ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ಮಕ್ಕಳ ಕಳ್ಳರ ವದಂತಿ: ಪೊಲೀಸ್ ಇಲಾಖೆ ಸ್ಪಷ್ಟನೆ


ಕುಂದಾಪುರ: ಇತ್ತೀಚೆಗೆ ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟೇಶ್ವರ, ಕಾಳಾವರ ಪರಿಸರದಲ್ಲಿ ಮಕ್ಕಳನ್ನು ಅಪಹರಿಸಿಕೊಂಡು ಹೋಗುವ ಪ್ರಯತ್ನ ನಡೆದಿದೆ ಎಂಬ ವದಂತಿ ಹಾಗೂ ಫೋಟೋ ವೀಡಿಯೋಗಳು ಹರಿದಾಡುತ್ತಿದ್ದುಇದು ಸತ್ಯಕ್ಕೆ ದೂರವಾಗಿದೆ ಎಂದು ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು ತಿಳಿಸಿದ್ದಾರೆ.

ಕಾರಿನಲ್ಲಿ ಮಕ್ಕಳ ಅಪಹರಣಕ್ಕೆ ಯತ್ನಿಸಲಾಗಿದೆ ಎಂಬ ವದಂತಿ ಹಬ್ಬುತ್ತಿದ್ದಂತೆಯೇ ತಕ್ಷಣ ಕಾರ್ಯಪ್ರವೃತ್ತರಾದ ಕುಂದಾಪುರ ನಗರ ಠಾಣಾ ಪೊಲೀಸರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವಾಹನವನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಂಡಿದ್ದಾರೆ. ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡದೆ ಏನೇ ಮಾಹಿತಿ ಇದ್ದಲ್ಲಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು. ಅಥವಾ ತುರ್ತು ಕರೆ ಸಂಖ್ಯೆ 112 ಗೆ ಕರೆ ಮಾಡಬೇಕಾಗಿ ಡಿವೈಎಸ್ಪಿ ಮನವಿ ಮಾಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಇತ್ತೀಚೆಗೆ ಕುಂದಾಪುರ ಬರೇಕಟ್ಟು ರಸ್ತೆಯಲ್ಲಿ ಮಕ್ಕಳಿಗೆ ಆಟಿಕೆ ಆಸೆ ತೋರಿಸಿ ಮಕ್ಕಳನ್ನು ಕರೆಯುವ ವಿಡಿಯೋ ತುಣುಕು ಹರಿದಾಡುತ್ತಿದ್ದು ಈ ವಿಚಾರವು ಸುಳ್ಳು ಸುದ್ದಿಯಾಗಿದ್ದು. ವಿಷಯ ತಿಳಿದ ತಕ್ಷಣವೇ ಕಾರ್ಯ ಪ್ರವೃತ್ತರಾದ ಕುಂದಾಪುರ ಪೊಲೀಸ್ ಸಿಬ್ಬಂದಿ ಆತನನ್ನು ಕರೆಸಿ ವಿಚಾರಣೆ ನಡೆಸಿದ್ದು ಅದರಲ್ಲಿ ಕೂಡ ಆತನಲ್ಲಿ ಯಾವುದೇ ದುರುದ್ದೇಶ ಕಂಡು ಬಂದಿಲ್ಲ. ಯಾವುದೇ ವದಂತಿ ನಂಬದೆ ಮಾಹಿತಿಗಳಿದ್ದಲ್ಲಿ ಕುಂದಾಪುರ ಠಾಣೆಯ 08254-230338 ಸಂಖ್ಯೆ ಸಂಪರ್ಕಿಸಲು ಕುಂದಾಪುರ ನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ನಂದಕುಮಾರ್ ತಿಳಿಸಿದ್ದಾರೆ.

