ್• ಬಾಡ್ಮಿಂಟನ್‍ಕೋರ್ಟ್• ವಿಡಿಯೋಗೇಮ್ಸ್‍ವಲಯ• ಸುಸಜ್ಜಿತಜಿಮ್• ಸ್ಪಾ, ಯುನಿಸೆಕ್ಸ್‍ಸಲೂನ್• ಆರ್ಯುವೇದಿಕ್‍ವೆಲ್‍ನೆಸ್‍ಸೆಂಟರ್• 3ಡಿ ಥಿಯೇಟರ್•ಮಲ್ಟಿ-ಪರ್ಪಸ್‍ಹಾಲ್• ಸ್ವಿಮ್ಮಿಂಗ್‍ಪೂಲ್• ಜಾಗಿಂಗ್‍ಟ್ರ್ಯಾಕ್• ಸೀನಿಯರ್‍ಸಿಟಿಜನ್‍ಪಾರ್ಕ್• ಚಿಣ್ಣರಆಟದವಲಯ• ಸುಸಜ್ಜಿತಗ್ರಂಥಾಲಯ• ವಿದ್ಯಾರ್ಥಿ ಕಲಿಕಾಕೊಠಡಿ ಹಾಗೂ ಇನ್ನಿತರ ಸೌಕರ್ಯಗಳು.
ರೋಹನ್ ಮೊಂತೇರೊ – ಯಶಸ್ಸಿನ ರೂವಾರಿ : ರೋಹನ್ ಮೊಂತೇರೊಯುವ ಪ್ರಾಯದಲ್ಲೇರಿಯಲ್‍ಎಸ್ಟೇಟ್‍ಉದ್ಯಮಕ್ಕೆಹೆಜ್ಜೆಯನ್ನುಇಟ್ಟಿದ್ದು, ಇಂದು ‘ರೋಹನ್‍ಕಾಪೆರ್Çರೇಷನ್’ ಸಂಸ್ಥೆಯ ಮ್ಯಾನೇಜಿಂಗ್‍ಡೈರೆಕ್ಟರ್ ಆಗಿ ಬೆಳೆದಿದ್ದಾರೆ. ವೃತ್ತಿಯಲ್ಲಿಅವರ ಬದ್ಧತೆ ಮತ್ತು ಪರಿಶ್ರಮದಿಂದ ವಿಸ್ತಾರವಾದರಿಯಲ್‍ಎಸ್ಟೇಟ್‍ಉದ್ಯಮದ ಸಂಸ್ಥೆಯನ್ನು ನಿರ್ಮಿಸಲು ಸಾಧ್ಯವಾಗಿದೆ.ರೋಹನ್ ಮೊಂತೇರೊ ನಿರ್ಮಾಪಕರಾಗಿಎಲ್ಲಾ ಕೆಲಸಗಳಲ್ಲೂ ಸೂಕ್ಷ್ಮತೆ, ಅಚ್ಚುಕಟ್ಟು ಮತ್ತು ಪೂರ್ಣತೆಯನ್ನು ಹೊಂದಿದ್ದು, ಗ್ರಾಹಕರಅಭಿಮಾನವನ್ನು ಗಳಿಸಿದ್ದಾರೆ. ರೋಹನ್ ಮೊಂತೇರೊಇವರ ನಾಯಕತ್ವದಲ್ಲಿಅವರ ನಿರ್ಮಾಣ ಸಂಸ್ಥೆ, ಮಂಗಳೂರು ನಗರದಲ್ಲಿ ಬೃಹತ್ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ, ಜನಮನಗಳಲ್ಲಿ ನೆಲೆಸಿ, ಸಂತೃಪ್ತಗ್ರಾಹಕರನ್ನು ಹೊಂದಿದೆ. ಪ್ರಸ್ತುತ ಪಕ್ಷಿಕೆರೆಯಲ್ಲಿ ಮತ್ತು ಕುಲಶೇಖರದಲ್ಲಿರೋಹನ್‍ಎಸ್ಟೇಟ್, ಸುರತ್ಕಲ್‍ನಲ್ಲಿರೋಹನ್‍ಎನ್‍ಕ್ಲೇವ್ ಮತ್ತುಅವೆನ್ಯೂ ಸಂಪೂರ್ಣಗೊಂಡಿದ್ದು, ಪಂಪ್‍ವೆಲ್ ಬಳಿಯ ಕಪಿತಾನಿಯೊದಲ್ಲಿನರೋಹನ್ ಸ್ಕ್ವೇರ್ ನಿರ್ಮಾಣದಕೊನೆಯ ಹಂತದಲ್ಲಿದೆ.
