ಶ್ರೀನಿವಾಸಪುರ: ಪಟ್ಟಣದ ಹೊರವಲಯದ ಅರಣ್ಯದಲ್ಲಿ ಗುರುವಾರವೂ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಲಾಗಿದೆ

ಶ್ರೀನಿವಾಸಪುರ: ಪಟ್ಟಣದ ಹೊರವಲಯದ ಅರಣ್ಯದಲ್ಲಿ ಗುರುವಾರವೂ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಸಲಾಗಿತ್ತು. ಅರಣ್ಯ ಒತ್ತುವರಿ ಮಾಡಿಕೊಂಡು ಬೆಳೆಯಲಾಗಿದ್ದ ಮರಗಳನ್ನು ಜೆಸಿಬಿ ಬಳಸಿ ತೆರವುಗೊಳಿಸಲಾಯಿತು.
ತೆರವುಗೊಳಿಸಲಾದ ಪ್ರದೇಶದ ಸುತ್ತ ಕಂದಕ ನಿರ್ಮಾಣ ಹಾಗೂ ಮಾವಿನ ಮರ ತೆರವುಗೊಳಿಸಿದ ಪ್ರದೇಶದಲ್ಲಿ ನೇರಳೆ, ಆಲ, ಬಿದಿರು, ಶ್ರೀಗಂಧ, ಬೇವು ಮತ್ತಿತರ ಜಾತಿಯ ಗಿಡ ನೆಡುವ ಕಾರ್ಯ ಭರದಿಂದ ಸಾಗಿತ್ತು. ಅರಣ್ಯ ಇಲಾಖೆ ನೇಮಿಸಿಕೊಂಡಿರುವ ದೊಡ್ಡ ಸಂಖ್ಯೆಯ ಕೂಲಿ ಕಾರ್ಮಿಕರು ಗಿಡ ನೆಟ್ಟು ನೀರು ಹಾಕುವ ಕಾರ್ಯದಲ್ಲಿ ನಿರತರಾಗಿದ್ದರು.
‘ಇಂದು 120 ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಲಾಗಿದೆ. ನೆನ್ನೆ 150 ಎಕರೆ ಒತ್ತುವರಿ ತೆರವುಗೊಳಿಸಲಾಗಿತ್ತು. ಈವರೆಗೆ ಒಟ್ಟು 20 ಒತ್ತುವರಿದಾರರಿಗೆ ಸೇರಿದ 270 ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಲಾಗಿದೆ. ಮುಂದಿನ 15 ದಿನಗಳ ಕಾಲ ಒತ್ತುವರಿ ತೆರವುಗೊಳಿಸಲಾಗಿರುವ ಪ್ರದೇಶದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಗುವುದು. ಸುತ್ತಲೂ ಕಂದಕ ನಿರ್ಮಿಸಲಾಗುವುದು. ಅನಂತರ ತೆರವು ಕಾರ್ಯಾಚರಣೆ ಮುಂದುವರಿಸಲಾಗುವುದು’ ಎಂದು ವಲಯ ಅರಣ್ಯಾಧಿಕಾರಿ ಕೆ.ಮಹೇಶ್ ತಿಳಿಸಿದರು.
ಪಟ್ಟಣದಿಂದ ವಾಹನಗಳಲ್ಲಿ ಬಂದು ರಸ್ತೆ ಬದಿಯಲ್ಲಿ ಗುಂಪು ಗುಂಪಾಗಿ ನಿಂತು ಮಾತನಾಡುತ್ತಿದ್ದ ಜನರನ್ನು ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಹೊರಗೆ ಕಳಿಸಿದರು. ಕಾರ್ಯಾಚರಣೆಗೆ ಯಾವುದೇ ತೊಡಕು ಉಂಟಾಗದಂತೆ ಎಚ್ಚರ ವಹಿಸಲಾಗಿತ್ತು.

ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ.ಲಿ. ಗೆ 2022-23 ನೇ ಸಾಲಿನ “ಸಾಧನಾ ಪ್ರಶಸ್ತಿ”

ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ.ಲಿ, ಉಡುಪಿ. 2022-23 ನೇ ಸಾಲಿನಲ್ಲಿ ಸಂಘವು ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಇವರಿಂದ ಗುರುತಿಸಲ್ಪಟ್ಟು ದಿನಾಂಕ 19-08-2023 ರಂದು ನಡೆದ ಸಮಾರಂಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಮತ್ತು ಆಡಳಿತ ಮಂಡಳಿ ಸದಸ್ಯರು ಹಾಗೂ ಉಡುಪಿ ಜಿಲ್ಲಾ ಯೂನಿಯನ್ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರ ಗಣ್ಯ ಉಪಸ್ಥಿತಿಯಲ್ಲಿ ಅಧ್ಯಕ್ಷರಾದ ಶ್ರೀ ಅಲೋಶಿಯಸ್ ಡಿ’ಅಲ್ಮೇಡಾ, ಉಪಾಧ್ಯಕ್ಷರಾದ ಶ್ರೀ ಲೂವಿಸ್ ಲೋಬೋ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀ ಸಂದೀಪ್ ಎ. ಫೆರ್ನಾಂಡೀಸ್ ರವರು ಜಂಟಿಯಾಗಿ “ಸಾಧನಾ ಪ್ರಶಸ್ತಿ” ಯನ್ನು ಸ್ವೀಕರಿಸಿದರು. 1997ನೇ ಇಸವಿಯಲ್ಲಿ ಆರಂಭಗೊಂಡ ಸಂಘವು ಕಳೆದ ಡಿಸೆಂಬರ್ ನಲ್ಲಿ ತನ್ನ ರಜತ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಿ ಕೊಂಡು, ಕಳೆದ 25 ವರ್ಷಗಳಿಂದ ಸತತವಾಗಿ ಲಾಭಗಳಿಸುತ್ತಾ ಬಂದಿದ್ದು, ಈದೀಗ ತನ್ನ ಚೊಚ್ಚಲ ಸಾಧನಾ ಪ್ರಶಸ್ತಿಯನ್ನು ಪಡೆದುಕೊಂಡಿದೆ. 2022-2023ನೇ ಸಾಲಿನ ಅಂತ್ಯಕ್ಕೆ 6,091 ಸದಸ್ಯರು, ರೂ. 1.13 ಕೋಟಿ ಪಾಲು ಬಂಡವಾಳ, ರೂ. 30.19 ಕೋಟಿ ಠೇವಣಿಗಳು, ರೂ. 1.66 ಕೋಟಿ ನಿಧಿಗಳು, ರೂ. 9.10 ಕೋಟಿ ಹೂಡಿಕೆ, ರೂ. 22.23 ಕೋಟಿ ಹೊರಬಾಕಿ ಸಾಲ, ರೂ. 33.00 ಕೋಟಿಯಷ್ಟು ದುಡಿಯುವ ಬಂಡವಾಳವನ್ನು ಹೊಂದಿದ್ದು, ಲೆಕ್ಕ ಪರಿಶೋಧನೆಯಲ್ಲಿ “ಎ” ಶ್ರೇಣಿಯನ್ನು ಪಡೆದುಕೊಂಡು, ಸಾಲ ವಸೂಲಾತಿ ಪ್ರಮಾಣ ಶೇಕಡಾ 96% ಆಗಿರುತ್ತದೆ. 2021-22 ನೇ ಸಾಲಿನ ಅಂತ್ಯಕ್ಕೆ ರೂ. 44.10 ಲಕ್ಷ ಲಾಭಾಂಶವನ್ನು ಗಳಿಸಿ ಶೇಕಡಾ 17% ಡಿವಿಡೆಂಟನ್ನು ನೀಡಿದ್ದ ಸಂಸ್ಥೆ, 2022-23 ನೇ ಸಾಲಿನ ಅಂತ್ಯಕ್ಕೆ ಲಾಭಾಂಶವನ್ನು ದ್ವಿ-ಗುಣ ಅಂದರೆ ರೂ. 83.81 ಲಕ್ಷ ಗಳಿಸಿಕೊಂಡಿದೆ. ಸದಸ್ಯರಿಗೆ ಶೇಕಡಾ 20% ರಷ್ಟು ಡಿವಿಡೆಂಡನ್ನು ವಿತರಿಸಲು ಆಡಳಿತ ಮಂಡಳಿಯು ನಿರ್ಧರಿಸಿದೆ. ಈ ಸಾಧನೆಯನ್ನು ಮಾಡುವಲ್ಲಿ ಸಹಕರಿಸಿದ ನಮ್ಮೆಲ್ಲಾ ನೆಚ್ಚಿನ ಗ್ರಾಹಕರಿಗೂ, ಸಿಬ್ಬಂದಿ ವರ್ಗದವರಿಗೂ ಆಡಳಿತ ಮಂಡಳಿಯೂ ಧನ್ಯವಾದವನ್ನು ತಿಳಿಸಿದೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಿದಂತಹ ಪ್ರಥಮ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ

ಶ್ರೀನಿವಾಸಪುರ : ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಿದಂತಹ ಪ್ರಥಮ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ . ಇಡೀ ವಿಶ್ವದಲ್ಲೇ ಚಂದ್ರನ ಮೇಲೆ ನೌಕೆ ಇಳಿಸಿದಂತಹ ರಾಷ್ಟ್ರ. ಅಮೇರಿಕಾ , ಚೀನಾ, ರಷ್ಯಾ ದೇಶಗಳ ನಂತರ ನಮ್ಮ ದೇಶವು ಚಂದ್ರನ ಮೇಲೆ ವಿಕ್ರಂ-3 ಎಂಬ ನೌಕೆಯನ್ನು 42 ದಿನಗಳ ನಂತರ ಯಶಸ್ವಿಯಾಗಿ ಇಳಿಸಿದೆ. ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ|| ಎನ್.ವೇಣುಗೋಪಾಲ್ ಹೇಳಿದರು.
ಪಟ್ಟಣದ ಇಂದಿರಾಭವನ್ ವೃತ್ತದಲ್ಲಿ ತಾಲೂಕು ಬಿಜೆಪಿ ಘಟಕದವತಿಯಿಂದ ನಡೆದ ಸಂಭ್ರಾಮಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂತಹ ಸಂದರ್ಭದಲ್ಲಿ ಯಶಸ್ವಿಯಾಗಿ ಕಾರ್ಯಚರಣೆಯನ್ನು ಹಗಲಿರಲು ಶ್ರಮಿಸಿರುವ ಇಸ್ರೋ ವಿಜ್ಞಾನಿಗಳಿಗೆ ಹಾಗೂ ಈ ಕಾರ್ಯಚರಣೆಗೆ ಬೆನ್ನುಲಬಾಗಿ ಕೆಲಸ ಕಾರ್ಯನಿರ್ವಹಿಸಿದಂತ ಪ್ರತಿಯೊಬ್ಬರಿಗೂ ಧ್ಯನವಾದವನ್ನು ತಿಳಿಸಿದರು.
ವಿಶೇಷವಾಗಿ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರವು ವಿಜ್ಞಾನಿಗಳಿಗೆ ನಿರಂತರವಾಗಿ ಪ್ರೋತ್ಸಾಹವನ್ನು ನೀಡುತ್ತಾ ಬರುತ್ತಿದೆ. ಅವರು ಪ್ರತಿಯೊಂದು ಕಾರ್ಯದಲ್ಲಿ ಕೇಂದ್ರ ಸರ್ಕಾ ಬೆನ್ನುಲಬಾಗಿ ನಿಂತಿದೆ. ಈ ಒಂದು ಸಂದರ್ಭದಲ್ಲಿ ಈ ಕಾರ್ಯಕ್ಕೆ ಸಲಹೆ , ಸಹಕಾರ ನೀಡಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದರು.
ಈವತ್ತು 140 ಕೋಟಿ ಜನರು ಹೆಮ್ಮೆಪಡುವಂತಹ ದಿನವಾಗಿದೆ. ಈವತ್ತು ಭಾರತ ಪ್ರತಿಯೊಂದು ಕಾರ್ಯದಲ್ಲಿ ತನ್ನದೇ ಆದ ವಿಶೇಷವಾದ ಪ್ರಗತಿಯನ್ನು ವಿಶ್ವಕ್ಕೆ ಕೊಡಿಗೆಯಾಗಿ ನೀಡುತ್ತಿದೆ. ಇಂದು ಬಾಹ್ಯಾಕಾಶದಲ್ಲಿ ತನ್ನದೇ ಆದ ಚಾಪು ಮೂಡಿಸುತ್ತಿದೆ ಎಂದರು. ಶ್ರೀನಿವಾಸಪುರ ಜನತೆ ಪರವಾಗಿ ಯಶ್ವಸಿಯಾಗಿ ನೌಕೆಯನ್ನು ಚಂದ್ರನ ಮೇಲೆ ಇಳಿಸಿರುವ ಪ್ರತಿಯೊಬ್ಬ ವಿಜ್ಞಾನಿಗಳು ಕೃತಜ್ಞತೆ ಸಲ್ಲಿಸಿ, ಸಹಿತಿನ್ನಿಸುವದರ ಮೂಲಕ ಹಾಗು ಘೋಷಣೆಗಳ ಮೂಲಕ ಸಂಭ್ರಮಾಚರಣೆ ಹಮ್ಮಿಕೊಂಡಿದ್ದರು.
ಬಿಜೆಪಿ ಪಕ್ಷದ ಮುಖಂಡರಾದ ಲಕ್ಷ್ಮಣಗೌಡ, ಹೊದಲಿ ನಾರಾಯಣಸ್ವಾಮಿ, ಪಣಸಮಾಕಲಪಲ್ಲಿ ನಾರಾಯಣಸ್ವಾಮಿ, ರಾಮಾಂಜಿ, ಸುರೇಶ್‍ನಾಯಕ್, ಶ್ರೀನಾಥಬಾಬು, ನಾಗೇದನಹಳ್ಳಿ ಚಂದ್ರಶೇಖರ್ ಇದ್ದರು.

ಮಲ್ಪೆ ಕಡಲ ತೀರದಲ್ಲಿ ‘ಸ್ಯಾಂಡ್‍ಥೀಂ’ ತಂಡದಿಂದ ಆಕರ್ಶಕ ಮರಳು ಶಿಲ್ಪಾಕೃತಿಗಳು

ಭಾರತೀಯ ವಿಜ್ಞಾನಿಗಳು ಚಂದ್ರಯಾನ 3 ಯಶಶ್ವಿಯಾದ ಹಿನ್ನೆಲೆಯಲ್ಲಿ ‘ಸ್ಯಾಂಡ್‍ಥೀಂ’ ಉಡುಪಿ ತಂಡದದವರು ಮಲ್ಪೆ ಕಡಲ ತೀರದಲ್ಲಿ ಬಹಳ ಆಕರ್ಶಕವಾದ ಮರಳು ಶಿಲ್ಪ ಕಲಾಕ್ರತಿಯನ್ನು ರಚಿಸಿದ್ದಾರೆ

ಹಾಗೇ ಇದೇ ತಂಡ ಮೇ 10 ರಂದು ನಡೆದಿದ್ದ ರಾಜ್ಯ ವಿಧಾನ ಸಭಾಕ್ಷೇತ್ರದ ಚುನಾವಣೆಯ ಅಂಗವಾಗಿ ಸದೃಡ ರಾಜ್ಯಕ್ಕಾಗಿ ಮತದಾನ ಎಂಬ ಸಂಕಲ್ಪದೊಂದಿಗೆ ಸದೃಡ ರಾಜ್ಯಕ್ಕಾಗಿ ‘ಮತದಾನ ನಮ್ಮ ಹಕ್ಕು’ ಎಂಬ ಧ್ಯೇಯದೊಂದಿಗೆ ಮಲ್ಪೆ ಕಡಲ ತೀರದಲ್ಲಿ 4.5 ಅಡಿ ಎತ್ತರ ಮತ್ತು 6 ಅಡಿ ಅಗಲದ ಜನಜಾಗೃತಿಗಾಗಿ ಶಿಲ್ಪಾಕ್ರತಿಯನ್ನು ರಚಿಸಿದ್ದರು. ಈ ಮರಳು ಶಿಲ್ಪಾಕ್ರತಿಗಳನ್ನು ರಚಿಸಿದ ತಂಡದಲ್ಲಿ ಕಲಾವಿದರಾದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ, ಉಜ್ವಲ್ ನಿಟ್ಟೆ ಇವರುಗಳು ಇದ್ದರು

‘ಮತದಾನ ನಮ್ಮ ಹಕ್ಕು’ ಎಂಬ ಧ್ಯೇಯದೊಂದಿಗೆ ಮಲ್ಪೆ ಕಡಲ ತೀರದಲ್ಲಿ 4.5 ಅಡಿ ಎತ್ತರ ಮತ್ತು 6 ಅಡಿ ಅಗಲದ ಜನಜಾಗೃತಿಗಾಗಿ ಶಿಲ್ಪಾಕ್ರತಿಗಳು