ಬೀಜಾಡಿ ರೋಟರಿ ಸಮುದಾಯ ದಳ ಪದಪ್ರದಾನ ಸಮಾರಂಭ


ಬೀಜಾಡಿ:ರೋಟರಿ ಸಮುದಾಯದಳ ಮೂಲಕ ಗ್ರಾಮೀಣ ಭಾಗದಲ್ಲಿ ಸಮಾಜಸೇವಾ ಚಟುವಟಿಕೆ ಮಾಡಬಹುದಾಗಿದ್ದು, ಇದರಿಂದ ಸಮಾಜದ ಅಶಕ್ತರಿಗೆ ಸಹಾಯವಾಗಲಿದೆ ಎಂದು ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಅಧ್ಯಕ್ಷ ಜಗನ್ನಾಥ ಮೊಗೇರ ಹೇಳಿದರು.
ಅವರು ಬೀಜಾಡಿ-ಗೋಪಾಡಿ ರೋಟರಿ ಸಮುದಾಯದಳ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ್ ಹೆಬ್ಬಾರ್ ಶುಭ ಹಾರೈಸಿದರು. ರೋಟರಿ ಸಮುದಾಯ ದಳದ ಹಿಂದಿನ ಅಧ್ಯಕ್ಷ ಬಿ.ಜಿ.ನಾಗರಾಜ್ ಅನಿಸಿಕೆ ಹಂಚಿಕೊಂಡರು. ನೂತನ ಅಧ್ಯಕ್ಷ ಪ್ರದೀಪ್ ದೇವಾಡಿಗ,ಕಾರ್ಯದರ್ಶಿ ಪಾಂಡುರಂಗ,ಕೋಶಾಧಿಕಾರಿ ಗಜೇಂದ್ರ ಮೊಗವೀರ,ಕ್ಲಬ್ ಸರ್ವಿಸ್ ಗಿರೀಶ್ ಕೆ.ಎಸ್.,ವೃತ್ತಿಪರ ಸೇವೆ ಸುಭಾಷ್ ಪುತ್ರನ್,ಅಂತರಾಷ್ಟ್ರೀಯ ಸೇವೆ ವಿವೇಕ್ ಹೆಬ್ಬಾರ್,ಸೋಶಿಯಲ್ ಸರ್ವಿಸ್ ಗಿರೀಶ್ ಆಚಾರ್ಯ,ದಂಡಪಾಣಿ ನಿಚ್ಚಿತ್ ಭಂಡಾರಿ ಇವರಿಗೆ ಪದಪ್ರದಾನ ಮಾಡಲಾಯಿತು.
ವೇದಿಕೆಯಲ್ಲಿ ಬೀಜಾಡಿ ಮಿತ್ರ ಸಂಗಮದ ಅಧ್ಯಕ್ಷ ಮಹೇಶ್ ಮೊಗವೀರ, ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಹಿಂದಿನ ಕಾರ್ಯದರ್ಶಿ ರೋನಿ ಡಿ ಉಪಸ್ಥಿತರಿದ್ದರು.
ಉಪನ್ಯಾಸಕ ಪಾಂಡುರಂಗ ಸ್ವಾಗತಿಸಿದರು.ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರ ಬಿ.ಎನ್ ವಂದಿಸಿದರು.ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನಗಳ ಕಾಲ ಭಾರಿಮಳೆಯಾಗಲಿದೆ

ಬೆಂಗಳೂರು, ಜು.೨೮: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದ್ದು, ಇನ್ನೂ ಎರಡು ದಿನಗಳ ಕಾಲ ಭಾರಿ
ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ 14 ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ವರುಣಾರ್ಭಟ ಮುಂದುವರೆಯಲಿದೆ. ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡಿನ ಹಲವೆಡೆಗಳಲ್ಲಿ ಭಾರಿ ಮಳೆಯಾಗಲಿದೆ.

ದಕ್ಷಿಣ ಕನ್ನಡ, ಉಡುಪಿ,ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೆಳಗಾವಿ, ಬೀದರ್‌, ಕಲಬುರ್ಗಿ,
ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಲಿದೆ ಎಂದು ತಿಳಿಸಲಾಗಿದೆ.

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಮತ್ತು ಕಲಬುರ್ಗಿ, ಬೀದರ್‌ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ.