ಕಾಂಞಂಗಾಡ್ನಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷರಾಗಿ K P ಶ್ರೀಶನ್ / K P Sreeshan as President of Anti-Drug Day Program in Kanhangad

ಕಾಂಞಂಗಾಡ್: ಇತ್ತೀಚಿಗೆ ಕೇರಳದ ಕಾಂಞಂಗಾಡ್ನಲ್ಲಿ ನಡೆದ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿದ್ದ ಕಾರ್ಯಕ್ರಮದಲ್ಲಿ
್ಕುಂದಾಪುರದ ವಸಂತ ಬೇಕರಿ ಮಾಲೀಕರಾದ K P ಶ್ರೀಶನ್ , ಮುಖ್ಯ ಅತಿಥಿಯಾಗಿದ್ದು, ವಿಶ್ವ ಪ್ರಸಿದ್ಧ ಜಾದುಗಾರ ಪ್ರೊಫೆಸರ್ ಡಾ|| ಶ್ರೀಗೋಪಿನಾಥ್ ಮುದುಕಾಡ್, ಮತ್ತು ಉದ್ಯಮಿ ಫಿಲಂಪ್ರೊಡ್ಯೂಸರ್,MMC ಮೆಡಿಕಲ್ ಗ್ರೂಪನ ಚೇರ್ಮನ್ ಶ್ರೀ ಮನ್ಸೂರ್ ಪಳ್ಳೂರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

K P Sreeshan as President of Anti-Drug Day Program in Kanhangad

Kanhangad: In the recently held anti-narcotics day program in Kanhangad, Kerala, he was the chairman.
K P Sreeshan, owner of Vasant Bakery, Kundapur, was the chief guest and world renowned magician Professor Dr. Shri Gopinath Mudukad, and businessman Filmproducer, Chairman of MMC Medical Group Mr. Mansoor Pallur participated in the event
.

ಬದಿಯಡ್ಕದಲ್ಲಿ ಗ್ರಾಮಲೋಕ ಕೊಂಕಣಿ ಸಾಹಿತ್ಯ ಕಾರ್ಯಕ್ರಮ/‘Gramaloka’ Konkani Literary Program at Badiyadka

ಕಾಸರಗೋಡು ಜು 22: ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಗ್ರಾಮಲೋಕ ಎಂಬ ಕೊಂಕಣಿ ಸಾಹಿತ್ಯ ಕಾರ್ಯಕ್ರಮ ನಡೆಯಿತು
ಕೊಂಕಣಿ ಸಾಹಿತಿ, ಭಾಷಾ ತಜ್ನ ಡಾ. ಕಸ್ತೂರಿ ಮೋಹನ್ ಪೈ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ವಿಭಾಗದ ಸಂಯೋಜಕರಾದ ಮೆಲ್ವಿನ್ ರೊಡ್ರಿಗಸ್ ಗ್ರಾಮಲೋಕ ಕಾರ್ಯಕ್ರಮದ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಸಭಿಕರಿಗೆ ನೀಡಿದರು. ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಡಿ ಶಂಕರ ಗ್ರಾಮಲೋಕ ಕಾರ್ಯಕ್ರಮಕ್ಕಾಗಿ ಬದಿಯಡ್ಕ ಎಂಬ ಸಣ್ಣ ಗ್ರಾಮವನ್ನು ಆಯ್ಕೆ ಮಾಡಿದಕ್ಕಾಗಿ ಅಕಾಡೆಮಿ ಆಡಳಿತಕ್ಕೆ ಕೃತಜ್ನತೆಗಳನ್ನು ಸಲ್ಲಿಸಿದರು
ಕಾರ್ಯಕ್ರಮದಲ್ಲಿ ಯುವಸಾಹಿತಿಗಳಾದ ವೆಂಕಟೇಶ್ ನಾಯಕ್, ಶ್ವೇತಾ ಪೈ ಮಂಜೇಶ್ವರ, ರೋಶನ್ ಪೆರಿಯಡ್ಕ ಕವಿತೆಗಳನ್ನು ಓದಿದರೆ ಸ್ಟ್ಯಾನಿ ಬೇಳ ಸಣ್ಣ ಕಥೆಯನ್ನು ಪ್ರಸ್ತುತಪಡಿಸಿದರು.

