ರಾಹುಲ್‍ಗಾಂಧಿಗೆ ಸುಪ್ರೀಂಕೋರ್ಟ್ ರಿಲೀಫ್ ಹಿನ್ನಲೆ ಕೋಲಾರ ಜಿಲ್ಲಾ ಕಾಂಗ್ರೆಸ್‍ನಿಂದ ವಿಜಯೋತ್ಸವ

ಕೋಲಾರ:- ಎಐಸಿಸಿ ಮುಖಂಡ ರಾಹುಲ್‍ಗಾಂಧಿ ಅವರಿಗೆ ಮೋದಿ ಉಪನಾಮದ ಶಿಕ್ಷೆ ಪ್ರಕರಣಲ್ಲಿ ಸುಪ್ರೀಂ ಕೋರ್ಟ್‍ನಿಂದ ರಿಲೀಫ್ ಸಿಕ್ಕಿರುವ ಹಿನ್ನಲೆಯಲ್ಲಿ ಕೋಲಾರದಲ್ಲಿ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ.ಜಯದೇವ್, ಇದು ಪ್ರಜಾಪ್ರಭುತ್ವಕ್ಕೆ ಸಂದ ಜಯವಾಗಿದೆ, ಲೋಕಸಭಾ ಸದಸ್ಯತ್ವದಿಂದ ರಾಹುಲ್‍ಗಾಂಧಿ ಅವರನ್ನು ಅನರ್ಹಗೊಳಿಸಿದ್ದ ಕ್ರಮದ ವಿರುದ್ದ ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪು ನೀಡಿದ್ದು, ದೇಶದಲ್ಲಿನ ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ಆದ ಸೋಲಾಗಿದೆ ಎಂದು ತಿಳಿಸಿದರು.
ಲೋಕಸಭೆಯಲ್ಲಿ ಜನಪರ ಧ್ವನಿ ಅಡಗಿಸಲು ಬಿಜೆಪಿ ಸರ್ಕಾರ ನಡೆಸಿದ ಕುತಂತ್ರಕ್ಕೆ ಸುಪ್ರೀಂ ಕೋರ್ಟ್ ತಕ್ಕ ಉತ್ತರ ನೀಡಿದೆ, ಯಾವುದೇ ತಪ್ಪು ಮಾಡದಿದ್ದರೂ ಶಿಕ್ಷೆಗೆ ಒಳಗಾಗಿದ್ದ ರಾಹುಲ್‍ಗಾಂಧಿ ಮತ್ತೆ ಲೋಕಸಭೆ ಪ್ರವೇಶಿಸುತ್ತಿದ್ದು, ಜನರ ಧ್ವನಿಯಾಗಿ ಕೆಲಸ ಮಾಡುತ್ತಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್‍ಬಾಬು, ರಾಜ್ಯದಲ್ಲಿ ಜನತೆ ಬಿಜೆಪಿಯನ್ನು ತಿರಸ್ಕರಿಸಿ ಕಾಂಗ್ರೆಸ್‍ಗೆ ಬಹುಮತ ನೀಡಿದ್ದಾರೆ. ಅದೇ ಮಾದರಿಯಲ್ಲಿ ಕೇಂದ್ರದಲ್ಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದ್ದಾರೆ ಎಂದ ಅವರು ರಾಹುಲ್‍ಗಾಂಧಿಯವರ ಜನಪರ ಧ್ವನಿಯನ್ನು ಅಡಗಿಸಲು ಬಿಜೆಪಿಯಿಂದ ಸಾಧ್ಯವಿಲ್ಲ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ವಿವಿಧ ವಿಭಾಗದ ಪದಾಧಿಕಾರಿಗಳಾದ ಮುಖಂಡರಾದ ಸಾಧಿಕ್‍ಪಾಷ,ಅತಾವುಲ್ಲಾ, ಯಲ್ಲಪ್ಪ, ರತ್ನಮ್ಮ, ವೆಂಕಟಪತಿ, ಮಂಜುನಾಥ್, ಸವಿತಾ ಸಮಾಜದ ಮಂಜುನಾಥ , ತ್ಯಾಗರಾಜ್, ಸಲಾಲುದ್ದೀನ್ ಬಾಬು, ಹಾರೋಹಳ್ಳಿ ನಾರಾಯಣಸ್ವಾಮಿ, ಹರಿ,ಸಂಪತ್ ಕುಮಾರ್, ಎಜಾಜ್, ಗಂಗಮ್ಮನಪಾಳ್ಯದ ರಾಮಯ್ಯ,ನಾರಾಯಣಸ್ವಾಮಿ,ಅಯೂಬ್, ಬಾಬಾಜಾನ್ ಮತ್ತಿತರರು ಹಾಜರಿದ್ದರು.

ಮಕ್ಕಳ ವಯಸ್ಸಿಗೆ ಅನುಗುಣವಾಗಿ ಎಲ್ಲ ಲಸಿಕೆಗಳನ್ನೂ ತಪ್ಪದೆ ಹಾಕಿಸಬೇಕು : ತಹಶೀಲ್ದಾರ್ ಶರಿನ್ ತಾಜ್

