ಕರಾವಳಿಯಲ್ಲಿ ಮಳೆಯ ಅಬ್ಬರ-ಉಡುಪಿ ಇಬ್ಬರ ಸಾವು-ಮಂಗಳೂರು ಕೆರೆಯಾಯ್ತು ಪಂಪ್ ವೆಲ್ ಭಾಗ


ಮಂಗಳೂರು, ಉಡುಪಿ: ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರ ಗೋಡು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆದ್ರ್ರ ಮಳೆಯು ಒಂದೆರಡು ದಿನಗಳಿಂದ ತೀವ್ರಗೊಂಡಿದ್ದು., ಸೋಮವಾರ ಬಿರುಸುಗೊಂಡಿದ್ದ ಮಳೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವು ಕಡೆಗಳಲ್ಲಿ ಹಾನಿಯನ್ನು ಉಂಟುಮಾಡಿದೆ.

ಜೂ.8 ರವರೆಗೆ ಭಾರಿ ಮಳೆಯಾಗಲಿದೆಯೆಂದು ಹವಮಾನ ಇಲಾಖೆ ಎಚ್ಚರಿಸಿದೆ.


ಮಂಗಳೂರಿನಲ್ಲಿ ಪಂಪ್ ವೆಲ್ ಭಾಗದಲ್ಲಿ. ಮೇಲ್ ಸೇತುವೆ ಕೆಳಗಡೆ ಅಸಮರ್ಪಕ ಕಾಮಾಗಾರಿಯಿಂದ ನೀರು ನಿಂತು ದೊಡ್ಡ ಕೆರೆಯಂತೆ ಆಗಿದ್ದು ಜನಸಂಚಾರಕ್ಕೆ ತೊಂದರೆಯಾಗಿದೆ. ಉಡುಪಿಯ ಶಿರ್ವದ ಬಳಿ ಆವರಣಗೋಡೆ ಇಲ್ಲದ ಬಾವಿಯ ಮಣ್ಣು ಕುಸಿದು ಬಾವಿಗೆ ಬಿದ್ದು ಗುಲಾಬಿ (43) ಮೃತಪಟ್ಟಿದ್ದಾರೆ. ಕುಂಬಳೆ ಸಮೀಪದ ಅಂಗಡಿ ಮೊಗರಿನಲ್ಲಿ ಗಾಳಿ ಮಳೆಯಿಂದಾಗಿ ಮರ ಉರುಳಿ ಬಾಲಕಿ ಆಯಿಷತ್ ಮಿನ್ಹಾ (11) ಸಾವನ್ನಪ್ಪಿದ್ದಾಳೆ.

ಜೆಸಿಐ ಕುಂದಾಪುರ ಸಿಟಿ ಆಶ್ರಯದಲ್ಲಿ ವೈದ್ಯರ ದಿನಾಚರಣೆ:ಡಾ|ಸೋನಿಯವರಿಗೆ ಸನ್ಮಾನ

ಕುಂದಾಪುರ : ಜೆಸಿಐ ಕುಂದಾಪುರ ಸಿಟಿ ಇವರ ಆಶ್ರಯದಲ್ಲಿ ವೈದ್ಯರ ದಿನಾಚರಣೆಯ ಪ್ರಯುಕ್ತ ಕುಂದಾಪುರ ಆಯುಷ್ಯಧಾಮ ಆಸ್ಪತ್ರೆಯ ವೈದ್ಯರಾದ ಡಾ ಸೋನಿ ಡಿಕೋಸ್ತಾರವರನ್ನು ಕುಂದಾಪುರದ ಹೋಟೆಲ್ ಶ್ರೇಯಸ್ ಇನ್ ಸಭಾಂಗಣದಲ್ಲಿ ಸನ್ಮಾನಿಸಲಾಯಿತು

ಸನ್ಮಾನ ಸ್ವೀಕರಿಸಿದ ವೈದ್ಯರು ಮಾತನಾಡಿ ’ತಮ್ಮ ಜವಾಬ್ದಾರಿ ಅರಿತು ಸೇವೆ ಮಾಡಿದಾಗ ಮಾತ್ರ ಸಮಾಜ ಅವರನ್ನು ಗೌರವಿಸುತ್ತದೆ. ಹಾಗೆಯೇ ರೋಗಿಗಳು ಕೂಡ ತಮ್ಮ ವೈದ್ಯರಲ್ಲಿ ವಿಶ್ವಾಸವಿರಿಸಿ ಅವರ ಸಲಹೆಗಳನ್ನು ಪಾಲಿಸಬೇಕು’ ಎಂದು ಹೇಳಿದರು.
ಸಮಾರಂಭದಲ್ಲಿ ಜೆಸಿಐ ಕುಂದಾಪುರ ಸಿಟಿಯ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ವಲಯ ಉಪಾಧ್ಯಕ್ಷ ಅಭಿಲಾಶ್, ಪೂರ್ವ ಅಧ್ಯಕ್ಷರಾದ ರಾಘವೇಂದ್ರ ಚರಣ್ ನಾವಡ, ನಾಗೇಂದ್ರ ಪೈ, ನಾಗೇಶ್ ನಾವಡ, ವಿಜಯ ಭಂಡಾರಿ, ಲೇಡಿ ಜೇಸಿ ಅಧ್ಯಕ್ಷ ಪ್ರೇಮಾ ಡಿಕುನ್ಹಾ, ಜೊತೆ ಕಾರ್ಯದರ್ಶಿ ಶೈಲಾ, ಸದ್ಯಸ್ಯರಾದ ದಿನೇಶ್ ಪುತ್ರನ್, ಅನಿತಾ ಡಿಸೋಜಾ, ನಾಗರಾಜ ಪಾಟ್ವಲ್, ಶ್ರುತಿ ಡಿಸೋಜಾ ಇನ್ನಿತರರು ಉಪಸ್ಥಿತರಿದ್ದರು
.

