ಜೆಸಿಐ : ನಾಗೇಶ್ ನಾವಡ ರಿಗೆ ಉದ್ಯೋಗ ರತ್ನ ಪ್ರಶಸ್ತಿ

ಕುಂದಾಪುರ. ಜೆಸಿಐ ಇಂಡಿಯಾ ವಲಯ 15 ರ ಅಭಿವೃದ್ಧಿ ಬೆಳವಣಿಗೆ ಹಾಗು ವ್ಯವಹಾರ ವಿಭಾಗದ ವೃದ್ಧಿ ಸಮ್ಮೇಳನ ವು ಜೆಸಿಐ ಶಂಕರನಾರಾಯಣ ಆತಿತ್ಯದಲ್ಲಿ ಶಾಲಿನಿ ಜಿ ಶಂಕರ್ ಕನ್ವೆನ್ಷನ್ ಸೆಂಟರ್ ಹಾಲಾಡಿ ಯಲ್ಲಿ ಜರುಗಿತು

ಕಳೆದ 20 ವರ್ಷ ಗಳಿಂದ ಉದ್ಯೋಗ ನಡೆಸಿ ಜನರೊಂದಿಗೆ ಬೆರೆತು ಸಮಾಜ ಸೇವೆ ಮಾಡುತ್ತ ಯುವಕರಿಗೆ ಉದ್ಯೋಗ ನೀಡುವಲ್ಲಿ ಸಹಕರಿಸುತ್ತ ಬಂದಿರುವ ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಸದ್ಯಸ್ಯ ಪೂರ್ವ ಅಧ್ಯಕ್ಷರು ಪೂರ್ವ ವಲಯ ಉಪಾಧ್ಯಕ್ಷ ರಾದ ನಾಗೇಶ್ ನಾವಡ ಇವರಿಗೆ ಉದ್ಯೋಗ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಜೆಸಿಐ ಇಂಡಿಯಾ ವಲಯ 15 ರ ವಲಯಾಧ್ಯಕ್ಷ ಪುರೊಷೋತ್ತಮ್ ಶೆಟ್ಟಿ ಪೂರ್ವ ವಲಯಾಧ್ಯಕ್ಷ ಕೆ ಕಾರ್ತಿಕೇಯ ಮಧ್ಯಸ್ಥ ಅಲನ್ ರೋಹನ್ ವಾಜ್ ವಲಯ ಉಪಾಧ್ಯಕ್ಷ ಅಭಿಲಾಶ್ ಜೆಸಿಐ ಕುಂದಾಪುರ ಸಿಟಿ ಯಾ ಅಧ್ಯಕ್ಷ ಡಾ ಸೋನಿ ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ ಪೂರ್ವ ಅಧ್ಯಕ್ಷ ರಾದ ಗಿರೀಶ್ ಹೆಬ್ಬಾರ್ ಪ್ರಶಾಂತ್ ಹವಾಲ್ದಾರ್ ರಾಘವೇಂದ್ರ ಚರಣ್ ನಾವಡ ಮಂಜುನಾಥ್ ಕಾಮತ್ ಜಯಚಂದ್ರ ಶೆಟ್ಟಿ ವಿಜಯ ಬಂಡಾರಿ ಶ್ರೀಧರ್ ಸುವರ್ಣ ರಾಘವೇಂದ್ರ ಕುಲಾಲ್ ಲೇಡಿ ಜೇಸಿ ಅಧ್ಯಕ್ಷೆ ಪ್ರೇಮ ಕಾರ್ಯದರ್ಶಿ ಸಂದೇಶ್ ಶೆಟ್ಟಿ
ಜೊತೆ ಕಾರ್ಯದರ್ಶಿ ಶೈಲಾ ಸದ್ಯಸ್ಯರಾದ ಮಿಥುನ್ ಸುವರ್ಣ ಮಹೇಶ್ ಶೇಟ್ ಭವ್ಯ ರಾವ್ ಅನಿತಾ ವಿಠಲ್ ಹೆಬ್ಬಾರ್ ನಾಗಪ್ರಸಾದ್ ಇನ್ನಿತರರು ಉಪಸ್ಥಿತರಿದ್ದರು
.