ಶ್ರೀನಿವಾಸಪುರ: ಮಕ್ಕಳ ವಯಸ್ಸಿಗೆ ಅನುಗುಣವಾಗಿ ಎಲ್ಲ ಲಸಿಕೆಗಳನ್ನೂ ತಪ್ಪದೆ ಹಾಕಿಸಬೇಕು ಎಂದು ತಹಶೀಲ್ದಾರ್ ಶರಿನ್ ತಾಜ್ ಹೇಳಿದರು.
ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಮಿಷನ್ ಇಂದ್ರಧನುಷ್ 5.0 ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರ, ಉಪ ಕೇಂದ್ರ ಹಾಗೂ ಅಂಗನವಾಡಿಗಳಲ್ಲಿ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಹೇಳಿದರು.
ಆ.7 ರಿಂದ 12 ರವರೆಗೆ ಸೊನ್ನೆಯಿಂದ 5 ವರ್ಷದೊಳಗಿನ ಮಕ್ಕಳು ಹಾಗೂ ಗರ್ಭಿನಿಯರಿಗೆ ಲಸಿಕೆ ನೀಡಲಾಗುವುದು. ಬಸ್ ಹಾಗೂ ರೈಲು ನಿಲ್ದಾಣ, ಹಿಂದುಳಿದ ಬಡಾವಣೆಗಳು, ಕೊಳಚೆ ಪ್ರದೇಶಗಳು, ವಲಸೆ ಕಾರ್ಮಿಕರು ವಾಸಿಸುವ ಪ್ರದೇಶದಲ್ಲಿನ ಮಕ್ಕಳು ಹಾಗೂ ಅರ್ಹ ಮಹಿಳೆಯರಿಗೆ ಲಸಿಕೆ ನೀಡಲಾಗುವುದು ಎಂದು ಹೇಳಿದರು.
ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮಾಹಿತಿ ಶಿಕ್ಷಣ ಮತ್ತು ಜನ ಸಂಪರ್ಕ ಕಾರ್ಯಕ್ರಮದ ಮೂಲಕ ಅರಿವು ಮೂಡಿಸಬೇಕು. ಅಭಿಯಾನ ಯಶಸ್ಸಿಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಕೈ ಜೋಡಿಸಬೇಕು. ಮುಖ್ಯವಾಗಿ ಪುರಸಭೆ ವ್ಯಾಪ್ತಿಯಲ್ಲಿ ಅಗತ್ಯ ಪ್ರಚಾರ ಕೈಗೊಳ್ಳಬೇಕು ಎಂದು ಹೇಳಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಷರೀಫ್ ಮಾತನಾಡಿ, ದಡಾರ ರುಬೆಲ್ಲಾ ನಿರ್ಮೂಲನೆಯತ್ತ ದೊಡ್ಡ ಹೆಜ್ಜೆ ಇಡಲಾಗಿದೆ. ಒಟ್ಟಾರೆ ಮಕ್ಕಳನ್ನು ಬಾಧಿಸುವ 12 ರೋಗ ನಿಯಂತ್ರಣಕ್ಕೆ ಪೂರಕವಾಗಿ ಲಸಿಕೆ ನೀಡಲಾಗುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಜತೆಗೆ ವಿದ್ಯಾವಂತ ಸಮುದಾಯ ಗ್ರಾಮೀಣ ಪ್ರದೇಶದಲ್ಲಿ ಲಸಿಕೆ ಅಭಿಯಾನ ಯಸ್ಸಿಗೆ ಶ್ರಮಿಸಬೇಕು ಎಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಮಂಜುನಾಥ್, ಪುರಸಭೆ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಬಿಎಚ್‍ಇಒ ಆಂಜಿಲಮ್ಮ, ಬಿಪಿಎಂ ಹರೀಶ್, ಶೃತಿ, ಶರಣಮ್ಮ ಇದ್ದರು.

ಕೋಲಾರ ಜಿಲ್ಲೆಯ ಅಭಿವೃದ್ದಿಗೆ 74 ಕೋಟಿ ರೂ ವಿಶೇಷ ಅನುದಾನ ಬಿಡುಗಡೆ – ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್

