ಬೀಜಾಡಿ:ಮಣ್ಣಿನ ಫಲವತ್ತತೆ, ಸಂರಕ್ಷಣೆ ಮಾಹಿತಿ ಕಾರ್ಯಾಗಾರ


ಬೀಜಾಡಿ:ಪ್ರಾಣಿ,ಪಕ್ಷಿ,ಮಾನವ ಜೀವಿಸುವ ಈ ಭೂಮಿಯಲ್ಲಿ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಂಡಲ್ಲಿ ದೊಡ್ಡ ಸಮಸ್ಯೆ ಸೃಷ್ಠಿಯಾಗಲಿದೆ. ಅದಕ್ಕಾಗಿ ಪ್ರತಿಯೊಬ್ಬ ನಾಗರಿಕರು ಜಲ ರಕ್ಷಣೆಗೆ ಬದ್ಧರಾಗಬೇಕು ಎಂದು ರೋಟರಿ ಕ್ಲಬ್ ಕುಂದಾಪುರ ರಿವರ್‍ಸೈಡ್ ಮಾಜಿ ಅಧ್ಯಕ್ಷ ಮಂಜುನಾಥ ಕೆ.ಎಸ್ ಹೇಳಿದರು.
ಅವರು ರೋಟರಿ ಕ್ಲಬ್ ಕುಂದಾಪುರ ರಿವರ್‍ಸೈಡ್, ಬೀಜಾಡಿ-ಗೋಪಾಡಿ ರೋಟರಿ ಸಮುದಾಯದಳ ಮತ್ತು ಬೀಜಾಡಿ ಮಿತ್ರ ಸಂಗಮದ ಆಶ್ರಯದಲ್ಲಿ ನಡೆದ ಮಣ್ಣಿನ ಫಲವತ್ತತೆ, ಸಂರಕ್ಷಣೆ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಅಧ್ಯಕ್ಷ ಜಗನ್ನಾಥ ಮೊಗೇರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ್ ಹೆಬ್ಬಾರ್, ರೋಟರಿ ಸಮುದಾಯ ದಳದ ಹಿಂದಿನ ಅಧ್ಯಕ್ಷ ಬಿ.ಜಿ.ನಾಗರಾಜ್ ,ನೂತನ ಅಧ್ಯಕ್ಷ ಪ್ರದೀಪ್ ದೇವಾಡಿಗ,ಕಾರ್ಯದರ್ಶಿ ಪಾಂಡುರಂಗ,ಕೋಶಾಧಿಕಾರಿ ಗಜೇಂದ್ರ ಮೊಗವೀರ, ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷ ಮಹೇಶ್ ಮೊಗವೀರ, ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಹಿಂದಿನ ಕಾರ್ಯದರ್ಶಿ ರೋನಿ ಡಿ.ಸೋಜಾ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ರೈತರಿಗೆ ಸಾವಯವ ರಸಗೊಬ್ಬರು ವಿತರಿಸಲಾಯಿತು.

ಮಣಿಪುರ ಹಿಂಸಾಚಾರ ಅಮಾನವೀಯ ದೌರ್ಜನ್ಯ ಖಂಡಿಸಿ ಬೃಹತ್ ಜಾಥಾ – “ನನ್ನವರಲ್ಲ ಎಂಬವರ ಮೇಲೆ ಸೇಡು ತೀರಿಸಿಕೊಳ್ಳುವ ಕೃತ್ಯ” : ಶಿವಸುಂದರ್


