ಕುಂದಾಪುರದ ಶ್ರೇಯಶ್ರೀಗೆ ಸರಸ್ವತಿ ರಾಜ್ಯ ಪ್ರಶಸ್ತಿ ಪುರಸ್ಕಾರ


ಕುಂದಾಪುರ: 2022 23ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 600ಕ್ಕೂ ಹೆಚ್ಚು ಅಂಕ ಪಡೆದ ಕುಂದಾಪುರ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶ್ರೇಯಶ್ರೀ ಇವರಿಗೆ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶಣೈ ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಇವರು ಅಂಕದಕಟ್ಟೆ ಉದಯ ಮತ್ತು ಉಮಾ ದಂಪತಿಗಳ ಪುತ್ರಿಯಾಗಿದ್ದಾಳೆ

ಕೋಡಿಪಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರಾಗಿ ರೆಡ್ಡಮ್ಮೆ, ಉಪಾಧ್ಯಕ್ಷರಾಗಿ ಮುನಿಯಮ್ಮ ಅವಿರೋಧವಾಗಿ ಆಯ್ಕೆ

ಶ್ರೀನಿವಾಸಪುರ 3 : ತಾಲೂಕಿನ ರಾಯಲ್ಪಾಡು ಹೋಬಳಿಯ ಕೋಡಿಪಲ್ಲಿ ಗ್ರಾಮಪಂಚಾಯಿತಿಗೆ ಸಂಬಂದಿಸಿದಂತೆ ನಡೆದ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ರೆಡ್ಡಮ್ಮೆ , ಕಾಂಗ್ರೆಸ್ ಬೆಂಬಲಿತ ಉಪಾಧ್ಯಕ್ಷರಾಗಿ ಮುನಿಯಮ್ಮ ರವರು ಅವಿರೋಧವಾಗಿ ಆಯ್ಕೆಯಾಗಿ ಗ್ರಾಮ ಪಂಚಾಯಿತಿಯು ಪುನಃ 2 ನೇ ಅವಧಿಗೆ ಕಾಂಗ್ರೆಸ್ ಮುಡಿಲು ಸೇರಿದೆ.
ಕೋಡಿಪಲ್ಲಿ ಗ್ರಾಮಪಂಚಾಯಿತಿಗೆ ಸಂಬಂದಿಸಿದಂತೆ ಒಟ್ಟು 16 ಸದಸ್ಯರಿದ್ದು, 14 ಕಾಂಂಗ್ರೆಸ್ ಬೆಂಬಲಿತ ಸದಸ್ಯರಿದ್ದು, 2 ಜೆಡಿಎಸ್ ಬೆಂಬಲಿತ ಸದಸ್ಯರಿದ್ದು ಗ್ರಾಮಪಂಚಾಯಿತಿ ಕಛೇರಿಯಲ್ಲಿ ಬುಧವಾರ 2ನೇ ಅವಧಿಗೆ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ರೆಡ್ಡಮ್ಮ ಹಾಗೂ ಅದೇ ಪಕ್ಷದ ಶಿಲ್ಪ ರವರು ನಾಮಪತ್ರ ಸಲ್ಲಿಸಿದ್ದರು ಕೊನೆಗಳಿಗೆಯಲ್ಲಿ ಶಿಲ್ಪ ರವರು ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ರೆಡ್ಡಮ್ಮ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುನಿಯಪ್ಪ ಒಬ್ಬರೇ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು ಈ ಹಿನ್ನೆಲೆಯಲ್ಲಿ ಮುನಿಯಪ್ಪ ರವರು ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಶೇಷವಾಗಿ ಅಧ್ಯಕ್ಷ , ಉಪಾಧ್ಯಕ್ಷ ಹಾಗು ಸದಸ್ಯರೆಲ್ಲರೂ ಸಹ ತಮ್ಮ ನಾಯಕರಾದ ಕೆ.ಆರ್.ರಮೇಶ್‍ಕುಮಾರ್‍ರವರ ಭಾವಚಿತ್ರಕ್ಕೆ ನಮಿಸಿ, ತಮ್ಮ ನಾಯಕನಿಗೆ ಜೈಕಾರಗಳನ್ನು ಕೂಗಿದರು.
ಚುನಾವಣಾ ಅಧಿಕಾರಿ ಎಂ.ಶ್ರೀನಿವಾಸನ್, ಪಿಡಿಒ ಆರ್.ವಿ.ರವಿಕುಮಾರ್, ಮುಖಂಡರಾದ ಕೋಡಿಪಲ್ಲಿ ಸುಬ್ಬಿರೆಡ್ಡಿ, ವಿಶ್ವನಾಥರೆಡ್ಡಿ, ಸಿಬ್ಬಂದಿಗಳಾದ ಈಶ್ವರ್, ಓಬಳೇಶ್ ಇದ್ದರು.

ಬೈರಗಾನಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ನೇತ್ರಾವತಿ, ಉಪಾಧ್ಯಕ್ಷೆಯಾಗಿ ಸಲ್ಮಾ ಖಾನಂ ಆಯ್ಕೆ

ಶ್ರೀನಿವಾಸಪು: ತಾಲ್ಲೂಕಿನ ಬೈರಗಾನಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನೇತ್ರಾವತಿ ಹಾಗೂ ಉಪಾಧ್ಯಕ್ಷೆಯಾಗಿ ಸಲ್ಮಾ ಖಾನಂ ಆಯ್ಕೆಯಾಗಿದ್ದಾರೆ.
15 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ನೇತ್ರಾವತಿ 9 ಮತ ಪಡೆದು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಅವರ ಪ್ರತಿಷ್ಪರ್ಧಿ ಕಾಂಗ್ರೆಸ್ ಬೆಂಬಲಿತ ರೆಡ್ಡಪ್ಪ 6 ಮತ ಪಡೆದಿದ್ದಾರೆ. ಸಲ್ಮಾ ಖಾನಂ 8 ಮತ ಪಡೆದು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಅವರ ಪ್ರತಿ ಸ್ಪರ್ಧಿ ಮಮತ 7 ಮತ ಪಡೆದಿದ್ದಾರೆ.
ಚುನಾವಣಾಧಿಕಾರಿಯಾಗಿ ಕೃಷ್ಣಪ್ಪ, ಪಿಡಿಒ ಶ್ರೀನಿವಾಸರೆಡ್ಡಿ ಚುನಾವಣಾ ಕರ್ತವ್ಯ ನಿರ್ವಹಿಸಿದರು. ಮುಖಂಡರಾದ ಬಜ್ಜನ್ನ, ಸುಧಾಕರ್, ಶ್ರೀನಿವಾಸರೆಡ್ಡಿ, ಆನಂದ್, ಕೆ.ಬಿ.ರಘುನಾಥರೆಡ್ಡಿ, ಎಂ.ವಿ.ಮಂಜುನಾಥ ಪ್ರಸಾದ್ ಇದ್ದರು.
ಕೋಡಿಪಲ್ಲಿ ಗ್ರಾಪಂ: ತಾಲ್ಲೂಕಿನ ಕೋಡಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರೆಡ್ಡಮ್ಮ ಹಾಗೂ ಉಪಾಧ್ಯಕ್ಷರಾಗಿ ಮುನಿಯಮ್ಮ ಅವಿರೋಧ ಆಯ್ಜೆಯಾಗಿದ್ದಾರೆ.

ಮಾಸ್ತೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಮತ ನಾರಾಯಣಸ್ವಾಮಿ, ಉಪಾಧ್ಯಕ್ಷರಾಗಿ ಲಕ್ಷ್ಮಿ ಕೆ.ಪಿ ನಾಗೇಶ್ ಆಯ್ಕೆ

ಶ್ರೀನಿವಾಸಪುರ: ತಾಲ್ಲೂಕಿನ ಮಾಸ್ತೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಮಮತ ನಾರಾಯಣಸ್ವಾಮಿ, ಉಪಾಧ್ಯಕ್ಷರಾಗಿ ಲಕ್ಷ್ಮಿ ಕೆ.ಪಿ ನಾಗೇಶ್ ಬುಧವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
16 ಸದಸ್ಯ ಬಲದ ಗ್ರಾಮ ಪಂಚಾಯಿತಿಯಲ್ಲಿ ಮಮತ ನಾರಾಯಣಸ್ವಾಮಿ 8 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಭಾರತಿ 7 ಮತ ಪಡೆದಿದ್ದಾರೆ. 1 ಮತ ತಿರಸ್ಕರಿಸಲ್ಪಟ್ಟಿದೆ. ಉಪಾಧ್ಯಕ್ಷೆ ಲಕ್ಷ್ಮಿ ಕೆ.ಪಿ.ನಾಗೇಶ್ 10 ಮತ ಪಡೆದು ಗೆದ್ದಿದ್ದಾರೆ. ಪ್ರತಿಸ್ಪರ್ಧಿ ಅಮಡಪ್ಪ 6 ಮತ ಪಡೆದಿದ್ದಾರೆ.
ಚುನಾವಣಾಧಿಕಾರಿಯಾಗಿ ಕೆ.ಸಿ.ಮಂಜುನಾಥ್, ಪಿಡಿಒ ಚಿನ್ನಪ್ಪ ಚುನಾವಣಾ ಕರ್ತವ್ಯ ನಿರ್ವಹಿಸಿದರು.
ಚುನಾವಣೆ ಮುಗಿದ ಬಳಿಕ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ, ಗೆದ್ದ ಅಭ್ಯರ್ಥಿಗಳು ಹಾಗೂ ಜೆಡಿಎಸ್ ಮುಖಂಡರೊಂದಿಗೆ ಸಂತೋಷ ಹಂಚಿಕೊಂಡರು. ರಾಮಚಂದ್ರೇಗೌಡ, ಕೆ.ಪಿ.ನಾಗೇಶ್, ಎಂ.ಆರ್.ರಾಜಣ್ಣ, ರಮೇಶ್, ನಾರಾಯಣಸ್ವಾಮಿ ಇದ್ದರು.

ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ನಾಗರತ್ನಮ್ಮ ರಾಮ್‍ಮೋಹನ್,ಉಪಾಧ್ಯಕ್ಷೆಯಾಗಿ ವೆಂಕಟಲಕ್ಷ್ಮಮ್ಮ ವೆಂಕಟರವಣ ಆಯ್ಕೆ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ನಾಗರತ್ನಮ್ಮ ರಾಮ್‍ಮೋಹನ್, ಉಪಾಧ್ಯಕ್ಷೆಯಾಗಿ ವೆಂಕಟಲಕ್ಷ್ಮಮ್ಮ ವೆಂಕಟರವಣ ಬುಧವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಮೂವರು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಜೆಡಿಎಸ್ ಬೆಂಬಲಿತ ಅಭ್ಯರ್ಥಿ ನಾಗರತ್ನಮ್ಮ ರಾಮ್‍ಮೋಹನ್ ಒಟ್ಟು 23 ಮತಗಳ ಪೈಕಿ 13 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಫೌಜಿಯಾ ಖಾನಂ 9 ಮತ ಪಡೆದುಕೊಂಡಿದ್ದಾರೆ. ಜರೀನಾ ತಾಜ್‍ಗೆ ಸೊನ್ನೆ ಮತಗಳು ಬಂದಿವೆ. 1 ಮತ ತಿರಸ್ಕøತಗೊಂಡಿದೆ.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ವೆಂಕಟಲಕ್ಷ್ಮಮ್ಮ ವೆಂಕಟರವಣ 12 ಮತ ಪಡೆದು ಆಯ್ಕೆಯಾಗಿದ್ದಾರೆ. ಅವರ ಪ್ರತಿಸ್ಪರ್ಧಿ ವೆಂಕಟಲಕ್ಷ್ಮಮ್ಮ ಜಿ.ರಮೇಶ್ 10 ಮತ ಪಡೆದಿದ್ದಾರೆ.
ಚುನಾವಣಾಧಿಕಾರಿ ಎನ್.ನಾರಾಯಣಸ್ವಾಮಿ, ಪಿಡಿಒ ಗೌಸ್‍ಸಾಬ್ ಚುನಾಣಾ ಕಾರ್ಯ ನಿರ್ವಹಿಸಿದರು. ಮುಖಂಡರಾದ ಶೇಷಾದ್ರಿ, ಅರುಣ ರವಿಕುಮಾರ್, ಜಿ.ಕೆ.ನಾಗರಾಜ್, ವೆಂಕಟರವಣಪ್ಪ, ಶಂಕರಪ್ಪ, ಶಿವಣ್ಣ, ಜಿ.ಎನ್.ರೆಡ್ಡಪ್ಪ ಇದ್ದರು.