‘Gramaloka’ Konkani Literary Program at Badiyadka

On June 22, a noteworthy Konkani Literary program called “Gramaloka” took place at the Badiyadka Culture Bhavan in Kasaragod. The event was organized by Kendra SahityaAkademi, and it witnessed the esteemed presence of Dr.Kasturi Mohan Pai, an expert in Konkani literature and language, who presided over the gathering.

Melvin Rodrigues, the Coordinator of the Konkani Department at Kendra SahityaAkademi, took the stage to provide the audience with a concise overview of the Gramaloka program’s significance and purpose.

The event proved to be a platform for talented young writers to showcase their literary prowess. VenkateshNayak, ShwetaPaiManjeswara, and Roshan graced the occasion by reading their periodical poems, captivating the attendees with their poetic expressions. Additionally, StaniBela presented a gripping short story, adding variety to the literary offerings of the evening.

During the program, D Shankara, a representative of the Badiyadka Gram Panchayat, expressed gratitude to the administration of Kendra SahityaAkademi for selecting their humble village of Badiyadka as the venue for the prestigious Gramaloka program. The event’s success and recognition meant a lot to the local community, highlighting the significance of regional literature and culture.

ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ, ಕ್ರೀಡಾಸಕ್ತಿ ಬೆಳೆಸಿಕೊಂಡು ಉತ್ತಮ ಸಾಧನೆ ಮಾಡಬೇಕು – ಎಲ್.ವಿ.ಗೋವಿಂದಪ್ಪ

ಶ್ರೀನಿವಾಸಪುರ: ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಕ್ರೀಡಾಸಕ್ತಿ ಬೆಳೆಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಲ್.ವಿ.ಗೋವಿಂದಪ್ಪ ಹೇಳಿದರು.
ತಾಲ್ಲೂಕಿನ ತಾಡಿಗೋಳ್ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ನೆಲವಂಕಿ ಹೋಬಳಿ ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ ವಿಜೇತರಾಗಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪಾರಿತೋಷಕ ವಿತರಿಸಿ ಮಾತನಾಡಿ, ಆಟೋಟಗಳಲ್ಲಿ ಉತ್ತಮ ಪ್ರದರ್ಶನ ಮುಖ್ಯವೇ ಹೊರತು ಸೋಲು ಗೆಲುವಲ್ಲ ಎಂದು ಹೇಳಿದರು.
ಕ್ರೀಡೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಮೂಡಿಸುತ್ತದೆ. ಮೇಲು ಕೀಳು ಭಾವನೆ ಅಳಿಸುತ್ತದೆ. ಸಮಾಜದಲ್ಲಿ ಸ್ನೇಹ, ಸೌಹಾರ್ಧತೆ ವೃದ್ಧಿಸುತ್ತದೆ. ಆದ್ದರಿಂದ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸಬೇಕುಎಂದು ಹೇಳಿದರು.
ತಾಡಿಗೋಳ್ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ವೆಂಕಟರವಣ, ಲಕ್ಷ್ಮೀಪುರ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಶ್ರೀನಿವಾಸ್ ಇದ್ದರು.