ಹಾಡು ನಿಲ್ಲಿಸಿದ ಖ್ಯಾತ ಕೊಂಕಣಿ ಗಾಯಕ ಕ್ಲೋಡ್ ಡಿ’ ಸೋಜಾ /Famous Konkani singer Claude D’Souza stopped the song

ಕೊಂಕಣಿ ಸಂಗೀತ ಲೋಕದ ಖ್ಯಾತ ಗಾಯಕ, ಗೀತರಚನೆಕಾರ ಮತ್ತು ಸಂಯೋಜಕ ಕ್ಲೋಡ್ ಡಿ’ಸೋಜಾ(67) ಅವರು ಜುಲೈ 24ರ ಸೋಮವಾರದಂದು ಅಲ್ಪಕಾಲದ ಅನಾರೋಗ್ಯದಿಂದಾಗಿ ಮಂಗಳೂರಿನಲ್ಲಿ ನಿಧನರಾಗಿದ್ದಾರೆ. ಈ ಮೂಲಕ ಅವರು ಗಾಯನವನ್ನು ನಿಲ್ಲಿಸಿದ್ದಾರೆ.. ಸುಮಾರು 61 ಸಂಗೀತ ‘ನೈಟ್ಸ್’ ಗಳನ್ನು ಪ್ರಸ್ತುತ ಪಡಿಸಿರುವ ಕ್ಲೋಡ್ ಡಿಸೋಜಾ ಅವರು ಗಾಯಕ ಮಾತ್ರವಲ್ಲದೆ  ಗೀತರಚನೆಕಾರ ಮತ್ತು ಸಂಯೋಜಕರಾಗಿಯೂ ಸೇವೆ ಸಲ್ಲಿಸಿದ್ದಾರೆ ಡ್ರಮ್ಸ್ ಮತ್ತು ಗಿಟಾರ್‌‌ನಂತಹ ಸಂಗೀತ ವಾದ್ಯಗಳನ್ನು ನುಡಿಸಿಯು ಅವರು ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ.

ಇನ್ನು ಕ್ಲೋಡ್ ಅವರು ಬರಹಗಾರ ಕೂಡ ಆಗಿದ್ದು 40 ಕ್ಕೂ ಹೆಚ್ಚು ಕೊಂಕಣಿ ನಾಟಕಗಳನ್ನು ಪ್ರದರ್ಶಿಸಿದ್ದಾರೆ. ಸಂಗೀತ ನಿರ್ದೇಶಕ ಮತ್ತು ನಟರಾಗಿ ಸಾಧನೆ ಮಾಡಿದ್ದಾರೆ. ಕ್ಲೌಡ್ ಅವರು 15 ಸಂಗೀತ ಸಿಡಿಗಳನ್ನು ಬಿಡುಗಡೆಗೊಳಿಸಿದ್ದು,  ಇತರ ಕಲಾವಿದರ ಆಲ್ಬಮ್‌ಗಳಿಗೆ ರಿದಮ್ ಸಂಯೋಜಕರಾಗಿ ಸೇವೆ ಸಲ್ಲಿಸಿದ್ದಾರೆ.

     ಕ್ಲೋಡ್ ಅವರ ಧ್ವನಿ ಮತ್ತು ಧಾರ್ಮಿಕ ನಾಟಕಗಳಿಗೆ ‘ಸಂದೇಶ ಪ್ರಶಸ್ತಿ’ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಮತ್ತು ಪ್ರಶಸ್ತಿಗಳು ಲಭಿಸಿದೆ.ಈ ಬಹುಮುಖ ಪ್ರತಿಭೆಯ ಕಲಾವಿದನನ್ನು ಕಳೆದುಕೊಂಡ ಕೊಂಕಣಿ ಸಂಗೀತ ಲೋಕ ಸಂತಾಪ ವ್ಯಕ್ತಪಡಿಸಿದೆ.

ಜನನುಡಿ ಮಾಧ್ಯಮ ಸಂಸ್ಥೆ ಅವರಿಗೆ ಅಂತರಾಳದ ಶ್ರದ್ದಾಂಜಲಿ ಅರ್ಪಿಸುತ್ತದೆ.

Famous Konkani singer Claude D’Souza stopped the song


Renowned Konkani music singer, lyricist and composer Claude D’Souza (67) passed away in Mangalore on Monday, July 24 after a brief illness. With this he has stopped singing.. Claude D’Souza, who has presented around 61 musical ‘nights’, has not only served as a singer but also as a lyricist and composer playing musical instruments like drums and guitar and has contributed to the Konkani music scene.

