ಸ್ವಾತಂತ್ರ್ಯದ ಸವಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಿಗಬೇಕು ಎಂಬ ಆಶಯ ಸಾಕಾರಗೊಳ್ಳಬೇಕು : ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಸ್ವಾತಂತ್ರ್ಯದ ಸವಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಿಗಬೇಕು ಎಂಬ ಆಶಯ ಸಾಕಾರಗೊಳ್ಳಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸಿ ಜಾರಿಗೆ ತರಲಾಗುವುದು ಎಂದು ಹೇಳಿದರು.
ಕ್ಷೇತ್ರದ ಯುವ ಸಮುದಾಯಕ್ಕೆ ಉದ್ಯೋಗಾವಕಾಶ ಒದಗಿಸುವ ಉದ್ದೇದಿಂದ ಪಟ್ಟಣದ ಹೊರವಲಯದಲ್ಲಿ ಕೈಗಾರಿಕಾ ವಲಯ ನಿರ್ಮಿಸಲಾಗುವುದು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪಟ್ಟಣದಲ್ಲಿ ನವನಗರ ಯೋಜನೆ ಜಾರಿಗೆ ತಂದು ನಾಗರಿಕರಿಗೆ ಅಗತ್ಯವಾದ ರಸ್ತೆ, ಒಳಚರಂಡಿ ನಿರ್ಮಿಸಲಾಗುವುದು. ಶುದ್ಧ ಹಾಗೂ ಸುರಕ್ಷಿತ ಕುಡಿಯುವ ನೀರು ಪೂರೈಕೆ ಹಾಗೂ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಮೊದಲ ಅದ್ಯತೆ ನೀಡಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಯೋಧರನ್ನು ಸ್ಮರಿಸಬೇಕು. ಅವರ ತ್ಯಾಗ, ಬಳಿದಾನ ದೇಶದ ಸ್ವಾತಂತ್ರ್ಯ ರಕ್ಷಣೆಗೆ ಸ್ಫೂರ್ತಿಯಾಗಬೇಕು. ವಿವಿಧತೆಯಲ್ಲಿ ಏಕತೆ ನೀತಿ ಮುಂದುವರಿಯಬೇಕು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕರಿ ಕೃಷ್ಣಪ್ಪ, ಪ್ರಾಂಶುಪಾಲ ರಾಮಾಂಜನೇಯಪ್ಪ ಸ್ವಾತಂತ್ರ್ಯದ ಮಹತ್ವ ಕುರಿತು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಲಕ್ಷ್ಮಮ್ಮ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಗುರುರಾಜರಾವ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಬೈರೆಡ್ಡಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಪ್ಪ, ಪೊಲೀಸ್ ಇನ್ಸ್‍ಪೆಕ್ಟರ್ ಆರ್.ದಯಾನಂದ, ತಾಲ್ಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುಬ್ರಮಣಿ, ವೆಂಕಟಸ್ವಾಮಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಂಗವಾದಿ ನಾಗರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ತೂಪಲ್ಲಿ ಆರ್.ನಾರಾಯಣಸ್ವಾಮಿ, ಗಣೇಶ್, ಮುಖಂಡ ಶೇಷಾಪುರ ಗೋಪಾಲ್ ಮತ್ತಿತರರು ಇದ್ದರು.
ಸಮಾರಂಭದಲ್ಲಿ ಪೊಲೀಸ್, ಗೃಹರಕ್ಷಕ ದಳ ಹಾಗೂ ವಿದ್ಯಾರ್ಥಿಗಳಿಂದ ಪಥಸಂಚಲನ ಏರ್ಪಡಿಸಲಾಗಿತ್ತು. ಬೇರೆ ಬೇರೆ ಶಾಲಾ ವಿದ್ಯಾರ್ಥಿಗಳಿಂದ ದೇಶ ಭಕ್ತಿಗೆ ಸಂಬಂಧಿಸಿದ ನೃತ್ಯ ಹಾಗೂ ಗೀತ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಸ್ವಾತಂತ್ರ್ಯ ಹೋರಾಟಗಾರರ ಪತ್ನಿಯರು ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮ

ಕುಂದಾಪುರ,16: ಸಂತ ಜೋಸೆಪರ ಪ್ರೌಢಶಾಲೆಯಲ್ಲಿ ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಇವರ ಆಶ್ರಯದಲ್ಲಿ 15-08-2023 ರಂದು “ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಕಾನೂನು ಅರಿವು” ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ರೋ.ಜಗನ್ನಾಥ್ ಮೊಗೆರ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕುಂದಾಪುರದ ವಕೀಲರಾದ ವೈ ಶರತ್ ಕುಮಾರ್ ಶೆಟ್ಟಿ ಇವರು ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ಕಾನೂನು ಅರಿವು ಮಾಹಿತಿ ನೀಡಿದರು. ವ್ಯಕ್ತಿಯ ವ್ಯಕ್ತಿತ್ವದ ವಿಕಸನಕ್ಕೆ ಅಗತ್ಯವಾದ ಸಾಮಾಜಿಕ ಮತ್ತು ರಾಜಕೀಯ ವಾತಾವರಣವನ್ನು ಮೂಲಭೂತ ಹಕ್ಕುಗಳು ಎಂದು ಕರೆಯುತ್ತಾರೆ. ನಮ್ಮ ಸಂವಿಧಾನದ ಮೂರನೇ ಭಾಗದಲ್ಲಿ ಮೂಲಭೂತ ಹಕ್ಕುಗಳನ್ನು ಅಳವಡಿಸಲಾಗಿದೆ. ಈ ಹಕ್ಕುಗಳು ಪ್ರಜಾಪ್ರಭುತ್ವದ ಯಶಸ್ವಿಗೆ ಅಗತ್ಯವಾದವುಗಳು. ಮೂಲಭೂತ ಕರ್ತವ್ಯಗಳ ಬಗ್ಗೆ ಪ್ರಸ್ತಾವಿಸುತ ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳು. ಮೂಲಭೂತ ಹಕ್ಕುಗಳಿರುವಂತೆ ಕರ್ತವ್ಯಗಳಿಗೆ ನ್ಯಾಯಾಲಯದ ರಕ್ಷಣೆ ಇರುವುದಿಲ್ಲ. ಕರ್ತವ್ಯಗಳನ್ನು ಉಲ್ಲಂಘಿಸಿದವರಿಗೆ ಸಾಮಾನ್ಯ ಕಾನೂನಿನ ಅನ್ವಯ ಶಿಕ್ಷೆ ವಿಧಿಸಲಾಗುತ್ತದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐವಿ ಶುಭ ಹಾರೈಸಿದರು. ಶಿಕ್ಷಕರಾದ ಮೈಕಲ್ ಪುಟಾರ್ಡೊ ಸ್ವಾಗತಿಸಿದರು. ಶಿಕ್ಷಕಿ ಸರಸ್ವತಿಯವರು ವಂದಿಸಿದರು. ಶಿಕ್ಷಕ ಅಶೋಕ್ ದೇವಾಡಿಗ ನಿರೂಪಿಸಿದರು. ರೋಟರಿ ಕಾರ್ಯದರ್ಶಿಯಾಗಿರುವ ರೋ. ಡಾ. ವಿಲಾಸ್ ಕೃತಿಕ್ ಸದಸ್ಯರಾದ ರೋ.ವಿನ್ಸೆಂಟ್ ಬರೆಟ್ಟೊ , ರೋ. ನಟರಾಜ್, ರೋ. ಕೌಶಿಕ್ ಇವರು ಉಪಸ್ಥಿತರಿದ್ದರು. ಶಿಕ್ಷಕ ಶಿಕ್ಷಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಆಟೋರಿಕ್ಷಾ ,ಟ್ಯಾಕ್ಸಿ ,ಮೆಟಾಡೊರ್, ಡ್ರೈವರ್ ಅಸೋಸಿಯೇಷನ್ ನಿಂದ ಸ್ವಾತಂತ್ರ್ಯ ದಿನಾಚರಣೆ