ಅರ್ಹ ಮಹಿಳೆಯರು ಯೋಜನೆ ಲಾಭ ಪಡೆದುಕೊಳ್ಳಬೇಕು -ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಅರ್ಹ ಮಹಿಳೆಯರು ಯೋಜನೆ ಲಾಭ ಪಡೆದುಕೊಳ್ಳಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಗೃಹಲಕ್ಷ್ಮಿ ಯೋಜನೆ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂದು ಹೇಳಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಯೋಜನೆ ದುರುಪಯೋಗ ನಡೆಯದಂತೆ ನೋಡಿಕೊಳ್ಳಬೇಕು. ಯೋಜನೆ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕು ಎಂದು ಹೇಳಿದರು.
ಗ್ರಾಮ 1ರಲ್ಲಿ 750ಕ್ಕೂ ಹೆಚ್ಚು ಸೌಲಭ್ಯಗಳಿವೆ. ಹಾಗಾಗಿ ಯಾವ ಸೌಲಭ್ಯ ಯಾವ ಫಲಾನುಭವಿಗೆ ಸಿಗುತ್ತದೆ ಎನ್ನುವುದರ ಬಗ್ಗೆ ಮಾಹಿತಿ ನೀಡಬೇಕು. ಯಾವುದೇ ಫಲಾನುಭವಿ ಸೌಲಭ್ಯದಿಂದ ವಂಚಿತವಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಜಿ.ರಾಜಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗೊಟ್ಟುಕುಂಟ ಕೃಷ್ಣಾರೆಡ್ಡಿ, ಮಖಂಡ ಶೇಷಾಪುರ ಗೋಪಾಲ್ ಇದ್ದರು.

ಕಾರು ಹಾಗೂ ಟಿಪ್ಪರ್‌ ಮಧ್ಯೆ ಭೀಕರ ರಸ್ತೆ ಅಪಘಾತ ನಾಲ್ವರು ಸ್ಥಳದಲ್ಲೇ ಸಾವು

ಹಾಸನ : ಜಿಲ್ಲೆಯ ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿಗೆ ಬಳಿ ಕಾರು ಹಾಗೂ ಟಿಪ್ಪರ್‌ ಮಧ್ಯೆ ಭೀಕರ ರಸ್ತೆ ಅಪಘಾತವಾಗಿ
ಸಂಭವಿಸಿ ನಾಲ್ವರು ಸ್ಥಳದಲ್ಲೇ ಸಾವಿಗೀಡಾದ ಭೀಕರ ಘಟನೆ ನೆಡೆದಿದೆ. ಈ ಅಪಘಾತದಲ್ಲಿ ಇನ್ನು ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಮೃತರು ಹಾಸನ ತಾಲೂಕು ಕುಪ್ಪಳಿ ಗ್ರಾಮದ ಚೇತನ್‌, ಗುಡ್ಡೇನಹಳ್ಳಿಯ ಅಶೋಕ್‌, ತಟ್ಟಿಕೆರೆಯ ಪುರುಷೋತ್ತಮ, ಆಲೂರು ತಾಲೂಕಿನ
ಚಿಗಳೂರಿನ ದಿನೇಶ್‌ ಎಂದು ತಿಳಿದುಬಂದಿದೆ. ಟಿಪ್ಪರ್‌ ಹಾಸನದಿಂದ ಸಕಲೇಶಪುರಕ್ಕೆ ತೆರಳುತ್ತಿದ್ದು, ಇನ್ನೊವಾ ಕಾರು ಸಕಲೇಶಪುರದಿಂದ ಹಾಸನಕ್ಕೆ ತೆರೆಳುತಿತ್ತು. ಇವೆರೇಡು ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಮ ಕಾರಿನಲ್ಲಿದ್ದ ನಾಲ್ವರು ಮೃತದಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದೆ.

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಈಶ್ವರಹಳ್ಳಿ ಆಲೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನ ನಡೆಸಿ ಮೃತದೇಹಗಳನ್ನು ಆಲೂರಿನ ತಾಲ್ಲೂಕು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ ಎಂದು.
ತಿಳಿದು ಬಂದಿದೆ.