ಕೋಲಾರ,ಆ.05: ಕೋಲಾರ ಜಿಲ್ಲೆಯ ಅಭಿವೃದ್ದಿಗೆ ಸಚಿವರ ಅನುದಾನದಲ್ಲಿ 74 ಕೋಟಿ ರೂ ವಿಶೇಷ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡುತ್ತಿರುವುದಾಗಿ ನಗರಾಭಿವೃದ್ದಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಘೋಷಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಜಿಲ್ಲಾ ಕೇಂದ್ರವಾದ ಕೋಲಾರಕ್ಕೆ 26 ಕೋಟಿ ರೂ, ಕೆ.ಜಿ.ಎಫ್ ನಗರಕ್ಕೆ 15 ಕೋಟಿ ರೂ, ಬಂಗಾರಪೇಟೆಗೆ 10 ಕೋಟಿ ರೂ ಸೇರಿದಂತೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಒಟ್ಟು 74 ಕೋಟಿ ರೂಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಕೂಸು ಅಗಿರುವ ಎತ್ತಿನ ಹೊಳೆಯ ಯೋಜನೆಯೂ ತುಮಕೂರಿನ ಬೈರಗೊಂಡ್ಲಹಳ್ಳಿ ಬಳಿಯ ಜಮೀನಿಗೆ ಸಂಬಂಧಿಸಿದಂತೆ ಅಡೆತಡೆಗಳಿರುವುದನ್ನು ಬಗೆಹರಿಸುವ ಪ್ರಯತ್ನ ಮಂದುವರೆದಿದೆ. ಕೋಲಾರ ಜಿಲ್ಲೆಗೆ 5 ಟಿ.ಎಂ.ಸಿ. ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಜಿಲ್ಲೆಯ 138 ಕೆರೆಗಳಿಗೆ ಅರ್ಧ ಭಾಗ ತುಂಬಿಸುವ ಕುರಿತು ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದರು.
ಕೆ.ಸಿ.ವ್ಯಾಲಿಯ ಮೂರನೇ ಹಂತದ ಶುದೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಅನುದಾನದಲ್ಲಿ ಜಿಲ್ಲೆಯ ರಸ್ತೆಗಳನ್ನು ಉನ್ನತೀಕರಣ ಮುಖ್ಯ ಮಾಡಲಾಗುವುದು, ರಿಂಗ್ ರಸ್ತೆಗೆ ಈಗಾಗಲೇ ಡಿ.ಪಿ.ಅರ್. ಸಿದ್ದಪಡಿಸಲಾಗುತ್ತಿದೆ. ಯರ್‍ಗೋಳ್ ಯೋಜನೆಯು 375 ಎಕರೆ ಪ್ರದೇಶವನ್ನು ಹೊಂದಿದೆ. ಇದರಲ್ಲಿ ಸರ್ಕಾರಕ್ಕೆ ಸೇರಿರುವುದು 95 ಎಕರೆ ಅಗಿದೆ. ಅರಣ್ಯ ಇಲಾಖೆಗೆ 150 ಎಕರೆ ಸ್ವಾಧೀನಕ್ಕೆ ಪಡೆದುಕೊಳ್ಳಲು ವಿಳಂಭವಾಯಿತು ಎಂದರು.
ಯರಗೋಳ್ ಯೋಜನೆಯಲ್ಲಿ 45 ಗ್ರಾಮಗಳಿಗೆ, 4 ಪಟ್ಟಣಗಳಿಗೆ, 4 ಲಕ್ಷ ಜನಕ್ಕೆ ನೀರು ಪೂರೈಕೆ ಮಾಡುವ ಯೋಜನೆ ಇದಾಗಿದೆ. ಈಗಾಗಲೇ ಶೇ 87 ರಷ್ಟು ಕಾಮಗಾರಿಗಳು ಪೂರ್ಣಗೊಂಡಿದೆ. 4 ಓವರ್ ಹೆಡ್ ಟ್ಯಾಂಕ್‍ಗಳಲ್ಲಿ ನೀರು ಶೇಖರಣೆ ಮಾಡಲಾಗುವುದು. ಈಗಾಗಲೇ ಎರಡು ಓವರ್ ಹೆಡ್ ಟ್ಯಾಂಕ್‍ಗಳು ಪೂರ್ಣಗೊಂಡಿರುವುದರಿಂದ 4 ಓವರ್ ಹೆಡ್ ಟ್ಯಾಂಕ್‍ಗಳು ಪೂರ್ಣಗೊಳ್ಳುವವರೆಗೂ ಕಾಯುವುದು ಬೇಡಾ, ಎರಡು ಓವರ್ ಹೆಡ್ ಟ್ಯಾಂಕ್ ಪೂರ್ಣಗೊಂಡಿರುವುದಕ್ಕೆ ಚಾಲನೆ ನೀಡಲು ಸೂಚಿಸಿದೆ. ಈ ನೀರಾವರಿ ಯೋಜನೆಗಳು ಸಿದ್ದರಾಮಯ್ಯ ಅವರಿಂದಲೇ ಪ್ರಾರಂಭವಾಗಿದ್ದು, ಇದು ಪೂರ್ಣಗೊಳ್ಳುವುದು ಸಹ ಸಿದ್ದರಾಮಯ್ಯ ಅವರಿಂದಲೇ ಅಗುತ್ತದೆ ಎಂದು ಖಚಿತ ಪಡಿಸಿದರು.
ಪ್ರಶ್ನೆಯೊಂದಕ್ಕೆ ಕೆ.ಸಿ. ವ್ಯಾಲಿ ನೀರು ಯರಗೋಳ್ ನೀರಿಗೆ ಸೇರ್ಪಡೆಯಾಗುತ್ತಿಲ್ಲ. ಸೇರ್ಪಡೆಯಾಗಲು ಬಿಡುವುದಿಲ್ಲ ಯರಗೋಳ ಕುಡಿಯುವ ನೀರು, ಕೆ.ಸಿ.ವ್ಯಾಲಿ ನೀರು ಬಳಕೆ ಹಾಗೂ ಕೃಷಿಯ ಅಂತರ್ಜಲ ಅಭಿವೃದ್ದಿಗೆ ಬಳಿಸುವ ನೀರು ಅಗಿದೆ. ಈ ಬಗ್ಗೆ ಈಗಾಗಲೇ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿ ವರದಿಯನ್ನು ಪಡೆಯಲಾಗಿದೆ. ಈ ಕುರಿತು ಯಾವೂದೇ ಸಂಶಯ ಬೇಡ, ಇದರಿಂದ ಯಾವೂದೇ ಬೆಳೆಗೂ ಹಾನಿಯಾಗುತ್ತಿಲ್ಲ. ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೂ ಕೆ.ಸಿ.ವ್ಯಾಲಿ ನೀರಿಗೂ ಸಂಬಂಧವಿಲ್ಲ ಎಂದು ಪ್ರತಿ ಪಾದಿಸಿದರು.
