ಪಟ್ಟಣದ ನಾನಾ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ

ಶ್ರೀನಿವಾಸಪುರ : ಪಟ್ಟಣದ ನಾನಾ ಕಡೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನಸಾಮಾನ್ಯರು ಒಬ್ಬಂಟಿಯಾಗಿ ಓಡಾಡುವುದು ಕಷ್ಟಕರವಾಗಿದೆ.

ಮೊಹಲ್ಲಾ , ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿ ನಾಯಿಗಳ ಚಿಕ್ಕ ಮಕ್ಕಳು ಮೇಲೆ, ವಾಹನ ಸವಾರರ ಮೇಲೆ ದಾಳಿ ಮಾಡುತ್ತವೆ. ಕೆಲ ನಾಯಿಗಳು ಬೈಕ್‌, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ವಾಹನ ಸವಾರರು ಆತಂಕ ಪಡಬೇಕಾಗಿದೆ.

ರಸ್ತೆಯಲ್ಲಿ ಚಿಕ್ಕ ಮಕ್ಕಳು, ವಯೋವೃದ್ಧರು ಸಂಚಾರ ಮಾಡಲು ಹಿಂದೇಟು ಹಾಕುವಂತಾಗಿದೆ. ರಾತ್ರಿ ವೇಳೆ ಗಫರ್ ಖಾನ್ ಮೊಹಲ್ಲಾ, ಜಾಕಿರ್ ಹುಸೇನ್ ಮೊಹಲ್ಲಾ, ಆಜಾದ್ ರಸ್ತೆ, ಹೈದರ್ ಅಲಿ ಮೊಹಲ್ಲಾ ವಾರ್ಡ್‌, ನಿವಾಸಿಗಳ ನಿದ್ದೆಗೆಡಿಸುತ್ತಿರುವ ಬೀದಿ ನಾಯಿಗಳು ಉಪಟಳ ಹೆಚ್ಚಾಗಿದೆ.

ಜಾಕಿರ್ ಹುಸೇನ್ ಮೊಹಲ್ಲಾ , ಗಫರ್ ಖಾನ್ ಮೊಹಲ್ಲಾ, ಆಜಾದ್ ರಸ್ತೆ, ಹೈದರ್ ಅಲಿ ಮೊಹಲ್ಲಾ ಮಕ್ಕಳನ್ನು ಮನೆಯಿಂದ ಹೊರಗೆ ಬಿಡುವುದು , ಭಯಾನಕ ಮತ್ತು ಅಸುರಕ್ಷಿತವಾಗಿದೆ ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ನಾಯಿಗಳ ದಾಳಿಯ ಅನೇಕ ಘಟನೆಗಳು ಸಹ ನಡೆದಿವೆ .

ಬೀದಿ ನಾಯಿಗಳ ಹಾವಳಿ ತಪ್ಪಿಸುವಂತೆ ಪುರಸಭೆಗೆ ಸ್ಥಳೀಯರು ಮನವಿ ಸಲ್ಲಿಸಿದ್ದಾರೆ. ಆದರೆ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಪರಿಣಾಮ ಸಾರ್ವಜನಿಕರು ಪುರಸಭೆಗೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದಾರೆ.

ಪಟ್ಟಣದ ಜಾಕಿರ್ ಹುಸೇನ್ ಮೊಹಲ್ಲಾ, ಗಫರ್ ಖಾನ್ ಮೊಹಲ್ಲಾ, ಆಜಾದ್ ರಸ್ತೆ, ಹೈದರ್ ಅಲಿ ಮೊಹಲ್ಲಾದ ರಸ್ತೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.

ಆಜಾದ್ ರಸ್ತೆ, ಮಾರ್ಗದ ರಸ್ತೆಗಳಲ್ಲಿ ಮಾಂಸದಂಗಡಿಗಳು ಇವೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ನಾಯಿಗಳು ಕಾಣಿಸುತ್ತವೆ ನಾಯಿಗಳು ಚೆಲ್ಲಾಟ ಹೆಚ್ಚಾಗಿದೆ. ನಾಯಿಗಳ ಹಾವಳಿ ತಡೆಯಲು ಸುಮಾರು ಕೆಲ ವರ್ಷಗಳ ಹಿಂದೆ ಪುರಸಭೆ ವಿಷ ಹಾಕಿ ನಾಯಿಗಳನ್ನು ಕೊಂದಿತ್ತು. ಇದರಿಂದ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಆದ್ದರಿಂದ ಪುರಸಭೆ ಅಧಿಕಾರಿಗಳ ಬೀದಿ ನಾಯಿಗಳ ನಿಯಂತ್ರಣಕ್ಕೆ ಹೋಗುವುದನ್ನು ಬಿಟ್ಟಿತ್ತು. ಅಲ್ಲಿಂದ ಇಲ್ಲಿಯವರೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.

