ಕುಂದಾಪುರ : ಕಾಳಾವರದಲ್ಲಿ ಕಾರು – ಲೂನಾ ಡಿಕ್ಕಿ ಲೂನಾ ಸವಾರ ಸಾವು

ಕುಂದಾಪುರ, ಜು. ೩೦:ಕುಂದಾಪುರ ತಾಲೂಕಿನ ಕೋಟೇಶ್ವರ ಹಾಲಾಡಿ ಮಾರ್ಗದ ಕಾಳಾವರ ಎಂಬಲ್ಲಿ ಭಾನುವಾರ ಸಂಜೆ ಕಾರು ಮತ್ತು ಲೂನಾ ನಡುವೆ ಅಪಘಾತಾವಾಗಿ ಲೂನಾ ಸವಾರ ನರಸಿಂಹ ಶೆಟ್ಟಿ (75) ಮ್ರತ ಪಟ್ಟಿದ್ದಾರೆ.  

 ಕಾಳಾವರ ಸರಕಾರಿ  ಶಾಲೆಯ ಸಮೀಪದ ಅಡ್ಡರಸ್ತೆಯಿಂದ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ನರಸಿಂಹ ಶೆಟ್ಟಿ ಮುಖ್ಯ ರಸ್ತೆಗೆ ಹಠಾತ್ ಪ್ರವೇಶಿಸಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಕೋಟೇಶ್ವರದಿಂದ ಹಾಲಾಡಿ ಕಡೆಗೆ ಸಾಗುತ್ತಿದ್ದ ಬೊಲೆರೋ ಕಾರಿನ ಚಾಲಕ ಲೂನಾ ಹಠಾತ್ ಅಡ್ಡ ಬಂದಿದ್ದರಿಂದ ಅಪಘಾತ ತಪ್ಪಿಸಲು ಹೋಗಿ ಬ್ರೇಕ್ ಹಾಕಿದ್ದರಿಂದ ಕಾರು ರಸ್ತೆ ಬದಿಯ ಕಲ್ಲು ಕಂಬಕ್ಕೆ ಗುದ್ದಿದೆ. ಈ ಸಂದರ್ಭದಲ್ಲಿ ಲೂನಾ ಸವಾರ  ಗಂಭೀರ ಗಾಯಗೊಂಡಿದ್ದು, ಸವಾರ ನರಸಿಂಹ ಶೆಟ್ಟಿ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು.ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಯುಸ್ ನಗರ ಚರ್ಚಿನ ಕಥೊಲಿಕ್ ಸಭಾದಿಂದ ಮಕ್ಕಳ ಶಿಕ್ಷಣಕ್ಕೆ ಸಹಾಯಧನ ವಿತರಣೆ

ಕುಂದಾಪುರ, ಜು. 30;  ದಿನಾಂಕ 30-7-2023 ರಂದು ಪಿಯುಸ್ ನಗರ್ ಚರ್ಚಿನ ಕಥೊಲಿಕ್ ಸಭಾದಿಂದ ಮೂರು ಮಕ್ಕಳಿಗೆ ಶಿಕ್ಷಣಕ್ಕಾಗಿ ಸಹಾಯಧನವನ್ನು ವಿತರಿಸಲಾಯಿತು. ಈ ಕಾರ್ಯಕ್ರಮಕ್ಕೆ ಪಿಯುಸ್ ನಗರ್ ಚರ್ಚಿನ ಧರ್ಮಗುರುಗಳಾದ ವಂದನೀಯ ಸ್ವಾಮಿ ಆಲ್ಬರ್ಟ್ ಕ್ರಾಸ್ತಾ ಸಹಾಯಧನ ವಿತರಣೆ ಮಾಡಿ  ಪಿಯುಸ್ ನಗರ ಚರ್ಚಿನ ಕಥೊಲಿಕ್ ಸಭಾ ಸಂಘಟನೆ ಸೇವೆಗಳ  ಸಹಕಾರ ನಿರಂತರವಾಗಿ ಮಾಡುತ್ತಾ ಇದೆ. ಮುಂದೆ ಕೂಡ ಇಂತಹ ಒಳ್ಳೆ ಕೆಲಸಗಳು ಈ ಸಂಘಟನೆಯಲ್ಲಿ ನಡೆಯಲಿ’ ಎಂದು ಹಾರೈಸಿ ಸಂದೇಶವನ್ನು ನೀಡಿದರು. ಪಿಯುಸ್ ನಗರ ಕಥೊಲಿಕ್ ಸಭಾ ಸಂಘಟನೇಯ ಮಾರ್ಗದರ್ಶಕರಾದ, ಕಥೊಲಿಕ್ ಸಭಾ ಕುಂದಾಪುರ ವಲಯದ ಮಾಜಿ ಅಧ್ಯಕ್ಷರಾದ ಡಾ| ಸೋನಿ ಡಿಕೋಸ್ಟಾ ಉಪಸ್ಥಿತರಿದ್ದು ’ಪಿಯುಸ್ ನಗರ್ ಚರ್ಚಿನ ಕಥೊಲಿಕ್ ಸಂಘಟನೆಯ ಬಗ್ಗೆ ತಾನು ಈ ಸಂಘಟನೆಯಲ್ಲಿ ಮಾರ್ಗದರ್ಶಕರಾಗಿ ಸೇವೆ ನೀಡುವುದು ತನಗೆ ತುಂಬಾ ಖುಷಿ ನೀಡುತ್ತದೆ.ಇಲ್ಲಿ ಒಳ್ಳೆಯ ಕೆಲಸಗಳು ನಡೆಯುತ್ತಿವೆ ಹಾಗೂ ಇಲ್ಲಿ ಇರುವ ಎಲ್ಲಾ ಸದಸ್ಯರು ಸೇವಾ ಮನೋಭಾವ ಉಳ್ಳವರು’ ಎಂದು ತಿಳಿಸಿದರು.

