ಶ್ರೀನಿವಾಸಪುರ:ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಪುರಸಭೆ ಆವರಣದಲ್ಲಿನ ದಾಖಲಾತಿ ಕೇಂದ್ರಗಳ ಪ್ರಯೋಜನ ಪಡೆಯಿರಿ

ಶ್ರೀನಿವಾಸಪುರ: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಪಟ್ಟಣದ ಪುರಸಭೆ ಆವರಣದಲ್ಲಿ ಸ್ಥಾಪಿಸಲಾಗಿರುವ ಎರಡು ದಾಖಲಾತಿ ಕೇಂದ್ರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪುರಸಭೆ ಕಂದಾಯ ಅಧಿಕಾರಿ ವಿ.ನಾಗರಾಜ್ ಹೇಳಿದರು.
ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಭಾಗ್ಯಲಕ್ಷಿ ಯೋಜನೆ ಫಲಾನುಭವಿಗಳಿಗೆ, ಫಲಾನುಭವಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಯೋಜನೆ ಲಾಭ ಪಡೆಯುವ ಉದ್ದೇಶದಿಂದ ಎಲ್ಲ ಬ್ರೌಸಿಂಗ್ ಕೇಂದ್ರಗಳ ಮುಂದೆ ಮಹಿಳೆಯರು ಜಾತ್ರೆಯಂತೆ ನೆರೆದಿದ್ದಾರೆ. ದಟ್ಟಣೆ ತಪ್ಪಿಸುವುದಕ್ಕಾಗಿಯೇ ಇಲ್ಲಿ ಎರಡು ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹೇಳಿದರು.
ಫಲಾನುಭವಿಗಳು ತಲಾ ರೂ.12 ನೀಡಿ ಹೆಸರು ನೋಂದಾಯಿಸಬಹುದು. ನೋಂದಾವಣೆಗೆ ಕಾಲ ನಿಗದಿಪಡಿಸಿಲ್ಲ. ಹಾಗಾಗಿ ಫಲಾನುಭವಿಗಳು ಗಾಬರಿಗೊಳ್ಳದೆ ಸಾವಕಾಶವಾಗಿ ನೋಂದಾವಣೆ ಮಾಡಿಸಬೇಕು. ನೂಕುನುಗ್ಗಲಿಗೆ ಅವಕಾಶ ನೀಡಬಾರದು ಎಂದು ಹೇಳಿದರು.
ಪುರಸಭೆ ಕಂದಾಯ ನಿರೀಕ್ಷಕ ಎನ್.ಶಂಕರ್, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್, ಸಿಬ್ಬಂದಿ ಶ್ರೀನಾಥ್, ಕೀರ್ತನಾ ಇದ್ದರು.

ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಆಯಾ ಶಾಲೆಯ ಹಳೆ ವಿದ್ಯಾರ್ಥಿಗಳು ಕೈ ಜೋಡಿಸಬೇಕು : ಸಿ.ಆರ್.ಅಶೋಕ್

ಶ್ರೀನಿವಾಸಪುರ: ಸರ್ಕಾರಿ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಆಯಾ ಶಾಲೆಯ ಹಳೆ ವಿದ್ಯಾರ್ಥಿಗಳು ಕೈ ಜೋಡಿಸಬೇಕು. ಮಕ್ಕಳ ಶಿಕ್ಷಣ ಹಾಗೂ ಆರೋಗ್ಯ ವಿಷಯಕ್ಕೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ಹೇಳಿದರು.
ಮಾರೇನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಹಳೆ ವಿದ್ಯಾರ್ಥಿಗಳ ಸಂಘದ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿ, ಸರ್ಕಾರಿ ಶಾಲಾ ಶಿಕ್ಷಕ ಎಸ್.ಆರ್.ಧರ್ಮೇಶ್, ಪ್ರತಿ ತಿಂಗಳೂ ತಮ್ಮ ಸಂಬಳದಲ್ಲಿ ರೂ.10 ಸಾವಿರ ತೆಗೆದಿಟ್ಟು ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಅಗತ್ಯಗಳಿಗೆ ಬಳಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಂಸ್ಕಾರ ಪಡೆದುಕೊಳ್ಳಬೇಕು. ಗುರು ಹಿರಿಯರನ್ನು ಗೌರವಿಸುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಬೇಕು. ಪ್ರಚಾರಕ್ಕಾಗಿ ಹಾತೊರೆಯದೆ, ದಾನಿ ಧರ್ಮೇಶ್ ಅವರಂತೆ ಎಲೆ ಮರೆ ಕಾಯಿಯಂತೆ ಸೇವೆ ಮಾಡಬೇಕು ಎಂದು ಹೇಳಿದರು.
ತಾಲ್ಲೂಕು ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕಿ ಸುಲೋಚನ ಮಾತನಾಡಿ, ಶಿಕ್ಷಣ ಬದಲಾವಣೆಯ ಸಾಧನ. ಯಾವುದಾದರೂ ಹುದ್ದೆ ಪಡೆಯುವ ಉದ್ದೇಶದಿಂದ ಮಾತ್ರ ಓದಬಾರದು. ಜ್ಞಾನಾರ್ಜನೆ ಶಿಕ್ಷಣದ ಗುರಿಯಾಗಬೇಕು. ಪೋಷಕರು ಮಕ್ಕಳ ಕೈಗೆ ಮೊಬೈಲ್‍ಗೆ ಬದಲಾಗಿ ಪುಸ್ತಕ ಕೊಡಬೇಕು. ಮೊಬೈಲ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಧರ್ಮೇಶ್ ತಾವು ದುಡಿದು ಗಳಿಸಿದ ಹಣದಿಂದ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಇಷ್ಟದ ಬಟ್ಟೆ ಕೊಡಿಸಿದ್ದಾರೆ. ಶಾಲೆಯ ಹಳೆ ವಿದ್ಯಾರ್ಥಿಗಳು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಕೊಡುಗೆ ಸರ್ಕಾರದ ಸೌಲಭ್ಯಕ್ಕೆ ಪೂರಕವಾಗಿದೆ. ವಿದ್ಯಾರ್ಥಿಗಳು ದಾನಿಗಳ ಕೊಡುಗೆ ಬಳಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯವಸ್ಥಾಪಕರಾದ ಗಿರೀಶ್ ಬಾಬು, ಪುರುಷೋತ್ತಮರೆಡ್ಡಿ, ಮುಖ್ಯ ಶಿಕ್ಷಕ ಮುನಿಶಾಮಿ, ಹಳೆ ವಿದ್ಯಾರ್ಥಿನಿ ಶುಭ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಇಷ್ಟದ ಬಟ್ಟೆ ವಿತರಿಸಲಾಯಿತು. ಅತಿಥಿಗಳನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.
ಮುಖ್ಯ ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್, ಶಿಕ್ಷಕರಾದ ಸೊಣ್ಣಪ್ಪ, ಜಯಮ್ಮ, ನಾಗಿರೆಡ್ಡಿ, ವೆಂಕಟಲಕ್ಷ್ಮಮ್ಮ, ರಾಮಕೃಷ್ಣಪ್ಪ, ರಾಮರೆಡ್ಡಿ, ನಾಗರಾಜಪ್ಪ, ಎಸ್‍ಡಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಅಂತರ ರಾಷ್ಟ್ರೀಯ ಕ್ರಿಡಾಪಟು ನಿಶಾಂತ್ ಕುಮಾರ್ ಇದ್ದರು.