‘ರೋಹನ್ ಸಿಟಿ’ ಹೆಚ್ಚು ಅನುಕೂಲಕರ ಹೂಡಿಕೆತಾಣವಾಗಿ, ಹೂಡಿಕೆದಾರರಿಗೆ ಹಲವಾರು ಪ್ರಯೋಜನಗಳನ್ನು ನೀಡಲಿದೆ. ಅದರ ಹೇರಳವಾದ ವಾಣಿಜ್ಯ ಘಟಕಗಳೊಂದಿಗೆ, ನಗರವು ವಾಣಿಜ್ಯೋದ್ಯಮಿಗಳು, ಸ್ಟಾರ್ಟ್‍ಅಪ್ಸ್‍ಗಳು ಮತ್ತು ಸ್ಥಾಪಿತ ವ್ಯವಹಾರಗಳಿಗೆ ಉತ್ತಮ ವೇದಿಕೆಯನ್ನುಒದಗಿಸುತ್ತದೆ.ವೈವಿಧ್ಯಮಯ ವಾಣಿಜ್ಯ ಸ್ಥಳಗಳ ಲಭ್ಯತೆಯು, ಉದ್ಯಮಿಗಳು ತಮ್ಮ ಉದ್ಯಮಗಳನ್ನು ಪ್ರಾರಂಭಿಸಲು ಪ್ರಶಸ್ತವಾದ ಸ್ಥಳವಾಗಿದೆ, ಹಾಗೆಯೇ ಅಸ್ತಿತ್ವದಲ್ಲಿರುವ ವ್ಯವಹಾರಗಳ ವಿಸ್ತರಣೆಯ ಅಗತ್ಯಗಳನ್ನು ಪೂರೈಸುತ್ತದೆ.ಇದಲ್ಲದೆ, ಹೂಡಿಕೆದಾರರು ವಾಣಿಜ್ಯ ಆಸ್ತಿಗಳನ್ನು ಖರೀದಿಸುವ ಅವಕಾಶವನ್ನು ಬಳಸಿ, ನಗರದಅಭಿವೃದ್ಧಿ ಹೊಂದುತ್ತಿರುವ ವ್ಯಾಪಾರ ಪರಿಸರದ ಲಾಭವನ್ನು ಪಡೆಯಬಹುದು.‘ರೋಹನ್ ಸಿಟಿ’ಯಲ್ಲಿ ಹೂಡಿಕೆ ಮಾಡಿ, ಫ್ಲ್ಯಾಟುಗಳನ್ನು ಖರೀದಿಸಿ, ಬಾಡಿಗೆ ಮಾರುಕಟ್ಟೆಯಿಂದ ಲಾಭ ಪಡೆದು, ಸ್ಥಿರವಾದ ಆದಾಯವನ್ನು ಖಾತ್ರಿಪಡಿಸಿಕೊಳ್ಳಬಹುದು. ಹೀಗಾಗಿ ದೃಢವಾದ ಮಾರುಕಟ್ಟೆ, ಸಾಕಷ್ಟು ಅವಕಾಶಗಳು ಮತ್ತುಅನುಕೂಲಕರ ವ್ಯಾಪಾರ ಪರಿಸರ ವ್ಯವಸ್ಥೆಯೊಂದಿಗೆ, ‘ರೋಹನ್ ಸಿಟಿ’ ಉತ್ತಮ ಹೂಡಿಕೆಗಳನ್ನು ಮಾಡಲು ಮತ್ತು ಸಮೃದ್ಧ ನಗರಕೇಂದ್ರದ ಪ್ರತಿಫಲವನ್ನು ಪಡೆಯಲು ಬಯಸುವವರಿಗೆಆಕರ್ಷಕಆಯ್ಕೆಯಾಗಿದೆ.