ಗೃಹರಕ್ಷಕರಾಗಿ ನಮ್ಮದು ನಿಸ್ವಾರ್ಥ ಸೇವೆ : ಆದರೆ ಯಾವ ಸೌಲಭ್ಯಗಳೂ ನಮಗಿಲ್ಲ

“ಗೃಹರಕ್ಷಕ ದಳದ ಸಿಬ್ಬಂದಿಗಳಾಗಿ ನಾವು ಪ್ರಾಮಾಣಿಕತೆಯಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದೇವೆ. ನಮಗೆ ಕಾಯಂ ಸೇವೆಗೆ ನೇಮಕ ಮಾಡುವುದಿಲ್ಲ. ಅಗತ್ಯವಿದ್ದಾಗ ಕರೆಯುತ್ತಾರೆ. ಸೇವೆ ಮಾಡಿದ ದಿನಗಳ ಲೆಕ್ಕದಲ್ಲಿ ವೇತನ ಸಿಗುತ್ತದೆ. ಸರಕಾರದ ಮುಂದೆ ನಮ್ಮ ಬೇಡಿಕೆಗಳು ಹಲವು ಇದ್ದರೂ ಯಾವುದೂ ಕಾರ್ಯಗತವಾಗಿಲ್ಲ. ಆರೋಗ್ಯ, ಚಿಕಿತ್ಸೆ ಸೌಲಭ್ಯವಾಗಲಿ, ನಿವೃತ್ತಿ ವೇತನವಾಗಲಿ ನಮಗೆ ದೊರೆಯುವುದಿಲ್ಲ. ಆದರೆ ಪೊಲೀಸ್ ಇಲಾಖೆ, ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ನಮಗೆ ಗೌರವ ನೀಡುತ್ತಾರೆ. ಸಮಾಜಕ್ಕಾಗಿ ಸೇವೆಗೈಯುವುದೇ ನಮಗಿರುವ ತೃಪ್ತಿ” ಎಂದು ಕುಂದಾಪುರ ಗೃಹರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ಭಾಸ್ಕರ ಮೆಂಡನ್ ತಿಳಿಸಿದರು.
ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ನಡೆದ “ಹೋಂ ಗಾರ್ಡ್‍ಗಳೊಂದಿಗೆ ಸಂವಾದ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಧಾನ ಅತಿಥಿಯಾಗಿ ಅವರು ಮಾತನಾಡಿದರು.
“ಎಷ್ಟೋ ಸಮಯ ಜೀವದ ಹಂಗು ತೊರೆದು ನಾವು ಸೇವೆ ಸಲ್ಲಿಸಿದ್ದೇವೆ. ಸಾರ್ವಜನಿಕ ಜೀವ ಹಾಗೂ ಸೊತ್ತು ಕಾಪಾಡಲು ಅಪಾಯ ಎದುರಿಸಿದ್ದೇವೆ. ಮೇಲಾಧಿಕಾರಿಗಳ ಆದೇಶದಂತೆ ಹಲವು ಸಂದರ್ಭಗಳಲ್ಲಿ ನಿದ್ದೆ, ಊಟೋಪಚಾರ ಇಲ್ಲದೇ ಕಾರ್ಯ ನಿರ್ವಹಿಸಿದ್ದೇವೆ. ಗೃಹರಕ್ಷಕರಿಗೆ ಸರಕಾರದ ಅಗತ್ಯ ಸವಲತ್ತು ಸಿಕ್ಕಿದರೆ ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯ” ಎಂದರು.
ಗೃಹರಕ್ಷಕರಾದ ಭಾಸ್ಕರ ಮೆಂಡನ್, ಜಗನ್ನಾಥ ಖಾರ್ವಿ, ಸದಾಶಿವ ಗೋಪಾಡಿ, ಸಂಜೀವ ಎಸ್. ಕೋಡಿಯವರನ್ನು ರೋಟರಿ ಕುಂದಾಪುರ ದಕ್ಷಿಣದ ಪರವಾಗಿ ಡಾ. ವಿಶ್ವೇಶ್ವರ, ಕೆ.ಕೆ.ಕಾಂಚನ್, ಸೀತಾರಾಮ ನಕ್ಕತ್ತಾಯ, ಯು.ಎಸ್.ಶೆಣೈ ಸನ್ಮಾನಿಸಿ ಗೌರವಿಸಿದರು.
“ನಮಗೆ ವರ್ಷಕ್ಕೆ ನಾಲ್ಕು ತಿಂಗಳು ಕೆಲಸ ಸಿಗಬಹುದು. ನಾವು ಬೇರೆ ಬೇರೆ ವೃತ್ತಿಯಲ್ಲಿದ್ದು ಕರೆ ಬಂದಾಗ ಹೋಗುತ್ತೇವೆ. ಮೀನುಗಾರಿಕೆ, ರಿಕ್ಷಾ ಚಾಲನೆ, ಅಂಗಡಿ ವ್ಯವಹಾರ, ವಾಚ್‍ಮೆನ್ ಮುಂತಾದ ಕೆಲಸ ಮಾಡಿಕೊಂಡಿರುತ್ತೇವೆ. ಕುಂದಾಪುರದಲ್ಲಿ 44 ಮಂದಿ ಇದ್ದು ಒಟ್ಟಾರೆ ಉಡುಪಿ ಜಿಲ್ಲೆಯಲ್ಲಿ 350 ಮಂದಿ ಸೇವೆ ಸಲ್ಲಿಸುತ್ತಿದ್ದೇವೆ. ಪೊಲೀಸರು ಮತ್ತು ನಮ್ಮ ಬೆಲ್ಟ್, ಹ್ಯಾಟ್, ಬ್ಯಾಡ್ಜ್ ಎಲ್ಲ ಬೇರೆ ಇರುವುದರಿಂದ ಗುರುತಿಸಲು ಸಾಧ್ಯ. ನಮಗೆ ಪೊಲೀಸರಂತೆ ಕ್ರಮಕೈಗೊಳ್ಳುವ ಅಧಿಕಾರವಿಲ್ಲ” ಎಂದು ಸಂವಾದದಲ್ಲಿ ಗೃಹರಕ್ಷಕರು ಹೇಳಿದರು.
ಉಮೇಶ್ ಮಾಸ್ಟರ್, ಕೆ.ಪಿ.ಭಟ್, ಡಾ. ಉತ್ತಮ್ ಕುಮಾರ್ ಶೆಟ್ಟಿ, ಮನೋಹರ್, ಸತ್ಯನಾರಾಯಣ ಪುರಾಣಿಕ, ಶ್ರೀನಿವಾಸ್ ಶೇಟ್, ನಂದಾ ನಾಯಕ್ ಸಂವಾದದಲ್ಲಿ ಪಾಲ್ಗೊಂಡರು.
ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸುರೇಶ ಮಲ್ಯ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಕೆ. ರಮಾನಂದ ಕಾರಂತ್ ಗೃಹ ಕಾರ್ಯಕ್ರಮದ ಉದ್ದೇಶ ವಿವರಿಸಿದರು. ಕೆ.ಕೆ.ಕಾಂಚನ್ ಗೃಹರಕ್ಷಕರನ್ನು ಪರಿಚಯಿಸಿದರು.
ಲೊಯ್ ಕಾರ್ವೆಲ್ಲೋ ವಂದಿಸಿದರು.

