ಉಡುಪಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣ: ಪ್ರಿಯಾಂಕ ಖರ್ಗೆಯವರ ಹೇಳಿಕೆಗೆ ಅವರ ವರ್ಚಸ್ಸನ್ನು ಕುಗ್ಗಿಸುವಂತಹ ಪೋಸ್ಟ್ ತನಿಖೆಗಾಗಿ ಕಾಂಗ್ರೆಸಿನಿಂದ ದೂರು

ಉಡುಪಿಯ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ಪ್ರಿಯಾಂಕ ಖರ್ಗೆ ಅವರ ಹೇಳಿಕೆಯನ್ನು ಗುರಿಯಾಗಿರಿಸಿಕೊಂಡು ಕಿಡಿಗೇಡಿಗಳು ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಎಂಬ ಹೆಸರನ್ನು ಬಳಸಿ ಖರ್ಗೆಯವರ ವರ್ಚಸ್ಸನ್ನು ಕುಗ್ಗಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟೊಂದನ್ನು ಹರಿಯ ಬಿಟ್ಟಿರುತ್ತಾರೆ ˌಈ ಹೇಳಿಕೆಗಳಿಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೂ ಯಾವುದೇ ಸಂಬಂಧವಿಲ್ಲ ˌ ಈ ಹಿನ್ನೆಲೆಯಲ್ಲಿ ಮಾನ್ಯ ಸಚಿವರ ವರ್ಚಸ್ಸಿಗೆ ಧಕ್ಕೆ ತರಲು ಸುಳ್ಳು ಹೇಳಿಕೆ ನೀಡಿ ಜಾಲತಾಣದಲ್ಲಿ ಹರಿಯಬಿಟ್ಟ ಕಿಡಿಗೇಡಿಗಳನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರ ನೇತೃತ್ವದಲ್ಲಿ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ರೋಷನ್ ಶೆಟ್ಟಿ ಅವರು ಮನವಿಯನ್ನು ಅರ್ಪಿಸಿದರು
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಹರೀಶ್ ಶೆಟ್ಟಿ ಪಂಗಾಳˌ ಭಾಸ್ಕರ್ ರಾವ್ ಕಿದಿಯೂರು ˌ ಬಿ.ಕುಶಲ ಶೆಟ್ಟಿ ˌ ಪ್ರಖ್ಯಾತ್ ಶೆಟ್ಟಿ ˌಯತೀಶ್ ಕರ್ಕೇರ ಉದ್ಯಾವರ ನಾಗೇಶ್ ಕುಮಾರ್, ಜಯಕುಮಾರ್ ಹಾಗೂ NSUI ‘ IYC ಪದಾಧಿಕಾರಿಗಳು ಉಪಸ್ಥಿತಿಯಲ್ಲಿದ್ದರು
.

ಅರಸು ನರ್ಸಿಂಗ್ ಕಾಲೇಜಿನ ನೈತಿಕ ಸಮಿತಿ ಸಭೆ18 ಸಂಶೋಧನಾ ವರದಿಗಳ ನೈತಿಕ ಅನುಮೋದನೆ

ಕೋಲಾರ:- ನಗರದ ಹೊರವಲಯದ ಶ್ರೀ ದೇವರಾಜ್ ಅರಸು ಕಾಲೇಜ್ ಆಫ್ ನರ್ಸಿಂಗ್ ನೈತಿಕ ಸಮಿತಿ ಸಭೆಯು ಶುಕ್ರವಾರ ನರ್ಸಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ನರ್ಸಿಂಗ್ ಕಾಲೇಜಿನ ಬೋಧಕ ಸಿಬ್ಬಂದಿ, ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ನರ್ಸಿಂಗ್ ಪದವಿ ವಿದ್ಯಾರ್ಥಿಗಳು ವಿವಿಧ ವಿಚಾರಗಳಲ್ಲಿ ಸಂಶೋಧನೆ ನಡೆಸಿದ್ದ 18 ಸಂಶೋಧನಾ ವರದಿಗಳನ್ನು ಪರಿಶೀಲಿಸಿ ಅನುಮೋದಿಸಲಾಯಿತು.
ಎಲ್ಲಾ ಸಂಶೋಧನಾ ವರದಿಗಳು ನೈತಿಕ ಮೌಲ್ಯಗಳನ್ನು ಒಳಗೊಂಡಂತೆ, ಉತ್ತಮ ಗುಣಮಟ್ಟ ಹಾಗೂ ಸಾರ್ವಜನಿಕರಿಗೆ ಉಪಯೋಗಕಾರಿಯಾಗುವಂತದ್ದೆಂದು ಸಮಿತಿಯ ಸದಸ್ಯರುಗಳು ಅಭಿಪ್ರಾಯಪಟ್ಟರು.
ಸಂಶೋಧನಾ ವರದಿಗಳನ್ನು ಮತ್ತಷ್ಟು ಉತ್ತಮಗೊಳಿಸುವ ವಿಚಾರದಲ್ಲಿ ಸಮಿತಿಯ ಸದಸ್ಯರು ಹಲವಾರು ಸಲಹೆಗಳನ್ನು ನೀಡಿದರು.
ಸಮಿತಿಯ ಸಭೆಯಲ್ಲಿ ನಿಮ್ಹಾನ್ಸ್ ನರ್ಸಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಪ್ರಶಾಂತಿ, ನಂದಿ ಮೆಡಿಕಲ್ ಕಾಲೇಜಿನ ಉಪನ್ಯಾಸಕರಾದ ಡಾ.ಆಶಾ, ಪತ್ರಕರ್ತ ಕೆ.ಎಸ್.ಗಣೇಶ್, ಆನಂದಮಾರ್ಗದ ಚಿನ್ಮಯಾನಂದ ಸ್ವಾಮೀಜಿ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ವಿಜಯಲಕ್ಷ್ಮಿ, ಉಪ ಪ್ರಾಂಶುಪಾಲ ಡಾ.ಲಾವಣ್ಯ ಸುಭಾಷಿಣಿ ಹಾಜರಿದ್ದರು.

