ದಾನಿ ಮೈಕಲ್ ಡಿ’ಸೊಜಾ ಅಂತವರು ಸಮಾಜಕ್ಕೆ ಪ್ರೇರಣೆ – ಬಿಷಪ್ ಡಾ| ಪೀಟರ್ ಪಾವ್ಲ್

ಮಂಗಳೂರು; “ದಾನ ನೀಡುವವರು ದೊಡ್ಡವರಲ್ಲ, ದಾನ ಪಡೆಯುವವರು ಸಣ್ಣವರಲ್ಲ. ನಾವೆಲ್ಲರೂ ದೇವರ ಮಕ್ಕಳಾದ್ದರಿಂದ ಸಮಾನರು. ಸಮಜದ ಅಶಕ್ತ  ವರ್ಗದ ಜನರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ, ಮನೆ ಕಟ್ಟಲು ಮತ್ತು ದುರಸ್ಥಿಗೆ ದಾನ – ಹೀಗೆ ಸಮಾಜದ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಲೇ ಇರುವ ಅನಿವಾಸಿ ಉದ್ಯಮಿ, ಕೊಡುಗೈ ದಾನಿ ಶ್ರೀ ಮೈಕಲ್ ಡಿ’ಸೊಜಾ ನಮ್ಮ ಸಮಾಜಕ್ಕೆ ಪ್ರೇರಣೆ” ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ|  ಪೀಟರ್ ಪಾವ್ಲ್ ಸಲ್ದಾನ್ಹಾ ಅಭಿಪ್ರಾಯಪಟ್ಟರು.

ಡಾ| ಸಲ್ಡಾನ್ಹಾ ಮಂಗಳೂರು ಧರ್ಮಕ್ಶೇತ್ರ ಕೆನರಾ ಒರ್ಗನೈಸೇಶನ್ ಫೊರ್ ಡೆವಲಪ್‌ಮೆಂಟ್ ಆಂಡ್ ಪೀಸ್ (ಸಿ.ಒ.ಡಿ.ಪಿ.) ಸಂಸ್ಥೆ, ಸುವರ್ಣ ಮಹೋತ್ಸವದ ಸಲುವಾಗಿ, ಧರ್ಮಕ್ಷೇತ್ರದ ದುರ್ಬಲ ವರ್ಗದ ಜನರಿಗೆ ಗೃಹ ನಿರ್ಮಾಣ ಮತ್ತು ದುರಸ್ಥಿ ಕಾರ್ಯಕ್ರಮದ ಅಂಗವಾಗಿ, ಫಲಾನುಭವಿಗಳಿಗೆ ಅನುದಾನ ವಿತರಣೆ ಮಾಡಿ ಮಾತನಾಡುತಿದ್ದರು. ಕಾರ್ಯಕ್ರಮಕ್ಕೆ 180 ಫಲಾನುಭವಿಗಳು ಹಾಜರಿದ್ದು, ಈಗಾಗಲೇ ಗೃಹ ನಿರ್ಮಾಣ, ದುರಸ್ಥಿ ಅರಂಬಿಸಿರುವ 77 ಫಲಾನುಭವಿಗಳಿಗೆ ಕಾರ್ಯಕ್ರಮದಲ್ಲಿ ಅನುದಾನ ವಿತರಿಸಲಾಯಿತು.

ಧರ್ಮಗುರು ಅ| ವಂ| ವಲೇರಿಯನ್ ಡಿ’ಸೋಜಾ

ಧರ್ಮಗುರು ಅ| ವಂ| ವಲೇರಿಯನ್ ಡಿ’ಸೊಜಾ ಧರ್ಮಕ್ಷೇತ್ರದ ಹಿರಿಯ ಧರ್ಮಗುರು ಅ| ವಂ| ವಲೇರಿಯನ್ ಡಿ’ಸೊಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ” ಮೈಕಲ್ ಜತೆಗೆ ನನ್ನ ಒಡನಾಟ ಕಳೆದ 45 ವರ್ಷಗಳದ್ದು. ನನಗೆ ದೇವರು ಅಗತ್ಯ ಇರುವುದಕ್ಕೂ ಮಿಕ್ಕಿ ಕೊಟ್ಟಿರುವುದರಿಂದ, ಅದನ್ನು ಕಷ್ಟದಲ್ಲಿರುವವರ ಜತೆ ಹಂಚಿಕೊಳ್ಳಬೇಕಾದ್ದು ನನ್ನ ಧರ್ಮ. ಮೈಕಲ್ ರಂತಹ ಹತ್ತು ಜನರು ನಮ್ಮ ಸಮಾಜದಲ್ಲಿದ್ದರೂ ಇಂದು ಈ ಹಂತದ್ದಲ್ಲಿ ಬಡತನವಿರುತ್ತಿರಲಿಲ್ಲ” ಎಂದು ಶ್ಲಾಘಿಸಿದರು.      

ಪ್ರಸಕ್ತ ವರ್ಷದಲ್ಲಿ  ಧರ್ಮಕ್ಷೇತ್ರದ ಅಶಕ್ತ ವರ್ಗದವರ ಗೃಹ ನಿರ್ಮಾಣ ಮತ್ತು ದುರಸ್ಥಿಗೆ ಮೈಕಲ್ ಡಿ’ ಸೊಜಾ ಒಂದು ಕೋಟಿ ರುಪಾಯಿ ಹದಿನೆಂಟು ಲಕ್ಷ ರುಪಾಯಿ ಧನಸಹಾಯ ನೀಡಿದ್ದಾರೆ, ಈ ಸಹಾಯ ಮುಂದಿನ ವರ್ಷಗಳಲ್ಲೂ ಮುಂದುವರೆಯಲಿದೆ ಎಮ್ದು ಸಿ.ಒ.ಡಿ.ಪಿ. ನಿರ್ದೇಶಕ ವಂ| ವಿನ್ಸೆಂಟ್ ಡಿಸೊಜಾ ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಕಲ್ ಡಿ’ಸೊಜಾರವರ  ಸೋದರಿ ಸಿಲ್ವಿಯಾ, ವಿನ್ಸೆಂಟ್ ಡಿ’ಸಿಲ್ವ, ಕಾರ್ಯಕ್ರಮದ ಸಂಯೋಜಕರಾದ ಸ್ಪೀಫನ್ ಪಿಂಟೊ, ಓಸ್ವಲ್ಡ್ ರೊಡ್ರಿಗಸ್, ಹೆನ್ರಿ ಡಿಸೊಜಾ, ಸಂತ ವಿಶೆಂತ್ ಪಾವ್ಲ್ ಸಭೆಯ ಧರ್ಮಕ್ಷೇತ್ರದ ಅಧ್ಯಕ್ಷರಾದ ಜ್ಯೋ ಕುವೆಲ್ಹೊ, ವಂ| ಆಸ್ಟಿನ್ ಪೆರಿಸ್, ವಂ| ಅನಿಲ್ ಐವನ್ ಫೆರ್ನಾಂಡಿಸ್ ಮತ್ತಿತರು ಹಾಜರಿದ್ದರು.  