ಬೆಂಗಳೂರಿನ ಸೇಂಟ್ ಜೋಸೆಫ್ ಶಾಲೆಯಲ್ಲಿ ಅರಳಿದ ವಿಜ್ಞಾನಲೋಕ

ಬೆಂಗಳೂರು: ದಿನಾಂಕ 26-08-2023 ರಂದು ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಸೈಂಟ್ ಜೋಸೆಫ್ ಸಿಬಿಎಸ್ಇ ಶಾಲೆಯಲ್ಲಿ ವಿಜ್ಞಾನ ವಸ್ತು ಕಲಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಸದಾ ತರಗತಿಗಳಲ್ಲಿ ಪೆನ್ನು ಹಿಡಿಯುತ್ತಿದ್ದ ವಿದ್ಯಾರ್ಥಿಗಳ ಕೈಗಳು ವಿವಿಧ ಬಗೆಯ ವಿಜ್ಞಾನದ ಮಾದರಿಗಳನ್ನು ತಯಾರಿಸಿ ಅಚ್ಚರಿ ಸೃಷ್ಟಿಸಿದ್ದರು. ಪ್ರತಿವರ್ಷವೂ ಶಾಲೆಯೂ ಕೇವಲ ತರಗತಿ ಕೊಠಡಿಯೊಳಗಿನ ಪಠ್ಯ ಪುಸ್ತಕ ಕಲಿಕೆಗೆ ಮಾತ್ರ ಒತ್ತು ನೀಡದೆ, ಮಕ್ಕಳ ಬೌದ್ಧಿಕ ಕೌಶಲ್ಯಗಳ ಜೊತೆಗೆ ವೈಜ್ಞಾನಿಕ ಮತ್ತು ತಾಂತ್ರಿಕ ಅರಿವುಗಳ ಬಾಹ್ಯ ಚಟುವಟಿಕೆಗಳ ಬಗ್ಗೆ ಪ್ರಾಯೋಗಿಕ ಅನುಭವವನ್ನು ಕಟ್ಟಿಕೊಡುವ ಸಲುವಾಗಿ ‘ಸೈಪ್ಲೋರ್ ’ ಎಂಬ ಹೆಸರಿನಲ್ಲಿ ವಿಜ್ಞಾನ ವಸ್ತುಕಲಾ ಪ್ರದರ್ಶನವನ್ನು ಆಯೋಜಿಸುತ್ತಾ ಬಂದಿದೆ. ಪ್ರತಿನಿತ್ಯ ಟೆಸ್ಟ್, ಹೊಂವರ್ಕ, ಅಸೈಮೆಂಟ್ ಎನ್ನುತ್ತಿದ್ದ ಮಕ್ಕಳು , ನವ ನವೀನ ವಿಜ್ಞಾನದ ಮಾದರಿಗಳನ್ನು ತಯಾರಿಸುವುದರ ಜೊತೆಗೆ ವೈಜ್ಞಾನಿಕ ಕಾರಣಗಳನ್ನು ವಿವರಣಾತ್ಮಕ ಕೌಶಲದೊಂದಿಗೆ ವಿವರಿಸುವುದರ ಮೂಲಕ ತಮ್ಮ ಕನಸಿಗೆ ಜೀವ ತುಂಬಿ ಖುಷಿ ಪಟ್ಟರು. ವಿವಿಧ ಬಗೆಯ ವಿಜ್ಞಾನದ, ಮಾದರಿ, ವಿನ್ಯಾಸಗಳು, ವಿದ್ಯಾರ್ಥಿಗಳ ತರ್ಕಿಸುವ ಪ್ರತಿಭೆಯ ಕೌಶಲ್ಯಕ್ಕೆ ಹೊಸ ಚೈತನ್ಯದ ಹುರುಪು ನೀಡಿತು. ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರಲು ಇಂತಹ ಕಾರ್ಯಕ್ರಮಗಳು ಅಗತ್ಯವಾದದ್ದು, ಕಲಿಕೆ ಎನ್ನುವುದು ಸದಾ ಪ್ರಾಯೋಗಿಕವಾಗಿರಬೇಕು ಮಕ್ಕಳ ಕಲಿಕೆಗೆ ನೈಜ ಅನುಭವ ಸಿಕ್ಕಾಗುವಂತಾಗಬೇಕು ಈ ನಿಟ್ಟಿನಲ್ಲಿ ಶಾಲೆಯು ನಡೆಸುತ್ತಿರುವ ಇಂತಹ ಕಾರ್ಯಕ್ರಮ ಪ್ರಶಂಸನೀಯ. ಈ ಕಾರ್ಯ ಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ನಿವೃತ್ತ ಸಲಹೆಗಾರರಾದ ಡಾ.