ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣ – ಮೂವರ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣವಾಗಿದ್ದು ಶನಿವಾರ ಮುಂಜಾನೆ ಬಿಷ್ಣುಪುರ್ ಜಿಲ್ಲೆಯ ಕ್ವಾಕ್ಟಾದಲ್ಲಿ ಮೈತೆಯ್ ಸಮುದಾಯದ ಮೂವರು ಕೊಲ್ಲಲ್ಪಟ್ಟಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈ ಘಟನೆಯು ಮೈತೆಯ್ ಪ್ರಾಬಲ್ಯದ ಬಿಷ್ಣುಪುರ್ ಜಿಲ್ಲೆ ಮತ್ತು ಕುಕಿ-ಜೋಮಿ ಪ್ರಾಬಲ್ಯವಿರುವ ಚುರಾಚಂದ್‌ಪುರ ಜಿಲ್ಲೆಯ ಗಡಿಯಲ್ಲಿರುವ ಕ್ವಾಕ್ಟಾ ಪ್ರದೇಶದಲ್ಲಿ ನಡೆದಿದೆ. ಅಲ್ಲಿ ಪ್ರಸ್ತುತ ಹಲವು ಮನೆಗಳಿಗೆ ಬೆಂಕಿ ಹಚ್ಚಲಾಗಿದ್ದು, ಗುಂಡಿನ ಚಕಮಕಿ ನಡೆಯುತ್ತಿದೆ ಎನ್ನಲಾಗಿದೆ.

ಹಿಂದೆ ನೆಡದ ಹಿಂಸಾಚಾರದಲ್ಲಿ ಸಾವನಪ್ಪಿದ 35 ಕುಕಿ-ಜೋಮಿ ಜನರ ಸಾಮುಹಿಕ ಅಂತ್ಯಕ್ರಿಯೆ ನೇರವೇರಿಸಿದ ನಂತರ ಮತ್ತೆ ಹಿಂಸಾಚಾರ ಉಲ್ಭಣಗೊಂಡಿದ್ದು, ಪರಿಣಾಮ ಮೂವರು ಸಾವನಪ್ಪಿದ್ದಾರೆ. ಟೊರ್ಬಂಗ್‌ ಪ್ರದೇಶದಲ್ಲಿ ಅಂತ್ಯ ಕ್ರಿಯೆ ನಡೆಸಲಾಯಿತು. ಇದು ಸಹ ಬಿಷ್ಣುಪುರ್ ಮತ್ತು ಚುರಾಚಂದ್‌ಪುರ ಜಿಲ್ಲೆಗಳ ಗಡಿ ಪ್ರದೇಶವಾಗಿದ್ದು, ಮೇ 03 ರಂದು ಇಲ್ಲಿಯೇ ಹಿಂಸಾಚಾರ ಆರಂಭವಾಗಿತ್ತು. ಅದೇ ಸ್ಥಳದಲ್ಲಿ ಮೃತ ಕುಕಿ ಜನರ ಅಂತ್ಯ ಕ್ರಿಯೆ ನಡೆದುದ್ದರಿಂದ ಅಲ್ಲಿನ ಜನರು ಕೋಪೋದ್ರಿಕ್ತರಾಗಿ ಹಿಂಸಾಚಾರಕ್ಕೆ ಇಳಿದಿದ್ದಾರೆ. ಈ ಬಗ್ಗೆ ಸರ್ಕಾರ ತೀವ್ರ ಎಚ್ಚರಿಕೆ ವಹಿಸಬೇಕಿತ್ತು ಎಂದು ಅಭಿಪ್ರಾಯ ಪಡಲಾಗಿದೆ.