ಕುಂದಾಪುರ: ಆಟೋರಿಕ್ಷಾ ,ಟ್ಯಾಕ್ಸಿ ,ಮೆಟಾಡೊರ್, ಡ್ರೈವರ್ ಅಸೋಸಿಯೇಷನ್ ನಿಂದ ಸ್ವಾತಂತ್ರ್ಯ 77 ನೇ ದಿನಾಚರಣೆಯನ್ನು ಆಚರಿಸಲಾಯಿತು. ’ಸ್ವಾತಂತ್ರ್ಯ ,ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಲವು ರೀತಿಯಲ್ಲಿ ಧಕ್ಕೆ ಬರುತ್ತಿದೆ. ನಾವೆಲ್ಲರೂ ಒಂದಾಗಿ ಇವುಗಳ ಸಂರಕ್ಷಣೆಯ ಸಂಕಲ್ಪ ತೊಡಬೇಕಾಗಿದೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿಯವರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಅಸೋಸಿಯೇಷನ್ ಅಧ್ಯಕ್ಷರಾದ ಲಕ್ಷ್ಮಣ್ ಶೆಟ್ಟಿಯವರು ಮಾತನಾಡಿ ದೇಶದ ಇಂದಿನ ಸರ್ವತೋಮುಖ ಬೆಳವಣಿಗೆಗೆ ಕಾಂಗ್ರೆಸ್ ಪಕ್ಷ ಕಾರಣ ಎಂದು ಹೇಳಿ ಎಲ್ಲರನ್ನೂ ಸಭೆಗೆ ಸ್ವಾಗತಿಸಿದರು.
ಸಭೆಯಲ್ಲಿ ಪುರಸಭೆ ಸದಸ್ಯರಾದ ಚಂದ್ರಶೇಖರ್ ಖಾರ್ವಿ, ಅಬು ಅಹಮ್ಮದ್, ಸೋಶಿಯಲ್ ಮೀಡಿಯಾ ಅಧ್ಯಕ್ಷರಾದ ರೋಷನ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಉಪಸಮಿತಿಗಳ ಅಧ್ಯಕ್ಷರಾದ ಚಂದ್ರ ಅಮೀನ್, ಅಶ್ವತ್ ಕುಮಾರ್, ಮುನಾಫ್ ಕೋಡಿ, ಶಶಿಕುಮಾರ್, ಮಾಜಿ ಪುರಸಭಾ ಅಧ್ಯಕ್ಷರಾದ ಹಾರುನ್ ಸಾಹೇಬ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರೇವತಿ ಶೆಟ್ಟಿ, ಅಸೋಸಿಯೇಷನ್ ಗೌರವ ಅಧ್ಯಕ್ಷರಾದ ವಕ್ವಾಡಿ ಭಾಸ್ಕರ್ ಪೂಜಾರಿ ,ಉಪಾಧ್ಯಕ್ಷರಾದ ಶೇಖರ ಪೂಜಾರಿ ತಲ್ಲೂರು, ಜೇಮ್ಸ್ ರೆಬೆಲ್ಲೊ ಹೆಮ್ಮಾಡಿ ,ವಿ ಎನ್ ಗುಂಡ ಪಾರಿಜಾತ, ಭಾಸ್ಕರ ಪೂಜಾರಿ ಕಂಡ್ಲೂರು ,ಕಾಂಗ್ರೆಸ್ ಪಕ್ಷದ ನಾಯಕರುಗಳಾದ ಎಚ್ ಗಂಗಾಧರ ಶೆಟ್ಟಿ, ಅಭಿಜಿತ್ ಪೂಜಾರಿ, ಅಶೋಕ್ ಸುವರ್ಣ, ಮಧುಕರ, ಆಶಾ ಕರ್ವಾಲ್ಲೊ, ಸುಭಾಷ್ ಪೂಜಾರಿ, ಸದಾನಂದ ಖಾರ್ವಿ, ಜ್ಯೋತಿ ಕೆ, ಶೋಭಾ ಸಚ್ಚಿದಾನಂದ, ಸುವರ್ಣ ಅಲ್ಮೇಡಾ, ಶಶಿ ರಾಜ್ ಪೂಜಾರಿ, ಕೇಶವ ಭಟ್, ವೇಲಾ ಬ್ರಗಾಂಜ , ಜ್ಯೋತಿ ಮೊಗವೀರ, ಜೋಸೆಫ್ ರೆಬೆಲ್ಲೊ, ಡೊಲ್ಫಿ ಡಿಕೋಸ್ತ, ವಿವೇಕಾನಂದ, ಕೆ ಸುರೇಶ, ನಾಗರಾಜ ನಾಯ್ಕ, ಪ್ರೀತಮ್ ಕರ್ವಾಲ್ಲೊ ,ದಿನೇಶ್ ಬೆಟ್ಟ, ಗುಲಾಬಿ, ಡೆಪೋಡಿಲ್ ಕ್ರಾಸ್ಟೋ , ಸೂರ್ಯನಾರಾಯಣ, ಇಬ್ರಾಹಿಂ, ಸಂತೋಷ್ ಖಾರ್ವಿ ,ಬಾಲಾ ಬಸ್ರೂರ್, ನರೇಂದ್ರ ಗಾಣಿಗ, ಪ್ರಕಾಶ್, ಸುರೇಶ್ ಸಂಗಮ್, ಭಾಸ್ಕರ, ಆನಂದ ,ಅಜಿತ್ ಕುಮಾರ್, ರತ್ನಾಕರ್ ಶೆಟ್ಟಿ ,ಜನಾರ್ದನ್ ಖಾರ್ವಿ, ಕೆ ಅಶೋಕ್ ,ಮಂಜುನಾಥ , ಪಿಯುಸ್ ಡಿಸೋಜ, ವಿಶ್ವನಾಥ ಪೂಜಾರಿ, ಎಂ ಉದಯಕುಮಾರ್, ಶಶಿಧರ, ಕಿರಣ್, ಬಸ್ತು, ಅಶೋಕ ಡಿಸೋಜಾ ವಿಜಯ ಪೂಜಾರಿ ತಲ್ಲೂರು ಫೆಲಿಕ್ಸ್ ತಲ್ಲೂರು ಇನ್ನಿತರರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಕಾರ್ಯಕ್ರಮವನ್ನು ನಿರೂಪಿಸಿ, ಅಸೋಶಿಯೇಶನ್ ನಾ ಕಾರ್ಯದರ್ಶಿ ಮಾಣಿ ಉದಯ್ ಅವರು ವಂದಿಸಿದರು. ಸಭೆಯ ನಂತರ ಅಸೋಸಿಯೇಷನ್ ನಾ ಸದಸ್ಯರು ವಾಹನಗಳ ಜಾಥ ಕುಂದಾಪುರದ ಪ್ರಮುಖ ರಸ್ತೆಯಲ್ಲಿ ನಡೆಸಿದರು.