    ಸಂಘಟನೆಯ ಅಧ್ಯಕ್ಷರಾದ ಶ್ರೀ ಅಲೆಕ್ಸಾಂಡರ್ ಲೂವಿಸ್ ಸ್ವಾಗತವನ್ನು ಕೋರಿದರು..ಉಡುಪಿ ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಹಾಗೂ ಸಂಘಟನೆಯ ರಾಜಕೀಯ ಸಂಚಾಲಕರು ಶ್ರೀ ರೋಶನ್ ಬರೆಟ್ಟೊ  ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳ ಬಗ್ಗೆ ವಿಸ್ತಾರ ರೀತಿಯಲ್ಲಿ ಮಾಹಿತಿ ನೀಡಿದರು ಈ ಕಾರ್ಯಕ್ರಮಕ್ಕೆ ಮಾಜಿ ಅಧ್ಯಕ್ಷರಾದಂತಹ ಶ್ರೀ ರೇಮಿ ಫೆರ್ನಾಂಡಿಸ್, ನಿಯೋಜಿತ ಅಧ್ಯಕ್ಷೆ ಶ್ರೀಮತಿ ನ್ಯಾನ್ಸಿ ವಾಜ್ ಹಾಜರಿದ್ದರು.ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಡೆಸಾ ವಂದಿಸಿದರು.

ಕೊಲ್ಲೂರು ಗ್ರಾಮದ ಅರಶಿನಗುಂಡಿ ಜಲಪಾತದಲ್ಲಿ ಬಿದ್ದ ಶರತ್‌ ಕುಮಾರನ  ಮೃತದೇಹ ಒಂದು ವಾರದ ಬಳಿಕ  ಪತ್ತೆ

ಕೊಲ್ಲೂರು,ಜು.30: ಸ್ನೇಹಿತರೊಂದಿಗೆ ಕಳೆದ ಭಾನುವಾರ ಅರಶಿನಗುಂಡಿ ಜಲಪಾತಕ್ಕೆ ತೆರಳಿದ್ದ ಸಂದರ್ಭ ಕಾಲುಜಾರಿ ನೀರಿನಲ್ಲಿ ಬಿದ್ದು.ಕಾಣೆಯಾಗಿದ್ದ ಭದ್ರಾವತಿಯ ಯುವಕ ಶರತ್‌ ಕುಮಾರನ [23] ಮೃತದೇಹ ಜಲಪಾತದ ಸಮೀಪದಲ್ಲಿಯೆ ಪತ್ತೆಯಾಗಿದೆ.

ಶರತ್‌ ಹಾಗೂ ಸ್ನೇಹಿತ ಗುರುರಾಜ ಜೊತೆಗೂಡಿ ಜು.23ರ ಭಾನುವಾರದಂದು ಭದ್ರಾವತಿಯಿಂದ ಕೊಲ್ಲೂರು ಗ್ರಾಮದ ಅರಶಿನಗುಂಡಿ ಜಲಪಾತ ನೋಡಲು ತೆರಳಿದ್ದರು. ಮಧ್ಯಾಹ್ನ 3-30ರ ಹೊತ್ತಿಗೆ ಜಲಪಾತ ಬಳಿ ವೀಡೀಯೋ ಮಾಡಲು ಹೇಳಿ ಬಂಡೆಯ ಮೇಲೆ ನಿಂತಿದ್ದ ಶರತ್‌ ಕಾಲು ಜಾರಿ ಬಿದ್ದಿದ್ದರು ನೀರಿನ ಸೆಳತಕ್ಕೆ ಸಿಲುಕಿ ನಾಪತ್ತೆಯಾಗಿದ್ದನು. ಕಾಲು ಜಾರಿ ಬಿಳುವ ಈ ಈ ಘಟನೆ ಸ್ನೇಹಿತನ ಮೊಬೈಲಿನಲ್ಲಿಯೂ ಸೆರೆಯಾಗಿತ್ತು.