ಮಂಗಳೂರು: ಸೇಂಟ್ ಲಾರೆನ್ಸ್ ಚರ್ಚ್, ಬೋಂದೆಲ್ ವಾರ್ಷಿಕ ಹಬ್ಬವನ್ನು ಆಗಸ್ಟ್ 10, 2023 ರಂದು ಆಚರಿಸರಣೆ / Mangaluru : St Lawrence Church,Bondel to celebrate Annual Feast on 10th Aug 2023

ಮಂಗಳೂರು, ಜು.30: ಬೋಂದೆಲ್‌ನ ಸೇಂಟ್ ಲಾರೆನ್ಸ್ ಚರ್ಚ್‌ನ ವಾರ್ಷಿಕ ಹಬ್ಬವನ್ನು 10 ಆಗಸ್ಟ್ 2023 ರಂದು ಆಚರಿಸಲಾಗುತ್ತದೆ. ವಾರ್ಷಿಕ ಹಬ್ಬದ ಹಿಂದಿನ ಒಂಬತ್ತು ದಿನಗಳ ನೊವೆನಾ ಆಗಸ್ಟ್ 1, 2023 ರಂದು ಮಂಗಳವಾರ ಪ್ರಾರಂಭವಾಗುತ್ತದೆ. ಆಗಸ್ಟ್ 1 ರಿಂದ ಆಗಸ್ಟ್ 9 ರವರೆಗೆ ಸಂಜೆ ಸಾಮೂಹಿಕ ಸಂಜೆ 5.30ಕ್ಕೆ ಎಲ್ಲಾ ಭಕ್ತರಿಗೆ ನೀಡಲಾಗುವುದು
ಆಗಸ್ಟ್ 1 ರಂದು ಸಂಜೆ 5.00 ಗಂಟೆಗೆ ಚರ್ಚ್ ಆವರಣದಲ್ಲಿ ಸೇಂಟ್ ಲಾರೆನ್ಸ್ ಧ್ವಜಾರೋಹಣ ನಡೆಯಲಿದೆ. . Rev. Msgr. ಫರ್ಡಿನಾಂಡ್ ಗೊನ್ಸಾಲ್ವಿಸ್ ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್. ಧ್ವಜಾರೋಹಣ ಮಾಡುವರು. Rev. Msgr. ಫರ್ಡಿನಾಂಡ್ ಗೊನ್ಸಾಲ್ವಿಸ್ ಅವರು ಸಾಮೂಹಿಕವಾಗಿ ಆಚರಿಸಲಿದ್ದಾರೆ.
ಆ.10ರಂದು ಬೆಳಗ್ಗೆ 10.30ಕ್ಕೆ ಬಳ್ಳಾರಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ. ಡಾ.ಹೆನ್ರಿ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ಹಾಗೂ ಸಂಜೆ 6.00ಕ್ಕೆ ಉಡುಪಿಯ ಕುಲಪತಿಗಳಾದ ವಂ. ಧರ್ಮಪ್ರಾಂತ್ಯ.
ಆಗಸ್ಟ್ 1, 2023 ರಿಂದ ಪ್ರಾರಂಭವಾಗುವ ಮತ್ತು ಆಗಸ್ಟ್ 10, 2023 ರಂದು ಹಬ್ಬದೊಂದಿಗೆ ಕೊನೆಗೊಳ್ಳುವ ಎಲ್ಲಾ ಭಕ್ತಿಯ ದಿನಗಳಲ್ಲಿ 1 ಆಗಸ್ಟ್ ನಿಂದ 9 ಆಗಸ್ಟ್ ವರೆಗೆ ಭಕ್ತರಿಗೆ ಬ್ರೆಡ್ ಆಶೀರ್ವಾದ ಮಾಡಲಾಗುತ್ತದೆ. ನಗರದಾದ್ಯಂತ ಭಕ್ತರು ಶ್ರದ್ಧಾಭಕ್ತಿಯಿಂದ ದೇಗುಲಕ್ಕೆ ಬರುತ್ತಾರೆ ಮತ್ತು ಅವರು ಪ್ರಾರ್ಥಿಸುತ್ತಾರೆ. ದೇವಾಲಯದಲ್ಲಿ ನಂಬಿಕೆಯ ಆಳವಾದ ಕೊಡುಗೆ.
ನೊವೆನಾ ಸಮಯದಲ್ಲಿ, ಎಲ್ಲಾ ಚರ್ಚ್ ಕಾರ್ಯಕ್ರಮಗಳನ್ನು ಪ್ಯಾರಿಷ್ ಪಾದ್ರಿ ರೆವ್ ಫಾದರ್ ಆಂಡ್ರ್ಯೂ ಲಿಯೋ ಡಿಸೋಜಾ ಮತ್ತು ಶ್ರೀ ಪ್ರಕಾಶ್ ಪಿಂಟೋ, ಸಂಚಾಲಕರು, ಶ್ರೈನ್ ಕಮಿಟಿ ಅವರ ಮಾರ್ಗದರ್ಶನದಲ್ಲಿ ನಡೆಸಲಾಗುವುದು.
ಆಗಸ್ಟ್ 10, 2023 ರ ಬುಧವಾರದಂದು ಬೆಳಿಗ್ಗೆ 10.30 ಮತ್ತು ಸಂಜೆ 6.00 ಗಂಟೆಗೆ ನಡೆಯುವ ವಾರ್ಷಿಕ ಹಬ್ಬಕ್ಕೆ ಎಲ್ಲರನ್ನು ಹೃತ್ಪೂರ್ವಕವಾಗಿ ಆಹ್ವಾನಿಸಲಾಗಿದೆ.
“ಭಕ್ತರ ಸದ್ಭಾವನೆ ಮತ್ತು ಸಾಮೂಹಿಕ ಕಾಣಿಕೆಗಳನ್ನು ಕೃತಜ್ಞತೆಯಿಂದ ಸ್ವೀಕರಿಸಲಾಗುವುದು. ಧಾರ್ಮಿಕ ಸ್ಟಾಲ್‌ಗಳಲ್ಲಿ ಆಶೀರ್ವಾದ ಲೇಖನಗಳು ಲಭ್ಯವಿರುತ್ತವೆ. ಭಕ್ತರ ಸದ್ಭಾವನೆ ಮತ್ತು ಸಾಮೂಹಿಕ ಕಾಣಿಕೆಗಳನ್ನು ಕೃತಜ್ಞತೆಯಿಂದ ಸ್ವೀಕರಿಸಲಾಗುವುದು. ಧಾರ್ಮಿಕ ಸ್ಟಾಲ್‌ಗಳಲ್ಲಿ ಆಶೀರ್ವಾದ ಲೇಖನಗಳು ಲಭ್ಯವಿರುತ್ತವೆ.