ಉಪ ವಿಭಾಗೀಯ ಕುಂದಾಪುರ ಸರಕಾರಿ ಅಸ್ಪತ್ರೆಗೆ “ಅಪ್ರಿಶಿಯೇಶನ್” ಪ್ರಶಸ್ತಿ

ಕುಂದಾಪುರ,17,ಉಪ ವಿಭಾಗೀಯ  ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ ಅಪ್ರಿಶಿಯೇಶನ್ ಪ್ರಶಸ್ತಿ ಲಭಿಸಿದೆ. ಉಡುಪಿ ಅಜ್ಜರಕಾಡು ಮೈದಾನದಲ್ಲಿ ನಡೆದ  77 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಆಯುಷ್ಠಾನ್‌ ಭರತ್‌ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ- ಆರೋಗ್ಯ ಕರ್ನಾಟಕ  (AB -PMJAY -ARK )  ಯೋಜನೆಯಡಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸಂಬಂಧ ಜಿಲ್ಲಾ  ಮಟ್ಟದಿಂದ ಪ್ರಶಂಸಾ ಪ್ರಮಾಣಪತ್ರವನ್ನು ಮಾನ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಉಡುಪಿ ಜಿಲ್ಲೆಯ ಉಸ್ತುವಾರಿ ಸಚಿವೆಯಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್‌ ಇವರು ಆಸ್ಪತ್ರೆಯ ಆಡಳಿತ ಶಸ್ತ್ರಚಿಕಿತ್ಸಕರಾದ ಡಾ. ರಾಬರ್ಟ್‌ ರೆಬೆಲ್ಲೊ ಇವರಿಗೆ ನೀಡಿದರು.

ಈ ಸಂದರ್ಭದಲ್ಲಿ ಇಲಾಖೆಯ ಇತರ ಅಧಿಕಾರಿಯವರು. ಉಪಸ್ಥಿತರಿದ್ದರು. ಆಯುಷ್ಯಾನ್‌ ಭರತ್‌ ಪ್ರಧಾನ ಮಂತ್ರಿ ಜನಾರೋಗ್ಯ ಅಯೋಜನೆಯಡಿ ಜಿಲ್ಲಾವಾರು ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಹಾಗೂ ನೊಂದಾಯಿತ ಖಾಸಗಿ ಆಸ್ಪತ್ರೆಗಳು ಸಾಧಿಸಿರುವ ಕಾರ್ಯಕ್ಷಮತೆ ಹಾಗೂ ಯೋಜನೆಯ ಸದ್ಗಳಕೆ ಆಧಾರದ ಮೇಲೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಹಿಂದಿನ ಸಾಲಿನಲ್ಲಿ ಕಾಯಕಲ್ಪ ಪ್ರಶಸ್ತಿ ಹಾಗೂ ಲಕ್ಷ್ಯ ಪ್ರಶಸ್ತಿಯು ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆಯೆಂದು ಡಾ. ರಾಬರ್ಟ್‌ ರೆಬೆಲ್ಲೊ ತಿಳಿಸಿದ್ದಾರೆ

ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ಗಂಗೊಳ್ಳಿ : ಸಂಭ್ರಮದ ಸ್ವಾತಂತ್ರ್ಯೋತ್ಸವ

ಗಂಗೊಳ್ಳಿ :2023 ಆಗಸ್ಟ್ 15 ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ವಿದ್ಯಾರ್ಥಿ ಆದಿತ್ಯ9th ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಮುಖ್ಯ ಅತಿಥಿ ಶಾಲಾ ಹಳೆ ವಿದ್ಯಾರ್ಥಿ ಅಮೀರ್ ಸಾಹೇಬರವರು ಧ್ವಜಾರೋಹಣಗೈದು, “ಸ್ವಾತಂತ್ರ್ಯ ಫಲಪ್ರದವಾಗಲು ಶಿಕ್ಷಣದ ಪಾತ್ರ ಮಹತ್ವವಾದದ್ದು, ಆ ನಿಟ್ಟಿನಲ್ಲಿ ಈ ಶಿಕ್ಷಣ ಸಂಸ್ಥೆ ಉತ್ತಮ ಶಿಕ್ಷಣ ನೀಡುತ್ತಿದೆ.” ಎಂದು ಹೇಳಿದರು. ಶಾಲಾ ಜಂಟಿ ಕಾರ್ಯದರ್ಶಿ ಭ. ಡಯಾನ ತ್ರಿವಳಿ ಸಂಸ್ಥೆಗಳ ಮುಖ್ಯೋಪಾದ್ಯಾಯಿನಿರಾ ದ ಭ. ಕ್ರೆಸೆನ್ಸ್, ಭ. ಡೋರಿನ್, ಭ. ಜ್ಯೋತಿಪ್ರಿಯ, ಶಿಕ್ಷಕ ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯದ ಕುರಿತಾದ ಭಾಷಣ, ಗಾಯನ, ನೃತ್ಯಗಳು ಏರ್ಪಟ್ಟವು. ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಕೃತಿಕಾ ಮತ್ತು ಸ್ಪೂರ್ತಿ ಕಾರ್ಯಕ್ರಮ ನಿರೂಪಿಸಿದರು. ಸುಚಿನ್ ವಂದಿಸಿದರು.

