ಜಿಪಂ ನೂತನ ಸಿಇಒ ಅವರಿಗೆ ನೌಕರರ ಸಂಘ ಅಭಿನಂದನೆ- ಮಾದರಿ ಜಿಲ್ಲೆಯಾಗಿಸಲು ಸಹಕರಿಸಿ- ಪದ್ಮ ಬಸವಂತಪ್ಪ

ಕೋಲಾರ:- ಕೋಲಾರ ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಪದ್ಮ ಬಸವಂತಪ್ಪ ಅವರನ್ನು ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸಿಇಒ ಅವರು, ಜಿಲ್ಲೆಯ ಗ್ರಾಮೀಣಾಭಿವೃದ್ದಿಗೆ ಸರ್ಕಾರಿ ನೌಕರರು ಸ್ಪಂದನೆ ನೀಡಿ, ಜಿಲ್ಲೆಯನ್ನು ಮಾದರಿಯಾಗಿಸಲು ಎಲ್ಲರೂ ಒಟ್ಟಾಗಿ ಕೆಲಸ ಮಾಡೋನ ಎಂದರು.
ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವಲ್ಲಿ ನೌಕರರ ಪಾತ್ರ ಅತಿ ಮುಖ್ಯವಾಗಿದ್ದು, ಜಿಲ್ಲೆಯ ಸರ್ಕಾರಿ ನೌಕರರು ಈ ನಿಟ್ಟಿನಲ್ಲಿ ಅಭಿವೃದ್ದಿ ಕಾರ್ಯಗಳ ಪ್ರಗತಿಗೆ ಕೈಜೋಡಿಸಬೇಕು ಎಂದರು.
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು ಮಾತನಾಡಿ, ಜಿಲ್ಲೆಯ ಸರ್ಕಾರಿ ನೌಕರರು ಕರ್ತವ್ಯ,ಬದ್ದತೆಯಲ್ಲಿ ರಾಜ್ಯದಲ್ಲೇ ಹೆಸರಾಗಿದ್ದು, ನಿಮ್ಮ ಅಭಿವೃದ್ದಿಪರ ಚಿಂತನೆಗೆ ಸದಾ ನಿಮ್ಮ ಸೂಚನೆಗಳನ್ನು ಪಾಲಿಸಿ ಸಹಕರಿಸುವ ಭರವಸೆ ನೀಡಿ, ನೌಕರರ ಸಮಸ್ಯೆಗಳ ಪರಿಹಾರಕ್ಕೂ ಸಹಕಾರ ಕೋರಿದರು.
ಈ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದ ಕಾರ್ಯಾಧ್ಯಕ್ಷ ಎನ್.ಶ್ರೀನಿವಾಸರೆಡ್ಡಿ, ಗೌರವಾಧ್ಯಕ್ಷ ರವಿಚಂದ್ರ, ನಿಕಟಪೂರ್ವ ಅಧ್ಯಕ್ಷರಾದ ಕೆ.ಎನ್.ಮಂಜುನಾಥ್, ಕೆ.ಬಿ.ಅಶೋಕ್, ನ್ಯಾಯಾಂಗ ಇಲಾಖೆಯ ನಾಗರಾಜ್ ಮತ್ತಿತರರಿದ್ದರು.

ಕ್ಷಯ ರೋಗದ ಲಕ್ಷಣ ಕಂಡುಬಂದಲ್ಲಿ ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಕಿತ್ಸೆ ಪಡೆಯಬೇಕು:ಡಾ| ಜಿ.ಎಸ್.ವಂದನಾ

ಶ್ರೀನಿವಾಸಪುರ: ಕ್ಷಯ ರೋಗದ ಲಕ್ಷಣ ಕಂಡುಬಂದಲ್ಲಿ ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಕಿತ್ಸೆ ಪಡೆಯಬೇಕು ಎಂದು ಹೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ, ಜಿ.ಎಸ್.ವಂದನಾ ಹೇಳಿದರು.
ಹೋಳೂರು ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ ಗುರುವಾರ ಏರ್ಪಡಿಸಿದ್ದ ಕ್ಷಯ ಮುಕ್ತ ಗ್ರಾಮ ಪಂಚಾಯಿತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರ ಸಾಂಕ್ರಾಮಿಕ ರೋಗ ತಡೆಯಲು ವಿಶೇಷ ಕಾರ್ಯಕ್ರಮ ಹಾಕಿಕೊಂಡಿದೆ ಎಂದು ಹೇಳಿದರು.
ಕ್ಷಯ ರೋಗಿಗಳೊಂದಿಗೆ ಸಮುದಾಯದ ಸಹ ಭಾಗಿತ್ವ ಅಗತ್ಯ. ಕ್ಷಯ ವಾಸಿಯಾಗಬಲ್ಲ ರೋಗವಾಗಿದ್ದು, ಜನರು ಆತಂಕ ಪಡಬೇಕಾದ ಅಗತ್ಯವಿಲ್ಲ. ರೋಗಿಗಳನ್ನು ಜನರಿಂದ ದೂರವಿಡದೆ ಮಾನವೀಯತೆಯಿಂದ ಕಾಣಬೇಕು. ರೋಗ ನಿವಾರಣೆಗೆ ಸಹಕರಿಸಬೇಕು. ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಬೇಕು. ಚಿಕಿತ್ಸೆ ಉಚಿವ ಎಂಬ ವಿಷಯ ಮನದಟ್ಟು ಮಾಡಬೇಕು. ರೋಗ ವಾಸಿಯಾಗುವವರೆಗೆ ತಿಂಗಳಿಗೆ ರೂ.500 ನೀಡುವ ಬಗ್ಗೆಯೂ ತಿಳಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೆಂಕಟರಾಮಪ್ಪ, ಪಿಡಿಒ ನಾಗರಾಜ್, ಆರೋಗ್ಯ ನಿರೀಕ್ಷಣಾಧಿಕಾರಿ ಪೃಥ್ವಿರಾಜ್, ಅಯ್ಯಣ್ಣ, ವಿ.ರೂಪ ಇದ್ದರು.

ಸಂತ ಮೇರಿಸ್ ಪ.ಪೂ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ತು ಪದಗ್ರಹಣ ಸಮಾರಂಭ

ಕುಂದಾಪುರ,ಜು. ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಹಾಗೂ ಪ್ರಗತಿಪರ ಚಿಂತನೆಗಳು ಬೆಳೆದು ಬರಬೇಕು. ಪ್ರತಿಯೊಬ್ಬರೂ ದೇಶವನ್ನು ಕಟ್ಟುವ ಮತ್ತು ಉನ್ನತ ಹುದ್ದೆಗೇರಬೇಕು ಎಂದು ಪ್ರಸಿದ್ಧ ವಕೀಲರು,ಉತ್ತಮ ವಾಗ್ಮಿ,ರಾಜಕೀಯ ಧುರೀಣರು ಸಂಘಟಕರು ಆಗಿರುವ ಶ್ರೀ ಕೋಳ್ಕೆರೆ ವಿಕಾಸ್ ಹೆಗ್ಡೆಯವರು ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ಹೇಳಿದರು.

ಸಂತ ಮೇರಿಸ್ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ವಿದ್ಯಾರ್ಥಿ ಸಂಸತ್ತು ಉದ್ಘಾಟನಾ ಕಾರ್ಯಕ್ರಮದಲ್ಲಿ ವಕೀಲರಾದ ಕೋಳ್ಕೆರೆ ವಿಕಾಸ್ ಹೆಗ್ಡೆಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿದ್ಯಾರ್ಥಿ ಸಂಸತ್ತು ಉದ್ಘಾಟಿಸಿ, ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಸ್ವಾತಂತ್ರ್ಯ ಪೂರ್ವದಿಂದಲೇ ಶಿಕ್ಷಣ ನೀಡುತ್ತಾ ಬಂದಿದ್ದು, ವಿದ್ಯಾರ್ಥಿಗಳಲ್ಲಿ ಶಿಸ್ತು,ನಾಯಕತ್ವ ಗುಣಗಳನ್ನು ಬೆಳೆಸುವ ಹಾಗೂ ದೇಶದಲ್ಲಿ ಸಂತ ಮೇರಿಸ್ ಸಮೂಹ ಶಿಕ್ಷಣ ಸಂಸ್ಥೆ ಶತಮಾನೋತ್ಸವ ಕಂಡ ಸಂಸ್ಥೆಯಾಗಿದೆ’ ಎಂದು ಕ್ರೈಸ್ತ ಮಿಷನರಿ ಸಂಸ್ಥೆಗಳನ್ನು ಹೊಗಳಿ ಹೇಳಿದರು.”ವಿದ್ಯಾರ್ಥಿಗಳು ಸ್ವ ಪ್ರಯತ್ನದಿಂದ ಉನ್ನತ ಹುದ್ದೆಗೆ ಏರಬೇಕು ಎನ್ನುತ್ತಾ ಅನೇಕ ಕ್ರಿಯಾಶೀಲ ಹಾಗೂ ಮನ ಮುಟ್ಟುವ ಮಾತುಗಳನ್ನಾಡಿ’ ಸಂಸತ್ತಿನ ಅಧ್ಯಕ್ಷರು,ಕಾರ್ಯದರ್ಶಿಗಳು ಹಾಗೂ ಎಲ್ಲಾ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಸಂತ ಮೇರಿಸ್ ವಿದ್ಯಾಸಂಸ್ಥೆಗಳ ಸಂಚಾಲಕರು, ಧರ್ಮಗುರುಗಳಾಗಿರುವ ಅತಿ ವಂದನೀಯ ಧರ್ಮಗುರು ಸ್ಟ್ಯಾನಿ ತಾವ್ರೋ ವಹಿಸಿದ್ದು ಸಂಸತ್ತಿನ ಎಲ್ಲಾ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ, ಹರಸಿ ಅಭಿನಂದಿಸಿದರು.
ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾಗಿದ್ದ ಮಿ.ಜೋಯ್ಸನ್ ಡಿಸೋಜಾ ರವರು ತನ್ನನ್ನು ಮತನೀಡಿ ಆರಿಸಿದ್ದಕ್ಕೆ ವಂದನೆ ಸಲ್ಲಿಸಿ, ಕಾಲೇಜಿನ ಅಭಿವೃದ್ಫಿಗೆ ಶ್ರಮಿಸುತ್ತೇನೆ ಎಂದು ನುಡಿದರು.
ಸಭೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ರೇಶ್ಮಾ ಫೆರ್ನಾಂಡೀಸ್ ,ಉಪ ಪ್ರಾಂಶುಪಾಲರಾದ ಮಂಜುಳಾ ನಾಯರ್ ರವರು, ಕಾರ್ಯಕ್ರಮದ ಸಂಯೋಜಕಿ ಪಲ್ಲವಿ ಎಮ್ ಎಚ್., ಕಾರ್ಯದರ್ಶಿ ಪ್ರಗತಿ ಹಾಗೂ ಸಂಸತ್ತಿಗೆ ಆಯ್ಕೆಯಾದ ವಿದ್ಯಾರ್ಥಿ ಮಂತ್ರಿಗಳು ಉಪಸ್ಥಿತರಿದ್ದರು. ಭೌತಶಾಸ್ತ್ರದ ಉಪನ್ಯಾಸಕಿ, ಕಾರ್ಯಕ್ರಮದ ಸಂಯೋಜಕಿ ಪಲ್ಲವಿ ಸ್ವಾಗತಿಸಿ,ವಿದ್ಯಾರ್ಥಿ ಪರಿಷತ್ ನ ಕಾರ್ಯದರ್ಶಿ ಕು. ಪ್ರಗತಿ ವಂದಿಸಿದರು. ಕಾಲೇಜಿನ ವಿದ್ಯಾರ್ಥಿಗಳ ಲಯಬದ್ಧ ಸಂಗೀತದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು,ಪ್ರಥಮ ಪಿ.ಯು ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ರಿಯಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

ತೋಟಗಾರಿಕೆ ಮಹಾ ವಿದ್ಯಾಲಯದಲ್ಲಿ ಬಿ ಎಸ್ ಸಿ ವಿದ್ಯಾಭ್ಯಾಸ ಪಡೆದು ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿ ನಿಶ್ಚಿತಳಗಿ ಸನ್ಮಾನ

ಶ್ರೀನಿವಾಸಪುರ :ತೋಟಗಾರಿಕೆ ಮಹಾ ವಿದ್ಯಾಲಯದಲ್ಲಿ ಬಿ ಎಸ್ ಸಿ ವಿದ್ಯಾಭ್ಯಾಸವನ್ನು ಪಡೆದ ಹೆಚ್ಚು ಅಂಕಗಳಿಸಿರುವ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ನಾರಾಯಣಸ್ವಾಮಿ ಹಾಗೂ ಮಂಜುಳ ದಂಪತಿಗಳ ಪುತ್ರಿ ಕುಮಾರಿ ನಿಶ್ಚಿತ ಎಂಬ ವಿದ್ಯಾರ್ಥಿ ನಾಲ್ಕು ಚಿನ್ನದ ಪದಕ ಪಡೆದಿದ್ದಾಳೆ ವಿಶ್ವವಿದ್ಯಾಲಯದಲ್ಲಿ ಹೆಚ್ಚು ಅಂಕ ಪಡೆದ ಕಾರಣ ಒಂದು ಚಿನ್ನದ ಪದಕ ಪಡೆದಿದ್ದರೆ ಇನ್ನು ಮೂರು ಚಿನ್ನದ ಪದಕ ಗಳು ಸ್ಪಂಸರ್ಸ್ ನಿಂದ ಪಡೆದಿರುವ ವಿದ್ಯಾರ್ಥಿ ನಿಶ್ಚಿತ ಳನ್ನು ನೇತಾಜಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮನೆಗೆ ಭೇಟಿ ನೀಡಿ ಸನ್ಮಾನಿಸಿ ಗೌರವಿಸಿದ್ದಾರೆ ಇನ್ನೂ ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿ ನಿಶ್ಚಿತ ನಾನು ಈ ಮಟ್ಟಕ್ಕೆ ಬೆಳೆಯಲು ಚಿನ್ನದ ಪದಕ ಪಡೆಯಲು ಕಾರಣಕರ್ತರಾದ ಪೋಷಕರು ಹಾಗೂ ನಮ್ಮ ಕಾಲೇಜಿನ ಉಪನ್ಯಾಸಕರಿಗೆ ಧನ್ಯವಾದಗಳು ತಿಳಿಸಿದಳು ನೇತಾಜಿ ಚಾರಿಟೇಬಲ್ ಕೃಷ್ಣ ಅಧ್ಯಕ್ಷರಾದ ನಾಗೇಂದ್ರ ರಾವ್  ವಿದ್ಯಾರ್ಥಿ ನಿಶ್ಚಿತಲಾನ್ನು ಸನ್ಮಾನಿಸಿ ಶುಭ ಆರೈಸಿ ಮಾತನಾಡಿ ಹೆಚ್ಚು ಅಂಕ ಪಡೆದು ಚಿನ್ನದ ಪದಕ ಪಡೆದಿರುವುದು ತಾಲೂಕಿಗೆ ಹೆಮ್ಮೆಯ ವಿಷಯ ಇವರನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಓದಬೇಕು ಹಾಗೂ ತಾಲೂಕಿನ ಕೀರ್ತಿ ಹಾಗೂ ಪೋಷಕರ ಕೀರ್ತಿಯನ್ನು ಇನ್ನಷ್ಟು ಹೆಚ್ಚಿಸಬೇಕೆಂದು ತಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಎನ್.ಎನ್.ಆರ್. ನಾಗರಾಜ್, ಗಂಗಾಧರ್ ರೆಡ್ಡಿ, ನವೀನ್, ಶ್ರೀನಿವಾಸ್ ರೆಡ್ಡಿ, ಮನು, ಕೊಲಿಮಿ ಮಂಜುನಾಥ್, ಹಾಗೂ ನೇತಾಜಿ ಚರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರು ಇದ್ರಪ್ರಕಾಶರೆಡ್ಡಿ, ಕಾರ್ಯದರ್ಶಿ ಸುನೀಲ್, ಖಜಾನೆ ಕೃಷ್ಣರೆಡ್ಡಿ ವಿ ಹಾಗೂ ಸಂಘದ  ಸದಸ್ಯರು ಸನ್ಮಾನಿಸಿ ಶುಭ ಆರೈಸಿದರು.

ST Agnes PU College; Awareness against child sexual offenses and sexual harassment

ST Agnes PU College Conducts Informative Session on POCSO and POSH to Promote Awareness and Prevention against child sexual abuse.

In an effort to raise awareness against child sexual offenses and sexual harassment, ST Agnes PU College conducted an informative session on the Protection of Children from Sexual Offenses (POCSO) and Prevention of Sexual Harassment of women (POSH). The session aimed to educate students about these critical issues and equip them with knowledge and resources to combat such offenses.

Advocate Elizabeth Neeliyara covered various aspects of both POCSO and POSH, highlighting their significance in safeguarding individuals and fostering a safe and inclusive environment.

During the session, participants were introduced to the provisions of the POCSO Act, which focuses on protecting children from sexual abuse and exploitation. She explained the definitions of different offenses, including child sexual abuse and child pornography, emphasizing the severity of these crimes. She shared real-life case studies and statistics to underscore the prevalence of child sexual abuse and the urgent need for prevention and support.

The discussion then shifted towards the POSH Act, which addresses the issue of sexual harassment in workplaces. Students were enlightened about the legal framework established by the act, along with the responsibilities of employers in preventing and addressing such incidents. She outlined the process of filing complaints, conducting investigations, and providing redressal under the POSH Act, enabling participants to better understand their rights and responsibilities.

To enhance the understanding of the subject matter, the session incorporated interactive activities and role-playing exercises. Students were encouraged to engage in discussions, share their insights, and ask questions, fostering a conducive learning environment.

The session on POCSO and POSH served as a vital platform to raise awareness and promote a culture of safety and respect. By equipping students with the necessary knowledge and resources, the college took a significant step towards building a community that actively works towards the prevention of child sexual offenses and workplace sexual harassment.

Mrs Lovina Aranha, Dept of Commerce welcomed the gathering and introduced the resource person. Diya Shankar compered the session and Zainab Fahima delivered the vote of thanks.

Sr Norine Dsouza, the principal and staff witnessed the programme.

ಅನಧಿಕೃತ ವೈದ್ಯಕೀಯ ಕ್ಲಿನಿಕ್‌ಗಳನ್ನು ತಕ್ಷಣ ತೆರವುಗೊಳಿಸಿ – ಜಿಲ್ಲಾಧಿಕಾರಿ ಅಕ್ರಂ ಪಾಷ

ಕೋಲಾರ : ಜಿಲ್ಲೆಯಲ್ಲಿ ಅನಧಿಕೃತವಾಗಿ ಸ್ಥಾಪಿಸಲಾಗಿರುವ ವೈದ್ಯಕೀಯ ಕ್ಲಿನಿಕ್‌ಗಳನ್ನು ಹಾಗೂ ಅನಧಿಕೃತ ಸ್ಕ್ಯಾನಿಂಗ್ ಕೇಂದ್ರಗಳನ್ನು ತಕ್ಷಣ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು .

ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆ.ಪಿ.ಎಂ.ಇ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ 106 ಅಕ್ರಮ ವೈದ್ಯಕೀಯ ಕ್ಲಿನಿಕ್‌ಗಳನ್ನು ಗುರುತಿಸಲಾಗಿದ್ದು , ಮುಂದಿನ 15 ದಿನಗಳೊಳಗೆ ಅನಧಿಕೃತ ಕ್ಲಿನಿಕ್‌ಗಳನ್ನು ತೆರವುಗೊಳಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ || ಜಗದೀಶ್ ಅವರಿಗೆ ಆಗ್ರಹಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ನಡೆಸಲಾಗುತ್ತಿರುವ ಅಕ್ರಮ ಕ್ಲಿನಿಕ್‌ಗಳು , ಅನಧಿಕೃತ ಸ್ಕ್ಯಾನಿಂಗ್ ಕೇಂದ್ರಗಳ ಬಗ್ಗೆ ವಿವರವಾದ ಮಾಹಿತಿಯನ್ನು ಡಿ.ಹೆಚ್.ಓ ಅವರಿಗೆ ಕಾಲಕಾಲಕ್ಕೆ ನೀಡಬೇಕು.

ಡಿಹೆಚ್‌ಓ ರವರು ವಿಳಂಬ ನೀತಿಯನ್ನು ಅನುಸರಿಸದೇ ಸೀಜರ್‌ಗಳೊಂದಿಗೆ ಕ್ಷಿಪ್ರ ಗತಿಯಲ್ಲಿ ರೈಡ್‌ ನಡೆಸಿ ಅನಧಿಕೃತ ಸಂಸ್ಥೆಯನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು. ಮತ್ತು ಇಂತಹ ಪ್ರಕರಣಗಳಿಗೆ ಪೂರಕ ದಾಖಲೆಗಳ ಸಾಕ್ಷಿಯನ್ನು ಹುಡುಕದೇ ವಿಡಿಯೋ ಚಿತ್ರೀಕರಣದಂತಹ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಪೂರಕ ಸಾಕ್ಷಾಧಾರಗಳನ್ನು ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಲ್ಲಿ ಅನಧಿಕೃತ ಸಂಸ್ಥೆಗಳನ್ನು ಮುಚ್ಚುವ ಇಚ್ಛಾಶಕ್ತಿಯನ್ನು ಬೆಳೆಸಿಕೊಳ್ಳಬೇಕು . ಯಾವುದೇ ಮುಲಾಜಿಗೆ ಒಳಪಡದೇ ತಮ್ಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಬೇಕು ಎಂದರು.

ಅನಧಿಕೃತ ಕ್ಲಿನಿಕ್‌ಗಳು ಕಂಡು ಬಂದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಮೊದಲು ವೈದ್ಯರ ಹಾಗೂ ವೈದ್ಯಕೀಯ ಸಂಸ್ಥೆಯ ಅಥವಾ ವೈದ್ಯಕೀಯ ಉಪಕರಣಗಳ ಬಗ್ಗೆ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ನೋಟೀಸ್ ನೀಡತಕ್ಕದ್ದು .

ನಿಗಧಿ ಅವಧಿಯೊಳಗೆ ಪೂರಕ ದಾಖಲೆಗಳನ್ನು ಸಲ್ಲಿಸದಿರುವವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಬೇಕು . ಈ ಮೂಲಕ ಸಾರ್ವಜನಿಕರಿಗೆ ಉತ್ತಮ ವೈದ್ಯಕೀಯ ಸೇವೆ ಮಾತ್ರ ಲಭ್ಯವಾಗುವಂತೆ ನೋಡಿಕೊಳ್ಳುವುದು ಆರೋಗ್ಯ ಇಲಾಖೆಯ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು .

ಕೆ.ಪಿ.ಎಂ.ಇ ಕಾಯ್ದೆಯಡಿ ಜಿಲ್ಲಾ ಸಕ್ಷಮ ಪ್ರಾಧಿಕಾರದ ಎದುರು ಅನಧಿಕೃತ ಸಂಸ್ಥೆಗಳ ಮುಖ್ಯಸ್ಥರು ಹಾಜರಾಗಿ ಸೂಕ್ತ ದಾಖಲೆಗಳನ್ನು ಸಲ್ಲಿಸಿ ತಮ್ಮ ಕ್ಲಿನಿಕ್‌ಗಳನ್ನು ಸಕ್ರಮಗೊಳಿಸಿ ಕೊಳ್ಳಲು ಸರ್ಕಾರವು ಅವಕಾಶ ಕಲ್ಪಿಸಿದ್ದಾಗ್ಯೂ ಹಲವು ಸಂಸ್ಥೆಗಳು ಈವರೆಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಿರುವುದಿಲ್ಲ . ನಕಲಿ ಕ್ಲಿನಿಕ್‌ಗಳು ಹಾಗೂ ನಕಲಿ ವೈದ್ಯರ ಹಿಡಿತದಿಂದ ಜಿಲ್ಲೆಯನ್ನು ಆದಷ್ಟು ಬೇಗ ಮುಕ್ತಗೊಳಿಸುವುದು ಹಾಗೂ ಸಾರ್ವಜನಿಕರ ಜೀವಗಳ ಸಂರಕ್ಷಣೆಗಾಗಿ ಜಿಲ್ಲಾಡಳಿತವು ಸದಾ ಬದ್ಧವಾಗಿರುತ್ತದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಐ.ಎಂಎ ಅಧ್ಯಕ್ಷ ಡಾ || ನಾರಾಯಣಸ್ವಾಮಿ , ಡಾ || ವಿಜಯಕುಮಾರ್ , ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ || ನಾರಾಯಣಸ್ವಾಮಿ , ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ || ಚಂದನ್ , ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ || ಪ್ರಸನ್ನ ಕುಮಾರ್ , ಎಲ್ಲಾ ತಾಲ್ಲೂಕು ಆರೋಗ್ಯಾಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .

ಕಾಂಗ್ರೆಸ್ ಘಟಕದ ವತಿಯಿಂದ ಮೌನ ಪ್ರತಿಭಟನೆ : ಜನರ ದಿಕ್ಕು ತಪ್ಪಿಸುತ್ತಿರುವ ಬಿಜೆಪಿ

ಬಂಗಾರಪೇಟೆ: ಸನ್ಮಾನ್ಯ ರಾಹುಲ್ ಗಾಂಧಿಯವರು ಭಾರತ್ ಜೋಡೊ ಯಾತ್ರೆಯ ಮೂಲಕ ದೇಶದಾದ್ಯಂತ ಜಾತಿ, ಮತ, ಧರ್ಮ, ಪಂಥದ ಎಲ್ಲೆಯನ್ನು ಮೀರಿ ಜನರ ಭಾವನೆಗಳಿಗೆ ಸ್ಪಂದಿಸಿದ್ದಾರೆ, ಇವರ ವರ್ಚಸ್ಸನ್ನು ಕಂಡ ಬಿಜೆಪಿ “ಮೋದಿಯವರ ವಿರುದ್ಧ ಪ್ರಚೋದನಕಾರಿ ಭಾಷಣ” ಎಂಬ ದೂರನ್ನು ದಾಖಲಿಸಿ ದ್ವೇಷ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಕುವೆಂಪು ವೃತ್ತದಲ್ಲಿ ತಾಲೂಕು ಕಾಂಗ್ರೆಸ್ ಘಟಕದ ವತಿಯಿಂದ ಮೌನ ಪ್ರತಿಭಟನೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕೋಲಾರದಲ್ಲಿ ನಡೆದ ಬೃಹತ್ ಚುನಾವಣಾ ಸಮಾವೇಶದಲ್ಲಿ ಮಾನ್ಯ ರಾಹುಲ್ ಗಾಂಧಿಯವರು “ಮೋದಿ ರವರನ್ನು ಕುರಿತು ಪ್ರಚೋದನಕಾರಿ ಭಾಷಣ ನೀಡಿದ್ದಾರೆ “ಎಂದು ಸುಳ್ಳು ದೂರನ್ನು ದಾಖಲಿಸಿದ್ದಾರೆ, ಆದಕಾರಣ ರಾಹುಲ್ ಗಾಂಧಿಯವರ ಸಂಸತ್ ಸ್ಥಾನ ವಂಚಿತವಾಗಿದೆ, ಇದರ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್ ಮೌನ ಪ್ರತಿಭಟನೆಯನ್ನು ನಡೆಸಲು ಮುಂದಾಗಿದೆ.

ಷಡ್ಯಂತರ ರೂಪಿಸಿದ ಬಿಜೆಪಿ:


ಸ್ವತಂತ್ರ ಪೂರ್ವದಲ್ಲಿ ಮಹಾತ್ಮ ಗಾಂಧೀಜಿರವರು ದೇಶದ ಜನರನ್ನು ಒಗ್ಗೂಡಿಸಲು ಬೃಹತ್ ಪಾದಯಾತ್ರೆಯನ್ನು ಮಾಡಿದ್ದರು, ತದನಂತರ 2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ದೇಶದಲ್ಲಿ ಕೋಮುವಾದ, ಜಾತಿವಾದ, ಎಂಬ ದ್ವೇಷವನ್ನು ಉಂಟು ಮಾಡಿ ಸಾಮರಸ್ಯ ಕದಡಿ ದೇಶವನ್ನು ವಿಭಜಿಸಲು ಯತ್ನಿಸಿತು, ಇದನ್ನು ದೂರ ಮಾಡಬೇಕು ರಾಷ್ಟ್ರವನ್ನು ಭ್ರಾತೃತ್ವ, ಸಹಬಾಳ್ವೆಯ ಆಧಾರದ ಮೇಲೆ ಒಟ್ಟುಗೂಡಿಸಿ ಏಕತೆಯನ್ನು ಉಂಟು ಮಾಡಬೇಕು ಎಂಬ ಉದ್ದೇಶದಿಂದ ಸನ್ಮಾನ್ಯ ರಾಹುಲ್ ಗಾಂಧೀಜಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರಿಗೆ 4000 ಕಿಲೋಮೀಟರ್ ಭಾರತ್ ಜೋಡು ಪಾದಯಾತ್ರೆಯ ಮೂಲಕ ರಾಷ್ಟ್ರವನ್ನು ಸಂಘಟಿಸಿದ್ದರು.
ಈ ಸಂದರ್ಭದಲ್ಲಿ ಜಾತಿ ಮಾತ ಧರ್ಮ ಪಂಥ ಎಲ್ಲೆಯನ್ನು ಮೀರಿ ಅದ್ಭುತ ಪೂರ್ವ ಜನಬೆಂಬಲ ದೊರೆಯಿತು, ಇವರ ಯಶಸ್ಸು ಮತ್ತು ವರ್ಚಸ್ಸನ್ನು ಸಹಿತದ ಬಿಜೆಪಿ ಅನಗತ್ಯವಾಗಿ ತನ್ನದೇ ಆಡಳಿತ ಇರುವಂತಹ ಗುಜರಾತ್ ನ್ಯಾಯಾಲಯದಲ್ಲಿ “ಪ್ರಚೋದನಕಾರಿ ಭಾಷಣ” ಎಂದು ಸುಳ್ಳು ದಾವೆ ದಾಖಲು ಮಾಡಿ ಕುತಂತ್ರ ರಾಜಕಾರಣ ನಡೆಸುತ್ತಿದ್ದಾರೆ, ಆದರೆ ಕಾಂಗ್ರೆಸ್ ಪಕ್ಷ ಸದೃಢವಾಗಿದ್ದು ಲಕ್ಷಾಂತರ ಕಾರ್ಯಕರ್ತರು ರಾಹುಲ್ ಗಾಂಧಿಯವರ ಬೆನ್ನಿಗೆ ನಿಂತಿದ್ದಾರೆ. ಇಂತಹ ಯಾವುದೇ ಗೊಡ್ಡು ಬೆದರಿಕೆಗಳಿಗೆ ಬೆದರುವುದಿಲ್ಲ.

ನ್ಯಾಯಾಲಯದ ದುರುಪಯೋಗ:


ಕೋಲಾರದಲ್ಲಿ ನಡೆದ ಘಟನೆಗೆ ಸಂಬಂಧಪಟ್ಟಂತೆ ತನ್ನದೇ ಆಡಳಿತ ಇರುವಂತಹ ಗುಜರಾತಿನ ನ್ಯಾಯಾಲಯವನ್ನು ದುರ್ಬಳಕೆ ಮಾಡಿಕೊಂಡು ದೂರು ದಾಖಲಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ರಾಷ್ಟ್ರೀಯ ಪಕ್ಷಕ್ಕೆ ವಿಪಕ್ಷ ನಾಯಕನ ಕೊರತೆ:
ಬಿಜೆಪಿ ಒಂದು ರಾಷ್ಟ್ರೀಯ ಪಕ್ಷವಾಗಿದ್ದರೂ ಸಹ ಇಂದಿಗೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಲಿಲ್ಲ, ಕೇಂದ್ರ ಬಿಜೆಪಿ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ 610 ಭರವಸೆಗಳನ್ನು ನೀಡಿತ್ತು ಆದರೆ ಅವುಗಳಲ್ಲಿ 10% ಇಡೇರಿಸಲು ಸಾಧ್ಯವಾಗದೆ ಸಂಪೂರ್ಣವಾಗಿ ವಿಫಲವಾಗಿದೆ.

ಜನರ ದಿಕ್ಕು ತಪ್ಪಿಸುತ್ತಿರುವ ಬಿಜೆಪಿ:


ಕಾಂಗ್ರೆಸ್ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಹಂತ ಹಂತವಾಗಿ ಇಡೇರಿಸುತ್ತಿದೆ, ಸದನದಲ್ಲಿ ಜನರ ಸಮಸ್ಯೆಗಳ ಬಗ್ಗೆ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಬೇಕಾದ ಬಿಜೆಪಿ ವಿನಾಕಾರಣ ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಪ್ರತಿಭಟನೆ ಮಾಡುವುದರ ಮೂಲಕ ಸದನಕ್ಕೆ ಗೌರವ ತೋರುತ್ತಿದ್ದಾರೆ, ಮತ್ತು ಕಾಲಹರಣ ಮಾಡಲು ಮುಂದಾಗಿದೆ, ಇದು ಅವರಿಗೆ ಸಾರ್ವಜನಿಕರ ಬಗ್ಗೆ ಇರುವಂತಹ ನಿರುತ್ಸಾಹ ಧೋರಣೆಯ ಪ್ರತಿಬಿಂಬವಾಗಿದೆ. ಎಂದು ಗುಡುಗಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಾರ್ಥಸಾರಥಿ, ಕೆ.ವಿ.ನಾಗರಾಜು, ಗೋಪಾಲಗೌಡ, ನಗರ ಘಟಕದ ಅಧ್ಯಕ್ಷ ಚಂದು, ಪುರಸಭಾ ಸದಸ್ಯರಾದ ಶಶಿ, ಶಂಸುದ್ದೀನ್ ಬಾಬು, ಸುಹೇಲ್, ಮಹದೇವ್, ಮಂಜು, ಅಣ್ಣ ದೊರೆ, ಹಾ.ನಾ.ಹರೀಶ್, ರಫೀಕ್, ಮುದಾಸಿರ್, ನವೀನಗೌಡ, ಪ್ರಶಾಂತ್, ಎಚ್.ಕೆ.ನಾರಾಯಣಸ್ವಾಮಿ, ಅಜಾಂಪಾಷ, ಆರೋಗ್ಯ ರಾಜನ್, ಜಗನ್, ಬಾಬು ಇತರರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ವರ್ಗಾವಣೆ ; ನೂತನ ಜಿಲ್ಲಾಧಿಕಾರಿಯಾಗಿ ವಿದ್ಯಾಕುಮಾರಿ


ಉಡುಪಿ, ಜು.13: ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಇದೀಗ ನೂತನ ಜಿಲ್ಲಾಧಿಕಾರಿಯಾಗಿ ಡಾ|ವಿದ್ಯಾಕುಮಾರಿ ಕೆ. ಅವರನ್ನು ನಿಯೋಜಿಸಿ. ಉಡುಪಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಳಿಸಿದ್ದಾರೆ..
ಮೂಲತಹ ಡಾ| ವಿದ್ಯಾಕುಮಾರಿ ಕೆ. ಯವರು ಉಳ್ಳಾಲ ತಾಲೂಕಿನ ಪಾವೂರು ಗ್ರಾಮದವರಾಗಿರುವ ಅವರು 2014ನೇ ಬ್ಯಾಚ್ ನ ಐಎಎಸ್ ಅಧಿಕಾರಿ. ಹುದ್ದೆಯ ನಿರೀಕ್ಷೆಯಲ್ಲಿದ್ದ ಅವರನ್ನ ತಕ್ಷಣದಿಂದ ಜಾರಿಯ ಉಡುಪಿ  ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಕೆಎಎಸ್ ನಿಂದ ಐಎಎಸ್ ಗೆ 5 ವರ್ಷಗಳ ಹಿಂದೆ ಭಡ್ತಿ ಪಡೆದಿದ್ದ ವಿದ್ಯಾಕುಮಾರಿಯವರು ಉಡುಪಿಯಲ್ಲಿ ಈ ಹಿಂದೆ ಎರಡು ವರ್ಷಗ ಕಾಲ ಅಪರ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.


ಸಮಾಜದ ಋಣ ತೀರಿಸಲು ಶ್ರೀಮಂತರಾಗಿ ಇರಬೇಕಾಗಿಲ್ಲ, ಪರೋಪಕಾರ ಮಾಡುವ ದೃಢ ಮನಸ್ಸಿದ್ದರೆ ಸಾಕು-ಅಭಿನಂದನ್ ಶೆಟ್ಟಿ

ಸಮಾಜದ ಋಣ ತೀರಿಸಲು ಶ್ರೀಮಂತರಾಗಿ ಇರಬೇಕಾಗಿಲ್ಲ, ಪರೋಪಕಾರ ಮಾಡುವ ದೃಢ ಮನಸ್ಸಿದ್ದರೆ ಸಾಕು ಎಂದು ರೋಟರಿಯ ಮಾಜಿ ಜಿಲ್ಲಾ ಗವರ್ನರ್ ಅಭಿನಂದನ್ ಶೆಟ್ಟಿ ರೋಟರಿ ಕುಂದಾಪುರ ದಕ್ಷಿಣದ ಪದಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ತಮ್ಮ ಭಾಷಣದಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದರು. ಸಾಲು ಮರದ ತಿಮ್ಮಕ್ಕ, ಕಿತ್ತಳೆ ಹಣ್ಣು ಮಾರುವ ಹರೇಕಳ ಹಾಜಬ್ಬರ ಉದಾಹರಣೆಯನ್ನು ತಿಳಿಸುತ್ತಾ, ಅಶಕ್ತರ ಪಾಲಿಗೆ ರೋಟರಿಯಂತಹ ಸಂಸ್ಥೆಗಳು ಆಶಾಕಿರಣವಾಗಬೇಕು, ಶ್ರೀಮಂತ ಮತ್ತು ಬಡವರ ಮಧ್ಯದ ಕೊಂಡಿಯಾಗಬೇಕು ಎಂದು ಕರೆ ನೀಡಿದರು. ರೋಟರಿಯನ್ ಸುರೇಶ ಮಲ್ಯ ನೂತನ ಅಧ್ಯಕ್ಷರಾಗಿ . ನೂತನ ಕಾರ್ಯದರ್ಶಿಯಾಗಿ ರಮಾನಂದ ಕಾರಂತ ಅಧಿಕಾರ ಸ್ವೀಕರಿಸಿದರು. ವಲಯ ಒಂದರ ಸಹಾಯಕ ಗವರ್ನರ್ ಡಾ. ಸಂದೀಪ್ ಶೆಟ್ಟಿ, ವಲಯ ಸೇನಾನಿ ಡಾ. ಉತ್ತಮ ಕುಮಾರ ಶೆಟ್ಟಿ, ಕಳೆದ ಸಾಲಿನ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ, ಕಾರ್ಯದರ್ಶಿ ಸಚಿನ್ ನಕ್ಕತ್ತಾಯ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.