ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಅವರಿಂದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ದಾನ

ಕೋಲಾರ ತಾಲ್ಲೂಕಿನ ಹೊಗರಿ ಗೊಲ್ಲಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಸಮವಸ್ತ್ರ ನೀಡಿದರು.
ಕೋಲಾರ: ಪ್ರತಿಯೊಬ್ಬರೂ ಮಕ್ಕಳಲ್ಲಿ ದೇವರನ್ನು ಕಾಣಬೇಕು. ಅವರ ಶೈಕ್ಷಣಿಕ ಅಭಿವೃದ್ಧಿಗೆ ಕೈಲಾದ ನೆರವು ನೀಡಬೇಕು ಎಂದು ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಹೇಳಿದರು.
ತಾಲ್ಲೂಕಿನ ಹೊಗರಿ ಗೊಲ್ಲಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಓದುವ ಹೆಚ್ಚಿನ ಸಂಖ್ಯೆಯ ಮಕ್ಕಳು ಬಡ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಅವರಿಗೆ ಸರ್ಕಾರದಿಂದ ಕೆಲವು ಸೌಲಭ್ಯಗಳು ದೊರೆಯುತ್ತವೆ. ಅವುಗಳ ಜತೆಗೆ ದಾನಿಗಳು ಕೈ ಜೋಡಿಸಿದಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸಹಾಯವಾಗುತ್ತದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ವೆಂಕಟಶಿವಪ್ಪ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿರುವ ಎಸ್.ಆರ್.ಧರ್ಮೇಶ್ ತಮ್ಮ ವೇತನದ ಸ್ವಲ್ಪ ಭಾಗವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಟ್ಟಿದ್ದಾರೆ. ಪ್ರತಿ ತಿಂಗಳೂ ರೂ.10 ಸಾವಿರ ಪಕ್ಕಕ್ಕಿಟ್ಟು ಮಕ್ಕಳ ಅಗತ್ಯಗಳನ್ನು ಖರೀದಿಸಿ ಕೊಡುತ್ತಿದ್ದಾರೆ. ಅವರ ಸಮಾಜ ಸೇವೆ ಹಾಗೂ ಬಡವರ ಬಗ್ಗೆ ಇರುವ ಕಳಕಳಿ ಸ್ತುತ್ಯಾರ್ಹ ಎಂದು ಹೇಳಿದರು.
ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ, ಪುಸ್ತಕ ಓದಬೇಕು. ತಾವು ಓದಿದ ಶಾಲೆ, ಶಿಕ್ಷಕರು ಹಾಗೂ ಪೋಷಕರಿಗೆ ಒಳ್ಳೆ ಹೆಸರು ತರಬೇಕು. ದಾನಿಗಳು ನೀಡುವ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ವೆಂಕಟಶಿವಪ್ಪ, ಆರ್.ನಾರಾಯಣಪ್ಪ, ಶ್ರೀನಿವಾಸಪ್ಪ ಮುಖ್ಯ ಶಿಕ್ಷಕ ಗೋಪಾಲ್ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕರಾದ ಗೋಪಾಲ್ ಶಿಕ್ಷಕಿ ಆರ್.ನಿಮಾಲ ಇದ್ದರು.

ಕೋಲಾರ : ಬಾಲ ಕಾರ್ಮಿಕ ಅನಿಷ್ಠ ಪದ್ದತಿಯನ್ನು ನಿರ್ಮೂಲನೆ ಮಾಡಲು ಜನ ಜಾಗೃತಿ ಕಾರ್ಯಕ್ರಮ

ಕೋಲಾರ : ಕೋಲಾರ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಜುಲೈ 17 , 2023 ರಿಂದ 24 , 2023 ರವರೆಗೆ ಆಟೋ ಪ್ರಚಾರ ಮೂಲಕ ಬಾಲ ಕಾರ್ಮಿಕ ಅನಿಷ್ಠ ಪದ್ದತಿಯನ್ನು ನಿರ್ಮೂಲನೆ ಮಾಡಲು ಜನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು , ಈ ಸಂಬಂಧ ಇಂದು ಅಕ್ರಂ ಪಾಷ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು , ಬಾಲಕಾರ್ಮಿಕ ಯೋಜನಾ ಸೊಸೈಟಿ , ಕೋಲಾರ ಜಿಲ್ಲೆ , ಕೋಲಾರ ಹಾಗೂ ಶ್ರೀಮತಿ ಪದ್ಮ ಬಸವಂತಪ್ಪ , ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ , ಜಿಲ್ಲಾ ಪಂಚಾಯಿತಿ , ಕೋಲಾರ ರವರು , ಜಿಲ್ಲಾಡಳಿತ ಭವನ , ಕೋಲಾರ ಇಲ್ಲಿ ಆಟೋ ಪ್ರಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು .

ಈ ಸಂದರ್ಭದಲ್ಲಿ ಶ್ರೀಮತಿ ಶಬಾನಾ ಅಜ್ಜಿ , ಮಾನ್ಯ ಕಾರ್ಮಿಕ ಅಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿ , ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ , ಕೋಲಾರ ಜಿಲ್ಲೆ , ಕೋಲಾರ ಹಾಗೂ ಶ್ರೀಮತಿ ರಾಜೇಶ್ವರಿ , ಕಾರ್ಮಿಕ ನಿರೀಕ್ಷಕರು , ಕೋಲಾರ ವೃತ್ತ , ಕೋಲಾರ ರವರು ಹಾಗೂ ಸಿಬ್ಬಂದಿಯವರು ಹಾಜರಿದ್ದರು .

ಕಲ್ಲೂರು ಗ್ರಾಮದಲ್ಲಿ ನೂತನವಾಗಿ ಪ್ರತಿಷ್ಠಾಪಿಸಲಾಗಿದ್ದ ನವನಾಗ ದೇವತಾ ವಿಗ್ರಹಕ್ಕೆ ಮಂಡಲ ಪೂಜೆ

ಶ್ರೀನಿವಾಸಪುರ: ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಭಾನುವಾರ ನೂತನವಾಗಿ ಪ್ರತಿಷ್ಠಾಪಿಸಲಾಗಿದ್ದ ನವನಾಗ ದೇವತಾ ವಿಗ್ರಹಕ್ಕೆ ಮಂಡಲ ಪೂಜೆ ಏರ್ಪಡಿಸಲಾಗಿತ್ತು.
ಪೂಜಾ ಕಾರ್ಯಕ್ರಮದ ಅಂಗವಾಗಿ ಹಲವಾರು ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ನವನಾಗ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ಶ್ರೀನಿವಾಸಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ನಾಗ ದೇವತೆ ದರ್ಶನ ಪಡೆದರು.
ಗ್ರಾಮದ ಹಿರಿಯ ಬಚ್ಚಿರೆಡ್ಡಿ ಮಾತನಾಡಿ, ಗ್ರಾಮದ ಪುರಾತನ ಚೌಡೇಶ್ವರಿ ದೇವಾಲಯ ಪ್ರಸಿದ್ಧಿ ಪಡೆದಿದೆ. ಹಾಗೆಯೇ ನವನಾಗ ದೇವತೆ ದೇವಾಲಯವೂ ನಾಗರಿಕರ ಗಮನ ಸೆಳೆದಿದೆ. ಹೆಚ್ಚಿನ ಸಂಖ್ಯೆಯ ಜನರು ಬಂದು ದರ್ಶನ ಪಡೆದು ಹೋಗುತ್ತಾರೆ. ಗ್ರಾಮ ಒಂದು ಪುಣ್ಯಕ್ಷೇತ್ರವಾಗಿ ಪರಿಣಮಿಸಿದೆ. ಗ್ರಾಮದ ದೇವಾಲಯಗಳಲ್ಲಿ ಲೋಕಕಲ್ಯಾಣಾರ್ಥ ನಿಗದಿತ ಸಮಯದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಮುಖಂಡರಾದ ರಮೇಶ್ ಬಾಬು, ನಾರಾಯಣಸ್ವಾಮಿ, ಹರೀಶ್, ಲಕ್ಷ್ಮೀನಾರಾಯಣ್, ಕಿಶೋರ್ ಬಾಬು, ವಿಜಯ್ ಕುಮಾರ್, ರಾಜೇಶ್, ಹರೀಶ್ ಇದ್ದರು
.

ಸಂತ ಆಗ್ನೆಸ್ ಪ್ರೌಢಶಾಲೆಯಲ್ಲಿ ನಿವೃತ್ತ ಶಿಕ್ಷಕ ಮತ್ತು ಶಿಕ್ಷಕೇತರನ್ನು ಸನ್ಮಾನ ಮತ್ತು ಕಾರ್ಮೆಲ್ ಮಾತೆಯ ಹಬ್ಬದ ಆಚರಣೆ

ಮಂಗಳೂರು: ಶೈಕ್ಷಣಿಕ ಕೈಂಕರ್ಯದಲ್ಲಿ ಅಗಣಿತ ಜ್ಞಾನ ದೀವಿಗೆಯನ್ನು ಬೆಳಗಿಸಿದ ನಿವೃತ್ತ ಗುರುಗಳಿಗೆ ಸನ್ಮಾನಿಸುವ ಶುಭಗಳಿಗೆ ಸಂತ ಆಗ್ನೆಸ್ ಪ್ರೌಢಶಾಲೆಯಲ್ಲಿ ದಿನಾಂಕ 15-07-2023ರಂದು ಕಾರ್ಮೆಲ್ ಮಾತೆಯ ಹಬ್ಬದಂದು ನೆರವೇರಿತು. ಪ್ರಸ್ತಕ ವರ್ಷ ಅಪೋಸ್ತಲಿಕ್ ಕಾರ್ಮೆಲ್ ವಿದ್ಯಾಸಂಸ್ಥೆಯ ಸಂಸ್ಥಾಪಕಿಯಾಗಿರುವ ವಂದನೀಯ ಮದರ್ ವೆರೋನಿಕಾರವರ ಜನ್ಮದಿನದ ದ್ವಿಶತಮಾನೋತ್ಸವ. ಆ ಪ್ರಯುಕ್ತ ತ್ಯಾಗ ಮತ್ತು ಸಮರ್ಪಣಾ ಭಾವದಿಂದ ಶಾಲೆಯ ಶ್ರೇಯೋಭಿವೃದ್ಧಿಗೆ ಶ್ರಮಿಸಿದ 8 ಮಂದಿ ನಿವೃತ್ತ ಶಿಕ್ಷಕ ಮತ್ತು ಶಿಕ್ಷಕೇತರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಭಗಿನಿ ಮರಿಯಾ ರೂಪ ಎ.ಸಿಯವರು ಉಪಸ್ಥಿತರಿದ್ದರು.

Honoring Retired Teachers and Non-Teachers and Feast of Our Lady of Carmel at Saint Agnes High School

On 15th Saturday, at 11.00 a. m the students of class 10 B of St. Agnes High School celebrated the feast of our Lady of Mount Carmel. On the occasion of the bicentennial birth anniversary of the venerable Mother Veronica of the Passion founder of the Apostolic Carmel Institution, the retired teachers of the school were honoured on the same day.

The celebration commenced with a prayer service focused on the virtues of the Blessed Vergin Mary which created a reflective atmosphere with a haven of spirituality.

The energetic semi classical welcome dance captured the camaraderie setting, the tone for the day’s celebration. One of the highlights was the skit on values of life especially for the teens. The students showcased importance of the ethics in the form of a fashion show.

The fusion dance performance captivated the gathering, seamlessly blending classical and hip-hop. .

The celebration also included the Miracle of the Scapular, the significant aspect of the devotion to Our Lady of Mount Carmel. Students depicted the miraculous intervention attributed to the scapular through a touching performance, bringing to life the story of Simon Stock and the spiritual protection associated with it..

On the same day, Dr. Sr. Maria Roopa A. C, Joint Secretary of St. Agnes Institutions felicitated the dedicated service and contributions of retired teachers, who had devoted their careers to educating generations .They were honored with a shawl , a memento,flowers and fruit. Mrs. Juliana Fernandes spoke a few words, reflecting on her teaching experience. The chief guest highlighted contributions of Mother Veronica, the founder of Apostolic Carmel .The felicitation of retired teachers in school served as a fitting tribute to their lifelong dedication and commitment to education the cultural program was compered by Melissa and Ganavi. Iral proposed the vote of thanks. The felicitation ceremony was compered by Mrs. Dimple Quadros and Tr. Prathima read the credentials of the retired teachers. The staff and support staff had delicious meal where in they had good time catching up each renewing old memories.

ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷ ಪ್ರದಕ್ಷಿಣೆ ಪ್ರಾರಂಭಗೊಳ್ಳಲಿದೆ


ಕುಂದಾಪುರ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಅಧಿಕ ಮಾಸ ಪ್ರಯುಕ್ತ ಶ್ರೀ ದೇವರ ಪ್ರಿತ್ಯರ್ಥ “ಲಕ್ಷ ಪ್ರದಕ್ಷಿಣೆ” ಜುಲೈ 19ರಿಂದ ಪ್ರಾರಂಭಗೊಳ್ಳಲಿದೆ. ಸಮಾಜ ಬಾಂಧವರು ಈ ಧಾರ್ಮಿಕ ಪ್ರದಕ್ಷಿಣೆಯಲ್ಲಿ ಭಾಗವಹಿಸಿ, ಶ್ರೀದೇವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಬೇಕೆಂದು ಆಡಳಿತ ಮೊಕ್ತೇಸರರಾದ ಕೆ. ರಾಧಾಕೃಷ್ಣ ಶೆಣೈ ತಿಳಿಸಿದ್ದಾರೆ. ಪ್ರದಕ್ಷಿಣೆ ಅವಧಿ ಬೆಳಿಗ್ಗೆ 6ರಿಂದ ಮಧ್ಯಾಹ್ನ 12 ಗಂಟೆ, ಸಂಜೆ 6 ರಿಂದ ರಾತ್ರಿ 8ರ ತನಕ ಎಂದು ತಿಳಿಸಲಾಗಿದೆ.

ಬಿಕರ್ನಕಟ್ಟೆ ಬಾಲಾ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಕಾರ್ಮೆಲ್ ಮಾತೆಯ ಹಬ್ಬ / The Carmelites of Infant Jesus Shrine, Bikkarnakatte, celebrated the feast of Our Lady of Mount Carmel

ಮಂಗಳೂರು: 2023 ರ ಜುಲೈ 16 ರಂದು “ಉತ್ತರಿಕೆಯ ಹಬ್ಬ”ವೆಂದು ಕರೆಯಲ್ಪಡುವ ಕಾರ್ಮೆಲ್ ಮಾತೆಯ ಹಬ್ಬವನ್ನು ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಕಾರ್ಮೆಲ್ ಸಭೆಯ ಗುರುಗಳು ಬಹಳ ವಿಜೃಂಭಣೆಯಿಂದ ಆಚರಿಸಿದರು. ಉತ್ತರಿಕೆಯ ಹಬ್ಬ ಹಾಗು ಕಾರ್ಮೆಲ್ ಮಾತೆಯ ಹಬ್ಬದ ಗೌರವಾರ್ಥವಾಗಿ ಪುಣ್ಯಕ್ಷೇತ್ರದಲ್ಲಿ 9 ದಿನಗಳ ನೊವೇನವನ್ನು ನಡೆಸಲಾಯಿತು. ಈ 9 ದಿನಗಳಲ್ಲಿ, ಕಾರ್ಮೆಲ್ ಸಭೆಯ ಗುರುಗಳು ಆಧ್ಯಾತ್ಮಿಕ ಸುಧಾರಣೆಗಾಗಿ ಮತ್ತು ಹಬ್ಬಕ್ಕೆ ಸಿದ್ಧತೆಗಾಗಿ ವಿವಿಧ ವಿಷಯಗಳ ಕುರಿತು ಪ್ರಭೋದನೆಯನ್ನು ನೀಡಿದರು.

ಜುಲೈ 16 ಹಬ್ಬದ ದಿನದಂದು, ಧರ್ಮಗುರು ಫಾ. ರಿಚರ್ಡ್ ಅಲೋಶಿಯಸ್ ಕೊಯೆಲ್ಹೋ, ಮತ್ತು ಫಾ. ಮೆಲ್ವಿನ್ ಡಿ’ಕುನ್ಹಾ, ಸಂತ ಜೋಸೆಫ್ ಮಠದ ಮಠಾಧಿಪತಿಗಳು, ಫಾ. ಸ್ಟಿಫಾನ್ ಪಿರೇರಾ, ಬಾಲಯೇಸುವಿನ ಪುಣ್ಯಕ್ಷೇತ್ರದ ನಿರ್ದೇಶಕರು ಹಾಗು ಫಾ. ದೀಪ್ ಫೆರ್ನಾಂಡಿಸ್, ದೈವಶಾಸ್ತ್ರದ ವಿದ್ಯಾರ್ಥಿಗಳ ತರಬೇತುದಾರರು, ಇತರ ಗುರುವೃಂದದವರು ಸೇರಿ ‘ಮಾತೆ ಮರಿಯಳ ಸಹಭಾಗಿತ್ವವು ಮಾನವಕುಲಕ್ಕೆ ಒಂದು ದೊಡ್ಡ ವರದಾನ’ ಎಂಬ ವಿಷಯದ ಬಗ್ಗೆ ಹಬ್ಬದ ಆಡಂಬರ ದಿವ್ಯ ಬಲಿಪೂಜೆಯನ್ನು ಆರ್ಪಿಸಿದರು.

ಕಾರ್ಮೆಲ್ ಮಾತೆಯ ಹಬ್ಬಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು ಹಾಗು ಅನೇಕ ಗುರುವೃಂದದವರು ಮತ್ತು ಧಾರ್ಮಿಕ ಸಹೋದರ ಸಹೋದರಿಯರು ಕಾರ್ಮೆಲ್ ಮಾತೆಯ ಹಬ್ಬದ ದಿವ್ಯಬಲಿಪೂಜೆಯನ್ನು ಆರ್ಪಿಸಿ, ಮಾತೆಯ ಮಧ್ಯಸ್ಥಿಕೆಗಾಗಿ ಪ್ರಾರ್ಥಿಸಿದರು. ಕಾರ್ಮೆಲ್ ಮಾತೆಯ ರಕ್ಷಣೆ ಹಾಗು ಕಾರ್ಮೆಲ್ ಸಭೆಯ ಸಂಪತ್ತಿನ ಸಂಕೇತವಾದ ಉತ್ತರಿಕೆಯನ್ನು ಎಲ್ಲರಿಗೂ ವಿತರಿಸಲಾಯಿತು. ಇಡೀ ಪುಣ್ಯಕ್ಷೇತ್ರದ ಆವರಣದಲ್ಲಿ ಸಂಭ್ರಮದ ವಾತಾವರಣವು ಆವರಿಸಿತ್ತು.


The Carmelites of Infant Jesus Shrine, Bikkarnakatte, celebrated the feast of Our Lady of Mount Carmel

Mangalore: The Carmelites of Infant Jesus Shrine, Bikkarnakatte, celebrated the feast of Our Lady of Mount Carmel, also known as the Scapular Feast, on the 16th of July, 2023. The Carmelites are a religious Order that cherishes their spiritual legacy as the promoters of the Scapular devotion. The shrine held 9 days of novena in honour of the Blessed Virgin, and on each of these 9 days, priests offered reflection on different themes for spiritual edification and fruitful preparation for the feast. Carmelite priests celebrated three masses on the novena days and gave enlightening homilies, describing the accompaniment Mary offered to the entire domain of humanity in the past as in the present; to apostles, Church, migrants, youth and the persecuted.

On the feast day, the Solemn Mass was celebrated by Rev. Fr. Richard Aloysius Coelho, Director Fr Muller Institutions and was concelebrated by Rev. Fr. Melwin D’Cunha, the Superior of St. Joseph’s Monastery, Rev. Fr. Stifan Periera, the Director of Infant Jesus Shrine, Rev. Fr. Deep Fernandes, the Master of the Theology Students, among others priests. Reflecting on the theme ‘Mary’s accompaniment a Great Boon to Humankind’, Fr. Richard, emphasized her role in the redemptive action of Christ, and her continued assistance to humanity over the years.

The faithful gathered in great numbers for the feast, and the joy of the occasion was enhanced with the presence of many priests and religious. The Scapular, a sign of Mary’s protection and the wealth of the Carmelite Order, was distributed to everyone. The ambience of celebration hovered over the entire Shrine campus.

ಕುಂದಾಪ್ರ ಕನ್ನಡ ಹಬ್ಬ“ಮೂಕ್ ಹಕ್ಕಿ ಹಾಡ್”

ಕಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕುಂದಪ್ರಭ ಸಂಸ್ಥೆಯ ಆಶ್ರಯದಲ್ಲಿ ಕುಂದಾಪ್ರ ಕನ್ನಡ ಕವಯತ್ರಿ “ಸುಮಿತ್ರಾ ಐತಾಳ” ಅವರ ಸ್ಮರಣೆಯಲ್ಲಿ ಕುಂದಾಪ್ರ ಕನ್ನಡ ಹಬ್ಬ ಹಾಗೂ “ಮೂಕ್ ಹಕ್ಕಿ ಹಾಡ್” ಕಾರ್ಯಕ್ರಮ ನಡೆಸಲಾಯಿತು.
ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರೂ, ಕುಂದಾಪುರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೂ ಆದ ಡಾ. ಉಮೇಶ್ ಪುತ್ರನ್ ಉದ್ಘಾಟಿಸಿ, ಕುಂದ ಕನ್ನಡ ಭಾಷೆಯ ವೈಶಿಷ್ಟ್ಯ ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಶ್ರೀರಾಜ್ ಕೊಠಾರಿ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಕುಂದ ಕನ್ನಡ ಬಳಕೆ ಮಾಡುವ ಬಗ್ಗೆ ತಾನು ಪಟ್ಟ ಶ್ರಮ ವಿವರಿಸಿದರು. ಕುಂದ ಕನ್ನಡ ಚಲನಚಿತ್ರ “ಹಜ್” ನಿರ್ಮಾಣ ಮಾಡಿ ರಾಜ್ಯ ಸರಕಾರದಿಂದ ಸ್ವರ್ಣ ಕಮಲ ಪ್ರಶಸ್ತಿ ಪಡೆದ ಶ್ರೀರಾಜ್ ಕೊಠಾರಿ ಅವರನ್ನು ಗೌರವಿಸಲಾಯಿತು.
ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್. ಶೆಣೈ, ಕುಂದಾಪ್ರ ಕನ್ನಡ ಉಳಿಸಿ ಬೆಳೆಸುವ ಅಗತ್ಯತೆ ತಿಳಿಸಿ ಕುಂದಾಪ್ರ ಕನ್ನಡದ ಲೇಖಕಿ ದಿ. ಸುಮಿತ್ರಾ ಐತಾಳ ಅವರನ್ನು ಸ್ಮರಿಸಿದರು.
ವಿದ್ಯಾರ್ಥಿಗಳು ಕುಂದ ಕನ್ನಡ ಕವಿತೆಗಳನ್ನು ಓದಿದರು.
ಉಪನ್ಯಾಸಕ ಉದಯಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಸುಕೇಶ್ ಚಂದ್ರಶೇಖರ್ ವಂದಿಸಿದರು
.

ಸುಮಿತ್ರಾ ಐತಾಳ್ ನೆನಪು

ಕುಂದಾಪ್ರ ಕನ್ನಡ ಲೇಖಕಿ, ಕವಯತ್ರಿ ದಿ.ಸುಮಿತ್ರಾ ಐತಾಳರ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಅವರು ಕುಂದಾಪ್ರ ಕನ್ನಡಕ್ಕೆ ಕೊಟ್ಟ ಕೊಡುಗೆಯನ್ನು ಡಾ. ಉಮೇಶ್ ಪುತ್ರನ್ ಸ್ಮರಿಸಿದರು. ವಿದ್ಯಾರ್ಥಿಗಳು ಅವರ ಕವನಗಳನ್ನು ಓದಿದರು. ಅವರ ಕುಂದಾಪ್ರ ಕನ್ನಡ ಮಾತುಗಳ ಧ್ವನಿ ಮುದ್ರಿಕೆ ಕೇಳಿಸಲಾಯಿತು. ಯು.ಎಸ್.ಶೆಣೈ ಸುಮಿತ್ರಾ ಐತಾಳರ ಕನಸುಗಳ ವಿವರ ನೀಡಿದರು.

ಶಿರ್ವ ಸಂತ ಮೇರಿ ಪ ಪೂ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕ ಉದ್ಘಾಟನೆ

ಶಿರ್ವ : ” ರಾಷ್ಟ್ರೀಯ ಸೇವಾ ಯೋಜನೆಯು ವಿಧ್ಯಾರ್ಥಿಗಳಲ್ಲಿ ಸೇವೆಯ ಮೂಲಕ ಸಮಾಜದ ಬಗ್ಗೆ ಅರಿವು ಮೂಡಿಸುತ್ತದೆ. ಎನ್ ಎಸ್ ಎಸ್ ಮೂಲಕ ಸ್ವಯಂ ಸೇವಕರ ವ್ಯಕ್ತಿತ್ವ ವಿಕಸನವಾಗುತ್ತದೆ.ಇಲ್ಲಿ ವಿಧ್ಯಾರ್ಥಿಗಳು ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜ ಸೇವೆ ಸಲ್ಲಿಸುತ್ತಾರೆ. ಇದು ಮುಂದೆ ಸಾರ್ಥಕ ಜೀವನ ನಡೆಸಲು ಪ್ರೆರಣೆ ಯಾಗುತ್ತದೆ” ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನೆಯ ಮಂಗಳೂರು ವಿಭಾಗದ ಸಂಯೋಜನಾಧಿಕಾರಿ ಸವಿತಾ ಎರ್ಮಾಳ್ ಹೇಳಿದರು. ಅವರು ಶ್ರೀರ್ವ ಸಂತ ಮೇರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಉದ್ಘಾಟನಾ ಕಾರ್ಯಕ್ರಮ ಮತ್ತು ವನಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರಾದ ವಂದನೀಯ ಗುರು ಡಾ. ಲೆಸ್ಲಿ ಡಿಸೋಜ ವಹಿಸಿದ್ದು, ಪ್ರಾಂಶುಪಾಲರಾದ ಜಯಶಂಕರ ಕೆ ಸ್ವಾಗತಿಸಿ ಕುಮಾರಿ ಸಮೀಕ್ಷಾ ಅತಿಥಿಗಳ ಪರಿಚಯ ಮಾಡಿದರು. ಮೂಡುಬೆಳ್ಳೆ ಸಂತ ಲಾರೆನ್ಸ್ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಎಡ್ವರ್ಡ್ ಲಾರ್ಸನ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ಸಮೀಕ್ಷಾ ಅತಿಥಿಗಳ ಪರಿಚಯ ಮಾಡಿ, ಎನ್ಎಸ್ಎಸ್ ಯೋಜನಾಧಿಕಾರಿ ಶ್ರೀಮತಿ ಮರಿಯ ಜೆಸಿಂತಾ ಫುರ್ಟಾಡೊ ವಂದಿದಸಿದರು ,ದೀಕ್ಷಿತ್ ಆಚಾರ್ಯ ನಿರೂಪಿಸಿದರು. ಈ ಸಂದರ್ಭದಲ್ಲಿ ಕಾಲೇಜು ಪರಿಸರದಲ್ಲಿ 25 ಔಷಧೀಯ ಗಿಡಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಮೇಲ್ವಿನ್ ಅರಾನ್ಹಾ ,ಎನ್ಎಸ್ಎಸ್ ಸ್ವಯಂಸೇವಕರು , ಉಪನ್ಯಾಸಕ ಮತ್ತು ಶಿಕ್ಷಕೇತರ ಬಂಧುಗಳು ಹಾಜರಿದ್ದರು.