   ಘಟನೆಯ ಮಾಹಿತಿಯನ್ನು ಸ್ನೆಹಿತ ತಿಳಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳೆದೊಂದು ವಾರದಿಂದ ಕೊಲ್ಲೂರು ಠಾಣೆಯ ಪೊಲೀಸ್‌ ತಂಡ, ಅರಣ್ಯ ಇಲಾಖೆ ಸಿಬ್ಬಂದಿಗಳು, ಉಡುಪಿಯ ಎಸ್‌ಡಿಆರ್‌ಎಫ್‌ ತಂಡ, ಕುಂದಾಪುರ ಹಾಗೂ ಬೈಂದೂರು ಅಗ್ವಿಶಾಮಕ ದಳದ ಸಿಬ್ಬಂದಿಗಳು ಹುಡುಕಾಟ.ನಡೆಸಿದ್ದರು. ಇವರೊಂದಿಗೆ ಮೃತ ಶರತ್‌ನ ಸಂಬಂಧಿ ಹಾಗೂ ಸ್ನೇಹಿತರ ಜೊತೆಗೂಡಿ ಹುಡುಕಾಟ ನಡೆಸಿದ್ದರು.

    ಶರತ್‌ನ ತಂದೆ ತಾಯಿ ಹೇಗಾದರೂ ತಮ್ಮ ಮಗನನ್ನು ಹುಡುಕಿಕೊಡಿ ಎಂದು ಸರಕಾರಕ್ಕೆ ಬೇಡಿಕೆ ಇರಿಸಿದ್ದರು. ನಿನ್ನೆಯಿಂದ ಮಳೆ ಕೊಂಚ ಕಡಿಮೆಯಾದ. ಹಿನ್ನೆಲೆಯಲ್ಲಿ ಹುಡುಕಾಟ ಚುರುಕುಗೊಳಿಸಿದ್ದು, ಶರತ್‌ ಮೃತದೇಹ ಜಲಪಾತದ ಸಮೀಪದ ಕಲ್ಲಿನ ಪೊಟರೆಯಲ್ಲಿ ಸಿಲುಕಿಕೊಂಡ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ನಡುವೆ ಸಾಹಸಿ ಚಿತ್ರದುರ್ಗದ ಜ್ಯೋತಿರಾಜ್‌ ತಂಡ, ಈಶ್ವರ್‌ ಮಲ್ಪೆ ತಂಡವೂ ನೀರಿನ ರಭಸದ ಒತ್ತಡದ ನಡುವೆಯೂ ಹುಡುಕಾಟ ನಡೆಸಿ. ಹಿಂದಿರುಗಿದ್ದರು. ಡ್ರೋನ್‌ ಮೂಲಕವೂ ಪತ್ತೆ ಕಾರ್ಯಾಚರಣೆ ನಡೆಸಲಾಗಿತ್ತು. ಕೊಲ್ಲೂರು ಠಾಣೆಯ ಪಿಎಸ್‌ಐಗಳಾದ ಜಯಶ್ರೀ ಹಾಗೂ ಸುಧಾರಾಣಿ ಅವರ ನೇತೃತ್ವದಲ್ಲಿ ಬೆಳಿಗ್ಗೆಯಿಂದ ಸಂಜೆಯ ತನಕಪೂಹುಡುಕಾಟ ನಡೆಸಲಾಗಿತ್ತು.