“ಪವಾಡದ ಪುರುಷ ಸೇಂಟ್ ಲಾರೆನ್ಸ್ ನಮ್ಮೆಲ್ಲರನ್ನು ಆಶೀರ್ವದಿಸಲಿ.”

Mangaluru : St Lawrence Church , Bondel to celebrate Annual Feast on 10th Aug 2023

Mangaluru, Jul 30 : The Annual Feast of St Lawrence Church , Bondel will be celebrated on 10th Aug 2023. The Nine-day Novena prior to the Annual feast will begin on Tuesday, August 1st 2023. From 1st Aug to 9th August , evening  mass at 5.30 p.m.  will be offered for all the devotees 

On 1st August, there will be the unfurling of St Lawrence’ flag here at the church premises at 5..00 p.m. . Rev. Msgr. Ferdinand Gonsalves  Vicar General of the Diocese of Udupi. will hoist the flag . Rev. Msgr. Ferdinand Gonsalves  will be celebrating the mass.

The Festal Mass on Aug 10th at 10:30 a.m. will be presided over by Most Rev. Dr Henry Dsouza, Bishop of Bellary Diocese and at 6:00 p.m., will be presided over by Rev. Dr Roshan D’Souza .Chancellor of Udupi Diocese.

On all the days of devotion this year starting from August 1st 2023 and ending with the feast on August 10 2023 devotees will be blessed bread from 1st Aug to 9th Aug .. Devotees across the city come to the shrine with great faith and they pray for an in-depth gift of faith in the shrine. 

During the novena’s, all the church programme’s will be conducted under the guidance of Parish Priest Rev Fr Andrew Leo D’Souza, & Mr. Prakash Pinto, Convener, Shrine Committee.

All are cordially invited to the annual feast which will be held on Wednesday, 10th of August 2023 at 10.30 am & evening at 6.00 pm.

The devotees’ goodwill offerings and Mass offerings will be gratefully accepted. Blessed articles will be available in the religious stalls.

The devotees’ goodwill offerings and Mass offerings will be gratefully accepted. Blessed articles will be available in the religious stalls.

May St Lawrence, the miracle worker, bless us all.”

ಹಡಿಲು ಭೂಮಿಯಲ್ಲಿ ಕೃಷಿ ಕಾರ್ಯ ನಡೆಸಿದ ಕ್ರಿಯಾಶೀಲಾ ಯುವಕನಿಗೆ ಗೌರವಾರ್ಪಣೆ

ನಂದಳಿಕೆ: ಸುಮಾರು ವರ್ಷಗಳಿಂದ ತನ್ನ ಪರಿಸರದ ಹಡಿಲು ಬಿದ್ದ ಕೃಷಿ ಭೂಮಿಯನ್ನು ಪುನಶ್ಚೇತನ ಗೊಳಿಸಿ ಬೇಸಾಯ ಮಾಡಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿರುವ ಅಂತರಾಷ್ಟ್ರೀಯ ಸಂಘ ಸಂಸ್ಥೆಗಳಲ್ಲಿ ಸೇವೆಯನ್ನು ಸಲ್ಲಿಸಿರುವ ಕ್ರಿಯಾಶೀಲ ಯುವಕ ಸುಬಾಸ್ ಕುಮಾರ್ ನಂದಳಿಕೆ ಇವರನ್ನು ಲಯನ್ಸ್ ಕ್ಲಬ್ಬಿನ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿಮಾಜಿ ಜಿಲ್ಲಾ ಲಯನ್ಸ್ ಗವರ್ನರ್ ಎನ್ ಎಂ ಹೆಗಡೆ  ಮಾತನಾಡಿ ಯುವಕರು ಕೃಷಿಯಲ್ಲಿ ತೊಡಗಿಗೊಂಡಾಗ ಕೃಷಿಯಲ್ಲಿ ಪ್ರಗತಿ ಕಂಡೊಳ್ಳುಕೊಳ್ಳಲು ಸಾಧ್ಯ .ಸಂಘ ಸಂಸ್ಥೆಗಳು ಯುವಕೃಷಿಕರನ್ನು ಗೌರವಿಸಬೇಕು .ಇನ್ನು ಹೆಚ್ಚಿನ ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಕೃಷಿಯಲ್ಲಿ ಪ್ರಗತಿ ಕಂಡು ದೇಶದ ಅಭಿವೃದ್ಧಿಯಲ್ಲಿಕೈ ಜೋಡಿಸಲು ಸಾಧ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ಮಣ್ಣು ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ವಿಶ್ವನಾಥ್ ಪಾಟ್ಕರ್ ವಹಿಸಿದ್ದು ನಿವೃತ್ತ ಪ್ರಾಂಶುಪಾಲರು ಮತ್ತು ಜೆ ಸಿ ಚಾರ್ ಟೇಬಲ್ ಟ್ರಸ್ಟ್ ನ ಗೌರವಾಧ್ಯಕ್ಷರಾಗಿರುವ ಜಯಂತ್ ರಾವ್ ಪಿಲಾರ್ .ಲಕ್ಷ್ಮಿ ಜನಾರ್ಧನ ದೇವಸ್ಥಾನದ ಆಡಳಿತ ಮುಖ್ಯಸ್ಥರು ಆಗಿರುವ ರೋ.ತುಕಾರಾಂ ಶೆಟ್ಟಿ.ಲಯನ್ ರಾಮನಾಥ ಶೆಣೈ.ಸರೋಜಿನಿ ಶೆಟ್ಟಿ. ಸೆಂಚುರಿ ಕ್ಲಬ್ಬಿನ ಅಧ್ಯಕ್ಷರಾಗಿರುವ  ಸುಜನ್ ಕ್ಯಾಸ್ಟಿ ಲಿನೋ ಮತ್ತುಲಿಯೋ ಕ್ಲಬ್ಬಿನ ಅಲನ್ಸ್    ಕ್ಯಾಸ್ಟಿಲನೋ    ಮತ್ತಿತರರು ಉಪಸ್ಥಿತರಿದ್ದರು

ಮಹಿಳಾ ಕ್ರೀಡಾಪಟುಗಳು ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ತೊರೀಸಿ ವಿಶ್ವ ಕ್ರೀಡೆಗಳಲ್ಲಿ ದೇಶದ ಹೆಗ್ಗಳಿಕೆಗೆ ಕಾರಣರಾಗುತ್ತಿದ್ದಾರೆ: ಯಡಗಾನಪಲ್ಲಿ ವೈ.ಬಿ.ರವಿ

ಶ್ರೀನಿವಾಸಪುರ : ಇತ್ತೀಚಿನ ದಿನಗಳಲ್ಲಿ ಪುರಷ ಕ್ರೀಡಾಪಟುಗಳಿಗಿಂತ, ಮಹಿಳಾ ಕ್ರೀಡಾಪಟುಗಳು ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿ ಇದ್ದು, ಅದರಂತೆ ವಿಶ್ವ ಕ್ರೀಡೆಗಳಲ್ಲಿ ದೇಶದ ಹೆಗ್ಗಲಿಕೆ ಕಾರಣರಾಗುತ್ತಿದ್ದಾರೆ ಎಂದು ದಾನಿ ಯಡಗಾನಪಲ್ಲಿ ವೈ.ಬಿ.ರವಿ ಹೇಳಿದರು.
ತಾಲೂಕಿನ ರಾಯಲ್ಪಾಡು ಗ್ರಾಮದ ಸರ್ಕಾರಿ ಪ್ರೌಡಶಾಲೆಯಲ್ಲಿ ಹಮ್ಮಿಕೊಳ್ಳಲಾದ ಹೋಬಳಿ ಮಟ್ಟದ ಕ್ರೀಡಾಕೂಟಗಳಲ್ಲಿನ ಮಹಿಳಾ ವಿಭಾಗದ ಕ್ರೀಡಾಕೂಟಗಳಿಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿನೀಯರು ಒಳ್ಳೇಯ ಚಾಕುಚಕೈತೆ ಇರುವಂತಹ ಪ್ರತಿಭೆ ಇರುವಂತಹ ವಿದ್ಯಾರ್ಥಿನೀಯರಿದ್ದು, ಅಂತಹ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ , ಮಾರ್ಗದರ್ಶನವನ್ನು ನೀಡಿದಾಗ ತಾಲೂಕು, ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹೆಸರು ತರುವಂತವಾರಗುತ್ತಾರೆ ಎಂದು ಹೇಳುತ್ತಾ ಕ್ರೀಡಾಪಟುಗಳಿಗೆ ಶುಭಹಾರೈಸಿದರು.
ಮುಖಂಡ ಯರ್ರಂವಾರಿಪಲ್ಲಿ ಶಿವಾರೆಡ್ಡಿ ಮಾತನಾಡಿ ಮಾನಸಿಕ , ದೈಹಿಕ ಸದೃಡತೆ ಕಾಯ್ದುಕೊಳ್ಳಲು ಹಾಗೂ ದೇಹದ ಕ್ರೀಯಶೀಲತೆಯನ್ನು ಹೆಚ್ಚಿಸಲು ಸಹಕಾರಿಯಾಗುವ ಕ್ರೀಡೆಗಳು ಪ್ರತಿಯೊಬ್ಬರ ದಿನನಿತ್ಯ ಚಟುವಟಿಕೆಯಾಗಬೇಕಾಗಿದೆ ಎಂದು ಸಲಹೆ ನೀಡಿದರು.
ಗ್ರಾ.ಪಂ ಮಾಜಿ ಸದಸ್ಯ ಸಿಮೆಂಟ್‍ನಾರಾಯಣಸ್ವಾಮಿ, ಸಿಆರ್‍ಪಿ ವರದರೆಡ್ಡಿ, ಶಿಕ್ಷಕರಾದ ಎಂ.ಕೆ.ವೆಂಕಟರಮಣ, ಮಹೇಶ್ ,ರಾಮಾಂಜಿ, ಸುದರ್ಶನ, ಭಾಗ್ಯಲಕ್ಷ್ಮಿ ಇದ್ದರು.

ಆಟ-ಪಾಠಗಳು ಒಂದೇ ನಾಣ್ಯದ ಎರಡು ಮುಖಗಳಂತೆ:ಗ್ರಾ.ಪಂ. ಅಧ್ಯಕ್ಷೆ ಅರುಣವೆಂಕಟ್

ಶ್ರೀನಿವಾಸಪುರ 2 : ಆಟ-ಪಾಠಗಳು ಒಂದೇ ನಾಣ್ಯದ ಎರಡು ಮುಖಗಳಂತೆ . ಕ್ರೀಡೆಗಳಿಂದ ಸದೃಡವಾದ ಮನಸ್ಸುನೊಂದಿಗೆ ಸದೃಡವಾದ ದೇಹವಾಗಲು ಸಾಧ್ಯ ಎಂದು ಗ್ರಾ.ಪಂ. ಅಧ್ಯಕ್ಷೆ ಅರುಣವೆಂಕಟ್ ಹೇಳಿದರು.
ಗ್ರಾಮದ ಸರ್ಕಾರಿ ಪ್ರೌಡಶಾಲೆಯ ಆವರಣದಲ್ಲಿ ಶುಕ್ರವಾರ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿನ ದೇಶೀಯ ಆಟಗಳಿಗೆ ಚಾಲನೆ ನೀಡಿ ಮಾತನಾಡಿದರು.
ಸ್ನೇಹ, ಸೌಹಾರ್ದವನ್ನು ಬೆಸೆಯುವ ಸೇತುವೆ ಕ್ರೀಡೆ ಇದನ್ನು ಅರಿತು ಎಲ್ಲರೂ ಸಂಘಟಿತರಾಗಿ ಕ್ರೀಡೆಯಲ್ಲಿ ಪಾಲ್ಗುಂಡು , ಸೋಲು-ಗೆಲವನ್ನು ಸಮವಾಗಿ ಸ್ವೀಕರಿಸಿ ಎಲ್ಲರು ಒಗ್ಗಟಿನಿಂದ ಆಟವಾಡಬೇಕೆಂದರು.
ಮುಖಂಡರಾದ ಸಿ.ಎಸ್.ವೆಂಕಟರಮಣಪ್ಪ ಮಾತನಾಡಿ ಯಾಂತ್ರೀಕೃತ ಜೀವನದಿಂದ ಪ್ರಸ್ತುತದ ದಿನಗಳಲ್ಲಿ ದೇಹ ದಂಡನೆ ಇಲ್ಲದೆ ಕೇವಲ ಬುದ್ದಿ ಶಕ್ತಿಗೆ ಮಾತ್ರ ಹೆಚ್ಚು ಶ್ರಮ ನೀಡುತ್ತಿರುವುದರಿಂದ ಮಾನಿಸಿಕ ಖಿನ್ನತೆ ಒಳಗಾಗುತ್ತಿದ್ದಾರೆ. ಆದ್ದರಿಂದ ದಿನನಿತ್ಯದ ಚಟುವಟಿಕೆಗಳಲ್ಲಿ ಕ್ರೀಡೆಯನ್ನು ಒಂದು ಭಾಗವನ್ನಾಗಿಸಿಕೊಳ್ಳುವಂತೆ ಕರೆನೀಡಿದರು.
ಗ್ರಾ.ಪಂ.ಮಾಜಿ ಸದಸ್ಯ ಸಿಮೆಂಟ್‍ನಾರಾಯಣಸ್ವಾಮಿ, ಹೋಬಳಿ ಕ್ರೀಡಾಕೂಟಗಳ ಸಮನ್ವಯ ಸಮಿತಿ ಗೌರವಾಧ್ಯಕ್ಷ ಕೆ.ಎನ್.ರಾಮಚಂದ್ರ, ಅಧ್ಯಕ್ಷ ಪಿ.ಮಾರಣ್ಣ, ಸಿಆರ್‍ಪಿಗಳಾದ ವರದರೆಡ್ಡಿ, ಜಯರಾಮರೆಡ್ಡಿ, ಸೈಯದ್, ದೈಹಿಕ ಶಿಕ್ಷಕ ಕೃಷ್ಣಯ್ಯ, ಶಿಕ್ಷಕರಾದ ಮಂಜೇಶ್, ತಪಸ್ವಿ ಶಾಲೆ ಬಾಬು, ಕಾವೇರಿ ಶಾಲೆ ಕಾರ್ಯದರ್ಶಿ ಮಹೇಶ್ ಇತರರು ಇದ್ದರು.