ಸಂತಾನ ತಡೆ ಚಿಕಿತ್ಸೆ ಮಾಡುವುದರಿಂದ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮಾಡಬಹುದು. ಆದರೆ, ಈ ಕಾರ್ಯಕ್ಕೆ ಪುರಸಭೆ ಮುಂದಾಗುತ್ತಿಲ್ಲ. ಆದ್ದರಿಂದ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಬೀದಿ ನಾಯಿಗಳ ಉಪಟಳಕ್ಕೆ ಜನ ಕಂಗಾಲಾಗಿದ್ದಾರೆ. ಪುರಸಭೆ ಇವುಗಳ ನಿಯಂತ್ರಣ ಮಾಡುವುದಕ್ಕೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏಡ್ಸ್ ನ್ನು ಸಂಪೂರ್ಣ ಸಂಹಾರ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು; ಎನ್.ಎಂ.ನಾಗರಾಜ

ಕೋಲಾರ,ಜು.15: ಏಡ್ಸ್ ಎಂಬ ವ್ಯಾದಿಯನ್ನು ಸಮಾಜದಿಂದ ಸಂಪೂರ್ಣ ಸಂಹಾರ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕೆಂದು, ರಾಜ್ಯ ಏಡ್ಸ್ ನಿಯಂತ್ರಣ ಸಂಘದ ಯೋಜನಾ ನಿರ್ದೇಶಕರು ಆಗಿರುವ ಐ.ಎ.ಎಸ್.ಅಧಿಕಾರಿ ಎನ್.ಎಂ.ನಾಗರಾಜ ಅವರು ಸೂಚಿಸಿದರು.
ನಗರದ ಎಸ್.ಎನ್.ಆರ್.ಆಸ್ಪತ್ರೆಗೆ ದಿಢೀರ್ ಭೇಟಿನೀಡಿ ಇಲ್ಲಿನ ಏಡ್ಸ್ ನಿಯಂತ್ರಣ ವಿಭಾಗ, ಎ.ಆರ್.ಟಿ.ಕೇಂದ್ರ, ಬ್ಲಡ್ ಬ್ಯಾಂಕ್ ಮತ್ತು ಪಿ.ಪಿ.ಟಿ.ಸಿ ಕೇಂದ್ರಗಳನ್ನು ಪರಿಶೀಲಿಸಿ, ದಾಖಲೆಗಳನ್ನು ವೀಕ್ಷಿಸಿ, ವೈದ್ಯಾಧಿಕಾರಿಗಳು, ತಜ್ಞ ಸಿಬ್ಬಂದಿ ಹಾಗೂ ನೌಕರರೊಡನೆ ಸಮಾಲೋಚನೆ ನಡೆಸಿದರು.
ಜಿಲ್ಲೆಯಲ್ಲಿ ಏಡ್ಸ್ ಹಬ್ಬುವಿಕೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದ್ದು, ಇದನ್ನು ಕೆಲವೇ ವರ್ಷಗಳಲ್ಲಿ ಶೂನ್ಯಕ್ಕೆ ತರಬೇಕು. ಈಗಾಗಲೇ ಇರುವ ಸೋಂಕಿತರಿಗೆ ನಿಯಮದಂತೆ ಚಿಕಿತ್ಸೆ ಮುಂದುವರೆಸಬೇಕು. ಹೊಸ ಸೋಂಕು ಹರಡದಂತೆ ಜನರಲ್ಲಿ ಅದರಲ್ಲೂ ಮುಖ್ಯವಾಗಿ ಯುವ ಜನತೆಯಲ್ಲಿ ಆರೋಗ್ಯದ ಮಹತ್ವದ ಅರಿವು, ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮನದಟ್ಟು ಮಾಡಬೇಕೆಂದು ಒತ್ತಿ ಹೇಳಿದರು.
ಏಡ್ಸ್ ನಿಯಂತ್ರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತ್ಯೇಕ ಇಲಾಖೆಯನ್ನೇ ತೆರೆದಿದ್ದು, ಕೋಟ್ಯಂತರ ರೂಗಳನ್ನು ವ್ಯಯಿಸಲಾಗುತ್ತಿದೆ. ಪೊಲಿಯೋ, ಕ್ಷಯ ಸೇರಿದಂತೆ ಇತರೆ ಗಂಭೀರ ಕಾಯಿಲೆಗಳನ್ನು ಕೊನೆಗಾಣಿಸಿದಂತೆ, ಏಡ್ಸ್‍ನ್ನು ಸಹ ಸಮಾಜದಿಂದ ಮುಕ್ತಗೊಳಿಸಬೇಕು, ಹೊಸ ಸೋಂಕು ಹರಡದಂತೆ ಅರಿವು, ಸೂಕ್ತ ಚಿಕಿತ್ಸೆ ಮೂಲಕ ಸಾವುಗಳನ್ನು ತಡೆಯುವಂತೆ ಮಾಡಬೇಕು. ಚಿಕಿತ್ಸೆ ಪ್ರಾರಂಭಿಸಿ ಮತ್ತೆ ಬಾರದಿರುವ ಸೋಂಕಿತರನ್ನು ಟ್ರ್ಯಾಕ್ ಮಾಡಿ ಹುಡುಕಿ ಚಿಕಿತ್ಸೆ ನೀಡುವ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ಎಸ್.ಎನ್.ಆರ್.ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಎನ್.ವಿಜಯಕುಮಾರ್, ನಿವಾಸಿ ವೈದ್ಯಾಧಿಕಾರಿ ಡಾ.ಬಾಲಸುಂದರ್, ಜಿಲ್ಲಾ ಅಂಧತ್ವ ನಿವಾರಣಾಧಿಕಾರಿ ಡಾ.ಎನ್.ಸಿ.ನಾರಾಯಣಸ್ವಾಮಿ, ರಕ್ತನಿಧಿ ವೈದ್ಯಾಧಿಕಾರಿ ಡಾ.ರೇವತಿ, ಸಿಬ್ಬಂದಿಗಳಾದ ಹೇಮಲತಾ, ಶ್ರೀನಿವಾಸ್, ಶಿವಾರೆಡ್ಡಿ, ಸುಮತಿ, ಸಂಗೀತ ಮತ್ತಿತರರು ಉಪಸ್ಥಿತರಿದ್ದರು.