ವಿಜಯ್ ಚಂದ್ರು, ಅವರು ಕಾರ್ಯಕ್ರಮ ವನ್ನು ಉದ್ಘಾಟಿಸುವ ಮೂಲಕ ನ್ಯಾಸದ ಕುರಿತು ಮಾತನಾಡುತ್ತಾ , ಮಕ್ಕಳು ತಯಾರಿಸಿದ್ದ ವಿಜ್ಞಾನ ಮಾದರಿಗಳನ್ನು ಕುರಿತು ಪ್ರಶಂಸೆ ವ್ಯಕ್ತ ಪಡಿಸಿದರು. ಶಾಲಾ ಮುಖ್ಯಸ್ಥರಾದ ಫಾದರ್ ಜೋಸೆಫ್ ಡಿಸೋಜ ಎಸ್ ಜೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನುಡಿಗಳನ್ನು ಹೇಳುವ ಮೂಲಕ ವಿದ್ಯಾರ್ಥಿಗಳಲ್ಲಿ ಉತ್ಸಾಹವನ್ನು ತುಂಬಿದರು. ಶಾಲೆಯ ಪ್ರಾಶುಂಪಾಲರಾದ ಫಾದರ್ ರೋಹನ್ ಡಿ’ ಅಲ್ಮೇಡಾ ಎಸ್ ಜೆ ಅವರು ಮಾತನಾಡುತ್ತಾ ವೈಜ್ಞಾನಿಕತೆ, ಕ್ರಿಯಾತ್ಮಕತೆ, ಹಾಗೂ ಮಾನವೀಯತೆ ಸಮ್ಮಿಲನದಿಂದ ಉತ್ತಮ ಜ್ಞಾನವರ್ಧನೆ ಸಾಧ್ಯ ಎಂದು ಹೇಳಿದರು. ಈ ಕಾರ್ಯ ಕ್ರಮದಲ್ಲಿ ಖಜಾಂಚಿಯಾದ ಫಾದರ್ ಜಾನ್ ಲ್ಯಾಗ್ ಬಾಸ್ಕೊ ಎಸ್ ಜೆ ಉಪ ಪ್ರಾಂಶುಪಾಲರಾದ ಸಿಸ್ಟರ್ ಶೀನಾ , ಪೋಷಕ ಸಭೆಯ ಉಪಾಧ್ಯಕ್ಷ ರಾದ ಕಮಲ್ , ಲೊಯೋಲ ಶಾಲೆಯ ಪ್ರಾಂಶುಪಾಲರಾದ ಫಾದರ್ ಆಲ್ವಿನ್ ಡಿಸೋಜ, ಹರಿಹರದ ಮ್ಯಾನೇಜರ್ ಮತ್ತು ಸಂಯೋಜಕರಾದ ಫಾದರ್ ಹೆರಿಕ್ ಮ್ಯಾಥ್ಯೂಸ್ ಶಾಲೆಯ ಸಂಯೋಕರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿರ್ವ ಗ್ರಾಪಂಚಾಯತ್‌ ಅಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತ ಸವಿತಾ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ವಿಲ್ಸನ್ ರೊಡ್ರಿಗಸ್