ರಾಜ್ಯದ ಹಲವೆಡೆ ಭಾರೀ ಗಾಳಿ ಮಳೆಯಾಗುವ ಸಾಧ್ಯತೆ : ಹವಾಮಾನ ಇಲಾಖೆಯಿಂದ ಮುನ್ಸೂಚನೆ

ಬೆಂಗಳೂರು, ಜು.22: ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಐದು ದಿನಗಳ ಕಾಲ ರಾಜ್ಯದ ಕೆಲವು ಜಿಲ್ಲೆಗಳಲ್ಲಿ. ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

ವಿಶೇಷವಾಗಿ ರಾಜ್ಯದ ಕರಾವಳಿ ಜಿಲ್ಲೆಗಳು ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ, ಮುಂದಿನ ಐದು ದಿನಗಳವರೆಗೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ,ಉಡುಪಿ ಮತ್ತು ಉತ್ತರ ಕನ್ನಡ, ಜಿಲ್ಲೆಗಳಲ್ಲಿ ಬಲವಾದ ಗಾಳಿಯೊಂದಿಗೆ ಭಾರೀ ಮಳೆಯಾಗಲಿದೆಯೆಂದು ತಿಳಿಸಿ, ಈ ಮೂರು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ. ಜುಲೈ 26 ರವರೆಗೆ ಮತ್ತು ಜುಲೈ 23 ರಂದು ಕಿತ್ತಳೆ (Orange) ಅಲರ್ಟ್ ಘೋಷಿಸಲಾಗಿದೆ. ಗಂಟೆಗೆ 40 ರಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ

    ಬೆಳಗಾವಿಯ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.ಧಾರವಾಡ, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಬೀದರ್. ಉಳಿದಂತೆ ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ, ವಿಯಾಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದ್ದು.ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

ಮುಂದಿನ ಐದು ದಿನಗಳ ಕಾಲ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳು. ಮತ್ತು ಹಳದಿ ಎಚ್ಚರಿಕೆ ನೀಡಲಾಗಿದೆ. ಜುಲೈ 23 ರಂದು ಕೊಡಗು ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಶ್ರೀನಿವಾಸಪುರ ತಾಲ್ಲೂಕು ಕಛೇರಿಯ ಅವ್ಯವಸ್ಥೆ ಕಂಡು ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿ ಅಕ್ರಮ್ ಪಾಷ ಅಸಮದಾನ

ಶ್ರೀನಿವಾಸಪುರ : ತಾಲ್ಲೂಕಿನ ತಾಲ್ಲೂಕು ಕಛೇರಿಯ ಅವ್ಯವಸ್ಥೆ ಕಂಡ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿ ಅಕ್ರಮ್ ಪಾಷ ತಮ್ಮ ಅಸಮದಾನ ವ್ಯಕ್ತಪಡಿಸಿದ್ದಾರೆ.

ಕೋಲಾರ ಜಿಲ್ಲೆಗೆ ನೂತನವಾಗಿ ಆಗಮಿಸಿರುವ ಜಿಲ್ಲಾಧಿಕಾರಿಗಳಾದ ಅಕ್ರಮ್ ಪಾಷ ರವರು ಕಳೆದ ಕೆಲ ದಿನಗಳಿಂದ ಜಿಲ್ಲೆಗೆ ಒಳಪಡುವ ತಾಲ್ಲೂಕುವಾರು ಕೇಂದ್ರಗಳಿಂದ ದಿಢೀರ್ ಭೇಟಿ ನೀಡುವ ಮೂಲಕ ಪರಿಶೀಲನೆ ನಡೆಸುತ್ತಿದ್ದಾರೆ.

ಇದೆ ನಿಟ್ಟಿನಲ್ಲಿ ಶುಕ್ರವಾರ ಬೆಳಗ್ಗೆ ಶ್ರೀನಿವಾಸಪುರ ತಾಲ್ಲೂಕು ಕಛೇರಿಗೆ ಡಿ ಸಿ ಅಕ್ರಮ್ ಪಾಷ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಶೀಲನೆ ವೇಳೆ ತಾಲ್ಲೂಕು ಕಛೇರಿಯ ಅವ್ಯವಸ್ಥೆ ಕಂಡು ಅಸಮದಾನ ವ್ಯಕ್ತಪಡಿಸಿದರು.

