ಕರಾವಳಿ ಜಿಲ್ಲೆಯಲ್ಲಿ ಮತ್ತೆ ಮಳೆಯಾಗುವ ಹವಮಾನ ಇಲಾಖೆಯಿಂದ ಮುನ್ಸೂಚನೆ

ಬೆಂಗಳೂರು: ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ, ಜಿಲ್ಲೆಗಳಲ್ಲಿ ಇಂದಿನಿಂದ ಮತ್ತೆ ಮಳೆಯ ಆರ್ಭಟ ಜೋರಾಗಲಿದೆ’ ಎಂದು ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬಂದಿದೆ.

ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು. ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ರಾಮನಗರ, ಶಿವಮೊಗ್ಗ, ವಿಜಯನಗರ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಮಳೆಯಾಗಲಿದೆ.

ಕ್ಯಾಸಲ್ರಾಕ್ ಯಲ್ಲಾಪುರ, ಲೋಂಡಾ, ಕದ್ರಾ, ಜೋಯ್ಡಾ, ಮುಂಡಗೋಡ, ಗುಂಜಿ, ಕಮ್ಮರಡಿ, ತಾಳಗುಪ್ಪ, ಸಕಲೇಶಪುರದಲ್ಲಿ ಮಳೆಯಾಗಲಿದೆ ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಬಿರುಗಾಳಿಯು ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಹೇಳಿದೆ.

