ನಲಗುಂದ ನವಿಲಗುಂದ 43ನೇ ವರ್ಷದ ರೈತ ಹುತಾತ್ಮ ದಿನಾಚರಣೆ

ವಡ್ಡಹಳ್ಳಿ, ಜು.21: ನಲಗುಂದ ನವಿಲಗುಂದ 43ನೇ ವರ್ಷದ ಹುತಾತ್ಮ ದಿನಾಚರಣೆಯನ್ನು ಪ್ರಗತಿಪರ ರೈತ ದರ್ಮರವರ ತೋಟದಲ್ಲಿ ಗೋ ಪೂಜೆ ಮಾಡುವ ಮುಕಾಂತರ ಹುತಾತ್ಮ ರೈತರಿಗೆ ಗೌರವ ಸಲ್ಲಿಸಿ ಪ್ರಗತಿ ಪರ ಹಿರಿಯ ರೈತರಿಗೆ ಗಿಡ ನೀಡುವ ಮುಖಾಂತರ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಕೃಷಿ ಎಂಬ ಪೇಪರ್‍ನಲ್ಲಿ ಇಂಕು ಎಂಬ ಬಿತ್ತನೆ ಬೀಜ ರಸಗೊಬ್ಬರ ಚಲ್ಲಿ ಬಿಸಲು ಗಾಳಿ ಮಳೆಗೆ ಮೈಯನ್ನು ಬಗ್ಗಿಸಿ ದುಡಿಯುವ ರೈತನ ಬೆವರ ಹನಿಗೆ ತಕ್ಕ ಬೆಲೆ ಇಲ್ಲದಂತಾಗಿದೆ. ತಿಂಗಳ ಸಂಬಳ ಬರದೆ ಇದ್ದರೆ, ಆಕಾಶವೇ ಕಳಚಿ ಬೀಳುವಂತೆ ಒದ್ದಾಡುವ ಅಧಿಕಾರಿಗಳಿಗೆ 365 ದಿನ ಕಾಯುವ ರೈತನ ಪರಿಸ್ತಿತಿ ಊಹೆ ಮಾಡಿಕೊಂಡರೆ ರೈತ ಕೃಷಿ ಕ್ಷೇತ್ರವನ್ನು ಕೈ ಬಿಟ್ಟರೆ ದೇಶದ ಭವಿಷ್ಯದ ಬಗ್ಗೆ ಒಂದು ಸಾರಿ ಯೋಚನೆ ಮಾಡಬೇಕಾದ ಪ್ರಜ್ಞಾವಂತ ಪ್ರಜೆಗಳು ರೈತರನ್ನು ಗೌರವಿಸದಂತಾಗಬೇಕೆಂದು ಕಾರ್ಯಕ್ರಮದಲ್ಲಿ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಸರ್ಕಾರಗಳಿಗೆ ಸಲಹೆ ನೀಡಿದರು.
ಸರ್ಕಾರ ರೈತ ವಿರೋದಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಜಿಲ್ಲೆಯನ್ನು ಬರಗಾಲ ಎಂದು ಘೋಷಣೆ ಮಾಡಿ 100 ಕೋಟಿ ಅನುದಾನ ಬಿಡುಗಡೆ ಮಾಡುವ ಜೊತೆಗೆ ಅತಿವೃಷ್ಠಿಯಿಂದ ಹಾನಿಗೊಳಗಾಗಿರುವ ಬೆಳೆಗಳಿಗೆ ಪರಿಹಾರ ಒದಗಿಸುವ ಜೊತೆಗೆ ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಮಾಡುವ ಜೊತೆಗೆ ಬಲವಂತ ಸಾಲ ವಸೂಲಿ ಮಾಡದಂತೆ ಬ್ಯಾಂಕ್‍ಗಳಿಗೆ ಸೂಚಿಸುವ ಜೊತೆಗೆ ರೈತರ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕೆಂದು ಕಾರ್ಯಕ್ರಮದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಶೇಕಡ 70 ರಷ್ಟು ಉದ್ಯೋಗ ಸೃಷ್ಟಿ ಮಾಡಿ ಕೃಷಿ ಕ್ಷೇತ್ರವನ್ನು ಖಾಸಗಿಕರಣ ಮಾಡಲು ಮುಂದಾದರೆ ದೇಶದಲ್ಲಿ ಆಹಾರ ಅಭದ್ರತೆ ಸೃಷ್ಟಿಯಾಗಿ ತುತ್ತು ಅನ್ನಕ್ಕಾಗಿ ಮೂರನೇ ಮಹಾಯುದ್ದ ರೈತರಿಂದಲೇ ಪ್ರಾರಂಭವಾಗುವ ಕಾಲ ದೂರವಿಲ್ಲವೆಂದು ಕೃಷಿ ಕ್ಷೇತ್ರವನ್ನು ನಿರ್ಲಕ್ಷೆ ಮಾಡುವ ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.
ತಾಲ್ಲುಕಾದ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ ಕೃಷಿ ಕ್ಷೆತ್ರ ರೈತರ ಪಾಲಿಗೆ ಮುಳ್ಳಾಗಿದೆ. ರೈತರಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ರೈತರ ಮಾರುಕಟ್ಟೆ ವ್ಯವಸ್ಥೆಗೆ ಕಾನೂನುಗಳನ್ನು ಅಳವಡಿಸಿ ರಕ್ತ ಹೀರುತ್ತಿದೆ. ಕಳಪೆ ಬೀಜಗಳು ದುಬಾರಿ ಗೊಬ್ಬರಿದಿಂದ ರೈತ ತೊಂದರೆ ಅನುಮಭವಿಸುತ್ತಿದ್ದಾನೆ. ಜೊತೆಗೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಟೆಮೆಟೋ ಕ್ಯಾಪ್ಸಿಕಂ ವಾಣಿಜ್ಯ ಬೆಳೆಗಳಿಗೆ ಅತಿವೃಷ್ಟಿ ಅನಾವೃಷ್ಟಿ ಜೊತೆಗೆ ಭೀಕರ ರೋಗಗಳಿಂದ ರೈತರು ಹೈರಾಣಾಗಿದ್ದಾರೆ. ಮತ್ತೊಂದಡೆ ಯುವಕರು ಕೃಷಿಯಲ್ಲಿ ತೊಡಗಿಸಿಕೊಳ್ಳದೆ ವ್ಯವಸಾಯವೇ ಬೇಡ ಎಂಬ ನಿರ್ಧಾರಕ್ಕೆ ಬಂದು ನಿಂತಿದ್ದಾರೆ. ಸರ್ಕಾರ ಕೂಡಲೇ ಸರ್ಕಾರಿ ಕೃಷಿ ಕ್ಷೇತ್ರದ ಕಡೆ ಗಮನ ಹರಿಸಬೇಕೆಂದು ಮನವಿ ಮಾಡಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ ಮಾತನಾಡಿ ನರಗುಂದ ನವಿಲಗುಂದ ಬಂಡಾಯ ರೈತರನ್ನು ಅಂದಿನ ಗುಂಡೂರಾವ್ ಸರ್ಕಾರ 149 ರೈತರನ್ನು ಗುಂಡಿಕ್ಕಿ ಕೊಲೆ ಮಾಡಿದರೆ ಇಂದು ಸರ್ಕಾರಗಳು ಗುಂಡು ಹಾರಿಸದೆ 10 ಲಕ್ಷ ರೈತರನ್ನು ಕೊಲ್ಲಲಾಗಿದೆ. ಕರ್ನಾಟಕದಲ್ಲಿ 40 ಸಾವಿರಕ್ಕೂ ಹೆಚ್ಚು ಅಧಿಕ ರೈತರು ತಮ್ಮ ಪ್ರಾಣ ತ್ಯಾಗವನ್ನು ಮಾಡಿದ್ದಾರೆ. ಇಷ್ಟೆಲ್ಲಾ ಅವ್ಯವಸ್ಥೆಗಳ ನಡೆಯುವು ಕೃಷಿ ಕ್ಷೇತ್ರವನ್ನು ನಂಬಿರುವ ರೈತರ ರಕ್ಷಣೆಗೆ ನಿಲ್ಲದೆ ಕಾರ್ಪರೇಟ್ ಕಂಪನಿಗಳ ಬೂಟು ನಕ್ಕುವ ಗುಲಾಮ ಸರ್ಕಾರಗಳಾಗಿವೆ ಎಂದು ಆರೋಪ ಮಾಡಿದರು.
ಜಿಲ್ಲಾದ್ಯಂತ ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ರಸಗೊಬ್ಬರ ಕೀಟ ನಾಶಕ ನಿಯಂತ್ರಣಕ್ಕೆ ಪ್ರಬಲ ಕಾನೂನು ಜಾರಿ ಮಾಡುವ ಜೊತೆಗೆ ಬಿಂಗಿ ರೋಗದಿಂದ ನಷ್ಟವಾಗಿರುವ ಪ್ರತಿ ಎಕರೆ ಟೊಮೋಟೊಗೆ 5 ಲಕ್ಷ ಪರಿಹಾರ ಘೋಷಣೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ರವಿರವರು ಮಾತನಾಡಿ ದೇಶ ಕಾಯುವ ಸೈನಿಕ ಅನ್ನ ನೀಡುವ ರೈತ ಎರಡು ಕಣ್ಣುಗಳಿದ್ದಂತೆ ಇವರನ್ನು ಉಳಿಸಿಕೊಳ್ಳುವ ಜವಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್‍ಪಾಷ, ಜಿಲ್ಲಾ ಕಾರ್ಯಾದ್ಯಕ್ಷ ಹೆಬ್ಬಣಿ ಆನಂದ್‍ರೆಡ್ಡಿ, ಬಂಗಾರಿ ಮಂಜು, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ಸುನಿಲ್‍ಕುಮಾರ್, ರಾಜೇಶ್, ಭಾಸ್ಕರ್, ವಿಜಯ್‍ಪಾಲ್, ಗುರುಮೂರ್ತಿ, ದೇವರಾಜ್, ಶ್ರೀನಿವಾಸ್, ಜುಬೇರ್‍ಪಾಷ, ರಾಜಾಹುಲಿ, ನವೀನ್, ಕೇಶವ, ಮಂಗಸಂದ್ರ ತಿಮ್ಮಣ್ಣ, ವಿಶ್ವನಾಥ್,ರಾಮಮೂರ್ತಿ, ರಾಮಸಾಗರ ವೇಣು, ಸುರೇಶ್ ಬಾಬು, ಮಾಲೂರು ತಾ.ಅ ಯಲ್ಲಪ್ಪ,ಹರೀಶ್, ಆಂಜಿನಪ್ಪ ಮುಂತಾದವರು ಇದ್ದರು.

ನಾಗರಿಕ ಪ್ರಜಾಪ್ರಭುತ್ವದ ದೇಶದಲ್ಲಿ ಅನಾಗರಿಕ ರೀತಿಯಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮರವಣಿಗೆ ಮಾಡಿದಕ್ಕೆ ಮಣಿಪುರದಲ್ಲಿ ಬೃಹತ್ ಪ್ರತಿಭಟನೆ

ಇಂಫಾಲ: ಮಣಿಪುರ ರಾಜ್ಯದ ಕಾ೦ಗ್‌ಪೋಷಿ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆ ಗೊಳಿಸಿ ಅನಾಗರಿಕ ರೀತಿಯಲ್ಲಿ ಮರವಣಿಗೆ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಸಾವಿರಾರು ಆದಿವಾಸಿ ಮಹಿಳೆಯರು ಮತ್ತು ಪುರುಷರು ಭಾರಿ ಮಳೆಯ ನಡುವೆಯೂ ಪ್ರತಿಭಟನೆ ನಡೆಸಿದ ಸುದ್ದಿ ಪ್ರಸಾರ ಆಗಿದೆ.

      ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ಆಯೋಜಿಸಿದ್ದ ಬೃಹತ್‌ ರೇಲಿಯಲ್ಲಿ ಸಾವಿರಾರು ಪುರುಷರು ಮತ್ತು ಮಹಿಳೆಯರು ಹೆಚ್ಚಾಗಿ ಯುವಕರು ಭಾಗವಹಿಸಿ ಬ್ಯಾನರ್‌ ಮತ್ತು ಫಲಕಗಳನ್ನು ಹಿಡಿದು, ಕಪ್ಪು ಉಡುಪು ಧರಿಸಿ ಪ್ರತಿಭಟಿಸಿದರು. ಪ್ರತ್ಯೇಕ ಆಡಳಿತಕ್ಕಾಗಿ ಘೋಷಣೆಗಳನ್ನು ಕೂಗುತ್ತಾ ರೇಲಿಯು ಲಮ್ಮಾ ಸಾರ್ವಜನಿಕ ಮೈದಾನದಿಂದ ಮೆರವಣಿಗೆ ಪ್ರಾರಂಭವಾಯಿತು.

ಭಾರೀ ಮಳೆಯ ನಡುವೆಯೂ ಪ್ರತಿಭಟನಾಕಾರರು ಶಾಂತಿ ಮೈದಾನದತ್ತ ಸಾಗಿದರು. ಅಲ್ಲದೆ ಮಣಿಪುರ ಮುಖ್ಯಮಂತ್ರಿ ಎನ್‌. ಬಿರೇನ್‌ ಸಿಂಗ್‌ ರಾಜೀನಾಮೆಗೆ ಒತ್ತಾಯಿಸಿ, ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.

    ಭವಿಷ್ಯದಲ್ಲಿ ಇಂತಹ ದುಷ್ಕೃತ್ಯಗಳನ್ನು ತಡೆಯಲು ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಐಚಿಎಲ್‌ಎಫ್‌ ಮುಖಂಡರು ಒತ್ತಾಯಿಸಿದರು. ಸ್ಥಳೀಯ ಕಲಾವಿದರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದರು. ನಂತರ ಐಟಿಎಲ್‌ಎಫ್‌ ನಾಯಕರ ಚುರಚ೦ದಪುರ ಜಿಲ್ಲೆಯ ಡೆಪ್ಯೂಟಿ ಕಮಿಷನರ್‌ ಮೂಲಕ ಗೃಹ ಸಚಿವ ಅಮಿತ್‌ ಶಾ ಅವರಿಗೆ ಮನವಿ ಸಲ್ಲಿಸಿದರು.

ಅಂಪಾರು : ಸಂಜಯ ಗಾಂಧಿ ಪ್ರೌಢಶಾಲೆಯಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕ ಉದ್ಘಾಟನೆ

ಅಂಪಾರು: ಜೂನಿಯರ್ ರೆಡ್ ಕ್ರಾಸ್ ಘಟಕ ಉದ್ಘಾಟನೆ. ಅಂಪಾರು ಸಂಜಯ ಗಾಂಧಿ ಪ್ರೌಢಶಾಲೆಯಲ್ಲಿ ಜೂನಿಯರ್ ರೆಡ್ ಕ್ರಾಸ್ ಘಟಕ ಉದ್ಘಾಟನೆ ಜರುಗಿತು.ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರ ತಾಲೂಕಿನ ಅಧ್ಯಕ್ಷರಾದ, ಶ್ರೀ ಜಯಕರಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ರೆಡ್ ಕ್ರಾಸ್ ನ ಉಗಮ, ಮಹತ್ವದ ಕುರಿತು ತಿಳಿಸಿದರು.ಸಂಕಷ್ಟದಲ್ಲಿದ್ದವರಿಗೆ ಸ್ಪಂದಿಸುವ ಸಂವೇದನಾಶೀಲ ಗುಣಗಳ ಮೌಲ್ಯ ವರ್ಧನೆ ಚಿಕ್ಕವರಿರುವಾಗಲೇ ಮೈ ಗೂಡಿಸಿಕೊಳ್ಳಿ, ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಿ ಜೊತೆಗೆ ಸೇವಾ ಮನೋಭಾವ ಹೊಂದಿರಿ ಎಂದು ಕರೆ ನೀಡಿದರು. ಪ್ರತಿಜ್ಞಾವಿಧಿಯನ್ನು ಕುಂದಾಪುರ ರೆಡ್ ಕ್ರಾಸ್ ಸಂಸ್ಥೆಯ ಸಂಯೋಜಕರಾದ ಶ್ರೀ.ದಿನಕರ್.ಆರ್.ಶೆಟ್ಟಿಯವರು ಬೋಧಿಸಿದರು.ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವದ ಕುರಿತು ಅರಿವು ಮೂಡಿಸಿದರು.ಈ ಸಂದರ್ಭದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕುಂದಾಪುರದ ಕೋಶಾಧಿಕಾರಿ ಶ್ರೀ.ಶಿವರಾಮ ಶೆಟ್ಟಿ, ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಪಾರು ಸಿ.ಎ.ಬ್ಯಾಂಕಿನ ಉಪಾಧ್ಯಕ್ಷರು, ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರಾದ ಶ್ರೀ ಅಶೋಕ್ ನಾಯ್ಕ್ ವಹಿಸಿದ್ದರು.ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಶ್ರೀ.ಉದಯಕುಮಾರ್.ಬಿ.ಸ್ವಾಗತಿಸಿದರು.ಶ್ರೀ.ಗೋವಿಂದ ಲಮಾಣಿ ಕಾರ್ಯಕ್ರಮ ನಿರೂಪಿಸಿದರು.ಶ್ರೀಮತಿ ರಮಿತ ವಂದಿಸಿದರು.