Laudate Si Sunday Observed at Infant Mary Parish Bajjodi

ICYM, Commission for Ecology ( Parisar Ayog) and Youth Commission ( Yuva Ayog) of Bajjodi Unit organized Laudate Si   Sunday on 23rd July, 2023 at 7.40 am in the Church Premises to mark the World Environment Day.

The programme started with a Prayer Song by the ICYM members.  Fr. Dominic Vas, Parish Priest of Infant Mary Church was the Chief Guest. ICYM President Ms. Riyana Pinto welcomed the Chief Guest, the guests and the gathering. Fr. Dominic Vas in his message spoke of  how man has disfigured the beautiful Universe that God has created. Today everything in Nature – Air, Water, Soil , Food, Fish has been polluted by man. He has  cut the trees, destroyed the forest, levelled the lakes and built mighty buildings which has caused great destruction to Nature. Pope Francis says Nature is the 8th sacrament where we meet God. Hence we are all called upon to love and preserve nature, planting trees being an important step.

Chief Guest Fr. Dominic Vas, Fr. Rayan Pinto, Fr. Cyril Menezes, Deacon Br. Siltan Noronha,  OSS sisters, President of Parish Council Mr. Prakash Saldanha, Secretary Mrs Elizabeth Pereira, Co – ordinator of the 21 ayogs Mr. Ronald Goveas, Eco Commission Co – ordinator Mr. Joseph Mascarenhas, Co – ordinator of Youth Commission Mr. Sachin Menezes and Gurkars planted saplings as an expression of their love and concern for Nature. The youth, ICYM animator  Mrs. Seema Carlo and parishioners were among others who were present.

ICYM Vice President Mr. Kreethan D’Souza compered the programme. Mr. Jilson Pinto proposed the Vote of Thanks.

The program concluded at 8.30 am with the distribution of plants to those present so as to motivate them to  grow and nurture plants  in their surrounding and thus contribute to the environment and Nature.

ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ: ನಾಳೆ ಜು.24 ಜಿಲ್ಲೆಯಾದ್ಯಂತ ಶಾಲೆ, ಪಿಯು ಕಾಲೇಜುಗಳಿಗೆ ರಜೆ

ಉಡುಪಿ:ಜು.23:  ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಿಂದಾಗಿ ನದಿ ,ಹಳ್ಳ ಕೊಳ್ಳಗಳಲ್ಲಿ ಹೆಚ್ಚಿನ ನೀರು ಹರಿವು ಹಾಗೂ ಹೆಚ್ಚು ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆಯ ಮುನ್ಸುಚನೆ ನೀಡಿದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ವ್ಯಾಪ್ತಿಯ ಎಲ್ಲಾ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ

ಈ ಮೊದಲು ಕೇವಲ ಬೈಂದೂರು ತಾಲೂಕಿಗೆ ಸೀಮಿತವಾಗಿ ಘೋಷಣೆ ಮಾಡಿದ್ದ ಆದೇಶವನ್ನು ಪರಿಷ್ಕರಿಸಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ನೂತನ ಆದೇಶ ಹೊರಡಿಸಿದ್ದಾರೆ.

ಕೋಲಾರ ಜಿಲ್ಲಾದ್ಯಂತ ಒತ್ತುವರಿ ಆಗಿರುವ ಅರಣ್ಯ ಭೂಮಿ ಹಗರಣವನ್ನು ಸಿ.ಬಿ.ಐಗೆ ಒಪ್ಪಿಸುವಂತೆ ಒತ್ತಾಯಿಸಿ ಜು.26 ರ ಬುದವಾರ ಅರಣ್ಯ ಇಲಾಖೆ ಮುತ್ತಿಗೆಗೆ ತಿರ್ಮಾನ

ಶ್ರೀನಿವಾಸಪುರ, ಜು.23: ಜಿಲ್ಲಾದ್ಯಂತ ಒತ್ತುವರಿ ಆಗಿರುವ ಅರಣ್ಯ ಭೂಮಿ ಹಗರಣವನ್ನು ಸಿ.ಬಿ.ಐಗೆ ಒಪ್ಪಿಸುವಂತೆ ಅರಣ್ಯ ಸಚಿವರನ್ನು ಒತ್ತಾಯಿಸಿ ಜು.26 ರ ಬುದವಾರ ಅರಣ್ಯ ಇಲಾಖೆ ಮುತ್ತಿಗೆ ಹಾಕಲು ತೆರ್ನಹಳ್ಳಿ ಪ್ರಗತಿಪರ ರೈತ ತಾಲ್ಲೂಕದ್ಯಕ್ಷ ಆಂಜಿನಪ್ಪರವರ ತೋಟದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.
ಅರಣ್ಯ ರಕ್ಷಕರೇ ಅರಣ್ಯ ಭಕ್ಷಕರಾದರೆ ಇನ್ನೂ ಸರ್ಕಾರದ ಅರಣ್ಯ ಭೂಮಿಯನ್ನು ಉಳಿಸುವವರು ಯಾರು? ಒಂದು ಕಡೆ ಸಾವಿರಾರು ಎಕರೆ ಅರಣ್ಯ ಭೂಮಿ ಒತ್ತುವರಿ ಮತ್ತೊಂದು ಕಡೆ ಅರಣ್ಯದಲ್ಲಿ ಬೆಳೆದಿರುವ ಮರಗಳ ಆಕ್ರಮ ಕಟಾವು ದಂದೆಗೆ ಕಡಿವಾಣ ಇಲ್ಲವೇ ಎಂದು ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜ್‍ಗೌಡ ಅರಣ್ಯ ಇಲಾಖೆ ಆಕ್ರಮದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀನಿವಾಸಪುರ ತಾಲ್ಲೂಕಿನಾದ್ಯಂತ 3725 ಎಕರೆ ಅರಣ್ಯ ಭೂಮಿಯನ್ನು ಬಲಾಡ್ಯರು ಶ್ರೀಮಂತರು, ರಾಜಕೀಯ ವ್ಯಕ್ತಿಗಳು ರಾಜಾರೋಷವಾಗಿ 100 ಎಕರೆಯಂತೆ ತಮಗೆ ಇಷ್ಟ ಬಂದ ಕಡೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ನಕಲಿ ದಾಖಲೆಗಳನ್ನು ಕಂದಾಯ ಅಧಿಕಾರಿಗಳು ಸೃಷ್ಠಿಸಿ ಸರ್ವೇ ಅಧಿಕಾರಿಗಳು ನಕ್ಷೆಯನ್ನು ತಯಾರಿಸಿ ಅರಣ್ಯ ಅಧಿಕಾರಿಗಳು ನಿಯತ್ತಾಗಿ ದಾಖಲೆಗಳನ್ನು ಒತ್ತುವರಿದಾರರ ಮನೆಗೆ ತಲುಪಿಸುತ್ತಿರುವುದು ದುರಾದೃಷ್ಟಕರ ಎಂದು ಅಧಿಕಾರಿಗಳ ಭ್ರಷ್ಟಚಾರತೆ ವಿರುದ್ದ ಕಿಡಿ ಕಾರಿದರು.
ಸಣ್ಣ ರೈತ ತನ್ನ ಜಮೀನಿನ ಪಕ್ಕದಲ್ಲಿ ಒಂದು ಹೆಜ್ಜೆ ಅರಣ್ಯ ಭೂಮಿಯಲ್ಲಿ ಇಟ್ಟರೆ ಅದನ್ನೇ ದೊಡ್ಡ ಸುದ್ದಿಯೆಂದು ನೂರಾರು ಅರಣ್ಯ ರಕ್ಷಕರು ಮತ್ತು ಪೋಲಿಸರು ಸುತ್ತುವರೆದು ರೈತರಿಗೆ ಪ್ರತಿನಿತ್ಯ ಕಿರುಕುಳ ನೀಡುವ ಅರಣ್ಯ ಅಧಿಕಾರಿಗಳೇ ಸಾವಿರಾರು ಎಕರೆ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ನಕಲಿ ದಾಖಲೆ ಸೃಷ್ಠಿಸಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಕೋಟಿ ಕೋಟಿ ಸಾಲವನ್ನು ಪಡೆದಿರುವ ಭೂ ಒತ್ತುವರಿದಾರರ ವಿರುದ್ದ ಕ್ರಮ ಕೈಗೊಳ್ಳಲು ಹಿಂದೇಟು ಏಕೆ ಎಂದು ಪ್ರಶ್ನೆ ಮಾಡುವ ಜೊತೆಗೆ ಸರ್ಕಾರದಿಂದ ಲಕ್ಷ ಲಕ್ಷ ಪಡೆಯುವ ಅಧಿಕಾರಿಗಳೇ ಮಾಜಿ ಶಾಸಕರಾದ ರಮೇಶ್‍ಕುಮಾರ್ ಅರಣ್ಯ ಭೂ ಒತ್ತುವರಿ ಜೊತೆಗೆ ಬಲಾಡ್ಯರ 3725 ಎಕರೆ ಭೂಮಿಯನ್ನು ತೆರೆವುಗೊಳಿಸಿ ನಿಮ್ಮ ತಾಕತ್ತು ಬಲಾಡ್ಯರ ಮೇಲೆ ತೋರಿಸಿ ಎಂದು ಸವಾಲು ಹಾಕಿದರು.
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಏಷ್ಯಾದ ಎರಡನೇ ಅತಿ ದೊಡ್ಡ ಮಾರುಕಟ್ಟೆಗೆ ಜಾಗಕ್ಕೆ 50 ಎಕರೆ ಅರಣ್ಯ ಭೂಮಿ ನೀಡಲು ಕೇಂದ್ರ ಸರ್ಕಾರದ ಅರಣ್ಯ ಸಚಿವರ ಮೇಲೆ ಬೆರಳು ತೋರಿಸುವ ಅಧಿಕಾರಿಗಳೇ ಸಾವಿರಾರು ಎಕರೆ ಭೂ ಒತ್ತುವರಿ ನಿಮ್ಮ ಕಣ್ಣಿಗೆ ಕಾಣಿಸುತ್ತಿಲ್ಲವೇ? ಇಲ್ಲ ತಾವೇ ಕೋಟಿ ಕೋಟಿ ಹಣಕ್ಕೆ ಅರಣ್ಯ ಭೂಮಿಯನ್ನು ಮಾರಾಟ ಮಾಡಿದ್ದೀರೇಯೆ? ಇದು ಜಿಲ್ಲೆಯ ನೊಂದ ರೈತರ ಪ್ರಶ್ನೆ ಆಗಿದೆ ಎಂದರು.
ಒಂದು ಕಡೆ ಅರಣ್ಯ ಭೂಮಿ ಒತ್ತುವರಿ ಮತ್ತೊಂದು ಕಡೆ ಅರಣ್ಯದಲ್ಲಿ ಬೆಳೆದಿರುವ ಬೆಳೆಬಾಳುವ ಆಕ್ರ್ಲಿಪಾರಂ ಆಕ್ರಮ ಮಾರಾಟ ದಂದೆ ಮತ್ತೊಂದೆಡೆ ಅರಣ್ಯ ಭೂಮಿಯಲ್ಲಿ ಅಕ್ರಮ ಗಣಿಗಾರಿಕೆ ಮಾಡುವ ವ್ಯಕ್ತಿಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವ ಹಿನ್ನಲೆ ಏನೂ ಅರಣ್ಯ ಇಲಾಖೆಯಲ್ಲಿ ಹೆಜ್ಜೆ ಹೆಜ್ಜೆಗೂ ನಡೆಯುತ್ತಿರುವ ಆಕ್ರಮ ಭ್ರಷ್ಟಚಾರತೆಗೆ ಕುಮ್ಮಕ್ಕು ಯಾರು ಈ ದಂದೆಗಳು ತನಿಖೆ ಆಗಲೇಬೇಕು. ತಪ್ಪಿತಸ್ಥ ಅಧಿಕಾರಿಗಳಿಗೆ ಶಿಕ್ಷೆ ಅಮಾನತು ಮಾಡಲೇಬೇಕು. ಸಾವಿರಾರು ಎಕರೆ ಅರಣ್ಯ ಭೂ ಹಗರಣವನ್ನು ಸಿ.ಬಿ.ಐಗೆ ಒಪ್ಪಿಸಲೇ ಬೇಕು ಎಂದು ಜು.26ರ ಬುಧವಾರ ಅರಣ್ಯ ಇಲಾಖೆ ಮುಂದೆ ಕಲ್ಲುಗಳೊಂದಿಗೆ ಹೋರಾಟ ಮಾಡುವ ಮುಖಾಂತರ ನ್ಯಾಯ ಪಡೆಯುವ ತಿರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
ಸಭೆಯಲ್ಲಿ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಪಾರುಕ್‍ಪಾಷ, ವಿಜಯ್‍ಪಾಲ್, ಆಲವಾಟ ಶಿವ, ಸಹದೇವಣ್ಣ, ಶೇಕ್‍ಶಪಿಹುಲ್ಲಾ, ಮುನಿರಾಜು, ಮಂಗಸಂದ್ರ ತಿಮ್ಮಣ್ಣ, ಮೂರಾಂಡಹಳ್ಳಿ ಶಿವಾರೆಡ್ಡಿ, ಬಂಗಾರಿ ಮಂಜು, ಸುನಿಲ್‍ಕುಮಾರ್, ಭಾಸ್ಕರ್, ಮುಂತಾದವರಿದ್ದರು.

ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ಮಕ್ಕಳ ಕಳ್ಳರ ವದಂತಿ: ಪೊಲೀಸ್ ಇಲಾಖೆ ಸ್ಪಷ್ಟನೆ


ಕುಂದಾಪುರ: ಇತ್ತೀಚೆಗೆ ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟೇಶ್ವರ, ಕಾಳಾವರ ಪರಿಸರದಲ್ಲಿ ಮಕ್ಕಳನ್ನು ಅಪಹರಿಸಿಕೊಂಡು ಹೋಗುವ ಪ್ರಯತ್ನ ನಡೆದಿದೆ ಎಂಬ ವದಂತಿ ಹಾಗೂ ಫೋಟೋ ವೀಡಿಯೋಗಳು ಹರಿದಾಡುತ್ತಿದ್ದುಇದು ಸತ್ಯಕ್ಕೆ ದೂರವಾಗಿದೆ ಎಂದು ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು ತಿಳಿಸಿದ್ದಾರೆ.

ಕಾರಿನಲ್ಲಿ ಮಕ್ಕಳ ಅಪಹರಣಕ್ಕೆ ಯತ್ನಿಸಲಾಗಿದೆ ಎಂಬ ವದಂತಿ ಹಬ್ಬುತ್ತಿದ್ದಂತೆಯೇ ತಕ್ಷಣ ಕಾರ್ಯಪ್ರವೃತ್ತರಾದ ಕುಂದಾಪುರ ನಗರ ಠಾಣಾ ಪೊಲೀಸರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವಾಹನವನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಂಡಿದ್ದಾರೆ. ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡದೆ ಏನೇ ಮಾಹಿತಿ ಇದ್ದಲ್ಲಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು. ಅಥವಾ ತುರ್ತು ಕರೆ ಸಂಖ್ಯೆ 112 ಗೆ ಕರೆ ಮಾಡಬೇಕಾಗಿ ಡಿವೈಎಸ್ಪಿ ಮನವಿ ಮಾಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಇತ್ತೀಚೆಗೆ ಕುಂದಾಪುರ ಬರೇಕಟ್ಟು ರಸ್ತೆಯಲ್ಲಿ ಮಕ್ಕಳಿಗೆ ಆಟಿಕೆ ಆಸೆ ತೋರಿಸಿ ಮಕ್ಕಳನ್ನು ಕರೆಯುವ ವಿಡಿಯೋ ತುಣುಕು ಹರಿದಾಡುತ್ತಿದ್ದು ಈ ವಿಚಾರವು ಸುಳ್ಳು ಸುದ್ದಿಯಾಗಿದ್ದು. ವಿಷಯ ತಿಳಿದ ತಕ್ಷಣವೇ ಕಾರ್ಯ ಪ್ರವೃತ್ತರಾದ ಕುಂದಾಪುರ ಪೊಲೀಸ್ ಸಿಬ್ಬಂದಿ ಆತನನ್ನು ಕರೆಸಿ ವಿಚಾರಣೆ ನಡೆಸಿದ್ದು ಅದರಲ್ಲಿ ಕೂಡ ಆತನಲ್ಲಿ ಯಾವುದೇ ದುರುದ್ದೇಶ ಕಂಡು ಬಂದಿಲ್ಲ. ಯಾವುದೇ ವದಂತಿ ನಂಬದೆ ಮಾಹಿತಿಗಳಿದ್ದಲ್ಲಿ ಕುಂದಾಪುರ ಠಾಣೆಯ 08254-230338 ಸಂಖ್ಯೆ ಸಂಪರ್ಕಿಸಲು ಕುಂದಾಪುರ ನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ನಂದಕುಮಾರ್ ತಿಳಿಸಿದ್ದಾರೆ.

ಕಾಂಞಂಗಾಡ್ನಲ್ಲಿ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷರಾಗಿ K P ಶ್ರೀಶನ್ / K P Sreeshan as President of Anti-Drug Day Program in Kanhangad

ಕಾಂಞಂಗಾಡ್: ಇತ್ತೀಚಿಗೆ ಕೇರಳದ ಕಾಂಞಂಗಾಡ್ನಲ್ಲಿ ನಡೆದ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿದ್ದ ಕಾರ್ಯಕ್ರಮದಲ್ಲಿ
್ಕುಂದಾಪುರದ ವಸಂತ ಬೇಕರಿ ಮಾಲೀಕರಾದ K P ಶ್ರೀಶನ್ , ಮುಖ್ಯ ಅತಿಥಿಯಾಗಿದ್ದು, ವಿಶ್ವ ಪ್ರಸಿದ್ಧ ಜಾದುಗಾರ ಪ್ರೊಫೆಸರ್ ಡಾ|| ಶ್ರೀಗೋಪಿನಾಥ್ ಮುದುಕಾಡ್, ಮತ್ತು ಉದ್ಯಮಿ ಫಿಲಂಪ್ರೊಡ್ಯೂಸರ್,MMC ಮೆಡಿಕಲ್ ಗ್ರೂಪನ ಚೇರ್ಮನ್ ಶ್ರೀ ಮನ್ಸೂರ್ ಪಳ್ಳೂರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

K P Sreeshan as President of Anti-Drug Day Program in Kanhangad

Kanhangad: In the recently held anti-narcotics day program in Kanhangad, Kerala, he was the chairman.
K P Sreeshan, owner of Vasant Bakery, Kundapur, was the chief guest and world renowned magician Professor Dr. Shri Gopinath Mudukad, and businessman Filmproducer, Chairman of MMC Medical Group Mr. Mansoor Pallur participated in the event
.

ಬದಿಯಡ್ಕದಲ್ಲಿ ಗ್ರಾಮಲೋಕ ಕೊಂಕಣಿ ಸಾಹಿತ್ಯ ಕಾರ್ಯಕ್ರಮ/‘Gramaloka’ Konkani Literary Program at Badiyadka

ಕಾಸರಗೋಡು ಜು 22: ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ಬದಿಯಡ್ಕ ಸಂಸ್ಕೃತಿ ಭವನದಲ್ಲಿ ಗ್ರಾಮಲೋಕ ಎಂಬ ಕೊಂಕಣಿ ಸಾಹಿತ್ಯ ಕಾರ್ಯಕ್ರಮ ನಡೆಯಿತು
ಕೊಂಕಣಿ ಸಾಹಿತಿ, ಭಾಷಾ ತಜ್ನ ಡಾ. ಕಸ್ತೂರಿ ಮೋಹನ್ ಪೈ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಕೊಂಕಣಿ ವಿಭಾಗದ ಸಂಯೋಜಕರಾದ ಮೆಲ್ವಿನ್ ರೊಡ್ರಿಗಸ್ ಗ್ರಾಮಲೋಕ ಕಾರ್ಯಕ್ರಮದ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಸಭಿಕರಿಗೆ ನೀಡಿದರು. ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಡಿ ಶಂಕರ ಗ್ರಾಮಲೋಕ ಕಾರ್ಯಕ್ರಮಕ್ಕಾಗಿ ಬದಿಯಡ್ಕ ಎಂಬ ಸಣ್ಣ ಗ್ರಾಮವನ್ನು ಆಯ್ಕೆ ಮಾಡಿದಕ್ಕಾಗಿ ಅಕಾಡೆಮಿ ಆಡಳಿತಕ್ಕೆ ಕೃತಜ್ನತೆಗಳನ್ನು ಸಲ್ಲಿಸಿದರು
ಕಾರ್ಯಕ್ರಮದಲ್ಲಿ ಯುವಸಾಹಿತಿಗಳಾದ ವೆಂಕಟೇಶ್ ನಾಯಕ್, ಶ್ವೇತಾ ಪೈ ಮಂಜೇಶ್ವರ, ರೋಶನ್ ಪೆರಿಯಡ್ಕ ಕವಿತೆಗಳನ್ನು ಓದಿದರೆ ಸ್ಟ್ಯಾನಿ ಬೇಳ ಸಣ್ಣ ಕಥೆಯನ್ನು ಪ್ರಸ್ತುತಪಡಿಸಿದರು.

‘Gramaloka’ Konkani Literary Program at Badiyadka

On June 22, a noteworthy Konkani Literary program called “Gramaloka” took place at the Badiyadka Culture Bhavan in Kasaragod. The event was organized by Kendra SahityaAkademi, and it witnessed the esteemed presence of Dr.Kasturi Mohan Pai, an expert in Konkani literature and language, who presided over the gathering.

Melvin Rodrigues, the Coordinator of the Konkani Department at Kendra SahityaAkademi, took the stage to provide the audience with a concise overview of the Gramaloka program’s significance and purpose.

The event proved to be a platform for talented young writers to showcase their literary prowess. VenkateshNayak, ShwetaPaiManjeswara, and Roshan graced the occasion by reading their periodical poems, captivating the attendees with their poetic expressions. Additionally, StaniBela presented a gripping short story, adding variety to the literary offerings of the evening.

During the program, D Shankara, a representative of the Badiyadka Gram Panchayat, expressed gratitude to the administration of Kendra SahityaAkademi for selecting their humble village of Badiyadka as the venue for the prestigious Gramaloka program. The event’s success and recognition meant a lot to the local community, highlighting the significance of regional literature and culture.

ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ, ಕ್ರೀಡಾಸಕ್ತಿ ಬೆಳೆಸಿಕೊಂಡು ಉತ್ತಮ ಸಾಧನೆ ಮಾಡಬೇಕು – ಎಲ್.ವಿ.ಗೋವಿಂದಪ್ಪ

ಶ್ರೀನಿವಾಸಪುರ: ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಕ್ರೀಡಾಸಕ್ತಿ ಬೆಳೆಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಲ್.ವಿ.ಗೋವಿಂದಪ್ಪ ಹೇಳಿದರು.
ತಾಲ್ಲೂಕಿನ ತಾಡಿಗೋಳ್ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ನೆಲವಂಕಿ ಹೋಬಳಿ ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ ವಿಜೇತರಾಗಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪಾರಿತೋಷಕ ವಿತರಿಸಿ ಮಾತನಾಡಿ, ಆಟೋಟಗಳಲ್ಲಿ ಉತ್ತಮ ಪ್ರದರ್ಶನ ಮುಖ್ಯವೇ ಹೊರತು ಸೋಲು ಗೆಲುವಲ್ಲ ಎಂದು ಹೇಳಿದರು.
ಕ್ರೀಡೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಮೂಡಿಸುತ್ತದೆ. ಮೇಲು ಕೀಳು ಭಾವನೆ ಅಳಿಸುತ್ತದೆ. ಸಮಾಜದಲ್ಲಿ ಸ್ನೇಹ, ಸೌಹಾರ್ಧತೆ ವೃದ್ಧಿಸುತ್ತದೆ. ಆದ್ದರಿಂದ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸಬೇಕುಎಂದು ಹೇಳಿದರು.
ತಾಡಿಗೋಳ್ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ವೆಂಕಟರವಣ, ಲಕ್ಷ್ಮೀಪುರ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಶಿಕ್ಷಕ ಶ್ರೀನಿವಾಸ್ ಇದ್ದರು.

ಅರ್ಹ ಮಹಿಳೆಯರು ಯೋಜನೆ ಲಾಭ ಪಡೆದುಕೊಳ್ಳಬೇಕು -ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಅರ್ಹ ಮಹಿಳೆಯರು ಯೋಜನೆ ಲಾಭ ಪಡೆದುಕೊಳ್ಳಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಗೃಹಲಕ್ಷ್ಮಿ ಯೋಜನೆ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂದು ಹೇಳಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಯೋಜನೆ ದುರುಪಯೋಗ ನಡೆಯದಂತೆ ನೋಡಿಕೊಳ್ಳಬೇಕು. ಯೋಜನೆ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು ವಿಶೇಷ ಕಾಳಜಿ ವಹಿಸಬೇಕು ಎಂದು ಹೇಳಿದರು.
ಗ್ರಾಮ 1ರಲ್ಲಿ 750ಕ್ಕೂ ಹೆಚ್ಚು ಸೌಲಭ್ಯಗಳಿವೆ. ಹಾಗಾಗಿ ಯಾವ ಸೌಲಭ್ಯ ಯಾವ ಫಲಾನುಭವಿಗೆ ಸಿಗುತ್ತದೆ ಎನ್ನುವುದರ ಬಗ್ಗೆ ಮಾಹಿತಿ ನೀಡಬೇಕು. ಯಾವುದೇ ಫಲಾನುಭವಿ ಸೌಲಭ್ಯದಿಂದ ವಂಚಿತವಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ತಹಶೀಲ್ದಾರ್ ಶಿರಿನ್ ತಾಜ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ತೂಪಲ್ಲಿ ಆರ್.ನಾರಾಯಣಸ್ವಾಮಿ, ಜಿ.ರಾಜಣ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗೊಟ್ಟುಕುಂಟ ಕೃಷ್ಣಾರೆಡ್ಡಿ, ಮಖಂಡ ಶೇಷಾಪುರ ಗೋಪಾಲ್ ಇದ್ದರು.