ಪ್ರಕೃತಿಯು ಭಗವಂತನ ಮಹಿಮೆ , ಸೌಂದರ್ಯಗಳ ಪ್ರತೀಕವಾಗಿದೆ ಉಳಿಸಿಬೆಳಸೊಣ: ಬಿ.ವಿ.ಶಿವಾರೆಡ್ಡಿ

ಶ್ರೀನಿವಾಸಪುರ : ಪ್ರಕೃತಿಯು ಭಗವಂತನ ಮಹಿಮೆ , ಸೌಂದರ್ಯಗಳ ಪ್ರತೀಕವಾಗಿದೆ . ಪರಮಾತ್ಮನ ಶಕ್ತಿಯೇ ಪ್ರಕೃತಿಯ ಮೂಲಕ ಅಭಿವ್ಯಕ್ತವಾಗಿದೆ . ಇಂಥ ಪರಿಸರವನ್ನು ಆರಾಧಿಸುವುದು ಭಾರತೀಯ ಸಂಸ್ಕøತಿಯಾಗಿದ್ದು ನಾವೆಲ್ಲರೂ ಸೇರಿ ಪರಿಸರವನ್ನು ಆರಾಧಿಸಿ , ಉಳಿಸಿಬೆಳಸೊಣವೆಂದು ಎಂದು ಪರಿಸರ ಪ್ರೇಮಿ ಬೀಮಗುಂಟಪಲ್ಲಿ ಬಿ.ವಿ.ಶಿವಾರೆಡ್ಡಿ ತಿಳಿಸಿದರು.
ತಾಲೂಕಿನ ರಾಯಲ್ಪಾಡು ಸರ್ಕಾರಿ ಪ್ರೌಡಶಾಲಾವರಣದಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ತಿಂಗನ ಗಿಡಗಳನ್ನು ವಿತರಿಸಿ ಮಾತನಾಡಿದರು.
ನಮಗಿರುವುದು ಒಂದೇ ಭೂಮಿ. ನಾವು ಪ್ರತಿನಿತ್ಯ ಬಳಸುವ ಸಮಸ್ತ ವಸ್ತುಗಳೂ ಈ ಭೂಮಿಯಿಂದಲೇ ಒದಗಿ ಬರಬೇಕು . ಶುದ್ದವಾದ ಗಾಳಿ, ನೀರು, ವಿವಿಧ ಆಹಾರಪದಾರ್ಥಗಳು , ಬಟ್ಟೆ, ಖನಿಜಗಳು, ಕೈಗಾರಿಕ ಕಚ್ಚಾ ವಸ್ತುಗಳು , ಪೆಟ್ರೋಲಿಯಮ್,ಕಲ್ಲಿದ್ದಲು, ಸೌದೆ, ಮೇವು, ಔಷಧಸಾಮಾಗ್ರಿಗಳು ಮುಂತಾದ ನೂರಾರು ವಸ್ತುಗಳಿಗೆ ಈ ಭೂಮಿಯ ಮೇಲಿರುವ ಅರಣ್ಯ, ನೀರು, ನೆಲಗಳೇ ಆಧಾರವಾಗಿವೆ .
ಆದರೆ ಈ ವೈವಿಧ್ಯಪೂರ್ಣ ವಸ್ತುಗಳನ್ನು ಒದಗಿಸುವ ಭೂಮಿ ಒಂದು ಅಕ್ಷಯಪಾತ್ರೆಯಲ್ಲ, ಇತ್ತೀಚಿನ ದಿನಗಳಲ್ಲಿ ಮಾನವ ನೈಸರ್ಗಿಕ ಸಂಪತ್ತನ್ನು ಉತ್ಪಾದನೆಗಿಂತ ಹೆಚ್ಚು ಬಳಕೆ ಮಾಡುತ್ತಿದ್ದು , ಭೂಮಿಯೇನು ಅಕ್ಷಯಪಾತ್ರೆಯೇ?
ಇದಲ್ಲದೆ ಮಾನವನ ಸ್ವಾರ್ಥ ಹಾಗು ಭೋಗ ಜೀವನದಿಂದಾಗಿ ಓಜೂನ್ ಪದರದಲ್ಲಿ ಬಿರುಕು ಬಿಟ್ಟಿದ್ದು, ಇದರಿಂದಾಗಿ ಸೂರ್ಯನ ಕಿರಣಗಳು ನೇರವಾಗಿ ಮನುಷ್ಯನ ಮೈಮೇಲೆ ಬೀಳುವುದರಿಂದ ಚರ್ಮಕ್ಕೆ ಸಂಬಂದಿಸಿದ ವ್ಯಾದಿಗಳಿಂದ ಬಳಲುತ್ತಿದ್ದು, ಇವುಗಳಿಂದ ಪಾರಗಲೂ ನಾವೆಲ್ಲರೂ ಸೇರಿ ಸ್ವಾರ್ಥ ಹಾಗು ಭೋಗಜೀವನವನ್ನು ಬಿಟ್ಟು ಮುಂದಿನ ಪೀಳಿಗೆಗಾಗಿ ನೈಸರ್ಗಿಕ ಸಂಪತ್ತನ್ನು ಉಳಿಸಿ ಕಾಪಾಡಬೇಕಾಗಿದೆ ಎಂದರು.
ಮಾವು ಬೆಳಗಾರರ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ಯರ್ರಂವಾರಿಪಲ್ಲಿ ಗ್ರಾ.ಪಂ. ಉಪಾಧ್ಯಕ್ಷ ವೈ.ಆರ್.ಶ್ರೀನಿವಾಸರೆಡ್ಡಿ, ಮುಖಂಡರಾದ ಸಿಮೆಂಟ್ ನಾರಾಯಣಸ್ವಾಮಿ, ಚಕ್ಕಾ ಅಪ್ಪಿ, ಜಗನ್ನಾಥ್, ಪ್ರಸನ್ನ, ಬೈರಗಾನಪಲ್ಲಿ ಪ್ರೌಡಶಾಲೆಯ ಮುಖ್ಯ ಶಿಕ್ಷಕ ಕೆ.ಎನ್.ರಾಮಚಂದ್ರ ಇದ್ದರು.
ಪೋಟು; ರಾಯಲ್ಪಾಡು ಸರ್ಕಾರಿ ಪ್ರೌಡಶಾಲಾವರಣದಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ತಿಂಗನ ಗಿಡಗಳನ್ನು ಬಿ.ವಿ.ಶಿವಾರೆಡ್ಡಿ ವಿತರಿಸಿ ಮಾತನಾಡಿದರು.