ಈ ಸಾಲಿನ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು ಇಂದ್ರ ಕುಮಾರ್ ಹೆಚ್.ಬಿ ಅವರ “ಎತ್ತರ” ಕಾದಂಬರಿಗೆ

ಕುಂದಾಪುರ: ಈ ವರ್ಷ ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿಯು 2022ರಲ್ಲಿ ಮೊದಲ ಆವೃತ್ತಿಯಾಗಿ ಪ್ರಕಟಗೊಂಡ ಇಂದ್ರ ಕುಮಾರ್ ಹೆಚ್.ಬಿ ಅವರ ” ಎತ್ತರ” ಕಾದಂಬರಿಗೆ ದೊರೆತಿದೆ. ಕಥೆಗಾರರಾಗಿ, ಕಾದಂಬರಿಕಾರರಾಗಿ ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಇವರು ಸರಕಾರಿ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿರಿಯ ಲೇಖಕರುಗಳಾದ ಡಿ.ಎಸ್.ಚೌಗುಲೆ, ಶ್ರೀನಿವಾಸ ಮೂರ್ತಿ, ಅನುಪಮಾ ಪ್ರಸಾದ್ ಅವರು ನಿರ್ಣಾಯಕರಾಗಿ ಸಹಕರಿಸುತ್ತಾರೆ. ಪ್ರಶಸ್ತಿಯು ಹದಿನೈದು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಇದೇ ಆಗಸ್ಟ್ ತಿಂಗಳಲ್ಲಿ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ನಡೆಯುವ ಸಾಹಿತ್ಯ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಗೋವಾ-ಕರ್ನಾಟಕ ಮಾನವ ಅಭಿವೃದ್ಧಿ ರಕ್ಷಣಾ ಸಂಸ್ಥೆ ಮಹಿಳಾ ಘಟಕಗಳ ಅಧ್ಯಕ್ಷೆ ಖತೀಜಾ ಖಾನ್ ಅವರಿಂದ ವನಮಹೋತ್ಸವಕ್ಕೆ ಚಾಲನೆ

ಕೇಂದ್ರ ಸರ್ಕಾರದ ಮಾನವ ಅಭಿವೃದ್ಧಿ ರಕ್ಷಣಾ ಸಂಸ್ಥೆ ಇದರ ಗೋವಾ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಘಟಕಗಳ ಅಧ್ಯಕ್ಷೆಯಾಗಿರುವ ಶ್ರೀಮತಿ ಖತೀಜಾ ಖಾನ್ ಅವರು ವನಮಹೋತ್ಸವ ಅಂಗವಾಗಿ ಕಾರವಾರ ಜಿಲ್ಲೆಯ ಮಾಜಾಳಿಯ ಅಂಗನವಾಡಿ ಶಾಲೆಯ ತೋಟದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಘಟಕದ ರಾಜ್ಯ ಸದಸ್ಯೆ ಶ್ರೀಮತಿ ದೀಕ್ಷಾ ಕುಲ್ವೇಕರ್ ಅವರು ಉಪಸ್ಥಿತರಿದ್ದರು. ಕಾರ್ಯ ಕ್ರಮದ ನಂತರ ವಿದ್ಯಾರ್ಥಿ ಹಾಗೂ ಶಿಕ್ಷಕರಿಗೆ ಸಿಹಿ ತಿಂಡಿ ವಿತರಿಸಲಾಯಿತು.

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳಿಂದ ಹೆಚ್ಚಿನ ಹಣ ವಸೂಲಿ : ಸೈಬರ್ ಕೇಂದ್ರಗಳ ಮೇಲೆ ತಹಶೀಲ್ದಾರ್ ಶರೀನ್‍ತಾಜ್ ದಾಳಿ

