ಕಾರು ಹಾಗೂ ಟಿಪ್ಪರ್‌ ಮಧ್ಯೆ ಭೀಕರ ರಸ್ತೆ ಅಪಘಾತ ನಾಲ್ವರು ಸ್ಥಳದಲ್ಲೇ ಸಾವು

ಹಾಸನ : ಜಿಲ್ಲೆಯ ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿಗೆ ಬಳಿ ಕಾರು ಹಾಗೂ ಟಿಪ್ಪರ್‌ ಮಧ್ಯೆ ಭೀಕರ ರಸ್ತೆ ಅಪಘಾತವಾಗಿ
ಸಂಭವಿಸಿ ನಾಲ್ವರು ಸ್ಥಳದಲ್ಲೇ ಸಾವಿಗೀಡಾದ ಭೀಕರ ಘಟನೆ ನೆಡೆದಿದೆ. ಈ ಅಪಘಾತದಲ್ಲಿ ಇನ್ನು ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಮೃತರು ಹಾಸನ ತಾಲೂಕು ಕುಪ್ಪಳಿ ಗ್ರಾಮದ ಚೇತನ್‌, ಗುಡ್ಡೇನಹಳ್ಳಿಯ ಅಶೋಕ್‌, ತಟ್ಟಿಕೆರೆಯ ಪುರುಷೋತ್ತಮ, ಆಲೂರು ತಾಲೂಕಿನ
ಚಿಗಳೂರಿನ ದಿನೇಶ್‌ ಎಂದು ತಿಳಿದುಬಂದಿದೆ. ಟಿಪ್ಪರ್‌ ಹಾಸನದಿಂದ ಸಕಲೇಶಪುರಕ್ಕೆ ತೆರಳುತ್ತಿದ್ದು, ಇನ್ನೊವಾ ಕಾರು ಸಕಲೇಶಪುರದಿಂದ ಹಾಸನಕ್ಕೆ ತೆರೆಳುತಿತ್ತು. ಇವೆರೇಡು ವಾಹನಗಳು ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಮ ಕಾರಿನಲ್ಲಿದ್ದ ನಾಲ್ವರು ಮೃತದಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದೆ.

ಹಾಸನ ಜಿಲ್ಲೆಯ ಆಲೂರು ತಾಲೂಕಿನ ಈಶ್ವರಹಳ್ಳಿ ಆಲೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದ್ದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನ ನಡೆಸಿ ಮೃತದೇಹಗಳನ್ನು ಆಲೂರಿನ ತಾಲ್ಲೂಕು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ ಎಂದು.
ತಿಳಿದು ಬಂದಿದೆ.

ರಾಜ್ಯದ ಹಲವೆಡೆ ಭಾರೀ ಗಾಳಿ ಮಳೆಯಾಗುವ ಸಾಧ್ಯತೆ : ಹವಾಮಾನ ಇಲಾಖೆಯಿಂದ ಮುನ್ಸೂಚನೆ

ಬೆಂಗಳೂರು, ಜು.22: ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಐದು ದಿನಗಳ ಕಾಲ ರಾಜ್ಯದ ಕೆಲವು ಜಿಲ್ಲೆಗಳಲ್ಲಿ. ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

ವಿಶೇಷವಾಗಿ ರಾಜ್ಯದ ಕರಾವಳಿ ಜಿಲ್ಲೆಗಳು ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ, ಮುಂದಿನ ಐದು ದಿನಗಳವರೆಗೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ,ಉಡುಪಿ ಮತ್ತು ಉತ್ತರ ಕನ್ನಡ, ಜಿಲ್ಲೆಗಳಲ್ಲಿ ಬಲವಾದ ಗಾಳಿಯೊಂದಿಗೆ ಭಾರೀ ಮಳೆಯಾಗಲಿದೆಯೆಂದು ತಿಳಿಸಿ, ಈ ಮೂರು ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ. ಜುಲೈ 26 ರವರೆಗೆ ಮತ್ತು ಜುಲೈ 23 ರಂದು ಕಿತ್ತಳೆ (Orange) ಅಲರ್ಟ್ ಘೋಷಿಸಲಾಗಿದೆ. ಗಂಟೆಗೆ 40 ರಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ

    ಬೆಳಗಾವಿಯ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.ಧಾರವಾಡ, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಬೀದರ್. ಉಳಿದಂತೆ ಬಾಗಲಕೋಟೆ, ಗದಗ, ಹಾವೇರಿ, ಕೊಪ್ಪಳ, ವಿಯಾಪುರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು ಗಂಟೆಗೆ 30-40 ಕಿಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆಯಿದ್ದು.ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

ಮುಂದಿನ ಐದು ದಿನಗಳ ಕಾಲ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳು. ಮತ್ತು ಹಳದಿ ಎಚ್ಚರಿಕೆ ನೀಡಲಾಗಿದೆ. ಜುಲೈ 23 ರಂದು ಕೊಡಗು ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.

ಶ್ರೀನಿವಾಸಪುರ ತಾಲ್ಲೂಕು ಕಛೇರಿಯ ಅವ್ಯವಸ್ಥೆ ಕಂಡು ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿ ಅಕ್ರಮ್ ಪಾಷ ಅಸಮದಾನ

ಶ್ರೀನಿವಾಸಪುರ : ತಾಲ್ಲೂಕಿನ ತಾಲ್ಲೂಕು ಕಛೇರಿಯ ಅವ್ಯವಸ್ಥೆ ಕಂಡ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿ ಅಕ್ರಮ್ ಪಾಷ ತಮ್ಮ ಅಸಮದಾನ ವ್ಯಕ್ತಪಡಿಸಿದ್ದಾರೆ.

ಕೋಲಾರ ಜಿಲ್ಲೆಗೆ ನೂತನವಾಗಿ ಆಗಮಿಸಿರುವ ಜಿಲ್ಲಾಧಿಕಾರಿಗಳಾದ ಅಕ್ರಮ್ ಪಾಷ ರವರು ಕಳೆದ ಕೆಲ ದಿನಗಳಿಂದ ಜಿಲ್ಲೆಗೆ ಒಳಪಡುವ ತಾಲ್ಲೂಕುವಾರು ಕೇಂದ್ರಗಳಿಂದ ದಿಢೀರ್ ಭೇಟಿ ನೀಡುವ ಮೂಲಕ ಪರಿಶೀಲನೆ ನಡೆಸುತ್ತಿದ್ದಾರೆ.

ಇದೆ ನಿಟ್ಟಿನಲ್ಲಿ ಶುಕ್ರವಾರ ಬೆಳಗ್ಗೆ ಶ್ರೀನಿವಾಸಪುರ ತಾಲ್ಲೂಕು ಕಛೇರಿಗೆ ಡಿ ಸಿ ಅಕ್ರಮ್ ಪಾಷ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಶೀಲನೆ ವೇಳೆ ತಾಲ್ಲೂಕು ಕಛೇರಿಯ ಅವ್ಯವಸ್ಥೆ ಕಂಡು ಅಸಮದಾನ ವ್ಯಕ್ತಪಡಿಸಿದರು.

ತಾಲ್ಲೂಕು ಕಛೇರಿಯ ಒಳಾoಗಣ ಹಾಗೂ ಹೋರಾoಗಣ ಸುಮಾರು ವರ್ಷಗಳಿಂದ ಅವ್ಯವಸ್ಥೆಯ ಗೂಡಿಗೆ ನಿದರ್ಶನವಾಗಿದೆ. ಯಾರೇ ದಂಡಾಧಿಕಾರಿಗಳು ಇಲ್ಲಿಗೆ ಬಂದ್ರು ರಾಜಕೀಯ ಪುಡಾರಿಗಳ ದೌರ್ಜನ್ಯಕ್ಕೆ ಅಥವಾ ಇಲ್ಲಿನ ಸಂಪನ್ಮೂಲಗಳ ದುರಾಸೆಗೆ ಇಚ್ಛಿಸಿ ತಾಲ್ಲೂಕಿನ ಅಭಿವೃದ್ಧಿಯ ಕಿನ್ನತೆಗೆ ಕಾರಣವಾಗುತ್ತಿದ್ದಾರೆ. ಅದೇ ರೀತಿ ಸದ್ಯ ಈಗಿರುವ ಅಧಿಕಾರಿಯಿಂದಲೂ ಅಭಿವೃದ್ಧಿಗೆ ದೂರ ಉಳಿದಂತೆ ಮೇಲ್ನೋಟಕ್ಕೆ ಕಾಣುತ್ತಿದೆ ತಾಲ್ಲೂಕು ಕಛೇರಿಯ ಅವ್ಯವಸ್ಥೆ.

ಇದೆ ವೇಳೆ ನೂತನ ಜಿಲ್ಲಾಧಿಕಾರಿಗಳ ದಿಢೀರ್ ಭೇಟಿಯಿಂದ ಅಧಿಕಾರಿಗಳು ಕಂಗಲಾದರಾದರೂ ವ್ಯವಸ್ಥಿತವಾದ ವಾತಾವರಣ ಇದೆಯೆಂಬ ಭ್ರಮೆ ಮೂಡಿಸಲು ಯತ್ನಿಸಿ ವಿಫಲರಾದರು.
ತಾಲ್ಲೂಕು ಕಛೇರಿಯ ಎಲ್ಲಾ ವಿಭಾಗಗಳನ್ನು ಪರಿಶೀಲಿಸುತ್ತಿರುವ ವೇಳೆ ಸಾರ್ವಜನಿಕರು ಇಲ್ಲಿನ ಅವ್ಯವಸ್ಥೆಯ ಬಗ್ಗೆ ಹಾಗೂ ಅಧಿಕಾರಿಗಳ ನಿರ್ಲಕ್ಷದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದರು. ಎಲ್ಲವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ಚು ನೀಡುವ ಭರವಸೆ ನೀಡಿದರು.

56 ಇಂಚು ಸುತ್ತಳತೆಯ ಮೋದಿಯ ಎದೆಗೆ ಮಣಿಪುರದ ಘಾಸಿ ಚುಚ್ಚಲು 79 ದಿನ ಬೇಕಾಯಿತೇ..?-ಅನಿತಾ ಡಿಸೋಜಾ

ಕಾರ್ಕಳ : ಮಣಿಪುರದಲ್ಲಿ ಕುಕಿ-ಬೋ ಸಮುದಾಯದ ಮಹಿಳೆಯರಿಬ್ಬರನ್ನು ನಗ್ನಗೊಳಿಸಿ ಮೆರವಣಿಗೆ ನಡೆಸಿ ಅತ್ಯಾಚಾರ ಮಾಡಿರುವ ಕುಕೃತ್ಯಕ್ಕೆ ಸುಪ್ರೀಂಕೋರ್ಟ್ ಹಾಕಿರುವ ಛೀಮಾರಿ ಕೇಂದ್ರದ ನಿಷ್ಕ್ರಿಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಇಂತಹ ಕೃತ್ಯಗಳು ನಡೆಯಲು ಅಲ್ಲಿನ ರಾಜ್ಯ ಸರಕಾರದ ಪಾಲೆಷ್ಟಿದೆಯೋ, ಕೇಂದ್ರದ ಪಾಲು ಅಷ್ಟೇ ಇದೆ’ ಎಂದು ಕಾರ್ಕಳ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗುಜರಾತಿನ ವಡೋದರದ ಬೀದಿಯಲ್ಲಿ ಅಲ್ಪಸಂಖ್ಯಾತ ಗರ್ಭಿಣಿ ಮಹಿಳೆಯ ಹೊಟ್ಟೆಗೆ ತಿವಿದು, ಮಗುವನ್ನು ಹೊರ ತೆಗೆದು ಅದನ್ನು ತ್ರಿಶೂಲದಿಂದ ಚುಚ್ಚಿ ಮಗುವನ್ನು ಮೆರವಣಿಗೆ ಮಾಡಿದಾಗ ಇದೆ 56 ಇಂಚಿನ ಎದೆ ಮೌನವಹಿಸಿತ್ತು. ಈಗ ಮಣಿಪುರದ ಬೀದಿಯಲ್ಲಿ ಮಹಿಳೆಯರ ನಗ್ನ ಮೆರವಣಿಗೆ ನಡೆಸಿ ಸಾಮೂಹಿಕ ಅತ್ಯಾಚಾರ ಎಸೆಯುವಾಗಲೂ 56 ಇಂಚಿನ ಎದೆ ಮತ್ತದೇ ಮೌನ. ಬಿಚ್ಚಿ ಮಾತನಾಡಿ ಕಣ್ಣೀರು ಸುರಿಸಲು 79 ದಿನ ಬೇಕಾಗಲು ಈ ಕೃತ್ಯವ‌ನ್ನು ಕಂಡು ಜಗತ್ತೇ ಕ್ಯಾಕರಿಸಿ ಉಗಿಯಲು ಪ್ರಾರಂಭಿಸಿಬೇಕಾಯಿತು.

ಈ ಘಟನೆ ವಿಶ್ವದ ಮುಂದೆ ನಾವು ತಲೆತಗ್ಗಿಸುವಂತೆ ಮಾಡಿದೆ. ಇಂತಹ ಅಮಾನವೀಯ ಕೃತ್ಯಕ್ಕೆ ನಮ್ಮ ದೇಶ ಸಾಕ್ಷಿಯಾಗಿದ್ದು ಈ ನೆಲದ ದುರಂತ. ಬಿಜೆಪಿಯಲ್ಲಿರುವ ಮನಸುಗಳು ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿದರ ಫಲವಿದು’ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಲ್ಲಿನ ಪೊಲೀಸ್ ಅಧಿಕಾರಿಗಳೇ ಹೇಳುವ ಪ್ರಕಾರ ಈ ಘಟನೆ ನಡೆದಿರುವುದು ಮೇ ಮೊದಲ ವಾರದಲ್ಲಿ. ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿ FIR ಆಗಿದೆಯಂತೆ, ಘಟನೆ ನಡೆದು ಎರಡು ತಿಂಗಳಾದರೂ ಅಪರಾಧಿಗಳ ಬಂಧನವಾಗಿಲ್ಲ. ಇದೀಗ ವಿಡಿಯೋ ವೈರಲ್ ಆಗಿರುವುದರಿಂದ ಮುಜುಗರ ತಪ್ಪಿಸಲು, ಕುಣಿಕೆ ಎಲ್ಲಿ ತಮ್ಮ ಕೊರಳ ಸುತ್ತ ಬೀಳುತ್ತೆ ಎನ್ನುವ ಭಯದಿಂದ ತನಿಖೆಯ ಬಗ್ಗೆ ಮಾತನಾಡುತ್ತಿದ್ದಾರೆ.

ಮೋದಿ ಮಣಿಪುರದ ಗಲಭೆಗಳ ಬಗ್ಗೆ ಮಾತನಾಡಬೇಕಾದರೆ ಒಂದು ಹೇಯ ಕೃತ್ಯದ ವಿಡಿಯೋ ಹೊರಬರಬೇಕಾಯಿತು. ಕಳೆದ ಮೂರು ತಿಂಗಳ ಗಲಭೆಗಳಲ್ಲಿ ನೂರಕ್ಕಿಂತ ಹೆಚ್ಚು ಜನ ಮೃತಪಟ್ಟಿದ್ದಾರೆ, ಅದೆಷ್ಟೋ ಮಂದಿ ಗಾಯಗೊಂಡಿದ್ದಾರೆ, ಇನ್ನೆಷ್ಟೋ ಜನರು ನಾಪತ್ತೆಯಾಗಿದ್ದಾರೆ.

ಸುಮಾರು 60000- 70000 ಮಂದಿ ನಿರಾಶ್ರಿತರ ಕ್ಯಾಂಪ್‍ಗಳಲ್ಲಿದ್ದಾರೆ. ಯಾಕೆಂದರೆ ಅವರ ಮನೆ, ಹಳ್ಳಿಗಳೇ ಬೆಂಕಿಗಾಹುತಿಯಾಗಿ ನಾಶವಾಗಿವೆ. ಒಂದೆರಡಲ್ಲ 300ಕ್ಕಿಂತಲೂ ಹೆಚ್ಚು ಚರ್ಚುಗಳ ಮೇಲೆ ದಾಳಿ ನಡೆದಿದೆ.
ಇಷ್ಟೆಲ್ಲಾ ಆದರೂ ಮೋದಿಯವರಿಗೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ಮಾತಾನಾಡಬೇಕು, ಅಲ್ಲಿನ ಜನರಿಗೆ ಧೈರ್ಯ ತುಂಬಬೇಕು’ ಎಂದು ಅನಿಸಲೇ ಇಲ್ಲ. ಒಂದು ಟ್ವೀಟ್ ಕೂಡಾ ಹೊರಬರಲಿಲ್ಲ.

ಇದೀಗ ಈ ವಿಡಿಯೋ ಹೊರಬರುತ್ತಲೇ, ಇನ್ನೇನು ಈ ವಿಡಿಯೋ ಅಂತಾರಾಷ್ಟ್ರೀಯ ಮಾಧ್ಯಮಗಳ ಮೂಲಕ ಹೊರ ಜಗತ್ತಿಗೆ ಬಂದು ಪ್ರಪಂಚದೆದುರು ಮಾನ ಹರಾಜಾಗುತ್ತದೆ ಎನ್ನುವಾಗ ನಾವು ಅಪರಾಧಿಗಳನ್ನು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಆಡಳಿತ ವ್ಯವಸ್ಥೆ ಕೈಯಲ್ಲಿದ್ದು ಪೊಲೀಸ್, ಸೇನೆಯ ಸಹಾಯವಿದ್ದು ಒಂದು ಗಲಭೆಯನ್ನು ಒಂದೆರಡು ದಿನಗಳಲ್ಲಿ ನಿಯಂತ್ರಿಸಲಾಗದ ಮೋದಿ ಅಸಮರ್ಥರಾಗಿದ್ದಾರೆ.

ಪ್ರಧಾನಿ ಮೋದಿ ಮತ್ತು ಮಣಿಪುರ ಮುಖ್ಯಮಂತ್ರಿ ತಮ್ಮ ಅಸಮರ್ಥತೆ ಮನಗಂಡು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮತ್ತು ದೇಶದಲ್ಲಿ ಜಾತಿ, ಧರ್ಮ, ಲಿಂಗ ತಾರತಮ್ಯದಲ್ಲಿನ ವ್ಯಾಭಿಚಾರ ಭೀಕರತೆ ಶಮನ ಮಾಡಲು ಸಹಕಾರ ನೀಡಬೇಕೆಂದು ಅನಿತಾ ಡಿಸೋಜ ಕರೆ ನೀಡಿದ್ದಾರೆ.

ಟಮೋಟೋಗೆ ಬೆಲೆ ಇದೆಯಾದರೂ ಅದಕ್ಕೆ ತಕ್ಕಂತೆ ಫಸಲು ಇಲ್ಲ: ರೈತರ ನಷ್ಟದ ಟಮೋಟೋ ತೋಟಕ್ಕೆ ವಿಜ್ಞಾನಿಗಳ ತಂಡ ಬೇಟಿ ನೀಡಿ ಪರಿಶೀಲನೆ

ಶ್ರೀನಿವಾಸಪುರ 1 : ಟಮೋಟೋಗೆ ಬೆಲೆ ಇದೆ, ಆದರೆ ಅದಕ್ಕೆ ತಕ್ಕಂತೆ ಫಸಲು ಇಲ್ಲದೆ ರೈತ ನಷ್ಟವನ್ನು ಅನುಭವಿಸುತ್ತಿದ್ದು, ತಾಲೂಕಿನ ಸುಮಾರು 700 ಹೆಕ್ಟೇರ್ ನಷ್ಟು ಟಮೋಟೋ ಬೆಳೆದಿದ್ದಾರೆ. ರಾಯಲ್ಪಾಡು ಬಳಿಯ ಯಂಡಗುಟ್ಟಪಲ್ಲಿಯ ಸುಬ್ಬರಾಮು ತೋಟಕ್ಕೆ , ತಾಡಿಗೋಳ್‍ನ ತಿಪ್ಪನ್ನ ತೋಟಕ್ಕೆ ವಿಜ್ಞಾನಿಗಳ ತಂಡ ಬೇಟಿ ನೀಡಿ ಪರಿಶೀಲಿಸಿದರು.
ಬಹುತೇಕ ಟಮೋಟೋ ಬೆಳೆಯು ನುಸಿ ರೋಗ ಪೀಡಿತವಾಗಿದ್ದು, ರೋಗ ನಿರ್ಮೂಲನೆಗಾಗಿ ರೈತರು ಅನುಭವಿ ರೈತರ ಹಾಗೂ ಔಷಧಿ ಅಂಗಡಿಗಳ ಸಲಹೆ ಪಡೆದು ಔಷಧಿಗಳಿಗಾಗಿ ಸಾವಿರಾರು ರೂಗಳನ್ನು ವ್ಯಯ ಮಾಡಿ ಸಹ ಗಿಡಗಳಿಗೆ ರೋಗವು ನಿರ್ಮೂಲನೆಯಾಗದೆ ರೈತರು ತಮ್ಮ ಜೇಬು ಖಾಲಿ ಮಾಡಿಕೊಳ್ಳುವುದರ ಮಾಸಿಕವಾಗಿ ಚಿಂತನೆಗೆ ಒಳಪಟ್ಟಿದ್ದಾರೆ.
ಕೃಷಿ ಕಲ್ಯಾಣ ಇಲಾಖೆ ನವದೆಹಲಿಯ ಸದಸ್ಯ ಕಾರ್ಯದರ್ಶಿ ಡಾ|| ಡಿ.ಜೆ.ಬ್ರಹ್ಮ ಮಾತನಾಡಿ ಈ ಭಾಗದ ಬಹುತೇಕ ರೈತರು ಟಮೋಟೋ ಬೆಳೆಗಳನ್ನು ಹಾಕಿದ್ದು, ಈ ಭಾಗದಲ್ಲಿ ಬಿಸಿಲಿನ ತಾಪಮಾನವು ಜಾಸ್ತಿಯಾಗಿದ್ದು, ಸರಿಯಾದ ಸಮಯಕ್ಕೆ ಮಳೆಯಾಗದೆ, ವಾತವರಣದಿಂದ ಏರುಪೇರಿನಿಂದಾಗಿ ಈ ರೀತಿಯಾದ ಘಟನೆ ನಡೆದಿದೆ. ಅಲ್ಲದೆ ಸೀಡ್ಸ್ ಮಾರುವವರು ಹಣದ ಅಮೀಷಕ್ಕಾಗಿ ಸೀಡ್ಸ್ ಕಂಪನಿಯಿಂದಲೂ ಇದಕ್ಕೊಂದು ಕಾರಣ, ಅಲ್ಲದೆ ನರ್ಸರಿ ಮಾಲೀಕರು ಬೀಜೋಪಚಾರ ಮಾಡಿ ಗಿಡಬೆಳಸುವಾಗ ವ್ಯಸ್ಥಿತವಾಗಿ ಮಾಡದೇ ಇರುವುದು ಇದಕ್ಕೊಂದು ಕಾರಣ . ಟಮೋಟೋ ಗಿಡಗಳಲ್ಲಿ ಬಿಳೆನೊಣ ಕಾಟವು ನುಶಿ ರೋಗಕ್ಕೆ ಒಂದು ರೀತಿಯಾದ ಕಾರಣವಾಗಿದೆ.
ಆಯ್ದ ತೋಟಗಳಿಗೆ ಬೇಟಿ ನೀಡಲಾಗಿ ತೋಟಗಳ ಬೆಳೆಗಳನ್ನು ಹಾಗು ಫಸಲನ್ನು ಪರೀಶಿಲಿಸಲಾಗಿದ್ದು, ರೋಗಕ್ಕೆ ಕಾರಣವನ್ನು ಸಂಶೋಧನೆ ನಡೆಸಿ ಅತಿಶೀಘ್ರವಾಗಿ ಪರಿಹಾರ ನೀಡುವುದಾಗಿ ತಿಳಿಸಿದರು.
ಕೃಷಿ ಕಲ್ಯಾಣ ಇಲಾಖೆ ತಂಡವು ನೆರೆಯ ಆಂದ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಕೆಲ ತೋಟಗಳಿಗೆ ಬೇಟಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕೃಷಿ ಕಲ್ಯಾಣ ಇಲಾಖೆ ಸದಸ್ಯ ಡಾ||ಕೌಲ್, ಬೆಂಗಳೂರಿನ ತರಕಾರಿ ವಿಭಾಗದ ಜಂಟಿ ನಿರ್ದೇಶಕ ಡಾ||ಧನ್‍ರಾಜ್, ಬೆಂಗಳೂರಿನ ವಿಭಾಗದ ತೋಟಕಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ|| ವಿಶ್ವನಾಥ್, ಕುಮಾರಸ್ವಾಮಿ ಉಪನಿರ್ದೇಶಕ ತೋಟಗಾರಿಕೆ ಇಲಾಖೆ . ಕೋಲಾರ, ಉಪನಿರ್ದೇಶಕ ತೋಟಕಾರಿಕೆ ಇಲಾಖೆ ಚಿಕ್ಕಬಳ್ಳಾಪುರ ಗಾಯತ್ರಿ, ತೋಟಗಾರಿಕೆ ಸಂಸೋಧನ ಕೇಂದ್ರ ಹೆಸರುಘಟ್ಟ ವಿಜ್ಞಾನಿ ಡಾ|| ಪ್ರಸನ್ನ, ಬಾಗಲಕೋಟೆ ವಿಶ್ವವಿದ್ಯಾನಿಲಯದ ತೋಟಗಾರಿಕೆ ಸಹಸಂಶೋಧನಾ ನಿರ್ದೇಶಕ ಡಾ|| ಎಸ್.ಎಲ್.ಜಗದೀಶ್, ಕೋಲಾರ ಕೃಷಿ ಕೇಂದ್ರ ಮುಖ್ಯಸ್ಥ ಶಿವಾನಂದ ಹೊಂಗಲ, ಬೆಂಗಳೂರಿನ ತೋಟಗಾರಿಕೆ ಮಹಾವಿದ್ಯಾಲಯದ ಸಹ ಪ್ರಾದ್ಯಾಪಕರಾದ ಆಂಜನೇಯರೆಡ್ಡಿ, ಜಗದೀಶ್ ಕೆವಿಕೆ ಕೃಷಿ ಕೇಂದ್ರದ ವಿಜ್ಞಾನಿ ಸದಾನಂದ ಮುಶ್ರಿಫ್, ಶ್ರೀನಿವಾಸಪುರ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸನ್ , ಶ್ರೀನಿವಾಸಪುರ ತೋಟಗಾರಿಕೆ ಇಲಾಖೆಯ ನಿರ್ದೇಶಕ ಬೈರೆಡ್ಡಿ, ಸಿಬ್ಬಂದಿ ಹರೀಶ್,ರಾಜೇಶ್ ಹಾಗೂ ಕೋಲಾರ ಮತ್ತು ಚಿಂತಾಮಣಿಯ ಕೃಷಿ ಸಂಶೋದನ ಕೇಂದ್ರದ ವಿಜ್ಞಾನಿಗಳು ಇದ್ದರು
20 : ತಾಡಿಗೋಳ್ ಗ್ರಾಮದ ರೈತ ತಿಪ್ಪನ್ನ ತೋಟವನ್ನು ಕೃಷಿ ಕಲ್ಯಾಣ ಇಲಾಖೆ ನವದೆಹಲಿಯ ಸದಸ್ಯ ಕಾರ್ಯದರ್ಶಿ ಡಾ|| ಡಿ.ಜೆ.ಬ್ರಹ್ಮ ಪರೀಶಿಲಿಸುತ್ತಿರುವುದು, ಹಾಗೂ ಟಮೋಟೋಗಳನ್ನು ಪರಿಶೀಲಿಸುತ್ತಿರುವುದು