ರಾಷ್ಟ್ರಧ್ವಜವನ್ನು ಪ್ರತಿಯೊಬ್ಬರೂ ಗೌರವಿಸಬೇಕು ; ಪಿಡಿಓ ಲಕ್ಷ್ಮಿ

ಕೋಲಾರ ಆಗಸ್ಟ್ 2. ಭಾರತದಲ್ಲಿರುವ ಪ್ರತಿಯೊಬ್ಬ ಪ್ರಜೆಯೂ ನಮ್ಮ ರಾಷ್ಟ್ರಧ್ವಜವನ್ನು ಗೌರವಿಸಬೇಕು. ಈ ಮೂಲಕ ರಾಷ್ಟ್ರಭಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ಹರಟಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಿ. ಲಕ್ಷ್ಮಿ ಅಭಿಪ್ರಾಯ ಪಟ್ಟರು.
ತಾಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ರಾಷ್ಟ್ರಧ್ವಜ ವಿನ್ಯಾಸಕಾರ ತಿಂಗಳಿ ವೆಂಕಟಯ್ಯ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶಭಕ್ತಿ, ದೇಶಪ್ರೇಮ, ಪ್ರಾಥಮಿಕ ಶಾಲೆಯಿಂದಲೇ ವಿದ್ಯಾರ್ಥಿಗಳಲ್ಲಿ ಮೂಡಿಸುವಂತೆ ಆಗಬೇಕು, ವಿದ್ಯಾರ್ಥಿ ದೆಸೆಯಿಂದಲೇ, ರಾಷ್ಟ್ರೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವಂತಾಗಬೇಕು ಎಂದರು.
ರಾಷ್ಟ್ರ ಲಾಂಛನ, ರಾಷ್ಟ್ರ ಚಿನ್ಹೆ, ರಾಷ್ಟ್ರ ಪಕ್ಷಿ, ರಾಷ್ಟ್ರ ಪ್ರಾಣಿ, ರಾಷ್ಟ್ರ ಧ್ವಜ, ರಾಷ್ಟ್ರಗೀತೆ ಬಗ್ಗೆ ಅಭಿಮಾನ, ಕೌರವ ಮೂಡುವಂತಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯ ಜಿ.ಶ್ರೀನಿವಾಸ್ ಮಾತನಾಡಿ ಪಿoಗಳಿ ವೆಂಕಟಯ್ಯ ಶಿಕ್ಷಣ ತಜ್ಞರಾಗಿ, ಭಾμÁ ದೊಡ್ಡರಾಗಿ, ಭಾರತ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದವರು. ಸತತ ಐದು ವರ್ಷಗಳ ಕಾಲ ವಿವಿಧ ರಾಷ್ಟ್ರಧ್ವಜಗಳ ವಿನ್ಯಾಸಗಳನ್ನು ಅಧ್ಯಯನ ಮಾಡಿ ಭಾರತದ ರಾಷ್ಟ್ರಧ್ವಜ ವಿನ್ಯಾಸ ಮಾಡಿದ ಅವನ ವ್ಯಕ್ತಿ ಎಂದು ಬಣ್ಣಿಸಿದರು.
ಅಷ್ಟಧ್ವಜ,ರಾಷ್ಟ್ರಗೀತೆ, ರಾಷ್ಟ್ರ ಲಾಂಛನ, ನಮ್ಮ ರಾಷ್ಟ್ರದ ಗೌರವದ ಸಂಕೇತಗಳಾಗಿದೆ ಇದನ್ನು ಬಳಸುವ ವಿಧಿ ವಿಧಾನಗಳ ಬಗ್ಗೆ ಜಿಲ್ಲಾ ಭಾರತ ಸೇವಾದಳ ಘಟಕ ಎಂ ಬಿ ದಾನೇಶ್ ತಿಳಿಸಿಕೊಟ್ಟರು.
ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಾಮಚಂದ್ರಪ್ಪ, ಆರೋಗ್ಯ ಮತ್ತು ಶಿಕ್ಷಣ ಸಾಕ್ಷರತೆ ಇಲಾಖೆಯ ಸಿಬ್ಬಂದಿ ಹಾಜರಿದ್ದರು
.

