ವನಮಹೋತ್ಸವ ಆಚರಣೆ – ಕಥೊಲಿಕ್ ಸಭಾ ಕುಂದಾಪುರ

ಕುಂದಾಪುರ,ಜು. 9: ಇಂದು ಹೋಲಿ ರೋಸರಿ ಚರ್ಚ್ ಆವರಣದಲ್ಲಿ ಕಥೊಲಿಕ್ ಸಭಾ ಕುಂದಾಪುರ ಘಟಕದ ವತಿಯಿಂದ ವನಮಹೋತ್ಸವ ಆಚರಣೆ ನಡೆಯಿತು .ಉದ್ಘಾಟನೆ ಯನ್ನು ನೆರವೇರಿಸಿದ ಅತಿ ವಂದನೀಯ ಫಾ. ಸ್ಟ್ಯಾನಿ ತಾವ್ರೊ ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ , ವರ್ಷಂಪ್ರತಿ ಮನೆಯಲ್ಲಿ ಒಂದು ಗಿಡವನ್ನು ನೆಟ್ಟು ಸಂರಕ್ಷಿಸಿದರೆ, ಭವಿಷ್ಯದಲ್ಲಿ ಉತ್ತಮ ಪರಿಸರ ನಮ್ಮದಾಗುತ್ತದೆ ಎಂದರು.
ಮನೆಗೊಂದು ಉತ್ತಮ ತಳಿಯ ಗಿಡಗಳನ್ನು ಉಚಿತವಾಗಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಧರ್ಮ ಗುರುಗಳಾದ ಅಶ್ವಿನ್ ಅರಾನ್ನಾ, ಪಾಲನ ಮಂಡಳಿಯ ಉಪಾಧ್ಯಕ್ಷೆಯಾದ ಶಾಲೆಟ್ ರೆಬೆಲ್ಲೊ, ಸರ್ವ ಆಯೋಗಗಳ ಸಂಚಾಲಕಿ ಪ್ರೇಮ ಡಿಕುನ್ನಾ, ಕಥೊಲಿಕ್ ಸಭಾ ಕುಂದಾಪುರ ಘಟಕದ ಕಾರ್ಯದರ್ಶಿ ವಾಲ್ಟರ್ ಡಿಸೋಜಾ ಮತ್ತು ಸದಸ್ಯರು ಉಪಸ್ಥಿತರಿದ್ದರು.

ಕಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಕ್ಷೆ ಶೈಲಾ ಅಲ್ಮೇಡಾ ಸ್ವಾಗತಿಸಿ ವಿತರಿಸಿದ ಗಿಡಗಳನ್ನು ಉತ್ತಮವಾಗಿ ಪೋಷಿಸಿದವರಿಗೆ ಮುಂದಿನ ವರ್ಷ ಬಹುಮಾನಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಸರಕಾರದಿಂದ ಉಚಿತವಾಗಿ ಗಿಡಗಳನ್ನು ನೀಡಲು ಸಹಕರಿಸಿದ ಜಿಲ್ಲಾ ಸಹಾಯಕ ಅರಣ್ಯ ಆಯುಕ್ತರಾದ ಶ್ರೀ ಕ್ಲಿಫರ್ಡ್ ಲೋಬೊ ರವರನ್ನು ಕಾರ್ಯಕ್ರಮ ಸಂಚಾಲಕಿ ಆಶಾ ಕರ್ವಾಲ್ಲೊ ಅಭಿನಂದಿಸಿ ,ಕಾರ್ಯಕ್ರಮವನ್ನು ನಿರೂಪಿಸಿದರು
.

ನಕಲಿ ಕೀಟನಾಶಕ ಬಿತ್ತನೆ ಬೀಜ ಮಾರಾಟಗಾರರ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲಿಸಿ,ಮಾರುಕಟ್ಟೆಗೆ ಜಮೀನು ಮಂಜೂರು ಮಾಡಿ, ಒತ್ತುವರಿ ಕೆರೆ,ರಾಜಕಾಲುವೆ ತೆರವುಗೊಳಿಸಿ

ಕೋಲಾರ, ಜು-8, ನಕಲಿ ಕೀಟನಾಶಕ ಬಿತ್ತನೆ ಬೀಜ ಮಾರಾಟಗಾರರ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡಿ ಮಾರುಕಟ್ಟೆಗೆ 100 ಎಕರೆ ಜಮೀನು ಮಂಜೂರು ಮಾಡುವ ಜೊತೆಗೆ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆ ತೆರವುಗೊಳಿಸಲು ವಿಶೇಷ ಕಂದಾಯ ಅಧಿಕಾರಿಗಳ ತಂಡ ರಚನೆ ಮಾಡುವಂತೆ ರೈತ ಸಂಘದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಬಿಂಗಿ ರೋಗದಿಂದ ನಷ್ಟವಾಗಿರುವ ಟೆಮೇಟೋ ಸಮೇತ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಿ ನಕಲಿ ಔಷಧಿ ಕಂಪನಿಗಳ ಸೇವಕರಾಗಿ ಕೃಷಿ ತೋಟಗಾರಿಕೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ ಸಚಿವರಿಗೆ ಮನವರಿಕೆ ಮಾಡಿದರು.


5 ವರ್ಷಗಳಿಂದ ಜಿಲ್ಲೆಯ ರೈತರು ಬೆಳೆಯುವ ಬೆಳೆಗಳಿಗೆ ಬಾದಿಸುತ್ತಿರುವ ರೋಗ ನಿಯಂತ್ರಣಕ್ಕೆ ಗುಣಮಟ್ಟದ ಔಷಧಿ ಇಲ್ಲದೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆ ಕಣ್ಣು ಮುಂದೆಯೇ ನಾಶವಾಗಿ ಸಾಲದ ಸುಲಿಗೆ ಸಿಲುಕುತ್ತಿರುವ ರೈತನ ರಕ್ಷಣೆಗೆ ಕೃಷಿ ತೋಟಗಾರಿಕೆ ಅಧಿಕಾರಿಗಳು ಇದ್ದು ಇಲ್ಲದಂತಾಗಿದೆ ಎಂದು ಜಿಲ್ಲಾಉಸ್ತುವಾರಿ ಸಚಿವರಿಗೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ದೂರು ನೀಡಿದರು.