ಶ್ರೀನಿವಾಸಪುರ 1 : ಸರ್ಕಾರದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳಿಂದ ಹೆಚ್ಚಿನ ಮೊತ್ತದ ಹಣವನ್ನು ವಸೂಲಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಕೇಂದ್ರಗಳ ಮೇಲೆ ತಹಶೀಲ್ದಾರ್ ಶರೀನ್‍ತಾಜ್ ದಾಳಿ ನಡೆಸಿದರು.
ಪಟ್ಟಣದ ತಾಲೂಕು ಕಛೇರಿಯ ಮುಂಭಾಗದಲ್ಲಿನ ಕೆಲ ಸೈಬರ್ ಕೇಂದ್ರಗಳ ಮೇಲೆ ಶುಕ್ರವಾರ ದಾಳಿ ನಡೆಸಿ ಸೈಬರ್ ಸೆಂಟರ್‍ನ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಮಾತನಾಡಿದರು.
ಸಾರ್ವಜನಿಕರು ಕೆಲ ಸೈಬರ್ ಕೇಂದ್ರಗಳು ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಆರೋಪದ ಮೇಲೆ ತಾಲೂಕು ಕಛೇರಿ ಮುಂಭಾಗ ಕೆಲ ಸೈಬರ್ ಸೆಂಟರ್‍ಗಳಿ ಬೇಟಿ ಮಾಡಿ ಮಾತನಾಡುತ್ತಾ, ಸರ್ಕಾರದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಸಂಬಂದಿಸಿದಂತೆ ಅರ್ಜಿಗಳನ್ನು ಸಲ್ಲಿಸಲು ಯಾವುದೇ ಕಾರಣಕ್ಕೂ ಫಲಾನುಭವಿಗಳಿಂದ ಹಣ ವಸೂಲಿ ಮಾಡಬಾರದು’ ಎಂದು ಹೆಚ್ಚರಿಸಿ, ಮುಂದಿನ ದಿನಗಳಲ್ಲಿ ಇದೇ ರೀತಿಯಾಗಿ ನಡೆದುಕೊಂಡರೆ ನಿಮ್ಮ ಮೇಲೆ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.
ಪಟ್ಟಣದ ಪುರಸಭೆ ಕಛೇರಿಯಲ್ಲಿ, ಚಿಂತಾಮಣಿ ಸರ್ಕಲ್ ಬಳಿ ಇರುವ ಉರ್ದು ಶಾಲೆಯಲ್ಲಿ, ಹಾಗೂ ಆಯ್ದ ಬಡವಾಣೆಗಳಲ್ಲಿ ಪುರಸಭೆಯಿಂದ ಗೃಹಲಕ್ಷ್ಮಿ ಯೋಜನೆಯ ಅರ್ಜಿಗಳನ್ನು ಸೈಬರ್ ಕೇಂದ್ರವನ್ನು ತೆರಯಲಾಗಿದ್ದು, ಅಲ್ಲಿ ಫಲಾನುಭವಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಪೊಲೀಸ್ ನಿರೀಕ್ಷಕ ಜೆ.ಸಿ.ನಾರಾಯಣಸ್ವಾಮಿ , ಆರ್‍ಐ ಮುನಿರೆಡ್ಡಿ ಜೊತೆ ಇದ್ದರು.

PTA Annual General Meeting of St Agnes PU College / ಸೇಂಟ್ ಆಗ್ನೆಸ್ ಪಿಯು ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಸಾಮಾನ್ಯ ಸಭೆ

PTA Annual General Meeting of St Agnes PU College was held on 3 August 2023 at 3.15 pm in the Auditorium. The meet would enable parents and teachers to communicate clearly and this can have a positive influence on the performance of the students and enable them to work effectively.

The programme began with the screening of a prayer song to invoke the blessings of God MrsChrystle Almeida welcomed the audience and introduced the chief guest DrKavyashree K.B, HOD and Assistant Professor, Dept. of Clinical Psychology, St Agnes Centre for Post Graduate Studies and Research, Mangalore. The toppers Samruddhi D, Renisha Viola Dsouza and SamhitaPrabhu from the Science, Commerce and Arts streams respectively were honoured along with their parents. Subject lecturers of the Toppers were also felicitated on the occasion.

The chief guest DrKavyashree K.B addressed the audience and spoke on the need to bridge the chasm that has become a hallmark of parent child relationships in the contemporary world due to various reasons, use of mobile phones, work pressure, stress etc, being a few of them. “We have to raise ourselves before we raise our child”, said the chief guest. She outlined a few effective strategies that if implemented can bring about transformation in the quality of this relationship.

Inspector GopalkrishnaBhat, Mangalore East Police Station addressed the parents on the occasion and urged the parents and teachers to be collaborators working towards the welfare of their children. He cautioned the parents about the dangers arising from substance abuse, mobile phones and underage driving and counselled them to be vigilant.

