ಕೋಲಾರ:- ಸದಾ ರೈತರು,ಸಾರ್ವಜನಿಕರ ಸಂಪರ್ಕ ಹೊಂದಿರುವ ಕಂದಾಯ,ಸರ್ವೇ ಇಲಾಖೆಗಳು ಜನರ ನಿರೀಕ್ಷೆಯಂತೆ ಕೆಲಸ ಮಾಡಿ ಜನಸ್ನೇಹಿಯಾಗಿಸಲು ಇಲಾಖೆ ನೌಕರರು ಹೆಚ್ಚಿನ ಹೊಣೆಗಾರಿಕೆಯಿಂದ ಸೇವೆ ಸಲ್ಲಿಸಬೇಕಿದೆ ಎಂದು ರಾಜ್ಯದ ನೂತನ ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.
ಕಂದಾಯ ಸಚಿವರಾದ ನಂತರ ಕೋಲಾರ ಹಾಗೂ ಬೆಂಗಳೂರು ಜಿಲ್ಲೆಗಳ ಭೂಮಾಪನ ಹಾಗೂ ಕಂದಾಯ ಇಲಾಖೆಗಳಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಕಚೇರಿಗಳಿಗೆ ಬರುವ ರೈತರನ್ನು ಅಲೆಸದೇ ಜನಪರವಾಗಿ ಕೆಲಸ ಮಾಡೋಣ, ನೌಕರರ ಸಮಸ್ಯೆಗಳಿದ್ದರೆ ನನ್ನ ಗಮನಕ್ಕೆ ತನ್ನಿ ಪರಿಹರಿಸುವೆ ಆದರೆ ಜನರ ಕಷ್ಟಗಳಿಗೆ ನೀವೂ ಸ್ಪಂದಿಸುವ ಮೂಲಕ ಇಲಾಖೆಗೆ ಕಳಂಕ ಎದುರಾಗದಂತೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದರು.
ಸರ್ವೇ ಹಾಗೂ ಕಂದಾಯ ಇಲಾಖೆ ಇತರೆಲ್ಲಾ ಇಲಾಖೆಗಳಿಗಿಂತ ಒತ್ತಡದಲ್ಲಿ ಕೆಲಸ ಮಾಡಬೇಕಿದೆ ಎಂಬುದು ಸತ್ಯ ಆದರೆ ಜನರ ಸೇವೆ ಮಾಡುವಾಗ ನಾವೂ ಮುಂಚೂಣಿಯಲ್ಲಿರಬೇಕು, ಕಂದಾಯ,ಸರ್ವೇ ಇಲಾಖೆ ನೌಕರರು ಅನ್ನದಾತರ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಮಾರ್ಗಸೂಚಿಯೊಂದಿಗೆ ಕೆಲಸ ಮಾಡಬೇಕು, ಇಲಾಖೆಯಲ್ಲಿ ಜನಸ್ನೇಹಿಯಾಗಿ ಕೆಲಸ ಮಾಡಲು ಹೊಸ ಹೊಸ ವಿಧಾನಗಳ ಅಳವಡಿಕೆ ಅಗತ್ಯವಿದೆ ಈ ನಿಟ್ಟಿನಲ್ಲಿ ಅನುಭವಿ ಅಧಿಕಾರಿಗಳ ಸಲಹೆಯೂ ಸ್ವೀಕೃತ ಎಂದ ಅವರು, ಒಟ್ಟಾರೆ ಜನರ ಕೆಲಸವನ್ನು ನಾವು ಜನಪರವಾಗಿ ಜನತೆಗೆ ತೊಂದರೆಯಾಗದಂತೆ ನಿರ್ವಹಿಸೋಣ ಎಂದರು.
ಈ ಸಂದರ್ಭದಲ್ಲಿ ಭೂಮಾಪನಾ ಇಲಾಖೆ ಕೋಲಾರ ಜಿಲ್ಲಾ ಉಪನಿರ್ದೇಶಕರಾದ ಭಾಗ್ಯಮ್ಮ, ಬೆಂಗಳೂರು ಕೇಂದ್ರ ಉಪನಿರ್ದೇಶಕ ಕೇಶವಮೂರ್ತಿ, ಕೋಲಾರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‍ಬಾಬು, ಪ್ರಧಾನ ಕಾರ್ಯದರ್ಶಿ ಅಜಯ್‍ಕುಮಾರ್, ಕೋಲಾರ ಜಿಲ್ಲಾ ಯಾದವ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಉದ್ಯಮಿ ವಕ್ಕಲೇರಿ ನಾರಾಯಣಸ್ವಾಮಿ, ಸರ್ವೇ ಇಲಾಖೆಯ ಕೇಶವ್, ನಾಗರಾಜ್ ಮತ್ತಿತರರಿದ್ದರು.