ತಾಲ್ಲೂಕು ಕಛೇರಿಯ ಒಳಾoಗಣ ಹಾಗೂ ಹೋರಾoಗಣ ಸುಮಾರು ವರ್ಷಗಳಿಂದ ಅವ್ಯವಸ್ಥೆಯ ಗೂಡಿಗೆ ನಿದರ್ಶನವಾಗಿದೆ. ಯಾರೇ ದಂಡಾಧಿಕಾರಿಗಳು ಇಲ್ಲಿಗೆ ಬಂದ್ರು ರಾಜಕೀಯ ಪುಡಾರಿಗಳ ದೌರ್ಜನ್ಯಕ್ಕೆ ಅಥವಾ ಇಲ್ಲಿನ ಸಂಪನ್ಮೂಲಗಳ ದುರಾಸೆಗೆ ಇಚ್ಛಿಸಿ ತಾಲ್ಲೂಕಿನ ಅಭಿವೃದ್ಧಿಯ ಕಿನ್ನತೆಗೆ ಕಾರಣವಾಗುತ್ತಿದ್ದಾರೆ. ಅದೇ ರೀತಿ ಸದ್ಯ ಈಗಿರುವ ಅಧಿಕಾರಿಯಿಂದಲೂ ಅಭಿವೃದ್ಧಿಗೆ ದೂರ ಉಳಿದಂತೆ ಮೇಲ್ನೋಟಕ್ಕೆ ಕಾಣುತ್ತಿದೆ ತಾಲ್ಲೂಕು ಕಛೇರಿಯ ಅವ್ಯವಸ್ಥೆ.

ಇದೆ ವೇಳೆ ನೂತನ ಜಿಲ್ಲಾಧಿಕಾರಿಗಳ ದಿಢೀರ್ ಭೇಟಿಯಿಂದ ಅಧಿಕಾರಿಗಳು ಕಂಗಲಾದರಾದರೂ ವ್ಯವಸ್ಥಿತವಾದ ವಾತಾವರಣ ಇದೆಯೆಂಬ ಭ್ರಮೆ ಮೂಡಿಸಲು ಯತ್ನಿಸಿ ವಿಫಲರಾದರು.
ತಾಲ್ಲೂಕು ಕಛೇರಿಯ ಎಲ್ಲಾ ವಿಭಾಗಗಳನ್ನು ಪರಿಶೀಲಿಸುತ್ತಿರುವ ವೇಳೆ ಸಾರ್ವಜನಿಕರು ಇಲ್ಲಿನ ಅವ್ಯವಸ್ಥೆಯ ಬಗ್ಗೆ ಹಾಗೂ ಅಧಿಕಾರಿಗಳ ನಿರ್ಲಕ್ಷದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದರು. ಎಲ್ಲವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ಚು ನೀಡುವ ಭರವಸೆ ನೀಡಿದರು.

56 ಇಂಚು ಸುತ್ತಳತೆಯ ಮೋದಿಯ ಎದೆಗೆ ಮಣಿಪುರದ ಘಾಸಿ ಚುಚ್ಚಲು 79 ದಿನ ಬೇಕಾಯಿತೇ..?-ಅನಿತಾ ಡಿಸೋಜಾ