Claude is also a writer and has staged more than 40 Konkani plays. Accomplished as music director and actor. Claude has released 15 music CDs and served as a rhythm composer for other artists’ albums.

Claude has received several accolades and awards including the ‘Sandesh Award’ and the Karnataka Sahitya Academy Award for his voice and religious dramas. The Konkani music world has mourned the loss of this multi-talented artiste.

 Jananudi media house pays a heartfelt tribute to him.

ಕೊಲ್ಲೂರು ಅರಶಿನಗುಂಡಿ ಜಲಪಾತ ವೀಕ್ಷಣೆಯ ದುರಂತ: ಕಾಲು ಜಾರಿ ಜಲಪಾತದಲ್ಲಿ ಕೊಚ್ಚಿ ಹೋದ ಯುವಕ /Kolluru Arashinagundi Falls View Tragedy: A young man slipped and got swept away in the falls

ಕುಂದಾಪುರ:ಜು.24. ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆಯಲ್ಲಿ ಜು.23 ರಂದು ಯುವಕನೋರ್ವ ಕಾಲು ಜಾರಿ ಬಿದ್ದು ನೀರುಪಾಲಾದ ಘಟನೆ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರಶಿನಗುಂಡಿ ಜಲಪಾತದಲ್ಲಿ ಸಂಭವಿಸಿದೆ. ನೀರುಪಾಲಾದ ಯುವಕ. ಭದ್ರಾವತಿ ಮೂಲದ ಶರತ್ ಕುಮಾರ್ (23) ಎಂದು ತಿಳಿದು ಬಂದಿದೆ.

ಭಾನುವಾರ ಮಧ್ಯಾಹ್ನ ಕೊಲ್ಲೂರಿಗೆ ತನ್ನ ಸ್ನೇಹಿತ ಗುರುರಾಜ್ ನೊಂದಿಗೆ ಕಾರಿನಲ್ಲಿ ಬಂದಿದ್ದ ಶರತ್ ಅರಶಿನಗುಂಡಿ ಜಲಪಾತಕ್ಕೆ ತೆರಳಿದ್ದರು. ಈ ವೇಳೆ ಬಂಡೆಕಲ್ಲಿನ ಮೇಲೆ ನಿಂತು ಜಲಪಾತದಿಂದ ನೀರು ಧುಮ್ಮಿಕ್ಕುವ ದೃಶ್ಯ ನೋಡುತ್ತಿದ್ದ ವೇಳೆ ಕಾಲು ಜಾರಿ ನೀರಿನ ಸೆಳೆತದಲ್ಲಿ ಕೊಚ್ಚಿ ಹೋಫಿದ್ದಾನೆ.

  ಅವಘಡ ನಡೆದ ಕೂಡಲೇ ಶರತ್ ಸ್ನೇಹಿತ ಗುರುರಾಜ್ ಸಮೀಪದಲ್ಲಿರುವ ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದ್ದಾರೆ. ಕಾರ್ಯಪ್ರವೃತ್ತರಾದ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿ ಸ್ಥಳೀಯರ ಸಹಕಾರದಿಂದ ಕಾರ್ಯಾಚರಣೆ ನಡೆಸಿದರು, ಆದರೂ ಶರತ್ ಪತ್ತೆಯಾಗಲಿಲ್ಲ. ಅಗ್ನಿಶಾಮಕ ದಳ, ಅರಣ್ಯ ಇಲಾಖೆ‌ ಸಿಬ್ಬಂದಿಗಳು, ಕೊಲ್ಲೂರು ಪೊಲೀಸರು ಸೋಮವಾರ ಬೆಳಿಗ್ಗೆನಿಂದಲೂ ಪುನ: ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಈಜುಪಟು ಈಶ್ವರ್ ಮಲ್ಪೆ ಮತ್ತವರ ತಂಡವೂ ಆಗಮಿಸಿದೆ.