Month: June 2023
ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್‍ಗೆ ಪುನರ್ವಸತಿ ಕಲ್ಪಿಸಿ
ಕೋಲಾರ,ಜೂ,2: ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಹಾಗೂ ಪುನರ್ವಸತಿ 2013ರ ಕಾಯ್ದೆಯ ಅನುಷ್ಟಾನಕ್ಕೆ ಒತ್ತಾಯಿಸಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮಲ ಹೊರುವ ಪದ್ದತಿ ಅಮಾನವೀಯ, ಜಾತೀಯತೆ ಮತ್ತು ಗುಲಾಮಗಿರಿಯ ಸಂಕೇತ, ಮನುಷ್ಯನ ಘನತೆಗೆ ಧಕ್ಕೆ ತರುವ ನಾಗರಿಕ ಸಮಾಜದ ಸಾಕ್ಷಿಪ್ರಜ್ಞೆಗೆ ಸಾವಾಲಾಗಿ ಇಡೀ ಸಮಾಜ ತಲೆ ತಗ್ಗಿಸುವ ಹಾಗು ಘೋರ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಪರಿಗಣಿಸಿ ಮಲಹೊರುವ ಅನಿಷ್ಟ ಪದ್ದತಿಯನ್ನು ನಿರ್ಮೂಲನೆ ಹಾಗು ಸ್ಕ್ಯಾವೆಂಜರ್ ಸಮುಧಾಯಗಳನ್ನು ಘನತೆ ಗೌರವದಿಂದ ಸಮಾಜದ ಮುಖ್ಯ ವಾಹಿನಿಗೆ ತರುವ ಆಶಯದೊಂದಿಗೆ ಕೋಲಾರ ಜಿಲ್ಲೆಯಲ್ಲಿ 2013, 2018ರ ನಡುವೆ ಸಮೀಕ್ಷೆಯಲ್ಲಿ ಕೋಲಾರ ಜಿಲ್ಲೆಯ ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿ 1000 ಕ್ಕೂ ಹೆಚ್ಚು ಜನರನ್ನು ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ಎಂದು ಗುರುತಿಸಿ ನೊಂದಣೆ ಮಾಡಿಕೊಂಡಿದ್ದಾರೆ. ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2013 ರ ಸೆಕ್ಷನ್ 13 ರ ಪ್ರಕಾರ ಪುನರ್ವಸತಿ ಒದಗಿಸುವ ಅಗತ್ಯವಿದೆ. ಸದರಿ ಕಾಯ್ದೆಯ ಸೆಕ್ಷನ್ 13 (1) ಗುರ್ತಿಸಲಾದ ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್‍ಗಳಿಗೆ ಪರ್ಯಾಯ ಉದ್ಯೋಗ ಹಾಗೂ ಸಹಾಯಧನ ಮತ್ತು ರಿಯಾಯಿತಿ ಸಾಲವನ್ನು ನೀಡಬೇಕು.
ಆದರೆ 2020-21, 2021-22 ಹಾಗು 2022-23ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮಕ್ಕೆ ಅರ್ಜಿ ಸಲ್ಲಿಸಿದ್ದು, ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್‍ಗಳಿಗೆ ಆರ್ಥಿಕ ನೆರವು ನೀಡಲಾಗಿಲ್ಲ. ಈ ಅರ್ಜಿದಾರರು 8-10 ವರ್ಷಗಳಿಂದ ಅಂದಿನಿಂದ ಇಂದಿನವರೆಗೂ ಪುನರ್ವಸತಿಗಾಗಿ ಕಾಯುತ್ತಿದ್ದಾರೆ. ಇದರಲ್ಲಿ ಅವೈಜಾÐನಿಕ ನಿಯಮಗಳಿಂದ ಪಿಇಎಂಎಸ್‍ಆರ್ ಕಾಯ್ದೆಯ ಪ್ರಕಾರ ಪುನರ್ವಸತಿ ಹೊಂದಲು ಪರ್ಯಾಯ ಉದ್ಯೋಗಗಳನ್ನು ಸೃಷ್ಟಿಸಿಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರಲು ಸಿದ್ದರಿದ್ದಾರೆ.
ಆದರೆ ಸರ್ಕಾರಗಳು ಇವರೆಗೂ ಸಮಗ್ರ ಪುನರ್ವಸತಿಗಾಗಿ ಯಾವುದೇ ರೀತಿಯ ಯೋಜನೆಗಳನ್ನು ರೂಪಿಸದೇ ಉದಾಸೀನತೆಯಿಂದ 20 ಜನರು ಪ್ರಾಣ ಕಳೆದಕೊಂಡಿದ್ದಾರೆ. 40-60 ಸದಸ್ಯರು 60 ವರ್ಷಕ್ಕೆ ಮೇಲ್ಪಟ್ಟಿದ್ದಾರೆ. ಅವೈಜ್ಞಾನಿಕ ನಿಯಮಗಳ ಪ್ರಕಾರ ಸೌಲಭ್ಯಗಳ ವಂಚನೆಯಾಗಿದೆ ಎಂದು ಆರೋಪಿಸಿದರು.
ಈ ಕಾಯ್ದೆಯ ಕಾಲಂ 13 (2) ಗುರ್ತಿಸಲಾದ ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್‍ಗಳ ಪುನರ್ವಸತಿಯನ್ನು ಖಾತ್ರಿಪಡಿಸುವ ಜವಾಬ್ದಾರಿಯು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಇರುತ್ತದೆ. 2013 ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ಸೆಕ್ಷನ್ 19 ರ ಅಡಿಯಲ್ಲಿ ಅನುಷ್ಟಾನವನ್ನು ಖಚಿತ ಪಡಿಸಿಕೊಳ್ಳುವ ಜವಾಬ್ದಾರಿ ಮಾನ್ಯ ಜಿಲ್ಲಾಧಿಕಾರಿಗಳ ಮೇಲಿದೆ ಆದ್ದರಿಂದ ತಮ್ಮ ಅಧಿಕಾರವನ್ನು ಚಲಾಯಿಸಿ ಮೇಲಿನ ಉಲ್ಲಂಘನೆಗಳ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದರು.
ಹಕ್ಕೊತ್ತಾಯಗಳು:
ಸೆಕ್ಷನ್ 13(1) ರ ಪ್ರಕಾರ ಗುರ್ತಿಸಲಾದ ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ಗಳ ಪರ್ಯಾಯ ಉದ್ಯೋಗಕ್ಕಾಗಿ ಹಾಗು ಸಹಾಯಧನ ರಿಯಾಯಿತಿ ಸಾಲವನ್ನು ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ ಈ ಕೂಡಲೇ ನೀಡಬೇಕು, ಕಲಂ 13(ಸಿ) ಪ್ರಕಾರ ಸ್ವಂತ ನಿವೇಶನ ಅಥವ ಮನೆ ನಿರ್ಮಾಣಕ್ಕೆ ಹಣಕಾಸಿನ ನೆರವು ಈ ಕೂಡಲೇ ನೀಡಬೇಕು, ಕಲಂ 13(ಸಿ) ಪ್ರಕಾರ ಸರ್ಕಾರಿ ಯೋಜನೆಗಳಲ್ಲಿ ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ಗಳಿಗೆ ತಲಾ 2.00 ಎಕರೆ ಜಮೀನು ನೀಡಬೇಕು, ಕಲಂ 13(1ಬಿ) ಪ್ರಕಾರ ಅವಲಂಬಿತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗು ಉದ್ಯೋಗ ಈ ಕೂಡಲೇ ನೀಡಬೇಕು, 60 ವರ್ಷ ಮೆಲ್ಪಟ್ಟವರಿಗೆ ಮಾಸಿಕ 5000 ಪಿಂಚಣಿ ನೀಡಬೇಕು, ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ಅನಾರೋಗ್ಯದ ಕಾರಣ ಮರಣ ಹೊಂದಿರುವ ಕುಟುಂಬಳಿಗೆ ಕಾನೂನು ಬದ್ದವಾಗಿ ನೆರವು ನೀಡಲೇಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಫಾಯಿ ಕರ್ಮಚಾರಿ ಕಾವಲು ಸಮಿತಿ ರಾಜ್ಯ ಸಂಚಾಲಕಿ ಎಂ.ಪದ್ಮ, ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಲಕ್ಷ್ಮೀಸಾಗರ ವೆಂಕಟರಾಮ್, ರಾಜ್ಯ ಮುಖಂಡ ಓಬಳೇಶ್, ಹನುಮಪ್ಪ, ಮಂಜುನಾಥ್, ಕೃಷ್ಣಯ್ಯ ಸೇರಿದಂತೆ ಮ್ಯಾನ್ಯೂಯಲ್ ಸ್ಕ್ಯಾವೆಂಜರ್ಸ್ ಉಪಸ್ಥಿತರಿದ್ದರು.
ನಕಲಿ ಬೋನಫೈಡ್ ಹಗರಣವನ್ನು ಸಿಬಿಐಗೆ ಒಪ್ಪಿಸಿ ದಂಧೆಯಲ್ಲಿ ಭಾಗಿಯಾಗಿರುವ ಕಂದಾಯ ಹಾಗೂ ಆರ್‍ಟಿಒ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು-ರೈತಸಂಘ
ಮುಳಬಾಗಿಲು; ಜೂ.2: ನಕಲಿ ಬೋನಫೈಡ್ ಹಗರಣವನ್ನು ಸಿಬಿಐಗೆ ಒಪ್ಪಿಸಿ ದಂಧೆಯಲ್ಲಿ ಭಾಗಿಯಾಗಿರುವ ಕಂದಾಯ ಹಾಗೂ ಆರ್‍ಟಿಒ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ರೈತಸಂಘದಿಂದ ತಹಸೀಲ್ದಾರ್ ಮುಖಾಂತರ ಕಂದಾಯ ಸಚಿವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಸರ್ಕಾರಿ ಕೆರೆ ಜಮೀನಿಗೆ ಜಿಲ್ಲಾಧಿಕಾರಿಗಳ ಸಹಿಯನ್ನೇ ನಕಲು ಮಾಡಿರುವ ಪ್ರಕರಣ ಇನ್ನೂ ಜೀವಂತವಾಗಿರುವಾಗಲೇ ಯಾರದೋ ಜಮೀನಿಗೆ ಇನ್ಯಾರೋ ಮಾಲೀಕನ ಟ್ರಾಕ್ಟರ್‍ಗೆ ನಕಲಿ ಬೋನಫೈಡ್ ದಾಖಲೆಗಳನ್ನು ಸೃಷ್ಠಿ ಮಾಡಿ ಕೋಟ್ಯಾಂತರ ರೂಪಾಯಿ ತೆರಿಗೆ ಹಣವನ್ನು ಸರ್ಕಾರಕ್ಕೆ ವಂಚನೆ ಮಾಡಿ ಅಕ್ರಮ ಆರ್‍ಡಿ ನಂಬರ್‍ಗಳನ್ನು ಸೃಷ್ಠಿ ಮಾಡುವ ಮುಖಾಂತರ ಸಾವಿರಾರು ಟ್ರಾಕ್ಟರ್ ಹಾಗೂ ಟ್ರಾಲಿಗಳನ್ನು ನೋಂದಣಿ ಮಾಡಿರುವ ಹಗರಣ ತೇಲಗಿ ಛಾಪಾ ಕಾಗದ ಹಗರಣವನ್ನು ಮೀರಿಸುವಂತಿದೆ ಎಂದು ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಹದಗೆಟ್ಟಿರುವ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾದ್ಯಂತ ಎಲ್ಲಾ ನಾಡಕಚೇರಿಗಳಲ್ಲಿ ಉಪ ತಹಸೀಲ್ದಾರ್‍ಗಳಿಗೆ ಆರ್‍ಟಿಒ ಕಚೇರಿಗಳಲ್ಲಿನ ದಲ್ಲಾಳಿಗಳು ಟ್ರಾಕ್ಟರ್ ಶೋರೂಂ ಮಾಲೀಕರ ಜೊತೆ ಶಾಮೀಲಾಗಿ ವಾಣಿಜ್ಯ ಹಾಗೂ ಬೇರೆ ಬೇರೆ ಉದ್ದೇಶಕ್ಕಾಗಿ ಟ್ರಾಕ್ಟರ್ ಖರೀದಿ ಮಾಡುವ ಶ್ರೀಮಂತರಿಗೆ ಕೃಷಿ ಮಾಡುವ ರೈತರ ಜಮೀನಿನ ಪಹಣಿ ಮುಂತಾದ ದಾಖಲೆಗಳನ್ನು ಕಂದಾಯ ಇಲಾಖೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಕೈಕಟ್ಟಿಕೊಂಡು ಪ್ರತಿ ಬೋನಫೈಡ್ ದಾಖಲೆಗೆ 10 ರಿಂದ 20 ಸಾವಿರ ಲಂಚ ನೀಡುವ ಮುಖಾಂತರ ಮೂಲ ಮಾಲೀಕರ ಹೆಸರಿನಲ್ಲಿರುವ ಜಮೀನಿಗೆ ಬೇರೆ ವ್ಯಕ್ತಿ ಹೆಸರಿಗೆ ಬೋನಫೈಡ್ ಪತ್ರ ಸೃಷ್ಠಿ ಮಾಡಿ ನೋಂದಣಿ ಮಾಡಿರುವ ದಂಧೆಗೆ ಮುಕ್ತಿ ಸಿಗಬೇಕಾದರೆ ಹಗರಣವನ್ನು ಸಿಬಿಐಗೆ ಒಪ್ಪಿಸಲೇ ಬೇಕಾಗಿದೆ ಎಂದು ಒತ್ತಾಯ ಮಾಡಿದರು.
ನಾಡಕಚೇರಿಯ ಉಪ ತಹಸೀಲ್ದಾರ್ ಕೈಯಲ್ಲಿ ಥಂಬ್ ಕೊಡುವ ಪೆನ್‍ಡ್ರೈವ್ ಇರುತ್ತದೆ. ಆದರೆ ಅಲ್ಲಿ ಹೊಟ್ಟೆಪಾಡಿಗಾಗಿ ಹೊರಗುತ್ತಿಗೆ ಮೇಲೆ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಸಂಪೂರ್ಣ ಜವಾಬ್ದಾರಿ ಉಪತಹಸೀಲ್ದಾರ್ ನೀಡುತ್ತಾರೆಯೇ ? ಇದು ಸಾರ್ವಜನಿಕ ಬುದ್ಧಿವಂತರ ಪ್ರಶ್ನೆಯಾಗಿದೆ ಎಂದರು.
ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ, ಈ ದಂಧೆ ಪರಿಹಾರಕ್ಕಾಗಿ ರೈತರು ನೀಡಿರುವ ದಾಖಲೆಗಳ ದುರುಪಯೋಗ ಹಾಗೂ ಕೆರೆ, ಗೋಮಾಳ, ಗುಂಡುತೋಪು ಸರ್ಕಾರಿ ಆಸ್ತಿಗಳಿಗೆ ನಕಲಿ ರೈತರ ಹೆಸರನ್ನು ಸೃಷ್ಠಿ ಮಾಡಿ ಈ ಧಂಧೆ ನಡೆಯುತ್ತಿದೆ. ಕಂದಾಯ ಹಾಗೂ ಆರ್‍ಟಿಒ ಅಧಿಕಾರಿಗಳ ಕುಮ್ಮಕ್ಕಿಲ್ಲದೆ ಈ ದಂಧೆ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಆರ್‍ಟಿಒ ಕಚೇರಿ ಅಧಿಕಾರಿಗಳಿಗೆ ಮತ್ತು ದಲ್ಲಾಳರಿಗೆ ಚಿನ್ನದಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟು ಹೆಜ್ಜೆಹೆಜ್ಜೆಗೂ ಜನಸಾಮಾನ್ಯರನ್ನು ಶೋಷಣೆ ಮಾಡುವ ಇಲಾಖೆಯಾಗಿದೆ. ಒಂದು ಕಡೆ ನಕಲಿ ಬೋನಫೈಡ್ ದಂಧೆಯಾದರೆ ಮತ್ತೊಂದೆಡೆ ಐಷಾರಾಮಿ ಹೊರರಾಜ್ಯದ ಕಾರುಗಳಿಗೆ ಮುಖಬೆಲೆಯನ್ನು ಕಡಿಮೆ ಮಾಡಿ ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿ ನೋಂದಣಿ ಮಾಡುವ ದೊಡ್ಡ ನಕಲಿ ಜಾಲವೇ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ದೂರಿದರು.
ಅಲ್ಲಿನ ಅಧಿಕಾರಿಗಳ ಮಾಹಿತಿ ಪ್ರಕಾರ ನಾಡಕಚೇರಿಗಳಲ್ಲಿ ಸೃಷ್ಠಿಯಾಗುವ ಬೋನಫೈಡ್ ಸಾವಿರ ಆದರೆ ಅದೇ ಆರ್‍ಡಿ ನಂಬರುಗಳನ್ನು ನಕಲು ಮಾಡಿ 6 ಸಾವಿರಕ್ಕೂ ಹೆಚ್ಚು ಟ್ರಾಕ್ಟರ್‍ಗಳನ್ನು ಅಧಿಕಾರಿಗಳು ತಿರುಚಿ ನೋಂದಣಿ ಮಾಡಿರುವ ಜೊತೆಗೆ 500ಕ್ಕೂ ಹೆಚ್ಚು ಐಷಾರಾಮಿ ಕಾರುಗಳಿಗೂ ಇದೇ ರೀತಿ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಕೋಟಿಕೋಟಿ ಹಣವನ್ನು ಲೂಟಿ ಮಾಡಿದ್ದಾರೆ. ತಪ್ಪಿಸಿಕೊಳ್ಳಲು ಹೊರಗುತ್ತಿಗೆದಾರರ ಮೇಲೆ ಗೂಬೆ ಕೂರಿಸುವ ಅಧಿಕಾರಿಗಳ ಜಾಣ ನಡೆಗೆ ಸಾರ್ವಜನಿಕರು ದಂಗಾಗಿದ್ದಾರೆ.
ಹಾಗಾಗಿ ಮಾನ್ಯ ಕಂದಾಯ ಮಂತ್ರಿಗಳಾದ ಕೃಷ್ಣಬೈರೇಗೌಡರ ಜಮೀನಿಗೆ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ಬೋನಫೈಡ್ ಮುಖಾಂತರ ಟ್ರಾಕ್ಟರ್, ಟ್ರಾಲಿಯನ್ನು ನೋಂದಣಿ ಮಾಡಿರುವ ದಂಧೆಯನ್ನು ಸಿಬಿಐಗೆ ಒಪ್ಪಿಸಿ ಭಾಗಿಯಾಗಿರುವ ಕಂದಾಯ, ಆರ್‍ಟಿಒ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಅಮಾಯಕರನ್ನು ಉಳಿಸಿ ದಂಧೆಗೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ರವಿಕುಮಾರ್, ನಿಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳ ಮುಖಾಂತರ ಕಂದಾಯ ಸಚಿವರಿಗೆ ಕಳುಹಿಸಿಕೊಡುವ ಭರವಸೆಯನ್ನು ನೀಡಿದರು.
ಮನವಿ ನೀಡುವಾಗ ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಖ್‍ಪಾಷ, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ಬಂಗಾರಿ ಮಂಜು, ಸುನೀಲ್‍ಕುಮಾರ್, ಭಾಸ್ಕರ್, ರಾಜೇಶ್, ದೇವರಾಜ್, ಗುರುಮೂರ್ತಿ, ವಿಶ್ವ, ವಿಜಯ್‍ಪಾಲ್ ಮುಂತಾದವರಿದ್ದರು.
ಸರ್ಕಾರವು ಪಟ್ಟಣಗಳ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಗಳ ಅನುದಾನ ನೀಡುತ್ತಿದೆ ಸಮಾಜ ಕಟ್ಟಕಡೆಯ ವ್ಯಕ್ತಿಗೂ ಮುಟ್ಟುವಂತೆ ಅಧಿಕಾರಿಗಳು ಎಚ್ಚರವಹಿಸಬೇಕು:ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ
ಶ್ರೀನಿವಾಸಪುರ 1 : ಸರ್ಕಾರವು ಪಟ್ಟಣಗಳ ಅಭಿವೃದ್ಧಿಗಾಗಿ ಕೋಟ್ಯಾಂತರ ರೂಗಳ ಅನುದಾನ ನೀಡುತ್ತಿದೆ ಅಧಿಕಾರಿಗಳು ಸರ್ಕಾರದ ಯೋಜನೆಗಳನ್ನು ಸಮಾಜ ಕಟ್ಟಕಡೆಯ ವ್ಯಕ್ತಿಗೂ ಮುಟ್ಟುವಂತೆ ಎಚ್ಚರವಹಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಪುರಸಭೆಯಲ್ಲಿ ಗುರುವಾರ ಪುರಸಭಾ ಸಿಬ್ಬಂದಿ ಹಾಗೂ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.
ಚುನಾವಣಾ ಪ್ರಚಾರಕ್ಕಾಗಿ ಪಟ್ಟಣದ ಎಲ್ಲಾ ಬಡವಾಣೆಗಳಲ್ಲಿ ಪ್ರಚಾರ ಮಾಡಿದ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲಾ ಬಡವಾಣೆಗಳಲ್ಲಿ ಶುದ್ದಕುಡಿಯುವ ನೀರು, ಬೀದಿಗಳು, ನೈರ್ಮಲ್ಯ ಸ್ವಚ್ಚತೆ, ಚರಂಡಿಗಳ ಸ್ವಚ್ಚತೆ ಇಲ್ಲದೆ ಗಬ್ಬುನಾರುತ್ತಿರುವ . ಬಗ್ಗೆ ಸಾರ್ವಜನಿಕರು ಮೌಖಿಕಾವಾಗಿ ಮಾಹಿತಿ ನೀಡಿದರು. ಅಲ್ಲದೆ, ನಾನು ಪ್ರಚಾರದ ಸಮಯದಲ್ಲಿ ನಾನು ಗಮನಿಸಿದಾಗಲೂ ಬೇಸರವಾಯಿತು ಎಂದು ತಿಳಿಸುತ್ತಾ, ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ತಕ್ಷಣ ಸ್ವಚ್ಚತಾ ಕಾರ್ಯವನ್ನು ಹಮ್ಮಿಕೊಳ್ಳುವಂತೆ ಸೂಚಿಸಿದರು.
ಸಾಮಾನ್ಯವಾಗಿ ಬಹುತೇಕ ಬಡಾವಣೆಗಳಲ್ಲಿ ಆಳವಡಿಸಿರುವ ಬೀದಿ ದೀಪಗಳು ಕಳಪೆ ಮಟ್ಟದ್ದಾಗಿದ್ದು, ದೀಪಗಳು ಬೆಳಕು ಬರುವುದಿಲ್ಲ ಎಂದು ಆರೋಪಿಸಿದರು. ತಕ್ಷಣ ಬೀದಿ ದೀಪಗಳ ಆಳವಡಿಸಲು ಗುತ್ತಿಗೆಯನ್ನು ಪಡೆದ ಗುತ್ತಿಗೆದಾರರನ್ನು ದೂರವಾಣಿ ಮುಖಾಂತರ ಮಾತನಾಡಿ ಅತೀ ಶೀಘ್ರವಾಗಿ ಬೀದಿ ದೀಪಗಳನ್ನು ಬದಲಿಸುವಂತೆ ಸೂಚನೆ ನೀಡಿದರು.
ಹಾಗು ಪುರಸಭೆಗೆ ವ್ಯಾಪ್ತಿಗೆ ಬರುವ ಇ –ಖಾತೆಗಳನ್ನು ಮಾಡಿಕೊಡುವ ಸಮಯದಲ್ಲಿ ಹಣಕ್ಕಾಗಿ ಪೀಡಿಸದೆ, ಕಾನೂನು ರೀತ್ಯ ಪಕ್ಷತೀತವಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಿಕೊಡುವಂತೆ ಸೂಚನೆ ನೀಡಿದರು. ಸಾರ್ವಜನಿಕರು ರಾಜಾಜೀ ರಸ್ತೆಯ ಕಾಮಗಾರಿ ಬಗ್ಗೆ ಶಾಸಕರ ಗಮನಕ್ಕೆ ತಂದ ಸಮಯದಲ್ಲಿ ರಸ್ತೆ ಕಾಮಗಾರಿಯು ವಿಳಂಬವಾಗುತ್ತಿರುವ ಅಧಿಕಾರಿಗಳ ಬಳಿ ಚರ್ಚೆ ನಡೆಸುತ್ತಿರುವ ಸಮಯದಲ್ಲಿ
ಪಿಡಬ್ಲ್ಯೂಡಿ ಇಂಜನೀಯರ್ ಹಾಗೂ ಪುರಸಭೆ ಅಧಿಕಾರಿಗಳಿಗೆ ತರಾಟೆ : ಪಟ್ಟಣದ ರಾಜಾಜಿರಸ್ತೆ ಕಾಮಗಾರಿ ನಿದಾನ ಗತಿಯಲ್ಲಿ ನಡೆಯಲು ನಿಮ್ಮಿಂದಲೇ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. ಅದರ ಬಗ್ಗೆ ಗುತ್ತಿಗೆದಾರರಿಂದ ಮಾಹಿತಿ ಪಡೆದು ಮಾತನಾಡಿ ಪುರಸಭೆ ಅಧಿಕಾರಿಗಳು ಅತಿ ಶೀಘ್ರವಾಗಿ ನೀರಿನ ಪೈಪ್‍ಲೈನ್ ಆಳವಡಿಸುವಂತೆ, ಪಿಡಬ್ಲ್ಯೂಡಿ ಇಂಜನೀಯರ್ ರವರು ರಸ್ತೆ ಅಗಲೀಕರಣಕ್ಕೆ ಮಾರ್ಕಿಂಗ್ ಮಾಡಿಸಿಕೊಡುವಂತೆ ಸೂಚಿಸಿದರು. ಗುತ್ತಿಗೆದಾರಿಗೆ ಗಣಮಟ್ಟದ ರಸ್ತೆ ಕಾಮಗಾರಿಯನ್ನು ಮಾಡುವಂತೆ ತಿಳಿಸಿದರು.