ರಾಜ್ಯ ಹಾಗೂ ರಾಷ್ಟ್ರದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಹೆಚ್ಚಾಗುತ್ತಿದೆ ಪ್ರಭಲ ಕಾನೂನು ಜಾರಿಗೆ ತರಬೇಕು – ಎ.ನಳಿನಿಗೌಡ

ಮುಳಬಾಗಿಲು; ಆ.2: ರಾಜ್ಯ ಹಾಗೂ ರಾಷ್ಟ್ರದಲ್ಲಿ ದಿನೇದಿನೇ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಸರ್ಕಾರಗಳು ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷ್ಯಧೋರಣೆ ಅನುಸರಿಸುತ್ತಿದ್ದು, ಕೂಡಲೇ ಪ್ರಭಲ ಕಾನೂನು ಜಾರಿಗೆ ತರುವ ಮೂಲಕ ಮಹಿಳೆಯರ ರಕ್ಷಣೆಗೆ ಮುಂದಾಗಬೇಕು ಎಂದು ರೈತಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಉಡುಪಿಯ ಕಾಲೇಜೊಂದರ ಶೌಚಾಲಯದಲ್ಲಿ ವಿಡಿಯೋ ಮಾಡಿರುವ ಘಟನೆ, ಸೌಜನ್ಯ ಕೊಲೆ ಪ್ರಕರಣಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದರೂ ರಾಜ್ಯ ಸರ್ಕಾರವು
ಸರಿಯಾದ ರೀತಿಯಲ್ಲಿ ಕ್ರಮಕ್ಕೆ ಮುಂದಾಗದೆ ಇದ್ದು, ರಾಜಕೀಯ ನಾಯಕರು ಆರೋಪ ಪ್ರತ್ಯಾರೋಪಗಳಿಗಷ್ಟೇ ಸೀಮಿತಗೊಂಡಿದ್ದಾರೆ.
ಇನ್ನು ಮಣಿಪುರದಲ್ಲಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಬೆತ್ತಲೆ ಮೆರವಣಿಗೆ ಮಾಡಿರುವುದು ಇಡೀ ಸಮಾಜವೇ ತಲೆತಗ್ಗಿಸುವಂತಾಗಿದ್ದರೂ ಕೇಂದ್ರ ಸರಕಾರವು ಮೀನ ಮೇಷ ಎಣಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಹಾಗೂ ರಾಷ್ಟ್ರದಲ್ಲಿ ದಿನೇದಿನೇ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕಾರಣ ಯಾವುದೇ ಪ್ರಕರಣ ಬೆಳಕಿಗೆ ಬಂದ ಸಂದರ್ಭದಲ್ಲಿಯೂ ಸರ್ಕಾರಗಳು ತ್ವರಿತವಾಗಿ ಕ್ರಮಕೈಗೊಳ್ಳದೆ, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ಕ್ರಮವಹಿಸದೇ ಇರುವುದಾಗಿದ್ದು, ಇನ್ನಾದರೂ ಇಂತಹ ಘಟನೆಗಳು ಮರುಕಳಿಸದಿರಲು ಪ್ರಭಲ ಕಾನೂನು ಜಾರಿಗೆ ತರುವ ಜೊತೆಗೆ ಅಪರಾಧಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವ ಮೂಲಕ ಮಹಿಳೆಯರ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

St Agnes PU College conducted ‘EXORDIUM 2K23’ on 31 July 2023 in the College Auditorium

“Hide not your talents, they were made for use. What’s a sundial in the shades?”

St Agnes PU College conducted ‘EXORDIUM 2K23’ on 31 July 2023 in the College Auditorium. This programme was introduced to welcome the freshers’ of our college and to encourage and enhance their creativity and skills, and the most important part, i.e; to have fun until your cheeks hurt from smiling.

