ರೈತರ ಅಲೆದಾಟಕ್ಕೆ ಬ್ರೇಕ್-ಪಹಣಿ ತಿದ್ದುಪಡಿ, ಬಾಕಿ ಪ್ರಕರಣ ವಿಲೇವಾರಿಗೆ ಜಿಲ್ಲಾಧಿಕಾರಿಗಳ ಕಟ್ಟಪ್ಪಣೆ-ಎಡಿಸಿ,ಸರ್ವೇ ಉಪನಿರ್ದೇಶಕರು,ಎಸಿಗೆ ಉಸ್ತುವಾರಿ

ಕೋಲಾರ:- ಸರ್ಕಾರಿ ಕಚೇರಿಗಳಿಗೆ ರೈತರು ಅಲೆಯುವುದನ್ನು ತಪ್ಪಿಸಲು ಸಂಕಲ್ಪ ತೊಟ್ಟಿರುವ ಜಿಲ್ಲಾಧಿಕಾರಿ ಅಕ್ರಂ ಪಾಷಾ ಇದೀಗ ಪಹಣಿ ತಿದ್ದುಪಡಿ ಸೇರಿದಂತೆ ಕಂದಾಯ ಇಲಾಖೆಯಲ್ಲಿ ಬಾಕಿ ಉಳಿದಿರುವ ಕೆಲಸಗಳ ಶೀಘ್ರ ವಿಲೇವಾರಿಗೆ ಅಪರ ಡಿಸಿ,ಸರ್ವೇ ಇಲಾಖೆ ಉಪನಿರ್ದೇಶಕರು, ವಿಭಾಗಾಧಿಕಾರಿಗಳಿಗೆ ಉಸ್ತುವಾರಿ ವಹಿಸಿ ಕಡತ ವಿಲೇವಾರಿಯನ್ನು ಅಭಿಯಾನದ ರೀತಿ ನಡೆಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಕಂದಾಯ, ಸರ್ವೇ ಇಲಾಖೆಯಲ್ಲಿ ಪಹಣಿ ತಿದ್ದುಪಡಿ, ಪೈಕಿ ಆರ್‍ಟಿಸಿ ತಿದ್ದುಪಡಿಗಳಿಗಾಗಿ ರೈತರು ಅಲೆಯುವಂತಾಗಿದ್ದು, ಇದನ್ನು ಮನಗಂಡಿರುವ ಜಿಲ್ಲಾಧಿಕಾರಿಗಳು ಪ್ರಗತಿ ಪರಿಶೀಲನೆ ನಡೆಸಿ, ಬಾಕಿ ಕಡತಗಳ ವಿಲೇವಾರಿಗೆ ಕಟ್ಟಪ್ಪಣೆ ಮಾಡಿದ್ದಾರೆ ಮತ್ತು ಆಯಾ ದಿನ ವಿಲೇವಾರಿಯಾದ ಪ್ರಕರಣಗಳ ಕುರಿತು ಅದೇ ದಿನ ಪ್ರಗತಿಪರಿಶೀಲನೆ ನಡೆಸುತ್ತಿದ್ದಾರೆ.
ಎಲ್ಲಾ ಅಧಿಕಾರಿಗಳು, ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಾಕಿ ಕಡತಗಳ ವಿಲೇವಾರಿಗೆ ಡಿಸಿಯವರು ಕೈಹಾಕಿರುವುದರಿಂದ ಎಲ್ಲಾ ಅಧಿಕಾರಿಗಳು,ನೌಕರರು ಖುಷಿಯಿಂದಲೇ ಡಿಸಿಯವರಿಗೆ ಸ್ಪಂದಿಸಿ ಕೆಲಸ ಮಾಡುತ್ತಿರುವುದು ವಿಶೇಷವಾಗಿದೆ.
ಅಮೃತ ಸರೋವರ ಯೋಜನೆಯಡಿ ಕೆರೆಗಳ ಅಳತೆ, ಗಡಿ ಗುರುತಿಸುವಿಕೆ, ಮುಜರಾಯಿ ದೇವಾಲಯಗಳ ಜಾಗ,ಆಸ್ತಿಯ ಅಳತೆಗೆ ಕ್ರಮವಹಿಸುವ ಮೂಲಕ ಸರ್ಕಾರಿ ಆಸ್ತಿಗಳನ್ನು ಉಳಿಸುವ ಕಾರ್ಯಕ್ಕೂ ಕೈಹಾಕಿದ್ದು, ಯಾವುದೇ ಪ್ರಚಾರದ ಅಬ್ಬರವಿಲ್ಲದೇ ಈ ಕೆಲಸಗಳಿಗೆ ಚಾಲನೆ ನೀಡಿದ್ದಾರೆ.
ಕಂದಾಯ,ಸರ್ವೇ ಇಲಾಖೆಗಳಿಗೆ ಸಂಬಂಧಿಸಿದಂತೆ ಸೂಚಿಸಿರುವ ಬಾಕಿ ಕಡತಗಳ ವಿಲೇವಾರಿ ಗಮನಿಸಲು ಅಪರ ಜಿಲ್ಲಾಧಿಕಾರಿ ಶಂಕರ್ ವಾಣಿಕ್ಯಾಳ್, ವಿಭಾಗಾಧಿಕಾರಿ ವೆಂಕಟಲಕ್ಷ್ಮಿ, ಸರ್ವೇ ಇಲಾಖೆ ಉಪನಿರ್ದೇಶಕಿ ಭಾಗ್ಯಮ್ಮ ಅವರಿಗೆ ಉಸ್ತುವಾರಿ ವಹಿಸಿದ್ದು, ಪ್ರತಿದಿನದ ಕಡತಗಳ ವಿಲೇವಾರಿ ಮಾಹಿತಿ ಪಡೆಯುವ ಮೂಲಕ ಆಡಳಿತದಲ್ಲಿ ಸಂಚಲನ ಮೂಡಿಸಿದ್ದಾರೆ.