ಶ್ರೀನಿವಾಸಪುರ ತಾಲೂಕಿಗೆ ಹೊಸದಾಗಿ ನ್ಯಾಯಬೆಲೆ ಅಂಗಡಿಗಳ ಪ್ರಕಟಣೆ ಹೊರಡಿಸಲಾಗಿದೆ : ತಹಶೀಲ್ದಾರ್ ಶರೀನ್‍ತಾಜ್

ಶ್ರೀನಿವಾಸಪುರ : ಶ್ರೀನಿವಾಸಪುರ ತಾಲೂಕಿಗೆ ಸಂಬಂದಿಸಿದಂತೆ ಗ್ರಾಮಗಳಾದ ಆರ್.ತಿಮ್ಮಸಂದ್ರ, ನಾಗದೇನಹಳ್ಳಿ, ಯೆಚ್ಚನಹಳ್ಳಿ, ಮಟ್ಟಕನ್ನಸಂದ್ರ, ಯಲ್ದೂರು -2, ಶ್ಯಾಗತ್ತೂರು , ಯದರೂರು, ನೆಲವಂಕಿ, ಕಶೆಟ್ಟಿಹಳ್ಳಿ, ಕೂರಿಗೇಪಲ್ಲಿ , ಪಾತೂರುಗಡ್ಡ, ಅಡ್ಡಗಲ್-1, ಮರಸನಪಲ್ಲಿ , ಅಡ್ಡಗಲ್-2 ಒಟ್ಟು 14 ಗ್ರಾಮಗಳಲ್ಲಿ ಹೊಸದಾಗಿ ನ್ಯಾಯಬೆಲೆ ಅಂಗಡಿಗಳಿಗೆ ಪ್ರಕಟಣೆಯನ್ನು ಹೊರಡಿಸಲಾಗಿದೆ ಎಂದು ತಹಶೀಲ್ದಾರ್ ಶರೀನ್‍ತಾಜ್ ಗುರುವಾರ ಪ್ರತಿಕಾ ಪ್ರಕಟಣೆಗೆ ತಿಳಿಸಿದರು.
ಖಾಸಗಿ ವ್ಯಕ್ತಿಗಳು, ವಿಕಲಚೇತನರು, ತೃತೀಯ ಲಿಂಗಿಗಳು ದಿನಾಂಕ 4-9-23 ರ ಸಂಜೆ 5;30 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು ಅಂದು ರಜಾ ದಿನವಾದಲ್ಲಿ ನಂತರದ ಕಛೇರಿ ಕರ್ತವ್ಯ ದಿನದ ಸಂಜೆ 5:30 ಗಂಟೆರೊಳಗೆ ಅರ್ಜಿ ಸಲ್ಲಿಸಬಹುದು. ನಿಗದಿಪಡಿಸಿದ ಅವಧಿಯ ನಂತರ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದರು.
ಅರ್ಜಿ ನಮೂನೆ ಹಾಗೂ ಇತರೆ ಮಾಹಿತಿಯನ್ನು ಸಂಬಂದಪಟ್ಟ ತಾಲೂಕು ಕಛೇರಿಯ ಆಹಾರ ಶಾಖೆಯಲ್ಲಿ ಅಥವಾ ಉಪನಿರ್ದೇಶಕರ ಕಛೇರಿ, ಆಹಾರ , ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಜಿಲ್ಲಾಡಳಿತ ಭವನ, ಕೋಲಾರ ಜಿಲ್ಲೆ ಇಲ್ಲಿ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಗಳಲ್ಲಿ , ಸಾಂಸ್ಕ್ರತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಿ: ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ 1 : ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಗಳಲ್ಲಿ , ಸಾಂಸ್ಕøತಿ ಕಾರ್ಯಕ್ರಮಗಳಲ್ಲಿ ಪಾಲ್ಗುಳ್ಳುವಂತೆ ಸೂಚಿಸಿ, ವಿದ್ಯಾರ್ಥಿಗಳು ಆಟಗಳಲ್ಲಿ ಪಾಲ್ಗುಳ್ಳುವುದರಿಂದ ದೈಹಿಕ, ಮಾನಸಿಕವಾಗಿ ಧೈರ್ಯ,ಸ್ಥೈರ್ಯ ಹಾಗು ಜೀವರಕ್ಷಣಾ ಕೌಶಲ್ಯಗಳನ್ನು ಬೆಳಸುವಂತಾಗುತ್ತದೆ. ಹಾಗು ಕ್ರೀಡೆಗಳಿಂದ ಮಕ್ಕಳಲ್ಲಿ ಏಕಾಗ್ರತೆ ಬೆಳೆಯಲು ಸಹಕಾರಿಯಾಗುತ್ತದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸಲಹೆ ನೀಡಿದರು.
ಪಟ್ಟಣದ ಹೊರವಲಯದ ಮ್ಯಾಂಗೋವ್ಯಾಲಿ ಶಾಲಾವರಣದಲ್ಲಿ ಗುರುವಾರ ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದ ಬೆನ್ನೆಲುಬಾದ ವಿದ್ಯಾರ್ಥಿಗಳು ಕೆಟ್ಟಹವ್ಯಾಸಗಳಿಗೆ ತಮ್ಮ ಅಮೂಲ್ಯವಾದ ಜೀವನವನ್ನು ಬಲಿಕೊಡದೆ ಆರೋಗ್ಯವಂತ ಜೀವನವನ್ನು ಪಠ್ಯ ಹಾಗು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗುಂಡು ಉತ್ತಮ ಸಾಧನೆಯ ಮೂಲಕ ದೇಶದ ಘನತೆ ಗೌರವವನ್ನು ಕಾಪಾಡುವಂತೆ ಕರೆನೀಡಿದರು.
ಗಂಗೋತ್ರಿ ಕಾಲೇಜಿನ ಆಡಳಿತ ಮಂಡಲಿ ಅಧ್ಯಕ್ಷ ಎಸ್.ಜಿ.ಮುರಳಿನಾಥ್ ಕ್ರೀಡೆಗಳು ವಿದ್ಯಾರ್ಥಿಗಳ ಜೀವನದಲ್ಲಿ ಅವಿಭಾಜ್ಯ ಅಂಗವಾಗಿದೆ ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಕ್ರೀಡಾಕೂಟದ ಕ್ರೀಡೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಸೋಲು, ಗೆಲವು ಸಮಾನವಾಗಿ ಸ್ವೀಕರಿಸಬೇಕು. ಸ್ಪರ್ಧಾತ್ಮಕ ಮನೋಭಾವದಿಂದ ಆರೋಗ್ಯಕ್ಕಾಗಿ ಆಟವಾಡಿ ಕ್ರೀಡೆಗಳಲ್ಲಿ ವಿಜೇತರಾಗಿ ಶಾಲೆಗಳ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.
ಬಿಇಒ ವಿ.ಉಮಾದೇವಿ ಮಾತನಾಡಿ ವಿದ್ಯಾರ್ಥಿಗಳು ವ್ಯಾಸಂಗದ ದಿನಗಳಲ್ಲಿ ಶೈಕ್ಷಣಿಕ ಪ್ರಗತಿಯೊಂದಿಗೆ ಕ್ರೀಡಾಶಕ್ತಿಯನ್ನು ಬೆಳಿಸಿಕೊಂಡು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಕ್ರೀಡಾಮನೋಭಾವದಿಂದ ಸೋಲು , ಗೆಲವು ಸಮಾನವಾಗಿ ಸ್ವೀಕರಿಸಿ ಕ್ರೀಡಾಕೂಟದ ಯಶಸ್ವಿಗೆ ಸಹಕರಿಸುವಂತೆ ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಎನ್.ಬಿ.ಗೋಪಾಲಗೌಡ, ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸುಲೋಚನ, ಮ್ಯಾಂಗೋವ್ಯಾಲಿ ಶಾಲಾ ಆಡಳಿತ ಮಂಡಲಿ ಅಧ್ಯಕ್ಷ ಎಸ್.ಜಿ.ಅಮರನಾಥ್, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ವೇಣುಗೋಪಾಲ್, ಪ್ರೌಡಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸುಬ್ರಮಣಿ, ಸಿಆರ್‍ಪಿ ರಾಧಕೃಷ್ಣ, ಗ್ರಾ.ಪಂ ಉಪಾಧ್ಯಕ್ಷ ವಿಶ್ವನಾಥರೆಡ್ಡಿ, ಗ್ರಾ.ಪಂ ಮಾಜಿ ಅಧ್ಯಕ್ಷ ಹೊಸಹಳ್ಳಿ ಬಾಬು, ಮುಖಂಡ ಅಂಬೇಡ್ಕರ್ ಪಾಳ್ಯ ರವಿ, ಸರ್ಕಾರಿ ಬಾಲಕೀಯರ ಕಾಲೇಜಿನ ಉಪಪ್ರಾಂಶುಪಾಲ ಶ್ರೀಧರ್, ಶಿಕ್ಷಕರಾದ ಎನ್.ವಿ.ವೇಣುಗೋಪಾಲ್ , ಬಾಬು ಇದ್ದರು.