ಕುಂದಾಪುರ ಹೋಲಿ ರೋಜರಿ ಮಾತಾ ಚರ್ಚಿನಲ್ಲಿ ಕಾರ್ಮೆಲ್ ಮಾತೆಯ ಹಬ್ಬ

ಕುಂದಾಪುರ, ಜು.16: ಕುಂದಾಪುರ ಹೋಲಿ ರೋಜರಿ ಮಾತಾ ಚರ್ಚಿನಲ್ಲಿ  ಸ್ಥಳಿಯ ಸಂತ ಜೋಸೆಫ್ ಕಾನ್ವೆಂಟಿನ ಆಪೊಸ್ತಲಿಕ್  ಕಾರ್ಮೆಲ್ ಸಂಸ್ಥೆಯ ಧರ್ಮ ಭಗಿನಿಯರು, ತಮ್ಮ ಪಾಲಕಿ ಕಾರ್ಮೆಲ್ ಮಾತೆಯ ಹಬ್ಬವನ್ನು ಜುಲಾಯ್ 16 ರಂದು ಆಚರಿಸಿದರು.
ಹಬ್ಬದ ಬಲಿದಾನವನ್ನು ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಅ|ವಂ|ಸ್ಟ್ಯಾನಿ ತಾವ್ರೊ  ದಿವ್ಯ ಬಲಿ ಪೂಜೆಯನ್ನು ಅರ್ಪಿಸಿ ಕಾರ್ಮೆಲ್  ಮಾತೆಯ ಮಹತ್ವವನ್ನು ವಿವರಿಸಿ “ದೇವರ ವಾಕ್ಯಗಳು ಮುತ್ತಿನಂತೆ, ಅವಗಳನ್ನು ಕಳೆದುಕೊಳ್ಳದೆ ಸಂಪಾದಿಸಿಕೊಳ್ಳಬೇಕು. ಕಾರ್ಮೆಲ್ ಮಾತೆ ನಮ್ಮ ರಕ್ಷಕಿ, ಅವಳು ಕಾರ್ಮೆಲ್ ಮೇಳದ ಧರ್ಮಗುರುಗಳಿಗೆ ಪೋಷಾಕನ್ನು ನೀಡಿ ಇದು ನಿಮಗೆ ರಕ್ಷಾ ಕವಚಾ, ಇದನ್ನು ಧರಿಸಿದರೆ ನಿಮಗೆ ಮತ್ತು ನಿಮ್ಮ ಆತ್ಮಕ್ಕೆ ರಕ್ಷೆ ಸಿಗುವುದು ಎಂದು ತಿಳಿಸಿ” ಕಾರ್ಮೆಲ್ ಮಾತೆ ಬೆಂತಿಣ್ ಗಳನ್ನು ಆಶಿರ್ವದಿಸಿದರು. ಕಾರ್ಮೆಲ್ ಮೇಳದ ಧರ್ಮಭಗಿನಿಯರು ಬೆಂತಿಣ್ ಗಳನ್ನು ಭಕ್ತಾಧಿಗಳಿಗೆ ವಿತರಿಸಿದರು. ಅಂದಿನ ದಿವ್ಯ ಬಲಿದಾನದ ಪ್ರಾರ್ಥನ ವಿಧಿಯಲ್ಲಿ ಕಾರ್ಮೆಲ್ ಮೇಳದ ಧರ್ಮಭಗಿನಿಯರು ಭಾಗಿಯಾದರು. ಸಹಾಯಕ ಧರ್ಮಗುರು ವಂ| ಅಶ್ವಿನ್ ಅರಾನ್ನಾ ಸಹಕರಿಸಿದರು.
    ಕಾನ್ವೆಂಟಿನ ನೂತನ ಮುಖ್ಯಸ್ಥೆ ಭಗಿನಿ ಸುಪ್ರಿಯಾ, ಕಾರ್ಮೆಲ್ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಭಗಿನಿ ಆಶಾ, ಇತರ ಸಂತ ಜೋಸೆಫ್ ಕಾನ್ವೆಂಟಿನ ಕಾರ್ಮೆಲ್ ಭಗಿನಿಯರು ಹಾಗೂ ಕಾರ್ಮೆಲ್ ಭಗಿನಿಯರ ಸಹಾಯಕರ ಬ್ಲೊಸಮ್ ಪಂಗಡದವರು ಹಾಜರಿದ್ದು, ಈ ಹಬ್ಬದ ದಿವ್ಯ ಬಲಿಪೂಜೆಯಲ್ಲಿ ಹಲವಾರು ಭಕ್ತರು ಹಾಜರಿದ್ದರು.

ಕುಂದಾಪುರದಲ್ಲಿ ಜನಸಾಮನ್ಯರ ದಿನ ; ಕಥೊಲಿಕ್ ಸಭೆಗೆ ಸೇವೆ ಸಲ್ಲಿಸಿದ ಅಧ್ಯಕ್ಷರುಗಳಿಗೆ ಸನ್ಮಾನ


ಕುಂದಾಪುರ, ಜು. 16: ಕುಂದಾಪುರ ಹೋಲಿ ರೋಜರಿ ಚರ್ಚಿನ ಜನಸಾಮಾನ್ಯರ ಆಯೋಗ ಮತ್ತು ಕುಂದಾಪುರ ಘಟಕ ಕಥೊಲಿಕ್ ಸಭಾ ವತಿಯಿಂದ ಮೊದಲು ಚರ್ಚಿನನಲ್ಲಿ ಕ್ರತ್ಞತಾ ಬಲಿದಾನವನ್ನು ಅರ್ಪಿಅಸಾಲಾಯಿತು.
ನಂತರ ನೆಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಥೊಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕರಾದ ಅ|ವಂ| ಸ್ಟ್ಯಾನಿ ತಾವ್ರೊ ಮುಖ್ಯ ಅತಿಥಿಯಾಗಿ 1981 ಇಸವಿಯಿಂದ ನಡೆದು ಬಂದ ಕಥೊಲಿಕ್ ಸಭಾ ಸಂಘಟನೇಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅಧ್ಯಕ್ಷರುಗಳಿಗೆ ಶಾಲು ಹೊದೆಸಿ ಹೂ ನೀಡಿ ಸನ್ಮಾನಿಸಲಾಯಿತು.
ಕಥೊಲಿಕ್ ಸಭಾದ ಅಧ್ಯಕ್ಷರಾಗಿ ಈ ಹಿಂದೆ ಸೇವೆ ಸಲ್ಲಿಸಿದ ವಿಕ್ಟರ್ ಡಿಸೋಜಾ, ವಿನಯ ಪಾಯ್ಸ್, ಜೊನ್ಸನ್ ಡಿಆಲ್ಮೆಡಾ, ವಿನೋದ್ ಕ್ರಾಸ್ಟೊ, ವಿಲ್ಸನ್ ಒಲಿವೆರಾ, ಎಲಿಜಬೆತ್ ಡಿಸೋಜಾ, ವಿಲ್ಸನ್ ಡಿಆಲ್ಮೇಡಾ, ಶೈಲಾ ಡಿಆಲ್ಮೇಡಾ, ವಾಲ್ಟರ್ ಡಿಸೋಜಾ ಮತ್ತು ಬರ್ನಾಡ್ ಡಿಕೋಸ್ತಾ ಇವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ನಿಧನರಾಗಿದ್ದ ಫಿಲಿಪ್ ಗೊನ್ಸಾಲ್ವಿಸ್ ಪರವಾಗಿ ಅವರ ಸಂಬಂಧಿ ಫಿಲಿಫ್ ಗೊನ್ಸಾಲ್ವಿಸ್, ಜೆ.ಬಿ.ಡಿಸೋಜಾರ ಪರವಾಗಿ ಅವರ ಪತ್ನಿ ಆಯ್ರಿನ್ ಡಿಸೋಜಾ, ಜೇಕಬ್ ಡಿಸೋಜಾರ ಪರವಾಗಿ ಅವರ ಪತ್ನಿ ಆಲಿಸ್ ಡಿಸೋಜಾ, ಡೋರಾ ಲೋಬೊರ ಪರವಾಗಿ ಅವರ ಪತಿ ಸ್ಟ್ಯಾನಿ ಲೋಬೊ, ಇವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಅ|ವಂ| ಸ್ಟ್ಯಾನಿ ತಾವ್ರೊ ಮಾತನಾಡಿ ಪವಿತ್ರ ಸಭೆ ಮುನ್ನೆಡೆಯಲು ಜನಸಾಮಾನ್ಯರ ಅವಶ್ಯಕತೆ ತುಂಬ ಇದೆ, ಪವಿತ್ರ ಸಭೆಗಾಗಿ ಮತ್ತು ನಮ್ಮ ಸಮಾಜಕ್ಕಾಗಿ ಸೇವೆ ನೀಡುವ ಕಥೊಲಿಕ್ ಸಭಾ ಸಂಸ್ಥೆ ನಮಗೆ ತುಂಬಾ ಹೆಮ್ಮೆಯ ಸಂಸ್ಥೆ, ಅದು ಯಾವಾಗಲೂ ಜನಸಾಮಾನ್ಯರಿಗಾಗಿ ಸೇವೆ ನೀಡುತ್ತಿದೆ’ ಎಂದು ಶ್ಲಾಘಿಸಿದರು. ಸನ್ಮಾನ ಕಾರ್ಯಕ್ಕೆ ಸಹಕರಿಸಿದ ಇನ್ನೊರ್ವ ಅತಿಥಿ ವರ್ಕರ್ಸ್ ಇಂಡಿಯಾ, ಫೆಡೆರೇಶನ್ ಆಲ್ ಇಂಡಿಯಾ ಕಥೊಲಿಕ್ ಬಿಷಪ್ ಕೊನ್ಫೆರೆನ್ಸ್ ಇದರ ಖಜಾಂಚಿ ಕಿರಣ್ ಕ್ರಾಸ್ಟೊ ಮಾತನಾಡಿ ‘ಕುಂದಾಪುರದಲ್ಲಿ ಜನಸಾಮನ್ಯರ ಸಂಘ ಚಟುವಟಿಕೆಗಳು 1977 ರಲ್ಲೇ ಪ್ರಾರಂಭಗೊಂಡಿದ್ದು, ಆಗಲೇ ಜನಸಾನ್ಯರಲ್ಲಿ ನಾಯಕತ್ವ ಗುಣಗಳಿಂದ ಮುನ್ನೆಲೆಗೆ ಬಂದಿದ್ದರು, ಇಂದು ಕಥೊಲಿಕ್ ಸಭಾ ಬಲಗೊಳ್ಳಲು ಕುಂದಾಪುರವೇ ಕಾರಣವಾಗಿದೆ. ಕುಂದಾಪುರ ಘಟಕ ಮಾಡುವ ಕಾರ್ಯವಿಧಾನಗಳು ಎಲ್ಲಾ ಕಥೊಲಿಕ್ ಸಭಾ ಘಟಕಗಳಿಗೆ ಪ್ರೇರಣೆಯಾಗಿದೆ” ಎಂದು ತಿಳಿಸಿದರು. ಕುಂದಾಪುರ ಘಟಕ ಅವರನ್ನು ಸನ್ಮಾನಿಸಿತು. ರೋಜರಿ ಚರ್ಚಿನ ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ ಮತ್ತು ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ಇವರನ್ನು ಕೂಡ ಜನಸಾಮಾನ್ಯರ ದಿನಾಚರಣೆಯ ಪರವಾಗಿ ಸನ್ಮಾನಿಸಲಾಯಿತು. ಕುಂದಾಪುರ ವಲಯ ಕಥೊಲಿಕ್ ಸಭಾ ಅಧ್ಯಕ್ಷ ‘ಕಥೊಲಿಕ್ ಸಭೆಯ ಸದಸ್ಯರಾಗಲು ಯುವಕರು ಹೆಚ್ಚು ಆಸಕ್ತಿ ವಹಿಸಬೇಕೆಂದು’ ಆಗ್ರಹಿಸಿದರು. ಅತಿಥಿಯಾಗಿ ಆಗಮಿಸಿದ್ದ ಪ್ರಸಿದ್ದ ಹಾಸ್ಯ ನಟ ಅವರನ್ನು ಕೂಡ ಅವರ ಕಲಾ ಸೇವೆಗೆ ಸನ್ಮಾನಿಸಲಾಯಿತು.
ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನಾ, ಕಥೊಲಿಕ್ ಸಭಾ ನಿರ್ಗಮನ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ. ರೋಜರಿ ಚರ್ಚಿನ ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ ಮತ್ತು ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ವೇದಿಕೆಯಲಿದ್ದು, ಕಥೊಲಿಕ್ ಸಭಾದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಸ್ವಾಗತಿಸಿದರು, ಕಾರ್ಯದರ್ಶಿ ಕಾರ್ಯಕ್ರಮದ ಸಂಚಾಲಕ ವಾಲ್ಟರ್ ಡಿಸೋಜಾ ಧನ್ಯವಾದ ಅರ್ಪಿಸಿದರು. ಆಲ್ಡ್ರಿನ್ ಡಿಸೋಜಾ ನಿರೂಪಿಸಿದರು.

ಸೇಂಟ್ ಆಗ್ನೆಸ್ ಪಿಯು ಕಾಲೇಜು ‘ಪರಿಸರ ವಾರ’ವನ್ನು ಆಚರಿಸಿತು


ಮಂಗಳೂರು; ‘ಪರಿಸರ ವಾರ’ ಎಂಬುದು ವಿದ್ಯಾರ್ಥಿಗಳಿಗೆ ನಮ್ಮ ಪರಿಸರವನ್ನು ಕಲಿಯಲು ಮತ್ತು ಅರ್ಥಮಾಡಿಕೊಳ್ಳಲು ಒಂದು ಅಸಾಧಾರಣ ಅವಕಾಶವಾಗಿದೆ. ನಮ್ಮ ಜೀವನದಲ್ಲಿ ಮರಗಳು ಮತ್ತು ಕಾಡುಗಳ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಸೇಂಟ್ ಆಗ್ನೆಸ್ ಪಿಯು ಕಾಲೇಜು ‘ಪರಿಸರ ವಾರ’ವನ್ನು ಆಚರಿಸಿತು. ಇದರ ದೃಷ್ಟಿಯಿಂದ, ಜೀವಶಾಸ್ತ್ರ ವಿಭಾಗವು ಈ ಕೆಳಗಿನ ಚಟುವಟಿಕೆಗಳನ್ನು ಆಯೋಜಿಸಿದೆ.

  • ‘ಅಂತರರಾಷ್ಟ್ರೀಯ ರಾಗಿ ವರ್ಷ – 2023’ ಸ್ಮರಣಾರ್ಥವಾಗಿ ರಾಗಿಗಳ ರಂಗೋಲಿ ಪ್ರದರ್ಶನ
  • ನೆಡುತೋಪು ಕುರಿತು ಜಾಗೃತಿ ಮೂಡಿಸಲು ಸಸಿಗಳ ಪ್ರದರ್ಶನ.
  • ಪ್ಲಾಸ್ಟಿಕ್ ಮಾಲಿನ್ಯದಿಂದ ಪರಿಸರದ ರಕ್ಷಣೆಯನ್ನು ಉತ್ತೇಜಿಸುವ ಸಲುವಾಗಿ ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಿಸಿದ ಉಪಯುಕ್ತ ಪ್ಲಾಸ್ಟಿಕ್ ಉತ್ಪನ್ನಗಳ ಪ್ರದರ್ಶನ.
  • ಪರಿಸರ ಸಮಸ್ಯೆಗಳಿಗೆ ಸಂಬಂಧಿಸಿದ ಪೋಸ್ಟರ್‌ಗಳ ಪ್ರದರ್ಶನ.
  • ವಿದ್ಯಾರ್ಥಿಗಳಿಂದ ಸ್ಕಿಟ್ ರೂಪದಲ್ಲಿ ಪರಿಸರ ಜಾಗೃತಿ ಚಟುವಟಿಕೆ.
    ಹೀಗಾಗಿ ಪರಿಸರ ಸಪ್ತಾಹವು ಪರಿಸರವನ್ನು ರಕ್ಷಿಸಲು ಮತ್ತು ನಮ್ಮ ಗ್ರಹ ಭೂಮಿಯನ್ನು ಒಗ್ಗೂಡಿಸಲು ಮತ್ತು ಉಳಿಸಲು ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಅವಕಾಶವನ್ನು ಒದಗಿಸಿದೆ.

ಕಟ್ಕರೆ ಬಾಲ ಯೇಸುವಿನ ಆಶ್ರಮದಲ್ಲಿ ಕಾರ್ಮೆಲ್ ಮಾತೆಯ ಭಕ್ತಿ ಪೂರ್ವಕ ಹಬ್ಬ

ಕುಂದಾಪುರ, ಜು.16: ಕೊಟೇಶ್ವರ ಕಟ್ಕರೆ ಕಾರ್ಮೆಲ್ ಮೇಳದ ಧರ್ಮಗುರುಗಳ ಬಾಲ ಯೇಸುವಿನ ಆಶ್ರಮದಲ್ಲಿ ತಮ್ಮ ಮೇಳದ ಪಾಲಕಿಯಾದ ಕಾರ್ಮೆಲ್ ಮಾತೆಯ ಹಬ್ಬವನ್ನು ಜು. 15 ರಂದು ಭಕ್ತಿಪೂರ್ವಕವಾದ ದಿವ್ಯ ಬಲಿದಾನ ಅರ್ಪಿಸುವ ಮೂಲಕ ಆಚರಿಸಲಾಯಿತು.

     ಹಬ್ಬದ ಈ ಬಲಿದಾನವನ್ನು ಉಡುಪಿ ಧರ್ಮಪ್ರಾಂತ್ಯದ ಅ|ವಂ|ಮೊನ್ಸಿಂಜೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಇವರ ನೇತ್ರತ್ವದಲ್ಲಿ ನಡೆಯಿತು. ಅವರು ಕಾರ್ಮೆಲ್ ಮಾತೆಯ ವಿಶೇಷತೆಯನ್ನು ತಿಳಿಸಿ “ಕಾರ್ಮೆಲ್ ಮಾತೆ, ಕಾರ್ಮೆಲ್ ಮೇಳದ ಧರ್ಮಗುರುಗಳಿಗೆ ಕಾರ್ಮೆಲ್ ಗುಡ್ಡೆಯಲ್ಲಿ ಮೇರಿ ಮಾತೆ ಕಾರ್ಮೆಲ್ ಮಾತೆಯ ರೂಪದಲ್ಲಿ ಪ್ರತ್ಯೆಕ್ಷೆಯಾಗಿ, ಧರ್ಮಗುರುಗಳಿಗೆ ರಕ್ಷಣೆ ನೀಡುತ್ತೇನೆಂದು, ಪವಿತ್ರವಾದ ಪೋಷಾಕನ್ನು ಧರಿಸಲು ನೀಡಿದಳು, ಇದನ್ನು ನೀವು ಧರಿಸಿದರೆ ನೀವು ರಕ್ಷಣೆಗೆ ಪಾತ್ರರಾಗುತ್ತೀರಿ, ನಿಮ್ಮ ಆತ್ಮವು ನಾಶವಾಗಲಾರದು,  ಎಂದು ಹೇಳಿದಳು. ಅಂದು ಅದು ದೊಡ್ಡ ಪೋಷಾಕಾಗಿತ್ತು, ಥರಹ ನಾವು ಅದನ್ನು ಕೊರಳಲ್ಲಿ ಧರಿಸುತೀದ್ದೆವೆ, ನಾವು ಕಾರ್ಮೆಲ್ ಮಾತೆಯನ್ನು ಪ್ರೀತಿಸೋಣ, ಕಾರ್ಮೆಲ್ ಮಾತೆಯ ಸಾಂಗಾತ್ಯ ನಮಗೆ ಶಕ್ತಿ ನೀಡಲಿ” ಎಂದು ಅವರು  ತಮ್ಮ ಸಂದೇಶದಲ್ಲಿ ತಿಳಿಸಿದರು.       