‘Exordium’, popularly known as Fresher’s Day, included numerous events such as, POV(Video Editing),Persona(Character design), Writer’s Box, Bloom (Flower arrangement),Chef De Agnes(Cooking without fire),Fragnestine(an inventor’s investment),Actomania (Acting Competition), Beauty on the beat (Dance) , Miss Fresher , Agnes_ The Voice (Singing), Roadies, Conspiracy theory (public speaking).

The programme started with an   inaugural ceremony hosted by the College Cabinet, followed by the competitions and cleared with the valedictory ceremony held by the student council. SrNorineDSouza,the Principal felicitated the winners of various competitionsand commended students for their enthusiasm and zest. She also urged the students to build fine character that will assist them reach pinnacle of success.

Vice Principal SrJannetSequeira, Mrs Jyothi Pinto, Dept of Humanities co-ordinated the programme.TheStaff, College Cabinet and First PU Students were part for this special occasion. The event evoked an enthusiastic response from the fresher’s throughout the programme.

ಎಂ.ಐ.ಟಿ.ಕೆ ಕುಂದಾಪುರ “ಆರೋಗ್ಯಕ್ಕಾಗಿ ಯೋಗ”

ಕುಂದಾಪುರದ ಎಂ.ಐ.ಟಿ.ಕೆ ಮೂಡ್ಲಕಟ್ಟೆಯ ಮೂಲ ವಿಜ್ಞಾನ ಮತ್ತು ಮಾನವಿಕ ವಿಭಾಗವು ಪ್ರಥಮ ವರ್ಷದ ಬಿಇ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಯೋಗಾಭ್ಯಾಸವನ್ನು ಆಯೋಜಿಸಿತ್ತು. ಶ್ರೀ ಗೋಪಾಲಕೃಷ್ಣ ದೀಕ್ಷಿತ್ ಮತ್ತು ಶ್ರೀಮತಿ. ಪ್ರಿಯಾಂಕಾ ದೀಕ್ಷಿತ್, ಬ್ರಹ್ಮಾವರ ಸಂಪನ್ಮೂಲ ವ್ಯಕ್ತಿಗಳಾಗಿದ್ದರು ಕಾರ್ಯಕ್ರಮದಲ್ಲಿ ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿ ಸೂರ್ಯನಮಸ್ಕಾರ, ವಜ್ರಾಸನ, ತಾಡಾಸನ, ತ್ರಿಕೋನಾಸನ, ಭುಜಂಗಾಸನ, ಧನುರಾಸನ ಮುಂತಾದ ಯೋಗಾಸನಗಳನ್ನು, ಧ್ಯಾನ ಮತ್ತು ಪ್ರಾಣಾಯಾಮವನ್ನು ಕಲಿತರು. ಆರಂಭದಲ್ಲಿ ಶ್ರೀ ಗೋಪಾಲಕೃಷ್ಣ ಅವರು ಯೋಗದ ಮಹತ್ವ ಮತ್ತು ಶಕ್ತಿಯನ್ನು ವಿವರಿಸಿದರು ಮತ್ತು ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಸಿಗುವ ಖಚಿತವಾದ ಪ್ರಯೋಜನಗಳನ್ನು ತಿಳಿಸಿದರು. ಸಂಸ್ಥೆಯ ಬ್ರ್ಯಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗಡೆಯವರು ಸತತ ಯೋಗಾಭ್ಯಾಸ ಮಾಡುವುದರಿಂದ ನಮ್ಮ ಎಲ್ಲಾ ಪ್ರಯತ್ನಗಳಲ್ಲಿ ದಕ್ಷತೆ ಹೆಚ್ಚುತ್ತದೆ ಎಂದು ಹೇಳಿರಲದೇ ಈ ಕಾರ್ಯಕ್ರಮವನ್ನು ಸೈಂಟಿಫಿಕ್ ಫೌಂಡೇಶನ್ ಆಫ್ ಹೆಲ್ತ್ ಕೋರ್ಸ್ ಅಡಿಯಲ್ಲಿ ಆಯೋಜಿಸಿದಕ್ಕಾಗಿ ಮೂಲ ವಿಜ್ಞಾನ ಮತ್ತು ಮಾನವಿಕ ವಿಭಾಗವನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಬಿಎಸ್‌ಎಚ್ ವಿಭಾಗದ ಎಚ್‌ಒಡಿ ಪ್ರೊ.ದೀಪಕ್ ಶೆಟ್ಟಿ ಉಪಸ್ಥಿತರಿದ್ದರು. ಡಾ.ನಿಖಿಲಾ ಪೈ ಕಾರ್ಯಕ್ರಮವನ್ನು ಸಂಯೋಜಿಸಿದರು. ವಿದ್ಯಾರ್ಥಿ ಸ್ನೇಹ ಗೌಡ ವಂದಿಸಿದರು.