ಮಾನನಷ್ಟ ಮೊಕದ್ದಮೆ ಪ್ರಕರಣ:ರಾಹುಲ್ ಗಾಂಧಿಯ ಜೈಲು ಶಿಕ್ಷೆಗೆ ‘ಸುಪ್ರೀಂ ಕೋರ್ಟ್’ ಮಧ್ಯಂತರ ತಡೆ; ಸಂಸದರಾಗಿ ಮುಂದುವರಿಯಲಿದ್ದಾರೆ

ನವದೆಹಲಿ, ಜು.೪: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ‘ಮೋದಿ ಉಪನಾಮ’ ಹೇಳಿಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ಹೈಕೋರ್ಟ್ ನೀಡಿದ್ದ 2 ವರ್ಷಗಳ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.

ಈಗ ರಾಹುಲ್ ಗಾಂಧಿ ಸಂಸದ ಸ್ಥಾನದ ಅನರ್ಹತೆಯಿಂದ ರಕ್ಷಿತರಾಗಿದ್ದಾರೆ. ಅವರು ಕೇರಳದ ವೈಯನಾಡು ಲೋಕಸಭೆ ಕ್ಷೇತ್ರದ ಸಂಸದರಾಗಿ ಮುಂದುವರಿಯಲಿದ್ದಾರೆ.

ಪ್ರಕರಣ ಸಂಬಂಧ ಗುಜರಾತ್ ಹೈಕೋರ್ಟ್ ನೀಡಿದ್ದ ಶಿಕ್ಷೆಗೆ ತಡೆ ಕೋರಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೋದಿ ಉಪನಾಮ ಟೀಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಯನ್ನು ತಡೆಹಿಡಿಯಲು ನಿರಾಕರಿಸಿದ ಗುಜರಾತ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಶಿಕ್ಷೆಗೆ ಮಧ್ಯಂತರ ತಡೆ ನೀಡಿದೆ. ರಾಹುಲ್ ಗಾಂಧಿ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ದರು.

