ಮಂಗಳೂರು ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಕೊಂಕಣಿ ಮಾನ್ಯತಾ ದಿವಸ್‍ ಆಚರಣೆ


ಮಂಗಳೂರು ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಕೊಂಕಣಿ ಮಾನ್ಯತಾ ದಿವಸ್‍ ಆಚರಣೆಯನ್ನು ಆಗೋಸ್ಟ್ 24 ರಂದು ರೋಯ್‍ಕ್ಯಾಸ್ತೆಲಿನೊ (ಕೊಂಕಣಿ ಸಾಹಿತ್ಯಆಕಾಡೆಮಿ ಮಾಜಿ ಅಧ್ಯಕ್ಷರು ಹಾಗೂ ಮಂಗಳೂರು ಕಥೋಲಿಕ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಧಿಕಾರಿ) ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ವಂದನೀಯ ಗುರುಗಳಾದ ಮೆಲ್ವಿನ್‍ ಡಿಕುನ್ಹರವರು ವಸ್ತು ಪ್ರದರ್ಶನದ ಉದ್ಘಾಟನೆಗೈದರು.
ಮ್ಯಾಕ್ಸಿಮ್ ಲುದ್ರಿಕ್‍ ಇಲ್ಲಿನಪುರಾತನ ಕಾಲದಕಾಲದ ವಸ್ತುಗಳ ಪರಿಚಯಿಸಿದರು. ಈ ಕಾರ್ಯಕ್ರಮದಲ್ಲಿ ವಂದನೀಯ ಗುರು ಸ್ಟೀಫನ್ ಪಿರೇರಾ, ವಂದನೀಯ ಗುರು ದೀಪ್‍ ಯಫೆರ್ನಾಂಡಿಸ್, ವಂದನೀಯ ಗುರು ಗ್ರೆಗೊರಿ ಡಿಸೋಜ, ವಂದನೀಯ ಗುರು ಜೋನ್ ಪಿಂಟೊ, ವಂದನೀಯ ಗುರು ಫ್ರಾನ್ಸಿಸ್, ವಂದನೀಯ ಗುರು ವಿಲ್ಪೇಡ್‍ ರೊಡ್ರಿಗಸ್ ಹಾಗೂ ಇತರಗಣ್ಯ ವ್ಯಕ್ತಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಡರು. ವಂದನೀಯ ಗುರು ಐವನ್‍ಡಿಸೋಜ (ನಮಾನ್ ಬಾಳೊಕ್ ಜೆಜು ಸಂಪಾದಕರು ಹಾಗೂ ಕಾರ್ಯಕ್ರಮದ ಸಂಯೋಜಕರು) ಸರ್ವರನ್ನು ಸ್ವಾಗತಿಸಿದರು.
ಎಲ್ಸನ್‍ ಹಿರ್ಗಾನ್‍ ಕಾರ್ಯಕ್ರಮವನ್ನು ನಿರೂಪಿಸಿದರು. ವಸ್ತು ಪ್ರದರ್ಶನವನ್ನು ಪುಣ್ಯಕ್ಷೇತ್ರದ ಸಭಾಂಗಣದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಯಿತು.

ಅರಣ್ಯ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ :120 ಎಕರೆ ಅರಣ್ಯ ಒತ್ತುವರಿ ತೆರವು