ಶರತ್ ಸ್ವ ಉದ್ಯೋಗಿಯಾಗಿದ್ದು, ಅವರ ಸ್ನೇಹಿತ ಗುರುರಾಜ್ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಭಾನುವಾರ ರಜೆ ಹಿನ್ನೆಲೆ ಜಲಪಾತ ವೀಕ್ಷಣೆಗೆ ಬಂದಿದ್ದರು. ಕಳೆದ‌ ಕೆಲ ದಿನಗಳಿಂದ‌ ಮಳೆ ಜೋರಾಗಿ ಸುರಿಯುತ್ತಿದ್ದರಿಂದ ಅರಶಿನಗುಂಡಿ ಜಲಪಾತದಲ್ಲಿ ಪ್ರವಾಸಿಗರಿಗೆ ನಿಷೇಧ ಹೇರಲಾಗಿತ್ತು. ಆದರೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪ್ರವೇಶ ದ್ವಾರದಲ್ಲಿರುವುದನ್ನು ನೋಡಿ ಶರತ್ ಹಾಗೂ ಆತನ‌ ಸ್ನೇಹಿತ ಬೇರೊಂದು ದಾರಿಯಲ್ಲಿ ಜಲಪಾತಕ್ಕೆ‌ ತೆರಳಿದ್ದರು ಎನ್ನಲಾಗಿದೆ.

ಶರತ್ ಜಾರುವ ವೇಳೆ ಸ್ನೇಹಿತ ಗುರುರಾಜ್ ಚೀತ್ರಿಕರಿಸಿದ ವಿಡೀಯೊ ವೈರಲ್ ಆಗಿದೆ

ಶರತ್ ಸ್ನೇಹಿತ ಗುರುರಾಜ್ ಜಲಪಾತದ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ‌ಸೆರೆ ಹಿಡಿಯುತ್ತಿರುವ ವೇಳೆಯಲ್ಲೇ ಶರತ್ ಕಾಲು ಜಾರಿ ಬಿದ್ದಿದ್ದು, ಆ ದೃಶ್ಯವೂ ಮೊಬೈಲ್ ನಲ್ಲಿ‌ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Kolluru Arashinagundi Falls View Tragedy: A young man slipped and got swept away in the falls


Kundapur: Ju.24. On June 23, while going to see the waterfall, a young man slipped and fell into the water at the Arashinagundi waterfall under Kollur police station. A young man from Neerupala. It has been learned that Sarath Kumar (23) hails from Bhadravati.
Sarath, who had come to Kolluri with his friend Gururaj in a car on Sunday afternoon, had gone to Arashinagundi waterfall. At this time, while standing on a rock and watching the water gushing from the waterfall, he slipped and was crushed by the water.
Soon after the accident happened, Sharath’s friend Gururaj informed the forest department personnel nearby. The alert personnel informed the police and conducted an operation with the cooperation of the locals, but Sharath was never found. The fire brigade, forest department staff, Kollur police have been involved in re-operation since Monday morning, swimmer Ishwar Malpe and other teams have also arrived.
Sarath is self-employed and his friend Gururaj is working in an IT company and came to see the background falls on Sunday. Arashinagundi waterfall has been banned for tourists as it has been raining heavily for the past few days. However, it is said that Sharath and his friend went to the waterfall by a different route after seeing the forest department personnel at the entrance.
A video filmed by friend Gururaj while Sarath is sliding has gone viral
While Sharath’s friend Gururaj was capturing the scenes of the waterfall on his mobile phone, Sharath slipped and fell, and that scene was also captured on his mobile phone. This video is currently going viral on social media.