10 ರೂಪಾಯಿ ಸೊಳ್ಳೆಬತ್ತಿ ಮನೆಯ ಸೊಳ್ಳೆಗಳನ್ನು ಸಾಯಿಸುತ್ತದೆ. ಲಕ್ಷಾಂತರ ರೂಗಳನ್ನು ನೀಡಿ ಖರೀದಿ ಮಾಡುವ ಔಷಧಿಗಳು ಸಿಂಪಡಣೆ ಮಾಡಿದರೂ ಕನಿಷ್ಠ ಪಕ್ಷ ಗಿಡದ ಮೇಲಿನ ಸೊಳ್ಳೆ ಸಹ ಸಾಯುತ್ತಿಲ್ಲ. ಅಷ್ಟರ ಮಟ್ಟಿಗೆ ಔಷಧಿಗಳ ಗುಣಮಟ್ಟ ಕಳಪೆಯಾಗಿದ್ದರೂ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳು ನಕಲಿ ಕಂಪನಿಗಳ ಹಾಗೂ ಅಂಗಡಿ ಮಾಲೀಕರ ಜೊತೆ ಶಾಮೀಲಾಗಿದ್ದಾರೆಂದು ಆರೋಪ ಮಾಡಿದರು.
ಮಾರುಕಟ್ಟೆಯಲ್ಲಿ ಟೆಮೊಟೋ ಬೆಲೆ ಗಗನಕ್ಕೇರಿದ್ದರೂ ಜಿಲ್ಲಾದ್ಯಂತ ರೈತರು ಬೆಳೆದಿರುವ ಸಾವಿರಾರು ಹೆಕ್ಟರ್ ಟೆಮೋಟೋ ಬಿಂಗಿ ರೋಗಕ್ಕೆ ತುತ್ತಾಗಿ ನಾಶವಾಗಿದ್ದರೂ ಇದಕ್ಕೆ ಕಾರಣವನ್ನು ಇದುವರೆಗೂ ಅಧಿಕಾರಿಗಳು ನೀಡಿಲ್ಲ. 3800 ಕಂಪನಿಗಳು 480 ಜನ ಮಾರಾಟಗಾರರು 1200 ಅಂಗಡಿಗಳಿದ್ದರೂ ಯಾವುದೇ ಗುಣಮಟ್ದ ಔಷಧಿ ಸಿಗದೆ ಪ್ರತಿಯೊಂದು ನಕಲಿ ಔಷಧಿಯನ್ನು ಕಂಪನಿಗಳು ನೇರವಾಗಿ ರಾತ್ರಿವೇಳೆ ರೈತರಿಗೆ ಮಾರಾಟ ಮಾಡಲು ಅಧಿಕಾರಿಗಳೇ ಕುಮಕ್ಕು ನೀಡುತ್ತಿದ್ದಾರೆ. ಅಧಿಕಾರಿಗಳ ವಿರುದ್ದ ಗಂಭೀರ ಆರೋಪ ಮಾಡಿದರು.
ಮಹಿಳಾ ಜಿಲ್ಲಾಧ್ಯಕ್ಷ ಎ.ನಳಿನಿಗೌಡ ಮಾತನಾಡಿ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಏಷ್ಯಾದಲ್ಲೆ 2ನೇ ಅತಿದೊಡ್ಡ ಮಾರುಕಟ್ಟೆಯಂದು ಹೆಗ್ಗಳಿಕೆ ಪಡೆದಿರುವ ಎ.ಪಿ.ಎಂ.ಸಿ. ಮಾರುಕಟ್ಟೆಯ ಜಾಗದ ಸಮಸ್ಯೆಗೆ 100 ಎಕರೆ ಜಮೀನು ಮಂಜೂರು ಮಾಡಲು 10 ವರ್ಷಗಳಿಂದ ಸಂಬಂಧಪಟ್ಟ ಇಲಾಖೆ ಮತ್ತು ಸರ್ಕಾರಗಳ ಗಮನ ಸಳೆದರು ಇದುವರೆವಿಗೂ ಜಾಗದ ಸಮಸ್ಯೆ ಬಗೆ ಹರಿದಿಲ್ಲ. ಮಾನ್ಯರು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾಧ್ಯಂತ ಮುಂಗಾರು ಮಳೆ ಆರಂಭವಾಗಿದ್ದು, ಮಳೆ ನೀರು ಸರಾಗವಾಗಿ ಕೆರೆಗಳಿಗೆ ಹರಿಯಲು ರಾಜಕಾಲುವೆಗಳು ಒತ್ತುವರಿಯಾಗಿದ್ದು, ಇದರಿಂದ ಕೆರೆಗೆ ಹರಿಯಬೇಕಾದ ಮಳೆ ನೀರು ರೈತರ ಬೆಳೆಗಳು ಹಾಗೂ ಬಡವರ ಮನೆಗಳಿಗೆ ಹರಿಯುತ್ತಿವೆ. ಈ ಸಮಸ್ಯೆಗೆ ಮೂಲಕಾರಣ ಒತ್ತುವರಿಯಾಗಿರುವ ಕೆರೆ, ರಾಜಕಾಲುವೆಗಳ ತೆರವುಗೊಳಿಸಲು ವಿಫಲವಾಗಿರುವ ಜಿಲ್ಲಾಡಳಿತವೇ ಮೂಲಕಾರಣವಾಗಿವೆ. ಮಾನ್ಯರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಕೆರೆ, ರಾಜಕಾಲುವೆ ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶ ನೀಡಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಸುರೇಶ್ ರವರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಯಲ್ಲಣ್ಣ, ಹರೀಶ್, ಮಂಗಸಂದ್ರ ತಿಮ್ಮಣ್ಣ, ನರಸಿಂಹಯ್ಯ, ವೆಂಕಟೇಶಪ್ಪ, ಕುವಣ್ಣ, ಗಿರೀಶ್, ಮುಂತಾದವರು ಇದ್ದರು.