Dr P V Shobha compered the programme, Mr Joslyn Lobo, PTA Member proposed the vote of thanks. The Principal SrNorine Dsouza read out the PTA report for the year 2022-23 and informed the parents about the upcoming exams and sought the cooperation of the parents for the growth and welfare of their ward. MrsVenitiaRasquinha read the statement of accounts for the year 2022-23 and Mr Mathew, Secretary, PTA read the minutes of the meeting for the year 2022-23. DrSr Maria Roopa A.C, Chairperson, St Agnes Institutions, Sr Janet Sequeira,Vice Principal,Mrs Asha Sanjivana PTA Vice-President, MrAvinashKrishnakumar, PTA Joint Secretaryand the faculty graced the occasion.

ಸೇಂಟ್ ಆಗ್ನೆಸ್ ಪಿಯು ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಸೇಂಟ್ ಆಗ್ನೆಸ್ ಪಿಯು ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ವಾರ್ಷಿಕ ಸಾಮಾನ್ಯ ಸಭೆಯು 3 ಆಗಸ್ಟ್ 2023 ರಂದು ಮಧ್ಯಾಹ್ನ 3.15 ಕ್ಕೆ ಸಭಾಂಗಣದಲ್ಲಿ ನಡೆಯಿತು. ಸಭೆಯು ಪೋಷಕರು ಮತ್ತು ಶಿಕ್ಷಕರಿಗೆ ಸ್ಪಷ್ಟವಾಗಿ ಸಂವಹನ ನಡೆಸಲು ಅನುವು ಮಾಡಿಕೊಡುತ್ತದೆ ಮತ್ತು ಇದು ವಿದ್ಯಾರ್ಥಿಗಳ ಕಾರ್ಯಕ್ಷಮತೆಯ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೆ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.

ಶ್ರೀಮತಿ ಕ್ರಿಸ್ಟಲ್ ಅಲ್ಮೇಡಾ ದೇವರ ಆಶೀರ್ವಾದವನ್ನು ಕೋರುವ ಪ್ರಾರ್ಥನಾ ಗೀತೆಯ ಪ್ರದರ್ಶನದೊಂದಿಗೆ ಕಾರ್ಯಕ್ರಮವು ಸಭಿಕರನ್ನು ಸ್ವಾಗತಿಸಿತು ಮತ್ತು ಮುಖ್ಯ ಅತಿಥಿ ಡಾ.ಕಾವ್ಯಶ್ರೀ ಕೆ.ಬಿ, ಎಚ್ಒಡಿ ಮತ್ತು ಸಹಾಯಕ ಪ್ರಾಧ್ಯಾಪಕಿ, ವೈದ್ಯಕೀಯ ಮನೋವಿಜ್ಞಾನ ವಿಭಾಗ, ಸೇಂಟ್ ಆಗ್ನೆಸ್ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಪರಿಚಯಿಸಿದರು. ಮಂಗಳೂರು. ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದಲ್ಲಿ ಕ್ರಮವಾಗಿ ಅಗ್ರಸ್ಥಾನದಲ್ಲಿರುವ ಸಮೃದ್ಧಿ ಡಿ, ರೆನಿಶಾ ವಿಯೋಲಾ ಡಿಸೋಜಾ ಮತ್ತು ಸಂಹಿತಾಪ್ರಭು ಅವರನ್ನು ಅವರ ಪೋಷಕರೊಂದಿಗೆ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಟಾಪರ್‌ಗಳ ವಿಷಯ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿ ಡಾ.ಕಾವ್ಯಶ್ರೀ ಕೆ.ಬಿ ಸಭಿಕರನ್ನುದ್ದೇಶಿಸಿ ಮಾತನಾಡಿ, ಮೊಬೈಲ್ ಫೋನ್ ಬಳಕೆ, ಕೆಲಸದ ಒತ್ತಡ, ಒತ್ತಡ ಇತ್ಯಾದಿ ಕಾರಣಗಳಿಂದಾಗಿ ಸಮಕಾಲೀನ ಜಗತ್ತಿನಲ್ಲಿ ಪೋಷಕ ಮಕ್ಕಳ ಸಂಬಂಧಗಳ ಕುರುಹು ಆಗಿರುವ ಕಂದಕವನ್ನು ಹೋಗಲಾಡಿಸುವ ಅಗತ್ಯವಿದೆ. ಅವರು. ನಮ್ಮ ಮಗುವನ್ನು ಬೆಳೆಸುವ ಮೊದಲು ನಾವು ನಮ್ಮನ್ನು ಬೆಳೆಸಬೇಕು ಎಂದು ಮುಖ್ಯ ಅತಿಥಿಗಳು ಹೇಳಿದರು. ಕಾರ್ಯಗತಗೊಳಿಸಿದರೆ ಈ ಸಂಬಂಧದ ಗುಣಮಟ್ಟದಲ್ಲಿ ರೂಪಾಂತರವನ್ನು ತರಬಹುದು ಎಂದು ಅವರು ಕೆಲವು ಪರಿಣಾಮಕಾರಿ ತಂತ್ರಗಳನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಪಾಲಕರನ್ನು ಉದ್ದೇಶಿಸಿ ಮಾತನಾಡಿದ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಗೋಪಾಲಕೃಷ್ಣ ಭಟ್, ಮಕ್ಕಳ ಶ್ರೇಯೋಭಿವೃದ್ಧಿಗೆ ಪೋಷಕರು ಹಾಗೂ ಶಿಕ್ಷಕರು ಸಹಕರಿಸಬೇಕು. ಮಾದಕ ದ್ರವ್ಯ ಸೇವನೆ, ಮೊಬೈಲ್ ಫೋನ್ ಮತ್ತು ಅಪ್ರಾಪ್ತ ವಯಸ್ಸಿನ ವಾಹನ ಚಾಲನೆಯಿಂದ ಉಂಟಾಗುವ ಅಪಾಯಗಳ ಬಗ್ಗೆ ಪೋಷಕರಿಗೆ ಎಚ್ಚರಿಕೆ ನೀಡಿದರು ಮತ್ತು ಜಾಗರೂಕರಾಗಿರಲು ಸಲಹೆ ನೀಡಿದರು.