ಉಪ್ಪುಂದದಲ್ಲಿ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ

ಶ್ರೀ ಬ್ರಾಹ್ಮೀ ಸೌಹಾರ್ದ ಕ್ರೆಡಿಟ್ ಕೋ. ಆಪರೇಟಿವ್ ಸೊಸೈಟಿ ಕುಂದಾಪುರ ಉಪ್ಪುಂದ ಶಾಖೆ, ರೋಟರಿ ಕುಂದಾಪುರ ದಕ್ಷಿಣ ಸಹಯೋಗದಲ್ಲಿ, ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಉಪ್ಪುಂದ ವಲಯದ ಸಹಕಾರದೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಉಚಿತ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ಶಂಕರ ಕಲಾ ಮಂದಿರ ಉಪ್ಪುಂದದಲ್ಲಿ ಜುಲೈ 29ರಂದು ನಡೆಯಿತು.
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಉದ್ಘಾಟಿಸಿದರು. ಶ್ರೀ ಬ್ರಾಹ್ಮಿ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುಬ್ರಾಯ ಅಡಿಗರು ಸ್ವಾಗತಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಪ್ರೊ. ಆಡಿ. ನಾಗರಾಜ್ ಎಸ್. ರವರು ಪ್ರಾಸ್ತಾವಿಕ ಭಾಷಣದಲ್ಲಿ ಆಯುರ್ವೇದ ವೈದ್ಯಕೀಯ ಪದ್ಧತಿಯ ಮಹತ್ವ ವಿವರಿಸಿದರು.
ವೇದಿಕೆಯಲ್ಲಿ ಕುಂದಾಪುರ ತಾಲೂಕು ಗ್ರಾಮೀಣ ಬ್ರಾಹ್ಮಣ ಪರಿಷತ್ ಉಪ್ಪುಂದ ವಲಯದ ಅಧ್ಯಕ್ಷರಾದ ಅರುಣ್ ಶಾನುಭೋಗ್, ಬ್ರಾಹ್ಮಿ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕಿನ ನಿರ್ದೇಶಕರಾದ ನಾಗೇಶ ಹೆಬ್ಬಾರ್, ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ, ಶ್ರೀ ಬ್ರಾಹ್ಮಿ ಸೌಹಾರ್ದ ಕೋ ಆಪರೇಟಿವ್ ಬ್ಯಾಂಕಿನ ಉಪಾಧ್ಯಕ್ಷರಾದ ವಿವೇಕ್ ಯು, ನಿರ್ದೇಶಕರಾದ ರೊ. ಸುಪ್ರೀತ್ ಚಾತ್ರ, ಬ್ರಾಹ್ಮಿ sಸೌಹಾರ್ದ ಕೋ ಆಪರೇಟಿವ್ ಬ್ಯಾಂಕಿನ ಉಪ್ಪುಂದ ಶಾಖೆಯ ವ್ಯವಸ್ಥಾಪಕ ಶ್ರೀಕರ ಪುರಾಣಿಕ ಉಪಸ್ಥಿತರಿದ್ದರು. ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸುರೇಶ್ ಮಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಚಿನ್ ನಕ್ಕತ್ತಾಯ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಕೆ. ರಮಾನಂದ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.
ಆರೋಗ್ಯ ಶಿಬಿರದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವತಿಯಿಂದ ವೈದ್ಯರುಗಳಾದ ಆಡಿ. ವಿಜಯೇಂದ್ರ ಭಟ್, ಆಡಿ. ಸಹನಾ ಕಾಮತ್, ಆಡಿ. ವಿದ್ಯಾಬಲ್ಲಾಳ್, ಆಡಿ. ಅರುಣ್ ಕುಮಾರ್, ಆಡಿ. ಚಿತ್ರಲೇಖ, ಆಡಿ. ರಾಧಿಕಾ ಆಗಮಿಸಿದ 200ಕ್ಕೂ ಅಧಿಕ ಶಿಬಿರಾರ್ಥಿಗಳಿಗೆ ತಪಾಸಣೆ ನಡೆಸಿದರು. ಅಗತ್ಯವುಳ್ಳವರಿಗೆ ಉಚಿತವಾಗಿ

ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಶನ್ ಮಂಗಳೂರು ವಾರ್ಷಿಕ ಮಹಾಸಭೆ -ಅಧ್ಯಕ್ಷರಾಗಿ ಹರೀಶ್ ಅಡ್ಯಾರ್ ಆಯ್ಕೆ

ಮಂಗಳೂರು: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋ ಸಿಯೇ ಶನ್ ಮಂಗಳೂರು ವಲಯದ 2022-23ನೇ ಸಾಲಿನ 21 ನೇ ವಾರ್ಷಿ ಕ
ಮಹಾಸಭೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯ ಕ್ರಮ ಮಂಗಳೂರಿನ ಸೈ ಂಟ್ ಸೆಬಾಸ್ಟಿಯನ್ ಸಭಾಂಗಣದಲ್ಲಿ
ನಡೆಯಿತು.
ದೀ ಪಬೆಳಗಿಸಿ ಕಾರ್ಯ ಕ್ರಮವನ್ನು ಉದ್ಘಾ ಟಿಸಿ ಮಾತನಾಡಿದ ಸೌತ್ ಕೆನರಾ ಫೊಟೋ ಗ್ರಾಫರ್ಸ್ ಅಸೋಸಿಯೇಶನ್
ಜಿಲ್ಲಾಧ್ಯಕ್ಷ ಆನಂದ್ ಎನ್. ಬಂಟ್ವಾ ಳ್, ಮಂಗಳೂರು ವಲಯ ಅತ್ಯು ತ್ತಮ ಕಾರ್ಯ ಕ್ರಮಗಳನ್ನು ಸಂಘಟಿಸುತ್ತಾ ಸುಭದ್ರ
ಸಂಘಟನೆ ಎಂದೆನಿಸಿದೆ ಎಂದು ಶ್ಲಾಘಿಸಿದರು.
2023-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರರಿಯೆ ನಡೆಯಿತು. ಹರೀಶ್ ಅಡ್ಯಾ ರ್ ಅಧ್ಯಕ್ಷರಾಗಿ, ಅಜಯ್
ಕುಮಾರ್ ಪ್ರಧಾನ ಕಾರ್ಯದರ್ಶಿ , ಕೋ ಶಾಧಿಕಾರಿ ಅರ್ಜುನ್ ಶೃಂಗೇರಿ, ಪ್ರಭಾಕರ್ ಕುಲಾಲ್, ಶ್ರೀಕಾಂತ್ ತಿಲಕ್
ಉಪಾಧ್ಯಕ್ಷರುಗಳು, ಪದ್ಮನಾಭ ಸುವರ್ಣ ಗೌರವಾಧ್ಯಕ್ಷ, ಗಿರೀ ಶ್ ಚಕ್ರಾಪಾಣಿ, ನವೀನ್ ಬಂಗೆರ ಕೋಡಿಕಲ್ ಜೊತೆ
ಕಾರ್ಯದರ್ಶಿಗಳಾಗಿ =,ಪ್ರಕಾಶ್ ಶಬರಿ, ರಾಕೇ ಶ್ ಬಾಯಾರ್, ನಿಖಿಲ್ ಡಿಸೋ ಜಾ, ಸಂಘಟನಾ ಕಾರ್ಯದರ್ಶಿ , ಗೋಡ್ವಿನ್ ಕ್ರಾಸ್ತಾ,
ಮುರಳಿ ರಾಜ್ ಕ್ರೀಡಾ ಕಾರ್ಯದರ್ಶಿಯಾಗಿ , ವಿನೀಶ್ ಗಂಜಿಮಠ, ಸುನಿಲ್ ಪಂಬೆತ್ತಡಿ, ಸಾಂಸ್ಕೃತಿಕ ಕಾರ್ಯದರ್ಶಿ ಯಾಗಿ, ಸತೀಶ್ ಇರಾ,
ಶರಣ್, ಪತ್ರಿಕಾ ಪ್ರತಿನಿಧಿ ಮತ್ತು ವಿಶಾಲ್ ವಾಮಂಜೂರು ಛಾಯಾ ಕಾರ್ಯ ದರ್ಶಿಯಾಗಿ ಆಯ್ಕೆ ಯಾದರು.
ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದಸೌತ್ ಕೆನರಾ ಫೊಟೋ ಗ್ರಾಫರ್ಸ್ ಅಸೋಸಿಯೇ ಶನ್ ಮಂಗಳೂರು ಅಧ್ಯಕ್ಷರು
ಸುಧಾಕರ್ ಶೋ ಕೇ ಶ್, ತಮ್ಮ ಅವಧಿಯಲ್ಲಿ ನಡೆದ ಅತ್ಯು ತ್ತಮ ಕಾರ್ಯ ಕ್ರಮಗಳ ಬಗ್ಗೆ ಮೆಲುಕು ಹಾಕುತ್ತಾ ಸಹಕರಿಸಿದ
ಎಲ್ಲರಿಗೂ ಧನ್ಯವಾದ ಗೈದರು.
ಶ್ರೀಮತಿ ಬಬಿತಾ ಲತೀಶ್ ನಿರೂಪಿಸಿದರು. ಕಾರ್ಯ ದರ್ಶಿ ಅರ್ಜು ನ್ ಶೃಂಗೇರಿ ಧನ್ಯವಾದಗೈದರು.