ಮೂಡ್ಲಕಟ್ಟೆ ಎಂ ಐ ಟಿ: ವನಮಹೋತ್ಸವ ಕಾರ್ಯಕ್ರಮ

ಕುಂದಾಪುರದ ಮೂಡ್ಲಕಟ್ಟೆ ಇಂಜಿನಿಯರಿಂಗ್  ಕಾಲೇಜಿನಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆಯ ಪ್ರತಿಜ್ಞಾ ವಿಧಿಯನ್ನು ತೆಗೆದುಕೊಳ್ಳಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ  ಪ್ರಾಂಶುಪಾಲರಾದ ಡಾ| ಅಬ್ದುಲ್ ಕರೀಮ್ ಅವರು ಮಾತನಾಡಿ ಉತ್ತಮವಾದ ಆರೋಗ್ಯಕ್ಕೆ ಪರಿಸರ ಸಂರಕ್ಷಣೆ ಅತ್ಯಗತ್ಯ ಎಂದು ಹೇಳುತ್ತ ಅದರ  ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದರು. ತದನಂತರ ಸಾಂಕೇತಿಕವಾಗಿ ಗಿಡ ನೆಡುವುದರ ಮೂಲಕ ವನಮಹೋತ್ಸ ಆಚರಣೆಗೆ ಚಾಲೆನೆ ನೀಡಲಾಯಿತು. 2000ಕ್ಕೂ ಹೆಚ್ಚು ಗಿಡಗಳನ್ನು ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ನೆಟ್ಟು ನಮ್ಮ ಎಮ್ ಐ ಟಿ ಕೆ ಹಸಿರು ಎಮ್ ಐ ಟಿ ಕೆ ಎಂಬ ಘೋಷಣೆ ಮಾಡಿದರು. ಕಾರ್ಯಕ್ರಮದಲ್ಲಿ  ಉಪಪ್ರಾಂಶುಪಾಲರಾದ  ಪ್ರೊ. ಮೆಲ್ವಿನ್ ಡಿ ಸೋಜಾ, ರಾಷ್ಟ್ರೀಯ ಸೇವಾ ಯೋಜನಾ ಕೋಶದ ಸಂಯೋಜಕರಾದ ಪ್ರೊಫೆಸರ್ ಬಾಲನಾಗೇಶ್ವರ್ ಎಸ್,  ಯೂತ್ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಪ್ರೊಫೆಸರ್ ವರುಣ್ ಕುಮಾರ್, ಕುಂದಾಪುರದ ಸಾಮಾಜಿಕ ಅರಣ್ಯ ಸಿಬ್ಬಂದಿ , ಉಪನ್ಯಾಸಕರು  ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಪ್ರಾಧ್ಯಾಪಕಿ ಸುಷ್ಮ  ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ವಿಘ್ನೇಶ್ ಪ್ರತಿಜ್ಞಾ ವಿಧಿ ಬೋಧಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮಂಡಿಸಿರುವ 14ನೇ ರಾಜ್ಯ ಬಜೆಟ್ 2023-24 ರ ಸಂಪೂರ್ಣ ವಿವರ

ಶಿಕ್ಷಣ ಇಲಾಖೆ 37,587 ಕೋಟಿ

ಪಶು ಸಂಗೋಪನೆ & ಮೀನುಗಾರಿಕೆ ಇಲಾಖೆ 3,024 ಕೋಟಿ

ನಗರಾಭಿವೃದ್ಧಿ ಇಲಾಖೆ & ನೀರಾವರಿ ಇಲಾಖೆ 19,044 ಕೋಟಿ

ಲೋಕೋಪಯೋಗಿ ಇಲಾಖೆ 10,143 ಕೋಟಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 24,166 ಕೋಟಿ

ಇಂಧನ ಇಲಾಖೆ 22,773 ಕೋಟಿ

ಗ್ರಾಮೀಣಾಭಿವೃದ್ಧಿ & ಪಂಚಾಯತ್​ರಾಜ್ ಇಲಾಖೆ 18,038 ಕೋಟಿ

ಗ್ರಾಮೀಣಾಭಿವೃದ್ಧಿ & ಪಂಚಾಯತ್​ರಾಜ್ ಇಲಾಖೆ 18,038 ಕೋಟಿ

ನೀರಾವರಿ ಯೋಜನೆಗೆ  

770 ಕೋಟಿ ರೂ. ವೆಚ್ಚದಲ್ಲಿ 899 ಕೆರೆ ತುಂಬಿಸುವ 19 ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ.

ಕೆ.ಸಿ ವ್ಯಾಲಿ ಮತ್ತು ಹೆಚ್.ಎನ್.ವ್ಯಾಲಿ ಯೋಜನೆಗಳ ಎರಡನೇ ಹಂತದಲ್ಲಿ 529 3 ಕೋಟಿ ರೂ. ವೆಚ್ಚದಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 296 ಕರೆ ತು೦ಬಿಸುವ ಯೋಜನೆ ಅನುಷ್ಠಾನ.

ಎತ್ತಿನಹೊಳೆ ಯೋಜನೆ ಬಾಕಿ ಕಾಮಗಾರಿ ತ್ವರಿತ ಪೂರ್ಣಗೊಳಿಸಲು ಕ್ರಮ.

ಮೇಕೆದಾಟು ಯೋಜನೆಗೆ ಅರಣ್ಯ ಭೂಮಿ ಸ್ವಾಧೀನ, ಭೂಸ್ವಾಧೀನಕ್ಕೆ ಕ್ರಮ.

ಸಹಕಾರ ಮತ್ತು ರೇಷ್ಮೆ

ಶೂನ್ಯ ಬಡ್ಡಿ ದರದಲ್ಲಿ ನೀಡುವ ಅಲ್ಪಾವಧಿ ಸಾಲದ ಮಿತಿ 3 ಲಕ್ಷದಿಂದ 5 ಲಕ್ಷ ರೂ. ಗಳಿಗೆ ಹೆಚ್ಚಳ.

ಶೇ.3 ರ ಬಡ್ಡಿ ದರದಲ್ಲಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮಿತಿ 10 ಲಕ್ಷ ರೂ. ಗಳಿಂದ 15 ಲಕ್ಷ ರೂ.ಗಳಿಗೆ ಹೆಚ್ಚಳ,

30 ಲಕ್ಷಕ್ಕೂ ಹೆಚ್ಚು ರೈತರಿಗೆ 25,000 ಕೋಟಿ ರೂ. ಸಾಲ ವಿತರಣೆ ಗುರಿ.

ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆಯಲು ಕ್ರಮ,

ರೇಷ್ಮೆ ನೂಲು ಬಿಚ್ಚಾಣಿಕದಾರರಿಗೆ 5 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ.

ಕೃಷಿ ಮತ್ತು ತೋಟಗಾರಿಕೆ ಕೃಷಿ ಭಾಗ್ಯ ಯೋಜನೆ 100 ಕೋಟಿ ರೂ. ವೆಚ್ಚದಲ್ಲಿ ಮರು ಜಾರಿ

ನವೋದ್ಯಮ ಹೊಸ ಯೋಜನೆಯಡಿ ಕೃಷಿ ಉದ್ಯಮಗಳಿಗೆ ನಾವೀನ್ಯತೆಯನ್ನು ಪ್ರೋತ್ಸಾಹಿಸಲು 10 ಕೋಟಿ ರೂ. ನೆರವು

ಕೃಷಿ ಯಾಂತ್ರೀಕರಣಕ್ಕೆ ಪ್ರೋತ್ಸಾಹ: ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಬಲಪಡಿಸಲು 100 ಹೈಟೆಕ್ ಹಾರ್ವೆಸ್ಟ‌ ಹಬ್ ಸ್ಥಾಪನೆಗೆ 50 ಕೋಟಿ ರೂ. ಅನುದಾನ. FPO ಗಳಿಗೆ ಪ್ರೋತ್ಸಾಹ

GI TAG ಹೊಂದಿರುವ ಕಾಫಿ, ಮೈಸೂರು ಮಲ್ಲಿಗೆ, ನಂಜನಗೂದು ರಸಬಾಳೆ, ಮೈಸೂರು ವೀಳೆದೆಲೆಗಳ ಉತ್ಪಾದನೆ, ಸಂಶೋಧನೆ, ಮಾರುಕಟ್ಟೆ ಮತ್ತು ಬ್ರಾಂಡಿಂಗ್ ಮಾಡಲು ಕ್ರಮ

ಮೀನುಗಾರಿಕೆ ಮತ್ತು ಪಶು ಸಂಗೋಪನೆ

ಮೀನುಗಾರ ಮಹಿಳೆಯರಿಗೆ ಬ್ಯಾಂಕುಗಳಲ್ಲಿ ಬಡ್ಡಿರಹಿತವಾಗಿ ನೀಡುವ ಸಾಲದ ಮಿತಿ 3 ಲಕ್ಷ ರೂ. ಗಳಿಗೆ ಹೆಚ್ಚಳ,

ಮೀನುಗಾರರ ದೋಣಿಗಳಿಗೆ ರಿಯಾಯಿತಿ ದರದ ಡೀಸೆಲ್‌ ಮಿತಿ 2 ಲಕ್ಷ ಕಿಲೋ ಲೀಟರ್ ಗಳವರೆಗೆ ಹೆಚ್ಚಿಸಲು 250 ಕೋಟಿ ರೂ. ನೆರವು.