ಜೆಸಿಐ : ಸಾದು ಎಸ್ ಬಿಲ್ಲವರಿಗೆ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ನೆಲೆಯಲ್ಲಿ ಸನ್ಮಾನ

ಜೆಸಿಐ ಕುಂದಾಪುರ ಸಿಟಿಯಾ ಆಶ್ರಯದಲ್ಲಿ ಕೃಷಿ ಹಾಗು ಹೈನುಗಾರಿಕೆ ಯಲ್ಲಿ ಸಾಧನೆ ಮಾಡಿದ ಸಾದು ಎಸ್ ಬಿಲ್ಲವ ಇವರಿಗೆ ಸೆಲ್ಯೂಟ್ ದಿ ಸೈಲೆಂಟ್ ವರ್ಕರ್ ನೆಲೆಯಲ್ಲಿ ಕುಂದಾಪುರದ ಸಹನಾ ಕನ್ವೆನ್ಷನ್ ಸಭಾಂಗಣ ದಲ್ಲಿ ಸನ್ಮಾನಿಸಲಾಯಿತು ಸಭೆಯ ಅಧ್ಯಕ್ಷ ತೆ ಯನ್ನು ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷೆ ಡಾ ಸೋನಿ ವಹಿಸಿದರು ಸಮಾರಂಭ ದಲ್ಲಿ ವಲಯ 15 ರ ಪೂರ್ವ ವಲಯಾಧ್ಯಕ್ಷ ಕೆ. ಕಾರ್ತಿಕೇಯ ಮಧ್ಯಸ್ತ ವಲಯ ಉಪಾಧ್ಯಕ್ಷ ಅಭಿಲಾಶ್ ಬಿ ಏ ಜೇಸಿ ಐ ಶಂಕರನಾರಾಯಣ ಅಧ್ಯಕ್ಷ ರಾಘವೇಂದ್ರ ಚಾತ್ರಮಕ್ಕಿ ಜೆಸಿಐ ಹೆಬ್ರಿ ಯಾ ಅಧ್ಯಕ್ಷ ಪ್ರವೀಣ್ ಶೆಟ್ಟಿ ಜೆಸಿಐ ಕಡಬ ಕದಂಬ ದ ಅಧ್ಯಕ್ಷ ಅಭಿಷೇಕ್ ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ರಾಘವೇಂದ್ರ ಚರಣ್ ನಾವಡ ಪ್ರಶಾಂತ್ ಹವಾಲ್ದಾರ್ ನಾಗೇಶ್ ನಾವಡ ಚಂದ್ರಕಾಂತ್ ವಿಜಯ್ ಭಂಡಾರಿ ಗಿರೀಶ್ ಹೆಬ್ಬಾರ್ ರಾಘವೇಂದ್ರ ಕುಲಾಲ್ ಕಾರ್ಯದರ್ಶಿ ಸಂದೇಶ್ ಶೆಟ್ಟಿ ಲೇಡಿ ಜೇಸಿ ಅಧ್ಯಕ್ಷೆ ಪ್ರೇಮ ಇನ್ನಿತರರು ಉಪಸ್ಥಿತರಿದ್ದರು.

ಕುಂದಾಪುರದಲ್ಲಿ ಅಜ್ಜ ಅಜ್ಜಿ – ಹಿರಿಯರ ದಿನಾಚರಣೆ “ಬಿಳಿ ಕೂದಲು ಜೀವಿತಕ್ಕೆ ಒಂದು ಕೀರಿಟ: ಫಾ| ರೋಶನ್ ಡಿಸೋಜಾ