ಬೀಜಾಡಿ ರೋಟರಿ ಸಮುದಾಯ ದಳ ಪದಪ್ರದಾನ ಸಮಾರಂಭ


ಬೀಜಾಡಿ:ರೋಟರಿ ಸಮುದಾಯದಳ ಮೂಲಕ ಗ್ರಾಮೀಣ ಭಾಗದಲ್ಲಿ ಸಮಾಜಸೇವಾ ಚಟುವಟಿಕೆ ಮಾಡಬಹುದಾಗಿದ್ದು, ಇದರಿಂದ ಸಮಾಜದ ಅಶಕ್ತರಿಗೆ ಸಹಾಯವಾಗಲಿದೆ ಎಂದು ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಅಧ್ಯಕ್ಷ ಜಗನ್ನಾಥ ಮೊಗೇರ ಹೇಳಿದರು.
ಅವರು ಬೀಜಾಡಿ-ಗೋಪಾಡಿ ರೋಟರಿ ಸಮುದಾಯದಳ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ್ ಹೆಬ್ಬಾರ್ ಶುಭ ಹಾರೈಸಿದರು. ರೋಟರಿ ಸಮುದಾಯ ದಳದ ಹಿಂದಿನ ಅಧ್ಯಕ್ಷ ಬಿ.ಜಿ.ನಾಗರಾಜ್ ಅನಿಸಿಕೆ ಹಂಚಿಕೊಂಡರು. ನೂತನ ಅಧ್ಯಕ್ಷ ಪ್ರದೀಪ್ ದೇವಾಡಿಗ,ಕಾರ್ಯದರ್ಶಿ ಪಾಂಡುರಂಗ,ಕೋಶಾಧಿಕಾರಿ ಗಜೇಂದ್ರ ಮೊಗವೀರ,ಕ್ಲಬ್ ಸರ್ವಿಸ್ ಗಿರೀಶ್ ಕೆ.ಎಸ್.,ವೃತ್ತಿಪರ ಸೇವೆ ಸುಭಾಷ್ ಪುತ್ರನ್,ಅಂತರಾಷ್ಟ್ರೀಯ ಸೇವೆ ವಿವೇಕ್ ಹೆಬ್ಬಾರ್,ಸೋಶಿಯಲ್ ಸರ್ವಿಸ್ ಗಿರೀಶ್ ಆಚಾರ್ಯ,ದಂಡಪಾಣಿ ನಿಚ್ಚಿತ್ ಭಂಡಾರಿ ಇವರಿಗೆ ಪದಪ್ರದಾನ ಮಾಡಲಾಯಿತು.
ವೇದಿಕೆಯಲ್ಲಿ ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷ ಮಹೇಶ್ ಮೊಗವೀರ, ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಹಿಂದಿನ ಕಾರ್ಯದರ್ಶಿ ರೋನಿ ಡಿ ಉಪಸ್ಥಿತರಿದ್ದರು.
ಉಪನ್ಯಾಸಕ ಪಾಂಡುರಂಗ ಸ್ವಾಗತಿಸಿದರು.ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರ ಬಿ.ಎನ್ ವಂದಿಸಿದರು.ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನಗಳ ಕಾಲ ಭಾರಿಮಳೆಯಾಗಲಿದೆ

ಬೆಂಗಳೂರು, ಜು.೨೮: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದ್ದು, ಇನ್ನೂ ಎರಡು ದಿನಗಳ ಕಾಲ ಭಾರಿ
ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ 14 ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ವರುಣಾರ್ಭಟ ಮುಂದುವರೆಯಲಿದೆ. ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡಿನ ಹಲವೆಡೆಗಳಲ್ಲಿ ಭಾರಿ ಮಳೆಯಾಗಲಿದೆ.

ದಕ್ಷಿಣ ಕನ್ನಡ, ಉಡುಪಿ,ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೆಳಗಾವಿ, ಬೀದರ್‌, ಕಲಬುರ್ಗಿ,
ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಲಿದೆ ಎಂದು ತಿಳಿಸಲಾಗಿದೆ.

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಮತ್ತು ಕಲಬುರ್ಗಿ, ಬೀದರ್‌ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ.