ಗ್ರಾಮ ಪಂಚಾಯಿತಿಗಳಿಗೆ ಶಕ್ತಿ ತುಂಬಿದರೆ ಗ್ರಾಮಗಳ ಅಭಿವೃದ್ಧಿ ಸಾಧ್ಯ :ಲಕ್ಷ್ಮಿ ಹೆಬ್ಬಾಳ್ಕರ್

ಕುಂದಾಪುರ: ಹಳ್ಳಿಗಳ ಸುಧಾರಣೆಯು ಗ್ರಾಮ ಪಂಚಾಯತಿಗಳಿಂದ ಮಾತ್ರ ಸಾಧ್ಯ ಆದ್ದರಿಂದ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಶಕ್ತಿ ತುಂಬಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಅವರು ಕುಂದಾಪುರ ತಾಲೂಕಿನ ಹಾರ್ದಳ್ಳಿ-ಮಂಡಳ್ಳಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಶಕ್ತಿ ತುಂಬಿದರೆ ಆ ಮೂಲಕ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ಕುಂದಾಪುರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು.ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಕೆ ವಿದ್ಯಾ ಕುಮಾರಿ, ಜಿಲ್ಲಾ ಪಂಚಾಯತ್ ಸಿಇಒ ಪ್ರಸನ್ನ, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ ,ತಹಶೀಲ್ದಾರ್ ಶೋಭಾ ಲಕ್ಷ್ಮಿ, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿ ಭಾರತಿ, ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ್ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಬಿದ್ಕಲ್ ಕಟ್ಟೆ ಶಾಲಾ ಶಿಕ್ಷಕ ಸತೀಶ್ ಶೆಟ್ಟಿಗಾರ್ ಸ್ವಾಗತಿಸಿದರು.

ಬಜ್ಜೋಡಿಯ ಇನ್ಪ್ಯಾಂಟ್ ಮೇರಿ ಚರ್ಚ್ – 77ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು

ಬಜ್ಜೋಡಿ: ಇನ್‌ಫೆಂಟ್ ಮೇರಿ ಪ್ಯಾರಿಷ್‌ನ ಪ್ಯಾರಿಷಿಯನ್ನರು 15ನೇ ಆಗಸ್ಟ್ 2023 ರಂದು ಥ್ಯಾಂಕ್ಸ್‌ಗಿವಿಂಗ್ ಮಾಸ್‌ಗಾಗಿ ಬೆಳಿಗ್ಗೆ 6.30 ಕ್ಕೆ ಅವರ್ ಲೇಡಿ ಅವರ ಊಹೆಯ ಹಬ್ಬದ ಸಂದರ್ಭದಲ್ಲಿ ಮತ್ತು 77 ನೇ ಸ್ವಾತಂತ್ರ್ಯ ದಿನದಂದು ಒಟ್ಟಿಗೆ ಸೇರಿದರು. ನಂತರ ಧರ್ಮಕೇಂದ್ರದ
ಬಜ್ಜೋಡಿ ಘಟಕದ ಐಸಿವೈಎಂ ಸದಸ್ಯರು ಆಯೋಜಿಸಿದ್ದ ಧ್ವಜಾರೋಹಣ ಸಮಾರಂಭದಲ್ಲಿ ಚರ್ಚ್ ಮೈದಾನದಲ್ಲಿ ನಡೆಯಿತು.

ಕಾರ್ಯಕ್ರಮವು ಬೆಳಿಗ್ಗೆ 7.30 ಕ್ಕೆ ಸಣ್ಣ ಪರಿಚಯದೊಂದಿಗೆ ಪ್ರಾರಂಭವಾಯಿತು ಮತ್ತು ನಂತರ ICYM ಸದಸ್ಯರಿಂದ ಪ್ರಾರ್ಥನಾ ಗೀತೆ ನಡೆಯಿತು. ಶ್ರೀ ಅನ್ನನ್ ಡಿಸೋಜಾ ಸ್ವಾಗತಿಸಿದರು. ಶ್ರೀ ಲಾರೆನ್ಸ್ ಡಿಸೋಜ, ವಾಮಂಜೂರು, ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಮುಖ್ಯ ಅತಿಥಿಗಳು. ಪ್ಯಾರಿಷ್ ಅರ್ಚಕ ಫಾ. ಡೊಮಿನಿಕ್ ವಾಸ್, ಫಾ. ಸಿರಿಲ್ ಮೆನೆಜಸ್, ಫಾ. ರಾಯನ್ ಪಿಂಟೊ, ಪ.ಪಂ.ಉಪಾಧ್ಯಕ್ಷ ಶ್ರೀ ಪ್ರಕಾಶ್ ಸಲ್ಡಾನ್ಹಾ, ಪ.ಪಂ.ಕಾರ್ಯದರ್ಶಿ ಶ್ರೀಮತಿ ಎಲಿಜಬೆತ್ ಪಿರೇರಾ, 21 ಆಯೊಗಗಳ ಸಮನ್ವಯಾಧಿಕಾರಿ ಶ್ರೀ ರೊನಾಲ್ಡ್ ಗೊವೆಸ್, ಐಸಿವೈಎಂ ಕೊ-ಆರ್ಡಿನೇಟರ್ ಶ್ರೀ ಸಚಿನ್ ಮೆನೇಜಸ್ ಇತರರು ಉಪಸ್ಥಿತರಿದ್ದರು. ಶ್ರೀಮತಿ ರಿಶೆಲ್ ಸುವರ್ಣ ಅವರು ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಕೆಡೆಟ್ ಶ್ರೀಮತಿ ರಿಯಾನಾ ಪಿಂಟೋ ಅವರು ರಾಷ್ಟ್ರಧ್ವಜಾರೋಹಣಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದರು, ನಂತರ ರಾಷ್ಟ್ರಗೀತೆಯನ್ನು ಹಾಡಲಾಯಿತು ಮತ್ತು ರಾಷ್ಟ್ರಕ್ಕೆ ಗೌರವವನ್ನು ನೀಡಲಾಯಿತು.