ಉಡುಪಿ.ಜು.2: ಮಣಿಪುರ ರಾಜ್ಯದಲ್ಲಿ ಹಿಂಸಾಚಾರ ಮತ್ತು ಮಹಿಳೆಯರ ಮೇಲೆ ಅಮಾನವೀಯ ಲೈಗಿಂಕ ಹಲ್ಲೆ ಖಂಡಿಸಿ ಬ್ರಹತ್ ಜಾಥಾಕ್ಕೆ ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಮಾಜಿ ಮಂತ್ರಿ ವಿನಯ್ ಕುಮಾರ್ ಸೊರಕೆ ಚಾಲನೆ ನೀಡಿದರು. ನಂತರ ಜಾಥಾ ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಪ್ರತಿಭಟನಾ ಸಮಾವೇಷ ನಡೆಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಾಮಾಜಿಕ ಚಿಂತಕ ಖ್ಯಾತ ಮಾಧ್ಯಮ ವಿಶ್ಲೇಷಕ ಶಿವಸುಂದರ್ ಅವರು, ಮಣಿಪುರದ ಹಿಂಸಾಚಾರ ಮತ್ತು ದೌರ್ಜನ್ಯಗಳು ಆಕಸ್ಮಿಕವಲ್ಲ. ಅದರ ಹಿಂದೆ ಮತೀಯ ರಾಜಕಾರಣದ ದುರುದ್ದೇಶವಿದೆ. ಪ್ರಧಾನಿ ಮೌನವನ್ನ ಆಯುಧ ಮಾಡಿಕೊಂಡಾಗ, ನಾವು ಮಾತನ್ನು ಆಯುಧ ಮಾಡಿಕೊಳ್ಳಬೇಕು. ಮಾತನಾಡುವ ಮೂಲಕ, ಪ್ರತಿಭಟನೆಗಳನ್ನು ಮಾಡುವ ಮೂಲಕ ದೇಶವನ್ನು ಎಚ್ಚರಿಸಬೇಕು” ಎಂದು ಕರೆ ನೀಡಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಾಮಾಜಿಕ ಚಿಂತಕ ಶಿವಸುಂದರ್ ಅವರು, ಮಣಿಪುರದ ಈ ದುರ್ಘಟನೆಗಳ ಹಿಂದೆ ಇದ್ದದ್ದು ಕೇವಲ ಕಾಮ ಮಾತ್ರವಲ್ಲ. ದ್ವೇಷ, ಅಸೂಯೆಯೂ ಇದೆ. ಇಂತಹ ಘಟನೇಗಳು ಹಲವಷ್ಟು ನಡೆದಿವೆ. ಇಂತಹ ಘಟನೆಗಳು ಹಿಂದೆಯೂ ನಡೆದಿವೆ. ಇದೆಲ್ಲವೂ ನನ್ನವರಲ್ಲ ಎಂಬವರ ಮೇಲೆ ಸೇಡು ತೀರಿಸಿಕೊಳ್ಳುವ ಕೃತ್ಯ. ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ನಡೆದಾಗ 900 ಮಂದಿ ಪುರುಷರು ಮೆರವಣಿಗೆ ಹೋಗುತ್ತಿದ್ದರು. ಅವರಾರಿಗೂ ಆ ಹೆಣ್ಣು ಮಕ್ಕಳ ಮೇಲೆ ‘ಅಯ್ಯೋ’ ಅನ್ನಿಸಲಿಲ್ಲ. ಇದು ಬರೇ ಕಾಮಕ್ಕಾಗಿ ನಡೆದಿದ್ದಲ್ಲ. ಮಹಾ ದ್ವೇಷವೂ ಕಾರಣವಾಗಿದೆ.ಮಣೆಪುರದ ವಿಚಾರದಲ್ಲಿ ಪ್ರಧಾನಿಯ ಮೌನದ ಹಿಂದೆ ಇಡೀ ಸರ್ಕಾರವಿದೆ. ಮತೀಯ ರಾಜಕಾರಣವಿದೆ” ಎಂದು ಅವರು ಆರೋಪಿಸಿದರು.
“ಘಟನೆ ನಡೆದಾಗ ಏನಾಯಿತು ಅಂತ ತಿಳಿದುಕೊಳ್ಳುವುದು ಮಾತ್ರವಲ್ಲ. ಯಾಕಾಯಿತು ಎಂಬುದನ್ನು