.

ಮಂಗಳೂರು : ಬೊಂದೇಲ್ ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ‘ಟ್ಯಾಲೆಂಟ್ ಫೆಸ್ಟ್’

ಮಂಗಳೂರು, ಜುಲೈ 24 ಹಾಗೂ 25 ಸೈಂಟ್ ಲಾರೆನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಟ್ಯಾಲೆಂಟ್ ಫೆಸ್ಟ್ ಆಚರಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ತುಳು ರಂಗಭೂಮಿ ಮತ್ತು ತುಳು ಚಲನಚಿತ್ರೋದ್ಯಮದ ಖ್ಯಾತ ನಟ ಭೋಜರಾಜ್ ವಾಮಂಜೂರ್ ಇವರು ನೆರವೇರಿಸಿದರು. ವಿವಿಧ ಹಾಸ್ಯ ಹಾಗೂ ಹಾಡುಗಳ ಮುಖಾಂತರ ಮಕ್ಕಳನ್ನು ರಂಜಿಸಿ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿ ಬೆಳೆಸಲು ಮಾರ್ಗದರ್ಶನವನ್ನು ನೀಡಿದರು. ಅಧ್ಯಕ್ಷೀಯ ಭಾಷಣದಲ್ಲಿ ವಂದನೀಯ ಗುರು ಆಂಡ್ರ್ಯೂ ಲಿಯೋ ಡಿಸೋಜಾ ರವರು

ತಮ್ಮ ಸಂದೇಶದಲ್ಲಿ, ಪ್ರತಿಯೊಬ್ಬ ಮಗುವಿಗೆ ಒಂದಲ್ಲ ಒಂದು ರೀತಿಯ ಪ್ರತಿಭೆ ಇದೆ. ಅದನ್ನು ಹುಡುಕಿ ಪ್ರೋತ್ಸಾಹಿಸಿದಾಗ ಪ್ರತಿಭೆಯು ಹೊರ ಚಿಮ್ಮುತ್ತದೆ. ನಾಚಿಕೆ ಭಯ ಮತ್ತು ಹಿಂಜರಿಕೆಯನ್ನು ಬಿಟ್ಟು ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಬೆಳೆಸಲು ಕರೆಕೊಟ್ಟರು. ವೇದಿಕೆಯಲ್ಲಿ ಶಾಲಾ ಪ್ರಾಂಶುಪಾಲರಾದ ವಂದನೀಯ ಪೀಟರ್ ಗೊನ್ಸಾಲ್ವಿಸ್ ವಂದನೀಯ ಲ್ಯಾನ್ಸಿ ಡಿಸೋಜಾ ಹಾಗೂ ಶಾಲಾ ನಾಯಕ ತೇಜಸ್ ಮತ್ತು ಶಾಲಾ ಉಪ ನಾಯಕಿ ಮೇಘನ್ ವೇದಿಕೆಯಲ್ಲಿ ಆಸೀನರಾಗಿದ್ದರು. 

ತದನಂತರ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ತರಗತಿ ವಾರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು.

ಅಧಿಕಾರಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ದಾಳಿ ; ಅವಾಗ ಲಂಚದ ಹಣವನ್ನೇ ನುಂಗಿದ ಭೂಪ


ಜಬಲ್ಪುರ್: ಮಧ್ಯ ಪ್ರದೇಶದ ಕತ್ನಿ ಎಂಬಲ್ಲಿ ಕಂದಾಯ ವಿಭಾಗದ ಅಧಿಕಾರಿಯೊಬ್ಬರು ತಾವು ಲಂಚ ಸ್ವೀಕರಿಸುತ್ತಿದ್ದಾಗ ಆಗಮಿಸಿದ ಲೋಕಾಯುಕ್ತ ವಿಶೇಷ ಪೊಲೀಸ್‌ ಎಸ್ಟಾಬ್ಲಿಶ್ಮೆಂಟ್‌
ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇದನ್ನು ಕಂಡು ದಂಗಾಗಿ ಲಂಚವಾಗಿ ಸ್ವೀಕರಿಸಿದ ಆತ ರೂ. 5,000 ಹಣವನ್ನೇ ಜಗಿದು ನುಂಗಿಬಿಟ್ಟಿದ್ದಾನೆ.