ಮುಖ್ಯ ಅತಿಥಿಗಳು ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿ, ಭಾರತದಲ್ಲಿ ಬುದ್ದಿವಂತಿಕೆ ಇದೆ. ನಮ್ಮ ಬಹುತೇಕ ಯುವಕರು ವಿದೇಶಕ್ಕೆ ಹೋಗಿ ನೆಲೆಸುತ್ತಿದ್ದಾರೆ. ನಾವು ನಮ್ಮ ದೇಶವನ್ನು ಪ್ರೀತಿಸಬೇಕು ಮತ್ತು ನಮ್ಮ ದೇಶಕ್ಕಾಗಿ ನಾವು ಏನು ಮಾಡಬಹುದು ಎಂಬುದನ್ನು ನೋಡಬೇಕು. ಫಾದರ್ ಡೊಮಿನಿಕ್ ವಾಸ್ ಅವರು ತಮ್ಮ ಸಂದೇಶದಲ್ಲಿ ಭಾರತವು ಪ್ರಾಚೀನ ನಾಗರಿಕತೆಯಾಗಿದ್ದು, ನಮ್ಮ ಧರ್ಮ, ಸಂಸ್ಕೃತಿ ಮತ್ತು ಭಾಷೆಯಲ್ಲಿ ಮತಾಂಧತೆಯನ್ನು ಅಲ್ಲ ದೇಶಭಕ್ತಿಯನ್ನು ಅಭ್ಯಾಸ ಮಾಡಬೇಕು.

ICYM ಸದಸ್ಯರು ದೇಶಭಕ್ತಿ ಗೀತೆ ವಂದೇ ಮಾತರಂ ಗೀತೆ ಹಾಡಿದರು. ಶ್ರೀಮತಿ ರಿನ್ಸಿಯಾ ಡಿ’ಕುನ್ಹಾ ಧನ್ಯವಾದ ಪ್ರಸ್ತಾವಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ನೇಹಾ ಮೆಂಡೋನ್ಸಾ ನಿರೂಪಿಸಿದರು.

ಮಂಗಳೂರು ಮಿಲಾಗ್ರೆಸ್ ಚರ್ಚ್ – ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು: 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಥೊಲಿಕ್ ಸಭಾ ಮಿಲಾಗ್ರೆಸ್ ಘಟಕ ಹಾಗೂ ಸಮಾಜ ಕಲ್ಯಾಣ ಆಯೋಗದ ವತಿಯಿಂದ ಮಿಲಾಗ್ರಿಸ್ ಚರ್ಚ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.

ಗಣ್ಯರನ್ನು ಬೆಂಗಾವಲಿಗೆ ಮಿಲಾಗ್ರೆಸ್ ಸೆಂಟ್ರಲ್ ಸ್ಕೂಲ್ ಬ್ಯಾಂಡ್‌ನೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು.

ಮುಖ್ಯ ಅತಿಥಿಗಳಾದ ಶ್ರೀ ಅಫೊನ್ಸಸ್ ಸಿಲ್ವೆಸ್ಟರ್ ಮಸ್ಕರೇನಸ್ ಅವರನ್ನು ಕೆಥೋಲಿಕ್ ಸಭಾದ ಅಧ್ಯಕ್ಷ ಶ್ರೀ ವಲೇರಿಯನ್ ಡಿಸೋಜ ಸ್ವಾಗತಿಸಿದರು, ಪ್ಯಾರಿಷ್ ಧರ್ಮಗುರು ಫಾ. ಬೊನವೆಂಚರ್ ನಜರೆತ್, ಫಾ. ಮೈಕಲ್ ಸಾಂತುಮಾಯರ್, ಫಾ. ರಾಬಿನ್ ಸಾಂತುಮಾಯರ್ ಮತ್ತು ಫಾ. ಉದಯ್ ಫೆರ್ನಾಂಡಿಸ್, ಪ್ಯಾರಿಷ್ ಕುರುಬ ಪರಿಷತ್ ಕಾರ್ಯದರ್ಶಿ ಶ್ರೀಮತಿ ಜೆಸಿಂತಾ ಫೆರ್ನಾಂಡಿಸ್, ಎಲ್ಲಾ ಆಯೋಗಗಳ ಕನ್ವೇಯರ್ ಶ್ರೀಮತಿ ಲಿನೆಟ್ ಫೆರ್ನಾಂಡಿಸ್ ಮತ್ತು ಸಭೆ.