ಉಡುಪಿ, ಆ.26: ಶಿರ್ವ ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿ ಕಾಂಗ್ರೆಸ್‌ ಬೆಂಬಲಿತ ಸವಿತಾ ಪೂಜಾರಿ ಹಾಗೂ ಉಪಾಧ್ಯಕ್ಷರಾಗಿ ವಿಲ್ಸನ್‌ ರೊಡ್ರಿಗಸ್‌ ಆಯ್ಕೆಯಾದರು. ಶಿರ್ವ ಗ್ರಾಮ ಪಂಚಾಯತ್ ನಲ್ಲಿ 34 ಸದಸ್ಯರಿದ್ದು ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಸವಿತಾ ಪೂಜಾರಿ, ಬಿಜೆಪಿ ಬೆಂಬಲಿತ ಆಶಾ ಆಚಾರ್ಯ ವಿರುದ್ಧ ಸ್ಫರ್ಧಿಸಿ 20-14 ಅಂತರದಿಂದ ಗೆದ್ದರು. ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಮಾಜಿ ಜಿಪಂ ಸದಸ್ಯ ವಿಲ್ಸನ್‌ ರೋಡ್ರಿಗಸ್‌ ಎದುರಾಳಿ ರಾಜೇಶ್‌ ಶೆಟ್ಟಿ ವಿರುದ್ಧ; ಸ್ಫರ್ಧಿಸಿ 19-15 ಅಂತರ ದಿಂದ ಗೆದ್ದರು. ಚುನಾವಣಾಧಿಕಾರಿಯಾಗಿ ಉಡುಪಿ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್‌ ಗಿರೀಶ್‌, ಉಪಚುನಾವಣಾ ಅಧಿಕಾರಿಯಾಗಿ ಪಂ.ಅಭಿವೃದ್ಧಿ ಅಧಿಕಾರಿ ಅನಂತಪದ್ಮನಾಭ ನಾಯಕ್‌ ಸಹಕರಿಸಿದರು.

    ಈ ಸಂದರ್ಭದಲ್ಲಿ ಪಂಚಾಯತ್‌ ಕಾರ್ಯದರ್ಶಿ ಚ೦ದ್ರಮಣಿ, ಮಾಜಿ ಸಚಿವ ವಿನಯಕುಮಾರ್‌ ಸೊರಕೆ, ಕಾಂಗ್ರೆಸ್‌ ನಾಯಕರಾದ ಅಶೋಕ್‌ಕುಮಾರ್‌ ಕೊಡವೂರು, ನವೀನ್‌ ಚಂದ್ರ ಸುವರ್ಣ, ಪ್ರಶಾಂತ್‌ ಜತ್ತನ್ನ, ಸುನಿಲ್‌ ಬಂಗೇರ, ಇಗ್ನೇಷಿಯಸ್‌ ಡಿಸೋಜ, ಶರ್ಫುದ್ಧಿನ್‌ ಶೇಖ್‌, ಮಾಜಿ ಅಧ್ಯಕ್ಷರಾದ ಕೆ.ಆರ್‌.ಪಾಟ್ಕರ್‌, ಹಸನಬ್ಬಶೇಖ್‌, ರತನ್‌ ಶೆಟ್ಟಿ, ಮೆಲ್ವಿನ್‌ ಡಿಸೋಜ, ಅಶೋಕ್‌ ನಾರಿ ಮೊದಲಾದವರು. ಉಪಸ್ಥಿತರಿದ್ದರು.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಯಲ್ಲಿ ಅರ್ಜಿ ಅಹ್ವಾನ

ಕೋಲಾರ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಪ್ರತಿ ವರ್ಷದಂತೆ ಅನುಷ್ಠಾನಗೊಳಿಸುತ್ತಿರುವ ಗಂಗಾ ಕಲ್ಯಾಣ ಯೋಜನೆ , ಸ್ವಾವಲಂಬಿ ಸಾರಥಿ ಯೋಜನೆ , ಶ್ರಮಶಕ್ತಿ ಸಾಲದಯೋಜನೆ , ವೃತ್ತಿ ಪ್ರೋತ್ಸಾಹ ಯೋಜನೆ , ಶ್ರಮಶಕ್ತಿ ( ವಿಶೇಷ ಮಹಿಳಾ ಯೋಜನೆ ) , ಸಮುದಾಯ ಆಧಾರಿತ ತರಬೇತಿ ಯೋಜನೆ.