ತಿಳಿದುಕೊಳ್ಳಬೇಕು. ಮೇ 4ರಂದು ನಡೆದ ದುರಂತ ಘಟನೆ ಬೆಳಕಿಗೆ ಬಂದಿದ್ದು 80 ದಿನಗಳ ಬಳಿಕ. ಇಂತಹ. ನೂರಾರು ಘಟನೆಗಳು ಮಣಿಪುರದಲ್ಲಿ ನಡೆಯುತ್ತಿವೆ. ತಮ್ಮ ಮೇಲಿನ ದೌರ್ಜನ್ಯಗಳನ್ನು ನಿಲ್ಲಿಸುವಂತೆ ಮಣಿಪುರದ ಜನರು ಸುಪ್ರೀಂ ಕೋರ್ಟ್ ಮೊರೆಹೋಗಿದ್ದರು. ಮೊದಲಿಗೆ ಸುಪ್ರೀಂ ಕೋರ್ಟ್ ಕೂಡ ಅ ಜನರ ಮಾತಿಗೆ ಕಿವಿಗೊಡಲಿಲ್ಲ. ಸುಪ್ರೀಂ ಕೋರ್ಟ್ ಒಳಗೊಂಡಂತೆ ಇಡೀ ದೇಶ ಎಚ್ಚರಗೊಳ್ಳಲು ದುರಂತ ಘಟನೆಯೇ ನಡೆಯಿತು” ಎಂದು ಆಕ್ರೋಶ ವ್ಯಕ್ತಪಡಿಸುತ್ತಾ “ಇಡೀ ಮಣಿಪುರದಲ್ಲಿ ಮೈಥೇಯಿ ಜನಾಂಗ ಪ್ರಬಲವಾಗಿದೆ. ಅವರು ಹಿಂದು ಧರ್ಮದ ಭಾಗವಾಗುವ ಮೊದಲು ಎಲ್ಲರನ್ನೂ ಒಳಗೊಳ್ಳುತ್ತಿದ್ದರು. ಆದರೆ, ಅವರು ಯಾವಾಗ ಬ್ರಾಹ್ಮಣ್ಯದ ಧರ್ಮ ಸೇರಿದರೂ, ಅಂದಿನಿಂದ ತಾವು ಶ್ರೇಷ್ಠರು ಎಂದು ಅಂದುಕೊಳ್ಳುತ್ತಾ, ತಮ್ಮ ಸಮುದಾಯ ಅಲ್ಲದವರನ್ನು ದ್ವೇಷಿಸಲು ಆರಂಭಿಸಿದರು. ಹಾಗಾಗಿ ಅವರು ಕುಕಿ, ನಾಗ. ಸಮುದಾಯಗಳನ್ನು ದ್ವೇಷಿಸುತ್ತಿದ್ದಾರೆ” ತಿಳಿಸಿದರು. ಈ ಹಿಂಸೆ ದೌರ್ಯಜನ್ಯ ಮಾಡಲಿಕ್ಕಾಗೆ ಪೆÇಲೀಸ್ ಇಲಾಖೆಯಿಂದ ಹಲವು ಸಾವಿರ ಮದ್ದುಗುಂಡುಗಳನ್ನು, ಶಶಸ್ತಾತ್ರಗಳನ್ನು ಲೂಟಿ ಮಾಡಲು ಅನುವು ಮಾಡಲಾಯಿತು. ಕುಕಿ ಜನಾಂಗ ಗಾಂಜಾ ಬೆಳೆಯನ್ನು ಬೆಳೆಸುತ್ತಾರೆಂದು ಅವರ ಮೇಲೆ ಆರೋಪ ಹೊರಿಸಲಾಯಿತು. ಆದರೆ ಮೈತೆಯಿ ಜನಾಂಗದವರು ಗಾಂಜಾ ಪ್ರಕರಣದಲ್ಲಿ ಅಪರಾಧಿಗಳೇ ಹೆಚ್ಚು, ಅಲ್ಲಿನ ಡ್ರಗ್ಸ್ ದಂದೆಯ ಮಾಫಿಯ ಕುಳದಲ್ಲಿ ದೊಡ್ಡ ಬಾಸ್ ಅಲ್ಲಿನ ಮುಖ್ಯಮಂತ್ರಿ ವೀರೆಂದರ್ ಸಿಂಗ್ ಆಗಿದ್ದಾರೆ. ಆತನ ಎರಡನೆ ಹೆಂಡತಿಗೂ ಡ್ರಗ್ಸ್ ಮಾಫಿಯಾ ಜಾಲಕ್ಕೂ ಸಂಬಂಧವಿದೆ. ಹಾಗಾಗಿ ಇದ್ದೆಲ್ಲವೂ ಸುಳ್ಳು ಅವರಿಗೆ ಕುಕಿ ಜನಾಂಗದ ಮೇಲೆ ದ್ವೇಷವಿದೆ, ಅದರಿಂದಾಗಿ ಅಲ್ಲಿ ಅಮಾನವೀಯ ಘಟನೆಗಳು ನಡೆಯುತ್ತೀವೆ. ಅದನ್ನು ನಿಲ್ಲಿಸಲಾಗದವರು ಅಧಿಕಾರದಲ್ಲಿ ಇರಲು ಅನರ್ಹರು’ ಎಂದರು.