ಮುಖ್ಯ ಅತಿಥಿ ಶ್ರೀ ಅಲ್ಪೋನ್ಸಸ್ ಸಿಲ್ವೆಸ್ಟರ್ ಮಸ್ಕರೇನ್ಹಸ್ ಅವರನ್ನು ಕ್ಯಾಥೋಲಿಕ್ ಸಭಾದ ಕಾರ್ಯದರ್ಶಿ ಶ್ರೀಮತಿ ಫಿಲೋಮಿನಾ ಫೆರಾವೊ ಪರಿಚಯಿಸಿದರು. ಶ್ರೀ ಮಸ್ಕರೇನ್ಹಸ್ ಅವರು ಯುದ್ಧನೌಕೆಗಳ ಉತ್ಪಾದನೆ ಮತ್ತು ತಯಾರಿಕೆಯಲ್ಲಿ ರಕ್ಷಣಾ ಘಟಕದ ಸಚಿವರ ಅಡಿಯಲ್ಲಿ 34 ವರ್ಷಗಳ ಕಾಲ ಸೇವೆಯಲ್ಲಿದ್ದರು. ಅವರು ಈಗ ಗ್ರಾಮೀಣ ಮಕ್ಕಳ ಶಿಕ್ಷಣದಲ್ಲಿ ಸಾಕಷ್ಟು ದತ್ತಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಶ್ರೀ ಸಿಲ್ವೆಸ್ಟರ್ ಮಸ್ಕರೇನ್ಹಸ್ ಅವರು ತಮ್ಮ ಭಾಷಣದಲ್ಲಿ ದೇಶದ ಸಮಸ್ಯೆಗಳ ಬಗ್ಗೆ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿದರು ಮತ್ತು ನಾವು ನಮ್ಮ ಕ್ರಿಶ್ಚಿಯನ್ ಮೌಲ್ಯಗಳನ್ನು ಹೇಗೆ ಎತ್ತಿಹಿಡಿಯಬೇಕು ಮತ್ತು ನಮ್ಮ ಎಲ್ಲ ಸಹವರ್ತಿಗಳೊಂದಿಗೆ ಐಕ್ಯತೆಯಿಂದ ಬದುಕಬೇಕು.

ಚರ್ಚ್ ಗಾಯಕರು ಸುಮಧುರ ದೇಶಭಕ್ತಿ ಗೀತೆಯನ್ನು ಪ್ರಸ್ತುತಪಡಿಸಿದರು. ಧ್ವಜಾರೋಹಣ ಸಮಾರಂಭದಲ್ಲಿ ಎನ್‌ಸಿಸಿ ಕೆಡೆಟ್ ಓರಾನ್ ಫುರ್ಟಾಡೊ ಸಹಕರಿಸಿದರು. ಸಮಾಜ ಕಲ್ಯಾಣ ಆಯೋಗದ ಸದಸ್ಯೆ ಅನಿತಾ ಫೆರ್ನಾಂಡಿಸ್ ವಂದಿಸಿದರು. ವಾರ್ಡ್ ಗುರ್ಕರು, ಪಾಲಿಕೆ ಸದಸ್ಯರು ಹಾಗೂ ಸುಮಾರು 500 ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು. ನೆರೆದಿದ್ದ ಜನರು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.

ಕಾರ್ಯಕ್ರಮವನ್ನು ಶ್ರೀಮತಿ ಒಫಿಲಿಯಾ ಮೊರಾಸ್ ಮತ್ತು ಶ್ರೀ ರೊನಾಲ್ಡ್ ಡಿಸೋಜಾ ಅವರು ಸಂಯೋಜಿಸಿದರು. ಶ್ರೀಮತಿ ಸುನೀತಾ ಮಚಾದೊ ಕಾರ್ಯಕ್ರಮ ನಿರೂಪಿಸಿದರು.

ಚರ್ಚ್ ವತಿಯಿಂದ ಸಿಹಿ ಹಂಚಲಾಯಿತು. ಮಿಲಾಗ್ರೆಸ್ ಸೆಂಟ್ರಲ್ ಸ್ಕೂಲ್ ಬ್ಯಾಂಡ್‌ನ ಲಯಬದ್ಧ ತಾಳಗಳ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