ಆಡಳಿತಾಧಿಕಾರಿ ಶರೀನ್‍ತಾಜ್, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ್ , ಕಚೇರಿ ವ್ಯವಸ್ಥಾಪಕ ನವೀನ್ ಚಂದ್ರ, ಕಂದಾಯ ಅಧಿಕಾರಿಗಳಾದ ವಿ.ನಾಗರಾಜ್, ಎನ್.ಶಂಕರ್,ಕಿರಿಯ ಅಭಿಯಂತರ ವಿ.ಶ್ರೀನಿವಾಸಪ್ಪ, ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್ ಇದ್ದರು.
ಕುಂದಾಪುರ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಉಚಿತ ನೋಟ್ ಪುಸ್ತಕ ವಿತರಣೆ
ಕುಂದಾಪುರ, ಸಂತ ಜೋಸೆಫರ ಪ್ರೌಢಶಾಲೆಯ ಪ್ರಸ್ತುತ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಎಂ ಸಿ ಸಿ ಬ್ಯಾಂಕ್ ಇವರು 02-06-2023 ರಂದು ಉಚಿತವಾಗಿ ನೋಟ್ ಪುಸ್ತಕಗಳನ್ನು ವಿತರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಂ. ಸಿ. ಸಿ. ಬ್ಯಾಂಕಿನ ಚೇರ್ಮನ್ ಶ್ರೀ ಅನಿಲ್ ಲೋಬೊ ಇವರು ಮಾತನಾಡಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಶಾಲೆ ಜ್ಞಾನ ದೇಗುಲವಿದ್ದಂತೆ.ವಿದ್ಯಾರ್ಥಿಗಳು ಶಿಕ್ಷಕರಲ್ಲಿ ದೇವರನ್ನು ಕಾಣಬೇಕು. ತಂದೆ ತಾಯಿಯರನ್ನು ಗೌರವಿಸಬೇಕು. ನಮ್ಮ ಬ್ಯಾಂಕ್ ವತಿಯಿಂದ ಪ್ರತಿ ವರ್ಷವೂ ನೋಟ್ ಪುಸ್ತಕಗಳನ್ನು ನೀಡುವುದಾಗಿ ತಿಳಿಸಿದರು. ಬ್ಯಾಂಕಿನ ನಿರ್ದೇಶಕರಾಗಿರುವ ಎಲ್ರೊಯ್ ಕಿರಣ್ ಕ್ರಾಸ್ಟೋ ಇವರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಮಾತುಗಳನ್ನು ಆಡಿದರು. ಕಾರ್ಯಕ್ರಮದ ಅಧ್ಯಕ್ಷರಾಗಿರುವ ಶಾಲೆಯ ಜಂಟಿ ಕಾರ್ಯದರ್ಶಿಗಳಾಗಿರುವ ಸಿಸ್ಟರ್ ಸುಪ್ರಿಯ ಇವರು ಬ್ಯಾಂಕಿನ ಅಧಿಕಾರಿ ವರ್ಗದವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ವಿದ್ಯಾರ್ಥಿಗಳು ಅವರು ನೀಡಿದ ಕೊಡುಗೆಗಳನ್ನು ಸರಿಯಾಗಿ ಬಳಸಿಕೊಂಡು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐ ವಿ ಸ್ವಾಗತಿಸಿದರು. ಮೈಕಲ್ ಸರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ ಶ್ರೀಲತಾ ಇವರು ವಂದಿಸಿದರು.
ವಿಶ್ವ ವಿಖ್ಯಾತ ಪವಾಡ ಪುರುಷ ಡೋರ್ನಹಳ್ಳಿ ಸಂತ ಅಂತೋಣಿಯವರ ವಾರ್ಷಿಕ ಮಹೋತ್ಸವ-2023 ಕ್ಕೆ ಆತ್ಮೀಯವಾದ ಆಮಂತ್ರಣ
(ಜಾಹಿರಾತು) (Advertisement)
ವಿಶ್ವ ವಿಖ್ಯಾತ ಪವಾಡ ಪುರುಷ
ಡೋರ್ನಹಳ್ಳಿ ಸಂತ ಅಂತೋಣಿಯವರ ವಾರ್ಷಿಕ ಮಹೋತ್ಸವ-2023
ಪ್ರಿಯ ಭಕ್ತಾಧಿಗಳೇ,
ಬಸಿಲಿಕಾ ಮಹೋತ್ಸವದಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡು ಪವಾಡ ಪುರುಷ ಸಂತ ಅಂತೋಣಿಯವರ ಮೂಲಕ ಪ್ರಭು ಯೇಸುವಿನ ವರದಾನಗಳನ್ನು ಪಡೆದು ಪಾವನರಾಗಲು ತಮ್ಮೆಲ್ಲರನ್ನು ಮೈಸೂರು ಧರ್ಮಕ್ಷೇತ್ರದ ಪರವಾಗಿ ಆತ್ಮೀಯವಾಗಿ ಆಮಂತ್ರಣ ನೀಡಿದ್ದಾರೆ.