ಕೋಲಾರ ಜಿಲ್ಲಾ ಅಥ್ಲೇಟಿಕ್ಸ್ ಅಸೋಸಿಯೇಷನ್‍ಗೆ ನೂತನ ಪಧಾಧಿಕಾರಿಗಳು-ಕ್ರೀಡಾ ಸಾಧಕರಾಗಲು ನಿರಂತರ ಅಭ್ಯಾಸ,ಪರಿಶ್ರಮ ಮುಖ್ಯ;ಎನ್.ಮುನಿಯಪ್ಪ

ಕೋಲಾರ: ಕ್ರೀಡೆಗಳನ್ನು ಹಣ ನೀಡಿ ಖರೀದಿಸಲು ಸಾಧ್ಯವಿಲ್ಲ. ಕ್ರೀಡೆಗಳು ಅಭ್ಯಾಸ ಮತ್ತ ಶ್ರಮದಿಂದ ಮಾತ್ರ ಸಾಧನೆಗೈಯಲು ಸಾಧ್ಯ ಎಂದು ಕೋಲಾರ ಜಿಲ್ಲಾ ಅಥ್ಲೇಟಿಕ್ಸ್ ಅಸೋಸಿಯೇಷನ್ ನೂತನ ಅಧ್ಯಕ್ಷ ಎನ್. ಮುನಿಯಪ್ಪ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕ್ರೀಡೆಗಳು ನಶಿಸಿ ಹೋಗುತ್ತಿದೆ. ಸಮರ್ಪಕವಾದ ಸೌಲಭ್ಯಗಳು ಹಾಗೂ ತರಭೇತಿಯ ಕೊರತೆಯಿಂದ ಜಿಲ್ಲೆಯಲ್ಲಿ ಉತ್ತಮವಾದ ಪ್ರತಿಭೆಗಳಿದ್ದರೂ ಹೊರಹೊಮ್ಮಲು ಸಾಧ್ಯವಾಗುತ್ತಿಲ್ಲ ಎಂದು ಕಳವಳ ವ್ಯಕ್ತ ಪಡೆಸಿದರು,
ನಮ್ಮ ಜಿಲ್ಲೆಯಲ್ಲಿ ಕ್ರೀಡಾ ಪ್ರತಿಭೆಗಳಿಗೆ ಕೊರತೆಯಿಲ್ಲ ಅವರಿಗೆ ಉತ್ತಮವಾದ ತರಭೇತಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಬೆಳಕಿಗೆ ತರುವ ಕೆಲಸವನ್ನು ಮುಂದಿನ ದಿನಗಳಲ್ಲಿ ಜಿಲ್ಲಾ ಅಥ್ಲೇಟಿಕ್ಸ್ ಅಸೋಸಿಯೇಷನ್ ಮಾಡಲಿದೆ ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಮನವಿ ಮಾಡಿದರು,
ಕಾರ್ಯದರ್ಶಿ ಕೆ.ಆರ್.ರಾಘವೇಂದ್ರ ಮಾತನಾಡಿ, ಕಳೆದ 30 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಅಥ್ಲೇಟಿಕ್ಸ್ ತರಭೇತಿದಾರರಾದ ಲಿಂಗಪ್ಪ ಮತ್ತು ಯುವಜನ ಕ್ರೀಡಾ ಇಲಾಖೆಯ ಅಧಿಕಾರಿ ಎ.ಎಲ್.ರಾಮ್‍ರಾವ್ ಅವರ ಅವಧಿಯಲ್ಲಿ ಕೋಲಾರದ ಪ್ರತಿಭೆಗಳು ರಾಜ್ಯ ಮತ್ತು ಅಂತರ್‍ರಾಜ್ಯ ಮಟ್ಟದ ಸ್ವರ್ಧೆಗಳಲ್ಲಿ ಪ್ರತಿನಿಧಿಸಿದ್ದರು ಆಗ ಕ್ರೀಡಾಪಟುಗಳಿಗೆ ಅರ್ಥಿಕವಾಗಿ ಸಹಾಯದ ಕೊರತೆ ಕಂಡು ಬಂದರೂ ಪ್ರೋತ್ಸಾಹಕ್ಕೆ ಕೊರತೆ ಇರಲಿಲ್ಲ ಎಂದರು.
ನಿಕಟ ಪೂರ್ವ ಪದಾಧಿಕಾರಿ ಜಗನ್ ಮಾತನಾಡಿ, ನಗರದ ಸರ್.ಎಂ.ವಿ. ಕ್ರೀಡಾಂಗಣದಲ್ಲಿ ಸಿಂಥೇಟಿಕ್ಸ್ ಟ್ರಾಕ್‍ಗೆ ಸರ್ಕಾರ 7 ಕೋಟಿ ರೂ ಬಿಡುಗಡೆ ಮಾಡಿದ್ದರೂ ಸಹ ಕಾಮಗಾರಿಗಳನ್ನು ನಿಗಧಿತ ಅವಧಿಯಲ್ಲಿ ಪೂರ್ಣಗೊಳಿದೆ ವಿಳಂಭ ಮಾಡಲಾಗುತ್ತಿದೆ ಎಂದು ವಿಷಾದಿಸಿದರು.
ಅಧ್ಯಕ್ಷರಾಗಿ ಎನ್. ಮುನಿಯಪ್ಪ,ಉಪಾಧ್ಯಕ್ಷ ಗೌಸ್ ಖಾನ್, ಕಾರ್ಯದರ್ಶಿ ಕೆ.ಆರ್. ರಾಘವೇಂದ್ರ, ಜಂಟಿ ಕಾರ್ಯದರ್ಶಿ ರಾಜೇಶ್ ಬಾಬು.ಸಿ, ಖಜಾಂಜಿ ಎಸ್.ಆರ್. ಪುರುಷೋತ್ತಮ್, ಸದಸ್ಯರಾಗಿ ಇಸ್ಮಾಯಿಲ್ ಖಾನ್, ನಾಗೇಶ್ ಎಂ. ಕೆ.ಆರ್. ಸತೀಶ್ ಕುಮಾರ್ ಎಂದು ವೇದಿಕೆಯಲ್ಲಿದ್ದವರನ್ನು ಪರಿಚಯಿಸಿದರು.

ಸಾಯಿಬಾಬಾ ದೇವಾಲಯ;ಸಡಗರ ಸಂಭ್ರಮದಿಂದ ಗುರು ಪೂರ್ಣಿಮೆ ಆಚರಣೆ

ಶ್ರೀನಿವಾಸಪುರ:  ಸಡಗರ ಸಂಭ್ರಮದಿಂದ ಗುರು ಪೂರ್ಣಿಮೆ ಆಚರಿಸಲಾಯಿತು. ಜನರು ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಿ ಸರದಿಯ ಸಾಲಿನಲ್ಲಿ ನಿಂತು ಬಾಬಾ ದರ್ಶನ ಪಡೆದರು.

  ಗುರು ಪೂರ್ಣಿಮೆ ಪ್ರಯುಕ್ತ ಶಿರಿಡಿ ಸಾಯಿಬಾಬಾ ದೇವಾಲಯ ಹಾಗೂ ಬಾಬಾ ವಿಗ್ರಹಕ್ಕೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಸಂಭ್ರಮಾಚಾರಣೆಯಲ್ಲಿ ಭಾಗವಹಿಸಿದ್ದರು.