ಕಾರ್ಕಳ : ಮಣಿಪುರದಲ್ಲಿ ಕುಕಿ-ಬೋ ಸಮುದಾಯದ ಮಹಿಳೆಯರಿಬ್ಬರನ್ನು ನಗ್ನಗೊಳಿಸಿ ಮೆರವಣಿಗೆ ನಡೆಸಿ ಅತ್ಯಾಚಾರ ಮಾಡಿರುವ ಕುಕೃತ್ಯಕ್ಕೆ ಸುಪ್ರೀಂಕೋರ್ಟ್ ಹಾಕಿರುವ ಛೀಮಾರಿ ಕೇಂದ್ರದ ನಿಷ್ಕ್ರಿಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ಕೃತ್ಯಗಳು ನಡೆಯಲು ಅಲ್ಲಿನ ರಾಜ್ಯ ಸರಕಾರದ ಪಾಲೆಷ್ಟಿದೆಯೋ, ಕೇಂದ್ರದ ಪಾಲು ಅಷ್ಟೇ ಇದೆ’ ಎಂದು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗುಜರಾತಿನ ವಡೋದರದ ಬೀದಿಯಲ್ಲಿ ಅಲ್ಪಸಂಖ್ಯಾತ ಗರ್ಭಿಣಿ ಮಹಿಳೆಯ ಹೊಟ್ಟೆಗೆ ತಿವಿದು, ಮಗುವನ್ನು ಹೊರ ತೆಗೆದು ಅದನ್ನು ತ್ರಿಶೂಲದಿಂದ ಚುಚ್ಚಿ ಮಗುವನ್ನು ಮೆರವಣಿಗೆ ಮಾಡಿದಾಗ ಇದೆ 56 ಇಂಚಿನ ಎದೆ ಮೌನವಹಿಸಿತ್ತು. ಈಗ ಮಣಿಪುರದ ಬೀದಿಯಲ್ಲಿ ಮಹಿಳೆಯರ ನಗ್ನ ಮೆರವಣಿಗೆ ನಡೆಸಿ ಸಾಮೂಹಿಕ ಅತ್ಯಾಚಾರ ಎಸೆಯುವಾಗಲೂ 56 ಇಂಚಿನ ಎದೆ ಮತ್ತದೇ ಮೌನ. ಬಿಚ್ಚಿ ಮಾತನಾಡಿ ಕಣ್ಣೀರು ಸುರಿಸಲು 79 ದಿನ ಬೇಕಾಗಲು ಈ ಕೃತ್ಯವ‌ನ್ನು ಕಂಡು ಜಗತ್ತೇ ಕ್ಯಾಕರಿಸಿ ಉಗಿಯಲು ಪ್ರಾರಂಭಿಸಿಬೇಕಾಯಿತು.

ಈ ಘಟನೆ ವಿಶ್ವದ ಮುಂದೆ ನಾವು ತಲೆತಗ್ಗಿಸುವಂತೆ ಮಾಡಿದೆ. ಇಂತಹ ಅಮಾನವೀಯ ಕೃತ್ಯಕ್ಕೆ ನಮ್ಮ ದೇಶ ಸಾಕ್ಷಿಯಾಗಿದ್ದು ಈ ನೆಲದ ದುರಂತ. ಬಿಜೆಪಿಯಲ್ಲಿರುವ ಮನಸುಗಳು ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿದರ ಫಲವಿದು’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಲ್ಲಿನ ಪೊಲೀಸ್ ಅಧಿಕಾರಿಗಳೇ ಹೇಳುವ ಪ್ರಕಾರ ಈ ಘಟನೆ ನಡೆದಿರುವುದು ಮೇ ಮೊದಲ ವಾರದಲ್ಲಿ. ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿ FIR ಆಗಿದೆಯಂತೆ, ಘಟನೆ ನಡೆದು ಎರಡು ತಿಂಗಳಾದರೂ ಅಪರಾಧಿಗಳ ಬಂಧನವಾಗಿಲ್ಲ. ಇದೀಗ ವಿಡಿಯೋ ವೈರಲ್ ಆಗಿರುವುದರಿಂದ ಮುಜುಗರ ತಪ್ಪಿಸಲು, ಕುಣಿಕೆ ಎಲ್ಲಿ ತಮ್ಮ ಕೊರಳ ಸುತ್ತ ಬೀಳುತ್ತೆ ಎನ್ನುವ ಭಯದಿಂದ ತನಿಖೆಯ ಬಗ್ಗೆ ಮಾತನಾಡುತ್ತಿದ್ದಾರೆ.