ರೋಗಗಳು ಬರುತ್ತಿರುವುದು ಕಳಪೆ ಭಿತ್ತನೆಯಿಂದಾಗಿ, ಕಳಪೆ ಮಟ್ಟದ ನರ್ಸರಿಗಳ ಸಸಿಗಳಿಂದಾಗಿ ಬೆಳೆಗಳು ಹಲವಾರು ರೋಗಗಳಿಗೆ ಗುರಿಯಾಗುತ್ತಿದೆ. ಕೆಲವರು ಇದನ್ನು ತಿರುಚುವ ಮೂಲಕ ಕೆ.ಸಿ.ವ್ಯಾಲಿ ನೀರಿನ ಮೇಲೆ ಆರೋಪಿಸಲಾಗುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ. ನರ್ಸರಿಗಳು ತೋಟಗಾರಿಕೆ ಅನುಮತಿ ಪಡೆಯದೆ ಸಸಿಗಳನ್ನು ಮಾರಾಟ ಮಾಡುವಂತಿಲ್ಲ ಎಂದರು.
ಜಿಲ್ಲೆಯ ಹಲವಾರು ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇರುವುದು ನಿಜ. ಶೇ 60 ರಷ್ಟು ಮಾತ್ರ ಭರ್ತಿ ಇದೆ. ಉಳಿದಂತೆ ಭರ್ತಿ ಮಾಡಲು ಪ್ರಸ್ತಾವನೆ ಸರ್ಕಾರದ ಮುಂದಿದೆ ಗುತ್ತಿಗೆ, ಹೊರಗುತ್ತಿಗೆ ಅಧಾರದ ಮೇಲೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂಬ ಸಚಿವರ ಸ್ವಷ್ಟನೆಗೆ ಧ್ವನಿಗೊಡಿಸಿದ ಶಾಸಕ ಕೊತ್ತೂರು ಮಂಜುನಾಥ್ ಅವರು ಕೋಲಾರ ನಗರಸಭೆಯಲ್ಲಿ ಈಗಾ 15 ಮಂದಿ ಸಿಬ್ಬಂದಿಗಳ ನೇಮಕ ಮಾಡಲು ಸರ್ಕಾರದಿಂದ ಅನುಮತಿ ಪಡೆದಿದ್ದು ಪೌರಾಯುಕ್ತರಿಗೆ ಸೂಚಿಸಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಗರಸಭೆ ಮತ್ತು ಪುರಸಭೆಗಳಿಗೆ ಸಂಬಂಧಿಸಿದಂತೆ ತೆರಿಗೆಗಳನ್ನು ಕಟ್ಟುನಿಟ್ಟಾಗಿ ವಸೂಲಿ ಮಾಡಲು ಆಯುಕ್ತರಿಗೆ ಹಾಗೂ ಮುಖ್ಯ ಅಧಿಕಾರಿಗಳಿಗೆ ಸೂಚಿಸಲಾಗಿದೆ. ತೆರಿಗೆ ಪಾವತಿಸದ ವಿರುದ್ದ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲು ಅದೇಶಿಸಲಾಗಿದೆ. ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ ತೋರುವಂತ ಅಧಿಕಾರಿಗಳ ವಿರುದ್ದ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದರು.
ಈಗಾಗಲೇ ನಗರದ ಶ್ರೀ ದೇವರಾಜ್ ವೈದ್ಯಕೀಯ ಕಾಲೇಜು ಹಾಗೂ ಆರ್.ಎಲ್ ಜಾಲಪ್ಪ ಆಸ್ಪತ್ರೆಯು ಸುಮಾರು 11 ಕೋಟಿ ರೂ ತೆರಿಗೆಯನ್ನು ನಗರಸಭೆಗೆ ಬಾಕಿ ಇರಿಸಿಕೊಂಡಿದೆ. ಇದರ ಜೂತೆಗೆ ನಗರ ಹೊರವಲಯದ ಕಲ್ಯಾಣ ಮಂದಿರಗಳು, ರೆಸಾರ್ಟ್‍ಸ್ಸ್‍ಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧ ಬಳಕೆಯ ಕಟ್ಟಡಗಳು ನಗರಸಭೆಗೆ ತೆರಿಗೆಯನ್ನು ಪಾವತಿ ಮಾಡದೆ ಇರುವುದು ಗಮನಕ್ಕೆ ಬಂದಿದ್ದು, ಇವುಗಳ ವಿರುದ್ದ ನೋಟಿಸ್ ಜಾರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ವಿದ್ಯಾರ್ಥಿ ನಿಲಯಗಳಿಗೆ ಸಂಬಂಧಿಸಿದಂತೆ ಡಿ ಗ್ರೂಪ್ ನೌಕರರನ್ನೆ ವಾರ್ಡನ್ ಹುದ್ದೆಯನ್ನು ನಿರ್ವಹಿಸಲು ನೀಡಿರುವ ಹಿನ್ನಲೆಯಲ್ಲಿ ಬಹಳಷ್ಟು ವ್ಯಾತ್ಯಾಸಗಳು ಆಗುತ್ತಿದೆ ಎಂಬ ದೂರುಗಳು ಬಂದಿದೆ. ಈ ಸಂಬಂಧವಾಗಿ ಯಾವೂದೇ ಕಾರಣಕ್ಕೂ ಡಿ ಗ್ರೂಪ್ ಸಿಬ್ಬಂದಿಗೆ ವಾರ್ಡನ್ ಹುದ್ದೆ ನೀಡಬಾರದು. ವಿದ್ಯಾರ್ಥಿ ನಿಲಯಗಳು ಯಾವೂದೇ ಕಾರಣಕ್ಕೂ ಮೂಲ ಭೂತ ಸೌಲಭ್ಯಗಳಿಮದ ವಂಚಿತವಾಗಬಾರದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕೆಲವು ಜಮೀನುಗಳನ್ನು ಅನುಮತಿ ಇಲ್ಲದೆ ಲೇಔಟ್‍ಗಳಾಗಿ ಪರಿವರ್ತಿಸಲಾಗಿದೆ, ಭೂ ಪರಿವರ್ತನೆ ಅಗಿದ್ದರೆ ಬಿ ಖಾತೆ ನೀಡಬಹುದಾಗಿದೆ. ಲೇಔಟ್‍ಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ್ದರೆ ಮಾತ್ರ ಅನುಮತಿ, ಪರವನಾಗಿಗಳನ್ನು ನೀಡಬೇಕು ಎಂದ ಅವರು ಕಟ್ಟಡಗಳಿಗೆ ಖಾತೆ ಇಲ್ಲದ ಮಾತ್ರಕ್ಕೆ ತೆರಿಗೆ ಪಾವತಿಸಬಾರದು ಎಂದು ಕಾನೂನಿನಲ್ಲಿ ಇಲ್ಲ. ತೆರಿಗೆಯನ್ನು ಮುಲಾಜಿಲ್ಲದೆ ವಸೂಲಾತಿ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದೆ. ತೆರಿಗೆಗೆ ಸಂಬಂಧಿಸಿದಂತೆ ಆನ್‍ಲೈನ್ ವ್ಯವಸ್ಥೆ ಬಳಿಸಿಕೊಳ್ಳುವ ಜೂತೆಗೆ ಸ್ಯಾಟ್ ಲೈಟ್ ಬಳಕೆಯಿಂದಲೂ ತೆರಿಗೆ ವಂಚಿತರನ್ನು ಪತ್ತೆ ಹಚ್ಚಬಹುದಾಗಿದೆ ಎಂದು ಸ್ವಷ್ಟಪಡಿಸಿದರು.
ಕೋಲಾರಮ್ಮ ಕೆರೆಯನ್ನು ಅಭಿವೃದ್ದಿಪಡಿಸಿ ಪ್ರವಾಸಿತಾಣವಾಗಿ ಪರಿವರ್ತಿಸಲು 20 ಕೋಟಿ ರೂ ಅನುದಾನ ಮಂಜೂರು ಮಾಡಿದೆ. ಇದರ ಜೂತೆಗೆ ಉದ್ಯಾನವನಗಳನ್ನು ಮಾಡಲಾಗುತ್ತಿದೆ. ಈ ಕಾಮಗಾರಿಗಳು ಕಳಪೆ ಇದ್ದಲ್ಲಿ ಮುಲಾಜಿಲ್ಲದೆ ಕ್ರಮ ಜರುಗಿಸಬೇಕಾಗಿರುವುದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯಾಗಿದೆ ಇಲ್ಲದಿದ್ದರೆ ಅವರನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಗರದ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಕೆಂದಟ್ಟಿ ಬಳಿ 15 ಎಕರೆ ಜಮೀನು ಗುರುತಿಸಲಾಗಿದೆ. ಈ ಹಿಂದೆ ಹಲವಾರು ಅಡೆತಡೆಗಳಿದ್ದ ಕಾರಣಕ್ಕೆ ತ್ಯಾಜ್ಯ ಘಟಕ ಸ್ಥಾಪನೆ ಸಾಧ್ಯವಾಗಲಿಲ್ಲ. ಶೀಘ್ರದಲ್ಲಿ ಅದಕ್ಕೆ ಚಾಲನೆ ನೀಡಲು ಕ್ರಮ ಕೈಗೊಳ್ಳುವುದು ಎಂದು ಸಚಿವರು ನುಡಿದರು.
ನಗರ ಹೊರವಲಯದ 500 ಎಕರೆ ಜಾಗದಲ್ಲಿ ಕೆ.ಯು.ಡಿ.ಎ. ಲೇಔಟ್ ಅಭಿವೃದ್ದಿಪಡಿಸಿ ಮನೆ ಇಲ್ಲದ ಬಡವರಿಗೆ ಹಂಚಿಕೆ ಮಾಡಲು ಚಿಂತಿಸಲಾಗಿದೆ. ಇದರಲ್ಲಿ ಜಮೀನು ನೀಡುವಂತ ರೈತರಿಗೆ ಶೇ 50 ನಿವೇಶಗಳನ್ನು ನೀಡಲಾಗುವುದು, ಉಳಿದ ಶೇ 50 ನಿವೇಶಗಳು ಕೆ.ಯು.ಡಿ.ಎ. ಸ್ವಾಧೀನಕ್ಕೆ ಪಡೆಯುವಂತ ಯೋಜನೆ ರೂಪಿಸಿದೆ. ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಕಲ್ಲು ಮತ್ತು ಮರಳು, ಮಣ್ಣು ಗಣಿಗಾರಿಕೆಗಳಿಂದ ಕೆರೆಗಳು, ರಸ್ತೆಗಳು ಹಾಳಾಗುತ್ತಿದೆ. ಬೆಟ್ಟಗುಡ್ಡಗಳು ನಾಶವಾಗುತ್ತಿದೆ. ಒಂದು ಕಡೆ ಅನುಮತಿ ಪಡೆದು ಹತ್ತು ಕಡೆ ಗಣಿಗಾರಿಕೆ ನಡೆಸುತ್ತಿದ್ದಾರೆ, ಕ್ರಷರ್‍ಗಳ ಹಾವಳಿ ತೀವ್ರವಾಗಿದೆ. ಇದರ ಜೂತೆ ಹೊರ ರಾಜ್ಯಗಳಿಂದ ಲಾರಿಗಳಲ್ಲಿ ನಿಗಧಿತ ಪ್ರಮಾಣಕ್ಕಿಂತ ಹೆಚ್ಚಾಗಿ ತುಂಬಿ ಸಂಚರಿಸುವುದರಿಂದ ರಸ್ತೆಗಳು ಹಾಳಾಗುತ್ತಿದೆ. ಬೆಟ್ಟಗುಡ್ಡಗಳಲ್ಲಿ ಬಂಡೆಗಳನ್ನು ಸಿಡಿಸುವ ಸಂದರ್ಭದಲ್ಲಿ ಹಲವಾರು ಮಂದಿ ಪ್ರಾಣ ಕಳೆದುಕೊಂಡರು ಸಹ ಗಮನಕ್ಕೆ ಬಾರದಂತೆ ಮರೆಮಾಚಲಾಗುತ್ತಿದೆ ಇದರ ವಿರುದ್ದ ಹಲವಾರು ಹೋರಾಟಗಳು, ದೂರುಗಳು ನೀಡಿದ್ದರೂ ಯಾವೂದೇ ಕ್ರಮ ಇಲ್ಲ ಎಂಬ ಆರೋಪಗಳು ಹಿಂದಿನ ಸರ್ಕಾರದಲ್ಲಿತ್ತು. ಅದರೆ ಕಾಂಗ್ರೇಸ್ ಸರ್ಕಾರ ಬಂದ ನಂತರ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಯಾವೂದಾದರೂ ಖಚಿತವಾದ ಪ್ರಕರಣಗಳು ದಾಖಲೆ ಸಮೇತ ನೀಡಿದಲ್ಲಿ ಕ್ರಮ ಜರುಗಿಸುವುದಾಗಿ ತಿಳಿಸಿದರು.
ಇದಕ್ಕೂ ಮುನ್ನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಜಿಲ್ಲೆಯ ಸಮಸ್ಯೆಗಳು ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಚಟುವಟಿಕೆಗಳ ಕುರಿತು ಸಚಿವರಿಗೆ ಪರಿಚಯಿಸಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಚಂದ್ರಶೇಖರ್ ಹಾಗೂ ಜಿಲ್ಲಾ ಖಜಾಂಚಿ ಎ.ಜಿ.ಸುರೇಶ್‍ಕುಮಾರ್ ಜಿಲ್ಲೆಯ ಸಮಸ್ಯೆಗಳ ಕುರಿತು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಸಂವಾದದಲ್ಲಿ ಅನೇಕ ಪತರಕರ್ತರು ಮಾತನಾಡಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಆಹಮದ್, ಶಾಸಕರಾದ ಶ್ರಿಮತಿ ರೂಪಕಲಾ, ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಹಾಗೂ ಅಂಜನಪ್ಪ ಉಪಸ್ಥಿತರಿದ್ದರು.

ಕಥಾಪಾಠಾಂತ್ ಸಿರಿವಂತಾಚ್ಯಾ ಸಾಹಿತ್ಯಾಚೆರ್ ರಾಶ್ಟ್ರೀಯ್ ಮಟ್ಟಾಚೆಂ ಅಧ್ಯಯನ್ 

ಆಶಾವಾದಿ ಪ್ರಕಾಶನ್ ಆನಿ ಧೆಂಪೆ ಕೊಲೆಜ್ ಗೊಂಯ್ ಹಾಣಿಂ ಮಾಂಡುನ್ ಹಾಡ್ಲೆಲೆಂ, ರಾಶ್ತ್ರೀಯ್ ಮಟ್ಟಾಚ್ಯಾ ವೆಬಿನಾರಾಂಚಿ ಕಥಾಪಾಠ್ ಚೊವ್ತಿ ಶಿಂಕಳ್ ಜುಲಾಯ್ ಮಯ್ನ್ಯಾಚ್ಯಾ ಶನಿವಾರ್ ಸಾಂಜೆ ಸಾಡೆ ಚ್ಯಾರ್ ಥಾವ್ನ್ ಸ ವೊರಾಂ ಪರ್ಯಾಂತ್ ಚಲ್ಲಿ. ಕಾರ್ಮೆಲ್ ಕೊಲೆಜ್, ಶ್ರೀ ಮಲ್ಲಿಕಾರ್ಜುನ ಕೊಲೆಜ್, ಫಾ|ಆಗ್ನೆಲ್ ಕೊಲೆಜ್ ಪಿಲಾರ್ ತಶೆಂಚ್ ಸೈಂಟ್ ರೋಸರೀ ಕೊಲೆಜ್ ಹಾಂಚ್ಯಾ ಸಹಭಾಗಿತ್ವಾಂತ್ ಜುಲಾಯ್ 1 ತಾರಿಕೆರ್ ಧೆಂಪೆ ಕೊಲೆಜಿಚ್ಯಾ ಪ್ರಿನ್ಸಿಪಾಲಾನ್ ಡೊ|ವೃಂದಾ ಬೋರ್ಕರಾನ್ ಉಗ್ತಾವಣ್ ಕೆಲ್ಲ್ಯಾ ಹ್ಯಾ ವೆಬಿನಾರಾಂತ್ ದಾಯ್ಜಿವರ್ಲ್ಡ್ ಹಫ್ತ್ಯಾಳ್ಯಾಚ್ಯಾ ಸಂಪಾದಕ್ ಮಾನೆಸ್ತ್ ಹೇಮಾಚಾರ್ಯ, ಕಾಣಿಕ್ ನೇಮಾಳ್ಯಾಚೊ ಆಧ್ಲೊ ಸಂಪಾದಕ್ ಜಾವ್ನಾಸ್ಲ್ಯಾ ಅವಿಲ್ ರಾಸ್ಕಿನ್ಹಾನ್, ವೀಜ್ ಇ-ಪತ್ರಾಚ್ಯಾ ಸಂಪಾದಕ್ ಡೊ|ಆಸ್ಟಿನ್ ಪ್ರಭುನ್ ತಶೆಂಚ್ ಸಿರಿವಂತಾಚೊ ಖಾಸ್ ಮಿತ್ರ್ ಜಾವ್ನಾಸ್ಲ್ಯಾ ಮಾ|ಪ್ರತಾಪ್ ನಾಯ್ಕ್ ಹಾಣಿಂ ಸಿರಿವಂತಾಚಿ ಸವಿಸ್ತಾರ್ ಒಳೊಕ್ ಕರುನ್ ದಿಲಿ. 

ಜುಲಾಯ್ 8 ತಾರಿಕೆರ್ ಸಿರಿವಂತಾಚ್ಯಾ 52 ಮೊಟ್ವ್ಯಾ ಕಥೆಂಚೆರ್ ತಶೆಂಚ್ ಸಾಳಕ್ ಪ್ರಕಾಶನಾಚ್ಯಾ 88 ಪುಸ್ತ್ಕಾಂಚಿ ಸವಿಸ್ತಾರ್ ಒಳೊಕ್ ತಶೆಂಚ್ ಸಿರಿವಂತಾಚ್ಯಾ ಮೊಟ್ವ್ಯಾ ಕಥೆಂಚೆರ್ ಖೊಲಾಯೆನ್ ಕೆಲ್ಲೆಂ ಕೆಲ್ಲೆಂ ಅಧ್ಯಯನ್ ವಲ್ಲಿ ಕ್ವಾಡ್ರಸಾನ್ ಸಾದರ್ ಕೆಲೆಂ.

ಜುಲಾಯ್ 15 ತಾರಿಕೆರ್ ಸಿರಿವಂತಾಚ್ಯಾ ಮೊಟ್ವ್ಯಾ ಕಾಣಿಯಾಂನಿ ಅಸ್ತುರಿಚೊ ಪಾತ್ರ್ ವಿಶ್ಯಾಚೆರ್ ಖೊಲಾಯೆನ್ ಅಧ್ಯಯನ್ ಕೆಲ್ಲೊ ಪ್ರಭಂಧ್ ಫೆಲ್ಸಿ ಲೋಬೊ ದೆರೆಬೈಲ್ ಹಿಣೆಂ ಸಾದರ್ ಕೆಲೊ.

ಜುಲಾಯ್ 22 ತಾರಿಕೆರ್ ಸಿರಿವಂತಾಚ್ಯಾ ’ಜೆರಿ ಲುವಿಸ್’ ಲಿಖ್ಣೆನಾಂವಾಖಾಲ್ ರಾಕ್ಣೊ ಪತ್ರಾಂತ್ ಚಲಯಿಲ್ಲ್ಯಾ ’ಜಿವಿತಾಂತ್ಲೊ ತಮಾಸೊ’ ಅಂಕಣಾಂತ್ಲ್ಯಾ ಹಾಸ್ಯ್ ಬರ್ಪಾಂಚೆರ್ ಪ್ರಭಂಧ್ ಸಾದರ್ ಕೆಲೊ.

ಜುಲಾಯ್ 29 ತಾರಿಕೆರ್ ಧೆಂಪೆ ಕೊಲೆಜಿಚ್ಯಾ ಪ್ರಿನ್ಸಿಪಾಲ್ ಪ್ರೊ|ವೃಂದಾ ಬೋರ್ಕರಾಚ್ಯಾ ಅಧ್ಯಕ್ಷ್‌ಪಣಾಖಾಲ್ ಚಲ್‌ಲ್ಲ್ಯಾ ನಿಮಾಣ್ಯಾ ವೆಬಿನಾರಾಂತ್ ’ಸಾಳಕಾಚ್ಯಾ ಸಿರಿವಂತಾಚ್ಯೊ ಕಥಾ’ ನಾಗರಿ ಲಿಪಿಯೆಚ್ಯಾ ಇ-ಪುಸ್ತಕಾಚೆಂ ವಿಮೋಚನ್ ಡೊ|ಚಂದ್ರಲೇಖ ಡಿಸೋಜ್ ಹಿಣೆಂ ಕರುನ್ ವೆಗ್-ವೆಗಳ್ಯಾ ಲಿಪಿಂನಿ ಆಸ್ಚ್ಯಾ ಅಮೊಲಿಕ್ ಕೊಂಕಣಿ ಸಾಹಿತ್ಯಾಕ್ ಲಿಪಿಯಂತರ್ ಕರುನ್ ಆಶಾವಾದಿ ಪ್ರಕಾಶನಾನ್ ಕೊಂಕಣಿಕ್ ಖೂಪ್ ಯೋಗ್‌ದಾನ್ ದಿಲಾಂ, ತಶೆಂಚ್ ಕಥಾಪಾಠ್ ಮ್ಹಳ್ಳ್ಯಾ ಅಧ್ಯಯನ್ ಮಾಧ್ಯಮಾಂತ್ ಕೊಂಕಣಿ ಸಾಹಿತ್ಯಾಚೆಂ ಅಧ್ಯಯನ್ ಕರುಂಕ್ ಏಕ್ ಬರಿಚ್ ವೇದಿ ತಯಾರ್ ಕೆಲ್ಯಾ ಮ್ಹಣಾಲಿ. ’ಸಾಳಕಾಚ್ಯಾ ಸಿರಿವಂತಾಚ್ಯೊ ಕಥಾ’ ಕನ್ನಡ ಲಿಪಿಯೆಚ್ಯಾ ಇ-ಪುಸ್ತಕಾಚೆಂ ವಿಮೋಚನ್ ಮಾ|ಬಾ|ರಿಚಾರ್ಡ್ ರೇಗೊನ್ ಕರುನ್, ಅಪ್ಣಾಕ್ ಸಿರಿವಂತಾಸವೆಂ ಆಸ್ಲೆಲ್ಯಾ ಭಾಂದಾವಿಶಿಂ ಉಲವ್ನ್, ಕೊಂಕಣಿ ಸಾಹಿತ್ಯಾಕ್ ಶೈಕ್ಷಣಿಕ್ ಪಾಂವ್ಡಾರ್ ವರುನ್ ತಾಚೊ ಪೋಸ್ ಕರ್ಚ್ಯಾ ಆಶಾವಾದಿ ಪ್ರಕಾಶನಾಚಿ ಥೊಕ್ಣಾಯ್ ಕೆಲಿ.

ಡೊ|ಆಸ್ಟಿನ್ ಪ್ರಭುನ್ ದೆ|ಫ್ರೆಡ್ರಿಕ್ ಕ್ವಾಡ್ರಸ್ ಸ್ಮಾರಕ್ ಆಶಾವಾದಿ ಪ್ರಕಾಶನಾಚ್ಯಾ ಡಿಜಿಟಲ್ ಪುರಸ್ಕಾರ್ 2023 ಜಿಕ್ಪ್ಯಾಂಚಿಂ ನಾಂವಾಂಚಿ ಉಚಾರ್ಣಿ ಕೆಲಿ. ಫೆಲ್ಸಿ ಲೋಬೊ ದೆರೆಬೈಲ್ ಹಿಕಾ ಪಯ್ಲೆಂ ಇನಾಮ್ ತಶೆಂಚ್ ಫ್ಲಾವಿಯಾ ಆಲ್ಬುಕರ್ಕ್ ಹಿಕಾ ದುಸ್ರೆಂ ಇನಾಮ್ ಫಾವೊ ಜಾಲೆಂ.

ಹೆಚ್ ಸಂಧರ್ಭಾಚೆರ್ ಹೇಮಾಚಾರ್ಯ ಆನಿ ಸಹಭಾಗಿತ್ವ್ ಜೊಡ್ಪಿ ಕೊಲೆಜಿಚ್ಯಾ ಮುಖೆಸ್ತಾಂನಿ ಅಪ್ಲೆ ಸಂಧೇಶ್ ದಿಲೆ. ಮಾ|ದೊ|ವಿಲ್ಲಿ ಡಿಸಿಲ್ವಾನ್ ಸಿರಿವಂತಾವಿಶಿಂ ಉಲವ್ನ್ ಸಭಾರ್ ಗಜಾಲಿ (ಜ್ಯೊ ಚಡ್ತಾವಾಂಕ್ ಯೆದೊಳ್ ಕಳಿತ್ ನಾತ್‌ಲ್ಲ್ಯೊ) ವಾಂಟುನ್ ಘೆತ್ಲ್ಯೊ. ಧೆಂಪೆ ಕೊಲೆಜಿಂತ್ ಭಾರತೀಯ್ ಭಾಸೊ ವಿಭಾಗಾಚಿ ಮುಖೆಸ್ತ್ ಬಾಯ್ ಅಂಜು ಸಾಖರ್‌ದಾಂಡೆನ್ ಸಯ್ರ್ಯಾಂಚಿ ಒಳೊಕ್ ಕರುನ್ ದಿಲಿ. ವಲ್ಲಿ ಕ್ವಾಡ್ರಸಾನ್ ಧಿನ್ವಾಸ್ ಪಾಟಯ್ಲೆ. ದೀಪಾ ರಾಯ್ಕರ್ ಆನಿ ಗೌರಂಗ್ ಭಾಂದ್ಯೆನ್ ಹ್ಯಾ ವೆಬಿನಾರಾಚೆಂ ಸೂತ್ರ್ ಸಂಚಾಲನ್ ಕೆಲೆಂ.

ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಧಿಕ ಮಾಸದ ಪ್ರಯುಕ್ತ ಶ್ರೀ ವೆಂಕಟರಮಣ ದೇವರಿಗೆ 1008 ಮಂಗಳಾರತಿ ಸೇವೆ

ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಧಿಕ ಮಾಸದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ದಿನಾಂಕ 13-08-2023 ರಂದು ರವಿವಾರ ಏರ್ಪಡಿಸಲಾಗಿದೆ. ಶ್ರೀ ವೆಂಕಟರಮಣ ದೇವರಿಗೆ ಒಂದು ಸಾವಿರದ ಎಂಟು ಮಂಗಳಾರತಿ ಪೂಜೆ ಸಮರ್ಪಿಸುವ ಕಾರ್ಯಕ್ರಮ ಬೆಳಿಗ್ಗೆ 8:30 ರಿಂದ ಆರಂಭಗೊಳ್ಳಲಿದೆ. “ಅಷ್ಟಾಧಿಕ ಸಹಸ್ರ ಆರತಿ” ಎಂದು ಕರೆಯಲ್ಪಡುವ ಈ ಧಾರ್ಮಿಕ ಕಾರ್ಯಕ್ರಮದಲ್ಲಿ
ಸಮಾಜ ಬಾಂಧವರೆಲ್ಲರೂ ಪಾಲ್ಗೊಳ್ಳಬೇಕೆಂದು ಆಡಳಿತ ಮೊಕ್ತೇಸರ ಕೆ. ರಾಧಾಕೃಷ್ಣ ಶೆಣೈ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ ಅಭಾಕಸ್ ಮತ್ತು ಮೆಂಟಲ್ ಅರ್ಥಮೇಟಿಕ್ ಕಾಂಪಿಟಿಷನ್ ‘world city cup-23’  ಕುಂದಾಪುರ ಅಭಾಕಸ್ ಸೆಂಟರ್ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿಗಳು/International Abacus and Mental Arithmetic Competition ‘world city cup-23’ Kundapur Abacus Center students won many awards

ಐಡಿಯಲ್ ಪ್ಲೇ ಅಭಾಕಸ್ ನ   ಅಂತಾರಾಷ್ಟ್ರೀಯ ಮಟ್ಟದ   ಅಭಾಕಸ್ ಮತ್ತು ಮೆಂಟಲ್ ಅರ್ಥಮೇಟಿಕ್ ಕಾಂಪಿಟಿಷನ್ ‘world city cup-23’  30 ನೇ ಭಾನುವಾರ    ತಮಿಳುನಾಡಿನ  ಮಹಾಬಲಿಪುರಂ ನಲ್ಲಿ ನಡೆಯಿತು .19 ದೇಶಗಳಿಂದ ಸುಮಾರು 3000 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇದರಲ್ಲಿ ಕರ್ನಾಟಕದ ರಾಜ್ಯದ ವತಿಯಿಂದ   ಕುಂದಾಪುರದ ಅಭಾಕಸ್ ಸೆಂಟರ್ ವತಿಯಿಂದ ಪ್ರತಿನಿದಿಸಿದ 10 ವಿದ್ಯಾರ್ಥಿಗಳಲ್ಲಿ  ಒಂದು ಬಂಗಾರದ ಪ್ರಶಸ್ತಿ ಮತ್ತು 9 ಬೆಳ್ಳಿ(silver medal)ಪ್ರಶಸ್ತಿ ಪಡೆದು ನಾಡಿಗೆ ಕೀರ್ತಿ ತಂದಿದ್ದಾರೆ.

ಇದರಲ್ಲಿ ಅರಟೆ ಶ್ರೀಮತಿ ರೇಷ್ಮಾ ಮತ್ತು ರಾಜೇಶ್ ಅವರ ಪುತ್ರ ಲಕ್ಷ ರಾಜೇಶ್ ಬಂಗಾರದ ಪದಕ ಪಡೆದಿದ್ದಾನೆ. ಉಳಿದ ವಿದ್ಯಾರ್ಥಿಗಳಾದ ಚೈತನ್ಯ,ಆಧ್ಯಾ ಕಾಂಚನ್, ಸ್ಕಂಧನ, ಸುಹಾಸ್ ಭಟ್, ಪರ್ವಧಿ PM, ರಿಯಾ ಕುಂದರ್, ಕ್ರಿಷ್ಟನ್ ಪಿಂಟೋ,ಸ್ಟೇರ್ರೆಲ್, ಅಮೃತ E K, ಮತ್ತು ಆದಿತ್ಯ ಆರ್ ಕೋಟ ವಿವಿಧ ವಿಭಾಗದಲ್ಲಿ ಬೆಳ್ಳಿಯ ಪ್ರಶಸ್ತಿ ಪಡೆದಿದ್ದಾರೆ’ ಎಂದು ಕುಂದಾಪುರ ಅಭಾಕಾಸ್ ಸಂಸ್ಥೆಯ ವಿಭಾಗದ ಮುಖ್ಯಸ್ಥ ಅಶೋಕ ಕಾಂಚನ ತಿಳಿದ್ದಾರೆ.

International Abacus and Mental Arithmetic Competition ‘world city cup-23’ Kundapur Abacus Center students won many awards

Ideal Play Abacus International Level Abacus and Mental Arithmetic Competition ‘world city cup-23’ was held on 30th Sunday at Mahabalipuram, Tamil Nadu. Around 3000 students from 19 countries participated.

Among the 10 students represented by Abacus Center in Kundapur from the state of Karnataka, one gold medal and 9 silver medals have brought glory to state.

Laksh Rajesh, son of Arate Mrs. Reshma and Rajesh, won the gold medal. The rest of the students, Chaitanya, Adhya Kanchan, Skandhana, Suhas Bhatt, Parvadhi PM, Riya Kunder, Kristan Pinto, Sterrell, Amrita EK, and Aditya R Kota have won silver awards in various categories,” said Ashoka Kanchan, head of the Abacus Kundapur institute.