  ದೇವಾಲಯಕ್ಕೆ ಆಗಮಿಸಿದ್ದ ವಿವಿಧ ಸಾಂಸ್ಕೃತಿಕ ಸಂಘಟನೆಗಳ ಮಹಿಳೆಯರು ಬಾಬಾ ಗೀತೆಗಳನ್ನು ಹಾಡಿದರು. ಬಾಬಾ ದರ್ಶನ ಪಡೆದ ಭಕ್ತರಿಗೆ ಊಟದ ವ್ಯವಸ್ಥೆ  ಮಾಡಲಾಗಿತ್ತು. ದಾನಿಗಳು ವಿಶೇಷ ಪ್ರಸಾದ ವಿತರಿಸಿದರು. ಪಟ್ಟಣದಲ್ಲಿ ಬಾಬಾ ವಿಗ್ರಹ ಮೆರವಣಿಗೆ ಏರ್ಪಡಿಸಲಾಗಿತ್ತು.  ಗುರು ಪೂರ್ಣಿಮೆ ಪ್ರಯುಕ್ತ ವಿಶೇಷ ಕಾರ್ಯಕ್ರಮ.  ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

  ಶಾಲೆಗಳಲ್ಲಿ ವಿದ್ಯಾರ್ಥಿಗಳು ಗುರುಗಳಿಗೆ ವಿಶೇಷ ಗೌರವಾರ್ಪಣೆ ಮಾಡಿ, ಗುರುಗಳಿಂದ ಆಶೀರ್ವಾದ ಪಡೆದರು. ಪೂಜಾ ಕಾರ್ಯಕ್ರಮ ದಲ್ಲಿ. ಕೆ .ಆರ್. ಕೇದಾರ್ ನಾಥ್,ವೈ.ಆರ್. ನಾಗೇಂದ್ರಬಾಬು, ಕೆ ಎಲ್ ರಾಮನಾಥ್, ಕೆ .ಟಿ.ಅಪ್ಪಿ ,ಡಿ.ಸಿ.ಬದ್ರಿನಾಥ್, ಬಿ.ಎಸ್. ಸುರೇಶ್, ಕೆ. ಶ್ರೇಯಸ್, ಪೃಥ್ವಿ ,ಕಾರ್ತಿಕ್,ಉಪಸ್ಥಿತರಿದ್ದರು. ಪೂಜಾ ಕಾರ್ಯಕ್ರಮ ವನ್ನು  ಹರೀಶ್, ನಾಗರಾಜಯ್ಯ,ನೆರವೆರಿಸಿದರು.