ಈ ಯೋಜನೆಗಳಲ್ಲಿ ಸಾಲಸೌಲಭ್ಯ ಪಡೆಯಲು ಮತೀಯ ಅಲ್ಪಸಂಖ್ಯಾತರಿಂದ ( ಅಂದರೆ ಮುಸ್ಲಿಂ , ಕ್ರಿಶ್ಚಿಯನ್ , ಜೈನರು , ಬೌದ್ದರು , ಸಿಬ್ಬರು , ಪಾರ್ಸಿಗಳು ಜನಾಂಗದವರಿಂದ ) ಆನ್ – ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಮೇಲ್ಕಂಡ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಇರಬೇಕಾದ ಅರ್ಹತೆಗಳು ಮತ್ತು ಮಾನದಂಡ ಸರ್ಕಾರಿ ಆದೇಶದಲ್ಲಿ ಸೂಚಿಸಿದಂತೆ ಅರ್ಜಿದಾರರು ಮತೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು. ಅರ್ಜಿದಾರರು ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 15 ವರ್ಷದಿಂದ ಖಾಯಂ ನಿವಾಸಿಯಾಗಿರಬೇಕು.

ಶೇ .33 ರಷ್ಟು ಮಹಿಳೆಯರಿಗೆ ಮೀಸಲಾತಿ ಇರುತ್ತದೆ. ಶೇ .3 ರಷ್ಟು ಅಂಗವಿಕಲರಿಗೆ ಮತ್ತು…
[7:30 pm, 25/08/2023] Shabbir Ahmad Kolar: ಕೋಲಾರ : ವ್ಯವಸ್ಥಾಪಕ ನಿರ್ದೇಶಕರು , ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ( ನಿ ) ಬೆಂಗಳೂರು , ಇವರ ಸುತ್ತೋಲೆ ಪತ್ರದ ದಿನಾಂಕ 22-08-2023ರ ಪತ್ರದಲ್ಲಿ ಸೂಚಿಸಿರುವಂತೆ 2023-24ನೇ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ CET / NEETS ವೃತ್ತಿಪರ ಕೋರ್ಸ್‌ಗಳಲ್ಲಿ .

ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಾದ ಅಂದರೆ ವೈದ್ಯಕೀಯ, ( ಎಂ.ಬಿ.ಬಿ.ಎಸ್ . , ಎಂ.ಡಿ. , ಎಂ.ಎಸ್ . ) ದಂತ ವೈದ್ಯಕೀಯ ( ಬಿ.ಡಿ.ಎಸ್ . , ಎಂ.ಡಿ.ಎಸ್ . ) ಆಯುಷ್ ( ಬಿ.ಆಯುಷ್ , ಎಂ.ಆಯುಷ್ ) ಇಂಜಿನಿಯರಿಂಗ್ & ಟೆಕ್ನಾಲಜಿ ( ಬಿ.ಇ. / ಬಿ.ಟೆಕ್ , ಎಂ.ಇ. / ಎಂ.ಟೆಕ್ ) ಬ್ಯಾಚುಲರ್‌ ಆಪ್‌ ಆರ್ಕಿಟೆಕ್ಟರ್ ಮತ್ತು ಬಿ.ಆರ್ಕ್ , ಎಂ.ಆರ್ಕ್‌ MBA , MCA , LLB , B.Sc In Horticulture , Agricultural Engineering , Dairy Technology , Forestry , Veterinary and Animal Technology , Fisheries , Sericulture , Home / Community Sciences Food Nutrition and Dietetics , B.Pharma , M.Pharma Pharma D and D Pharma .