ಪಡುಕೊಣೆ ಸಂತ ಅಂತೋನಿ ಚರ್ಚಿನಲ್ಲಿ ವಯಸ್ಕರ ದಿನಾಚರಣೆ


ಪಡುಕೊಣೆ: ದಿನಾಂಕ 23.07.2023 ರಂದು ಸಂತ ಅಂತೋನಿ ಪಡುಕೊಣೆ ಚರ್ಚ್ ನಲ್ಲಿ ಕ್ರಿಸ್ತ ಸಮುದಾಯದ 70 ವರ್ಷ ಮೇಲ್ಪಟ್ಟವರ ಜೊತೆ ವಯಸ್ಕರ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚರ್ಚಿನ ಧರ್ಮಗುರುಗಳು ವಂ ಫಾ ಫ್ರಾನ್ಸಿಸ್ ಕರ್ನೆಲಿಯೊರವರು ವಹಿಸಿ ’ಹಿರಿಯರು ಕುಟುಂಬದ ಆಸ್ತಿ ಅವರನ್ನು ನಾವು ಪ್ರೀತಿಯಿಂದ ಆರೈಕೆ ಮಾಡುವುದುರೊಂದಿಗೆ ಅವರನ್ನು ಗೌರವಿಸೋಣ’ ಎಂದು ಅವರು ಸಂದೇಶ ನೀಡಿದರು. ಅತಿಥಿಗಳಾಗಿ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಪ್ರಭು ಕೆನಡಿ ಪಿರೇರ ಕಾರ್ಯದರ್ಶಿ ಶ್ರೀ ಅಲೆಕ್ಸ್ ಅಂತೋನಿ ಡಿಸೋಜ ಮತ್ತು 21 ಆಯೋಗಗಳ ಸಂಯೋಜಕರಾದ ಶ್ರೀ ವಿನ್ಸೆಂಟ್ ಡಿಸೋಜಾ ಉಪಸ್ಥಿತರಿದ್ದರು.
ವಯಸ್ಕಾರಾದ ಹಿರಿಯನ್ನು ಗುಲಾಬಿ ಹೂ ಕೊಟ್ಟು ಗೌರವಿಸಲಾಯಿತು. ತದನಂತರ ಅದೃಷ್ಟ ಆಟಗಳನ್ನು ಆಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಮನೋರಂಜನೆಯಾಗಿ ಹಾಡುಗಳನ್ನು ಹಾಡಾಲಾಯಿತು. ಕಾರ್ಯಕ್ರಮವನ್ನು ಚರ್ಚಿನ ಕುಟುಂಬ ಆಯೋಗ ಮತ್ತು i.c.y.m ಹಾಗೂ y.c.s ಸಂಘಟನೆಗಳಿಂದ ಅಯೋಜಿಸಲಾಗಿತ್ತು
.

ಮಂಗಳೂರು ಮಣಿಪುರ ಘಟನೆಯನ್ನು ಖಂಡಿಸಿ ಸಮಾನ ಮನಸ್ಕರಿಂದ ಬೃಹತ್ ಪ್ರತಿಭಟನೆ/Massive protest by like-minded people condemning Mangalore Manipur incident

ಮಂಗಳೂರು: ಜು.೨೪  ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ,ಬಿಜೆಪಿ ಸರಕಾರದ ಕುಮ್ಮಕ್ಕಿನಿಂದ ನಡೆಯುತ್ತಿರುವ ಅನಿಯಂತ್ರಿತ ಜನಾಂಗೀಯ ದ್ವೇಷದ ಗಲಭೆಯನ್ನು ಖಂಡಿಸಿ ಇಂದು ಮಂಗಳೂರಿನ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ವತಿಯಿಂದ ಕ್ಲಾಕ್ ಟವರ್ ಮುಂಭಾಗದಲ್ಲಿ ದಿನಾಂಕ ಜುಲಾಯ್ ೨೩ ರಂದು ಬೃಹತ್ ಪ್ರತಿಭಟನೆ ನಡೆಯಿತು. ಸುರಿಯುತ್ತಿದ್ದ ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಅಪಾರ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದರು‌.ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

 ಜಾತ್ಯಾತೀತ ಪಕ್ಷಗಳು ಮತ್ತು ಸಂಘಟನೆಗಳ ಜಂಟಿ ವೇದಿಕೆಯ ಅಧ್ಯಕ್ಷರಾದ ಮಾಜಿ ಸಚಿವ ಬಿ ರಮಾನಾಥ ರೈ ಪ್ರತಿಭಟನಾ ಸಭೆಯನ್ನು ಉದ್ಘಾಟಿಸಿದರು.ಬಳಿಕ ಮದರ್ ಥೆರೆಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರಾಯ್ ಕ್ಯಾಸ್ಟಲಿನೋ, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ,ರೈತ ಸಂಘದ ಸನ್ನಿ ಡಿಸೋಜ, ಕೆಥೋಲಿಕ್ ವುಮನ್ಸ್ ಅಸೋಸಿಯೇಷನ್‌ ಜಿಲ್ಲಾಧ್ಯಕ್ಷರಾದ ಗ್ರೆಟ್ಟಾ ಪಿಂಟೊ,ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ ಶೇಖರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಾಲೆಟ್ ಪಿಂಟೋ ಸಭೆಯನ್ನುದ್ದೇಶಿಸಿ ಮಾತನಾಡಿದರು. 

  ಪ್ರತಿಭಟನೆಯಲ್ಲಿ ಕಾಂಗ್ರೆಸ್,CPI, CPIM ಪಕ್ಷಗಳು ಸೇರಿದಂತೆ ವಿದ್ಯಾರ್ಥಿ, ಯುವಜನ,ಮಹಿಳಾ,ದಲಿತ, ಆದಿವಾಸಿ,ವಕೀಲ, ಸಾಂಸ್ಕೃತಿಕ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Massive protest by like-minded people condemning Mangalore Manipur incident

Mangalore: July 24 Manipur women’s nude march, the uncontrolled racial hatred riots going on with the help of the BJP government, a massive protest was held in front of the clock tower on July 23 on behalf of the joint forum of like-minded organizations of Mangalore today. Despite the torrential rain, a large number of protestors gathered, especially women participated in large numbers.

Former Minister B Ramanath Rai, President of Joint Forum of Secular Parties and Organizations, inaugurated the protest meeting.Mother Teresa Forum President Roy Castellino, DYFI State President Munir Katipalla, Farmers’ Association Sunny D’Souza, Catholic Women’s Association District President Gretta Pinto, CPI Party District Secretary B Shekhar, Women’s Congress President Shalette Pinto. He addressed the gathering.

A large number of leaders and activists of Congress, CPI, CPIM parties, students, youth, women, dalit, adivasi, lawyers, cultural organizations participated in the protest.

ಮಣಿಪುರಕ್ಕಾಗಿ ಇಂದು ಕುಂದಾಪುರದಲ್ಲಿ ಪ್ರತಿಭಟನೆ /Protest for Manipur today in Kundapur

ಕುಂದಾಪುರ: ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಭಾರತದ ಆತ್ಮವನ್ನು ಘಾಸಿಗೊಳಿಸಿದೆ. ನಾವೆಲ್ಲರೂ ತಲೆ ತಗ್ಗಿಸಿ ನಿಲ್ಲುವಂತಾಗಿದೆ* ಹಿಂಸಾಚಾರದಲ್ಲಿ ನಲುಗಿರುವ ಮಣಿಪುರ ಜನತೆ, ಅತ್ಯಾಚಾರಕ್ಕೊಳಗಾದ ಮಹಿಳೆಯರ ಜೊತೆ ನಾವೆಲ್ಲರೂ ನಿಲ್ಲಬೇಕಿದೆ. ಈ ಹಿಂಸಾಚಾರಕ್ಕೆ ಅಂತ್ಯ ಹಾಡುವಂತೆ ಸರ್ಕಾರವನ್ನು ಒತ್ತಾಯಿಸಬೇಕಿದೆ.
ಆ ನಿಟ್ಟಿನಲ್ಲಿ ಕುಂದಾಪುರದ ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ. ತಾವುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿಸುವೆವು.

ದಿನಾಂಕ: 24/07/2023 ಸ್ಥಳ : ಶಾಸ್ತ್ರೀ ಸರ್ಕಲ್ ಕುಂದಾಪುರ ಸಮಯ : ಸಂಜೆ 6.00 ಕ್ಕೆ

ಸಹಬಾಳ್ವೆ ಕುಂದಾಪುರ, ದಲಿತ ಸಂಘರ್ಷ ಸಮಿತಿ ತಾಲೂಕು ಘಟಕ ಕುಂದಾಪುರ ,ಸಮುದಾಯ ಕುಂದಾಪುರ

ಇದನ್ನು ಸಹಬಾಳ್ವೆ ಕುಂದಾಪುರದ ಸಂಚಾಲಕರಾದ ವಿನೋದ್ ಕ್ರಾಸ್ಟೊ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Protest for Manipur today in Kundapur

Kundapur: Naked procession of Manipur women has hurt the soul of India. We all have to stand with our heads down. We all have to stand with the people of Manipur who are suffering from violence and the women who have been raped. The government should be urged to put an end to this violence.
In this regard, a protest meeting has been organized on behalf of like minded organizations of Kundapur. We request them to participate in large numbers.

Date: 24/07/2023 Venue: Shastri Circle Kundapur Time: 6.00 PM

Sahabalve Kundapur, Dalit Sangharsh Samiti Taluk Unit Kundapur, Samudaya Kundapur

This was stated by Vinod Crasto, the convener of Sahabalve Kundapur, in a press release