ಮಣಿಪುರದಲ್ಲಿ ಕ್ರಿಶ್ಚಿಯನ್ನರ ಮೇಲಾಗುತ್ತಿರುವ ಧಾಳಿಯನ್ನು ಖಂಡಿಸಿ ಜೂನ್ 6 ರಂದು ಮಂಗಳೂರಿನಲ್ಲಿ ಸಾಮೂಹಿಕ ಧರಣಿ
(ಚಿತ್ರ ಎರವಲು)
ಮಣಿಪುರ ರಾಜ್ಯದಲ್ಲಿ ಮೀಸಲಾತಿ ವಿಚಾರದಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಚರ್ಚ್ ಹಾಗೂ ಕ್ರಿಶ್ಚಿಯನ್ನರ ಮೇಲೆ ನಡೆದ ವ್ಯಾಪಕ ಧಾಳಿಯನ್ನು ಖಂಡಿಸಿ ಹಾಗೂ ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಒತ್ತಾಯಿಸಿ ದ.ಕ.ಜಿಲ್ಲಾ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ, ಕಥೋಲಿಕ್ ಸಭಾ ಮಂಗಳೂರು ಪ್ರದೇಶ(ರಿ) ಮತ್ತು ಯುನೈಟೆಡ್ ಕ್ರಿಶ್ಚಿಯನ್ ಫೋರಂ ಮಂಗಳೂರು ಇವುಗಳ ಜಂಟಿ ನೇತೃತ್ವದಲ್ಲಿ ತಾ.06-06-2023ರಂದು ಮಂಗಳವಾರ ಸಂಜೆ 4.30ಕ್ಕೆ ನಗರದ ಕ್ಲಾಕ್ ಟವರ್ ಬಳಿಯಲ್ಲಿ ಸಾಮೂಹಿಕ ಧರಣಿ ನಡೆಯಲಿದೆ ಎಂದು 3 ಸಂಘಟನೆಗಳು ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಮಣಿಪುರದಲ್ಲಿ ಬಹುಸಂಖ್ಯಾತರಾಗಿರುವ ಬುಡಕಟ್ಟು ಸಮುದಾಯದ ಮಧ್ಯೆ ಸೌಹಾರ್ದ ವಾತಾವರಣವನ್ನು ಸಾಧಿಸುವ ಬದಲು ಅಲ್ಲಿನ ಬಿಜೆಪಿ ರಾಜ್ಯ ಸರಕಾರವು ದ್ವೇಷ ರಾಜಕಾರಣವನ್ನು ನಡೆಸುತ್ತಿದೆ. ಮೈತೈ ಸಮುದಾಯಕ್ಕೆ ಮೀಸಲಾತಿ ನೀಡುವ ವಿಚಾರದಲ್ಲಿ ಭುಗಿಲೆದ್ದ ಗಲಭೆಯನ್ನು ಮುಂದಿಟ್ಟು ಕುಕಿ ಸಮುದಾಯದ ಕ್ರಿಶ್ಚಿಯನ್ನರ ಹಾಗೂ ಅವರ ಚರ್ಚ್ ಗಳ ಮೇಲೆ ವ್ಯಾಪಕ ದಾಳಿಗಳನ್ನು ನಡೆಸಿ ನೂರಾರು ಸಂಖ್ಯೆಯಲ್ಲಿ ಪ್ರಾಣಹಾನಿಯಾಗಿದ್ದು, 50,000ಕ್ಕೂ ಮಿಕ್ಕಿ ಜನತೆ ಸಂತ್ರಸ್ತರಾಗಿದ್ದಾರೆ. ಕೋಟ್ಯಂತರ ರೂಪಾಯಿಯ ಆಸ್ತಿಪಾಸ್ತಿ ಹಾನಿಯಾಗಿದೆ.9 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಯಾಗಿದ್ದು,ದೂರಸಂಪರ್ಕ,ಇಂಟರ್ ನೆಟ್ ಸೇರಿದಂತೆ ಎಲ್ಲಾ ಸಂಪರ್ಕಗಳನ್ನು ಕಡಿತಗೊಳಿಸಲಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ.ದೇಶದ ಒಂದು ಪುಟ್ಟ ರಾಜ್ಯದಲ್ಲಿ ಇಂತಹ ಗಂಭೀರ ಸಮಸ್ಯೆ ತಲೆದೋರಿದರೂ ದೇಶವನ್ನಾಳುವ ಕೇಂದ್ರ ಸರಕಾರವು ಮಾತ್ರ ದಿವ್ಯ ಮೌನ ವಹಿಸಿದೆ ಎಂದು ಮೂರೂ ಸಂಘಟನೆಗಳು ಆಪಾದಿಸಿದೆ
ಮಣಿಪುರ ರಾಜ್ಯದಲ್ಲಿ ಗಲಭೆಯನ್ನು ಸಂಪೂರ್ಣವಾಗಿ ನಿಯಂತ್ರಿಸಿ,ಮತ್ತೆ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕೆಂದು ಒತ್ತಾಯಿಸಿ ತಾ.06-06-2023ರಂದು ಸಂಜೆ 4.30ಕ್ಕೆ ಮಂಗಳೂರಿನಲ್ಲಿ ಜರುಗಲಿರುವ ಸಾಮೂಹಿಕ ಧರಣಿಯಲ್ಲಿ ಜಿಲ್ಲೆಯ ನ್ಯಾಯಪ್ರಿಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಾರ್ಯಕ್ರಮದ ಸಂಘಟಕರಾದ ರೊಯ್ ಕ್ಯಾಸ್ಟಲಿನೋ, ಸುನಿಲ್ ಕುಮಾರ್ ಬಜಾಲ್, ಆಲ್ಫ್ರೆಡ್ ಮನೋಹರ್, ಸ್ಟ್ಯಾನಿ ಲೋಬೋ, ಕೆ ಅಶ್ರಫ್, ಮಂಜುಳಾ ನಾಯಕ್ ರವರು ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ
ವಂದನೆಗಳೊಂದಿಗೆ
ಸುನಿಲ್ ಕುಮಾರ್ ಬಜಾಲ್
ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟ ಮಂಗಳೂರು
St. Agnes P.U. College-felicitation of academic meritorious students of last year- Commencement ceremony of new academic year
St. Agnes P.U. College – felicitation of academic meritorious students of last year- Commencement ceremony of new academic year
A new academic year comes with new hopes, new beginnings, new challenges and varied opportunities to excel in the overall development in a student’s life.