ಕುಂದಾಪುರ ಕಥೊಲಿಕ್ ಸಭಾದಿಂದ ಚಾರ್ಟರ್ಡ್ ಅಕೌಂಟೆಟ್ಸ್ ಪರೀಕ್ಷೆಯಲ್ಲಿ ತೆರ್ಗಡೆಯಾದ ವಿನಾರ್ಡ್ ಡಿಕೋಸ್ತಾರವರಿಗೆ ಸನ್ಮಾನ / Kundapur Catholic Sabha felicitates Vinard DCosta who clears Chartered Accountants exam

ಕುಂದಾಪುರ, ಜು.17: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಇವರಿಂದ ಮೇ 2023 ನೇ ಸಾಲಿನಲ್ಲಿ ನಡೆದ ಪರೀಕ್ಷೆಯಲ್ಲಿ ತೆರ್ಗಡೆಯಾದ ಕುಂದಾಪುರದ ವಿನಾರ್ಡ್ ಜೆ. ಡಿಕೋಸ್ತಾ ಇವರನ್ನು ಕುಂದಾಪುರ ಕಥೊಲಿಕ್ ಸಭಾ ಘಟಕವು ಭಾನುವಾರ (ಜು.16) ನಡೆದ ಸಮಾರಂಭದಲ್ಲಿ ಕಥೊಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕರಾದ ಅ|ವಂ| ಸ್ಟ್ಯಾನಿ ತಾವ್ರೊ ಮುಂದಾಳತ್ವದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಕಥೊಲಿಕ್ ಸಭಾ ಕೇಂದ್ರಿಯ ಮಾಜಿ ಅಧ್ಯಕ್ಷ ಕಿರಣ್ ಕ್ರಾಸ್ಟೊ, ಕುಂದಾಪುರ ವಲಯ ಕಥೊಲಿಕ್ ಸಭಾದ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ, ಕುಂದಾಪುರ ಕಥೊಲಿಕ್ ಸಭೆಯ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ, ಕಾರ್ಯದರ್ಶಿ ವಾಲ್ಟರ್ ಡಿಸೋಜಾ, ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ವಿನಾರ್ಡ್ ಡಿಕೋಸ್ತಾರ ತಂದೆ, ಕಥೊಲಿಕ್ ಸಭಾ ನಿರ್ಗಮನ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ ತಾಯಿ, ಸ್ತ್ರಿ ಸಂಘಟನೇಯ ನಿರ್ಗಮನ ಅಧ್ಯಕ್ಷೆ ವಿನಯಾ ಡಿಕೋಸ್ತಾ ಮತ್ತು ಇತರರು ಉಪಸ್ಥಿತರಿದ್ದರು.

Kundapur Catholic Sabha felicitates Vinard DCosta who clears Chartered Accountants exam

Kundapur, June 17: Vinard J. of Kundapur passed the examination held in May 2023 by the Institute of Chartered Accountants of India. Vinard DCosta was received by the Kundapur Catholic Church unit in a ceremony held on Sunday (June 16) with the spiritual director of the Catholic Church, Rev. Stany Tavro presided over the felicitation and felicitation. On this occasion, Kiran Crasto, former president of Catholic sabha Central Kundapur Zone Catholic Assembly President Wilson DAlmeida, Kundapur Catholic Assembly President Shaila DAlmeida, Secretary Walter D’Souza, Board of Trustees Vice President Shalette Rebello, Secretary Asha Carvalho, Commissions Coordinator Prema DCunha, Father Vinard DCosta, Catholic Assembly Mother of Outgoing President Bernard DCosta, Outgoing President of Women’s Organization Vinaya DCosta and others were present.