ಕುಂದಾಪುರ: ಸೆಕ್ಯೂಲರ್ ಧರ್ಮಗುರುಗಳ ಪಾಲಕ ಸಂತ ವಿಯಾನ್ನಿಯ ಸ್ಮರಣೆ : ಧರ್ಮಗುರುಗಳಿಗೆ ಅಭಿನಂದನೆ

ಕುಂದಾಪುರ, ಆ.4: ಸ್ಥಳೀಯ ಪವಿತ್ರ ರೋಜರಿ ಮಾತಾ ಇಗರ್ಜಿಯಲ್ಲಿ ಮಂಗಳೂರು ಮತ್ತು ಉಡುಪಿ ಧರ್ಮಪ್ರಾಂತ್ಯದ ಸೆಕ್ಯೂಲರ ಮೇಳದ ಧರ್ಮಗುರುಗಳ ಪಾಲಕ ಸಂತ ಜೋನ್ ಬ್ಯಾಪ್ಟಿಸ್ಟ್ ಮಾರೀ ವಿಯಾನ್ನಿ ಇವರು ಇಹ ಲೋಕ ತ್ಯಜಿಸಿದ ದಿನ ಅಗೋಸ್ತ್ 4 ರಂದು ಕುಂದಾಪುರ ಇಗರ್ಜಿಯ  ಧರ್ಮಗುರುಗಳು ಬಲಿಪೂಜೆಯನ್ನು ಅರ್ಪಿಸಿ ಅವರ ಸ್ಮರಣೆ ಆಚರಿಸಿದರು.
       ಇಗರ್ಜಿಯ ಸಹಾಯಕ ಧರ್ಮಗುರು ವಂ| ಅಶ್ದಿನ್ ಆರಾನ್ನ  ಪವಿತ್ರ ಬಲಿದಾನವನ್ನು ಅರ್ಪಿಸಿ “ನಮಗಾಗಿ ನಿಮ್ಮ ಪ್ರಾರ್ಥನೆಗಳು ಅಗತ್ಯವಾಗಿವೆ, ನಾವು ನಮ್ಮ ಗುರು ದಿಕ್ಷೆಯನ್ನು ಸರಿಯಾಗಿ ಮುನ್ನೆಡೆಸಿಕೊಂಡು ಹೋಗಲು, ನಮಗೆ ನಿಮ್ಮ ಪ್ರಾರ್ಥನೆ ಅಗತ್ಯವಿದೆಯೆಂದು” ತಿಳಿಸಿದರು. ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ ಬಲಿದಾನವನ್ನು ಸಹ ಬಲಿದಾನವನ್ನು ಅರ್ಪಿಸಿ ದೊಡ್ಡ ಸಂಖ್ಯೆಯಲ್ಲಿ ಪೂಜೆಗೆ ಆಗಮಿಸಿದಕ್ಕೆ ಮತ್ತು ಅಭಿನಂದ ಸಲ್ಲಿಸಿದ್ದಕ್ಕೆ ಕ್ರತ್ಜತೆ ಸಲ್ಲಿಸಿದರು.
     ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಇನ್ನಿತರ ಧರ್ಮ ಭಗಿನಿಯರು, ಪಾಲನ ಮಂಡಳಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆಯಾದ ಸಿಸ್ಟರ್ ಸುಪ್ರಿಯಾ,  ಇತರ ಧರ್ಮ ಭಗಿನಿಯರು, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು ಹಾಗೂ ಭಕ್ತಾಧಿಗಳು ಹಾಜರಿದ್ದು ಧರ್ಮಗುರುಗಳನ್ನು ಅಭಿನಂದಿಸಿದರು.

ಶಿವಮೊಗ್ಗ ಧರ್ಮಪ್ರಾಂತ್ಯದ “ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ (ಆರ್)” 34 ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು

ಶಿವಮೊಗ್ಗ, ಆಗಸ್ಟ್ 3, 2023: ಶಿವಮೊಗ್ಗ ಧರ್ಮಪ್ರಾಂತ್ಯದ ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವೀಸ್ ಸೊಸೈಟಿ (ಆರ್) (ಎಸ್‌ಎಂಎಸ್‌ಎಸ್‌ಎಸ್) ತನ್ನ 34 ನೇ ಸಂಸ್ಥಾಪನಾ ದಿನವನ್ನು ಶಿವಮೊಗ್ಗದ ಎಸ್‌ಎಂಎಸ್‌ಎಸ್‌ಎಸ್ – ಚೈತನ್ಯದಲ್ಲಿ ಆಗಸ್ಟ್ 3 ರಂದು ಆಚರಿಸಿತು.

ಈ ದಿನದ ನೆನಪಿಗಾಗಿ SMSSS – ಚೈತನ್ಯ ಅವರು ಅರ್ಧ ದಿನದ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಬೆಳಗ್ಗೆ 10 ಗಂಟೆಗೆ ಎಸ್‌ಎಂಎಸ್‌ಎಸ್‌ಎಸ್‌ನಲ್ಲಿ ಧರ್ಮಪ್ರಾಂತ್ಯದ ಧರ್ಮಗುರುಗಳು ಮತ್ತು ಧಾರ್ಮಿಕ ಮತ್ತು ಎಸ್‌ಎಂಎಸ್‌ಎಸ್‌ಎಸ್ ಸಿಬ್ಬಂದಿ ಜಮಾಯಿಸಿದರು. ಎಸ್‌ಎಂಎಸ್‌ಎಸ್‌ಎಸ್‌ನ ನಿರ್ದೇಶಕ ರೆ.ಫಾ. ಕ್ಲಿಫರ್ಡ್ ರೋಶನ್ ಪಿಂಟೋ ಅವರು ಎಸ್‌ಎಂಎಸ್‌ಎಸ್‌ಎಸ್‌ನ ಅಧ್ಯಕ್ಷ ಅತಿ ವಂ. ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ., ಸಂಪನ್ಮೂಲ ವ್ಯಕ್ತಿ ರೆ.ಫಾ. ಸೆಡ್ರಿಕ್ ಪ್ರಲಾಶ್ ಎಸ್.ಜೆ (ಮಾನವ ಹಕ್ಕುಗಳು, ಸಮನ್ವಯ ಮತ್ತು ಶಾಂತಿ ಕಾರ್ಯಕರ್ತ/ಲೇಖಕರು), ಶಿವಮೊಗ್ಗ ಧರ್ಮಪ್ರಾಂತ್ಯದ ವಿಜಿ ಅವರನ್ನು ಸ್ವಾಗತಿಸಿದರು. ಜೋಸೆಫ್ ಫೆಲಿಕ್ಸ್ ನೊರೊನ್ಹಾ, ಪುರೋಹಿತರು ಮತ್ತು ಧಾರ್ಮಿಕರು ಹಾಗೂ ಸಿಬ್ಬಂದಿಗಳು ಜಮಾಯಿಸಿದರು.