ಇದೇ ವೇಳೆ ಪ್ರತಿಭಟನೆಯಲ್ಲಿ ಮಾತನಾಡಿದ ಲೇಖಕಿ ಜಾನೇಟ್ ಬಾರ್ಬೋಜಾ ಮಾತನಾಡಿ ಅಲ್ಲಿನ ಮಹಿಳೆಯರ ಮೇಲೆ ಈ ರೀತಿಯ ಮ್ರಗೀಯ ಹಲ್ಲೆ ನಡೆದಾಗ ಯಾರಿಗೂ ಕರುಣೆ ಬರಲಿಲ್ಲವೇ, ಅಲ್ಲಿದ್ದವರಿಗೆ ಯಾರೂ ಅಕ್ಕ ತಂಗಿ, ತಾಯಿ ಇರಲಿಲ್ಲವೇ, ಅವರೆಲ್ಲಾ ಹೆಣ್ಣಿನ ಮೂಲಕವೇ ಹುಟ್ಟಿದ್ದಲ್ಲವೆ, ಪ್ರಧಾನಿ ನರೇಂದ್ರ ಮೋದಿ ಮನ್ಕಿ ಬಾತ್ ಅನ್ನುತ್ತಾ, ಜನರನ್ನು ಮಂಕಿ ಮಾಡಿದರು ಎನ್ನುತ್ತಾ ಆಕ್ರೋಷ ವ್ಯಕ್ತಪಡಿಸಿದರು. ಅವರು “ಬೊಲೊ ಭಾರತ್ ಮಾತಕಿ ಜೈ ಎಂದು ಪ್ರಧಾನಿ ನರೇಂದ್ರ ಮೋದಿಗಳು ಯಾವಾಗಲೂ ಹೇಳುತ್ತಿರುತ್ತಾರೆ, ಆದರೆ ಈಗ ನರೇಂದ್ರ ಮೋದಿಯವರೇ ಮಹಿಳೆಯರನ್ನು ನಗ್ನವಾಗಿ ನೆರವಣಿಗೆ ಮಾಡಿದ್ದಕ್ಕೆ ಭಾರತ್ ಮಾತಕಿ ಜೈ ಎಂದುಕೂಗುವುದೇ? ಮಣಿಪುರದಲ್ಲಿ ಮಹಿಳೆಯರು ನಗ್ನವಾಗಿದ್ದಲ್ಲ, ಅಂರರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಸರಕಾರ ನಗ್ನವಾಗಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪ್ರತಿಭಟನೇಯಲ್ಲಿ ಹಲವು ಸಾವಿರ ಜನ ಸೇರಿ ಜಾಥಾದ ಸಮಯದಲ್ಲಿ ಅಕ್ರೋಷದಲ್ಲಿ ಬಿಜೆಪಿ ಸರಕಾರಕ್ಕೆ ಅಲ್ಲಿನ ಮಂತ್ರಿ ಮತ್ತು ಮೋದಿಯ ವಿರುಡ್ಡ ಘೋಷಣೆಗಳನ್ನು ಕೂಗಲಾಯಿತು. ಈ ಪ್ರತಿಭಟನೆಯಲ್ಲಿ ಉಡುಪಿ ಜಿಲ್ಲೆಯ ಬೈಂದುರಿನಿಂದ ಹಿಡಿದು ಅಜೆಕಾರ್ ಪ್ರದೇಶದಿಂದ ಸಮಾನ ಮನಸ್ಕರು ಜಾತಿ ಭೇದ ಮರೆತು ಪಾಲ್ಗೊಂಡರು. ಹಲವಾರು ಧರ್ಮಗುರುಗಳು, ಹಲವಾರು ಧರ್ಮಭಗಿನಿಯರು, ಸಾಮಾಜಿಕ ಕಳಕಳಿ ಇದ್ದವರು, ಹಲವಾರು ಮುಖಂಡರು ಭಾಗಿಯಾದರು. ಮಣಿಪುರ ಗಲಭೆಯಲ್ಲಿಮೃತಪಟ್ಟ ವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು
ದಸಂಸ ಅಂಬೇಡ್ಕರ್ ಜಿಲ್ಲಾ ಪ್ರಧಾನ ಸಂಚಲಕ ಸುಂದರ ಮಾಸ್ತರ್, ಉಡುಪಿ ಬಿಷಪ್ ಅ|ವಂ|ಡಾ| ಜೆರಾಲ್ಡ್ ಐಸಾಕ್ ಲೋಬೋ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷಯಾಸೀನ್ ಮಲ್ಪೆ ಕೆಥೋಲಿಕ್ ಸಭಾ ನಿಯೋಜಿತ ಅಧ್ಯಕ್ಷ ರೆನಾಲ್ಡ್ ಡಿ’ಅಲ್ಫೇಡಾ, ಭಾರತೀಯ ಕೈಸ್ತಸ ಸಂಘಟನೆಗಳ. ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಲೂವಿಸ್ ಲೋಬೊ, ವೆರೋನಿಕಾ ಕರ್ನೇಲಿಯೊ, ಉಪಸ್ಥಿತರಿದ್ದರು.
ಚಿಂತಕ ಪ್ರೊ. ಫಣಿರಾಜ್, ಪ್ರಸ್ತಾವಿಕ ಮಾತುಗಳನ್ನಾಡಿದರು. ಸಮಾನ ಮಾನಸ್ಕರ ವೇದಿಕೆಯ ಸಂಚಾಲಕ ಪ್ರಶಾಂತ್ ಜತ್ತನ್ನ ನಿರೂಪಿಸಿದರು, ಉಡುಪಿ ಧರ್ಮಪ್ರಾಂತದ ಪಿಅರ್‍ಒ ಡೆನಿಸ್ ಡೇಸಾ ವಂದಿಸಿದರು.