ದಲಿತ ಚಳವಳಿ ಒತ್ತಡದ ಗುಂಪಾಗಿಯೇ ಬೆಳೆಯಬೇಕು: ಸಿ.ಎಂ.ಮುನಿಯಪ್ಪ

ಕೋಲಾರ,ಜು.3: ದಲಿತ ಚಳವಳಿ ಒತ್ತಡದ ಗುಂಪಾಗಿಯೇ ಬೆಳೆಯಬೇಕು. ಪ್ರತಿ ತಾಲ್ಲೂಕಿನಲ್ಲಿ 100 ಯುವಕರು ಇದ್ದರೆ ಇಡೀ ಜಿಲ್ಲೆಯನ್ನು ನೈತಿಕ ಶಕ್ತಿಯಿಂದ ನಿಯಂತ್ರಿಸಬಹುದು. ದಲಿತರು, ಬಡವರು, ಶೋಷಿತರಿಗೆ ನ್ಯಾಯ ಕಲ್ಪಿಸಬಹುದು ಎಂದು ದಲಿತ ಮುಖಂಡ ಸಿ.ಎಂ.ಮುನಿಯಪ್ಪ ಅಭಿಪ್ರಾಯಪಟ್ಟರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‍ಗೆ ಭಾಜನರಾಗಿರುವ ಸಿ.ಎಂ.ಮುನಿಯಪ್ಪ ಅವರು ಸೋಮವಾರ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರನ್ನು ಕರ್ನಾಟಕಕ್ಕೆ ಪರಿಚಯಿಸಿದ್ದು ದಲಿತ ಚಳವಳಿ. ಹೋರಾಟಗಾರರಿಗೆ ನೈತಿಕ ಭಯ, ನೈತಿಕ ಎಚ್ಚರ ಇರಬೇಕು. ಆಗ ನಾವು ಭ್ರಷ್ಟರಾಗುವುದಿಲ್ಲ. ಅದೇ ದಿಕ್ಕಿನಲ್ಲಿ ನಾವು ಹೋರಾಟ ರೂಪಿಸಿದೆವು ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಗ್ರಾಮದಲ್ಲಿ ಹುಟ್ಟುತ್ತಲೇ ಮಗುವಿಗೆ ಜೀತದ ಪಟ್ಟ ಕಟ್ಟುವ ಪದ್ಧತಿ ಇದ್ದದ್ದು ಶೋಚನೀಯ. 150 ಮಂದಿ ಜೀತದಾಳರಾಗಿದ್ದರು. ಅಲ್ಲಿಂದ ದಲಿತ ಚಳವಳಿ ಹೋರಾಟ ಶುರುವಾಯಿತು ಎಂದರು.
ಚಳವಳಿಗೆ ಗೌರವ ಡಾಕ್ಟರೇಟ್ ಅರ್ಪಿಸುತ್ತೇನೆ. 1974ರಿಂದ ಧರ್ಮಯುತವಾಗಿ, ನ್ಯಾಯಯುತವಾಗಿ ನಡೆಯಲು ಕಾರಣರಾದ ನಾಯಕರಿಗೆ ಅರ್ಪಣೆ ಮಾಡುತ್ತೇನೆ. ನನಗೆ ಯಾವುದೇ ಹೋರಾಟದ ಹಿನ್ನೆಲೆ ಇಲ್ಲ. ನಾನು ದನ ಕಾಯುವ ವ್ಯಕ್ತಿಯ ಮಗ. ಕುಟುಂಬ ಜೀತದಾಳಾಗಿತ್ತು. ದಲಿತ ಚಳವಳಿ ನನಗೆ ನೈತಿಕ ಶಕ್ತಿ ತುಂಬಿತು. ದನ ಕಾಯುವ ಪುತ್ರ, ರಾಜ್ಯದ ಮುಖ್ಯಮಂತ್ರಿಯನ್ನು ಪ್ರಶ್ನಿಸುವ ಧೈರ್ಯ ತುಂಬಿದ್ದು ದಲಿತ ಚಳವಳಿ. ಇದು ನನ್ನೊಬ್ಬನ ಶ್ರಮ ಅಲ್ಲ. ಹಲವರ ಪರಿಶ್ರಮ ಇದೆ ಎಂದು ಹೇಳಿದರು.
ಈಗಿನ ಹೋರಾಟ ಬೇರೆ ದಿಕ್ಕಿನಲ್ಲಿ ಸಾಗುತ್ತಿದೆ. ಹೋರಾಟಗಾರರಿಗೆ ಕಣ್ಣು, ಕಿವಿ ಇಲ್ಲ. ಸಮಾಜ ಕಲ್ಯಾಣ ಇಲಾಖೆಯ ಭ್ರಷ್ಟಚಾರದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಆ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದರು.
ಡಾಕ್ಟರೇಟ್ ಪದವಿ ಬಗ್ಗೆ ಮುಜುಗರ ನನಗೆ ಇದೆ. ಅದರ ಗೌರವ ಕಳೆದು ಹೋಗಿದೆ. ಯಾರು ಬೇಕಾದರೂ ಡಾಕ್ಟರೇಟ್ ಪದವಿ ಹಾಕಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಉತ್ತಮರಿಗೆ ಸಿಕ್ಕರೂ ಅದಕ್ಕೆ ಗೌರವ ಇಲ್ಲವಾಗಿದೆ ಎಂದು ತಿಳಿಸಿದರು.
ಲೋಕಸಭೆ ಸ್ಪರ್ಧೆ ವಿಚಾರವಾಗಿ ನಾನು ಹಿಂದೆ ಹೋಗಲ. ಆಸೆ ಇಲ್ಲ. ಅದಾಗಿಯೇ ಬಂದರೆ ನೋಡೋಣ. ಬಹಳಷ್ಟು ನಿರೀಕ್ಷೆಇಲ್ಲ. ಅದಕ್ಕೆ ಬೇಕಾಗುವ ಹಣವೂ ಇಲ್ಲ. ಒತ್ತಡದ ಗುಂಪಾಗಿ ನಡೆಸಿಕೊಂಡು ಹೋಗಲು ಇಷ್ಟ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಮುನಿಯಪ್ಪ ಅವರಿಗೆ ಗೌರವ ಡಾಕ್ಟರೇಟ್ ಪದವಿ ಸಿಕ್ಕಿರುವುದು ಇಡೀ ಪತ್ರಕರ್ತರಿಗೆ ಸಂತೋಷದ ವಿಚಾರ. ಪತ್ರಕರ್ತರಿಗೆ ಗೌರವ ಡಾಕ್ಟರೇಟ್ ಸಿಕ್ಕಿರುವುದು ವಿರಳ ಎಂದರು.
ದಲಿತ ಚಳವಳಿಗೆ ಮೂಲ ಕಾರಣರಲ್ಲಿ ಮುನಿಯಪ್ಪ ಕೂಡ ಒಬ್ಬರು. 1994ರಲ್ಲಿ ಮುಖ್ಯಮಂತ್ರಿಯಾಗಿದ್ದ ದೇವೇಗೌಡರು ಕೋಲಾರಕ್ಕೆ ಜನತಾ ದರ್ಶನಕ್ಕೆ ಬಾರದಂತೆ ತಡೆಯೊಡ್ಡುವುದಾಗಿ ಹೇಳಿದ್ದ ಪ್ರಕರಣ ಹಾಸ್ಟೆಲ್‍ನಲ್ಲಿ ಮಕ್ಕಳ ಸಂಖ್ಯೆ ಕಡಿತಗೊಳಿಸುವುದಾಗಿ ಹೇಳಿದ್ದ ಅಂದಿನ ಜಿ.ಪಂ ಸಿಇಒ ಬಿ.ಎಚ್.ಅನಿಲ್ ಕುಮಾರ್ ಅವರನ್ನು ಕಚೇರಿ ಒಳಗೆ ಹೋಗಲು ಬಿಡದ್ದು ಸೇರಿದಂತೆ ವಿವಿಧ ಹೋರಾಟ ಉಲ್ಲೇಖಿಸಿದರು. ನೇರ ಹೋರಾಟ ಅವರದ್ದು. ಸಂಚಿಕೆ ಎಂಬುದು ಹೋರಾಟಗಳ ಉಗಮ ಸ್ಥಳ ಎಂದು ನುಡಿದರು.
ನಚಿಕೇತ ನಿಲಯ ಟಿ.ಚನ್ನಯ್ಯ ಕನಸಿನ ಕೂಸು. ಅದನ್ನು ಸಂಪನ್ಮೂಲ ಕೇಂದ್ರವನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಮುನಿಯಪ್ಪ ಪ್ರಯತ್ನಿಸಬೇಕು. ರಾಜ್ಯಾಧಿಕಾರ ಸಿಗುವ ಅವಕಾಶ ಬಳಸಿಕೊಳ್ಳಬೇಕು ಎಂದು ಕೋರಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ವಿ.ಮುನಿರಾಜು, ಹಿಂದಿನ ಹೋರಾಟ ಪ್ರಭಾವಕಾರಿಯಾಗಿತ್ತು. ಹೋರಾಟ ನಡೆದರೆ ಅಧಿಕಾರಿಗಳು ಬೆದರುತ್ತಿದ್ದರು. ಅಂಥ ಹೋರಾಟ ನಡೆಸಿದವರು ಮುನಿಯಪ್ಪ. ಸರ್ವ ಜನಾಂಗದವರಿಗೆ ನಾಯಕತ್ವ ನೀಡಿದವರು. ಈಗ ಸ್ವಾರ್ಥಕ್ಕೆ, ವೈಯಕ್ತಿಕ ಲಾಭಕ್ಕೆ ಹೋರಾಟ ನಡೆಸಲಾಗುತ್ತದೆ ಎಂದರು.
ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಕೋಲಾರ ಚಳವಳಿಗಳ ತವರೂರು. ನಾಲ್ಕು ದಶಕಗಳ ಹೋರಾಟ. ಹೋರಾಟದ ಫಲವಾಗಿ ಅನೇಕ ಹಾಸ್ಟೆಲ್ ಆರಂಭವಾಯಿತು. ಶೋಷಿತರು, ಬಡವರಿಗೆ ಭೂಮಿ ಸಿಕ್ಕಿತು. ನಾಯಕತ್ವದ ಗುಣ ಕರಗತವಾಗಿದೆ ಎಂದು ತಿಳಿಸಿದರು.
ಹೊಸ ಪೀಳಿಗೆಯನ್ನು ಹೋರಾಟಕ್ಕೆ ತರಲು ಪ್ರಯತ್ನಿಸಿದರು. ಈಗಿನ ಕಾಲಘಟ್ಟದಲ್ಲಿ ಆಗಿನ ರೀತಿ ಹೋರಾಟ ನಡೆಸಿದ್ದರೆ ಬದುಕಿ ಉಳಿಯುತ್ತಿರಲಿಲ್ಲವೇನೋ? ಎಂದರು.
ರಾಜ್ಯಾಧಿಕಾರ ಪಡೆಯುವಲ್ಲಿ ಹೋರಾಟ ಯಶಸ್ವಿಯಾಗಿಲ್ಲ. ಆದರೆ, ಒತ್ತಡ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮುನಿಯಪ್ಪ ಒಂದು ಶಕ್ತಿ ಎಂದು ನುಡಿದರು.
ಸಂಘದ ಖಜಾಂಚಿ ಸುರೇಶ್ ಕುಮಾರ್ ನಿರೂಪಿಸಿದರು. ಸದಸ್ಯ ಆಸೀಫ್ ಪಾಷ ಸ್ವಾಗತಿಸಿದರು. ಹಿರಿಯ ಪತ್ರಕರ್ತರಾದ ಕೋ.ನಾ.ಮಂಜುನಾಥ್, ಸಿ.ವಿ.ನಾಗರಾಜ್, ಬಿ.ಸುರೇಶ್ ಮಾತನಾಡಿದರು.
ಹಿರಿಯ ಪತ್ರಕರ್ತರಾದ ಅಬ್ಬಣಿ ಶಂಕರ್, ಓಂಕಾರಮೂರ್ತಿ, ಕೆ.ಬಿ.ಜಗದೀಶ್, ಸ್ಕಂದಕುಮಾರ್, ಎನ್.ಶಿವಕುಮಾರ್, ಮದನ್, ಮಾಮಿ ಪ್ರಕಾಶ್, ಸಿ.ವಿ.ನಾಗರಾಜ್, ಎನ್.ಸತೀಶ್, ಕಾರಂಗುಂಟೆ ನಾರಾಯಣಸ್ವಾಮಿ, ವಿಜಿಕುಮಾರ್, ಪ್ರಕಾಶ್, ವೆಂಕಟೇಶ್‍ಬಾಬಾ, ರಾಜೇಂದ್ರಸಿಂಹ, ಎಸ್.ರವಿಕುಮಾರ್, ಸಮೀರ್ ಅಹಮದ್, ಸೈಯದ ತಬ್ರೇಜ್, ಈಶ್ವರ್, ವೆಂಕಟೇಶ್, ಮಂಜುನಾಥ್, ಕಿರಣ್, ಅಮರ್, ಪುರುಷೋತ್ತಮ, ಸಿ.ಅಮರೇಶ,
ಗಂಗಾಧರ್, ಗೋಪಿ, ಪವನ್, ಕುಮಾರ್, ನಾಗೇಶ್ ಹಾಗೂ ಪತ್ರಕರ್ತರು ಇದ್ದರು.