ಕಂದಾಯ ವಿಭಾಗದ ಅಧಿಕಾರಿ ಪಟ್ವಾರಿ ಗಜೇಂದ್ರ ಸಿಂಗ್‌ ಎಂಬವರು ಸೋಮವಾರ ತಮ್ಮ ಖಾಸಗಿ ಕಚೇರಿಯಲ್ಲಿ ರೂ. 5,000 ಲಂಚ ಸ್ವೀಕರಿಸುತ್ತಿದ್ದಾಗ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಅಧಿಕಾರಿ ಲಂಚಕ್ಕೆ ಬೇಡಿಕೆಯಿಡುತ್ತಿದ್ದಾರೆಂದು ಬರ್ಖೇಡಾ ಗ್ರಾಮದ ವ್ಯಕ್ತಿಯೊಬ್ಬರು ಲೋಕಾಯುಕ್ತದ ಬಳಿ ದೂರೂ ನೀಡಿದ್ದರು. ಲಂಚ ಸ್ವೀಕರಿಸಿದಾಕ್ಷಣ ಲೋಕಾಯುಕ್ತ ಅಧಿಕಾರಿಗಳನ್ನ ಗಮನಿಸಿದ ಸಿಂಗ್‌ ಏನು ಮಾಡಬೇಕೆಂದು ತೋಚದೆ ನೋಟುಗಳನ್ನು ನುಂಗಿ ಬಿಟ್ಟಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ವೈದ್ಯರ ಸಹಾಯದಿಂದ ಹಣವನ್ನು ಹೊರಗೆ ತೆಗೆಯಲು ಪ್ರಯತ್ನ ಪಟ್ಟರು. ಹಣ ಸುರುಳಿ ರೂಪದಲ್ಲಿ ವಾಂತಿ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.  ಈಗ ಅವರು ಚೆನ್ನಾಗಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು ತನಿಖೆ ಮುಂದುವರಿದಿದೆ.

ಹಣ ಜಗಿದು ನುಂಗುವ ದ್ರಶ್ಯದ ವಿಡೀಯೊ ಲಬ್ದವಾಗಿದೆ

ಮಣಿಪುರ ಮಹಿಳೆಯರ ವಿವಸ್ತ್ರ ಪ್ರಕರಣ – ಈ ತನಕ 7 ಆರೋಪಿಗಳ ಬಂದನ : ಹಿಂಸಾಚಾರದಲ್ಲಿ -160 ಕ್ಕೂ ಹೆಚ್ಚು ಜನರ ಸಾವು, 256 ಚರ್ಚುಗಳಿಗೆ ಬೆಂಕಿ

ಇಂಫಾಲ, ಜು.25: ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೌಬಲ್ ಜಿಲ್ಲೆಯಿಂದ ಸೋಮವಾರ ಸಂಜೆ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು,  ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಬಂದಿಸಿದಂತಾಗಿದೆ ಎಂದು ತಿಳಿದು ಬಂದಿದೆ.

      ಮೇ 4 ರಂದು ಇಬ್ಬರು ಮೈತೆಯಿ ಬುಡಕಟ್ಟು ಮಹಿಳೆಯರ ವಿವಸ್ತ್ರ ಪ್ರಕರಣದಲ್ಲಿ ಭಾಗವಹಿಸಿದ 14 ಜನರನ್ನು ವೀಡಿಯೊ ಮುಖಾಂತರ ಪೊಲೀಸರು ಮೊದಲು ಗುರುತಿಸಿದ್ದರು.

       ಇಬ್ಬರು ಮಹಿಳೆಯರನ್ನು ಅಪಹರಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆಯ 26 ಸೆಕೆಂಡುಗಳ ವಿಡಿಯೋ ಜುಲೈ 19 ರಂದು ಹೊರಬಿದ್ದಿತ್ತು, ವೀಡಿಯೊದಲ್ಲಿ ಕಂಡುಬರುವ ಮಹಿಳೆಯರಲ್ಲಿ ಒಬ್ಬರು ಮಾಜಿ ಸೈನಿಕರ ಪತ್ನಿಯಾಗಿದ್ದು, ಅವರ ಸೈನಿಕ ಪತಿ ಅಸ್ಸಾಂ ರೆಜಿಮೆಂಟ್‌ನಲ್ಲಿ ಸುಬೇದಾರ್ ಆಗಿ ಸೇವೆ ಸಲ್ಲಿಸಿದ್ದಾರೆ ಹಾಗೆ ಕಾರ್ಗಿಲ್ ಯುದ್ಧದಲ್ಲಿ ಸಹ ಹೋರಾಡಿದ್ದಾರೆ ಎಂದು ತಿಳಿದು ಬಂದಿದೆ.