ಐಫೋನ್ ಖರಿದೀಸಲು ಹೆತ್ತ ಮಗುವನ್ನೆ ಮಾರಟ ಮಾಡಿದ ಅಧಮ ದಂಪತಿ

ಭಾರತದ ದಂಪತಿಗಳು ಐಫೋನ್ ಖರಿದೀಸಲು ಅವರು ಹೆತ್ತ ಎಂಟು ತಿಂಗಳ ಹಸುಕೂಸನ್ನೆ  ಮಾರಾಟ ಮಾಡಿದ ಘಟನೆ ಭಾರತದ ಪೂರ್ವ ರಾಜ್ಯವಾದ ಪಶ್ಚಿಮ ಬಂಗಾಳದಿಂದ ವರದಿಯಾಗಿದೆ. ರೀಲ್‌ಗಳನ್ನು ತಯಾರಿಸಲು ದುಬಾರಿ ಐಫೋನ್ ಬೇಕಾಗಿದ್ದಕ್ಕೆ ಮಗುವನ್ನು ಮಾರಟಮಾಡಲಾಗಿದೆ ಈ ವಿಲಕ್ಷಣ ಘಟನೆ ರಾಜ್ಯದ ಉತ್ತರ 24 ಪರಗಣ ಜಿಲ್ಲೆಯದ್ದಾಗಿದೆ ಎಂದು ವರದಿಯಾಗಿದೆ. ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದ್ದು, ಮಗುವಿನ ತಾಯಿ ಸತಿ ಎಂಬ ಹೆಸರಿನ ಮಹಿಳೆಯನ್ನು ಈಗಾಗಲೇ ಬಂಧಿಸಲಾಗಿದೆ. ಆದರೆ, ಮಗುವಿನ ತಂದೆ ಜಯದೇವ್ ತಲೆಮರೆಸಿಕೊಂಡಿದ್ದಾನೆ.