ಆರ್‌.ಎನ್.‌ಶೆಟ್ಟಿ : ಕುಮಾರಿ ಪೂರ್ವಿಕಾಳಿಂದ ಶಾಸ್ತ್ರೀಯ ನೃತ್ಯದಲ್ಲಿ ರಾಷ್ಟ್ರಮಟ್ಟದ ಸಾಧನೆ

ಕುಂದಾಪುರದ ಆರ್‌.ಎನ್.‌ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿರುವ ಕುಮಾರಿ ಪೂರ್ವಿಕಾ ಇವರು ಪ್ರಭಾತ್ ಕಲಾವಿದರ ತಂಡ ಗೋಪಿನಾಥ್ ನ್ಯಾಸ-2023 ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲ್ಪಟ್ಟ ರಾಷ್ಟ್ರ ಮಟ್ಟದ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಸ್ಪರ್ಧೆಗಳ ಭರತನಾಟ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಪರ್ಯಾಯ ಪಾರಿತೋಷಕವನ್ನು ಗಳಿಸಿರುತ್ತಾರೆ.

ಕು.ಪೂರ್ವಿಕಾ ಇವರು ವಿದುಷಿ ಪ್ರವಿತ ಮತ್ತು ಅಶೋಕ್ ಕುಮಾರ್ ರವರ ಪುತ್ರಿ. ಪೂರ್ವಿಕಾಳ ಈ ಅಮೋಘ ನೃತ್ಯಸಾಧನೆಯನ್ನು ಮೆಚ್ಚಿ, ಕಾಲೇಜಿನ ಸಂಚಾಲಕರಾದ ಶ್ರೀ ಬಿ.‌ಎಮ್. ಸುಕುಮಾರ್ ಶೆಟ್ಟಿಯವರು, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರಾದ ಶ್ರೀ ನವೀನ್ ಕುಮಾರ್ ಶೆಟ್ಟಿಯವರು ಹಾಗೂ ಬೋಧಕ- ಬೋಧಕೇತರ ಸಿಬ್ಬಂಧಿಗಳು ಅಭಿನಂದಿಸಿದ್ದಾರೆ.  

ಮೂಡ್ಲಕಟ್ಟೆ ಐ ಎಂ ಜೆ ಇನ್ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ & ಕಾಮರ್ಸ್‌ ಪದವಿ ಕಾಲೇಜಿನ ಪ್ರಥಮ ಸೆಮಿಸ್ಟರ್‌ ಶ್ಲಾಘನೀಯ ಫಲಿತಾಂಶ

ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಥಮ ವರ್ಷದ ಮೊದಲ ಸೆಮಿಸ್ಟರ್‌ ಬ್ಯಾಚುಲರ್‌ ಆಫ್‌ ಕಾಮರ್ಸ್‌ (ಬಿಕಾಂ) ಮತ್ತು ಬ್ಯಾಚುಲರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಶನ್ಸ್‌ (ಬಿಸಿಎ) ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಲಾಗಿದ್ದು, ಐಎಂಜೆಐಎಸ್‌ ಸಿ ಸಂಸ್ಥೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. ಈ ಫಲಿತಾಂಶವು ಯುವ ಮನಸ್ಸುಗಳ ಸಮರ್ಪಣೆ ಮತ್ತು ಕಠಿಣ ಪರಿಶ್ರಮವನ್ನು ಬಿಂಬಿಸುವುದರ ಜೊತೆಗೆ ವಿದ್ಯಾರ್ಥಿಗಳು ತಮ್ಮ ಸಾಧನೆಗಳನ್ನು ಗುರುತಿಸಿ ಕೊಳ್ಳಲು ಅವಕಾಶವಾಗಿದೆ. ಶೈಕ್ಷಣಿಕ ಪ್ರಯಾಣದುದ್ದಕ್ಕೂ ವಿದ್ಯಾರ್ಥಿಗಳನ್ನು ಪೋಷಿಸುವ ಮತ್ತು ಬೆಂಬಲಿಸುವಲ್ಲಿ ಉಪನ್ಯಾಸಕರು, ಪೋಷಕರು ಮತ್ತು ಶಿಕ್ಷಣ ಸಂಸ್ಥೆಯ ಪ್ರಯತ್ನಕ್ಕೆ ಕನ್ನಡಿಯಾಗಿದೆ. ಅಂತಹ ಪ್ರತಿಭಾವಂತ ಮತ್ತು ದೃಢನಿಶ್ಚಯದ ವಿದ್ಯಾರ್ಥಿಗಳೊಂದಿಗೆ, ಉಜ್ವಲ ಭವಿಷ್ಯವನ್ನು ರೂಪಿಸುವ ಬಲವಾದ ಭರವಸೆಯನ್ನು ಐ ಎಂ ಜೆ ಇನ್ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ & ಕಾಮರ್ಸ್‌ ಸಂಸ್ಥೆ ಹೊಂದಿದೆ.