ಎಸ್‌ಎಂಎಸ್‌ಎಸ್‌ಎಸ್‌ ಅಧ್ಯಕ್ಷರು ಹಾಗೂ ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್‌ ವಂದನೀಯ ಡಾ. ಫ್ರಾನ್ಸಿಸ್‌ ಸೆರಾವೊ ಎಸ್‌ಜೆ ಅವರನ್ನು ಸಭೆಗೆ ಪರಿಚಯಿಸಿದರು.

ಇಂದಿನ ಸಂದರ್ಭದಲ್ಲಿ ಸಾಮಾಜಿಕ ನ್ಯಾಯವನ್ನು ಸಾಧಿಸುವಲ್ಲಿ “ಅರಿವು, ಸಿದ್ಧತೆ ಮತ್ತು ಪ್ರತಿಕ್ರಿಯೆ” ಕುರಿತು ರೆ.ಫಾ ಸೆಡ್ರಿಕ್ ಪ್ರಕಾಶ್ ಎಸ್.ಜೆ ಮಾತನಾಡಿದರು. ಸತ್ಯ ಮತ್ತು ನ್ಯಾಯಕ್ಕಾಗಿ ಧ್ವನಿಯಾಗುವಂತೆ ಅವರು ಭಾಗವಹಿಸುವವರಿಗೆ ಸವಾಲು ಹಾಕಿದರು. ನಾವು ಪ್ರಭುವಾದ ಯೇಸುವಿನಿಂದಲೇ ಧೈರ್ಯವನ್ನು ಪಡೆದುಕೊಳ್ಳುತ್ತೇವೆ ಎಂದು ಹೇಳಿದರು.

ಮಧ್ಯಾಹ್ನ 12 ಗಂಟೆಗೆ ಅತಿ ವಂದನೀಯ ಡಾ. ಫ್ರಾನ್ಸಿಸ್ ಸೆರಾವೋ ಎಸ್.ಜೆ ಅವರು ಪವಿತ್ರ ಯಜ್ಞವನ್ನು ಆಚರಿಸಿ ದೇವರಿಗೆ ಕೃತಜ್ಞತೆ ಸಲ್ಲಿಸಿದರು. ರೆ.ಫಾ.ಸೆಡ್ರಿಕ್ ಪ್ರಕಾಶ್ ಎಸ್.ಜೆ ಅರ್ಥಪೂರ್ಣ ಪ್ರವಚನ ಬೋಧಿಸಿದರು. ಅವರು ಗಾಸ್ಪೆಲ್ ಮ್ಯಾಥ್ಯೂ 13:47 – 53 “ದಿ ಪೇಬಲ್ ಆಫ್ ದಿ ನೆಟ್” ಕುರಿತು ಮಾತನಾಡಿದರು. ಅವರು ನಮ್ಮ ಇಂದಿನ ಧ್ಯೇಯೋದ್ದೇಶದಲ್ಲಿ ಈ ಭಾಗವನ್ನು ಸಂದರ್ಭೋಚಿತಗೊಳಿಸಿದರು. ಬಲೆ, ಮೀನು ಮತ್ತು ನೀರು ಸಂಕೇತಿಸುತ್ತದೆ ಎಂದು ಅವರು ಹೇಳಿದರು; ಹೊಸತನ (ಸೇಂಟ್ ಪಾಲ್ – ಜೀಸಸ್ ನಂತಹ ಹೊಸ ವ್ಯಕ್ತಿಯನ್ನು ಧರಿಸುವುದು), ಭ್ರಾತೃತ್ವ (ಕರುಣಾಮಯಿ ಹೃದಯದಿಂದ ನಿರ್ಗತಿಕರನ್ನು ತಲುಪುವುದು) ಮತ್ತು ಸಾಕ್ಷಿ (ಗೋಚರ ಮತ್ತು ಗಾಯನ).

ಎಸ್‌ಎಂಎಸ್‌ಎಸ್‌ಎಸ್ ನಿರ್ದೇಶಕ ರೆ.ಫಾ. ಕ್ಲಿಫರ್ಡ್ ರೋಶನ್ ಪಿಂಟೊ ಬಿಷಪ್ ಫ್ರಾನ್ಸಿಸ್ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ನೀಡಿದ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ಧನ್ಯವಾದ ಸಲ್ಲಿಸಿದರು. ಅವರು ಸಂಪನ್ಮೂಲ ವ್ಯಕ್ತಿ ಫ್ರಾ ಸೆಡ್ರಿಕ್ ಪ್ರಕಾಶ್ ಎಸ್ ಜೆ ಅವರ ಸ್ಪೂರ್ತಿದಾಯಕ ಭಾಷಣಕ್ಕಾಗಿ ಮತ್ತು ನೆರೆದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

SMSSS ಅನ್ನು 11ನೇ ಆಗಸ್ಟ್ 1989 ರಂದು “ಗೌರವದಿಂದ ಜೀವನದ ಕಡೆಗೆ” ಎಂಬ ಧ್ಯೇಯವಾಕ್ಯದೊಂದಿಗೆ ಪ್ರಾರಂಭಿಸಲಾಯಿತು. ಶಿವಮೊಗ್ಗದ ಡಯಾಸಿಸ್ನ ಮೊದಲ ಬಿಷಪ್ ದಿವಂಗತ ಆರ್ಚ್ಬಿಷಪ್ ಮೋಸ್ಟ್ ರೆವ್ ಡಾ ಇಗ್ನೇಷಿಯಸ್ ಪಿಂಟೋ SMSSS ಅನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ಶಿವಮೊಗ್ಗ ಧರ್ಮಪ್ರಾಂತ್ಯದ ಎರಡನೇ ಬಿಷಪ್ ಮೋಸ್ಟ್ ರೆವ್ ಡಾ ಜೆರಾಲ್ಡ್ ಐಸಾಕ್ ಲೋಬೋ ಅವರು ಎಸ್‌ಎಂಎಸ್‌ಎಸ್‌ಎಸ್ ಧ್ಯೇಯೋದ್ದೇಶವನ್ನು ಮತ್ತೊಂದು ಹಂತಕ್ಕೆ ಸಾಗಿಸಿದರು. ಶಿವಮೊಗ್ಗ ಧರ್ಮಪ್ರಾಂತ್ಯದ ಪ್ರಸ್ತುತ ಬಿಷಪ್ ಮೋಸ್ಟ್ ರೆವ್ ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ ಅವರು SMSSS ಅನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದ್ದಾರೆ.

SMSSS ಸೇವೆ ಸಲ್ಲಿಸಿದ ನಿರ್ದೇಶಕರು:

  1. ರೆವ್ ಫಾದರ್ ಮಾರ್ಕ್ ಪ್ಯಾಟ್ರಿಕ್ ಡಿ’ಸಿಲ್ವಾ
  2. ರೆ.ಫಾ.ಕ್ಲೆಮೆಂಟ್ ಡಿಸೋಜಾ
  3. ರೆ.ಫಾ. ಗಿಲ್ಬರ್ಟ್ ಲೋಬೊ
  4. ಧರ್ಮಗುರು ವೀರೇಶ್ ವಿನ್ಸೆಂಟ್ ಮೊರಾಸ್
  5. ರೆವ್ ಫಾದರ್ ರಿಚರ್ಡ್ ಪೈಸ್
  6. ರೆ. ಫಾದರ್ ಕ್ಲಿಫರ್ಡ್ ರೋಶನ್ ಪಿಂಟೋ ಪ್ರಸ್ತುತ ನಿರ್ದೇಶಕರಾಗಿದ್ದಾರೆ.

SMSSS ನಲ್ಲಿ ಸಂಕ್ಷಿಪ್ತ ಟಿಪ್ಪಣಿ. ಒಳ್ಳೆಯ ಮನಸ್ಸಿನ ಜನರು SMSSS ನೊಂದಿಗೆ ಪಾಲುದಾರರಾಗಬಹುದು.

ಶಿವಮೊಗ್ಗ ಮಲ್ಟಿಪರ್ಪಸ್ ಸೋಶಿಯಲ್ ಸರ್ವಿಸ್ ಸೊಸೈಟಿ (ಆರ್) ಶಿವಮೊಗ್ಗ, ಕರ್ನಾಟಕ, ಭಾರತದ ಮೂರು ನಾಗರಿಕ ಜಿಲ್ಲೆಗಳನ್ನು ಒಳಗೊಂಡಿರುವ ಶಿವಮೊಗ್ಗ, ಚಿತ್ರದುರ್ಗ ಮತ್ತು ದಾವಣಗೆರೆಯ ಡಯಾಸಿಸ್‌ನ ‘ಅಭಿವೃದ್ಧಿ ಅಂಗವಾಗಿದೆ’. SMSSS ಜಾತ್ಯತೀತ, ಸ್ವಯಂಪ್ರೇರಿತ, ಲಾಭರಹಿತ ಸಂಸ್ಥೆಯಾಗಿದ್ದು, ಕರ್ನಾಟಕ ಸೊಸೈಟಿಗಳ ನೋಂದಣಿ ಕಾಯಿದೆ 1960 ರ ಅಡಿಯಲ್ಲಿ ನೋಂದಾಯಿಸಲಾಗಿದೆ; ವಿದೇಶಿ ಕೊಡುಗೆ (ನಿಯಂತ್ರಣ) ಕಾಯಿದೆ, 2010 ಮತ್ತು ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 12A ಮತ್ತು 80G ಅಡಿಯಲ್ಲಿ. ಸಮಾಜವು ಜಾತಿ, ಮತ, ಲಿಂಗ ಮತ್ತು ಜನಾಂಗವನ್ನು ಲೆಕ್ಕಿಸದೆ ಬಡ ಮತ್ತು ಅಂಚಿನಲ್ಲಿರುವ ಜನರ ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ಮಾಡಲು ಬದ್ಧವಾಗಿದೆ 11 ಆಗಸ್ಟ್ 1989 ರಂದು “ಗೌರವದಿಂದ ಜೀವನದ ಕಡೆಗೆ” ಎಂಬ ಧ್ಯೇಯವಾಕ್ಯದೊಂದಿಗೆ ಅಸ್ತಿತ್ವದಲ್ಲಿದೆ. ಮೂರು ಜಿಲ್ಲೆಗಳ 187 ಗ್ರಾಮ ಪಂಚಾಯಿತಿಗಳ 627 ಗ್ರಾಮಗಳಲ್ಲಿ ಅದರ ಅಭಿವೃದ್ಧಿ ಮಧ್ಯಸ್ಥಿಕೆಗಳ ಮೂಲಕ.

ದೃಷ್ಟಿ: ನ್ಯಾಯ, ಶಾಂತಿ ಮತ್ತು ಪ್ರೀತಿಯನ್ನು ಆಧರಿಸಿದ ಸಮಾಜ

ಧ್ಯೇಯ: ಸಾಮರ್ಥ್ಯ ನಿರ್ಮಾಣ ಮತ್ತು ಹಕ್ಕು ಆಧಾರಿತ ಕ್ರಿಯೆಗಳ ಪ್ರಕ್ರಿಯೆಯ ಮೂಲಕ ಬಡವರು ಮತ್ತು ಅಂಚಿನಲ್ಲಿರುವವರನ್ನು ಸಬಲೀಕರಣಗೊಳಿಸುವುದು

ಗುರಿ: ಅಂಚಿನಲ್ಲಿರುವ ಸಮುದಾಯಗಳು ತಮ್ಮ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ಜ್ಞಾನ, ಸಂಪನ್ಮೂಲಗಳು ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯ ಮೇಲೆ ಪ್ರವೇಶ ಮತ್ತು ನಿಯಂತ್ರಣವನ್ನು ಹೊಂದಿರುತ್ತಾರೆ

ನಮ್ಮ ಆದ್ಯತೆಯ ಗುಂಪುಗಳು: ಸಣ್ಣ ಮತ್ತು ಅಂಚಿನಲ್ಲಿರುವ ರೈತರು, HIV/AIDS ನೊಂದಿಗೆ ವಾಸಿಸುವ ಜನರು, ಅಂಚಿನಲ್ಲಿರುವ ಮಹಿಳೆಯರು, ಮಕ್ಕಳು ಮತ್ತು ಅವರ ಪೋಷಕರು, ನಿರುದ್ಯೋಗಿ ಯುವಕರು, ಅಸಂಘಟಿತ ಕಾರ್ಮಿಕರು, ಇತ್ಯಾದಿ.