ಕುಂದಾಪುರ,ಜು.30: ಕುಂದಾಪುರ ಹೋಲಿ ರೋಜರಿ ಚರ್ಚಿನಲ್ಲಿ ಅಜ್ಜ-ಅಜ್ಜಿ ಹಾಗೂ ಹಿರಿಯರ ದಿನಾಚರಣೆಯನ್ನು (30-7-230) ಆಚರಿಸಲಾಯಿತು. ಮೊದಲಿಗೆ ಚರ್ಚಿನಲ್ಲಿ ಕøತ್ಞತಾ ಪೂರ್ವಕ ಬಲಿದಾನವನ್ನು ಅರ್ಪಿಸಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಛಾನ್ಸಲರ್ ಅ|ವಂ|ರೋಶನ್ ಡಿಸೋಜಾ ಪವಿತ್ರ ಬಲಿದಾನವನ್ನು ಅರ್ಪಿಸಿ ‘ನಾವು ನಮ್ಮ ಹಿರಿಯವರ ಹತ್ತಿರ ಕಲಿಯಬೇಕಾದ್ದು ತುಂಬಾ ಇದೆ, ನಮ್ಮಲ್ಲಿ ವಿಧ್ಯೆ, ಶಿಕ್ಷಣ, ದೊಡ್ಡ ದೊಡ್ಡ ಪದವಿಗಳಿರಬಹುದು, ಆದರೆ ಹಿರಿಯರಲ್ಲಿರುವ ಅನುಭವ ನಮ್ಮಲ್ಲಿ ಇಲ್ಲ. ಅವರಲ್ಲಿ ಜೀವನದ ಅಪಾರ ಅನುಭವ ಇದೆ, ಅವರು ಅಮಗಿರುವ ಸವಲತ್ತುಗಳು ಇಲ್ಲದೇಯು, ನಮಕ್ಕಿಂತ ಹೆಚ್ಚು ಶ್ರಮಪಟ್ಟು ನಮ್ಮನ್ನು ಸಲಹಿದ್ದಾರೆ. ಯಾರು ಹಿರಿಯರಿಗೆ ವಿಧೇಯತೆ, ಗೌರವ ಕೊಟ್ಟು ಬಾಳಿದ್ದಾರೊ ಅವರೆಲ್ಲರಿಗೆ ಒಳಿತಾಗಿದೆ, ಯಾರೆಲ್ಲ ಅಗೌರವ ದುಖ ನೀಡಿದ್ದಾರೊ ಅವರಿಗೆಲ್ಲ ಕೆಟ್ಟದಾಗಿದೆ, ಹಿರಿಯರಿಂದ ನಮಗೆ ಆಸ್ತಿ ಪಾಸ್ತಿ ಬಳುವಳಿ ಬಂದಿದೆ, ಎಲ್ಲದಕಿಂತ ಹೆಚ್ಚು ದೇವರ ಮೇಲಿನ ಧ್ರಡ ನಂಬಿಕೆಯನ್ನು ಕೊಡಮಾಡುತ್ತಲೇ ಬಂದಿದ್ದಾರೆ. ಹಿರಿಯರ ಬಿಳಿ ಕೂದಲು ಅವರ ಜೀವಿತಕ್ಕೆ ಒಂದು ಕೀರಿಟವಾಗಿದೆ” ಎಂದು ಹೇಳುತ್ತಾ ಹಿರಿಯರಿಗೆ ಒಂದು ಕಿವಿ ಮಾತು ಹೇಳಿದರು “ನೀವು ನಿಮ್ಮ ಮಕ್ಕಳಿಗೆ ಆಸ್ತಿ ಪಾಸ್ತಿ ಸಂಪತ್ತು ಇದ್ದರೆ ಎಲ್ಲವನ್ನು ಮಕ್ಕಳಿಗೆ ಕೊಡಬೇಡಿ, ಸ್ವಲ್ಪವಾದರೂ ದಾನಧರ್ಮ ಮಾಡಿ” ಎಂದು ಅವರು ಸಂದೇಶದಲ್ಲಿ ತಿಳಿಸಿದರು.
ಇಗರ್ಜಿಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಸಹಬಲಿದಾನದಲ್ಲಿ ಭಾಗಿಯಾಗಿ, ಹಿರಿಯರಿಗೆ, ಅಜ್ಜ-ಅಜ್ಜಿಯಂದಿರಿಗೆ ಶುಭಾಶಯ ಕೋರಿ ಧನ್ಯವಾದಗಳನ್ನು ಅರ್ಪಿಸಿದರು. ಅತಿ ಹೆಚ್ಚು ಮೊಮ್ಮಕ್ಕಳನ್ನು ಹೊಂದಿದ ಇಗರ್ಜಿಯ 13 ವಾಳೆಯವರ ಅಜ್ಜ- ಅಜ್ಜಿಯಂದರಿಗೆ ಹೂ ನೀಡಿ ಅಭಿನಂದಿಸಲಾಯಿತು. ಭಾನುವಾರದ ಪ್ರಾರ್ಥನ ವಿಧಿಯನ್ನು ಹಿರಿಯರು ನೆಡಸಿಕೊಟ್ಟರು. ಕಾರ್ಯಕ್ರಮವನ್ನು ಇಗರ್ಜಿಯ ಕುಟುಂಬ ಆಯೋಗದಿಂದ ನಡೆಸಿಕೊಟ್ಟರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಸಿಹಿ ಹಂಚಲಾಯಿತು. ಹಿರಿಯ ಧರ್ಮಭಗಿನಿಯರು ಸೇರಿ ಸುಮಾರು 140 ಹಿರಿಯರು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ, ಸರ್ವ ಆಯೋಗದದ ಸಂಯೋಜಕಿ ಪ್ರೇಮಾ ಡಿಕುನ್ಹಾ, ಇಗರ್ಜಿಯ ಕುಟುಂಬ ಆಯೋಗದ ಸಂಚಾಲಕಿ ಜೂಲಿಯಾನ ಮಿನೆಜೆಸ್ ಮತ್ತು ಸದಸ್ಯರು. ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ ಉಪಸ್ಥತರಿದ್ದರು.