ಸರಳ ಇಂಗ್ಲೀಷ್ ಕಲಿಕೆಗೆ ಪೂರಕ ಚಟುವಟಿಕೆ ಆಧಾರಿತ ಪುಸ್ತಕಗಳನ್ನು ಕೊರವಡಿ ಅಂಗನವಾಡಿ ಕೇಂದ್ರಕ್ಕೆ ಉಚಿತ ಕೊಡುಗೆ ನೀಡಿದ ಗೌತಮ್ ಶೆಟ್ಟಿ

ಕುಂದಾಪುರ: ಇಲ್ಲಿಗೆ ಸಮೀಪದ ಕೊರವಡಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ದಿನಾಂಕ 12 ಜುಲೈ, 2023ರಂದು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಛೇರ್ಮನ್ ಹಾಗೂ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷ ರಾಗಿರುವ ಶ್ರೀಯುತ ಗೌತಮ್ ಶೆಟ್ಟಿ ಮೂಲಕ ಸರಳ ಇಂಗ್ಲಿಷ್ ಕಲಿಕೆಗೆ ಪೂರಕವಾಗಿರುವ ಚಟುವಟಿಕೆ ಆಧಾರಿತ ಪುಸ್ತಕಗಳನ್ನುಉಚಿತವಾಗಿ ವಿತರಿಸಲಾಯಿತು.

”ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಶಿಕ್ಷಿತ ಮಗು ರಾಷ್ಟ್ರವನ್ನು ನಿರ್ಮಿಸುತ್ತದೆ” ಎಂಬ ಚಿಂತನೆಯನ್ನು ದಾನಿಗಳಾದ ಗೌತಮ್ ಶೆಟ್ಟಿಯವರು ಹೊಂದಿದ್ದು ಅವರ ಬೆಂಬಲದೊಂದಿಗೆ ಮಕ್ಕಳ ಶಿಕ್ಷಣದ ಅಭಿವೃದ್ಧಿಗಾಗಿ ಶಾಲಾ ಮಕ್ಕಳಿಗೆ ಉಪಯೋಗವಾಗುವ ಪುಸ್ತಕಗಳನ್ನು ಅವರು ಪ್ರಾಯೋಜಿಸಿದ್ದಾರೆ. ಇದು ಗೌತಮ್ ಶೆಟ್ಟಿಯವರ ಒಂದು ಸೂಕ್ಷ್ಮ ಯೋಜನೆ. ಬಡ ಶಾಲಾ ಮಕ್ಕಳು ಈ ಶಾಲಾ ಶಿಕ್ಷಣ ಪುಸ್ತಕಗಳಿಂದ ಪ್ರಯೋಜನ ಪಡೆಯಲಿದ್ದಾರೆ.

ಬಡ ವಂಚಿತ ಮಕ್ಕಳಿಗೆ ಅವರ ಅಧ್ಯಯನದ ಸಮಯದಲ್ಲಿ ಯಾವುದೇ ರೀತಿಯ ಅನಾನುಕೂಲತೆ ಉಂಟಾಗದಂತೆ ಶಿಕ್ಷಣದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಯೋಜನೆಯ ಮೂಲಕ, ಶಿಕ್ಷಣದ ಅಭಿವೃದ್ಧಿಗೆ ಸ್ವಲ್ಪ ಪ್ರಯತ್ನ ಮಾಡಿದರೆ ವಂಚಿತ ಬಡ ಮಕ್ಕಳ ಭವಿಷ್ಯ ಬದಲಾಗಲಿದೆ ಮತ್ತು ಅನಕ್ಷರತೆ ನಿವಾರಣೆಯಾಗುತ್ತದೆ ಎನ್ನುವುದು ಗೌತಮ್ ಶೆಟ್ಟಿಯವರ ಚಿಂತನೆ.

ಈ ಕಾರ್ಯಕ್ರಮಕ್ಕೆ ಶಾಲಾ ಸಿಬ್ಬಂದಿ, ಪೋಷಕರು ಹಾಗೂ ಮಕ್ಕಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸಂಧರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ್ ಹತ್ವಾರ್ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಶ್ರೀಮತಿ ಪ್ರಭಾವತಿ ಶೆಟ್ಟಿ, ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ಸರೋಜಾ, ಅಂಗನವಾಡಿ ಹಿತೈಷಿ ದಿನೇಶ್, ಮುಖ್ಯ ಶಿಕ್ಷಕಿ ಮಾಲತಿ ಶೆಟ್ಟಿ,ದಿನೇಶ್ ಮೊಗವೀರ ಉಪಸ್ಥಿತರಿದ್ದರು. ಸಹಶಿಕ್ಷಕಿ ನೇತ್ರಾ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಶಾಂತಿ ಡಿಸೋಜಾ, ಶ್ರೀಮತಿ ಶೋಭಾ ಪೂಜಾರ್ತಿ, ಅತಿಥಿ ಶಿಕ್ಷಕಿ ಸುದೀಪ, ಗೌರವ ಶಿಕ್ಷಕಿಯರಾದ ಜ್ಯೋತಿ, ಪ್ರಮೀಳಾ, ಕಾವ್ಯ, ಅಂಗನವಾಡಿ ಸಹಾಯಕಿ ಪದ್ಮಾವತಿ ಸಹಕರಿಸಿದರು. ಅಂಗನವಾಡಿ ಶಿಕ್ಷಕಿ ಶ್ರೀಮತಿ ಶೋಭಾ ವಂದನಾರ್ಪಣೆಗೈದರು.

ವರದಕ್ಷಿಣೆಯಾಗಿ ಕಾರು ಕೊಡದಿದ್ದಕ್ಕೆ ಕೇವಲ ಎರಡು ಗಂಟೆಯೊಳಗೆ ತಲಾಖ್

ಆಗ್ರಾ: ವರದಕ್ಷಿಣೆಯಾಗಿ ಕೊಡದಿದ್ದಕ್ಕೆ ಕಾರು ವರನೊಬ್ಬ ಕೇವಲ ಎರಡು ಗಂಟೆಯೊಳಗೆ ಮದುವೆಯಾದ ಎರಡೇ ಗಂಟೆಯಲ್ಲಿ ತನ್ನ ಪತ್ನಿಗೆ ತಲಾಖ್‌ ನೀಡಿರುವ ಅಘಾತಕಾರಿ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.

 ಇದೀಗ ಪೊಲೀಸರು ವರ ಮೊಹಮ್ಮದ್‌ ಆಸಿಫ್‌ ಸೇರಿದಂತೆ ಅರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.   ಈ ಕುರಿತು  ವಧುವಿನ ಸಹೋದರ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈ ಪ್ರಕರಣೆಕ್ಕೆ ಪ್ರತಿಕ್ರಿಯಿಸಿರುವ ವಧುವಿನ ಸಹೋದರ ಕಮ್ರಾನ್‌ ವಾಸಿ ನನ್ನ ಇಬ್ಬರು ಸಹೋದರಿಯರಾದ ಡಾಲಿ ಹಾಗೂ ಗೌರಿಗೆ ಒಂದೇ ದಿನ ಮದುವೆ ನಿಶ್ಚಯ ಮಾಡಲಾಗಿತ್ತು. ಮದುವೆಯಾದ ಬಳಿಕ ತನ್ನ ಓರ್ವ ತಂಗಿ ಗೌರಿ ತನ್ನ ಪತಿಯ ಮನೆಯವರೊಂದಿಗೆ ಮನೆಗೆ ಹೋಗಿದ್ದಾಳೆ. ಆದರೆ ಡಾಲಿಯ ಪತಿ ಮೊಹಮ್ಮದ್‌ ಆಸಿಫ್‌ ತನಗೆ ಪರದಕ್ಷಿಣೆಯಲ್ಲಿ ಕಾರು ಕೊಡಲಿಲ್ಲ ಎಂದು ತಗಾದೆ ತೆಗೆದಿದ್ದಾನೆ. ಇದಕ್ಕೆ ಒತ್ತು ನೀಡಿ ವರನ ಮನೆಯ ಕಡೆಯವರೂ ಇದೇ ವಿಚಾರದಲ್ಲಿ ತಗಾದೆ ತೆಗೆದು ಕಾರನ್ನು ಕೊಡಿಸುವಂತೆ ಕೇಳಿದ್ದಾರೆ. ಇಲ್ಲದಿದ್ದಲ್ಲಿ, ತಕ್ಷಣವೇ ಐದು ಲಕ್ಷ ರೂ. ಹಣ ಕೊಡುವಂತೆ ಬೇಡಿಕೆಯಿಟ್ಟಿದ್ದಾರೆ.

    ಈ ವೇಳೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಸಮಯ ಕೇಳಿದ್ದಕ್ಕಾಗಿ ಅವರು ಕುಪಿತಗೊಂಡು ಆತನ ಕುಟುಂಬಸ್ಥರು ಸ್ಥಳದಲ್ಲಿಯೇ ವರನ ಕಡೆಯಿಂದ ಮೂರು ಬಾರಿ ತಲಾಖ್‌ ಹೇಳಿಸಿ ಹೊರಟು ಹೋಗಿದ್ದಾರೆ.  ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದ್ದು, ಪರ ಮೊಹಮ್ಮದ್‌ ಅಸಿಫ್‌ ಹಾಗೂ ಅತನ ಕುಟುಂಬಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಲಾಗಿದೆ

ರೈತರು,ಪಿಂಚಣಿದಾರರು ಕಂದಾಯ ಹಾಗೂ ಪಿಂಚಣಿ ಅದಾಲತ್ ಪ್ರಯೋಜನ ಪಡೆದುಕೊಳ್ಳಬೇಕು : ತಹಶೀಲ್ದಾರ್ ಶಿರಿನ್ ತಾಜ್

ಶ್ರೀನಿವಾಸಪುರ: ರೈತರು ಹಾಗೂ ವಿವಿಧ ಯೋಜನೆಗಳ ಪಿಂಚಣಿದಾರರು ಕಂದಾಯ ಹಾಗೂ ಪಿಂಚಣಿ ಅದಾಲತ್ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.
ತಾಲ್ಲೂಕಿನ ರೋಣೂರಿನ ನಾಡ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಂದಾಯ ಹಾಗೂ ಪಿಂಚಣಿ ಅದಾಲತ್‍ಗೆ ಚಾಲನೆ ನೀಡಿ ಮಾತನಾಡಿ, ಕೃಷಿಕರು ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳು ತಾಲ್ಲೂಕು ಕಚೇರಿಗೆ ಬರುವುದನ್ನು ತಪ್ಪಿಸಲು ಹೋಬಳಿ ಕೇಂದ್ರದಲ್ಲಿ ಅದಾಲತ್ ನಡೆಸಲಾಗುತ್ತಿದೆ ಎಂದು ಹೇಳಿದರು.
ಅದಾಲತ್‍ನಲ್ಲಿ ಪಹಣಿ ಕಾಲಂ ನಂಬರ್ 3 ಮತ್ತು 9 ತಿದ್ದುಪಡಿಗೆ ಸಂಬಂಧಿಸಿದಂತೆ 9 ಪ್ರಕರಣಗಳು, 11ಇ ತಿದ್ದುಪಡಿಗೆ ಸಂಬಂಧಿಸಿದಂತೆ 24 ಪ್ರಕರಣಗಳ ಪೈಕಿ ಪಣಣಿಗೆ ಸಂಬಂಧಿಸಿದ 10, 3 ಮತ್ತು 9 ತಿದ್ದುಪಡಿಗೆ ಸಂಬಂಧಿಸಿದ 8 ಪ್ರಕರಣ ಸೇರಿದಂತೆ ಒಟ್ಟು 51 ಕಡತ ವಿಲೇವಾರಿ ಮಾಡಲಾಯಿತು.
ಉಪ ತಹಶೀಲ್ದಾರ್ ಕೆ.ಎಲ್.ಜಯರಾಮ್, ಕಂದಾಯ ನಿರೀಕ್ಷಕ ವಿನೋದ್ ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಇದ್ದರು.

ದೇಶವು ಪ್ರಗತಿಯತ್ತಾ ಸಾಗಲು ಯುವ ಜನತೆ ಸತ್ಪ್ರಜೆಗಳಾದರೆ ಮಾತ್ರ ಸಾಧ್ಯ – ಪಿಡಿಒ ನರೇಂದ್ರಬಾಬು

ಶ್ರೀನಿವಾಸಪುರ 1 : ದೇಶಕ್ಕೆ ಬೆನ್ನೆಲುಬಾದ ಆರೋಗ್ಯವಂತ ಯುವಕರೇ ದೇಶದ ಆಸ್ತಿ , ದೇಶವು ಪ್ರಗತಿಯತ್ತಾ ಸಾಗಲು ಯುವ ಜನತೆ ಸತ್ಪ್ರಜೆಗಳಾದ ಮಾತ್ರ ಸಾಧ್ಯ . ಆದ್ದರಿಂದ ಆರೋಗ್ಯವಂತ ಸಮಾಜಕ್ಕೆ ಯುವ ಸಮುದಾಯ ಇರಲೇಬೇಕು ಎಂದು ಪಿಡಿಒ ನರೇಂದ್ರಬಾಬು ಹೇಳಿದರು.
ರಾಯಲ್ಪಾಡು ಪ್ರೌಡಶಾಲೆಯಲ್ಲಿ ಗುರುವಾರ ಹೋಬಳಿಯ ಮಟ್ಟದ 2023-24 ನೇ ಸಾಲಿನ 6 ದಿನಗಳ ಕ್ರೀಡಾಕೂಟದ ಪೂರ್ವಭಾವಿ ಸಭೆಯನ್ನು ಉದ್ಗಾಟಿಸಿ ಮಾತನಾಡಿದರು.
ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಯು ಒಂದು ಅವಿಬಾಜ್ಯ ಅಂಗ ಕ್ರೀಡೆಯಲ್ಲಿ ಪಾಲ್ಗೂಳ್ಳುವುದರಿಂದ ವಿದ್ಯಾರ್ಥಿಗಳಿಗೆ ಓದುವುದಕ್ಕೆ ಮನಸ್ಸು ಉಲ್ಲಾಸವಾಗಿ ,ಏಕಾಗ್ರತೆಯು ಬೆಳೆಯುತ್ತದೆ ಎಂದು ತಿಳಿಸಿದರು. ಕ್ರೀಡೆಗಳು ಎಂದ ಮೇಲೆ ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಮನೊಬಾವ ಮರೆಯಬೇಕು ಎಂದರು.
ಇದೇ ತಿಂಗಳು 24 ರಿಂದ 29 ರ ವರೆಗೆ ನಡೆಯುವ ಕ್ರೀಡಾಕೂಟಕ್ಕೆ ಬೇಕಾದ ಊಟದ , ಬಹುಮಾನಗಳ ವ್ಯವಸ್ಥೆ ಹಾಗೂ ಇತರೆ ಕ್ರೀಡೆಗಳಿಗೆ ಬೇಕಾದ ಸೌಲಭ್ಯಗಳ ಕುರಿತು ಚರ್ಚಿಲಾಯಿತು.
ಹೋಬಳಿ ಮಟ್ಟದ ಕ್ರೀಡಾಕೂಟಗಳ ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಕೆ.ಎನ್.ರಾಮಚಂದ್ರ ಮಾತನಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಆಟವು ಒಂದು ಅಂಗವಾಗಿದ್ದು, ಶಿಕ್ಷಕರು ತಮ್ಮ ತಮ್ಮ ಶಾಲೆಗಳಿಗೆ ಸಂಬಂದಿಸಿದ ಕ್ರೀಡಾಶಕ್ತಿ ಇರುವಂತಹ ವಿದ್ಯಾರ್ಥಿಗಳನ್ನು ಕ್ರೀಡಾಕೂಟಕ್ಕೆ ಕರೆತರುವುದು ಎಂದು ಸಲಹೆ ನೀಡಿದರು. ಹೋಬಳಿ ಮಟ್ಟ ಕ್ರೀಡಾಕೂಟವನ್ನು ದಾನಿಗಳು, ಗ್ರಾಮಸ್ಥರು, ಪ್ರಾಥಮಿಕ , ಪ್ರೌಡಶಾಲಾ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಗ್ರಾಮದ ಮುಖಂಡರಾದ ಸಿಮೆಂಟ್‍ನಾರಾಯಣಸ್ವಾಮಿ, ಸಿ.ಎಸ್.ವೆಂಕಟರಮಣಪ್ಪ, ಆಂಜಿ, ಸಿ.ವಿ.ಮಂಜುನಾಥ್, ಚಕ್ಕಾ ಅಪ್ಪಿ, ಮುಖ್ಯ ಶಿಕ್ಷಕ ಪಿ.ಮಾರಣ್ಣ, ಸಿಆರ್‍ಪಿ ವರದರೆಡ್ಡಿ, ಮುಖ್ಯ ಶಿಕ್ಷಕರಾದ ಎಂ.ಕೆ.ವೆಂಕಟರಮಣ, ಮಂಜೇಶ್, ಕಾವೇರಿ ಶಾಲೆಯ ಮುಖ್ಯ ಶಿಕ್ಷಕ ಮಹೇಶ್, ತಪಸ್ವಿ ಶಾಲೆಯ ಶಿಕ್ಷಕ ಬಾಬು, ವಾಸವಿ ಶಾಲೆಯ ಶಿಕ್ಷಕ ಲಲಿತ , ಪ್ರೌಡಶಾಲಾ ಕಚೇರಿ ಸಿಬ್ಬಂದಿ ಆರೀಫ್ ಇದ್ದರು.

ಮಂಗಳೂರು:ಕಾರು ರಸ್ತೆ ಡಿವೈಡರ್ ವಿದ್ಯುತ್ ಕಂಬಕ್ಕೆ ಅಪ್ಪಳಿಸಿ, ಪ್ರಪಾತಕ್ಕೆ ಉರುಳುದು ಸ್ವಲ್ಪದರಲ್ಲೇ ಪಾರಾಗಿ ಅದೃಷ್ಟವಶಾತ್ ಮೂವರು ಬಚಾವ್

ಮಂಗಳೂರು. ನಗರದ ಕದ್ರಿ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ವಿದ್ಯುತ್ ಕಂಬಕ್ಕೆ ಹೊಡೆದು ಪಕ್ಕದ ರಸ್ತೆ ಬಿದ್ದಿದೆ. ಕಾರಿನಲ್ಲಿನಲ್ಲಿದ್ದವರು ಅದೃಷ್ಟವಶಾತ್ ಅಲ್ಪ ಸ್ವಲ್ಪ ಗಾಯಗಳಾಗಿ ಪಾರಾಗಿದ್ದಾರೆ. ಸ್ವಲ್ಪವೂ ಹೆಚ್ಚು ಕಡಿಮೆ ಆದಲ್ಲಿ ಕಾರು ಪಕ್ಕದಲ್ಲಿದ್ದ ಪ್ರಪಾತಕ್ಕೆ ಉರುಳಿ ದೊಡ್ಡ ಅನಾಹುತವಾಗುವುದು ತಪ್ಪಿದಂತಾಗಿದೆ.

   ಕದ್ರಿ ಸರ್ಕಿಟ್ ಹೌಸ್ ಬಿಜೈ ರಸ್ತೆ ಮಧ್ಯೆ ಬಟ್ಟಗುಡ್ಡೆ ಬಳಿ ಕಾರು ಅಪಘಾತ ಸಂಭವಿಸಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಅಲ್ಪಸ್ವಲ್ಪಗಾಯಗಳೊಂದಿಗೆ ಪವಾಡ ಸದೃಶ್ಯರಾಗಿ ಪಾರಾಗಿದ್ದಾರೆ. ಶುಕ್ರವಾರ ತಡರಾತ್ರಿ ಸುಮಾರು 12.30ರ ವೇಳೆಗೆ ಅಪಘಾತ ನಡೆದಿದೆ. ಸರ್ಕಿಟ್ ಹೌಸ್ ಕಡೆಯಿಂದ ಬಿಜೈ ಕಡೆಗೆ ವೇಗವಾಗಿ ಸಾಗುತ್ತಿದ್ದ ಮಾರುತಿ ಬಲೇನೋ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ವಿದ್ಯುತ್ ಕಂಬಕ್ಕೆ ಹೊಡೆದು ಪಕ್ಕದ ರಸ್ತೆ ಬಿದ್ದು ಅಲ್ಲಿದ್ದ ಪ್ರಪಾತದ ಹತ್ತಿರದಲ್ಲಿದ್ದ ಗಿಡ ಗಂಟಿಗಳ ಮಧ್ಯೆ ಸಿಲುಕಿಕೊಂಡಿದೆ. ಅಪಘಾತದ ತೀವ್ರತೆಗೆ ರಸ್ತೆಯ್ ಲೈಟ್ ಕಂಬ ಉರುಳಿ ದೂರಕ್ಕೆ ಎಸೆಯಲ್ಪಟ್ಟಿದೆ. ಸಂಚಾರಿ ಪೊಲೀಸರು ಪ್ರಕರಣವನ್ನು ದಾಖಲು ಮಾಡಿ ಕೊಂಡಿದ್ದಾರೆ.

ಸೈನ್ಸ್ ಕ್ಲೇ ಹಾಗೂ ಸೈನ್ಸ್ ಡಂಬ್‍ಷರಾಡ್ಸ್ ಸ್ಪರ್ಧೆಯಲ್ಲಿ ರಾಯಲ್ಪಾಡಿನ ಸಿ.ವಿ.ಸವಿತಾ ನೇತೃತ್ವದ ತಂಡಕ್ಕೆ ಪ್ರಥಮ ಬಹುಮಾನ

ಶ್ರೀನಿವಾಸಪುರ : ಬೆಂಗಳೂರಿನ ವಿಜಯ ಮೈನ್ಸ್ ಕಾಲೇಜುವತಿಯಿಂದ ಗುರುವಾರ ನಡೆದ ಸೈನ್ಸ್ ಕ್ಲೇ ಸ್ಪರ್ಧೆಯಲ್ಲಿ ಹಾಗು ಸೈನ್ಸ್ ಡಂಬ್‍ಷರಾಡ್ಸ್ ನಲ್ಲಿ ಪ್ರಥಮ ಬಹುಮಾನವನ್ನು ರಾಯಲ್ಪಾಡಿನ ಸಿ.ವಿ.ಸವಿತಾ ನೇತೃತ್ವದ ತಂಡ ಹರ್ಷಿತಾ, ಕೃಪಾವತಿ, ನೇತ್ರಾವತಿ, ಕಿರಣ್‍ಕುಮಾರ್ ರವರಿಗೆ ಪ್ರಾಂಶುಪಾಲರಾದ ಕೆ.ಎಸ್.ಶೈಲಜಾ ಬಹುಮಾನವನ್ನು ನೀಡಿ ಶುಭಕೋರಿದರು . ಉಪನ್ಯಾಸಕರಾದ ಡಾ. ಸುರೇಶ್, ಮೇಘನಾ, ಪ್ರಿಯದರ್ಶಿನಿ , ಜ್ಯೋತಿ, ಚೈತ್ರ , ಜೈಬಾ ಇದ್ದರು.