ನಮ್ಮ ವಿಧಾನ:

  • ಅನುಷ್ಠಾನ
  • ಸಾಮರ್ಥ್ಯ ನಿರ್ಮಾಣ
  • ನೆಟ್‌ವರ್ಕಿಂಗ್
  • ಹಕ್ಕುಗಳ ಆಧಾರಿತ ಕ್ರಮಗಳು

SMSSS ನ ಕಾರ್ಯಕ್ರಮಗಳು:

  • ಮಹಿಳಾ ಸಬಲೀಕರಣ
  • ಶಿಕ್ಷಣ ಮತ್ತು ಅಭಿವೃದ್ಧಿ
  • ನೈಸರ್ಗಿಕ ಸಂಪನ್ಮೂಲ ನಿರ್ವಹಣೆ
  • ಉತ್ತಮ ಆಡಳಿತ
  • ಆರೋಗ್ಯ ಮತ್ತು ಅಭಿವೃದ್ಧಿ
  • ಸಾಮರ್ಥ್ಯ ನಿರ್ಮಾಣ

ಹೆಚ್ಚಿನ ಮಾಹಿತಿಗಾಗಿ ಮತ್ತು SMSSS ನೊಂದಿಗೆ ಪಾಲುದಾರರಾಗಲು ಬಯಸಿದರೆ ದಯವಿಟ್ಟು ಸಂಪರ್ಕಿಸಿ:

ನಿರ್ದೇಶಕ
ಚೈತನ್ಯ – SMSSS
ಅಲ್ಕೋಲಾ ಸರ್ಕಲ್
ಸಾಗರ್ ರೋಡ್, ಗೋಪಾಲ ಪೋಸ್ಟ್
ಶಿವಮೊಗ್ಗ- 577205
ಕರ್ನಾಟಕ, ಭಾರತ
ಮೊಬೈಲ್: 876213791514 (ಕಚೇರಿ)

ಎಂ.ಐ.ಟಿ.ಕೆ.ಯಲ್ಲಿ ಎಂ.ಎಸ್ ಎಕ್ಸೆಲ್ ಕಾರ್ಯಾಗಾರ

ಎಂ.ಬಿ.ಎ ವಿಭಾಗ ಎಂ.ಐ.ಟಿ.ಕೆ, ಮೂಡ್ಲಕಟ್ಟೆ, ಕುಂದಾಪುರ ವಿದ್ಯಾರ್ಥಿಗಳಿಗೆ ಎಂ.ಎಸ್ ಎಕ್ಸೆಲ್ ಕುರಿತು ಕಾರ್ಯಾಗಾರ ನಡೆಯಿತು. ಶ್ರೀ ಅನಂತ್ ನಾಯ್ಕ್, ಜನತಾ ಗ್ರೂಪ್ಸ್ ಸಹಾಯಕ ವ್ಯವಸ್ಥಾಪಕ (ವ್ಯವಹಾರ ಬೆಂಬಲ), ಕೋಟ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಎಂ.ಎಸ್ ಎಕ್ಸೆಲ್ ಕುರಿತು ಸಂಕ್ಷಿಪ್ತ ಪರಿಚಯದೊಂದಿಗೆ ಕಾರ್ಯಾಗಾರವನ್ನು ಪ್ರಾರಂಭಿಸಿದ ಅವರು ಉತ್ತಮ ಉದಾಹರಣೆಗಳೊಂದಿಗೆ ಕಂಪನಿಗಳಲ್ಲಿ ಎಕ್ಸೆಲ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ಸಮಗ್ರ ಮಾಹಿತಿ ನೀಡಿದರು. ಅವರು ಸೆಲ್ ಉಲ್ಲೇಖ ಮತ್ತು ರೆಫರೆನ್ಸ್ ಬೋಡ್‍ಮಾಸ್ ಬಳಕೆಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆ ನೀಡಿದರು. ಪ್ರೊ.ಅಮೃತಮಲಾ ಸ್ವಾಗತಿಸಿ, ಪ್ರೊ.ತಿಲಕಲಕ್ಷ್ಮಿ ಸಂಪನ್ಮೂಲ ವ್ಯಕ್ತಿಯವರಿಗೆ ಸ್ಮರಣಿಕೆ ನೀಡಿ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಪನ್ನಗಾ ನಿರೂಪಿಸಿದರು.

ಕರಾವಳಿ ಜಿಲ್ಲೆಯಲ್ಲಿ ಮತ್ತೆ ಮಳೆಯಾಗುವ ಹವಮಾನ ಇಲಾಖೆಯಿಂದ ಮುನ್ಸೂಚನೆ

ಬೆಂಗಳೂರು: ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ, ಜಿಲ್ಲೆಗಳಲ್ಲಿ ಇಂದಿನಿಂದ ಮತ್ತೆ ಮಳೆಯ ಆರ್ಭಟ ಜೋರಾಗಲಿದೆ’ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬಂದಿದೆ.

ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು. ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ರಾಮನಗರ, ಶಿವಮೊಗ್ಗ, ವಿಜಯನಗರ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಮಳೆಯಾಗಲಿದೆ.

ಕ್ಯಾಸಲ್ರಾಕ್ ಯಲ್ಲಾಪುರ, ಲೋಂಡಾ, ಕದ್ರಾ, ಜೋಯ್ಡಾ, ಮುಂಡಗೋಡ, ಗುಂಜಿ, ಕಮ್ಮರಡಿ, ತಾಳಗುಪ್ಪ, ಸಕಲೇಶಪುರದಲ್ಲಿ ಮಳೆಯಾಗಲಿದೆ ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಬಿರುಗಾಳಿಯು ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಹೇಳಿದೆ.

ಪ್ರಕೃತಿಯು ಭಗವಂತನ ಮಹಿಮೆ , ಸೌಂದರ್ಯಗಳ ಪ್ರತೀಕವಾಗಿದೆ ಉಳಿಸಿಬೆಳಸೊಣ: ಬಿ.ವಿ.ಶಿವಾರೆಡ್ಡಿ

ಶ್ರೀನಿವಾಸಪುರ : ಪ್ರಕೃತಿಯು ಭಗವಂತನ ಮಹಿಮೆ , ಸೌಂದರ್ಯಗಳ ಪ್ರತೀಕವಾಗಿದೆ . ಪರಮಾತ್ಮನ ಶಕ್ತಿಯೇ ಪ್ರಕೃತಿಯ ಮೂಲಕ ಅಭಿವ್ಯಕ್ತವಾಗಿದೆ . ಇಂಥ ಪರಿಸರವನ್ನು ಆರಾಧಿಸುವುದು ಭಾರತೀಯ ಸಂಸ್ಕøತಿಯಾಗಿದ್ದು ನಾವೆಲ್ಲರೂ ಸೇರಿ ಪರಿಸರವನ್ನು ಆರಾಧಿಸಿ , ಉಳಿಸಿಬೆಳಸೊಣವೆಂದು ಎಂದು ಪರಿಸರ ಪ್ರೇಮಿ ಬೀಮಗುಂಟಪಲ್ಲಿ ಬಿ.ವಿ.ಶಿವಾರೆಡ್ಡಿ ತಿಳಿಸಿದರು.
ತಾಲೂಕಿನ ರಾಯಲ್ಪಾಡು ಸರ್ಕಾರಿ ಪ್ರೌಡಶಾಲಾವರಣದಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ತಿಂಗನ ಗಿಡಗಳನ್ನು ವಿತರಿಸಿ ಮಾತನಾಡಿದರು.
ನಮಗಿರುವುದು ಒಂದೇ ಭೂಮಿ. ನಾವು ಪ್ರತಿನಿತ್ಯ ಬಳಸುವ ಸಮಸ್ತ ವಸ್ತುಗಳೂ ಈ ಭೂಮಿಯಿಂದಲೇ ಒದಗಿ ಬರಬೇಕು . ಶುದ್ದವಾದ ಗಾಳಿ, ನೀರು, ವಿವಿಧ ಆಹಾರಪದಾರ್ಥಗಳು , ಬಟ್ಟೆ, ಖನಿಜಗಳು, ಕೈಗಾರಿಕ ಕಚ್ಚಾ ವಸ್ತುಗಳು , ಪೆಟ್ರೋಲಿಯಮ್,ಕಲ್ಲಿದ್ದಲು, ಸೌದೆ, ಮೇವು, ಔಷಧಸಾಮಾಗ್ರಿಗಳು ಮುಂತಾದ ನೂರಾರು ವಸ್ತುಗಳಿಗೆ ಈ ಭೂಮಿಯ ಮೇಲಿರುವ ಅರಣ್ಯ, ನೀರು, ನೆಲಗಳೇ ಆಧಾರವಾಗಿವೆ .
ಆದರೆ ಈ ವೈವಿಧ್ಯಪೂರ್ಣ ವಸ್ತುಗಳನ್ನು ಒದಗಿಸುವ ಭೂಮಿ ಒಂದು ಅಕ್ಷಯಪಾತ್ರೆಯಲ್ಲ, ಇತ್ತೀಚಿನ ದಿನಗಳಲ್ಲಿ ಮಾನವ ನೈಸರ್ಗಿಕ ಸಂಪತ್ತನ್ನು ಉತ್ಪಾದನೆಗಿಂತ ಹೆಚ್ಚು ಬಳಕೆ ಮಾಡುತ್ತಿದ್ದು , ಭೂಮಿಯೇನು ಅಕ್ಷಯಪಾತ್ರೆಯೇ?
ಇದಲ್ಲದೆ ಮಾನವನ ಸ್ವಾರ್ಥ ಹಾಗು ಭೋಗ ಜೀವನದಿಂದಾಗಿ ಓಜೂನ್ ಪದರದಲ್ಲಿ ಬಿರುಕು ಬಿಟ್ಟಿದ್ದು, ಇದರಿಂದಾಗಿ ಸೂರ್ಯನ ಕಿರಣಗಳು ನೇರವಾಗಿ ಮನುಷ್ಯನ ಮೈಮೇಲೆ ಬೀಳುವುದರಿಂದ ಚರ್ಮಕ್ಕೆ ಸಂಬಂದಿಸಿದ ವ್ಯಾದಿಗಳಿಂದ ಬಳಲುತ್ತಿದ್ದು, ಇವುಗಳಿಂದ ಪಾರಗಲೂ ನಾವೆಲ್ಲರೂ ಸೇರಿ ಸ್ವಾರ್ಥ ಹಾಗು ಭೋಗಜೀವನವನ್ನು ಬಿಟ್ಟು ಮುಂದಿನ ಪೀಳಿಗೆಗಾಗಿ ನೈಸರ್ಗಿಕ ಸಂಪತ್ತನ್ನು ಉಳಿಸಿ ಕಾಪಾಡಬೇಕಾಗಿದೆ ಎಂದರು.
ಮಾವು ಬೆಳಗಾರರ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ಯರ್ರಂವಾರಿಪಲ್ಲಿ ಗ್ರಾ.ಪಂ. ಉಪಾಧ್ಯಕ್ಷ ವೈ.ಆರ್.ಶ್ರೀನಿವಾಸರೆಡ್ಡಿ, ಮುಖಂಡರಾದ ಸಿಮೆಂಟ್ ನಾರಾಯಣಸ್ವಾಮಿ, ಚಕ್ಕಾ ಅಪ್ಪಿ, ಜಗನ್ನಾಥ್, ಪ್ರಸನ್ನ, ಬೈರಗಾನಪಲ್ಲಿ ಪ್ರೌಡಶಾಲೆಯ ಮುಖ್ಯ ಶಿಕ್ಷಕ ಕೆ.ಎನ್.ರಾಮಚಂದ್ರ ಇದ್ದರು.
ಪೋಟು; ರಾಯಲ್ಪಾಡು ಸರ್ಕಾರಿ ಪ್ರೌಡಶಾಲಾವರಣದಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ತಿಂಗನ ಗಿಡಗಳನ್ನು ಬಿ.ವಿ.ಶಿವಾರೆಡ್ಡಿ ವಿತರಿಸಿ ಮಾತನಾಡಿದರು.