ಕುಂದಾಪುರ : ಸ್ಥಳೀಯ ಸಂತ ಮೇರೀಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಡೋರಾ ಸುವಾರಿಸ್ ವಹಿಸಿ ’ಯೋಗ ಹಾಗೂ ಪ್ರಾಣಾಯಾಮ ಮಾಡುವುದರಿಂದ ದೇಹದ ಸರ್ವತೋಮುಖ ಬೆಳವಣಿಗೆ ಆಗುತ್ತದೆ, ಆರೋಗ್ಯವಂತರಾಗಿ ಬಾಳಲು ಜೀವನದಲ್ಲಿ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕು’ ಎಂದು ಮಕ್ಕಳಿಗೆ ತಿಳಿಸಿದರು.
ದೈಹಿಕ ಶಿಕ್ಷಣ ಶಿಕ್ಷಕಿ ಶಾಂತಿ ರಾಣಿ ಇವರು ಯೋಗ ತರಬೇತಿಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡಿದರು. ಶಿಕ್ಷಕಿಯರಾದ ಜ್ಯೋತಿ ಡಿಸಿಲ್ವ, ಶ್ರೀಮತಿ, ಆನ್ನಿ ಕ್ರಾಸ್ತಾ, ಗೀತಾ ನೊರೊನ್ಹಾ, ಪ್ರೀತಿ ಹಾಗೂ ಸುರೇಖಾ ಸಹಕರಿಸಿದರು.