ಇಂತಹ ಪದವಿ ಕೋರ್ಸ್‌ಗಳಲ್ಲಿ ಆಯ್ಕೆಯಾದ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅರಿವು ರಿನಿವಲ್ ( Arivu Renewal ) ಸಾಲದ ಯೋಜನೆಯಡಿ ( ವಿದ್ಯಾಭ್ಯಾಸ ಸಾಲ ) ಸಾಲ ಪಡೆಯಲು ಅಪೇಕ್ಷಿಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅಂದರೆ ಮುಸ್ಲಿಂ , ಕ್ರಿಶ್ಚಿಯನ್ , ಜೈನ್ , ಬೌದ್ಧರು , ಸಿಖ್ , ಪಾರ್ಸಿ ಇವರುಗಳು.

ಈ ಹಿಂದಿನ ವರ್ಷದಲ್ಲಿ ಪಡೆದಿರುವ ಸಾಲದ ಮೊತ್ತದ ಶೇ 12 % ರಷ್ಟನ್ನು ಪಾವತಿಸಿ ನಿಗಮದ ಈ ಕೆಳಕಂಡ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ .

ಮುಂದುವರೆದು ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗಿದ್ದು ಬೇರೆ ಬೇರೆ ವರ್ಷಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು ಅರಿವು ವಿದ್ಯಾಭ್ಯಾಸ ಸಾಲ ಪಡೆಯದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ ಮತ್ತು ಇಂತಹ ವಿದ್ಯಾರ್ಥಿಗಳು ಯಾವುದೇ ರಿನಿವಲ್ ಮೊತ್ತವನ್ನು ಪಾವತಿಸುವ ಅಗತ್ಯವಿರುವುದಿಲ್ಲ ಹಾಗೂ ಸಲ್ಲಿಸಿದ ಅರ್ಜಿಯ ಹಾರ್ಡ್ ಕಾಪಿಗಳನ್ನು ಮತ್ತು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿರುವ Original New Indemnity Bond ಮತ್ತು ಇತರೆ ಮೂಲ ದಾಖಲಾತಿಗಳೊಂದಿಗೆ ಜಿಲ್ಲಾ ವ್ಯವಸ್ಥಾಪಕರ ಕಛೇರಿಗೆ ಸಲ್ಲಿಸಬೇಕಾಗಿರುತ್ತದೆ ಮತ್ತು ಆನ್‌ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ನಿಗದಿಪಡಿಸಿರುವುದಿಲ್ಲ .

ಅರಿವುರಿನಿವಲ್ ( Arivu Renewal ) ಸಾಲದ ಯೋಜನೆಯ ಆನಲೈನ್ Kmdconline.karnataka.gov.in ಈ ವೆಬ್‌ಪೇಜ್ ಮೂಲಕ ತಿಳಿಯಬಹುದು. ಹೆಚ್ಚಿನ ಮಾಹಿತಿಗಾಗಿ ಅರ್ಜಿ ಸಲ್ಲಿಸಬೇಕಾದ ಕಛೇರಿ ವಿಳಾಸ ಕೋಲಾರ ಜಿಲ್ಲಾ ಕಛೇರಿ , ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ( ನಿ ) , ಮೊದಲನೇ ಮಹಡಿ , ಮೌಲಾನಾಅಜಾದ್ ಭವನ , ಶ್ರೀ ದೇವರಾಜ್ ಅರಸು ಬಡಾವಣೆ , 2 ನೇ ಬ್ಲಾಕ್ , ವಾರ್ಡ್ ನಂ -01 , ಟಮಕ -563103 , ದೂ ಸಂ – 08152-200786 , ಸಹಾಯವಾಣಿ ಸಂಖ್ಯೆ : 8277799990. ( 24 * 7 ) ಗೆ ಸಂಪರ್ಕಿಸಬಹುದು ಎಂದು ಕೋಲಾರ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ( ನಿ ) , ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .