ಹೋಲಿ ರೋಜರಿ ಆಂಗ್ಲ ಮಾದ್ಯಮ ಶಾಲೆಯಲ್ಲಿ ಪ್ರಾರ್ಥಮಿಕ ಹಾಗೂ ಪ್ರೌಢ ಶಾಲೆಗಳ ವಲಯ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ


ಕುಂದಾಪುರ, ಜು.31: ‘ಆಟ ಪಾಠ ಊಟ ಇದು ಮನುಷ್ಯನಿಗೆ ಬೇಕಾಗಿರುವ ಅಗತ್ಯವಾದ ವಿಷಯಗಳು, ಅದರಲ್ಲಿ ಮಕ್ಕಳಿಗೆ ಅಚ್ಚು ಮೆಚ್ಚಿನದು ಆಟ, ನಮ್ಮ ಎಳೆಯವಲ್ಲಿ ಇದನ್ನೆ ಶಾಲೆಯಲ್ಲಿ ನಿರೀಕ್ಷಿಸುತ್ತಿದ್ದೆವು. ಆಟಗಳಿಂದ ನಮ್ಮ ಶರೀರ ಸುಧ್ರಡವಾಗುತ್ತದೆ. ಸೋಲು ಗೆಲುವು ಇದ್ದದೆ ಆದರೆ ಆಟದಲ್ಲಿ ನಮ್ಮನು ನಾವು ತೊಡಗಿಕೊಳ್ಳಬೇಕು, ನೀವು ಆಟದಲ್ಲಿ ಶ್ರಮ ಪಟ್ಟು ಸಾಧನೆ ಮಾಡಬೇಕು, ಈ ಆಟ ಇಲ್ಲಿಗೆ ಮುಕ್ತಾಯವಾಗುವುದಿಲ್ಲ, ತಾಲ್ಲೂಕಿನಿಂದ ಜಿಲ್ಲೆ, ಜಿಲ್ಲೆಯಿಂದ ರಾಜ್ಯ, ರಾಜ್ಯದಿಂದ ರಾಷ್ಟ್ರೀಯ ಮಟ್ಟಕ್ಕೆ, ರಾಷ್ಟ್ರೀಯ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟಕ್ಕೆ ತಲುಪುವಂತಹ ಗುರಿಯನ್ನು ಇಟ್ಟುಕೊಳ್ಳಬೇಕು” ಎಂದು ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು, ಹಾಗೂ ಸಂತ ಮೇರಿಸ್ ಸಮುಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅ|ವಂ|ಸ್ಟ್ಯಾನಿ ತಾವ್ರೊ ಹೇಳಿದರು.
ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕುಂದಾಪುರ ಮತ್ತು ಹೋಲಿ ರೋಜರಿ ಆಂಗ್ಲ ಮಾದ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ನಡೆದ ವಲಯ ಮಟ್ಟದ ಪ್ರಾರ್ಥಮಿಕ ಹಾಗೂ ಪ್ರೌಢ ಶಾಲೆಗಳ ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಸಂದೇಶ ನೀಡಿದರು. ದೈಹಿಕ ಪರಿವೀಕ್ಷಗಾಧಿಕಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆ, ಕುಂದಾಪುರದ ರವೀಂದ್ರ ನಾಯಕ್ ಪ್ರಸ್ತಾವಿಕ ಭಾಷಣ ಮಾಡಿದರು. ಮುಖ್ಯ ಅತಿಥಿ ಮತ್ಸ್ಯ ಉದ್ಯಮಿ ಸತ್ಯ ಜಾವಗಲ್ ಮಾತನಾಡಿ “ಕ್ರೈಸ್ತರು ಶಿಕ್ಷಣ ನೀಡುವಲ್ಲಿ ಭಾರೀ ಮುಂದು, ಶಿಕ್ಷಣಕ್ಕಾಅಗಿ ನಾವು ಇವರಿಗೆ ಸಹಾಯ ಹಸ್ತವನ್ನು ನೀಡಬೇಕು. ಕ್ರೈಸ್ತ ಧರ್ಮಗುರುಗಳ ಒಡನಾಟ ಒಂದು ಭಾಗ್ಯವೇ ಸರಿ’ ಎಂದು ಅವರ ಭಾವನೆಯನ್ನು ವ್ಯಕ್ತಪಡಿಸಿದರು. ಹೋಲಿ ರೋಜರಿ ಆಂಗ್ಲ ಮಾದ್ಯಮ ಶಾಲೆಗಾಗಿ ಅವರು ಒಂದು ಟೇಬಲ್ ಟೆನ್ನಿಸ್ ಟೇಬಲನ್ನು ದಾನವಾಗಿ ನೀಡಿದ್ದು, ಅದನ್ನು ಅವರು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಿದರು. ಅವರ ಪರಿಚಯವನ್ನು ಶಿಕ್ಷಕ ಪ್ರಶಾಂತ್ ರೇಬೆರೊ ನೀಡಿದರು. ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿಯವರು ಸಂತಮೇರಿಸ್ ವಿದ್ಯಾ ಸಂಸ್ಥೆಯವರು ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ನಿರ್ವಹೈಸುತ್ತಾರೆ ಎಂದು ಶ್ಲಾಘಿಸಿದರು. ವೇದಿಕೆಯಲ್ಲಿ ರೋಜರಿ ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಸಂತ ಮೇರಿಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲೆ ರೆಶ್ಮಾ ಫೆರ್ನಾಂಡಿಸ್, ಸಂತ ಮೇರಿಸ್ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಅಸುಂಪ್ತಾ ಲೋಬೊ, ಪ್ರಾರ್ಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಡೋರಾ ಡಿಸೋಜಾ, ಹೋಲಿ ರೋಜರಿ ಕಿಂಟರ್ ಗಾರ್ಟನ್ ಶಾಲೆಯ ಮುಖ್ಯೋಪಾಧ್ಯಾಯಿನಿ ಶೈಲಾ ಡಿಆಲ್ಮೇಡಾ, ಸಂತ ಮೇರಿಸ್ ಸಮುಹ ಶಿಕ್ಷಣ ಸಂಸ್ಥೆಗಳ ದೈಹಿಕ ಶಿಕ್ಷಕರಾದ ಚಂದ್ರಶೇಖರ ಬೀಜಾಡಿ, ಶಾಂತಿ ರಾಣಿ ಬಾರೆಟ್ಟೊ, ಸ್ಪರ್ಧೆಯ ಸಹಾಯಕರಾಗಿ ನಿಶ್ಚಿತಾ ಶೆಟ್ಟಿ ಮತ್ತು ಶ್ರೀಕಾಂತ್ ಉಪಸ್ಥಿತರಿದ್ದರು.
ಹೋಲಿ ರೋಜರಿ ಆಂಗ್ಲ ಮಾದ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಧರ್ಮಭಗಿನಿ ತೆರೆಜಾ ಶಾಂತಿ ಸ್ವಾಗತಿಸಿದರು. ಶಾಲಾ ದೈಹಿಕ ಶಿಕ್ಷಕ ರತ್ನಾಕರ ಶೆಟ್ಟಿ ನಿರೂಪಿಸಿದರು. ಶಿಕ್ಷಕಿ ಪ್ರತಿಬಾ ಶೆಟ್ಟಿ ವಂದಿಸಿದರು.
ಪಂದ್ಯಾವಳಿಯಲ್ಲಿ 14 ವರ್ಷದೊಳಗಿನ ಬಾಲಕರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ, ದ್ವೀತಿಯ ಸ್ಥಾನ ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ, ಬಾಲಕಿಯರ ವಿಭಾಗದಲ್ಲಿ ಎಚ್.ಎಮ್.ಎಮ್. ಆಂಗ್ಲ ಮಾಧ್ಯಮ ಶಾಲೆ, ಕುಂದಾಪುರ ಪ್ರಥಮ ಸ್ಥಾನ, ದ್ವೀತಿಯ ಸ್ಥಾನ ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ.
17 ವರ್ಷದೊಳಗಿನ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ, ದ್ವೀತಿಯ ಸ್ಥಾನ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ, ಬಾಲಕಿಯರ ವಿಭಾಗದಲ್ಲಿ ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಪ್ರಥಮ ಸ್ತಾನ, ಬಾಲಕಿಯರ ವಿಭಾಗದಲ್ಲಿ ಎಸ್.ವಿ.ಎಸ್. ಆಂಗ್ಲ ಮಾಧ್ಯಮ ಶಾಲೆ ಗಂಗೊಳ್ಳಿ ಇವರು ಪಡೆದಿರುತ್ತಾರೆ.

ಕುಂದಾಪುರ ಚರ್ಚ್ ಗಾಯನ ಮಂಡಳಿಯಿಂದ ಸಿ.ಎ. ಪರೀಕ್ಷೆಯಲ್ಲಿ ತೆರ್ಗಡೆಯಾದ ವಿನಾರ್ಡ್ ಡಿಕೋಸ್ತಾರವರಿಗೆ ಸನ್ಮಾನ


ಕುಂದಾಪುರ, ಜು.31: ಈ ಸಾಲಿನ ಭಾರತೀಯ ಚಾರ್ಟೆಟ್ ಅಕೌಂಟೆಡ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಕುಂದಾಪುರ ಚರ್ಚ್ ಗಾಯನ ಪಂಗಡದ ಸದಸ್ಯರಾದ ವಿನಾರ್ಡ್ ಡಿಕೋಸ್ತಾ ಇವರನ್ನು ಜು.30 ರಂದು ಗಾಯನ ಮಂಡಳಿಯ ಪರವಾಗಿ ಕುಂದಾಪುರ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ವೇದಿಕೆಯಲ್ಲಿದ್ದ ಅಥಿತಿಗಳ ಜೊತೆ ಫಲ, ಪುಷ್ಪ, ಹಾರ, ಶಾಲು ಹೊದಿಸಿ, ಪೇಟ ತೋಡಿಸಿ, ರೋಜರಿ ಮಾತೆಯ ಪ್ರತಿಮೆ ನೀಡಿ ಸನ್ಮಾನಿಸಿದರು

ಸನ್ಮಾನಿಸಿದ ಅವರು “ವಿನಾರ್ಡ್ ನಮ್ಮ ಕುಂದಾಪುರದ ಸುಪುತ್ರ, ಆತನು ಕಲಿಯಲು ಎಷ್ಟು ಚುರುಕೊ, ಅಷ್ಟೆ ದೈವ ಭಕ್ತಿಯಲ್ಲಿ ಮುಂದು, ಅವನಿಗೆ ಸಂತ ಜೋಸೆಫ್ ವಾಜ್ ಇವರಲ್ಲಿ ಬಹಳ ಭಕ್ತಿ ಚಾರ್ಟೆಡ್ ಅಕೌಂಟೆಡ್ ಪರೀಕ್ಷೆಗಾಗಿ ತಲ್ಲೀನರಾಗುವಾಗಲೂ, ನಮ್ಮ ರೋಜರಿ ಚರ್ಚಿನ ಗಾಯನ ಪಂಗಡದಲ್ಲಿ ಸಕ್ರಿಯವಾಗಿ ಭಾಗವಹಿಸಿ ಚರ್ಚಿನ ಗಾಯನ ಪಂಗಡಕ್ಕೆ ತನ್ನ ಕಂಠದಿಂದ ಶ್ರೀಮಂತವಾಗಿಸಿದ್ದ ಈತ ಈಗ ಬಹು ಕಷ್ಟದ ಸಿ.ಎ. ಪರೀಕ್ಷೆ ತೆರ್ಗಡೆಯಾಗಿ ನಮಗೆ ಹೆಮ್ಮೆ ತಂದಿದ್ದಾನೆ, ಇದರಲ್ಲಿ ಅವರ ಹೆತ್ತವರ ಪಾಲೂ ಇದೆ” ಎಂದು ಅಭಿನಂದನಾ ಮಾತುಗಳನ್ನಾಡಿದರು.
ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ ಮಾತನಾಡಿ “ವಿನಾರ್ಡ್ ಪ್ರತಿಭಾವಂತ ಯುವಕನಾಗಿದ್ದಾನೆ ಎಂದು ಇತರ ಧರ್ಮಗುರುಗಳಿಂದ ಕೇಳಲ್ಪಟ್ಟಿದ್ದೆ, ಆತ ವೈ.ಸಿ.ಎಸ್. ಕುಂದಾಪುರ ವಲಯದ ಅಧ್ಯಕ್ಷನಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾಗಿ ಶ್ಲಾಘನೆ ಕೇಳಿದ್ದು, ನಮ್ಮ ಯುವ ಜನರಿಗೆ ಸ್ಪೂರ್ತಿಯಾಗಲು ಇತ್ತೀಚಿನ ಶಿಬಿರದಲ್ಲಿ ತಿಳುವಳಿಕೆ ಕೊಡಲು ನಾನು ಆತನನ್ನು ಆರಿಸಿದ್ದು ಫಲಫ್ರಬವೆಂಬತ್ತೆ ಇವತ್ತು ಸಿ.ಎ. ಯಾಗಿ ಮಾರ್ಪಟ್ಟಿದ್ದಾನೆ, ನಮ್ಮ ಯುವ ಯುವತಿಯರು ಇದನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಉನ್ನತ ಮಟ್ಟದ ಪದವಿ ಪಡೆದುಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಸಮ್ಮಾನ ಸ್ವೀಕರಿಸಿದ ವಿನಾರ್ಡ್ ಡಿಕೋಸ್ತಾ ಮಾತನಾಡಿ ‘ಎಲ್ಲರೂ ಇಂಜಿನಿಯರಿಂಗ್, ವೈಧ್ಯಕೀಯ ಕ್ಷೇತ್ರಗಳನ್ನು ಆರಿಸಿಕೊಳ್ಳುತ್ತಾರೆ, ಆದರೆ ನಾನು ಇತರ ಕ್ಷೇತ್ರಗಳನ್ನು ಪರೀಶಿಲಿಸಿ ವಾಣಿಜ್ಯವನ್ನು ಆರಿಸಿಕೊಂಡು ಸಿ.ಎ. ಆಗಲು ಮುಂದಡಿ ಇಟ್ಟೆ. ಸಿ.ಎ. ಪರೀಕ್ಷೆ ತೆರ್ಗಡೆಯಾಗಲು, ಕಠಿಣ ಪರಿಶ್ರಮದ ಅಗತ್ಯವಿದೆ, ನಾನು ಸಿ.ಎ. ತೆರ್ಗಡೆಯಾಗುಲು ನನ್ನ ಮಾತಾ ಪಿತ ನನ್ನ ಕುಟುಂಬದ ಪ್ರೇರಣೆ ಪೆÇ್ರೀತ್ಸಾಹ ತಂಬಾ ಇದೆ, ಜೊತೆಗೆ ನಾನು ನಂಬಿದ ರೋಜರಿ ಮಾತೆ ಮತ್ತು ಸಂತ ಜೋಸೆಫ್ ವಾಜ್ ಇವರ ದಯೆ ಕೂಡ ಆಗಿದೆಯೆಂದು ನಂಬುತ್ತೇನೆ’ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಕುಂದಾಪುರ ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಗಾಯನ ಮಂಡಳಿ ಸದಸ್ಯ ಜೆರಾಲ್ಡ್ ಕ್ರಾಸ್ತಾ,  ಕುಂದಾಪುರ ಚರ್ಚಿನ ಸಮಾಜ ಸಂಪರ್ಕ ಮಾಧ್ಯಮದ ಸಂಚಾಲಕರಾದ ವಿನಾರ್ಡ್ ಇವರ ತಂದೆ ಸಾಹಿತಿ, ಪತ್ರಕರ್ತ ಬರ್ನಾಡ್ ಡಿಕೋಸ್ತಾ, ಈ ಸಂದರ್ಭದಲ್ಲಿ ಮಾತನಾಡಿದರು. ಗಾಯನ ಮಂಡಳಿ ಅಧ್ಯಕ್ಷೆಯಾದ ವಿನಾರ್ಡ್ ಇವರ ತಾಯಿ ವಿನಯಾ ಡಿಕೋಸ್ತಾ, ಚರ್ಚ್ ಸರ್ವ ಆಯೋಗದ ಸಂಯೋಜಕಿ ಪ್ರೇಮಾ ಡಿಕುನ್ಹಾ, ಗಾಯನ ಮಂಡಳಿಯ ಸದಸ್ಯರು ಉಪಸ್ಥಿತರಿದ್ದು, ಫೆಲ್ಸಿಯಾನ ಡಿಸೋಜಾ ಸ್ವಾಗತಿಸಿದರು. ಆಲ್ಡ್ರಿನ್ ಡಿಸೋಜಾ ನಿರೂಪಿಸಿ, ಗಾಯನ ಮಂಡಳಿಯ ಕಾರ್ಯದರ್ಶಿ ರೀಮಾ ಡಿಆಲ್ಮೇಡಾ ವಂದಿಸಿದರು.

ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ವಿಜಯ ಕುಮಾರ್ ಶೆಟ್ಟಿ ಆಯ್ಕೆ


ಕೋಟ:ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಘಟಕದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆಯು ಸಂಘದ ಅಧ್ಯಕ್ಷ ಪ್ರಭಾಕರ ಜೈನ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಉಡುಪಿ ಬೋರ್ಡ್ ಹೈಸ್ಕೂಲ್ ಸಭಾಂಗಣದಲ್ಲಿ ಜರುಗಿತು. ಇದೇ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ರಾಜ್ಯ ಸಂಘದ ಉಪಾಧ್ಯಕ್ಷ ರಾಜಾರಾಮ ಶೆಟ್ಟಿ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ನೆರವೇರಿಸಿದರು. ಅಧ್ಯಕ್ಷರಾಗಿ ಸಾಯ್ಬರಕಟ್ಟೆ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿಜಯ ಕುಮಾರ್ ಶೆಟ್ಟಿ ಆಯ್ಕೆಯಾದರು.
ಪ್ರಧಾನ ಕಾರ್ಯದರ್ಶಿಯಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಕ್ಕುಂಜೆ ಕೃಷ್ಣ ನಾಯ್ಕ್, ಕೋಶಾಧಿಕಾರಿಯಾಗಿ ನಿಟ್ಟೂರು ಪ್ರೌಢ ಶಾಲೆ ಅಶೋಕ್ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಮೂಕಾಂಬಿಕಾ ಪ್ರೌಢಶಾಲೆ ಹೊಸೂರು ಬೈಂದೂರಿನ ರವಿಶಂಕರ ಹೆಗ್ಡೆ, ಸೈಂಟ್ ಜೋಸೆಫ್ ಪ್ರೌಢ ಶಾಲೆ ಬೆಳ್ಮಣ್ಣು ಕಾರ್ಕಳ ಹರಿದಾಸ ಪ್ರಭು,ಸರಕಾರಿ ಹಿ.ಪ್ರಾ.ಶಾಲೆ ಹಳ್ಳಾಡಿ ಹರ್ಕಾಡಿ ಕುಂದಾಪುರ ಶರತ್ ಕುಮಾರ್ ಶೆಟ್ಟಿ,ಸರಕಾರಿ ಪ್ರೌಢಶಾಲೆ ಮೂಡುಗಿಳಿಯಾರು ಬ್ರಹ್ಮಾವರದ ಶೇಖರ್, ಎಸ್‍ವಿಎಸ್ ಪ್ರೌಢ ಶಾಲೆ ಕಟಪಾಡಿ ಉಡುಪಿ
ಕಿರಣ್ ಕುಮಾರ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿಗಳಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿಯ ಸೌಮ್ಯ ಅಮೀನ್,ಮೂಕಾಂಬಿಕಾ ಪ್ರೌಢ ಶಾಲೆ ಕೊಡ್ಲಾಡಿ ಬೈಂದೂರಿನ ಸಂತೋಷ್ ಕುಮಾರ್ ಶೆಟ್ಟಿ, ಸರಕಾರಿ ಹಿ.ಪಾ.್ರಶಾಲೆ ಬೆಳ್ವೆ ಕುಂದಾಪುರ ಕಿಶನ್‍ರಾಜ್ ಶೆಟ್ಟಿ, ಕ್ರೈಸ್ಟ್ ಕಿಂಗ್ ಹಿ.ಪ್ರಾ. ಶಾಲೆ ಕಾರ್ಕಳ ಪ್ರಕಾಶ್, ಸರಕಾರಿ ಪ.ಪೂ.ಕಾಲೇಜು ಬ್ರಹ್ಮಾವರ ಜಗದೀಶ್,
ಮಾಧ್ಯಮ ಕಾರ್ಯದರ್ಶಿಯಾಗಿ ಸೈಂಟ್ ಮೇರಿಸ್ ಪ್ರೌಢಶಾಲೆ ಕುಂದಾಪುರದ ಚಂದ್ರಶೇಖರ ಬೀಜಾಡಿ, ಕ್ರೀಡಾ ಕಾರ್ಯದರ್ಶಿಯಾಗಿ ಸ.ಹಿ.ಪ್ರಾ.ಶಾಲೆ ಬಾಳ್ಕುದ್ರು ಬ್ರಹ್ಮಾವರದ ಶ್ರೀಕಾಂತ ಸಾಮಂತ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ವಂಡ್ಸೆ ಬೈಂದೂರಿನ ಚಂದ್ರಶೇಖರ ಶೆಟ್ಟಿ,ಸ.ಹಿ.ಪ್ರಾ.ಶಾಲೆ ಕುಂದಾಪುರದ ಸುಮಂಗಲಾ ನಾಯಕ್ ಆಯ್ಕೆಗೊಂಡರು.