Ushering the new academic year 2023-24, orientation for the II PUC students was held on 1st June 2023 in the college auditorium. The program me commenced with a prayer dance invoking God’s blessings.
Dr. DeepaKotari, Associate Professor, Dept. of Humanities & Social Science, YIASCM, (Yenepoya,deemed to be university) graced the occasion as the chief guest. She motivated the students to work on their systems to reach their goals in life. She encouraged them to bring a change in their daily routine to achieve the aim that they have set for themselves.
Distinction holders and the Centum scorers of the I PUC Annual Examination were felicitated by the chief guest. ZaynahAnjum topped the Science stream with a phenomenal total of 590 out of 600 and further proved her mettle by scoring centum in Physics, Chemistry, Mathematics and Computer Science. Athiraand PoojaKottari topped the Commerce Stream by obtaining 591 out of 600. Athiraproved her calibre by scoring centum in Basic Maths, Economics, Business Studies and Accountancy, while PoojaKottari displayed her competence by scoring centum in Economics, Business Studies and Accountancy. Alisha Thimaiah topped the Arts stream by securing 583 out of 600 with centum in Economics.The Principal appreciated their efforts and wished them well for the new academic year. She also motivated the students to excel in academics through hard work and determination. A video presentation to enable the students to deepen the knowledge on the functioning, rules and regulations of the college was played.
The Vice Principal, Sr Janet Sequeira, the convenorsMrsPramila Dsouza and MsRaksha were also present on the dais. The gathering was welcomed by Velessca Pinto, while Ayesha Zyma proposed the vote of thanks.The programme was compered by Stelina Alva.
ಬಾಲಕಾರ್ಮಿಕ ಎಂಬ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು:ನ್ಯಾಯಾಧೀಶ ಶ್ರೀ ಸುನಿಲ್ ಎಸ್ ಹೊಸಮನಿ
ಕೋಲಾರ : ಬಾಲಕಾರ್ಮಿಕ ಎಂಬ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕು . ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಸುನಿಲ್ ಎಸ್ ಹೊಸಮನಿ ಅವರು ತಿಳಿಸಿದರು .
ಇಂದು ಮೌಲಾನ ಅಜಾದ್ ಮಾದರಿ ಶಾಲೆ , ದರ್ಗಾಮೊಹಲ್ಲಾ , ಕೋಲಾರದಲ್ಲಿ ಜಿಲ್ಲಾಡಳಿತ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ಕಾರ್ಮಿಕ ಇಲಾಖೆ , ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ , ಕೋಲಾರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು . ಯಾವುದೇ ಮಕ್ಕಳು ಗ್ಯಾರೇಜ್ , ಹೋಟೆಲ್ , ಮಟನ್ , ಚಿಕನ್ ಶಾಪ್‌ಗಳಲ್ಲಿ ಕೆಲಸಕ್ಕೆ ಹೋಗಬಾರದೆಂದು ತಿಳಿಸಿದರು .
ಶಿಕ್ಷಣ ಮಕ್ಕಳ ಮೂಲ ಹಕ್ಕಾಗಿದೆ ಸಮಾಜದಲ್ಲಿ ಬಾಲಕಾರ್ಮಿಕರನ್ನು ಕಂಡರೆ ಅಂತವರನ್ನು ಗುರುತಿಸಿ ಶಾಲೆಗೆ ಸೇರಿಸುವುದು ಪ್ರತಿಯೊಬ್ಬರ ಕರ್ತವ್ಯ ಮಕ್ಕಳು ಬಾಲ್ಯಜೀವನದಲ್ಲಿ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಮತಿ ಶಬಾನಾ ಅಜ್ಜಿರವರು ಮಾತನಾಡಿ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ( ನಿಷೇಧ ಮತ್ತು ನಿಯಂತ್ರಣ ) ಕಾಯ್ದೆ , 1986 ರ ಅನ್ವಯ ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿ ಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಹಾಗೂ ಸಂಜೆಯ ( ವಾರೆಂಟ್ ರಹಿತ ಬಂಧಿಸಬಹುದಾದ ) ಅಪರಾಧವಾಗಿದೆ .
ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ ( ನಿಷೇಧ ಮತ್ತು ನಿಯಂತ್ರಣ ) ಕಾಯ್ದೆ , 1986 ರಂತೆ ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಂಡಲ್ಲಿ ಅಂತಹಮೊದಲ ಅಪರಾಧಕ್ಕೆ ಮಾಲೀಕರಿಗೆ 6 ತಿಂಗಳಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ರೂ .20,000 / – ರಿಂದ ರೂ .50,000 / -ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ .
ಪುನರಾವರ್ತಿತ ಅಪರಾಧಕ್ಕೆ 1 ವರ್ಷದಿಂದ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ ಎಂದು ತಿಳಿಸಿದರು .
ಹಿರಿಯ ವಕೀಲರಾದ ಶ್ರೀ ಕೆ.ಆರ್.ಧನರಾಜ್‌ರವರು ಮಾತನಾಡಿ ಮಕ್ಕಳು ಮತ್ತು ಮಹಿಳೆಯರಿಗೆ ಜಿಲ್ಲಾ ಕಾನೂನು ಸೇ ಪ್ರಾಧಿಕಾರದಿಂದ ಉಚಿತ ಕಾನೂನು ನೆರವನ್ನು ಪಡೆಯ ಬಹುದಾಗಿದ್ದು , ಮಕ್ಕಳು ಯಾವುದೇ ರೀತಿಯ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ತಿಳಿಸಿದರು .
ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಕುಮಾರಿ ಶೃತಿ ಡಿ ಹಾಗೂ ಶಾಲೆಯ ಸಿಬ್ಬಂದಿ ಮತ್ತು ಮಕ್ಕಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು .