ಮುಳಬಾಗಿಲು ವಡ್ಡಹಳ್ಳಿ ಟೆಮೋಟೋ ಮಾರುಕಟ್ಟೆಯಲ್ಲಿ ಕಾನೂನು ಬಾಹಿರವಾಗಿ ಕಮೀಷನ್ ಹಾವಳಿ

ಮುಳಬಾಗಿಲು, ಜು-20, ವಡ್ಡಹಳ್ಳಿ ಟೆಮೋಟೋ ಮಾರುಕಟ್ಟೆಯಲ್ಲಿ ಕಾನೂನು ಬಾಹಿರವಾಗಿ 100 ರೂಪಾಯಿಗೆ 10 ರೂಪಾಯಿ ಕಮೀಷನ್ ಹಾವಳಿ ಹಾಗೂ ಬಾಕ್ಸ್ ಗಾತ್ರ ಹೆಚ್ಚಳ ಮಾಡಿರುವ ಮಂಡಿ ಮಾಲೀಕರ ವಿರುದ್ದ ಕ್ರಮ ಕೈಗೊಂಡು ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ರೈತ ಸಂಘದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಮುಂದೆ ಕೊಳತ ಟೆಮೋಟೋ ಸಮೇತ ಹೋರಾಟ ಮಾಡಿ ಕಾರ್ಯದರ್ಶಿಯವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಟೆಮೊಟೋಗೆ ಬಂಗಾರದ ಬೆಲೆ ಬಂದಿದೆ ಆದರೆ ರೈತರ ಬೆಳೆದ ಟೆಮೋಟೋಗೆ ಬಾದಿಸುತ್ತಿರುವ ರೋಗ ನಿಯಂತ್ರಣ ವಿಲ್ಲದೆ ಕೇವಲ ಶೇಕಡ 5 ರಷ್ಟು ರೈತರಿಗೆ ಮಾತ್ರ ಬೆಲೆ ಸಿಗುತ್ತಿದೆ. ಇನ್ನು 95 ಜನ ರೈತರು ಹಾಕಿದ ಬಂಡವಾಳ ಕೈಗೆ ಸಿಗುತ್ತಿಲ್ಲ. ಆದರೆ ಮಂಡಿ ಮಾಲೀಕರು ಮಾತ್ರ ಪ್ರತಿ ವರ್ಷ ಶ್ರೀಮಂತರಾಗುತ್ತಿದ್ದಾರೆ. ರೈತರು ಮಾತ್ರ ಸಾಲಗಾರರಾಗಿ ಮಕ್ಕಳ ವಿದ್ಯಾಬ್ಯಾಸ ಹಿರಿಯರ ಆರೋಗ್ಯ ಕಾಪಾಡಿಕೊಳ್ಳದೆ ಬೀದಿಗೆ ಬೀಳುತ್ತಿದ್ದಾರೆ ಇಷ್ಟೆಲ್ಲ ಅವ್ಯವಸ್ತೆ ಇದ್ದರು ರೈತರನ್ನು ವಂಚನೆ ಮಾಡುವ ಮಂಡಿ ಮಾಲೀಕರ ವಿರುದ್ದ ಕ್ರಮಕೈಗೊಳ್ಳಲು ಅಧಿಕಾರಿಗಳು ಹಿಂದೇಟು ಹಾಕಲು ಕಾರಣವೇನು ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಪ್ರಶ್ನೆ ಮಾಡಿದರು.

ಹದಗೆಟ್ಟಿರುವ ಕೃಷಿ ಕ್ಷೇತ್ರದಲ್ಲಿ ಬೆಳೆಗಳಿಗೆ ಬಾದಿಸುತ್ತಿರುವ ಬೀಕರ ರೋಗಗಳ ನಿಯಂತ್ರಣಬಾರದೆ ಹಾಕಿದ ಬಂಡವಾಳ ಕೈಗೆ ಸಿಗದೆ ರೈತ ಮೂರು ತಿಂಗಳು ಬಿಸಲು ಗಾಳಿ ಮಳೆ ಎನ್ನದೆ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಂದರೆ ಮಾರುಕಟ್ಟೆಯಲ್ಲಿ ಮಂಡಿ ಮಾಲೀಕರು ಹರಾಜಿನಲ್ಲಿ ಮೋಸದ ಜೊತೆಗೆ ಕಾನೂನು ಬಾಹಿರವಾಗಿ 100 ರೂಪಾಯಿಗೆ 10 ರೂಪಾಯಿ ಕಮೀಷನ್ ಮೀಟರ್ ಬಡ್ಡಿಯಂತೆ ರೈತರಿಂದ ಸುಲಿಗೆ ಮಾಡುತ್ತಿದ್ದರು, ಕ್ರಮಕೈಗೊಳ್ಳಬೇಕಾದ ಅಧಿಕಾರಿಗಳು ಸಿಬ್ಬಂದಿ ಕೊರತೆ ನೆಪದಲ್ಲಿ ಮಂಡಿ ಮಾಲೀಕರಿಗೆ ರಕ್ಷಣೆಯಾಗಿ ನಿಲ್ಲುತ್ತಿರುವುದು ನ್ಯಾಯವೇ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.

ಭೂಮಿ ಉಳುಮೆ ಮಾಡಿಲ್ಲ. ಬೆನ್ನಿಗೆ ಪಂಪ್ ಹಾಕಿಕೊಂಡು ಔಷಧಿ ಸಿಂಪಡಣೆ ಮಾಡಿಲ್ಲ ಒಟ್ಟಾರೆಯಾಗಿ ಕೃಷಿ ಮಾಡಲು ಬೆವರು ಸುರಿಸದೆ ಮಂಡಿ ಮಾಲೀಕರು 10 ನಿಮಿಷ್ಯ ಹರಾಜು ಹಾಕಲು ರೈತರಿಂದ ಬಾಕ್ಸ್ ಬಾಡಿಗೆ ಕೂಲಿ ಕಮೀಷನ್ ಪಡೆಯುತ್ತಿರುವುದು ನ್ಯಾಯವೇ, ಸರ್ಕಾರದ ಆದೇಶದಂತೆ ರೈತರಿಂದ ಯಾವುದೇ ಕಮೀಷನ್ ಪಡೆಯುವಂತಿಲ್ಲ. ಜೊತೆಗೆ ಪ್ರತಿದಿನ ಎ.ಪಿ.ಎಂ.ಸಿ. ಅಧಿಕಾರಿಗಳು ಮಂಡಿ ಮಾಲೀಕರು ರೈತರಿಗೆ ನೀಡುವ ಬಿಲ್‍ನಿಂದ ಹಿಡಿದು ಮಂಡಿಗೆ ಬಂದಿರುವ ಅವಕದ ಸಂಪೂರ್ಣ ಮಾಹಿತಿಯನ್ನು ಪಡೆಯಬೇಕು. ಆದರೆ ಯಾವುದೇ ರೀತಿಯ ತಪಾಸಣೆಯು ಇಲ್ಲ, ಕ್ರಮವು ಇಲ್ಲ. ಮಂಡಿ ಮಾಲೀಕರು ನೀಡಿದ ಲೆಕ್ಕವೇ ಅಧಿಕಾರಿಗಳಿಗೆ ಶ್ರೀರಕ್ಷೆಯಾಗಿದ್ದಾರೆಂದು ಆರೋಪ ಮಾಡಿದರು. 

ರೈತ ಸಂಘ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಯುವ ಮಾರುಕಟ್ಟೆಯಲ್ಲಿ ಸಿ.ಸಿ ಕ್ಯಾಮರಗಳಿಲ್ಲ, ಗುಣಮಟ್ಟದ ಶೌಚಾಲಯಗಳಿಲ್ಲ,  ಊಟವಿಲ್ಲ, ಕುಡಿಯುವ ನೀರನ್ನು ಕೇಳುವಂತಿಲ್ಲ. ಜೊತೆಗೆ ಮಾರುಕಟ್ಟೆಯ ಸ್ವಚ್ಚತೆ ಎಂಬುದು ಮರುಚಿಕೆಯಾಗಿ ಮಂಡಿ ಮಾಲೀಕರಿಗೆ ವ್ಯಾಪಾರಸ್ಥರಿಗೆ ಕೂಲಿಕಾರ್ಮಿಕರಿಗೆ ರೈತರಿಗೆ ಉಚಿತವಾಗಿ ಅನಾರೋಗ್ಯವನ್ನು ಕೊಡುವ ಮಾರುಕಟ್ಟೆಯಾಗಿ ಮಾರ್ಪಟ್ಟಿರುವುದು ದುರಾದೃಷ್ಟಕರ. ಸರಿಪಡಿಸಬೇಕಾದ ಅಧಿಕಾರಿಗಳು ಇದ್ದು, ಇಲ್ಲದಂತಾಗಿದ್ದಾರೆಂದು ಅಸಮದಾನ ವ್ಯಕ್ತಪಡಿಸಿದರು.

ಕೋಲಾರ ಸೇರಿದಂತೆ ಎಲ್ಲಾ ಮಾರುಕಟ್ಟೆಗಳಲ್ಲಿ ಬಾಕ್ಸ್ ಗಾತ್ರ 15 ಕೆ.ಜಿ ಆದರೆ ವಡ್ಡಹಳ್ಳಿ ಮಾರುಕಟ್ಟೆಯಲ್ಲಿ ಕೆಲವು ಮಂಡಿ ಮಾಲೀಕರು ಕಾನೂನು ಬಾಹಿರವಾಗಿ ಬಾಕ್ಸ್‍ಗಾತ್ರವನ್ನು 18 ಕೆ.ಜಿ.ಗೆ ಏರಿಕೆ ಮಾಡಿ ರೈತರಿಗೆ ಅದೇ ಹರಾಜಿನಲ್ಲಿ ಹಣ ನೀಡಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಳ್ಳುತ್ತಿರುವುದು ಯಾವ ನ್ಯಾಯ. ದೂರು ನೀಡಿದರೆ ನೆಪ ಮಾತ್ರಕ್ಕೆ ತಪಾಸಣೆ ಮಾಡಿ ಯಾವುದೇ ಬಾಕ್ಸ್ ಗಾತ್ರ ಇಲ್ಲವೆಂದು ವರದಿ ನೀಡುವ ಅಧಿಕಾರಿಗಳು ಮಂಡಿ ಮಾಲೀಕರ ಪರವಾಗಿ ನಿಂತು ರೈತರನ್ನು ಶೋಷಣೆ ಮಾಡುತ್ತಿದ್ದಾರೆಯೇ, ರೈತರು ಪ್ರಶ್ನೆ ಮಾಡಿದರೆ ಹರಾಜು ನಿಲ್ಲಿಸುತ್ತೇವೆಂಬ ಬೆದರಿಕೆ ಹಾಕುವ ಮೂಲಕ ಅಮಾಯಕ ರೈತರ ದ್ವನಿಯನ್ನು ಮುಚ್ಚುತ್ತಿರುವುದು ಯಾವ ನ್ಯಾಯ ಎಂದು ಕಿರಿಕಾರಿದರು. 

ಒಂದು ವಾರದೊಳಗೆ ಕಾನೂನುಬಾಹಿರ ಕಮೀಷನ್ ಹಾವಳಿ ಬಾಕ್ಸ್ ಗಾತ್ರ ಹಾಗೂ ಮಾರುಕಟ್ಟೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಇಲ್ಲವಾದರೆ ದಾಖಲೆಗಳ ಸಮೇತ ಮಾನ್ಯ ಮುಖ್ಯ ಮಂತ್ರಿಗಳ ಮನೆ ಮುಂದೆ ಹೋರಾಟ ಮಾಡುವ ಮೂಲಕ ನ್ಯಾಯ ಪಡೆದುಕೊಳ್ಳುತ್ತೇವೆಂದು ಮನವಿ ನೀಡಿ ಎಚ್ಚರಿಕೆ ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಕಾರ್ಯದರ್ಶಿಗಳು ಮಾರುಕಟ್ಟೆಯಲ್ಲಿ ಕಾನೂನುಬಾಹಿರ ಕಮೀಷನ್ ಹಾವಳಿ ಇದೆ ಜೊತೆಗೆ ಬಾಕ್ಸ್ ಗಾತ್ರದ ಬಗ್ಗೆ ದೂರು ಬಂದಿದೆ ಪರಿಶೀಲನೆ ಮಾಡುತ್ತೇವೆಂದು ಬರವಸೆ ನೀಡಿದರು.

ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್:ನಮ್ಮ ನಡೆ ಕೃಷಿಯ ಕಡೆ – ಸಂಘದ ಸದಸ್ಯರಿಂದ ಗದ್ದೆ ನಾಟಿ

ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್, ಜೇಸಿಐ ಬೆಳ್ಮಣ್ಣು ಮತ್ತು ಯುವ ಜೇಸಿ ವಿಭಾದ ನೇತೃತ್ವದಲ್ಲಿ ಕುಡುಂದೂರಿನ ಬೆರಣಗುಡ್ಡೆಯ ಗದ್ದೆಯಲ್ಲಿ ಸಂಘದ ಸದಸ್ಯರಿಂದ ಗದ್ದೆ ನಾಟಿ ನಡೆಸಲಾಯಿತು.
ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‍ನ ಪೂರ್ವಾಧ್ಯಕ್ಷರು, ಯುವ ಕೃಷಿಕರಾದ ರಾಜೇಶ್ ಕೋಟ್ಯಾನ್ ಅವರ ನೇತೃತ್ವದಲ್ಲಿ ಕುಡುಂದೂರಿನ ಬೆರಣಗುಡ್ಡೆಯ ಗದ್ದೆಯಲ್ಲಿ ಭತ್ತದ ನೇಜಿ ನಾಟಿ ಮಾಡಿ, ಯುವಜನರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವ ಪ್ರಯತ್ನ ಮಾಡಲಾಯಿತು. ಸಂಘದ ಸದಸ್ಯರು ಜತೆಗೂಡಿ ಕೃಷಿ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ತಮ್ಮನ್ನು ತೊಡಗಿಸಿಕೊಂಡರು. 
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪೂಜಾರಿ ಮಾತನಾಡಿ ಕೃಷಿಯಿಂದ ವಿಮುಖರಾಗುತ್ತಿರುವ ಯುವಜನತೆಗೆ ಹಾಗೂ ಸಾಗುವಳಿ ಮಾಡಲು ಅನಾನುಕೂಲದಿಂದ ಗದ್ದೆಗಳನ್ನು ಹಡೀಲು ಬಿಟ್ಟವರಿಗೆ ಅಬ್ಬನಡ್ಕ ಸಂಘದ ಕೆಲಸವು ಪ್ರೇರಣೆಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಬೆಳ್ಮಣ್ಣು ಜೇಸಿಯ ಅಧ್ಯಕ್ಷ ಅಬ್ಬನಡ್ಕ ಸತೀಶ್ ಪೂಜಾರಿ, ಬೆಳ್ಮಣ್ಣು ಯುವ ಜೇಸಿ ಅಧ್ಯಕ್ಷ ಕೀರ್ತನ್ ಪೂಜಾರಿ, ಸಂಘದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ, ಕಾರ್ಯದರ್ಶಿ ಲಲಿತಾ ಆಚಾರ್ಯ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ ಮೊದಲಾದವರಿದ್ದರು.
ಈ ಸಂದರ್ಭದಲ್ಲಿ ಸಂಘದ ಪೂರ್ವಾಧ್ಯಕ್ಷರಾದ ಆನಂದ ಪೂಜಾರಿ, ಸುರೇಶ್ ಕಾಸ್ರಬೈಲು, ರಾಜೇಶ್ ಕೋಟ್ಯಾನ್, ಉದಯ ಅಂಚನ್, ಸದಸ್ಯರಾದ ಮಂಜುನಾಥ ಆಚಾರ್ಯ, ಸುರೇಶ್ ಅಬ್ಬನಡ್ಕ, ವೀಣಾ ಪೂಜಾರಿ, ಆರತಿ ಕುಮಾರಿ, ಹರೀಶ್ ಪೂಜಾರಿ, ಪುಷ್ಪ ಕುಲಾಲ್, ಸಂಧ್ಯಾ ಶೆಟ್ಟಿ, ಸುಲೋಚನಾ ಕೋಟ್ಯಾನ್, ಶಾಂತರಾಮ್ ಕುಲಾಲ್ ಮೊದಲಾದವರಿದ್ದರು.