ಮೀನುಗಾರಿಕಾ ದೋಣಿಗಳ ಸೀಮೆ ಎಣ್ಣೆ ಇಂಜಿನ್ಗಳನ್ನು ಪೆಟ್ರೋಲ್/ಡೀಸಲ್ ಇಂಜಿನ್ಗಳಾಗಿ ಬದಲಾಯಿಸಲು ತಲಾ

50,000 ರೂ. ಸಹಾಯಧನ: ಐದು ಕೋಟಿ ರೂ. ನೆರವು.

ಜಾನುವಾರುಗಳ ಆಕಸ್ಮಿಕ ಸಾವಿನ ಸಂಕಷ್ಟ ನಿವಾರಣೆಗೆ ಅನುಗ್ರಹ ಯೋಜನೆ ಮರುಜಾರಿ.

ನಂದಿನಿ ಹೈನು ಉತ್ಪನ್ನಗಳ ಬ್ರಾಂಡನ್ನು ಇನ್ನಷ್ಟು ವಿಸ್ತರಿಸಿ, ಬೆಳೆಸಲು ಸರ್ಕಾರದ ಆದ್ಯತೆ.

ಅನ್ನಭಾಗ್ಯ ಯೋಜನೆ ಹಸಿವು ಮುಕ್ತ ಕರ್ನಾಟಕಕ್ಕೆ ಸರ್ಕಾರದ ಪಣ

ಅರ್ಹ ಫಲಾನುಭವಿಗಳಿಗೆ 5 ಕೆ.ಜಿ. ಹೆಚ್ಚುವರಿ ಆಹಾರಧಾನ್ಯ ವಿತರಣೆ

ಆಹಾರಧಾನ್ಯ ಲಭ್ಯವಾಗುವವರೆಗೆ ಪ್ರತಿ ಫಲಾನುಭವಿಗೆ 170 ರೂ. ನಂತೆ ಡಿಬಿಟಿ ಮೂಲಕ ನಗದು ವರ್ಗಾವಣೆ

ಅಂದಾಜು 442 ಕೋಟಿ ಫಲಾನುಭವಿಗಳಿಗೆ ಅನುಕೂಲ: ಈ ಯೋಜನೆಗೆ 10,275 ಕೋಟಿ ರೂ. ಅನುದಾನ

ಗೃಹ ಲಕ್ಷ್ಮಿ ಯೋಜನೆಗೆ

ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2000 ರೂಪಾಯಿ ನೆರವು ನೇರ ವರ್ಗಾವಣೆ

ಈ ಯೋಜನೆಗೆ ವಾರ್ಷಿಕ ಅಂದಾಜು 30,000 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆಯಿದ್ದು, ಇದು ದೇಶದಲ್ಲಿಯೇ ಅತಿ ದೊಡ್ಡ ಆರ್ಥಿಕ ಭದ್ರತಾ ಯೋಜನೆಯಾಗಿದೆ

ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿ

ಬೆಲೆ ಏರಿಕೆಯಿಂದ ತತ್ತರಿಸಿರುವ ಕುಟುಂಬಗಳಿಗೆ ನೆಮ್ಮದಿ

ಸುಮಾರು 130 ಕೋಟಿ ಮಹಿಳೆಯರಿಗೆ ಈ ಯೋಜನೆಯಿಂದ ಲಾಭ

ಹೊಸ ಶಿಕ್ಷಣ ನೀತಿ ರೂಪಿಸಲು ಕ್ರಮ

ಸಮಾಜದ ಸ್ವಾಸ್ಥ್ಯ ಕಾಪಾಡುವ ಆಶಯದಿಂದ ಪಠ್ಯಪುಸ್ತಕ ಮರುಪರಿಷ್ಕರಣೆಗೆ ಕ್ರಮ.

ಈ ಸ್ಥಳೀಯವಾದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ವಾಸ್ತವಿಕತೆಯನ್ನು ಆಧರಿಸಿದ ಹೊಸ ಶಿಕ್ಷಣ ನೀತಿ ರೂಪಿಸಲು ಕ್ರಮ.

1ರಿಂದ 10 ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ವಾರದಲ್ಲಿ ಎರಡು ದಿನ ನೀಡುವ ಪೂರಕ ಪೌಷ್ಟಿಕ ಆಹಾರ: 60 ಲಕ್ಷ ಮಕ್ಕಳಿಗೆ ಅನುಕೂಲ 280 ಕೋಟಿ ರೂ. ಅನುದಾನ.

ಶಾಲೆ, ಕಾಲೇಜುಗಳ ಕೊಠಡಿಗಳ ನಿರ್ಮಾಣ, ದುರಸ್ತಿಗೆ ಹಾಗೂ ಶೌಚಾಲಯ ಘಟಕ ನಿರ್ಮಾಣಕ್ಕೆ 850 ಕೋಟಿ ರೂ. ಅನುದಾನ,

ಬೆಂಗಳೂರಿನ ಎಸ್.ಕೆ.ಎಸ್.ಜೆ.ಟಿ.ಐ. ಎಂಜಿನಿಯರಿಂಗ್ ಕಾಲೇಜಿನಲ್ಲಿರುವ ಜವಳಿ ತಂತ್ರಜ್ಞಾನ ವಿಭಾಗವನ್ನು ಉನ್ನತೀಕರಣಕ್ಕೆ ಕ್ರಮ.

ಯುವನಿಧಿ ಯೋಜನೆಯಡಿ ಉದ್ಯೋಗ ಸಿಗುವವರೆಗೆ ನಿರುದ್ಯೋಗ ಭತ್ಯೆ

2023 ರಲ್ಲಿ ಪದವಿ ಪಡೆದು 6 ತಿಂಗಳವರೆಗೂ ಉದ್ಯೋಗ ಲಭಿಸದ ಯುವಜನರಿಗೆ 2 ವರ್ಷದವರೆಗೆ ಅಥವಾ ಉದ್ಯೋಗ ಸಿಗುವವರೆಗೆ ನಿರುದ್ಯೋಗ ಭತ್ಯೆ

ಪದವೀಧರರಿಗೆ ಪ್ರತಿ ತಿಂಗಳು 3000 ರೂಪಾಯಿ

ಡಿಪ್ಲೋಮೋ ಹೊಂದಿರುವವರಿಗೆ ಪ್ರತಿ ತಿಂಗಳು 1500 ರೂಪಾಯಿ

ನಾಡಿನ ಯುವ ಜನತೆಗೆ ಆರ್ಥಿಕ ನೆರವು ನೀಡಿ ಆತ್ಮವಿಶ್ವಾಸ ತುಂಬಿ ಬದುಕಿನಲ್ಲಿ ನೆಲೆ ಕಂಡುಕೊಳ್ಳಲು ಸಹಾಯ

ಸುಮಾರು 3.1 ಲಕ್ಷ ಯುವಜನರಿಗೆ ಈ ಯೋಜನೆಯಿಂದ ಲಾಭ

ಗೃಹ ಜ್ಯೋತಿ ಯೋಜನೆ

ಪ್ರತಿ ಮನೆಗೆ ಪ್ರತಿ ತಿಂಗಳಿಗೆ ಅವರ ಸರಾಸರಿ ಬಳಕೆಯ ಜೊತೆಗೆ ಶೇ. 10 ರಷ್ಟು ಹೆಚ್ಚುವರಿ ಯೂನಿಟ್ ವಿದ್ಯುತ್‌ ಉಚಿತ 200 ಯೂನಿಟ್‌ ವರೆಗೆ

ವಾರ್ಷಿಕ ಅ೦ದಾಜು 13,910 ಕೋಟಿ ರೂ. ವೆಚ್ಚದಲ್ಲಿ ಜಾರಿ

2 ಕೋಟಿಗಿಂತ ಅಧಿಕ ಗೃಹ ಬಳಕೆದಾರರಿಗೆ ಈ ಯೋಜನೆಯಿಂದ ಅನುಕೂಲ (ಪ್ರತಿ ಕುಟುಂಬಕ್ಕೆ ಪ್ರತಿಯೊಬ್ಬ ವ್ಯಕ್ತಿಗೆ ಇಂಧನ ಖಾತರಿ ನೀಡುವ ಯೋಜನೆ.

 ಬೆಂಗಳೂರು ಅಭಿವೃದ್ಧಿಗೆ

ಬೆಂಗಳೂರು ನಗರವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಬ್ರಾಂಡ್ ಬೆಂಗಳೂರು ಪರಿಕಲ್ಪನೆ ಜಾರಿ.

ನಗರದ ಸಂಚಾರ ವ್ಯವಸ್ಥೆ, ಪರಿಸರ, ಘನತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸ್ಥಳಗಳ ಸದ್ಬಳಕೆ.

ಸಾರ್ವಜನಿಕರ ಆರೋಗ್ಯ, ಪ್ರಾಣಿಗಳ ಆರೋಗ್ಯ, ಜನಸ್ನೇಹಿ ಇ ಆಡಳಿತ.

ನೀರಿನ ಭದ್ರತೆ ಹಾಗೂ ಪ್ರವಾಹ ನಿರ್ವಹಣೆಯ ಸವಾಲುಗಳನ್ನು ಎದುರಿಸಲು ಕ್ರಮ.

ಪತ್ರಕರ್ತರೊಂದಿಗೆ ಸಂವಾದ: ಜಿಲ್ಲಾಧಿಕಾರಿ ಅಕ್ರಂ ಪಾಷಾ ನೀರುಪೂರೈಕೆ , ಅಭಿವೃದ್ಧಿಪರ ಆಡಳಿತ , ಶಿಕ್ಷಣ , ಆರೋಗ್ಯ ಸ್ವಚ್ಛ ಕ್ಷಣ,ಆರೋಗ್ಯಸಚತೆಗೆ ಒತ್ತು – ಭರವಸೆ

ಕೋಲಾರದಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿ ಅಕ್ರಂ ಪಾಷಾ ನೀರುಪೂರೈಕೆ , ಅಭಿವೃದ್ಧಿಪರ ಆಡಳಿತ , ಶಿಕ್ಷಣ , ಆರೋಗ್ಯ ಸ್ವಚ್ಛ ಕ್ಷಣ , ಆರೋಗ್ಯ ಸಚತೆಗೆ ಒತ್ತು – ಭರವಸೆ

ಕೋಲಾರ : ಕುಡಿಯುವ ನೀರಿನ ಪೂರೈಕೆ , ಅಭಿವೃದ್ಧಿ ಪರ ಆಡಳಿತಕ್ಕೆ ಆದ್ಯತೆ , ಶಿಕ್ಷಣ , ಆರೋಗ್ಯ ಕ್ಷೇತ್ರಗಳಿಗೆ ಒತ್ತು , ಸ್ವಚ್ಛತೆ ಮೂಲ ಸೌಕರ್ಯ ಕೊರತೆ ನೀಗಿಸುವ ಪ್ರಯತ್ನ , ಎಲ್ಲಾ ಇಲಾಖೆಗಳ ಖಾಲಿ ಹುದ್ದೆಗಳನ್ನು ತುಂಬಲು ಅಗತ್ಯ ಕ್ರಮವಹಿಸಲಾಗುವುದು ಎಂದು ನೂತನ ಜಿಲ್ಲಾಕಾರಿ ಅಕ್ರಂಪಾಷಾ ಹೇಳಿದರು .

ನಗರದ ತಮ್ಮ ಕಚೇರಿಯ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಅವರು , ತಮ್ಮ ಆಡಳಿತದ ಆದ್ಯತೆಗಳ ಕುರಿತು ವಿವರಣೆ ನೀಡಿದರು. ಕೋಲಾರ ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರು ಜನರಿಗೆ ಲಭ್ಯವಾಗದಿರುವುದು ಕುರಿತು ಗಮನಿಸಿದ್ದು , ಶುದ್ಧ ಕುಡಿಯುವನೀರು ಪೂರೈಕೆ ಮಾಡುವ ವಿಚಾರದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕೋಲಾರ ನಗರದಸೇರಿದಂತೆ ಬಹುತೇಕ ಕೊರತೆ ಎದ್ದು ಪಟ್ಟಣಗಳಲ್ಲಿ ಸ್ವಚ್ಛತೆಯ ಕಾಣಿಸುತ್ತಿದ್ದು , ಸ್ವಚ್ಛಕಾ ಕಾರ್ಯಗಳನ್ನು ಹಂತ ಹಂತವಾಗಿ ಜಾರಿಗೆ ತರಲಾಗುವುದು , ಈ ವಿಚಾರದಲ್ಲಿ ಸಾರ್ವಜನಿಕರ ಸಹಕಾರವೂ ಅತ್ಯಗತ್ಯ ಎಂದರು. ಕೋಲಾರ ನಗರಕ್ಕೆ ವರ್ತುಲ ರಸ್ತೆ ನಿರ್ಮಾಣ ಮಾಡಬೇಕೆಂಬ ಬಗ್ಗೆ ಬಹಳ ವರ್ಷಗಳ ಬೇಡಿಕೆ ಇದ್ದು , ಈ ಬೇಡಿಕೆಯನ್ನು ಬಜೆಟ್ ನಂತರ ಈಡೇರಿಸುವ ಪ್ರಯತ್ನ ನಡೆಸಲಾಗುವುದು ಎಂದ ಅವರು , ಇದೇ ರೀತಿ ನಗರದ ಅಭಿವೃದ್ಧಿಗಾಗಿ ಹೊಸ ಯೋಜನೆಗಳನ್ನು ರೂಪಿಸಿ ಜನಪ್ರತಿನಿಗಳ ಸಹಕಾರದೊಂದಿಗೆ ಅನುಷ್ಠಾನಕ್ಕೆ ತರಲಾಗುವುದು , ಕೋಲಾರ ನಗರಕ್ಕೆ ಹೊಸರೂಪ ನೀಡಲಾಗುವುದು ಎಂದರು.