ಕುಂದಾಪುರ ಚರ್ಚ್ ಮೈದಾನದಲ್ಲಿ  77ನೇ ಸ್ವಾತಂತ್ರ್ಯ ದಿನಾಚರಣೆ-ಪ್ರತಿಭಾವಂತರಿಗೆ ಪುರಸ್ಕಾರ

ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಕುಂದಾಪುರ ಹೋಲಿ ರೋಜರಿ ಮಾತಾ ಇಗರ್ಜಿಯ ಮೈದಾನದಲ್ಲಿ,  77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಲಾಯಿತು. ಕುಂದಾಪುರ ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ಸುಪ್ರಿಯ ಕೇಡೆಟಗಳಿಂದ ಗೌರವ ಸ್ವೀಕರಿಸಿ ಧ್ವಜಾ ರೋಹಣಗೈದು “ನಮ್ಮ ಹಿರಿಯರು ಮಾಡಿದ ತ್ಯಾಗ ಸಾಹಸಗಳ ಬಲಿದಾನದಿಂದ ಇವತ್ತು ನಾವು ಸ್ವಾತಂತ್ರ್ಯದ ಫಲವನ್ನು ಅನುಭವಿಸುತ್ತಿದ್ದೇವೆ. ಅವರ ತ್ಯಾಗ ಬಲಿದಾನಕ್ಕೆ ನಾವು ಗೌರವ ನೀಡಬೇಕು’ ಎಂದು ಅವರು ಶುಭ ಕೋರಿದರು. ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಈ ಸಂದರ್ಭದಲ್ಲಿ ಸಾರೆ ದೇಶಸೆ ಅಚ್ಚಾ ಹಮಾರ ದೇಶ್ ಹೇ ಎಂದು ಯಾವತ್ತೂ ನಾವು ನಮ್ಮ ದೇಶವನ್ನು ಪ್ರೀತಿಸಬೇಕು’ ಎಂದು ಕರೆ ಕೊಟ್ಟರು. ಶುಭ ಕೋರಿದರು. ಈ ಮೊದಲು ಇಂದು ಮೇರಿ ಮಾತೆಯ ಸ್ವರ್ಗಾರೋಹಣದ ಹಬ್ಬವಾದುದರಿಂದ ಕ್ರೈಸ್ತರಿಗೆ ಪವಿತ್ರ ದಿನವಾದರಿಂದ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ಬಲಿದಾನ ಅರ್ಪಿಸಿ ನಾ ’ನಮಗೆ ಇಂದು ದ್ವೀ ಸಂಭ್ರಮ ಒಂದು ನಮ್ಮ ದೇಶದ ಮಹಾಹಬ್ಬ ಸ್ವಾತಂತ್ರ್ಯ ದಿನ, ದೇಶಕ್ಕೆ ನಾವು ಗೌರವ ಕೊಡುವುದು ನಮ್ಮ ಮಹಾ ಕರ್ತವ್ಯವಾಗಿದೆ. ನಮ್ಮ ದೇಶ ನನಗೆ ಎನು ಮಾಡಿದೆ ಎಂದು ಕೇಳುವ ಬದಲು ನಾವು ದೇಶಕ್ಕಾಗಿ ಎನು ಮಾಡಿದ್ದೆವೆಂದು ಮನಗಂಡು ದೇಶಕ್ಕೆ ಒಳ್ಳೆದು ಮಾಡೋಣ ಅನ್ನುತ್ತಾ ಇದೇ  ಪುಣ್ಯ ದಿನದಂದು ನಮ್ಮ ಮಾಹಾತಾಯಿ ಮೇರಿ ಮಾತೆಗೆ ಜೀವಂತವಾಗಿ ದೇವರು ಸ್ವರ್ಗಕ್ಕೆ ಕರೆಸಿಕೊಂಡ ಹಬ್ಬ, ಮೇರಿ ಮಾತೆ ಯೇಸು ಕ್ರಿಸ್ತರ ಆಪೊಸ್ತಲರ ಮಧ್ಯೆ ಅವಳೂ ಒಬ್ಬಳು, ಯೇಸು ಕ್ರಿಸ್ತರ ಎಲ್ಲಾ ಯೋಜನೆಯಲ್ಲಿ ಅವರು ಪಾತ್ರ ವಹಿಸಿದ್ದಳು” ಎಂದು ತಿಳಿಸಿದರು.

    ಸ್ವಾತಂತ್ರ್ಯ ಆಚರಣೆಯ ವೇಳೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಕಥೊಲಿಕ್ ಸಭಾ ಎರ್ಪಡಿಸಿದ ಭಾಷಣ ಸ್ಪರ್ಧೆಯ ವಿಜೇತರನ್ನು ಪುರಸ್ಕರಿಸಲಾಯಿತು.

    ಈ ಸಂದರ್ಭದಲ್ಲಿ ಕಥೊಲಿಕ್ ಸಭಾ  ಕುಂದಾಪುರ ವಲಯದ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ, ಘಟಕದ ನಿಕಟಪೂರ್ವ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ, ಕಥೊಲಿಕ್ ಸಭಾದ ಪದಾಧಿಕಾರಿಗಳಾದ ಜೂಲಿಯೆಟ್ ಪಾಯ್ಸ್, ವಿನೋದ್ ಕ್ರಾಸ್ಟೊ,  ಪಾಲನ ಮಂಡಳಿ ಉಪಧ್ಯಾಕ್ಷ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಜೋನ್ ಮಾಸ್ಟರ್, ಇನ್ನಿತರರು ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಸ್ವಾಗತಿಸಿದರು,  ಕಾರ್ಯದರ್ಶಿ ವಾಲ್ಟರ್ ಡಿಸೋಜಾ ವಂದಿಸಿದರು,  ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ನಿರೂಪಿಸಿದರು.