ಗೃಹರಕ್ಷಕರಾಗಿ ನಮ್ಮದು ನಿಸ್ವಾರ್ಥ ಸೇವೆ : ಆದರೆ ಯಾವ ಸೌಲಭ್ಯಗಳೂ ನಮಗಿಲ್ಲ

“ಗೃಹರಕ್ಷಕ ದಳದ ಸಿಬ್ಬಂದಿಗಳಾಗಿ ನಾವು ಪ್ರಾಮಾಣಿಕತೆಯಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದೇವೆ. ನಮಗೆ ಕಾಯಂ ಸೇವೆಗೆ ನೇಮಕ ಮಾಡುವುದಿಲ್ಲ. ಅಗತ್ಯವಿದ್ದಾಗ ಕರೆಯುತ್ತಾರೆ. ಸೇವೆ ಮಾಡಿದ ದಿನಗಳ ಲೆಕ್ಕದಲ್ಲಿ ವೇತನ ಸಿಗುತ್ತದೆ. ಸರಕಾರದ ಮುಂದೆ ನಮ್ಮ ಬೇಡಿಕೆಗಳು ಹಲವು ಇದ್ದರೂ ಯಾವುದೂ ಕಾರ್ಯಗತವಾಗಿಲ್ಲ. ಆರೋಗ್ಯ, ಚಿಕಿತ್ಸೆ ಸೌಲಭ್ಯವಾಗಲಿ, ನಿವೃತ್ತಿ ವೇತನವಾಗಲಿ ನಮಗೆ ದೊರೆಯುವುದಿಲ್ಲ. ಆದರೆ ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ನಮಗೆ ಗೌರವ ನೀಡುತ್ತಾರೆ. ಸಮಾಜಕ್ಕಾಗಿ ಸೇವೆಗೈಯುವುದೇ ನಮಗಿರುವ ತೃಪ್ತಿ” ಎಂದು ಕುಂದಾಪುರ ಗೃಹರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ಭಾಸ್ಕರ ಮೆಂಡನ್ ತಿಳಿಸಿದರು.
ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ನಡೆದ “ಹೋಂ ಗಾರ್ಡ್‍ಗಳೊಂದಿಗೆ ಸಂವಾದ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಧಾನ ಅತಿಥಿಯಾಗಿ ಅವರು ಮಾತನಾಡಿದರು.
“ಎಷ್ಟೋ ಸಮಯ ಜೀವದ ಹಂಗು ತೊರೆದು ನಾವು ಸೇವೆ ಸಲ್ಲಿಸಿದ್ದೇವೆ. ಸಾರ್ವಜನಿಕ ಜೀವ ಹಾಗೂ ಸೊತ್ತು ಕಾಪಾಡಲು ಅಪಾಯ ಎದುರಿಸಿದ್ದೇವೆ. ಮೇಲಾಧಿಕಾರಿಗಳ ಆದೇಶದಂತೆ ಹಲವು ಸಂದರ್ಭಗಳಲ್ಲಿ ನಿದ್ದೆ, ಊಟೋಪಚಾರ ಇಲ್ಲದೇ ಕಾರ್ಯ ನಿರ್ವಹಿಸಿದ್ದೇವೆ. ಗೃಹರಕ್ಷಕರಿಗೆ ಸರಕಾರದ ಅಗತ್ಯ ಸವಲತ್ತು ಸಿಕ್ಕಿದರೆ ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯ” ಎಂದರು.
ಗೃಹರಕ್ಷಕರಾದ ಭಾಸ್ಕರ ಮೆಂಡನ್, ಜಗನ್ನಾಥ ಖಾರ್ವಿ, ಸದಾಶಿವ ಗೋಪಾಡಿ, ಸಂಜೀವ ಎಸ್. ಕೋಡಿಯವರನ್ನು ರೋಟರಿ ಕುಂದಾಪುರ ದಕ್ಷಿಣದ ಪರವಾಗಿ ಡಾ. ವಿಶ್ವೇಶ್ವರ, ಕೆ.ಕೆ.ಕಾಂಚನ್, ಸೀತಾರಾಮ ನಕ್ಕತ್ತಾಯ, ಯು.ಎಸ್.ಶೆಣೈ ಸನ್ಮಾನಿಸಿ ಗೌರವಿಸಿದರು.
“ನಮಗೆ ವರ್ಷಕ್ಕೆ ನಾಲ್ಕು ತಿಂಗಳು ಕೆಲಸ ಸಿಗಬಹುದು. ನಾವು ಬೇರೆ ಬೇರೆ ವೃತ್ತಿಯಲ್ಲಿದ್ದು ಕರೆ ಬಂದಾಗ ಹೋಗುತ್ತೇವೆ. ಮೀನುಗಾರಿಕೆ, ರಿಕ್ಷಾ ಚಾಲನೆ, ಅಂಗಡಿ ವ್ಯವಹಾರ, ವಾಚ್‍ಮೆನ್ ಮುಂತಾದ ಕೆಲಸ ಮಾಡಿಕೊಂಡಿರುತ್ತೇವೆ. ಕುಂದಾಪುರದಲ್ಲಿ 44 ಮಂದಿ ಇದ್ದು ಒಟ್ಟಾರೆ ಉಡುಪಿ ಜಿಲ್ಲೆಯಲ್ಲಿ 350 ಮಂದಿ ಸೇವೆ ಸಲ್ಲಿಸುತ್ತಿದ್ದೇವೆ. ಪೊಲೀಸರು ಮತ್ತು ನಮ್ಮ ಬೆಲ್ಟ್, ಹ್ಯಾಟ್, ಬ್ಯಾಡ್ಜ್ ಎಲ್ಲ ಬೇರೆ ಇರುವುದರಿಂದ ಗುರುತಿಸಲು ಸಾಧ್ಯ. ನಮಗೆ ಪೊಲೀಸರಂತೆ ಕ್ರಮಕೈಗೊಳ್ಳುವ ಅಧಿಕಾರವಿಲ್ಲ” ಎಂದು ಸಂವಾದದಲ್ಲಿ ಗೃಹರಕ್ಷಕರು ಹೇಳಿದರು.
ಉಮೇಶ್ ಮಾಸ್ಟರ್, ಕೆ.ಪಿ.ಭಟ್, ಡಾ. ಉತ್ತಮ್ ಕುಮಾರ್ ಶೆಟ್ಟಿ, ಮನೋಹರ್, ಸತ್ಯನಾರಾಯಣ ಪುರಾಣಿಕ, ಶ್ರೀನಿವಾಸ್ ಶೇಟ್, ನಂದಾ ನಾಯಕ್ ಸಂವಾದದಲ್ಲಿ ಪಾಲ್ಗೊಂಡರು.
ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸುರೇಶ ಮಲ್ಯ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಕೆ. ರಮಾನಂದ ಕಾರಂತ್ ಗೃಹ ಕಾರ್ಯಕ್ರಮದ ಉದ್ದೇಶ ವಿವರಿಸಿದರು. ಕೆ.ಕೆ.ಕಾಂಚನ್ ಗೃಹರಕ್ಷಕರನ್ನು ಪರಿಚಯಿಸಿದರು.
ಲೊಯ್ ಕಾರ್ವೆಲ್ಲೋ ವಂದಿಸಿದರು.