ಅಲ್ಪಸಂಖ್ಯಾತರ ಇಲಾಖೆಗೆ ಹೊಸ ರೂಪ

ಹಿಂದೆ ತಾವು ಅಲ್ಪಸಂಖ್ಯಾತರ ಆಯುಕ್ತರಾಗಿ ಕೆಲಸ ನಿರ್ವಹಿಸಿದಾಗ ರಾಜ್ಯಾದ್ಯಂತ 150 ಮೊರಾರ್ಜಿದೇಸಾಯಿ ವಸತಿ ಶಾಲೆಗಳು , 350 ಹಾಸ್ಟೆಲ್‌ಗಳು ಮತ್ತು 200 ಶಾಲೆಗಳನ್ನು ಆರಂಭಿಸಿ ಹೊಸದಾಗಿ 11 ಲಕ್ಷ ಮಕ್ಕಳಿಗೆ ಆನ್‌ಲೈನ್ ಮೂಲಕ ವಿದ್ಯಾರ್ಥಿ ವೇತನ ಖಾತೆಗೆ ತಲುಪುವಂತೆ ಮಾಡಲಾಗಿತ್ತು ಎಂದರು.

ಇದೇ ರೀತಿ ಕೋಲಾರ ಜಿಲ್ಲೆಯ ಸರಕಾರಿ ಶಾಲೆಗಳಿಗೆ ಸ್ಮಾರ್ಟ್ ಬೋರ್ಡ್ , ತರಗತಿಗಳನ್ನು ಕೊಡಿಸುವ ಮೂಲಕ , ಸ್ಮಾರ್ಟ್ ಶಿಕ್ಷಕರಿಗೆ ತರಬೇತಿ ನೀಡಿ ಪ್ರೋತ್ಸಾಹಿಸಿ ವಿವಿಧ ಶೈಕ್ಷಣಿಕ ಯೋಜನೆಗಳಿಗೆ ಒತ್ತು ನೀಡಲಾಗುವುದು ಎಂದು ವಿವರಿಸಿದರು .

ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗೆ ಒತ್ತು

ಕೋಲಾರ ಜಿಲ್ಲೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದಕ್ಕೆ ಹೆಸರುವಾಸಿಯಾಗಿದ್ದು , ಈಗ ಕೊಂಚ ಕಡಿಮೆಯಾಗಿದೆ . ಕೋಲಾರ ಜಿಲ್ಲೆಯ ಹಿಂದಿನ ಹೆಸರನ್ನು ಉಳಿಸುವ ಸಲುವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತು ಯುವ ಜನತೆಗೆ ತರಬೇತಿ ಮಾಹಿತಿ ನೀಡಲಾಗುವುದು , ಮಾಹಿತಿ ನೀಡುವ ಜೊತೆಗೆ ವಿವಿಧ ಹಂತಗಳಲ್ಲಿ ಹುದ್ದೆಗಳನ್ನು ತುಂಬಲು ಉದ್ಯೋಗ ಮೇಳವನ್ನು ನಡೆಸಲಾಗುವುದು , ಸಿಎಸ್‌ಆರ್ ನಿಯನ್ನು ಬಳಸಿಕೊಂಡು ಸರಕಾರಿ ಶಾಲೆಗಳ ಸ್ವರೂಪವನ್ನೇ ಬದಲಾಯಿಸಲಾಗುವುದು ಎಂದರು .

ಅಭಿವೃದ್ಧಿಪರ ಆಡಳಿತ

ಕೋಲಾರ ಜಿಲ್ಲೆಯಲ್ಲಿ ಅಭಿವೃದ್ಧಿ ಪರ ಆಡಳಿತ ನೀಡುವುದು ತಮ್ಮ ಗುರಿಯಾಗಿದ್ದು , ತುರ್ತು ಆಗಬೇಕಾದ ಕೆಲಸಗಳನ್ನು ಪಟ್ಟಿ ಮಾಡಿಕೊಂಡು ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರಲಾಗುವುದು , ಮಾಡುವ ಕೆಲಸದಲ್ಲಿ ಹಾಗೂ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ಆಗುತ್ತಾ , ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುವ ಮೂಲಕ ಅನಗತ್ಯ ವಿಳಂಬವನ್ನು ನಿವಾರಿಸಲಾಗುವುದು ಎಂದು ವಿವರಿಸಿದರು .

ಈಗಾಗಲೇ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಆಯಾ ಮುಖ್ಯಸ್ಥರಿಗೆ ಕೋರಲಾಗಿದೆ . ಪತ್ರ ಬರೆದು ನಗರಸಭೆಗಳಲ್ಲಿ ಶೇ .70 ರಷ್ಟು ಹುದ್ದೆ ಖಾಲಿ ಇವೆ , ಕಂದಾಯ ಇಲಾಖೆಯಲ್ಲಿ 18 ಶಿರಸ್ತೇದಾರರು , 70 ಗ್ರಾಮ ಲೆಕ್ಕಿಗರ ಹುದ್ದೆಗಳು ಖಾಲಿ ಇವೆ ಎಂದು ವಿವರಿಸಿದರು . ಬಜೆಟ್ ನಂತರ ಸ್ಥಗಿತಗೊಂಡಿರುವ ಹಾಗೂ ನೆನೆಗುದಿಗೆ ಬಿದ್ದಿರುವ ಎಲ್ಲಾ ಚಾಲನೆ ಕಾಮಗಾರಿಗಳಿಗೆ ಇಲಾಖೆಯ ತುಂಬುವಂತೆ ನೀಡಲಾಗುವುದು ಎಂದು ಹೇಳಿದ ಅವರು , ಕೋಲಾರ ಎಪಿಎಂಸಿ ವಿಸ್ತರಣೆಗೆ 36 ಎಕರೆ ಜಾಗವನ್ನು ಗುರುತಿಸಲಾಗಿದ್ದು , ಅರಣ್ಯ ಇಲಾಖೆಯಿಂದ ಹಸ್ತಾಂತರಿಸಲು ಪತ್ರ ಬರೆದಿದ್ದು , ಶೀಘ್ರವೇ ನಿರ್ಧಾರವಾಗಿ ಭೂಮಿ ಸಿಕ್ಕ ನಂತರ ವಿಸ್ತರಣೆ ಕಾರ್ಯ ಮಾಡಲಾಗುವುದು ಎಂದರು . ಜಲ್ಲಿ ಕ್ರಷರ್ , ಅಕ್ರಮ ಗಣಿಗಾರಿಕೆ , ಕೆಸಿ ವ್ಯಾಲಿ ನೀರಿನ ಮೂರನೇ ಹಂತದ ಶುದ್ದೀಕರಣ , ಕೃಷಿ , ತೋಟಗಾರಿಕೆ , ಹೈನುಗಾರಿಕೆ ಮೇಲೆ ಆಗಿರುವ ಪರಿಣಾಮಗಳ ಕುರಿತು ಗಮನಹರಿಸಿ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಘೋಷಿಸಿದರು.

ಬೈರವೇಶ್ವರ ವಿದ್ಯಾನಿಕೇತನ : ಮಕ್ಕಳ ಅಕ್ಷರ ಕಲಿ ಕಾರ್ಯಕ್ರಮ ಶ್ರೀ ಮಂಗಳಾನಂದನಾಥ ಸ್ವಾಮಿಜಿಯವರಿಂದ ಉದ್ಗಾಟನೆ

ಶ್ರೀನಿವಾಸಪುರ 3 : ಮಕ್ಕಳಿಗೆ ಕೇವಲ ಪುಸ್ತಕದ ಅಕ್ಷರ ಕಲಿಸಿದರೆ ಸಾಲದು, ಜೊತೆಗೆ ವಿದ್ಯಾರ್ಥಿಗಳಲ್ಲಿ ಸಂಸ್ಕøತಿ, ಸಂಸ್ಕಾರ ಬೆಳಸಿದಾಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪುಗೊಂಡು ಸಮಾಜಮುಖೀಯಾಗಿ ಬದುಕಲು ಸಾಧ್ಯ ಎಂದು ಆದಿಚುಂಚುನಿಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮಿಜಿ ಹೇಳಿದರು.
ಪಟ್ಟಣ ಹೊರವಲಯದ ಬೈರವೇಶ್ವರ ವಿದ್ಯಾನಿಕೇತನದ ಆವರಣದಲ್ಲಿ ಬುಧವಾರ ಮಕ್ಕಳ ಅಕ್ಷರ ಕಲಿ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.
ವಿದ್ಯೆ ಎಂದರೆ ಕೇವಲ ಪದವಿ ಸಂಪಾದನೆ ಮಾತ್ರವಲ್ಲ . ವಿದ್ಯೆಗೆ ವಿನಯವೇ ಭೂಷಣವಾಗಿದ್ದು ತಾನು ಮಾತ್ರವೇ ಬದುಕಬೇಕೆಂಬ ಸ್ವಾರ್ಥ ಬಿಟ್ಟು ಎಲ್ಲರೂ ಬದುಕಬೇಕೆಂಬುದನ್ನು ಅಳವಡಿಸಿಕೊಂಡಾಗ ಮಾತ್ರ ಅದು ವಿದ್ಯೆಯಾಗುತ್ತದೆ ಎಂದರು.
ಪ್ರತಿಯೊಂದು ಮಗುವಿಗೂ ಪ್ರಾಥಮಿಕ ಹಂತದಲ್ಲಿ ಉತ್ತಮ ಶಿಕ್ಷಣ ದೊರೆತರೆ ಮುಂದಿನ ವಿದ್ಯಾಭ್ಯಾಸಕ್ಕೆ ಅದೇ ಭದ್ರಬುನಾದಿ ಆಗಿರುತ್ತದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು.
ಪಾಲಕರು ತಮ್ಮ ಮಕ್ಕಳ ಬೆಳವಣಿಗೆಯಂತೆ ಅವರ ವಿಧ್ಯಾಬ್ಯಾಸ ಹಾಗು ಆಸ್ತಿ ಇತರೆ ಅನೇಕ ರೀತಿಯಲ್ಲಿ ಕನಸ್ಸನ್ನು ಕಂಡಿರುತ್ತಾರೆ. ಪಾಲಕರು ತಮ್ಮ ಕನಸನ್ನು ನನಸು ಮಾಡಿಸುವ ರೀತಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿರುತ್ತಾರೆ . ಪಾಲಕರ ಕನಸನ್ನು ನನಸು ಮಾಡುವ ರೀತಿಯಲ್ಲಿ ಮಕ್ಕಳು ಪ್ರಯತ್ನಿಸುವಂತೆ ಸಲಹೆ ನೀಡಿದರು.
ಬೈರವೇಶ್ವರ ವಿದ್ಯಾನಿಕೇತನದ ಶಾಲಾ ಕಾಲೇಜುಗಳ ಆಡಳಿತಾಧಿಕಾರಿ ಶಿವರಾಮೇಗೌಡ, ಅರಣ್ಯ ಇಲಾಖೆಯ ಆರ್‍ಎಫ್‍ಒ ಮಹೇಶ್, ಶ್ರೀನಿವಾಸಪುರ ಬೈರವೇಶ್ವರ ಶಾಲೆಯ ನಿರ್ದೇಶಕ ಎ.ವೆಂಕಟರೆಡ್ಡಿ, ಶಿಕ್ಷಣ ಚಿಂತಕರಾದ ಮಂಜುಳ, ಪ್ರಾಂಶುಪಾಲ ಗಂಗಾಧರ್, ಮುಖ್ಯ ಶಿಕ್ಷಕ ವೆಂಕಟರಮಣಾರೆಡ್ಡಿ ಹಾಗೂ ಮಕ್ಕಳು ಪೋಷಕರು ಪಾಲ್ಗುಂಡಿದ್ದರು.