ಪನಿಹಟಿ ಗಾಂಧಿನಗರ ಪ್ರದೇಶದಲ್ಲಿನ ಅವರ ನೆರೆಹೊರೆಯವರು ಈ ದಂಪತಿಯ ನಡವಳಿಕೆಯಲ್ಲಿ  ಹಠಾತ್ ಬದಲಾವಣೆ ಮತ್ತು ಮಗುವಿನ ಅನುಪಸ್ಥಿತಿಯನ್ನು ಗಮನಿಸಿ ಗಮನಿಸಿದ ದಂಪತಿಯ ಮೇಲೆ ಅನುಮಾನಗೊಂಡರು

     ದಂಪತಿಗಳು ಹಿಂದೆ ತಮ್ಮ ಜೀವನ ಸಾರಲು ಹೆಣಗಾಡುತ್ತಿದ್ದರು ಮತ್ತು ಇದ್ದಕ್ಕಿದ್ದಂತೆ ಅವರು ಐಫೋನ್ ಖರೀದಿಸಿದರು ಮತ್ತು ರೀಲ್‌ಗಳನ್ನು ಚಿತ್ರೀಕರಿಸಲು ರಾಜ್ಯದ ವಿವಿಧ ಭಾಗಗಳಿಗೆ ಪ್ರವಾಸ ಮಾಡಿದರು.ಮಗು ಎಲ್ಲಿದೆ ಎಂದು ನೆರೆಹೊರೆಯವರು ಕೇಳಿದಾಗ, ದಂಪತಿಗಳು ಹಣಕ್ಕಾಗಿ ತಮ್ಮ ಮಗನನ್ನು ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡರು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿ, ಖಾರ್ದಾ ಪ್ರದೇಶದಲ್ಲಿ ಮಹಿಳೆಯೊಬ್ಬರಿಂದ ಮಗುವನ್ನು ರಕ್ಷಿಸಲಾಗಿದೆ. ಮೊಬೈಲ್ ಫೋನ್ ಖರೀದಿಸಲು ಹಣಕ್ಕಾಗಿ ದಂಪತಿಗಳು ತಮ್ಮ ಮಗನನ್ನು ಈ ಮಹಿಳೆಗೆ ಮಾರಾಟ ಮಾಡಿದ್ದರು. ಪ್ರಿಯಾಂಕಾ ಘೋಷ್ ಈ ಮಹಿಳೆಯನ್ನೂ ಪೊಲೀಸರು ಬಂಧಿಸಿದ್ದಾರೆ.

ಮೂರು ಸಾವಿರ ಕಾರುಗಳನ್ನು ಹೊತ್ತು ಸಾಗುತಿದ್ದ ಹಡಗಿಗೆ ಬೆಂಕಿ ;ಭಾರತೀಯ ಮೂಲದ ನಾವಿಕ ಸಾವು

ಲಂಡನ್‌: ಜರ್ಮನಿಯಿಂದ ಈಜಿಪ್ಟ್‌ಗೆ 3 ಸಾವಿರ ಕಾರುಗಳನ್ನು ಹೊತ್ತು ಸಾಗುತಿದ್ದ ಸರಕು ಸಾಗಣೆ ಹಡಗಿಗೆ ನೆದರ್ಲೆಂಡ್ಸ್‌ ಸಮುದ್ರ ತೀರದಲ್ಲಿ ಬೆಂಕಿ ಬಿದ್ದಿದ್ದು, ಅದರಲ್ಲಿದ್ದ ಭಾರತ ಮೂಲದ ನಾವಿಕ ಸಿಬ್ಬಂದಿ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.