ಬಿಕಾಂ ಫಲಿತಾಂಶ: ಬಿಕಾಂ ಪರೀಕ್ಷೆಗಳಿಗೆ ಹಾಜರಾದ ವಿದ್ಯಾರ್ಥಿಗಳಲ್ಲಿ, ಶೇಕಡಾ 91% ವಿದ್ಯಾರ್ಥಿಗಳು ತೇರ್ಗಡೆ ಶ್ರೇಣಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿಗಳ ಶೈಕ್ಷಣಿಕ ವಿಷಯಗಳಲ್ಲಿನ ಸಮರ್ಪಣೆ ಮತ್ತು ಪರಿಶ್ರಮವನ್ನು ಕಾಣಬಹುದು. ಬಿಕಾಂ ಸ್ಟ್ರೀಮ್‌ನಲ್ಲಿ ಕಾಲೇಜಿನಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿನಿ ಸಭಾ 8.46 ರ ಅತ್ಯುತ್ತಮ 684 ಅನ್ನು ಗಳಿಸಿದ್ದು, ಇದಲ್ಲದೆ, ಬಿಕಾಂ ಪರೀಕ್ಷೆಯಲ್ಲಿ ಉತ್ತೀರ್ಣರಾದ ಶೇಕಡಾ 20% ವಿದ್ಯಾರ್ಥಿಗಳು 8 ಕ್ಕಿಂತ ಹೆಚ್ಚಿನ 684 ಅನ್ನು ಸಾಧಿಸಿದ್ದಾರೆ. ಉಳಿದಂತೆ. ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳು ಏಳಕ್ಕಿಂತ ಹೆಚ್ಚಿನ 688 ಗಳಿಸಿವಲ್ಲಿ ಯಶಸ್ವಿಯಾಗಿದ್ದಾರೆ… ಇದು. ಉನ್ನತ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಶಿಕ್ಷಣ ಸಂಸ್ಥೆಯ ಸಮರ್ಪಣೆಯನ್ನು ಸೂಚಿಸುತ್ತದೆ ಹಾಗು ವಿದ್ಯಾರ್ಥಿಗಳ ಸತತವಾದ ಶ್ರೇಷ್ಠತೆಗಾಗಿ ಮಾಡಿದ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ.

ಬಿ.ಸಿ.ಎ. ಫಲಿತಾಂಶಗಳು: ಬಿ.ಸಿ.ಎ. ಫಲಿತಾಂಶಗಳು ಪರೀಕ್ಷೆಗಳಿಗೆ ಹಾಜರಾದ 80 ವಿದ್ಯಾರ್ಥಿಗಳ ಪ್ರಯತ್ನ ಮತ್ತು ಫಲಿತಾಂಶ ಉತ್ತಮವಾಗಿದ್ದು, ಅವರಲ್ಲಿ ಶೇಕಡಾ 77% ತೇರ್ಗಡೆ ಶ್ರೇಣಿಗಳನ್ನು ಪಡೆದುಕೊಂಡಿರುವುದರಲ್ಲಿ ಅವರ ಕಠಿಣ ಪರಿಶ್ರಮ ಮತ್ತು ಅವರ ಅಧ್ಯಯನದ ಬದ್ಧತೆಯನ್ನು ನಾವು ಕಾಣಬಹುದು. ಬಿ.ಸಿ.ಎ. ಸ್ಟ್ರೀಮ್‌ನಲ್ಲಿ ಕಾಲೇಜಿನಲ್ಲಿ ಅತ್ಯಧಿಕ ಅಂಕವನ್ನು ಪಡೆದಿರುವ ವಿದ್ಯಾರ್ಥಿನಿ ನೇತ್ರಾವತಿ 9.44 ರಷ್ಟು 68% ಸಾಧಿಸಿದ್ದಾರೆ. ಈ ಅಸಾಧಾರಣ ಕಾರ್ಯಕ್ಷಮತೆಯು ವಿಷಯದಲ್ಲಿ ವಿದ್ಯಾರ್ಥಿನಿಯ ಪ್ರಾವೀಣ್ಯತೆಯನ್ನು ಮಾತ್ರವಲ್ಲದೆ ಕಂಪ್ಯೂಟರ್‌ ಅಪ್ಲಿಕೇಶನ್‌ಗಳ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುವ ಸಾಮರ್ಥ್ಯವನ್ನು ತೋರಿಸುತ್ತದೆ. ಇದಲ್ಲದೆ, ಬಿ.ಸಿ.ಎ. ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇಕಡಾ 26%, ವಿದ್ಯಾರ್ಥಿಗಳು 8 68 ಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ. ಈ ಅಂಕಿಅಂಶವು ಶೈಕ್ಷಣಿಕ ಯಶಸ್ಸಿಗೆ ಸಂಸ್ಥೆಯ ವಿದ್ಯಾರ್ಥಿಗಳು ಹಾಗು ಶಿಕ್ಷಕರ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ ಹಾಗು ಅವರು ಕಂಪ್ಯೂಟರ್‌ ಅಪ್ಲಿಕೇಶನ್‌ಗಳ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಾದ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿದ್ದಾರೆ ಎಂದು ಸೂಚಿಸುತ್ತದೆ.