    ಕುಂದಾಪುರ ವಲಯ ಪ್ರಧಾನರಾದ ಅ|ವಂ|ಸ್ಟ್ಯಾನಿ ತಾವ್ರೊ, ವಂ|ಧರ್ಮಗುರು ಸುನೀಲ್ ವೇಗಸ್, ವಂ|ಧರ್ಮಗುರು ಎಡ್ವಿನ್ ಡಿಸೋಜಾ, ವಂ|ಧರ್ಮಗುರು ಆಲ್ಬರ್ಟ್ ಕ್ರಾಸ್ತಾ, ವಂ|ಧರ್ಮಗುರು ರೆಜಿನಾಲ್ಡ್ ಪಿಂಟೊ, ವಂ|ಧರ್ಮಗುರು ಅನಿಲ್ ಕರ್ನೇಲಿಯೊ. ಕುಂದಾಪುರದ ಸಹಾಯಕ ಧರ್ಮಗುರು ವಂ|ಫಾ|ಅಶ್ವಿನ್ ಅರನ್ನಾ, ಕಟ್ಕೆರೆ ಬಾಲ ಯೇಸುವಿನ ಕಾರ್ಮೆಲ್ ಆಶ್ರಮದ ಧರ್ಮಗುರುಗಳಾದ ವಂ|ಧರ್ಮಗುರು ಜೋನ್ ಸಿಕ್ವೇರಾ, ವಂ|ಧರ್ಮಗುರು ಜೋ ತಾವ್ರೊ, ವಂ|ಧರ್ಮಗುರು ಫ್ರಾನ್ಸಿಸ್ ಡಿಸೋಜಾ ಮತ್ತು ಹಲವಾರು ಅತಿಥಿ ಧರ್ಮಗುರುಗಳು ದಿವ್ಯ ಬಲಿ ಪೂಜೆಯನ್ನು ಅರ್ಪಿಸಿದರು.    

   ಕೊಟೇಶ್ವರ ಇಗರ್ಜಿ ಮತ್ತು ಕಟ್ಕರೆ ಬಾಲಯೇಸುವಿನ ಆಶ್ರಮದ ಮುಖ್ಯಸ್ಥರಾದ ವಂ|ಧರ್ಮಗುರು ಪ್ರವೀಣ್ ಪಿಂಟೊ ಸ್ವಾಗತಿಸಿ ಕೊನೆಗೆ ವಂದಿಸಿದರು. ಕಟ್ಕೆರೆ ಬಾಲ ಯೇಸು ಆಶ್ರಮದ ಸಹಾಯಕ ವಂ|ಧರ್ಮಗುರು ಜೋ ಸಿದ್ದಕಟ್ಟೆ ದಾನಿಗಳ ಹಾಗೂ ಪೂಜೆ ನಿವೇದನೆ ಮಾಡಿಕೊಂಡವರ ಹೆಸರುಗಳನ್ನು ವಾಚಿಸಿದರು.  ವಂ|ಫಾ| ಆಲ್ವಿನ್ ಸಿಕ್ವೇರಾ ನಿರ್ದೇಶನದಲ್ಲಿ ಕುಂದಾಪುರ ಚರ್ಚ್ ಗಾಯನ ಪಂಗಡ ದಿವ್ಯ ಬಲಿಪೂಜೆಗೆ ಭಕ್ತಿ ಗೀತೆ ಹಾಡಿ ಸಹಕರಿಸಿತು. ಈ ಕಾರ್ಮೆಲ್ ಮಾತೆಯ ಹಬ್ಬಕ್ಕೆ ಅನೇಕ ಧರ್ಮಭಗಿನಿಯಯರು ಹಾಜರಿದ್ದು, ಕುಂದಾಪುರ ವಲಯ ಹಾಗೂ ಇತರ ಕಡೆಯಿಂದ ಭಕ್ತಾಧಿಗಳು ಈ ಹಬ್ಬದಲ್ಲಿ ಪಾಲ್ಗೊಂಡರು.