       ಕಾಂಗ್‌ಪೊಕ್ಪಿ ಜಿಲ್ಲೆಯ ಸೈಕುಲ್ ಪೊಲೀಸ್ ಠಾಣೆಯಲ್ಲಿ ಒಂದು ತಿಂಗಳ ಹಿಂದೆ ಜೂನ್ 21 ರಂದು ವೀಡಿಯೊಗೆ ಸಂಬಂಧಿಸಿದಂತೆ ದೂರು ದಾಖಲಾಗಿತ್ತು. ಅದರೆ ವೀಡಿಯೊ ಈಗ ವೈರಲ್ ಆದುದರಿಂದ ಈಗ ಕ್ರಮ ತೆಗೆದುಕೊಳ್ಳಲಾಗಿ. ಮೇ 3 ರಂದು ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಪ್ರಾರಂಭವಾದಾಗಿನಿಂದ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ, ಜೂನ್ ೧೩ ರಂದೇ 256 ಚರ್ಚುಗಳಿಗೆ ಬೆಂಕಿ ಹಚ್ಚಿದ್ದಾರೆ ಅಥವಾ ಧ್ವಂಸ ಮಾಡಿದ್ದಾರೆಂದು ಟೆಲಿಗ್ರಾಫ್ ವಾರ್ತೆ ಸಂಸ್ಥೆ ಪ್ರಕಟಿಸಿದೆ. ಪರಿಶಿಷ್ಟ ಪಂಗಡದ (ST) ಸ್ಥಾನಮಾನಕ್ಕಾಗಿ ಮೈತೆಯಿ ಸಮುದಾಯದ ಬೇಡಿಕೆಯನ್ನು ಪ್ರತಿಭಟಿಸಲು ಬೆಟ್ಟದ ಜಿಲ್ಲೆಗಳಲ್ಲಿ ‘ಬುಡಕಟ್ಟು ಒಗ್ಗಟ್ಟಿನ ಮೆರವಣಿಗೆ’ ಆಯೋಜಿಸಲಾಗಿತ್ತು. ಅದಕ್ಕೆ ಪ್ರತೀಕಾರವಾಗಿ ಕುಕ್ಕಿ ಜನಾಂಗದ ಮೇಲೆ ಮೈತೆಯಿ ಜನಾಂಗ ಅಮಾನವೀಯ ರೀತಿಯಲ್ಲಿ ಹಿಂಸಾಚಾರ ಎಸಗಿದೆ      ಮಣಿಪುರದ ಜನಸಂಖ್ಯೆಯ ಸುಮಾರು 53 ಪ್ರತಿಶತದಷ್ಟಿರುವ ಮೈತೈಗಳು ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ, ಆದರೆ ನಾಗಾಗಳು ಮತ್ತು ಕುಕಿಗಳನ್ನು ಒಳಗೊಂಡಿರುವ ಬುಡಕಟ್ಟು ಜನಾಂಗದವರು ಶೇಕಡಾ 40 ರಷ್ಟಿದ್ದಾರೆ ಮತ್ತು ಹೆಚ್ಚಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ

ಶ್ರೀನಿವಾಸಪುರದಲ್ಲಿ ಅಬಕಾರಿ ಪೊಲೀಸರ ದಾಳಿ :730 ಗ್ರಾಮ್ ಗಾಂಜ ವಶ

ಶ್ರೀನಿವಾಸಪುರ: ದಿನಾಂಕ 23.07 2023 ರಂದು ಸಂಜೆ ಶ್ರೀನಿವಾಸಪುರ ನಗರದ ಜಗಜೀವನ್ ರಾಮ್ ಪಾಳ್ಯ ಮುಳ್ಬಾಗಲು ರಸ್ತೆಯ ದರ್ಗಾ ಬಳಿ ದಾಳಿ ಮಾಡಿ ಸಲ್ಮಾನ್ ಎಂಬುವರು TATA ACE tempo ವಾಹನದಲ್ಲಿ 430 gm ಒಣ ಗಾಂಜ ಹಾಗೂ ಮೊಹಮ್ಮದ್ ಹುಸೇನ್ ಸಾಬ್ ಎಂಬುವವರು TVS 50 ದ್ವಿಚಕ್ರವಾಹನದಲ್ಲಿ ಅಕ್ರಮವಾಗಿ 300 gm ಒಣಗಿದ ಗಾಂಜಾ ವನ್ನು ಗಿರಾಕಿಗಳಿಗೆ ಮರಾಟಕ್ಕಾಗಿ ಸಾಗಾಟ ಮಾಡುತ್ತಿದ್ದದ್ದನ್ನು ಪತ್ತೆ ಹಚ್ಚಿ ಆರೋಪಿಗಳ ವಿರುದ್ಧ NDPS ಕಾಯ್ದೆ 1985 ರಡಿ 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ, ದಾಳಿಯಲ್ಲಿ ಶ್ರೀ ರೋಹಿತ್ ಬಿ ಎಸ್ ಅಬಕಾರಿ ನಿರೀಕ್ಷಕರು, ಶ್ರೀನಿವಾಸಪುರ ವಲಯ ಹಾಗೂ ಶ್ರೀಮತಿ ಪುಷ್ಪ ಅಬಕಾರಿ ನಿರೀಕ್ಷಕರು ಕೋಲಾರ ಉಪ ವಿಭಾಗ ರವರು ಮತ್ತು ಸಿಬ್ಬಂದಿಗಳಾದ ಮಂಜುನಾಥ್ ರಾಘವೇಂದ್ರ ಶಿವಾನಂದ್ ಈಶ್ವರ ಭಾಗವಹಿಸಿದ್ದರು. ಒಟ್ಟು 730 ಗ್ರಾಮ್ ಗಾಂಜವನ್ನು ವಶ ಪಡಿಸಿಕೊಳ್ಳಲಾಗಿದೆ

ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಬಗ್ಗೆ ಪರಿಶೀಲಿಸಿ ಕ್ರಮ -ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

ಬೆಂಗಳೂರು : ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ನೀಡುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಪ್ರೆಸ್ ಕ್ಲಬ್ ಮತ್ತು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಜಂಟಿಯಾಗಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಅವರು ಗ್ರಾಮೀಣ ಪತ್ರಕರ್ತರ ಬಗ್ಗೆ ನನ್ನ ಬಳಿ ಪ್ರಸ್ತಾಪಿಸಿದ್ದಾರೆ. ಈ ಬಾರಿ ಗ್ಯಾರಂಟಿ ಯೋಜನೆ ಜಾರಿ ಆದ್ಯತೆ ಆಗಿದ್ದರಿಂದ ಇದೆಲ್ಲಾ ಸಾಧ್ಯವಾಗಲಿಲ್ಲ. ಚರ್ಚೆ ಮಾಡಿ ಮುಂದಿನ ಕ್ರಮ ಜರುಗಿಸಲಾಗುವುದು. ಸುಮ್ಮನೆ ನಿಮಗೆ ಭರವಸೆ ಕೊಡುವುದಿಲ್ಲ. ನುಡಿದಂತೆ ನಡೆದು ಮಾಡಿ ತೋರಿಸುತ್ತೇವೆ ಎಂದರು.

ಪತ್ರಕರ್ತರ ಹಲವು ಬೇಡಿಕೆಗಳ ಬಗ್ಗೆ ಗಮನ ಸೆಳೆದಿದ್ದೀರಿ. ಹಂತ ಹಂತವಾಗಿ ಬೇಡಿಕೆ ಈಡೇರಿಸಲಾಗುವುದು. ಈ ಬಗ್ಗೆ ಶಿವಾನಂದ ಅವರ ಜೊತೆಗೆ ಚರ್ಚೆ ಮಾಡಲಾಗುವುದು. ಪತ್ರಕರ್ತರ ಹಿತ ಕಾಯಲು ಸರ್ಕಾರ ಬದ್ದವಾಗಿದೆ ಎಂದರು.

ಪ್ರೆಸ್ ಕ್ಲಬ್ ಜಾಗದ ಬಗ್ಗೆ ಶ್ರೀಧರ್ ಪ್ರಸ್ತಾಪಿಸಿದ್ದು, ಅರಕೆರೆ ಜಯರಾಂ ಗಮನ ಸೆಳೆದಿದ್ದಾರೆ. ನಿಮ್ಮನ್ನು ಯಾರೂ ಒಕ್ಕಲೆಬ್ಬಿಸುವುದಿಲ್ಲ. ನೀವು ಇದೇ ಜಾಗದಲ್ಲಿ ಮುಂದುವರಿಯುತ್ತೀರಿ ಎಂದು ಮುಖ್ಯಮಂತ್ರಿ ಅಭಯ ನೀಡಿದರು.

ನಾನು ಅತ್ಯಂತ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪತ್ರಿಕಾ ದಿನಾಚರಣೆ ಉದ್ಘಾಟಿಸಿದ್ದೇನೆ. ಅನೇಕ ಹಿರಿಯ ಪತ್ರಕರ್ತರನ್ನು ಸನ್ಮಾನಿಸಿದ ಸೌಭಾಗ್ಯ ನನ್ನದು. ನಿಮಗೆಲ್ಲ ಪತ್ರಿಕಾ ದಿನಾಚರಣೆ ಶುಭಾಶಯ ಕೋರುತ್ತೇನೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪತ್ರಕರ್ತರನ್ನು ಯಶಸ್ವಿನಿ ಯೋಜನೆಗೆ ಸೇರಿಸಬೇಕು. ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ನೀಡಬೇಕು. ಪತ್ರಕರ್ತರು ಮತ್ತು ಪತ್ರಿಕೆಗಳ ಸಬಲೀಕರಣಕ್ಕೆ ಆದ್ಯತೆ ನೀಡಬೇಕು ಎಂದು ಗಮನ ಸೆಳೆದರು.

ಚುನಾವಣೆ ಮುಂಚೆ ಕಾಂಗ್ರೆಸ್ ಪ್ರನಾಳಿಕೆಯಲ್ಲಿ ಪತ್ರಕರ್ತರಿಗಾಗಿ 500 ಕೋಟಿ ಮೀಸಲಿಡುವ ಆಶ್ವಾಸನೆ ನೀಡಿದ್ದು ಅಭಿನಂದನಿಯ. ಅದನ್ನು ಕಾರ್ಯಗತ ಮಾಡಲು ಬಜೆಟ್ ನಲ್ಲಿ ಹಣ ನೀಡಬೇಕು ಎಂದು ತಗಡೂರು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಪಿ.ರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರ ಸಾಮಾಜಿಕ ಜವಾಬ್ದಾರಿ ಬಗ್ಗೆ ಹಿರಿಯ ಪತ್ರಕರ್ತರಾದ ಪೂರ್ಣಿಮಾ, ಡಿ.ಉಮಾಪತಿ, ರವಿಹೆಗಡೆ ಅವರು ಮಾತನಾಡಿದರು.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಪ್ರಭಾಕರ್,ಶಾಸಕರಾದ ಅಜಯ್ ಸಿಂಗ್, ಗೋವಿಂದ ರಾಜು, ವಾರ್ತಾ ಇಲಾಖೆ ಆಯುಕ್ತ ಹೇಮಂತ ನಿಂಬಾಳ್ಕರ್, ಪ್ರೆಸ್ ಕ್ಲಬ್ ಅಧ್ಯಕ್ಷ ಶ್ರೀಧರ್, ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ, ಕೆಯುಡಬ್ಲ್ಯೂಜೆ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಕಾರ್ಯದರ್ಶಿ ಸೋಮಶೇಖರ ಕೆರಗೋಡು ಮತ್ತಿತರರು ಹಾಜರಿದ್ದರು.

ಹಿಂದುಳಿದ ಪತ್ರಿಕೆಗಳಿಗೆ ಮುಖ್ಯಮಂತ್ರಿ ಅಭಯ:


ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದ ಪತ್ರಕರ್ತರು ಹಿಂದುಳಿದ ಪತ್ರಿಕೆಗಳಿಗೆ ಜಾಹೀರಾತು ಸೇರಿದಂತೆ ಯೋಜನೆ ಮುಂದುವರಿಸುವಂತೆ ಗಮನ ಸೆಳೆದರು. ಕೂಡಲೇ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದೆ ನನ್ನ ಅಧಿಕಾರಾವಧಿಯಲ್ಲಿಯೇ ಆ ವರ್ಗಕ್ಕೆ ಸೌಲಭ್ಯ ನೀಡಿದ್ದೆ. ತಾರತಮ್ಯ ಮಾಡದೆ ಜಾಹೀರಾತು ನೀಡಿಕೆ ಮತ್ತು ಹಿಂದುಳಿದ ವರ್ಗಗಳ ಪತ್ರಿಕೆಗಳಿಗೂ ಯೋಜನೆ ಮುಂದುವರಿಸುವುದಾಗಿ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಣಿಪುರದಲ್ಲಿ ನಡೆದ ಮಹಿಳೆಯರ ಬೆತ್ತೆಲೆ ಕರ್ಮಕಾಂಡಕ್ಕೆ ಅಹಿಂಸೆ ರಕ್ತಪಾತಕ್ಕೆ ಆಸ್ಪದ ನೀಡಿದಕ್ಕೆ ಕುಂದಾಪುರದಲ್ಲಿ ಬೃಹತ್ ಪ್ರತಿಭಟನೆ


ಕುಂದಾಪುರ:ಜು.14: ಮಣಿಪುರದಲ್ಲಿ ಎರಡುವರೆ ತಿಂಗಳ ಹಿಂದೆ ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿ ಹಿಂಸೆ ನೀಡಿ ಅತ್ಯಾಚಾರ ವೆಸಗಿದ ಮ್ರಗೀಯ ಘಟನೆಗಾಗಿ, ಅಲ್ಲಿಯ ರಕ್ತಪಾತಕ್ಕಾಗಿ ಹಿಂಸೆಗಾಗಿ ಅಲ್ಲಿಯ ಆಸ್ತಿಪಾಸ್ತಿ ನಷ್ಟಕ್ಕಾಗಿ ಅಸಯಪಟ್ಟು ಮಣಿಪುರ ರಾಜ್ಯ ಮತ್ತು ಕೇಂದ್ರ ಸರಕಾರದ ಸೂಕ್ತ ಕ್ರಮ ತೆಗೆದುಕೊಳ್ಳದೆ ನಿರಂತರ ಗಲಭೆ ಕೊಲೆಗಳಿಗೆ ಕಾರಣವಾಗಿದ್ದಕ್ಕೆ ಕುಂದಾಪುರದಲ್ಲಿ ಸಮಾನ ಮನಸ್ಕರಿಂದ, ಸಹಬಾಳ್ವೆ, ಸಮುದಾಯ, ಕಥೊಲಿಕ್ ಸಭಾ, ಮಹಿಳಾ ಸಂಘಟನೆ – ದಲಿತ ಸಂಘರ್ಷ ಸಮಿತಿ ತಾಲೂಕು ಘಟಕ ಕುಂದಾಪುರ ಇವರ ನೇತ್ರತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕುಂದಾಪುರ ವಲಯದ ಎಲ್ಲಾ ಕಡೆಗಳಿಂದ ಜಾತಿ ಭೇದ ಮರೆತು ಜನ ಸೇರಿ ಪ್ರತಿಭಟಿಸಿತು.
ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ಶಶಿಧರ ಹೆಮ್ಮಾಡಿ ಮಾತನಾಡಿ ಮಣಿಪುರದಲ್ಲಿ ನಡೆದ ಘಟನೆ ದೇಶವೇ ತಲೆತಗ್ಗಿಸುವಂತಾಹದ್ದು. ಈ ಘಟನೆಯ ನಡೆದ ಮಾಹಿತಿ ಸ್ಥಳೀಯ ಪೆÇಲೀಸ್, ಸರ್ಕಾರಕ್ಕೆ ಗೊತ್ತಿದ್ದರೂ ಕ್ರಮ ಕೈಗೊಳ್ಳಲಿಲ್ಲ ‘ಮಣಿಪುರದ ಬುಡಕಟ್ಟು ಜನಾಂಗವೊಂದರ ಮೇಲೆ ಭಯಾನಕ ಕೌರ್ಯ ನಡೆದಿದೆ. ಮಹಿಳೆಯರನ್ನು ದೇವರು ಎನ್ನುವ ಬಿಜೆಪಿ ನೇತೃತ್ವದ ಸರ್ಕಾರ, ಪರಿವಾರ ಈ ಘಟನೆಯ ಬಗ್ಗೆ ಕಠಿಣ ನಿಲುವುಗಳನ್ನು ತಳೆಯದಿರುವುದರ ಹಿಂದೆ ಆನೇಕ ಕಾರಣಗಳು ಇವೆ. ಮಣಿಪುರ ಘರ್ಷಣೆಯಲ್ಲಿ 5 ಸಾವಿರಕ್ಕೂ ಹೆಚ್ಚು ಮನೆಗಳನ್ನು ಸುಟ್ಟು ಹಾಕಿದರು. ಲೆಕ್ಕವಿಲ್ಲದಷ್ಟು ಚರ್ಚಗಳನ್ನು ನಾಶ ಮಾಡಿದರು. ಇದರಿಂದ ಸರ್ಕಾರಗಳ ವೈಫಲ್ಯ ಇಲ್ಲಿ ಸ್ಪಷ್ಟವಾಗುತ್ತದೆ’ ಎಂದರು. ಜೂಡಿತ್ ಮೆಂಡೊನ್ಸಾ ಮಾತನಾಡಿ “ಬಿಜೆಪಿ ಸರಕಾರ ಬೇಟಿ ಬಚಾವೊ ಬೇಟಿ ಪಡಾವೊ ಅಂತಾ ಹೇಳುತ್ತದೆ ಆದರೆ ವಾಸ್ತವವಾಗಿ ಮಹಿಳೆಯರಿಗೆ ಇವರಿಂದ ಯಾವ ಮರ್ಯಾದೆಯೂ ಇಲ್ಲ, ಬಿಜೆಪಿ ಆಡಳಿತ ಇರುವಲ್ಲಿ ಹೆಂಗಸರ ಮಾನಹರಣ ಮಾಡಿದಂತಹ ಘಟನೆಗಳಿಂದ ಇದು ಸಾಬಿತು ಆಗಿದೆ’ಎಂದರು.
ವಿಕಾಸ್ ಹೆಗ್ಡೆ ಮಾತನಾಡಿ ಇದು ಬಿಜೆಪಿ ಸರಕಾರದ ಕೃಪಾಪೋಷಿತ ಕುತಂತ್ರವಾಗಿದೆ, ಇದರಲ್ಲಿ ಪ್ರಧಾನ ಮಂತ್ರಿ ಮೌನ ವಹಿಸಿದ್ದು ನೋಡಿದರನೇ ತಿಳಿಯುತ್ತೆ. ಇಂದು ಬಿಜೆಪಿಯಿಂದಾಗಿ ದೇಶದಲ್ಲಿ 10 -15 ಸೇಕಡ ಜನರು ಇತರ ಧರ್ಮದವರ ವಿರುದ್ದ ವೈರತ್ವ ಸಾಧಿಸಿ ಗಲಭೆಗಳನ್ನು ಮಾಡುತ್ತಾರೆ, ಆದರೆ 85 ಸೇಕಡ ಹಿಂದು ಧರ್ಮದವರು ಅನ್ಯ ಧರ್ಮದವರ ಜೊತೆ ಅನ್ಯೋನೆತೆಯಿಂದ ಬಾಳುತ್ತಾರೆ, ನಾವು ಸಾಮರಸ್ಯದಲ್ಲಿ ಬದುಕುತ್ತೆವೆ, ಎನೇ ತೊಂದರೆ ಬಂದರು ಅನ್ಯ ಧರ್ಮದವರ ಜೊತೆ ನಾವಿದ್ದೆವೆ’ ಎಂದು ಹೇಳಿ ಧೈರ್ಯ ತುಂಬಿದರು. ಹುಸೇನ್ ಮತನಾಡಿ ‘ಅವರು ಗರ್ಭಿಣಿಯ ಹೊಟ್ಟೆಯನ್ನು ಬಗೆದು ಆ ಮಗುವನ್ನು ಸುಟ್ಟು ಹಾಕಿದರು, ಅದರ ಅಪರಾಧಿ ಯಾರೆಂದು ಇಂದಿಗೂ ಪತ್ತೆಯಾಗಲಿಲ್ಲ, ಇಂದು ಮಣಿಪುರದಲ್ಲಿ ಒಂದು ಜನಾಂಗದವರ ಮೇಲೆ ವಿಕ್ರತವಾದ ಕ್ರೌವ್ರ್ಯ ಎಸಗಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ತಲೆ ತಗ್ಗಿಸುವಂತೆ ಮಾಡಿದೆ, ಮುಂದಿನ ದಿನಗಳಲ್ಲಿ ಇಂತಹದಕ್ಕೆ ಆಸ್ಪದ ನೀಡದಿರಲು ಕೋಮುವಾದ ಪಕ್ಷಕ್ಕೆ ಮತ ನೀಡಬಾರದು’ ಎಂದರು. ಸಿಪಿಐ ಚಂದ್ರಶೇಖರ ಮಾತನಾಡಿ ‘ಮಣಿಪುರದ ಕುಕ್ಕಿ ಜನಾಂಗ ಬಹಳ ಕಾಡು, ಭೂಮಿ ಬೆಳೆಗಳಿಂದ ಸಮ್ರದ್ದಿಯಾಗಿದೆ, ಇದು ಬಹು ಸಂಖ್ಯಾಕ ಜನರಿಗೆ ಅಸೂಯೆ, ಇವರು ಕುಕ್ಕಿ ಜನರಿಗೆತೊಂದರೆಕೊಡಲು ಬಿಜೆಪಿಯೇ ಕುಮ್ಮಕ್ಕು ನೀಡಿದೆ’ ಎಂದು ಅಲ್ಲಿಯ ವಾಸ್ತಾವ್ಯಂಶ ತಿಳಿಸಿದರು.
ಪ್ರತಿಭಟನೆಯಲ್ಲಿ ಕ್ಯಾಂಡಲ್ ಬೆಳಗಿ ಹಿಂಸಾಚಾರದಲ್ಲಿ ಮ್ರತ ಹೊಂದಿದವರಿಗೆ ಶ್ರದ್ದಾಂಜಲಿ ಅರ್ಪಿಅಸಲಾಯಿತು. ಪ್ರತಿಭಟನೆಯಲ್ಲಿ ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅತೀ ವಂದನೀಯ ಸ್ಟ್ಯಾನಿ ತಾವ್ರೊ ಅವರ ಉಪಸ್ಥಿತಿಯಲ್ಲಿ ವಲಯದ ಎಲ್ಲ ಕ್ರೈಸ್ತ ಧರ್ಮಗುರುಗಳು, ಉಡುಪಿ ಧರ್ಮಪ್ರಾಂತ್ಯದ ಧರ್ಮಗುರುಗಳು, ಹಲವಾರು ಧರ್ಮಭಗಿನಿಯರು, ಸಹಬಾಳ್ವೆಯ ಸಂಚಾಲಕ ರಫೀಕ್, ಮಂಜು ಕಾಳಾವರ, ರಫಿಕ್ ಸಹಬಾಳ್ವೆ, ದಲಿತ ಸಂಘರ್ಷ ತಾಲೂಕು ಸಮಿತಿ ಅಧ್ಯಕ್ಶ ಮಂಜುನಾಥ ಗಿಳಿಯಾರ್, ಕುಂದಾಪುರ ವಲಯದ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ, ಮಾನವ ಬಂಧುತ್ವ ವೇದಿಕೆ ಕುಂದಾಪುರ ಘಟಕದ ಸಂಚಾಲಕ ಬರ್ನಾಡ್ ಡಿಕೋಸ್ತಾ, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ದೇವಕಿ ಸಣ್ಣಯ್ಯ, ಸಿಪಿಎಮ್ ಅಧ್ಯಕ್ಷರಾದ ಹೆಚ್ ನರಸಿಂಹ, ಪುರಸಭಾ ಸದಸ್ಯರಾದ ಚಂದ್ರಶೇಖರ ಖಾರ್ವಿ, ಪ್ರಭಾವತಿ ಶೆಟ್ಟಿ, ಅಬ್ಬು ಅಹ್ಮದ್, ಅಶ್ಬಕ್. ಕಾಂಗ್ರೆಸಿನ ಚಂದ್ರ ಅಮೀನ್, ಆಶಾ ಕರ್ವಾಲ್ಲೊ, ಕೇಶವ್ ಭಟ್, ರೋಶನ್ ಶೆಟ್ಟಿ, ರೇವತಿ ಶೆಟ್ಟಿ, ಗಂಗಾಧರ್ ಶೆಟ್ಟಿ, ಅಭಿಜಿತ್ ಪೂಜಾರಿ, ಗಣೇಶ್ ಶೇರೆಗಾರ್, ಶೋಭಾ ಸಚ್ಚಿದಾನಂದ, ಜ್ಯೋತಿ ನಾಯ್ಕ್, ಕುಮಾರ್ ಖಾರ್ವಿ, ಜ್ಯೋತಿ, ಹಾರೋನ್ ಸಾಹೇಬ್, ಅಶೋಕ್ ಸುವರ್ಣ, ರೋಶನ್ ಬರೆಟ್ಟೊ, ಮುನಾಫ್, ಶಾಲೆಟ್ ರೆಬೆಲ್ಲೊ, ಯಾಸಿನ್ ಹೆಮ್ಮಾಡಿ, ಶಾಂತಿ ಪಿರೇರಾ, ಅಬ್ದುಲ್ಲಾ ಕೋಡಿ, ಶಿವಕುಮಾರ್ ಸಮುದಾಯ ಅಧ್ಯಕ್ಷರಾದ ಸದಾನಂದ ಬೈಂದೂರು, ಸದಸ್ಯರಾದ ಉದಯ್ ಗಾಂವ್ಕರ್, ವಾಸುದೇವ ಗಂಗೇರ್, ಬಾಲಕ್ರಷ್ಣ ಮುಂತಾದ ಪ್ರಮುಖರು ಹಾಜರಿದ್ದರು.
ಸಹಬಾಳ್ವೆ ಕುಂದಾಪುರದ ಸಂಚಾಲಕರಾದ ವಿನೋದ್‍ಕ್ರಾಸ್ಟೊ ಪ್ರಸ್ತಾವಿಕ ಮಾತುಗಳನ್ನಾಡಿ, ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ನೀಡಿದರು.

ಕೋಲಾರ ; ಭೌದ್ಧಿಕ ಆಸ್ತಿ ಹಕ್ಕುಗಳ ಅರಿವು ಕಾರ್ಯಕ್ರಮ

ಕೋಲಾರ:- ನಗರದ ಶ್ರೀ ದೇವರಾಜ್ ಅರಸ್ ಕಾಲೇಜ್ ಆಫ ನರ್ಸಿಂಗ್ ಸಂಶೋಧನಾ ಮತ್ತು ಅಭಿವೃದಿ ಇಲಾಖೆ ಮತ್ತು ಸಹಯೋಗದಿಂದ ಶ್ರೀ ದೇವರಾಜ್ ಅರಸ್ ವಿಶ್ವವಿದ್ಯಾಲಯರವರ ಶೈಕóಣಿಕ ಹಿರಿಯ ಶಿಕ್ಷಣ ಸಂಶೋಧನಾ ಕೆಂದ್ರ ಟಮಕ ಕೋಲಾರ ಸಂಸ್ಥೆಯವರ ಕಡೆಯಿಂದ ಭೌದ್ದಿಕ ಆಸ್ತಿ ಹಕ್ಕುಗಳ ಅರಿವು ಮಂಡಿಸುವ ಬಗ್ಗೆ ಕುರಿತು ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಲೀಗಲ್ ಅಡೈಸರ್ ಸ್ಥಾಪಕರು ಹಾಗೂ ಸಿಇಓ ಆಫ್ ಲೈಫ್ಮ ಇಂಟಲೇಕಟ್ ಕನ್ಸಲ್ಟೇನ್ಸಿ (ಪ್ರೈ,ಲಿ.) ಲಿಪಿಕಾ ಸಾಹು ಗಿಡಕ್ಕೆ ನೀರುಣಿಸುವ ಮೂಲಕ ಉದಾಟಿಸಿ, ಭೌದ್ದಿಕ ಆಸ್ತಿ ಹಕ್ಕುವಿನ ಬಗ್ಗೆ ಮಾಹಿತಿ ನೀಡಿದರು.
ಸಂಶೋಧನಾ ನಿರ್ದೇಶಕ ಡಾ. ಅಜೀಂ, ಡಾ. ಮಾದವಿ (ಪೋಷಣ ಇಲಾಖೆ), ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿಜಯಲಕ್ಷ್ಮಿ, ಮೂರನೇ ವರ್ಷದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಎಲ್ಲಾ ಭೋಧಕ ವೃಂದದವರು ಪಾಲ್ಗೊಂಡಿದ್ದರು.