ಅನ್ಯ ಚಟುವಟಿಕೆ ಹಾಗು ಕಲಿಕೆಯ ನಡುವೆ ಸಾಧನೆ ಕಾಲೇಜಿನ ವಿದ್ಯಾರ್ಥಿಗಳು ಪಠ್ಯೇತರವಾಗಿ ಸಾಂಸ್ಕೃತಿಕ ಹಾಗು. ಕ್ರೀಡಾ ವಿಷಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರೊಂದಿಗೆ ಈ ಸಾಧನೆ ಮಾಡಿರುವುದು ಹೆಮ್ಮೆ ತಂದಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ. ವಿದ್ಯಾಸಂಸ್ಥೆಯಲ್ಲಿ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌, ಸೈಬರ್‌ ಸೆಕ್ಯೂರಿಟಿ, 0೩, ಆ, ಅಕೌಂಟಿಂಗ್‌ ಮತ್ತು ಟಾಕ್ಸಾಷನ್‌ ಸೇರಿದಂತೆ ಅನೇಕ ಹೆಚ್ಚುವರಿ ವಿಷಯಗಳ ಅಧ್ಯಯನ ನಡೆಯುತ್ತಿದ್ದು, ಅವುಗಳನ್ನು ಕಲಿಯುತ್ತಾ ಪದವಿ ವಿಷಯಗಳಲ್ಲಿ ಉತ್ತಮ ಅಂಕ ಪಡೆದಿರುವುದು ಸಂಸ್ಥೆಗೆ ಸಾರ್ಥಕತೆಯ ಭಾವ ತಂದಿದೆ ಎಂದು ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಸಿದ್ಧಾರ್ಥ ಜೆ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ, ಬಿಕಾಂ ಮತ್ತು ಬಿಸಿಎ ಪರೀಕ್ಷೆಗಳ ಫಲಿತಾಂಶಗಳು ವಿದ್ಯಾರ್ಥಿಗಳ ಗಮನಾರ್ಹ ಸಾಧನೆಗಳನ್ನು ಪ್ರದರ್ಶಿಸಿದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಆಯಾ ವಿಷಯ ಕ್ಷೇತ್ರಗಳಲ್ಲಿನ ಬದ್ಧತೆ ಈ ಅತ್ಯುತ್ತಮ ಫಲಿತಾಂಶಗಳಿಗೆ ಕಾರಣವಾಗಿದೆ.

ಈ ಫಲಿತಾಂಶಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತವೆ, ಅಲ್ಲದೆ ಉತ್ಕೃಷ್ಟತೆಗಾಗಿ ಶ್ರಮಿಸಲು ಮತ್ತು ಅವರ ಶೈಕ್ಷಣಿಕ ಶ್ರೇಷ್ಟತೆಯನ್ನು ಗುರುತಿಸಲು ಸಹಾಯವಾಗುತ್ತದೆ. ಈ ಸಂಧರ್ಭದಲ್ಲಿ ಐಎಂಜೆ ಇನ್ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ & ಕಾಮರ್ಸ್‌ ಸಂಸ್ಥೆಯು ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಮತ್ತು ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳನ್ನು ಹಾರೈಸಿದೆ.

ಮಾನವ ಸ್ವಾರ್ಥಕ್ಕಾಗಿ ಅರಣ್ಯ ನಾಶ ಮಾಡಿದ ಪರಿಣಾಮ ಕಾಲ – ಕಾಲಕ್ಕೆ ಮಳೆಯಾಗಿದೆ:ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ : ಮಾನವ ಸ್ವಾರ್ಥಕ್ಕಾಗಿ ಅರಣ್ಯ ನಾಶ ಮಾಡಿದ ಪರಿಣಾಮ ಕಾಲ – ಕಾಲಕ್ಕೆ ಮಳೆಯಾಗಿದೆ ಸಂಕಷ್ಟ ಎದುರಾಗಿದ್ದು, ಇಂದಿನ ಪರಿಸ್ಥತಿಯಲ್ಲಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ಹೊದಲಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಆರ್.ತಿಮ್ಮಸಂದ್ರ ಗ್ರಾಮದ ಸಮೀಪ ಡಾ|| ಬಿ.ಆರ್ ಅಂಬೇಡ್ಕರ್ ವಸತಿಶಾಲೆಯ ಆವರಣದಲ್ಲಿ ಶನಿವಾರ ವನಮಹೋತ್ಸವ ಹಾಗು ಕೋಟಿ ವೃಕ್ಷಾರೋಹಣ ಸಸಿ ನೆಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರಿಸರ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಬಾಲ್ಯದಿಂದಲೇ ಪರಿಸರದ ಬಗ್ಗೆ ಹೆಚ್ಚಿನ ಅರಿವನ್ನು ಮೈಗೂಡಿಸಿ ಕೊಳ್ಳಬೇಕು ಹಾಗೆಯೇ ಪರಿಸರ ಮಾಲಿನ್ಯ ತಡೆಗಟ್ಟಲು ಪ್ರತಿಯೊಬ್ಬರೂ ಶ್ರಮಿಸಬೇಕು, ಪರಿಸರದ ಉಳಿವುಗಾಗಿ ತಮ್ಮನ್ನು ತೊಡಗಿಸಿಕೊಂಡು ಪರಿಸರ ನಾಶವನ್ನು ತಡೆಯಬೇಕಾಗಿದೆ ಗಿಡಗಳನ್ನು ನೆಡುವುದು ಮುಖ್ಯವಲ್ಲಾ ಅದನ್ನು ಕಾಪಾಡಿಕೊಂಡಾಗ ಮಾತ್ರ ಪರಿಸರ ಉಳಿಯುತ್ತದ್ದೆ ಎಂದರು.
ಪರಿಸರವನ್ನು ಸಂರಕ್ಷಿಸದಿದ್ದರೆ ಮುಂದೆ ಕಠಿಣ ದಿನಗಳನ್ನು ಎದುರಿಸಲು ಸಿದ್ಧವಾಗಬೇಕಾಗುತ್ತದೆ. ಗಿ-ಮರಗಳನ್ನು ಬೆಳುಸುವುದರಿಂದ ಶುದ್ದ ಗಾಳಿ ದೊರೆಯುವ ಜೊತೆಗೆ ಸಕಾಲದಲ್ಲಿ ಮಳೆಬೆಳೆಯಾಗುತ್ತದೆ. ಇದರಿಂದ ರೈತರು ಮತ್ತು ಜನಸಾಮಾನ್ಯರು ಸಮೃದ್ಧಿಯಿಂದ ಜೀವನ ನಡೆಸಲು ಸಾಧ್ಯ ಎಂದರು.
ಇತ್ತೀಚಿನ ದಿನಗಳಲ್ಲಿ ಪರಿಸರ ದಿನಾಚರಣೆ ವನಮಹೋತ್ಸವ ಕಾರ್ಯಕ್ರಮಗಳು ಆಚರಣೆಗೆ ಮಾತ್ರ ಸೀಮಿತವಾಗಬಾರದು ಪರಿಸರ ಕುರಿತು ಮುಂದಿನ ಯುವ ಪೀಳಿಗೆಗೆ ನಾವೆಲ್ಲರೂ ತಿಳಿಸಿಕೊಡಬೇಕು ಎಂದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೆ.ಎನ್ ರವಿಕೀರ್ತಿ ಮಾತನಾಡಿ ಪ್ರಕೃತಿಯ ರಕ್ಷಣೆಗೆ ಮಾನವನಕೊಡುಗೆ ಅಗತ್ಯವಾಗಿದೆ ಅರಣ್ಯ ಇಲಾಖೆಯೊಂದಿಗೆ ಜನಸಾಮಾನ್ಯರಿಗೂ ಪ್ರಕೃತಿ ರಕ್ಷಣೆ ಮಾಡುವ ಜವಾಬ್ದಾರಿ ಇದೆ ಐಷಾರಾಮಿ ಜೀವನಕ್ಕೆ ಪ್ರಕೃತಿಯನ್ನು ಬಲಿಕೊಡದೇ ಅದರಿಂದ ಸಿಗುವ ಕೊಡುಗೆಗಳ ಕುರಿತು ಯೋಚಿಸಿ ಅದರ ರಕ್ಷಣೆಗೆ ಮುಂದಾಗಬೇಕೆಂದು ತಿಳಿಸಿದರು.
ಇದೇ ಸಮಯದಲ್ಲಿ ಸಾಮಾಜಿಕ ವಲಯ ಅರಣ್ಯಾಧಿಕಾರಿಗಳಿಂದ ಕಲ್ಲೂರು ಸಮೀಪ ನಿರ್ಮಾಣವಾಗುತ್ತಿರುವ ನೂತನ ನ್ಯಾಯಾಲಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ಈ ಕಾರ್ಯಕ್ರಮದಲ್ಲಿ ವಲಯ ಅರಣ್ಯಾಧಿಕಾರಿ ಮಹೇಶ್, ಪಿಡಿಓ ಕೆ.ಪಿ. ಶ್ರೀನಿವಾಸರೆಡ್ಡಿ, ಸಮಾಜಿಕ ವಲಯ ಅರಣ್ಯಾಧಿಕಾರಿ ಕಛೇರಿಯ ಸಿಬ್ಬಂದಿ ಜಾವೀದ್, ನರಸಿಂಹ, ಇನ್ನಿತರರು ಉಪಸ್ಥಿತರಿದ್ದರು.