ಐಎಂಜೆಐಎಸ್ಸಿ ಕಾಲೇಜು ಮೂಡ್ಲಕಟ್ಟೆ- ಶಿಕ್ಷಕ-ರಕ್ಷಕಸಭೆ

ಕುಂದಾಪುರ ಜು:4 ಐ ಎಂ ಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಮೂಡ್ಲಕಟ್ಟೆ ಕುಂದಾಪುರ ಕಾಲೇಜಿನಲ್ಲಿ ಶಿಕ್ಷಕ-ರಕ್ಷಕ ಸಭೆಯ “ಸಂವಾದ” ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಪ್ರಾಂಶುಪಾಲೆಯವರಾದ ಡಾ| ಪ್ರತಿಭಾ ಎಂ ಪಟೇಲ್ ರವರು ಸಭೆಯಲ್ಲಿ ಶೈಕ್ಷಣಿಕ ವರ್ಷದ ಎಲ್ಲಾ ತತ್ವವಿಚಾರತೆಯನ್ನು ಪೋಷಕರೊಂದಿಗೆ ಸಂವಾದ ಮಾಡಿದರು. ಬಹುತೇಕ ವಿದ್ಯಾರ್ಥಿಗಳ ಪೋಷಕರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಮಕ್ಕಳ ಬಗ್ಗೆ ಮಾಹಿತಿ ಪಡೆದುಕೊಳ್ಳುವುದರೊಂದಿಗೆ, ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ಪ್ರಶಂಶಿಸಿದರು
ವೇದಿಕೆಯಲ್ಲಿ ಉಪ ಪ್ರಾಂಶುಪಾಲರಾದ ಪ್ರೊ| ಜಯಶೀಲ್ ಕುಮಾರ್ ರವರು, ಬಿಸಿಎ ವಿಭಾಗದ ಮುಖ್ಯಸ್ಥರಾದ ಪ್ರೊ| ಅಹಮದ್ ಖಲೀಲ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಹ ಪ್ರಾಧ್ಯಾಪಕಿ ಸುಮನರವರು ನಿರೂಪಿಸಿದರು.

“ಹೊಂಬೆಳಕು- ಇದು ಸ್ವಾತಂತ್ರ್ಯದ ಹಣತೆ” ಪುಸ್ತಕದ ಪ್ರಕಾಶನಕ್ಕೆ ಧನ ಸಹಾಯ

ಮಾಜಿ ಅಧ್ಯಕ್ಷ ರೊ. ಡಾ ವಿಶ್ವೇಶ್ವರ್ ತಮ್ಮ ಟ್ರಸ್ಟಿನ ಮೂಲಕ ರೋಟರಿ ಕುಂದಾಪುರ ದಕ್ಷಿಣದ ಮುಖಾಂತರ ಸ್ವರಾಜ್ಯ ೭೫ರ ಸಂಘಟನೆಯ ಬಸ್ರೂರಿನ ಪ್ರದೀಪ್ ಕುಮಾರ ಪ್ರಕಟಿಸಲಿರುವ “ಹೊಂಬೆಳಕು- ಇದು ಸ್ವಾತಂತ್ರ್ಯದ ಹಣತೆ” ಪುಸ್ತಕದ ಪ್ರಕಾಶನಕ್ಕೆ ಧನ ಸಹಾಯವನ್ನು ಹಸ್ತಾಂತರಿಸಿದರು. ರೋಟರಿ ಕುಂದಾಪುರ ದಕ್ಷಿಣದ ಸತ್ಯನಾರಾಯಣ ಪುರಾಣಿಕ ಹಾಗೂ ಸಚಿನ್ ನಕ್ಕತ್ತಾಯ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

ದಾನಿಗಳು ನೀಡುವಂತಹ ಸಾಮಾಗ್ರಿಗಳನ್ನು ವಿದ್ಯಾರ್ಥಿಗಳು ಸದ್ಭಳಕೆ ಮಾಡಿಕೊಳ್ಳಬೇಕು : ಬಿಇಓ ವಿ.ಉಮಾದೇವಿ

ಶ್ರೀನಿವಾಸಪುರ 4 : ದಾನಿಗಳು ನೀಡುವಂತಹ ಸಾಮಾಗ್ರಿಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಬಿಇಓ ವಿ.ಉಮಾದೇವಿ ಸಲಹೆ ನೀಡಿದರು.
ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚಿಗೆ ಸಮಾಜ ಸೇವಕ ಸಾಧಿಕ್ ಅಹಮದ್ ಹಾಗು ಎಟಿಎಸ್ ರಿಜ್ವಾನ್ ರವರು ಮಕ್ಕಳಿಗೆ ಉಚಿತ ಪಠ್ಯ ಪರಿಕರಗಳು ವಿತರಣಾ ಕಾಯಕ್ರಮದಲ್ಲಿ ಮಾತನಾಡಿದರು.
ಶಾಲೆಯಲ್ಲಿ 2 ಕೊಠಡಿಗಳ ಕೊರತೆ ಇದ್ದು, ಚುನಾವಣೆಯ ಸಂಬಂಧ ಯಾವುದೇ ಪ್ರಗತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಕಾಮಗಾರಿಗಾಗಿ ಟೆಂಡರ್ ಕರೆದು ಅತಿ ಶೀಘ್ರದಲ್ಲಿಯೇ ಕಾಮಾಗಾರಿ ಪ್ರಾರಂಭಗೊಳ್ಳುತ್ತವೆ ಎಂದರು . ಇಲಾಖೆ ವತಿಯಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಸಿಕೊಡುವುದಾಗಿ ತಿಳಿಸಿದರು.
ಸಮಾಜ ಸೇವಕ ಹಾಗೂ ದಾನಿ ಸಾಧಿಕ್ ಅಹಮದ್ ಮಾತನಾಡಿ ಶಿಕ್ಷಕರು ಸಮಾಜದ ಶಿಲ್ಪಿಗಳು. ವಿದ್ಯಾರ್ಥಿಗಳಿಗೆ ಅಕ್ಷರ ಕಲಿಸುವುದರ ಮೂಲಕ ಸಮಾಜಕ್ಕೆ ಕೊಡಿಗೆಯಾಗಿ ನೀಡುತ್ತಾರೆ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದು ಆರೋಗ್ಯವಂತ ಸಮಾಜವನ್ನು ಸೃಷ್ಟಿಮಾಡಬೇಕು ಎಂದು ಸಲಹೆ ನೀಡಿದರು.
ಬಿಆರ್‍ಸಿ ಸಂಯೋಜಕರಾದ ಕೆ.ಸಿ.ವಸಂತ , ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸುಲೋಚನಾ, ಸಂಪನ್ಮೂಲ ವ್ಯಕ್ತಿ ಚಂದ್ರಪ್ಪ, ಸಿಆರ್‍ಪಿಗಳಾದ ಆರೀಫ್‍ಬಾಷ , ಅಕ್ಮಲಖಾನ್, ಇಸಿಒ ಕೋದಂಡಪ್ಪ, ಶಿಕ್ಷಕರಾದ ರೀಯಾನಖಾನಂ, ನೂರುನ್ನಿಸಾ, ಅಸ್ಮಸುಲ್ತಾನ್, ಭಾರತಮ್ಮ, ಅಮ್ಮಜಾನ್ ಇತರರು ಇದ್ದರು.
ಪೋಟು 4 : ಪಟ್ಟಣದ ಸರ್ಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿನ ಮಕ್ಕಳಿಗೆ ಬಿಇಒ ವಿ.ಉಮಾದೇವಿ ಉಚಿತ ಪಠ್ಯ ಪರಿಕರಗಳು ವಿತರಿಸಿದರು.