ಗ್ರಹ ಜ್ಯೋತಿ ಯೋಜನೆಗೆ ಕುಂದಾಪುರದ ಜನಸಾಮಾನ್ಯರಿಂದ ಮೆಚ್ಚುಗೆ – ಬ್ಲಾಕ್ ಕಾಂಗ್ರೆಸ್ ಕುಂದಾಪುರ

ಕುಂದಾಪುರ: ಜು.10:ಗ್ರಹ ಜ್ಯೋತಿ ಯೋಜನೆ ಅಡಿ ಕುಂದಾಪುರ ಮೆಸ್ಕಾಂ ಕಚೇರಿಯ ಉಪ ವಿಭಾಗದಲ್ಲಿ 21,300 ಫಲಾನುಭವಿ ಗ್ರಾಹಕರು ಈಗಾಗಲೇ ನೋಂದಾಯಿತರಾಗಿದ್ದಾರೆ.

ಕುಂದಾಪುರ ಪುರಸಭೆ ಮತ್ತು ಸುತ್ತಮುತ್ತಲಿನ 22 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಉಪ ವಿಭಾಗದಲ್ಲಿ ಒಟ್ಟು 31,200 ಬಳಕೆದಾರರಿದ್ದು 25,000 ಗ್ರಾಹಕರು ಮಾಸಿಕ 200 ಯೂನಿಟ್ ಮೀರದವರಿದ್ದಾರೆ ಎಂದು ಈ ಹಿಂದಿನ ಬಳಕೆಯಿಂದ ಅಂದಾಜಿಸಲಾಗಿದೆ.

ಇನ್ನು 3700 ಅರ್ಹ ಗ್ರಾಹಕರು ನೊಂದಣಿಗೆ ಬಾಕಿ ಉಳಿದಿದ್ದು, ನೊಂದಣಿಗೆ ಸಮೀಪದ ಸೇವಾ ಸಿಂಧು ,ಗ್ರಾಮ ಒನ್ ಸೇವಾ ಕೇಂದ್ರ ಅಥವಾ ಮೆಸ್ಕಾಂ ಕಚೇರಿಗೆ ಭೇಟಿ ನೀಡಿ ನೋಂದಾಯಿಸಬೇಕು ಎಂದು ಮೆಸ್ಕಾಂ ಅಧಿಕಾರಿಗಳು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊಗೆ ತಿಳಿಸಿದರು.

ಕೆಲವೆಡೆ ಒಂದು ಆರ್ ಆರ್ ನಂಬ್ರ ದಲ್ಲಿ ಎರಡು ಆಧಾರ್ ಕಾರ್ಡಿನಿಂದ ಎರಡು ಬಾರಿ ನೋಂದಣಿಯಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಗಳನ್ನು ಬಗೆಹರಿಸಲಾಗುವುದು. ಗ್ರಾಮದಲ್ಲಿ ಈಗಾಗಲೇ ಮೆಸ್ಕಾಂ ಸಿಬ್ಬಂದಿಗಳು ಮೀಟರ್ ರೀಡಿಂಗ್ ನಡೆಸುತ್ತಿದ್ದು, ಶೂನ್ಯ ಬಿಲ್ ಗೆ ಕುಂದಾಪುರದ ಮಹಿಳೆಯರಿಂದ ಮತ್ತು ಜನಸಾಮಾನ್ಯರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ ಎಂದು ತಿಳಿಸಿದರು.