ಜುಲಾಯ್ 26 ಬುದವಾರದಂದು ನಡೆದ ಈ ಘಟನೆಯಲ್ಲಿ ಹಡಗಿನಲ್ಲಿ ಬೆಂಕಿಯ ತೀವ್ರತೆ ಹೆಚ್ಚಿದಂತೆ ಕೆಲವು ಸಿಬ್ಬಂದಿಗಳು ತಮ್ಮನ್ನು ರಕ್ಷಿಸಿಕೊಳ್ಳಲು ಹಡಗಿನ ಡೆಕ್‌ನಿಂದ ಜಿಗಿದರು. ಲೈಫ್‌ಬೋಟ್‌ನಿಂದ ಅವರನ್ನು ಎತ್ತಿಕೊಂಡು ಹೋಗಲಾಯಿತು ಎಂದು ಲೈಫ್‌ಬೋಟ್‌ನ ಕ್ಯಾಪ್ಟನ್ ಡಚ್ ಬ್ರಾಡ್‌ಕಾಸ್ಟರ್ ಎನ್‌ಒಎಸ್‌ಗೆ ತಿಳಿಸಿದರು, ಎಂದು ಎಪಿ ವರದಿ ಮಾಡಿದೆ. ಕೆಲವು ಸಿಬ್ಬಂದಿಗಳಿಗಳು ಮೂಳೆ ಮುರಿತಗಳಿಂದ, ಸುಟ್ಟಗಾಯ ಮತ್ತು ಉಸಿರಾಟದ ತೊಂದರೆಗಳನ್ನು ಅನುಭವಿಸಿದರು ಮತ್ತು ಅವರನ್ನು ಉತ್ತರ ನೆದರ್ಲ್ಯಾಂಡ್ಸ್ನ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ತುರ್ತು ಸೇವೆಗಳು ತಿಳಿಸಿವೆ.

    ಈ ಘಟನೆಯಲ್ಲಿ ಸುಮಾರು 20 ಮಂದಿ ಗಾಯಗೊಂಡಿದ್ದು, ಹಡಗಿಗೆ ಹೊತ್ತಿಕೊಂಡಿರುವ ಬೆಂಕಿ ಇನ್ನೂ ಕೆಲವು ದಿನಗಳ ತನಕ ಉರಿಯಲಿದೆ ಎಂದು ಡಚ್‌ ಕರಾವಳಿ ಕಾಪಲು ಪಡೆ ತಿಳಿಸಿದೆ.ಭಾರತ ಮೂಲದ ನಾವಿಕ ಸಿಬ್ಬಂದಿಯೊಬ್ಬರು ಮೃತಪಟ್ಟಿರುವುದಾಗಿ ನೆದರ್ಲೆಂಡ್ಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಪ್ರಕಟಿಸಿ ಮಾಹಿತಿ ನೀಡಿದೆ. ಮೃತದೇಹವನ್ನು ಕುಟುಂಬಸ್ಥರಿಗೆ ತಲುಪಿಸಲು ಎಲ್ಲ ಪ್ರಯತ್ನ ನಡೆಸುತ್ತಿರುವುದಾಗಿ ಅದು ಹೇಳಿಕೊಂಡಿದೆ.

ರಚನಾ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ; ಮೈಂಡ್ ಮ್ಯಾಪಿಂಗ್ – ವರ್ಕ್ ಲೈಫ್ ಬ್ಯಾಲೆನ್ಸಿಂಗ್ ಕುರಿತು ಉಪನ್ಯಾಸ/Rachna Catholic Chamber of Commerce and Industry; talk on Mind Mapping and Work Life Balancing