ಶ್ರೀನಿವಾಸಪುರ: ಅರಣ್ಯ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಪಟ್ಟಣದ ಹೊರವಲಯದಲ್ಲಿ 120 ಎಕರೆ ಅರಣ್ಯ ಒತ್ತುವರಿ ತೆರವುಗೊಳಿಸಿತು.
ಪಟ್ಟಣದ ಹೊರವಲಯದ ಅರಣ್ಯ ಒತ್ತುವರಿ ಪ್ರದೇಶಕ್ಕೆ ಬುಧವಾರ ಬೆಳಿಗ್ಗೆ ಸುಮಾರು ಮೂರು ಗಂಟೆ ಸಮಯದಲ್ಲಿ ಜೆಸಿಬಿ ಹಾಗೂ ಇಟಾಚಿಗಳನ್ನು ನುಗ್ಗಿಸಿ, ಕೆಲವರು ಅಕ್ರಮವಾಗಿ ಬೆಳೆಯಲಾಗಿದ್ದ ಮಾವು, ನೇರಳೆ, ಹೊಂಗೆ ಮತ್ತಿತರ ಮರಗಳನ್ನು ಉರುಳಿಸಲಾಯಿತು. ಮಾವಿನ ತೋಟಗಳಲ್ಲಿ ನಿರ್ಮಿಸಲಾಗಿದ್ದ 3 ಕೃಷಿ ಹೊಂಡ, ನಿರ್ಮಾಣ ಹಂತದಲ್ಲಿದ್ದ 2 ಕೋಳಿ ಫಾರಂ ಹಾಗೂ 3 ಶೆಡ್‍ಗಳನ್ನು ನೆಲಸಮಗೊಳಿಸಲಾಯಿತು.
ಕಾರ್ಯಾಚರಣೆಯಲ್ಲಿ 15 ಜೆಸಿಬಿ, 10 ಇಟಾಚಿ ಬಳಸಲಾಯಿತು. 150 ಅರಣ್ಯ ಸಿಬ್ಬಂದಿ, 60 ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ಪೊಲೀಸ್ ಮೀಸಲು ಪಡೆಯ 2 ತುಕಡಿ ಭಾಗವಹಿಸಿದ್ದವು. ಒಂದು ಅಹಿತಕರ ಘಟನೆ ಹೊರತುಪಡಿಸಿದರೆ ಕಾರ್ಯಾಚರಣೆ ಅಬಾಧಿತವಾಗಿ ನಡೆಯಿತು. ಕಾರ್ಯಾಚರಣೆ ವಿರೋಧಿಸಿ ಎರಡು ಜೆಸಿಬಿ ಗಾಜು ಒಡೆದುಹಾಕಿದ ಶ್ರೀಧರ್ ರೆಡ್ಡಿ ಎಂಬ ವ್ಯಕ್ತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ ಎಂದು ಜಿಲ್ಲಾ ಅರಣ್ಯಾಧಿಕಾರಿ ವಿ.ಏಡುಕೊಂಡಲು ತಿಳಿಸಿದರು.
ವಲಯ ಅರಣ್ಯಾಧಿಕಾರಿಗಳಾದ ಕೆ.ಮಹೇಶ್, ಎಸ್.ವಿ.ಜ್ಯೋತಿ, ಡಿವೈಎಸ್‍ಪಿ ನಂದಕುಮಾರ್, ಪೊಲೀಸ್ ಇನ್ಸ್‍ಪೆಕ್ಟರ್ ಆರ್.ದಯಾನಂದ, ಪೊಲೀಸ್ ಸಬ್ ಇನ್ಸ್‍ಪೆಕ್ಟರ್‍ಗಳಾದ ಪ್ರದೀಪ್ ಸಿಂಗ್, ಈಶ್ವರ್, ಭಾರತಿ, ರವಣಮ್ಮ, ರವೀಂದ್ರಗೌಡ, ಉಪ ಅರಣ್ಯಾಧಿಕಾರಿಗಳಾದ ಅನಿಲ್, ಶ್ರೀನಾಥ್, ನವೀನ್, ಮಂಜುನಾಥ್, ಹರೀಶ್ ಕುಮಾರ್, ವೆಂಕಟರಮಣ, ಭರತ್ ಇದ್ದರು.

ಎಸ್‍ಬಿಐ ಎಟಿಎಂ ಒಡೆದು ರೂ.11 ಲಕ್ಷ ಹಣ ದೋರೊಡೆ

ಶ್ರೀನಿವಾಸಪುರ: ಪಟ್ಟಣದ ಚಿಂತಾಮಣಿ ವೃತ್ತದಲ್ಲಿ ಮಂಗಳವಾರ ರಾತ್ರಿ ಎಸ್‍ಬಿಐ ಎಟಿಎಂ ಒಡೆದು ರೂ.11 ಲಕ್ಷ ಹಣ ದೋಚಲಾಗಿದೆ.
ಎಟಿಎಂನಲ್ಲಿ ಅಳವಾಡಿಸಲಾಗಿದ್ದ ಸಿಸಿ ಕ್ಯಾಮೆರಾಗೆ ಕಪ್ಪು ಪೈಟ್ ಬಳಿದು, ವೆಲ್ಡಿಗ್ ಕಟ್ಟರ್‍ನಿಂದ ಎಟಿಎಂ ಯಂತ್ರ ಕತ್ತರಿಸಿ ಹಣ ಕಳವು ಮಾಡಲಾಗಿದೆ ಎಂದು ಹೇಳಲಾಗಿದೆ. ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮೂಡ್ಲಕಟ್ಟೆ ಎಂ ಐ ಟಿ: ರ್ಯಾಗಿಂಗ್ ವಿರೋಧಿ ಸಪ್ತಾಹ

ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಂಟಿ ರ್ಯಾಗಿಂಗ್ ಸೆಲ್ ವತಿಯಿಂದ ರ್ಯಾಗಿಂಗ್ ವಿರೋಧಿ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು. ಆ ಪ್ರಯುಕ್ತ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ಕಾರ್ಯವನ್ನು ಆಯೋಜಿಸಲಾಗಿದ್ದು ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರದ ಜನಪ್ರಿಯ ವಕೀಲರಾಗಿರುವ ಶ್ರೀಯುತ ರೋ. ರಾಘವೇಂದ್ರ ನಾವುಡ ಇವರು ಆಗಮಿಸಿದ್ದರು. ಏಮ್ ಐ ಟಿ ಕಾಲೇಜು ರ್ಯಾಗಿಂಗ್ ಮುಕ್ತ ಸಂಸ್ಥೆಯಾಗಿದ್ದರೂ ಇಂತಹ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ ಎಂದರು. ಜೊತೆಗೆ ರ್ಯಾಗಿಂಗ್ ಮಾಡುವುದರಿಂದ ಆಗುವ ಎಲ್ಲ ತರಹದ ದುಷ್ಪರಿಣಾಮ ಹಾಗೂ ಕಾನೂನು ಕ್ರಮಗಳನ್ನು ಸವಿವರವಾಗಿ ತಿಳಿಸಿದರು. ವಿದ್ಯಾರ್ಥಿನಿ ಖುಷಿ ಕಾರ್ಯಕ್ರಮ ನಿರೂಪಿಸಿದರು. ರ್ಯಾಗಿಂಗ್ -ವಿರೋಧಿ ಕ್ರಮಗಳ ಮೇಲೆ ಕೇಂದ್ರೀಕರಿಸಿದ ಪ್ರಬಂಧ-ಬರಹ, ಪೋಸ್ಟರ್ ತಯಾರಿಕೆ ಮತ್ತು ಲೋಗೋ ವಿನ್ಯಾಸದಂತಹ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ರ್ಯಾಗಿಂಗ್ ವಿರೋಧಿ ಸಪ್ತಾಹದ ಕೊನೆಯ ದಿನ ಸಮಾರೋಪ ಸಮಾರಂಭ ಏರ್ಪಡಿಸಲಾಗಿತ್ತು.

ಕಾಲೇಜಿನ ಪ್ರಾಂಶುಪಾಲರಾದ ಡಾ| ಅಬ್ದುಲ್ ಕರೀಮ್ ,ಸ್ಟುಡೆಂಟ್ ವೆಲ್ಫ಼ೇರ್ ಡೀ‌ನ್ ಹಾಗೂ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ|ರಾಮಕೃಷ್ಣ ಹೆಗ್ಡೆ,ಉಪಪ್ರಾಂಶುಪಾಲರಾದ ಪ್ರೊ. ಮೆಲ್ವಿನ್ ಡಿ ಸೋಜಾ, ಕಾರ್ಯಕ್ರಮ ಸಂಯೋಜಕರಾದ ಪ್ರೊಫೆಸರ್ ವರುಣ್ ಕುಮಾರ್ ಬಹುಮಾನ ವಿತರಣೆ ಮಾಡಿದರು. ವಿದ್ಯಾರ್ಥಿ ಶರತ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಪ್ರೊಫೆಸರ್ ಸೂಕ್ಷ್ಮ ಎಸ್ ಅಡಿಗ ವಂದಿಸಿದರು. ವಿದ್ಯಾರ್ಥಿಗಳು, ಮತ್ತು ಸಿಬಂದಿ ವರ್ಗ ಉಪಸ್ಥಿತರಿದ್ದರು.