ಎಲ್ಲಾ ತಾಲ್ಲೂಕುಗಳ ತಹಸೀಲ್ದಾರರು ಹೋಬಳಿಗಳ ಸಿಬ್ಬಂದಿಯನ್ನು ಕರೆಸಿಕೊಂಡು ಪಹಣಿ ತಿದ್ದುಪಡಿ ಸೇರಿದಂತೆ ಬಾಕಿ ಕಡತಗಳ ವಿಲೇವಾರಿಗೆ ತುರ್ತು ಕ್ರಮವಹಿಸಲು ಸೂಚಿಸಿದ್ದು,ಈ ಹಿಂದೆ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯದಲ್ಲಿ ಸ್ವೀಕರಿಸಲಾದ ಅರ್ಜಿಗಳ ವಿಲೇವಾರಿಗೂ ಕ್ರಮವಹಿಸಿದ್ದಾರೆ.
ಭೂಮಿ ವಿಭಾಗದಲ್ಲಿ ಬಾಕಿ ಪ್ರಕರಣಗಳೂ, 53,57ರ ಅರ್ಜಿ ವಿಲೇವಾರಿ, ಸಕಾಲ ಯೋಜನೆಯಡಿ ಸಲ್ಲಿಕೆಯಾದ ಅರ್ಜಿಗಳು, ಎಸಿ ಹಾಗೂ ತಾಹಸೀಲ್ದಾರ್ ಕೋರ್ಟ್‍ಗಳ ಪ್ರಕರಣಗಳು, ರಾಷ್ಟ್ರೀಯ ಹೆದ್ದಾರಿಯ ಪೋಡಿ ಪ್ರಕರಣಗಳ ಪ್ರಗತಿ ಪರಿಶೀಲಿಸಿರುವ ಡಿಸಿಯವರು ಕಡತಗಳ ತ್ವರಿತ ವಿಲೇವಾರಿಗೆ ಕ್ರಮವಹಿಸಿದ್ದು, ಈ ಸಂಬಂಧ ಕಂದಾಯ ಇಲಾಖೆ ಆಡಳಿತಕ್ಕೆ ಚುರುಕು ನೀಡಿದ್ದಾರೆ.
ಸ್ಮಶಾನ ಭೂಮಿ ಮಂಜೂರಾತಿ, ಸರ್ಕಾರಿ ಜಾಗದ ಕರೆ,ಗೋಮಾಳ,ಸ್ಮಶಾನ ಒತ್ತುವರಿ ತೆರವುಗೊಳಿಸುವುದು ಮನೆ ಸಮೀಕ್ಷೆ ಈ ಎಲ್ಲಾ ಪ್ರಕರಣಗಳ ವಿಲೇವಾರಿಗೆ ತಹಸೀಲ್ದಾರ್‍ಗಳ ಸಭೆ ಕರೆದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅದೇ ರೀತಿ ತಹಸೀಲ್ದಾರರು ತಮ್ಮ ಅಧೀನ ಕಚೇರಿಗಳ ಪ್ರಗತಿ ಪರಿಶೀಲನೆ ನಡೆಸಿ ಕಡತಗಳು ಬಾಕಿ ಇರದಂತೆ ಕ್ರಮವಹಿಸಲು ಸೂಚಿಸಿರುವ ಅವರು, ಜನಪರವಾಗಿ ಜನರ ಸೇವೆ ಮಾಡುವ ಬದ್ದತೆಯಿಂದ ಕೆಲಸ ನಿರ್ವಹಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಈ ಸಂಬಂಧ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿರುವ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು, ಜನಪರ ಕೆಲಸಕ್ಕೆ ಕೈಹಾಕಿರುವ ಜಿಲ್ಲಾಧಿಕಾರಿಗಳ ನಡೆ ನಮಗೆ ಪ್ರೇರಣೆಯಾಗಿದ್ದು, ಎಲ್ಲಾ ಅಧಿಕಾರಿಗಳು,ಸರ್ಕಾರಿ ನೌಕರರು ಅವರ ಮಾರ್ಗದರ್ಶನದಲ್ಲಿ ಜನರ ಸಮಸ್ಯೆಗಳ ನಿವಾರಣೆಗೆ ಖುಷಿಯಿಂದ ಕೈಜೋಡಿಸಿದ್ದೇವೆ ಎಂದು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಕಂದಾಯ ಇಲಾಖೆಯಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಮುಕ್ತಿ ನೀಡುವ ಮೂಲಕ ಜಿಲ್ಲಾಡಳಿತಕ್ಕೆ ಚುರುಕು ಮುಟ್ಟಿಸಿ ರೈತರು,ಸಾರ್ವಜನಿಕರ ಅಲೆದಾಟ ತಪ್ಪಿಸಲು ಜಿಲ್ಲಾಧಿಕಾರಿಗಳು ಕೈಗೊಂಡಿರುವ ಈ ಕಡತ ವಿಲೇವಾರಿ ಅಭಿಯಾನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಪಿಯುಸ್ ನಗರ ಕೆಥೊಲಿಕ್ ಸಭಾದಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ

 ಕುಂದಾಪುರ, ಜು.೧೨: ಪಿಯುಸ್ ನಗರ್ ಚರ್ಚಿನ ಕೆಥೊಲಿಕ್ ಸಭಾ ಪಿಯುಸ್ ನಗರ್ ಸಂಘಟನೆಯು ದಿನಾಂಕ 10-7-2023 ರಂದು ಹಂಗಳೂರು ಬಡಕೆರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಶಾಲಾ ಮಕ್ಕಳ ಜೊತೆ ನೆರವೇರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷರಾಗಿ ಪಿಯುಸ್ ನಗರ್ ಚರ್ಚಿನ ಧರ್ಮಗುರು ಹಾಗೂ ಪಿಯುಸ್ ನಗರ್ ಕೆಥೊಲಿಕ್ ಸಭಾದ  ಅಧ್ಯಾತ್ಮಿಕ ನಿರ್ದೇಶಕರಾದ ವಂ| ಆಲ್ಬರ್ಟ್ ಕ್ರಾಸ್ತಾ, ಮುಖ್ಯ ಅತಿಥಿಗಳಾಗಿ ಪಿಯುಸ್ ನಗರ್ ಕೆಥೊಲಿಕ್ ಸಭಾ ಸಂಘಟನೆಯ ಮಾರ್ಗದರ್ಶಕರಾದ ಡಾ| ಸೋನಿ ಡಿಕೋಸ್ತಾ, ಹಂಗಳೂರು ಬಡಕೆರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಇದರ ಮುಖ್ಯೋಪಾಧ್ಯಾಯರಾದ  ಸೀತಾರಾಮ್ ಶೆಟ್ಟಿ, ಚರ್ಚಿನ ಉಪಾಧ್ಯಕ್ಷರು ಶ್ರೀ ಜೇಮ್ಸ್ ಡಿಮೆಲ್ಲೊ, ಕಾರ್ಯದರ್ಶಿ ಶ್ರೀಮತಿ ರೇಶ್ಮಾ ಡಿಸೋಜ, 20 ಆಯೋಗದ ಸಂಯೋಜಕಿ ಶ್ರೀಮತಿ ಲೀನಾ ತಾವ್ರೊ, ಕೆಥೊಲಿಕ್ ಸಭಾ ಪಿಯುಸ್ ನಗರ್ ಸಂಘಟನೆಯ ಅಧ್ಯಕ್ಷರಾದ ಅಲೆಕ್ಸಾಂಡರ್ ಲೂವಿಸ್, ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಡೆಸಾ ಉಡುಪಿ ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಹಾಗೂ ಸಂಘಟನೆಯ ರಾಜಕೀಯ ಸಂಚಾಲಕರು ಶ್ರೀ ರೋಶನ್ ಬರೆಟ್ಟೊ, ಚರ್ಚಿನ ಧರ್ಮಗುರುಗಳು ಹಾಗೂ ಡಾಕ್ಟರ್ ಸೋನಿ ಡಿಕೋಸ್ತಾ  ಶಾಲಾ ಮುಖ್ಯೋಪದಾಯಕರಿಗೆ ಗಿಡವನ್ನು ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟನೆಯನ್ನು ಮಾಡಿ ಪರಿಸರದ ಬಗ್ಗೆ ಮಕ್ಕಳಿಗೆ ಜಾಗ್ರತೆ ಮೂಡಿಸಿಸುವ ಮಾತುಗಳನ್ನಾಡಿದರು. ಶಾಲಾ ಮುಖ್ಯೋಪಾಧ್ಯಾಯಕರು ಕೆಥೊಲಿಕ್ ಸಭಾ ಪಿಯುಸ್ ನಗರ್ ಸಂಘಟನೆಯ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದರು. ಶಾಲಾ ಮಕ್ಕಳಿಗೆ ಗಿಡಗಳನ್ನು ನೀಡಲಾಯಿತು. ನಿಯೋಜಿತ ಅಧ್ಯಕ್ಷೆ ಶ್ರೀಮತಿ ನ್ಯಾನ್ಸಿ ವಾಜ್ ಧನ್ಯವಾದಗಳನ್ನು ಅರ್ಪಿಸಿದರು.

ಪಿಯುಸ್ ನಗರ ಕಥೊಲಿಕ್ ಸಭಾದಿಂದ ಪರಿಸರ ಸಂರಕ್ಷಣೆ ಮತ್ತು ವನಮಹೋತ್ಸವ ಕಾರ್ಯಕ್ರಮ


ಕುಂದಾಪುರ, ಜು.12: ಕಥೊಲಿಕ್ ಸಭಾ ಪಿಯುಸ್ ನಗರ ಘಟಕವು ದಿನಾಂಕ 9 ರಂದು ಚರ್ಚಿನ ವಠಾರದಲ್ಲಿ ವನಮಹೋತ್ಸವವನ್ನು ಆಚರಿಸಿತು. ಚರ್ಚಿನ ಧರ್ಮಗುರುಗಳಾದ ವಂ|ಆಲ್ಬರ್ಟ್ ಕ್ರಾಸ್ತಾ, ಗೀಡವನ್ನು ನೆಟ್ಟು ಉದ್ಘಾಟಿಸಿ ಪರಿಸರ ಮತ್ತು ವನಮಹೋತ್ಸವದ ಮಹತ್ವವನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಚರ್ಚಿನ ಪಾಲನಮಂಡಳಿ ಉಪಾಧ್ಯಕ್ಷ ಜೆಮ್ಸ್ ಡಿಮೆಲ್ಲೊ, ಕಾರ್ಯದರ್ಶಿ ರೆಶ್ಮಾ ಡಿಸೋಜಾ, ಆಯೋಗಗಳ ಸಂಚಾಲಕಿ ಲೀನಾ ತಾವ್ರೊ, ಗುರಿಕಾರರು, ಪಾಲನ ಮಂಡಳಿ ಸದಸ್ಯರು, ಕಥೊಲಿಕ್ ಸಭಾ ಪದಾಧಿಕಾರಿಗಳು, ಸದಸ್ಯರು ಮತು ಧರ್ಮಸಭೆಯವರು ಹಾಜರಿದ್ದರು.
ಪಿಯುಸ್ ನಗರ ಕಥೊಲಿಕ್ ಸಭಾದ ಅಧ್ಯಕ್ಷರಾದ ಆಲೆಕ್ಸಾಂಡ ಲುವಿಸ್ ಸ್ವಾಗತಿಸಿದರು, ಕಾರ್ಯದರ್ಶಿ ಪ್ರಮೀಳಾ ಡೆಸಾ ನಿರೂಪಿಸಿ ವಂದಿಸಿದರು. ಪಿಯುಸ್ ನಗರ ಚರ್ಚಿನ ಪ್ರತಿಯೊಂದು ಕುಟುಂಬಕ್ಕೆ ವಿತರಿಸಲಾಯಿತು.

ವಿದ್ಯಾರ್ಥಿಗಳು ಕೇವಲ ಜೀವನದ ಗುರಿಯನ್ನು ಮುಟ್ಟವ ಕನಸು ಕಂಡರೆ ಸಾಲದು ನಿಮ್ಮ ಗುರಿ ಛಲದಿಂದ ಸಾಧಿಸಬೇಕು-ಪತ್ತಿ ಸೀತರಾಮಯ್ಯ

ರಾಯಲ್ಪಾಡು 1 : ವಿದ್ಯಾರ್ಥಿಗಳು ಕೇವಲ ಜೀವನದ ಗುರಿಯನ್ನು ಮುಟ್ಟಲು ಕೇವಲ ಕನಸನ್ನು ಕಾಣದೇ ಜೀವನದ ಗುರಿಯನ್ನು ಸಾಧಿಸುವ ಛಲವನ್ನು ಸದಾ ನಿರಂತರವಾಗಿ ಮನದಮಟ್ಟು ಮಾಡಿಕೊಳ್ಳುತ್ತಾ, ಗುರು ಹಿರಿಯರ ಮಾರ್ಗದರ್ಶನ ಪಡೆದು ಜೀವನದ ಗುರಿಯನ್ನು ಮುಟ್ಟುವಂತೆ ಬೆಂಗಳೂರಿನ ವಾಸವಿ ನಿತ್ಯ ಅನ್ನದಾನ ಸೇವಾ ಟ್ರಸ್ಟ್‍ನ ಅಧ್ಯಕ್ಷ ಪತ್ತಿ ಸೀತರಾಮಯ್ಯ ಹೇಳಿದರು.
ಗ್ರಾಮದ ಸರ್ಕಾರಿ ಪ್ರೌಡಶಾಲಾವರಣದಲ್ಲಿ ಮಂಗಳವಾರ ಕೋಲಾರ-ಬೆಂಗಳೂರು ವಾಸವಿ ನಿತ್ಯ ಅನ್ನದಾನ ಸೇವಾ ಟ್ರಸ್ಟ್‍ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬಕ್ಸ್ , ಲೇಖನಿ ಸಾಮಗ್ರಿಗಳು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಾಸವಿ ನಿತ್ಯ ಅನ್ನದಾನ ಸೇವಾ ಟ್ರಸ್ಟ್‍ನ ಕೋಲಾರ ವಿಭಾಗದ ಅಧ್ಯಕ್ಷ ಬಿ.ಎಸ್.ಗೋವಿಂದರಾಜು ಮಾತನಾಡಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ಉನ್ನತ ಅಧಿಕಾರಿಗಳಾಗಿದ್ದು, ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರು ಇದ್ದು, ಶಿಕ್ಷಕರು ಭೋದಿಸುವ ಪಾಠಪ್ರವಚನಗಳನ್ನು ಆಲಿಸಿ , ಶ್ರದ್ಧಾ ಭಕ್ತಿಯಿಂದ ಓದುವಂತೆ ಸಲಹೆ ನೀಡಿದರು.
ಎಸ್‍ಡಿಎಂಸಿ ಅಧ್ಯಕ್ಷ ರೆಡ್ಡಿಶ್ರೀನಿವಾಸ್ ಮಾತನಾಡಿ ಸರ್ಕಾರದಿಂದ ನೀಡುವಂತಹ ಹಾಗೂ ದಾನಿಗಳು ನೀಡುವಂತಹ ಕಲಿಕಾ ಸಾಮಗ್ರಿಗಳನ್ನು ಸದ್ಬಳಕೆ ಮಾಡಿಕೊಂಡು ವಿದ್ಯಾವಂತರಾಗುವಂತೆ ಕಿವಿಮಾತು ಹೇಳಿದರು.
ಮುಖ್ಯ ಶಿಕ್ಷಕ ಪಿ.ಮಾರಣ್ಣ ಮಾತನಾಡಿ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಹಣವಂತರು ಬಡಮಕ್ಕಳನ್ನು ಶೈಕ್ಷಣಿಕ ಪ್ರಗತಿಯನ್ನು ಹೊಂದಲು ತಮ್ಮಿಂದಾಗುವ ಆರ್ಥಿಕ ಸಹಾಯ ಹಾಗು ಶಿಕ್ಷಣಕ್ಕೆ ಬೇಕಾದ ಸಾಮಾಗ್ರಿಗಳನ್ನು ಕೊಡುಗೆಯನ್ನು ನೀಡುವುದರ ಮೂಲಕ ಪ್ರೋತ್ಸಾಹಿಸಬೇಕು ಎಂದರು.
ಇದೇ ಕಾರ್ಯಕ್ರಮದಲ್ಲಿ ಆಶಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಣೆ ಮಾಡಿದರು. ಅಲ್ಲದೆ 8, 9, 10 ನೇ ತರಗತಿಯ ವಾರ್ಷಿಕ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪತ್ತಿ ಸೀತರಾಮಯ್ಯರವರು ನಗದು ಬಹುಮಾನ ವಿತರಣೆ ಮಾಡಿದರು.
ಉಪಾಧ್ಯಕ್ಷ ಎಂ.ಯುವರಾಜು, ಟ್ರಸ್ಟ್‍ನ ಸದಸ್ಯ ಬಾಲರಾಜು, ಸಿಆರ್‍ಪಿ ವರದರೆಡ್ಡಿ ಮಾತನಾಡಿದರು. ಟ್ರಸ್ಟ್‍ನ ಪಿಆರ್‍ಒ ಜಯಮಾಲ, ಕಾರ್ಯದರ್ಶಿ ಡಿ.ಕೆ.ನಾಗರಾಜ್, ಖಜಾಂಚಿ ಎಂ.ಆರ್.ಶ್ರೀನಿವಾಸಮೂರ್ತಿ, ಸಹ ಖಜಾಂಚಿ ಬಿ.ಎಚ್.ರಮೇಶ್‍ಕುಮಾರ್, ಸದಸ್ಯರಾದ ಪಿ.ಆರ್. ಅಮರನಾಥ್, ಎ.ಎನ್.ಚಂದ್ರಶೇಖರ್, ಬಿ.ವಿ.ಶ್ರೀದೇವಿರಾಜ್, ರಾಯಲ್ಪಾಡು ವಾಸವಿ ಸಂಘದ ಸದಸ್ಯರಾದ ಸುಬ್ಬರಾಜಶೆಟ್ಟಿ, ಮಿಟ್ಟಾ ಪ್ರಸಾದ್, ರಾಧಪ್ರಸಾದ್, ಸಿ.ವಿ.ಮಂಜುನಾಥ್, ಎಸ್‍ಡಿಎಂಸಿ ಅಧ್ಯಕ್ಷ ರೆಡ್ಡಿಶ್ರೀನಿವಾಸ್, ಗ್ರಾಮದ ಮುಖಂಡರಾದ ಸಿಮೆಂಟ್ ನಾರಾಯಣಸ್ವಾಮಿ, ಸಿ.ಎಸ್.ವೆಂಕಟರಮಣಪ್ಪ, ಶಾಲೆಯ ಮುಖ್ಯ ಪಿ.ಮಾರಣ್ಣ, ಸಿಆರ್‍ಪಿ ವರದರೆಡ್ಡಿ ಇದ್ದರು.

ಮನುಕುಲಕ್ಕೆ ಆರೋಗ್ಯವೇ ಪ್ರಧಾನ, ಪ್ರತಿಯೊಬ್ಬರು ತಮ್ಮ ಆರೋಗ್ಯ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ; ಇಒ ಕೃಷ್ಣಪ್ಪ

ಶ್ರೀನಿವಾಸಪುರ 1 : ಮನುಕುಲಕ್ಕೆ ಆರೋಗ್ಯವೇ ಪ್ರಧಾನವಾಗಿದ್ದು, ಪ್ರತಿಯೊಬ್ಬರು ತಮ್ಮ – ತಮ್ಮ ಆರೋಗ್ಯವನ್ನು ಜಾಗೃತವಾಗಿ ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ಸಾರ್ವಜನಿಕರಿಗೆ ಇಒ ಕೃಷ್ಣಪ್ಪ ಸಲಹೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋಲಾರ, ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಹಾಗು ಕಾರ್ಯಕ್ರಮ ವಿಶ್ವ ಜನ ಸಂಖ್ಯಾದಿನಾಚರಣೆ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಚ್ಚುತ್ತಿರುವ ಜನಸಂಖ್ಯೆಯಿಂದ ಆಹಾರ, ವಸತಿ, ಉಡುಪು, ಉದ್ಯೋಗ, ಜೀವನ ನಿರ್ವಹಣೆ, ಸೇವೆ, ಶ್ರುಶೂಷ ಇತ್ಯಾದಿ ಸಮಸ್ಯೆಗಳು ಬೃಹದಾಕಾರವಾಗಿ ಬೆಳೆಯುತ್ತಿದ್ದು ಇದನ್ನ ತಡೆಗಟ್ಟುವ ಕೆಲಸ ಮಾಡಬೇಕಾಗಿದೆ ಎಂದರು.
ಜಿಲ್ಲಾ ಕ್ಷಯರೋಗ ನಿಯ್ರಂತಣ ಅಧಿಕಾರಿ ಡಾ|| ಪ್ರಸನ್ನಕುಮಾರ್ ಮಾತನಾಡಿ 2030 ಒಳಗೆ ಎಲ್ಲಾ ಆರೋಗ್ಯ, ಎಲ್ಲಡೆ ಆರೋಗ್ಯ ಎಂಬ ಘೋಷಣೆಯಂತೆ ಸಾಂಕ್ರಮಿಕ ರೋಗಗಳನ್ನು ತಡೆಗಟ್ಟುವ ಕ್ರಮಕೈಗೊಳ್ಳಬೇಕಾಗಿದೆ . 2025ರ ಒಳಗೆ ಕರ್ನಾಟಕ ರಾಜ್ಯವನ್ನು ಕ್ಷಯರೋಗ ಮುಕ್ತಮಾಡುವ ಬಗ್ಗೆ ಸರ್ಕಾರವು ಆದೇಶವನ್ನು ಹೊರಡಿಸಿದ್ದು, ಅಧಿಕಾರಿಗಳು ಗ್ರಾಮಪಂಚಾಯಿತಿ ಮಟ್ಟದಲ್ಲಿ ಪಿಡಿಒ ಅಧಿಕಾರಿಗಳು ಕರೋನ ಟಾಸ್ಕ್‍ಪೋರ್ಸ್ ಅವರ ಜೊತೆ ಸಹಕಾರ ಪಡೆದು ಕ್ಷಯರೋಗಿಗಳನ್ನು ಪತ್ತೆ ಮಾಡಿ ಎಷ್ಟು ಜನಕ್ಕೆ ರೋಗವಿದೆ. ರೋಗವಿರುವವರು ಎಷ್ಟು ಜನ ಮಾತ್ರೆಗಳನ್ನು ಪಡೆಯುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಪಡೆದು ರೋಗ ಲಕ್ಷಣ ಇರುವವರಿಗೆ ಆರೋಗ್ಯ ಇಲಾಖೆಯಿಂದ ಚಿಕಿತ್ಸೆ ಮಾಡಿಸುವಂತೆ ಸಲಹೆ ನೀಡಿದರು.
ತಾಲೂಕಿನ ಯಾವ ಗ್ರಾಮಪಂಚಾಯಿತಿ ಕ್ಷಯರೋಗದ ಬಗ್ಗೆ ಹೆಚ್ಚು ಕಾರ್ಯನಿರ್ವಹಿಸತ್ತದೋ ಆ ಗ್ರಾಮಪಂಚಾಯಿತಿಗೆ ಮಹಾತ್ಮ ಗಾಂದಿಜೀಯವರ ಬಾವಚಿತ್ರ ಇರುವ ಪ್ರಥಮ ಬಹುಮಾನವಾಗಿ ಬಂಗಾರ ನಾಣ್ಯ, ಎರಡನೇ ಬಹುಮಾನವಾಗಿ ಬೆಳ್ಳಿ ನಾಣ್ಯ, ಮೂರನೇ ಬಹುಮಾನವಾಗಿ ಕಂಚು ನಾಣ್ಯವನ್ನು ನೀಡಲಾಗುವುದು ಎಂದರು. ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಕ್ಷಯಮುಕ್ತವನ್ನಾಗಿ ಮಾಡಬೇಕು ಎಂದರು.
ಜನರನ್ನು ಜಾಗೃತಗೊಳಿಸಲು ಮತ್ತು ಜನಸಂಖ್ಯೆ ನಿಯಂತ್ರಣದ ಅಗತ್ಯೆಯ ಅರಿವು ಮೂಡಿಸಲು ಸರ್ಕಾರ ಹಲವಾರು ಕ್ರಮಗಳನ್ನು ತಗೆದುಕೊಳ್ಳುತ್ತಿದೆ ಜನಸಂಖ್ಯೆ ನಿಯಂತ್ರಣದಲ್ಲಿ ಗಂಡ, ಹೆಂಡತಿ ಪಾತ್ರ ಮುಖ್ಯ ಸಹಕಾರ ಬೇಕಿದೆ ಎಂದರು.
ತಾಲೂಕಿನ ಎಲ್ಲಾ ಗ್ರಾಮಪಂಚಾಯಿತಿಗಳ ಪಿಡಿಒಗಳು ಹಾಜರಿದ್ದರು. ಟಿಎಚ್‍ಒ ಡಾ|| ಷರೀಫ್, ಬ್ಲಾಕ್ ರೋಗ ನಿಯಂತ್ರಣ ಅಧಿಕಾರಿ ಆಂಜಲಮ್ಮ, ಮೇಲ್ವಿಚಾರಕ ಶಿವರಾಜ್, ಆರೋಗಯ ನಿರೀಕ್ಷ ಗಿರೀಶ್‍ಪ್ರಸಾದ್, ಕಾರ್ಯಕ್ರಮದ ವ್ಯವಸ್ಥಾಪಕ ಟಿ.ಹರೀಶ್‍ಕುಮಾರ್, ತಾ.ಪಂ.ಗಣಕಯಂತ್ರ ಅಪರೇಟರ್ ಕೆ.ಎನ್.ಶ್ರೀನಾಥ್ ಇದ್ದರು.

ಕಂದಾವರ ಹಾಲು ಉತ್ಪಾದಕರ ಸಹಕಾರ ಸಂಘ (ನಿ.) ಚುನಾವಣೆಯ ಪ್ರಕಟಣೆ

ಕಂದಾವರ ಹಾಲು ಉತ್ಪಾದಕರ ಸಹಕಾರ ಸಂಘ (ನಿ.) ಕುಂದಾಪುರ ತಾಲೂಕು ಇದರ ಚುನಾವಣಾ ದಿನಾಂಕದಿಂದ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಯ ಸದಸ್ಯರ ಆಯ್ಕೆಗಾಗಿ ಸಂಘದ ಆಡಳಿತ ಕಛೇರಿಯ ಆವರಣದಲ್ಲಿ ದಿನಾಂಕ 29-07-2023ರಂದು ಪೂರ್ವಾಹ್ನ 9:00 ಗಂಟೆಯಿಂದ ಅಪರಾಹ್ನ 4:00 ಗಂಟೆಯವರೆಗೆ ಚುನಾವಣೆ ಜರುಗಲಿದ್ದು, ಸ್ಪರ್ಧಿಸಲಿಚ್ಚಿಸುವ ಸಂಘದ ಅರ್ಹ ಸದಸ್ಯರು ತಮ್ಮ ನಾಮಪತ್ರವನ್ನು ಸಂಘದ ಕಛೇರಿಯಲ್ಲಿ ಪಡೆದು ದಿನಾಂಕ 15-07-2023 ರಿಂದ ದಿನಾಂಕ 21-07-2023ರ ವರೆಗೆ ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 2:00 ಗಂಟೆಯೊಳಗಾಗಿ ಸಂಘದ ಆಡಳಿತ ಕಛೇರಿಯಲ್ಲಿ ಚುನಾವಣಾ ನಿರ್ವಾಚನಾಧಿಕಾರಿಯವರಿಗೆ ಅಥವಾ ಅವರಿಂದ ಅಧಿಕಾರ ಪಡೆದವರಿಗೆ ಸಲ್ಲಿಸತಕ್ಕದ್ದು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೇಳಾಪಟ್ಟಿಯನ್ನು ಸಂಘದ ಸೂಚನಾಫಲಕದಲ್ಲಿ ಪ್ರಕಟಿಸಲಾಗಿದೆ.

                                             ಕಂದಾವರ ಹಾಲು ಉತ್ಪಾದಕರ ಸಹಕಾರಿ ಸಂಘ (ನಿ.),
                                             ಕಂದಾವರ


                                                   ಚುನಾವಣಾ ನಿರ್ವಾಚನಾಧಿಕಾರಿ

ಸ್ಥಳ : ಮೂಡ್ಲಕಟ್ಟೆ
ದಿನಾಂಕ : 12-07-2023

ಕುಂದಾಪುರ : ಬಿಜೆಪಿಯ ರಾಜನೀತಿ ಹಾಗೂ ರಾಹುಲ್ ಗಾಂಧಿಯವರ ತೇಜೊವಧೆಯ ವಿರುದ್ಧ ಕಾಂಗ್ರೆಸ್ ಮೌನ ಪ್ರತಿಭಟನೆ

ಕುಂದಾಪುರ. ಜು.12: ರಾಹುಲ್ ಗಾಂಧಿಯವರು ವಿವಿಧ ವೇದಿಕೆಯಲ್ಲಿ ಮೋದಿ  ಹಾಗೂ  ಅದಾನಿ  ನಡುವಿನ ಸಂಬಂಧವನ್ನು ನಿರಂತರವಾಗಿ ಬಹಿರಂಗಪಡಿಸುತ್ತಿದ್ದಾರೆ, ಈ ನಿರ್ಭೀತಿ ನಡೆಯನ್ನು ಸಹಿಸಿಕೊಳ್ಳದೆ  ಮೋದಿ  ಪದನಾಮ ಬಳಕೆಯನ್ನೇ  ನೆಪವಾಗಿರಿಸಿಕೊಂಡು  ರಾಹುಲ್  ಗಾಂಧಿಯವರನ್ನು  ಲೋಕಸಭಾ ಸದಸ್ಯತ್ವದಿಂದ  ಅನರ್ಹತೆಗೊಳಿಸಿದ  ಕೇಂದ್ರ ಸರಕಾರ ಹಾಗೂ ಬಿಜೆಪಿಯ  ಸೇಡಿನ ಹುನ್ನಾರವನ್ನು ಪ್ರತಿಭಟಿಸಿ ಕುಂದಾಪುರ ಬ್ಲಾಕ್  ಕಾಂಗ್ರೆಸ್  ಸಮಿತಿಯಿಂದ ಇಂದು ದಿನಾಂಕ  12 -07 -2023 ಬುಧವಾರ  ಬೆಳಿಗ್ಗೆ 10  ರಿಂದ ಮೌನ ಧರಣಿ  ಶಾಸ್ತ್ರಿ ವೃತ್ತ ಬಳಿ ಆರಂಭಿಸಿದೆ.

ಮಾಜಿ ಸಭಾಪತಿ ಶ್ರೀ ಪ್ರತಾಪ್ ಚಂದ್ರ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ ( ಎಂ. ಎಲ್. ಎ. ಅಭ್ಯರ್ಥಿ) ಹರಿಪ್ರಸಾದ್ ಶೆಟ್ಟಿ ( ಬ್ಲಾಕ್ ಅಧ್ಯಕ್ಷರು) ಶಿವರಾಮ ಶೆಟ್ಟಿ ( ಎಸ್ ಸಿ ಡಿ ಸಿ ಸಿ ಬ್ಯಾಂಕಿನ ಅಧ್ಯಕ್ಷ) ಬಿ. ಹೆರಿಯಣ್ಣ, ಕೇದೂರು ಸದಾನಂದ ಶೆಟ್ಟಿ, ಅಶೋಕ್ ಪೂಜಾರಿ ( ಬಿಲ್ಲವರ ಸಂಘದ ಅಧ್ಯಕ್ಷರು) , ದೇವಾನಂದ ಶೆಟ್ಟಿ, ವಿಕಾಸ್ ಹೆಗ್ಡೆ ( ಜಿಲ್ಲಾ ವಕ್ತಾರರು), ಇಚ್ಚಿತಾರ್ಥ ಶೆಟ್ಟಿ ( ಯುವ ಕಾಂಗ್ರೆಸ್ ಅಧ್ಯಕ್ಷ) ವಿನೋದ್ ಕ್ರಾಸ್ತಾ ( ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ), ಪುರಸಭಾ ಸದಸ್ಯರಾದ ಪ್ರಭಾವತಿ ಶೆಟ್ಟಿ, ಚಂದ್ರ ಶೇಖರ್ ಖಾರ್ವಿ, ಅಶ್ಬಕ್, ಶ್ರೀಧರ್ ಶೇರೆಗಾರ್, ಅಬ್ಬು, ಎನ್ ಎಸ್  ಯು ಐ ನಾ ಸುಜನ್ ಶೆಟ್ಟಿ, ಗಣೇಶ್ ಶೇರೆಗಾರ್, ಜ್ಯೋತಿ ಪುತ್ರನ್, ರೇವತಿ ಶೆಟ್ಟಿ, ಚಂದ್ರ ಶೇಖರ್ ಶೆಟ್ಟಿ, ಗಂಗಾಧರ್ ಶೆಟ್ಟಿ, ಜಾನಕಿ ಬಿಲ್ಲವ, ಅಭಿಜಿತ್ ಪೂಜಾರಿ, ಆಶಾ ಕರ್ವಾಲ್ಲೊ, ಶೋಭಾ ಸಚ್ಚಿದಾನಂದ, ಜ್ಯೋತಿ ನಾಯ್ಕ್, ರಮೇಶ್ ಶೆಟ್ಟಿ, ರಾಕೇಶ್ ಶೆಟ್ಟಿ, ಮೇಬಲ್ ಡಿಸೋಜ, ಕೇಶವ್ ಭಟ್, ಅಶೋಕ್ ಸುವರ್ಣ, ದಿವಾಕರ್ ಶೆಟ್ಟಿ ಕೋಣಿ ಮುಂತಾದ ಪ್ರಮುಖ ನಾಯಕರು ಈ ಧರಣಿಯಲ್ಲಿ ಪಾಲ್ಗೊಂಡರು.

 ಈ ಧರಣಿ ಸಂಜೆ 5 ಗಂಟೆ ತನಕ ನಡೆಯಲಿದೆಯೆಂದು ಕುಂದಾಪುರ ಬ್ಲಾಕ್  ಕಾಂಗ್ರೆಸ್  ಸಮಿತಿಯಿ ತಿಳಿಸಿದೆ.