ಮಂಗಳೂರು: ರಚನಾ ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ವತಿಯಿಂದ ಮೈಂಡ್ ಮ್ಯಾಪಿಂಗ್ ಮತ್ತು ವರ್ಕ್ ಲೈಫ್ ಬ್ಯಾಲೆನ್ಸಿಂಗ್ ಕುರಿತು ಉಪನ್ಯಾಸ ಕಾರ್ಯಕ್ರಮ ಎಂಸಿಸಿ ಬ್ಯಾಂಕ್ ಸಭಾಂಗಣದಲ್ಲಿ  ನಡೆಯಿತು. ಕಾರ್ಯಕ್ರಮದ ಗೌರವ ಭಾಷಣಕಾರರಾಗಿ ಖ್ಯಾತ ವಾಗ್ಮಿ ಡಾ.ಸರ್ಫರಾಜ್ ಜೆ.ಹಸೀನ್ ಆಗಮಿಸಿದ್ದರು. ’ನಿಮ್ಮ ಜೀವನದ ಮೇಲೆ ಪ್ರಭಾವ ಬೀರಲು ಮತ್ತು ನಿರ್ಧರಿಸಲು ನೀವು, ನೀವೇ ಅತ್ಯುತ್ತಮ ವ್ಯಕ್ತಿ ಎಂದ” ಅವರು ತಮ್ಮ ಪ್ರಸ್ತುತಿಯ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. “ನೀವು ಧನಾತ್ಮಕವಾಗಿ ಯೋಚಿಸುತ್ತೀರಿ, ನಿಮ್ಮ ಉಪಪ್ರಜ್ಞೆ ಮನಸ್ಸು ಸಕಾರಾತ್ಮಕ ಆಲೋಚನೆಗಳನ್ನು ಪ್ರತಿಫಲಿಸುತ್ತದೆ.. ನೀವು ನಕಾರಾತ್ಮಕವಾಗಿ ಯೋಚಿಸಿದರೆ ಅದು ನಿಮ್ಮ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ನಾವು ಕ್ಷಮಿಸುತ್ತೇವೆ, ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ, ಸಕಾರಾತ್ಮಕ ಆಲೋಚನೆಗಳಿಂದ ನಿಮ್ಮ ವ್ಯಕ್ತಿತ್ವವು ಸಂಪೂರ್ಣವಾಗಿ ಬದಲಾಗುತ್ತದೆ,. ನಮ್ಮ ಜೀವನವನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಸಕಾರಾತ್ಮಕತೆಯನ್ನು ಅಭ್ಯಾಸ ಮಾಡಿದರೆ ಎಲ್ಲವೂ ಸಂಪೂರ್ಣವಾಗಿ ಬದಲಾಗುತ್ತದೆ ಎಂದು ಡಾ.ಸರ್ಫರಾಜ್’ ಎಂದು ಅವರು ತಿಳಿಸಿದರು

    ರಚನಾದ ಅಧ್ಯಕ್ಷರಾದ ಶ್ರೀ ವಿನ್ಸೆಂಟ್ ಕುಟಿನ್ಹಾ ಸ್ವಾಗತಿಸಿದರು, ಗ್ರಾ.ಪಂ.ಸದಸ್ಯ ಶ್ರೀ ಚಾರ್ಲ್ಸ್ ಪಾಯಸ್ ಉಪನ್ಯಾಸಕರನ್ನು ಪರಿಚಯಿಸಿದರು, ಆಡಳಿತ ಮಂಡಳಿಯ  ಸದಸ್ಯಶ್ರೀ ಲೆಸ್ಲಿ ರೇಗೋ ಕಾರ್ಯಕ್ರಮ ನಿರೂಪಿಸಿದರು.

    ಸಂಪನ್ಮೂಲ ವ್ಯಕ್ತಿ ಡಾ. ಸರ್ಫರಾಜ್ ಅವರು ತಮ್ಮ ಕಾಲೇಜಿನ ಪ್ರಾಧ್ಯಾಪಕರಾದ ಜೋಸ್ಲಿನ್ ಲೋಬೋ ಮತ್ತು ಡೊನೆಟ್ ಡಿಸೋಜಾ ಅವರ ಉಪಸ್ಥಿತಿಯನ್ನು ಗೌರವ ಪೂರ್ವಕವಾಗಿ ನಮಿಸಿ ಸ್ಮರಿಸಿಕೊಂಡರು. ಎಂಸಿಸಿ ಬ್ಯಾಂಕ್ ನ ಸಿಎಂಡಿ ಶ್ರೀ ಅನಿಲ್ ಲೋಬೋ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 60 ಜನ ಭಾಗವಹಿಸಿದರು.

Rachna Catholic Chamber of Commerce and Industry; talk on Mind Mapping and Work Life Balancing

Mangalore: A lecture program on Mind Mapping and Work Life Balancing by Rachana Catholic Chamber of Commerce and Industry was held at MCC Bank auditorium. Renowned orator Dr. Sarfaraz J. Hasin was present as the Honorary Speaker of the program. “You are the best person to influence and decide your life” he mesmerized the audience with his presentation. “You think positive, your subconscious mind reflects positive thoughts.. If you think negative it affects your life negatively, we forgive, love each other, with positive thoughts your personality changes completely,. Dr. Sarfaraz said that if we take our life positively and practice positivity, everything will change completely

Mr. Vincent Cutinha, Chairman of the Constituency welcomed, Mr. Charles Pius introduced the lecturer, Member of Governing Body Mr. Leslie Rego presented the programme.

Resource Person Dr. Sarfaraz remembered the presence of his college professors Jocelyn Lobo and Donette D’Souza with a respectful bow. Mr. Anil Lobo, CMD of MCC Bank was present. About 60 people participated in this program.