ಬಸ್ರೂರು ಕೆಳಪೇಟೆಯ ಆಶುರ್‌ ಖಾನಾದಲ್ಲಿ ಮೊಹರಂ ಪ್ರಯುಕ್ತ ದುವಾ ಕಾರ್ಯಕ್ರಮ

ಬಸ್ರೂರು: ಬಸ್ರೂರು ಕೆಳಪೇಟೆಯ ಆಶುರ್‌ ಖಾನಾದಲ್ಲಿ ಮೊಹರಂ ಪ್ರಯುಕ್ತ ದುವಾ ಕಾರ್ಯಕ್ರಮ ನಡೆಯಿತು. ಮೊಹರಂ . ಚರಣೆ ಕಾರ್ಯಕ್ರಮದ ಅಧ್ಯಕ್ಷ ಫಾರೂಕ್‌ ಸಾಹೇಬ್‌ ನೀರೋಣಿ, ಉಪಾಧ್ಯಕ್ಷ ಇರ್ಷಾದ್‌ ಸಾಹೇಬ್‌ . ಪಾನಕದಕಟ್ಟೆ ಕಾರ್ಯದರ್ಶಿ ಶೇಖ್‌ ಇರ್ಫಾನ್‌, ದರ್ಗಾ ಕಮಿಟಿ. ಅಧ್ಯಕ್ಷ ಲಾಲಾಅನ್ವರ್, ಜಾಮಿಯಾ ಮಸೀದಿಯ ಉಪಾಧ್ಯಕ್ಷ ಅಬ್ದುಲ್‌ ಅಜೀಜ್‌ ನೀರೋಣಿ ಮತ್ತುಜಮಾತಿನ ಬಾಂಧವರು ಉಪಸ್ಥಿತರಿದ್ದರು.