“ರಕ್ತದಾನ ಜೀವದಾನಕ್ಕೆ ಸಮಾನ”ಅತಿ ವಂ.ಸ್ಟ್ಯಾನಿ ತಾವ್ರೊ

ಕುಂದಾಪುರ, ಜು.1: ಹೋಲಿ ರೋಸರಿ ಚರ್ಚ್ ಸಭಾಂಗಣದಲ್ಲಿ ಕಥೊಲಿಕ್ ಸಭಾ ಕುಂದಾಪುರ ಇವರ ವತಿಯಿಂದ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ,ಆರೋಗ್ಯ ಆಯೋಗ, ಫಾಲ್ಕನ್ ಕ್ಲಬ್ ತೆಕ್ಕಟ್ಟೆ, ಬ್ಲಡ್ ಡೋನರ್ಸ್ ಕುಂದಾಪುರ, ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಜುಲಾಯ್ 1 ರಂದು
ಬೃಹತ್ ರಕ್ತದಾನ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹೋಲಿ ರೋಸರಿ ಚರ್ಚಿನ ಧರ್ಮ ಗುರುಗಳಾದ ಅತಿ ವಂದನೀಯ ಸ್ಟ್ಯಾನಿ ತಾವ್ರೊ ” ರಕ್ತದಾನ ಕೇವಲ ರಕ್ತವನ್ನು ದಾನವಾಗಿ ಕೊಡುವುದು ಮಾತ್ರವಲ್ಲ ಜೀವದಾನಕ್ಕೆ ಸಮಾನ ” ಎಂದು ಸಂದೇಶ ನೀಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕುಂದಾಪುರ ರೆಡ್ ಕ್ರಾಸ್ ಸೊಸೈಟಿಯ ಚೇರ್ಮೆನ್ ಶ್ರೀ ಜಯಕರ್ ಶೆಟ್ಟಿ ಮಾತನಾಡಿ ’ರಕ್ತದ ಅಗತ್ಯತೆ ಹೆಚ್ಚಾಗಿ ಇರುವ ಕುಂದಾಪುರ ಪರಿಸರದಲ್ಲಿ ಇಂತಹ ಅನೇಕ ಶಿಬಿರಗಳ ಆಯೋಜನೆ ಅಗತ್ಯ ಮತ್ತು ಸಮಾಜಕ್ಕೆ ಸ್ಪೂರ್ತಿದಾಯಕ’ ಎಂದರು.

ವೇದಿಕೆಯಲ್ಲಿ ಸಹಾಯಕ ಧರ್ಮ ಗುರುಗಳು ಅಶ್ವಿನ್ ಅರಾನ್ಹಾ, ಅಬ್ದುಲ್ ಮೋಸಿನ್ ಉಪಾಧ್ಯಕ್ಷರು ಪಾಲ್ಕನ್ ಕ್ಲಬ್ ,ಆದಿಲ್ ಗಫೂರ್ ಅಧ್ಯಕ್ಷರು ಸ್ಪೋರ್ಟ್ಸ್ ಕಮಿಟಿ ,ವಸಿಂ ಭಾಷಾ ಅಧ್ಯಕ್ಷರು ಜಾಮಿಯಾ ಮಸೀದಿ ,ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ನ ಮ್ಯಾನೇಜರ್ ಆದ ರಾಯಲ್ ಲುವಿಸ್ ,ವಿಲ್ಸನ್ ಅಲ್ಮೇಡಾ ಕಥೊಲಿಕ್ ಸಭಾ ವಲಯ ಸಮಿತಿಯ ಅಧ್ಯಕ್ಷರು, ಉಪಸ್ಥಿತರಿದ್ದರು .
ರೋಜರಿ ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಶಾಲೆಟ್ ರೆಬೆಲ್ಲೊ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕರಾದ ಪ್ರೇಮ ಡಿಕುನ್ಹಾ ಪ್ರತಿನಿಧಿಸಿದರು. ಕಥೋಲಿಕ್ ಸಭಾ ಕುಂದಾಪುರ ಘಟಕ ಅಧ್ಯಕ್ಷೆ ಶೈಲಾ ಅಲ್ಮೇಡ ಸ್ವಾಗತಿಸಿದರು, ಕಾರ್ಯಕ್ರಮ ಸಂಚಾಲಕರಾದ ಡಾ. ಸೋನಿ ಡಿಕೋಸ್ತಾ ಕಾರ್ಯಕ್ರಮವನ್ನು ನಿರೂಪಿಸಿ, ಸಹಕಾರ್ಯದರ್ಶಿ ಸಂಗೀತ ಸರ್ವರನ್ನು ವಂದಿಸಿದರು.