ಮೋದಿ ಮಣಿಪುರದ ಗಲಭೆಗಳ ಬಗ್ಗೆ ಮಾತನಾಡಬೇಕಾದರೆ ಒಂದು ಹೇಯ ಕೃತ್ಯದ ವಿಡಿಯೋ ಹೊರಬರಬೇಕಾಯಿತು. ಕಳೆದ ಮೂರು ತಿಂಗಳ ಗಲಭೆಗಳಲ್ಲಿ ನೂರಕ್ಕಿಂತ ಹೆಚ್ಚು ಜನ ಮೃತಪಟ್ಟಿದ್ದಾರೆ, ಅದೆಷ್ಟೋ ಮಂದಿ ಗಾಯಗೊಂಡಿದ್ದಾರೆ, ಇನ್ನೆಷ್ಟೋ ಜನರು ನಾಪತ್ತೆಯಾಗಿದ್ದಾರೆ.

ಸುಮಾರು 60000- 70000 ಮಂದಿ ನಿರಾಶ್ರಿತರ ಕ್ಯಾಂಪ್‍ಗಳಲ್ಲಿದ್ದಾರೆ. ಯಾಕೆಂದರೆ ಅವರ ಮನೆ, ಹಳ್ಳಿಗಳೇ ಬೆಂಕಿಗಾಹುತಿಯಾಗಿ ನಾಶವಾಗಿವೆ. ಒಂದೆರಡಲ್ಲ 300ಕ್ಕಿಂತಲೂ ಹೆಚ್ಚು ಚರ್ಚುಗಳ ಮೇಲೆ ದಾಳಿ ನಡೆದಿದೆ.
ಇಷ್ಟೆಲ್ಲಾ ಆದರೂ ಮೋದಿಯವರಿಗೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾತಾನಾಡಬೇಕು, ಅಲ್ಲಿನ ಜನರಿಗೆ ಧೈರ್ಯ ತುಂಬಬೇಕು’ ಎಂದು ಅನಿಸಲೇ ಇಲ್ಲ. ಒಂದು ಟ್ವೀಟ್ ಕೂಡಾ ಹೊರಬರಲಿಲ್ಲ.

ಇದೀಗ ಈ ವಿಡಿಯೋ ಹೊರಬರುತ್ತಲೇ, ಇನ್ನೇನು ಈ ವಿಡಿಯೋ ಅಂತಾರಾಷ್ಟ್ರೀಯ ಮಾಧ್ಯಮಗಳ ಮೂಲಕ ಹೊರ ಜಗತ್ತಿಗೆ ಬಂದು ಪ್ರಪಂಚದೆದುರು ಮಾನ ಹರಾಜಾಗುತ್ತದೆ ಎನ್ನುವಾಗ ನಾವು ಅಪರಾಧಿಗಳನ್ನು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಆಡಳಿತ ವ್ಯವಸ್ಥೆ ಕೈಯಲ್ಲಿದ್ದು ಪೊಲೀಸ್, ಸೇನೆಯ ಸಹಾಯವಿದ್ದು ಒಂದು ಗಲಭೆಯನ್ನು ಒಂದೆರಡು ದಿನಗಳಲ್ಲಿ ನಿಯಂತ್ರಿಸಲಾಗದ ಮೋದಿ ಅಸಮರ್ಥರಾಗಿದ್ದಾರೆ.

ಪ್ರಧಾನಿ ಮೋದಿ ಮತ್ತು ಮಣಿಪುರ ಮುಖ್ಯಮಂತ್ರಿ ತಮ್ಮ ಅಸಮರ್ಥತೆ ಮನಗಂಡು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮತ್ತು ದೇಶದಲ್ಲಿ ಜಾತಿ, ಧರ್ಮ, ಲಿಂಗ ತಾರತಮ್ಯದಲ್ಲಿನ ವ್ಯಾಭಿಚಾರ ಭೀಕರತೆ ಶಮನ ಮಾಡಲು ಸಹಕಾರ ನೀಡಬೇಕೆಂದು ಅನಿತಾ ಡಿಸೋಜ ಕರೆ ನೀಡಿದ್ದಾರೆ.