ಡಾ.ಪಿ.ವಿ.ಶೋಭಾ ಕಾರ್ಯಕ್ರಮ ನಿರೂಪಿಸಿದರು, ಪಿ.ಟಿ.ಎ ಸದಸ್ಯರಾದ ಶ್ರೀ ಜೋಸ್ಲಿನ್ ಲೋಬೋ ವಂದಿಸಿದರು. ಪ್ರಾಂಶುಪಾಲರಾದ ಶ್ರೀ.ನೋರಿನ್ ಡಿಸೋಜಾ ಅವರು 2022-23ನೇ ಸಾಲಿನ ಪಿಟಿಎ ವರದಿಯನ್ನು ವಾಚಿಸಿದರು ಮತ್ತು ಮುಂಬರುವ ಪರೀಕ್ಷೆಗಳ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದರು ಮತ್ತು ಅವರ ವಾರ್ಡ್‌ನ ಬೆಳವಣಿಗೆ ಮತ್ತು ಕಲ್ಯಾಣಕ್ಕಾಗಿ ಪೋಷಕರ ಸಹಕಾರವನ್ನು ಕೋರಿದರು. ಶ್ರೀಮತಿ ವೆನಿಟಿಯಾ ರಸ್ಕ್ವಿನ್ಹಾ ಅವರು 2022-23 ನೇ ಸಾಲಿನ ಖಾತೆಗಳ ಹೇಳಿಕೆಯನ್ನು ಓದಿದರು ಮತ್ತು ಪಿಟಿಎ ಕಾರ್ಯದರ್ಶಿ ಶ್ರೀ ಮ್ಯಾಥ್ಯೂ 2022-23 ನೇ ಸಾಲಿನ ಸಭೆಯ ನಡಾವಳಿಯನ್ನು ಓದಿದರು. ಸೈಂಟ್ ಆಗ್ನೆಸ್ ಸಂಸ್ಥೆಗಳ ಅಧ್ಯಕ್ಷೆ ಡಾ.ಎಸ್.ಆರ್ ಮರಿಯಾ ರೂಪ ಎ.ಸಿ, ಉಪಾಧ್ಯಕ್ಷೆ ಜಾನೆಟ್ ಸಿಕ್ವೇರಾ, ಆಶಾ ಸಂಜೀವನ ಪಿಟಿಎ ಉಪಾಧ್ಯಕ್ಷೆ ಶ್ರೀ ಅವಿನಾಶ್ ಕೃಷ್ಣಕುಮಾರ್, ಪಿಟಿಎ ಜಂಟಿ ಕಾರ್ಯದರ್ಶಿ ಮತ್ತು ಅಧ್ಯಾಪಕರು ಈ ಸಂದರ್ಭದಲ್ಲಿ ವಂದಿಸಿದರು.

ದಾನಿ ಮೈಕಲ್ ಡಿ’ಸೊಜಾ ಅಂತವರು ಸಮಾಜಕ್ಕೆ ಪ್ರೇರಣೆ – ಬಿಷಪ್ ಡಾ| ಪೀಟರ್ ಪಾವ್ಲ್

ಮಂಗಳೂರು; “ದಾನ ನೀಡುವವರು ದೊಡ್ಡವರಲ್ಲ, ದಾನ ಪಡೆಯುವವರು ಸಣ್ಣವರಲ್ಲ. ನಾವೆಲ್ಲರೂ ದೇವರ ಮಕ್ಕಳಾದ್ದರಿಂದ ಸಮಾನರು. ಸಮಜದ ಅಶಕ್ತ  ವರ್ಗದ ಜನರ ಮಕ್ಕಳ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ, ಮನೆ ಕಟ್ಟಲು ಮತ್ತು ದುರಸ್ಥಿಗೆ ದಾನ – ಹೀಗೆ ಸಮಾಜದ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಲೇ ಇರುವ ಅನಿವಾಸಿ ಉದ್ಯಮಿ, ಕೊಡುಗೈ ದಾನಿ ಶ್ರೀ ಮೈಕಲ್ ಡಿ’ಸೊಜಾ ನಮ್ಮ ಸಮಾಜಕ್ಕೆ ಪ್ರೇರಣೆ” ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ|  ಪೀಟರ್ ಪಾವ್ಲ್ ಸಲ್ದಾನ್ಹಾ ಅಭಿಪ್ರಾಯಪಟ್ಟರು.

ಡಾ| ಸಲ್ಡಾನ್ಹಾ ಮಂಗಳೂರು ಧರ್ಮಕ್ಶೇತ್ರ ಕೆನರಾ ಒರ್ಗನೈಸೇಶನ್ ಫೊರ್ ಡೆವಲಪ್‌ಮೆಂಟ್ ಆಂಡ್ ಪೀಸ್ (ಸಿ.ಒ.ಡಿ.ಪಿ.) ಸಂಸ್ಥೆ, ಸುವರ್ಣ ಮಹೋತ್ಸವದ ಸಲುವಾಗಿ, ಧರ್ಮಕ್ಷೇತ್ರದ ದುರ್ಬಲ ವರ್ಗದ ಜನರಿಗೆ ಗೃಹ ನಿರ್ಮಾಣ ಮತ್ತು ದುರಸ್ಥಿ ಕಾರ್ಯಕ್ರಮದ ಅಂಗವಾಗಿ, ಫಲಾನುಭವಿಗಳಿಗೆ ಅನುದಾನ ವಿತರಣೆ ಮಾಡಿ ಮಾತನಾಡುತಿದ್ದರು. ಕಾರ್ಯಕ್ರಮಕ್ಕೆ 180 ಫಲಾನುಭವಿಗಳು ಹಾಜರಿದ್ದು, ಈಗಾಗಲೇ ಗೃಹ ನಿರ್ಮಾಣ, ದುರಸ್ಥಿ ಅರಂಬಿಸಿರುವ 77 ಫಲಾನುಭವಿಗಳಿಗೆ ಕಾರ್ಯಕ್ರಮದಲ್ಲಿ ಅನುದಾನ ವಿತರಿಸಲಾಯಿತು.

ಧರ್ಮಗುರು ಅ| ವಂ| ವಲೇರಿಯನ್ ಡಿ’ಸೋಜಾ

ಧರ್ಮಗುರು ಅ| ವಂ| ವಲೇರಿಯನ್ ಡಿ’ಸೊಜಾ ಧರ್ಮಕ್ಷೇತ್ರದ ಹಿರಿಯ ಧರ್ಮಗುರು ಅ| ವಂ| ವಲೇರಿಯನ್ ಡಿ’ಸೊಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ” ಮೈಕಲ್ ಜತೆಗೆ ನನ್ನ ಒಡನಾಟ ಕಳೆದ 45 ವರ್ಷಗಳದ್ದು. ನನಗೆ ದೇವರು ಅಗತ್ಯ ಇರುವುದಕ್ಕೂ ಮಿಕ್ಕಿ ಕೊಟ್ಟಿರುವುದರಿಂದ, ಅದನ್ನು ಕಷ್ಟದಲ್ಲಿರುವವರ ಜತೆ ಹಂಚಿಕೊಳ್ಳಬೇಕಾದ್ದು ನನ್ನ ಧರ್ಮ. ಮೈಕಲ್ ರಂತಹ ಹತ್ತು ಜನರು ನಮ್ಮ ಸಮಾಜದಲ್ಲಿದ್ದರೂ ಇಂದು ಈ ಹಂತದ್ದಲ್ಲಿ ಬಡತನವಿರುತ್ತಿರಲಿಲ್ಲ” ಎಂದು ಶ್ಲಾಘಿಸಿದರು.      

ಪ್ರಸಕ್ತ ವರ್ಷದಲ್ಲಿ  ಧರ್ಮಕ್ಷೇತ್ರದ ಅಶಕ್ತ ವರ್ಗದವರ ಗೃಹ ನಿರ್ಮಾಣ ಮತ್ತು ದುರಸ್ಥಿಗೆ ಮೈಕಲ್ ಡಿ’ ಸೊಜಾ ಒಂದು ಕೋಟಿ ರುಪಾಯಿ ಹದಿನೆಂಟು ಲಕ್ಷ ರುಪಾಯಿ ಧನಸಹಾಯ ನೀಡಿದ್ದಾರೆ, ಈ ಸಹಾಯ ಮುಂದಿನ ವರ್ಷಗಳಲ್ಲೂ ಮುಂದುವರೆಯಲಿದೆ ಎಮ್ದು ಸಿ.ಒ.ಡಿ.ಪಿ. ನಿರ್ದೇಶಕ ವಂ| ವಿನ್ಸೆಂಟ್ ಡಿಸೊಜಾ ತಿಳಿಸಿದರು.

ಕಾರ್ಯಕ್ರಮದಲ್ಲಿ ಮೈಕಲ್ ಡಿ’ಸೊಜಾರವರ  ಸೋದರಿ ಸಿಲ್ವಿಯಾ, ವಿನ್ಸೆಂಟ್ ಡಿ’ಸಿಲ್ವ, ಕಾರ್ಯಕ್ರಮದ ಸಂಯೋಜಕರಾದ ಸ್ಪೀಫನ್ ಪಿಂಟೊ, ಓಸ್ವಲ್ಡ್ ರೊಡ್ರಿಗಸ್, ಹೆನ್ರಿ ಡಿಸೊಜಾ, ಸಂತ ವಿಶೆಂತ್ ಪಾವ್ಲ್ ಸಭೆಯ ಧರ್ಮಕ್ಷೇತ್ರದ ಅಧ್ಯಕ್ಷರಾದ ಜ್ಯೋ ಕುವೆಲ್ಹೊ, ವಂ| ಆಸ್ಟಿನ್ ಪೆರಿಸ್, ವಂ| ಅನಿಲ್ ಐವನ್ ಫೆರ್ನಾಂಡಿಸ್ ಮತ್ತಿತರು ಹಾಜರಿದ್ದರು.